ಪ್ರಚಲಿತ

ಶಾಸಕರಿಗೆ ಚಿನ್ನದ ತಟ್ಟೆ ಕೊಡಲು ಹಣವಿರುವ ಸರಕಾರಕ್ಕೆ ರೈತರ ಸಾಲಮನ್ನಾ ಮಾಡಲು ದುಡ್ಡಿಲ್ಲ…!!

ಸಿದ್ದರಾಮಯ್ಯ ಸರಕಾರದಲ್ಲಿ ಭಾಗ್ಯಗಳ ಮೇಲೆ ಭಾಗ್ಯಗಳು ಕೊಡುತ್ತಿದ್ದರು ಕೂಡ, ಸಾಲಮನ್ನಾ ಯೋಜನೆಗೆ ಹಣ ಹೊಂದಿಸಲು ರಾಜ್ಯ ಸರಕಾರ ಮಾಡುತ್ತಿರುವ ಕಸರತ್ತು ನೋಡಿದರೆ ಆರ್ಥಿಕ ಸ್ಥಿತಿ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿದೆಯೇ ಎಂಬ ಸಂದೇಹ ವ್ಯಕ್ತವಾಗುತ್ತಿದೆ!! ಆದರೆ ರಾಜ್ಯ ಸರಕಾರದ ಬೊಕ್ಕಸದಲ್ಲಿ ಹಣ ಇಲ್ಲ ಎಂದು ಹೇಳುತ್ತಿರುವ ಸಿದ್ದರಾಮಯ್ಯ ಸರಕಾರ, ಇದೀಗ ವಿಧಾನಸೌಧ ವಜ್ರ ಮಹೋತ್ಸವದ ನೆನಪಲ್ಲಿ ಶಾಸಕರಿಗೆ ಭಾರಿ ಮೊತ್ತದ ಉಡುಗೊರೆ ನೀಡಲು ಮುಂದಾಗಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ!!

ಹೌದು…. ವಿಧಾನಸೌಧ ವಜ್ರ ಮಹೋತ್ಸವದ ಅಂಗವಾಗಿ ಶಾಸಕರಿಗೆ ಚಿನ್ನದ ಬಿಸ್ಕೆಟ್ ಮತ್ತು ಸಿಬ್ಬಂದಿಗೆ ಬೆಳ್ಳಿ ತಟ್ಟೆಯನ್ನು ಉಡುಗೊರೆಯಾಗಿ ನೀಡಲು
ಉದ್ದೇಶಿಸಲಾಗಿದ್ದು ಭಾರಿ ಮಟ್ಟದ ಸಿದ್ದತೆಯನ್ನು ಮಾಡಿದ್ದಾರೆ!! ಅಲ್ಲದೇ, ವಿಧಾನಸಭೆ ಮತ್ತು ವಿಧಾನ ಪರಿಷತ್‍ನ 300 ಶಾಸಕರಿಗೆ ತಲಾ 50,000 ರೂ.
ಮೌಲ್ಯದ ವಿಧಾನಸೌಧ ಪ್ರತಿಕೃತಿ ಇರುವ ಚಿನ್ನದ ಬಿಸ್ಕೆಟ್ ನೀಡಲಿದ್ದು, ಸಚಿವಾಲಯದ ಸಿಬ್ಬಂದಿಗೆ ತಲಾ 5000 ರೂಪಾಯಿ ಮೌಲ್ಯದ ಬೆಳ್ಳಿ ತಟ್ಟೆಯನ್ನು ನೀಡಲು ಯೋಜಿಸಲಾಗಿದ್ದು ಈ ಬಗ್ಗೆ ವ್ಯಾಪಕವಾದ ಆಕ್ರೋಶ ವ್ಯಕ್ತವಾಗಿದೆ!!

2 ದಿನಗಳ ಕಾಲ ನಡೆಯುವ ಸಮಾರಂಭಕ್ಕೆ 27 ಕೋಟಿ ರೂಪಾಯಿ ಖರ್ಚು ಮಾಡಲಾಗ್ತಿದೆ ಎಂದು ಈ ಬಗ್ಗೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಷ್ಟೇ ಅಲ್ಲದೇ ಸ್ಪೀಕರ್ ಮತ್ತು ಸರಕಾರದ ತಿಕ್ಕಾಟದ ನಡುವೆಯೇ ವಿಧಾನಸೌಧ ವಜ್ರಮಹೋತ್ಸವ ಸಮಾರಂಭ ನಡೆಯುತ್ತಿರುವುದು ಮಾತ್ರ ವಿಪರ್ಯಾಸ!! ಅಷ್ಟೇ ಅಲ್ಲದೇ, ಈ ಒಂದು ವಜ್ರ ಮಹೋತ್ಸವದ ಸಮಾರಂಭದಲ್ಲಿ ರಾಷ್ಟ್ರಪತಿ ಭಾಗವಹಿಸಲಿದ್ದು, ಹಾಗೂ ಕಾರ್ಯಕ್ರಮಕ್ಕೆ ರಾಷ್ಟ್ರಪತಿಯನ್ನು ಆಹ್ವಾನಿಸಿರುವುದಕ್ಕೆ ಯಾವುದೇ ರೀತಿಯ ತಕರಾರು ನಡೆದಿಲ್ಲ. ಆದರೆ, ವಜ್ರಮಹೋತ್ಸವದ ಹೆಸರಲ್ಲಿ 27 ಕೋಟಿ ರೂಪಾಯಿ ಖರ್ಚು ಮಾಡುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿರುವುದಂತೂ ನಿಜ!!

ವಿಪರ್ಯಾಸ ಎಂದರೆ, ಮೂಲಸೌಕರ್ಯ, ಕೃಷಿ, ಕಾನೂನು ಸುವ್ಯವಸ್ಥೆ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯದ ರ್ಯಾಂಕಿಂಗ್ ಕುಸಿಯುತ್ತಿದೆ ಎಂಬ ವರದಿಯ ಬೆನ್ನಲ್ಲೇ, ರೈತರ ಸಾಲಮನ್ನಾ ಯೋಜನೆಗೆ ಹಣ ಹೊಂದಿಸಲು ಹಾಗೂ ವಿಶ್ವವಿದ್ಯಾಲಯಗಳಿಂದ ಹಣ ಪಡೆಯಲು ಮಾಡುತ್ತಿರುವ ಕಸರತ್ತುಗಳು ಇದನ್ನು ಖಾತ್ರಿಪಡಿಸುತ್ತಿವೆ!! ಆದರೆ, ರೈತರ ಸಾಲಮನ್ನಾ ಯೋಜನೆಗೆ 8,156 ಕೋಟಿ ರೂಪಾಯಿ ಅಗತ್ಯವಿದ್ದರೂ, ಸುಮಾರು 2 ಲಕ್ಷ ಕೋಟಿ ರೂಪಾಯಿ ಆಯವ್ಯಯ ಮಂಡಿಸುವ ಸರಕಾರಕ್ಕೆ ಇದು ದೊಡ್ಡ ಹೊರೆಯಾಗಲಾರದು ಎಂದು ಆರ್ಥಿಕ ಇಲಾಖೆ ಅಧಿಕಾರಿಗಳೇ ಹೇಳುತ್ತಿದ್ದರು. ಆದರೆ ಸರಕಾರಿ ಸ್ವಾಮ್ಯದ ಉದ್ದಿಮೆಗಳಿಂದ ಹಣವನ್ನು ಸಾಲದ ರೂಪದಲ್ಲಿ ಅಥವಾ ವರ್ಗಾಯಿಸಿಕೊಳ್ಳಲು ಮುಂದಾಗುವ ಹಂತಕ್ಕೆ ಆರ್ಥಿಕ ಇಲಾಖೆ ಬಂದು ನಿಂತಿರುವುದು ಗಮನಕ್ಕೆ ಬಂದಿದೆ!!

ಅಷ್ಟೇ ಅಲ್ಲದೇ, ವಿಶ್ವವಿದ್ಯಾಲಯಗಳಿಂದ 1600 ಕೋಟಿ ರೂಪಾಯಿ, ಕಾರ್ಮಿಕ ನಿಧಿಯಿಂದ 4 ಸಾವಿರ ಕೋಟಿ ರೂಪಾಯಿ, ಪಡೆಯುವ ವಿಫಲ ಪ್ರಯತ್ನದ ಬಳಿಕ ಈಗ ಸರಕಾರಿ ಸ್ವಾಮ್ಯದ ಉದ್ದಿಮೆಗಳ ಮೇಲೆ ಸರಕಾರದ ಕಣ್ಣು ಬಿದ್ದಿದೆ!! ರಾಜ್ಯಪಾಲರ ಮಧ್ಯಪ್ರವೇಶದ ಬಳಿಕ ವಿವಿ ಹಣ ಹಾಗೂ ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಕಾರ್ಮಿಕ ನಿಧಿ ಬಳಸಿಕೊಳ್ಳಲು ಸರಕಾರಕ್ಕೆ ಆಗುತ್ತಿಲ್ಲ. ಹಾಗಾಗಿ ಸಾಲಮನ್ನಾ ಯೋಜನೆಗೆ ಅಗತ್ಯವಾದ ಹಣ ಸಂಗ್ರಹ ಮಾಡಲು ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿರುವ ಹೂಡಿಕೆ ಹೆಚ್ಚುವರಿ ಮೊತ್ತವನ್ನು(ಇನ್ವೆಸ್ಟಿಬಲ್ ಸರ್ಪ್ಲಸ್) ಅಪೆಕ್ಸ್ ಬ್ಯಾಂಕ್‍ನಲ್ಲಿ ಠೇವಣಿ ಇಡುವಂತೆ ಸೂಚನೆ ನೀಡಲಾಗಿದೆ!! ಅದಷ್ಟೇ ಅಲ್ಲದೇ, ಆರಂಭಿಕ ಹಂತದಲ್ಲಿ ಮೈಸೂರು ಮಿನರಲ್ಸ್ ಲಿಮಿಟೆಡ್ (ಎಂಎಂಎಲ್) ಸಂಸ್ಥೆಯಿಂದ 1400 ಕೋಟಿ ರೂಪಾಯಿ ಠೇವಣಿ ವರ್ಗಾಯಿಸುವಂತೆ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಆದೇಶಿಸಿದ್ದಾರೆ ಕೂಡ!!

ಆದರೆ, ರೈತರ ಸಾಲಮನ್ನಾ ಮಾಡಿದ ಸರಕಾರವು ನಯಾಪೈಸೆ ಹಣವನ್ನು ನೀಡದೆ, ವಿಧಾನಸೌಧ ವಜ್ರ ಮಹೋತ್ಸವದ ಅಂಗವಾಗಿ ಸಾಕಷ್ಟು ಹಣವನ್ನು
ವ್ಯಯಿಸುತ್ತಿರುವುದು ಮಾತ್ರ ವಿಪರ್ಯಾಸ!! ಅದಷ್ಟೇ ಅಲ್ಲದೇ, ಶಾಸಕರಿಗೆ ಚಿನ್ನದ ಬಿಸ್ಕೆಟ್ ಮತ್ತು ಸಿಬ್ಬಂದಿಗೆ ಬೆಳ್ಳಿ ತಟ್ಟೆಯನ್ನು ಉಡುಗೊರೆಯಾಗಿ ನೀಡಲು
ಮುಂದಾಗಿರುವ ಸರಕಾರ, ಅದೆಷ್ಟೂ ರೈತರು ಸಾಲದಿಂದ ಆತ್ಮಹತ್ಯೆ ಮಾಡುತ್ತಿರುವಾಗ, ಇನ್ನು ಸರಕಾರವು ರೈತರ ಸಾಲಮನ್ನಾ ಮಾಡುವುದಾದರೂ ಯಾವಾಗ??

ಮೂಲ:https://m.dailyhunt.in/news/india/kannada/kannada+dunia-epaper-kannadad/shaasakarige+chinnadha+bisket+sibbandige+bellitatte-newsid-74825088

-ಅಲೋಖಾ

Tags

Related Articles

Close