ಅಂಕಣಪ್ರಚಲಿತರಾಜ್ಯ

ಸಿದ್ದುಗಿಲ್ಲವೇ ಸಿಎಂ ಪಟ್ಟ?! ಇನ್ಯಾರಿಗೊಲಿಯಲಿದೆ ಹೈ- ಕಮಾಂಡ್ ಕೃಪಾಕಟಾಕ್ಷ?

ಈಗಾಗಲೇ ಕರ್ನಾಟಕದಲ್ಲಿ ಅದೆಷ್ಟೋ ಜನರ ವಿರೋಧ ಕಟ್ಟಿಕೊಂಡಿರುವ ಸಿದ್ದರಾಮಯ್ಯ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ! ಸಾವಿರ ಮಕ್ಕಳ ಬಿಸಿಯೂಟ ಕಿತ್ತುಕೊಂಡಿದ್ದಕ್ಕೂ ಸಿಎಂ ಪಟ್ಟ ತೊಎ ಕೆಳಗಾಗಿದ್ದಕ‌್ಕೂ ಸರಿ ಹೋಗಿದೆ!

ಮುಂದಿನ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ, ಸಿದ್ದರಾಮಯ್ಯ ಬದಲಿಗೆ ಮಲ‌್ಲಿಕಾರ್ಜುನ ಖರ್ಗೆಯವರನ್ನೇ ಮುಖ್ಯಮಂತ್ರಿ ಪಟ್ಟದಲ್ಲಿ ಕೂರಿಸಲು ಹೈ-ಕಮಾಂಡ್ ಯೋಚಿಸಿದೆ ಎಂಬ ಸುದ್ದಿ ಕಾಂಗ್ರೆಸ್ ವಲಯದಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ. ತಮ್ಮ ನೇತೃತ್ವದಲ್ಲೇ ವಿಧಾನಸಭೆ ಚುನಾವಣೆಗೆ ಇಳಿಯಲು ಸಜ್ಜಾಗಿದ್ದ ಸಿದ್ಧರಾಮಯ್ಯರಿಗೆ ಹಠಾತ್ ಆಘಾತವಾಗಿರುವುದಂತೂ ಸತ್ಯ!

ಈಗಾಗಲೇ ಹೈ ಕಮಾಂಡ್ ಸಿದ್ಧರಾಮಯ್ಯನ ಜೊತೆ ಖರ್ಗೆಯ ಬಗ್ಗೆ ಚರ್ಚಿಸಿದೆ. ಸಿದ್ಧರಾಮಯ್ಯ ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ನೀಡಿದ್ದಾರೆ ಎಂಬುದು ಕಾಂಗ್ರೆಸ್ ವಲಯದ ಮೂಲಗಳು ತಿಳಿಸಿದೆ.

ಇದು ಖರ್ಗೆ ಪ್ರಭಾವ!

ಖರ್ಗೆ ಹಾಗೂ ಗಾಂಧಿ ಮನೆತನದ ಸ್ನೇಹದ ಬಗ್ಗೆ ಮುಂಚೆಯಿಂದಲೂ ಗೊತ್ತಿರುವ ವಿಷಯವೆಂದರೆ ಖರ್ಗೆಯ ಅಚಲ ನಿಷ್ಠೆ! ಕಳೆದ ಬಾರಿ ಚುನಾವಣೆಯಲ್ಲಿ ಖರ್ಗೆಗೆ ಪಟ್ಟ ಕೊಡಬಹುದೆಂಬ ನಿರೀಕ್ಷೆ ಇದ್ದರೂ ಸಿದ್ದರಾಮಯ್ಯನಿಗೆ ಪಟ್ಟ ನೀಡಿದಾಗ ಖರ್ಗೆ ತಲೆ ಬಾಗಿದ್ದೂ ಅಲ್ಲದೇ, ಹಠ ಹಿಡಿದರೆ ದಕ್ಕಿಸಿಕೊಳ್ಳಬಹುದಾದ ಪಟ್ಟವನ್ನೂ ಖರ್ಗೆಯವರು ಸುಮ್ಮನೆ ಬಿಟ್ಟುಕೊಟ್ಟಿದ್ದರು. ಕೇಂದ್ರ ಸಚಿವ ಹಾಗೂ ವಿಪಕ್ಷ ಮುಖಂಡನ ಸ್ಥಾನ ನೀಡಿ ಖರ್ಗೆಯವರನ್ನು ಸಮಾಧಾನಗೊಳಿಸಿತ್ತು ಹೈ ಕಮಾಂಡ್!

ಈಗ ಖರ್ಗೆಯವರು ಮತ್ತೆ ರಾಜಕೀಯದಲ್ಲಿ ಆಸಕ್ತಿ ತೋರಿದ್ದಾರೆ! ಆದರೆ, ಸಿಎಂ ಪಟ್ಟ ಬಿಟ್ಟು ಬೇರಾವುದೂ ಬೇಡವೆನ್ನುವ ನಿರ್ಧಾರ ಇರುವುದಾಗಿ ಖಚಿತವಾಗಿದೆ! ಅದಷ್ಟೋ ವರ್ಷಗಳಿಂದ ರಾಜ್ಯ ರಾಜಕಾರಣದಲ್ಲಿ ದೂರವಿದ್ದ ಖರ್ಗೆ ಈಗ ಮತ್ತೆ ಆಸಕ್ತಿ ತೋರುತ್ತಿರುವುದೂ ಅಲ್ಲದೇ ಹಿಡಿತ ಸಾಧಿಸುತ್ತಿದ್ದಾರೆ!

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪರಮೇಶ್ವರ್ ನನ್ನೇ ಮುಂದುವರೆಯುವಂತೆ ಹೈ ಕಮಾಂಡ್ ಗೆ ಸೂಚನೆ ನೀಡಿದ್ದು ಖರ್ಗೆಯವರೇ! ಅದೇ ರೀತಿಯೇ ಹೈ ಕಮಾಂಡ್ ನಡೆದುಕೊಂಡಿದ್ದು ಅಚ್ಚರಿಯೇ ಸರಿ! ಸಿದ್ಧರಾಮಯ್ಯರ ವಿರೋಧದ ನಡುವೆಯೂ ಹೈ ಕಮಾಂಡ್ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬೇರೆಯವರಿಗೆ ಕೊಟ್ಟಿರಲಿಲ್ಲ ಎಂಬುದೂ ವಲಯದ ಮಾತು.

ಪ್ರಸಕ್ತ ವರ್ಷಗಳಲಿ ಸಿದ್ಧರಾಮಯ್ಯನ ದ್ವೇಷ ರಾಜಕಾರಣಕ್ಕೆ ಹೊತ್ತುರಿದಿರುವ ಕಾಂಗ್ರೆಸ್ ನ ಉಳಿದ ನಾಯಕರು ಖರ್ಗೆಯವರನ್ನೇ ಮುಖ್ಯ ಮಂತ್ರಿಯಾಗಿಸಲು ಬೆಂಬಲಿಸುತ್ತಿದ್ದಾರೆಂಬುದೂ ತಿಳಿದಿದೆ. ಆದ್ದರಿಂದ, ಇಷ್ಟು ದಿನವೂ ಬೇಕಾ ಬಿಟ್ಟಿಯಾಗಿ ಆಡಳಿತ ನಡೆಸಿದ್ದ ಸಿದ್ಧರಾಮಯ್ಯಗೆ ನಿರಾಸೆಯೆಂಬುದು ಕಟ್ಟಿಟ್ಟ ಬುತ್ತಿಯಾಗಿದೆ.

– ತಪಸ್ವಿ

Tags

Related Articles

Close