ಪ್ರಚಲಿತ

ಸಿದ್ಧರಾಮಯ್ಯನ ನಿಜಮುಖವನ್ನರಿತ ಮಹದಾಯಿ ಹೋರಾಟಗಾರರು, ಸಿದ್ಧುವಿನ ವಿರುದ್ಧ ಸಿಡಿದೆದ್ದು ಕೈಗೊಂಡ ಕಠಿಣ ನಿರ್ಧಾರವೇನು ಗೊತ್ತಾ?!

‘What Goes around comes around” ಎಂದಿರುವುದು ಸುಳ್ಳಲ್ಲ! ಅದರಲ್ಲಿಯೂ, ಕಾಂಗ್ರೆಸ್ ಸರಕಾರಕ್ಕೆ ಮಾತ್ರ ಈ ವಿಚಾರವೆನ್ನುವುದು ಪ್ರಸ್ತುತವಾಗುತ್ತದೆ! ಪ್ರತೀ ಬಾರಿಯೂ ಕುತಂತ್ರ ಮಾಡುತ್ತಲೇ ತನ್ನ ತಾ ‘ಉತ್ತಮ’ ಎಂದುಕೊಳ್ಳುತ್ತಿದ್ದ ಕಾಂಗ್ರೆಸ್ ಗೀಗ ಅವರದೇ ಬಾಣವೊಂದು ತಿರುಗಿ ಬಡಿದಿದೆ!

ಹಾ! ಮಹದಾಯಿ ವಿಚಾರವಾಗಿ, ಹೋರಾಟಗಾರರನ್ನು ಎತ್ತಿಕಟ್ಟಿದ್ದ ಕಾಂಗ್ರೆಸ್ ಕಳೆದ ನಾಲ್ಕೂವರೆ ವರುಷಗಳಿಂದಲೂ ಸಹ, ಸುಳ್ಳು ಭರವಸೆಯನ್ನಷ್ಟೇ ನೀಡುತ್ತ ಬಂದಿದ್ದರೂ, ಮಹದಾಯಿ ಹೋರಾಟಗಾರರೂ ಸಹ ಅದನ್ನೇ ನಂಬಿಕೊಂಡು ವಿಪಕ್ಷಗಳ ವಿರುದ್ಧ ಹೋರಾಟ ಮಾಡಲು ಶುರು ಹಚ್ಚಿದ್ದರು! ರಾಜ್ಯದಲ್ಲಿರುವುದು ಕಾಂಗ್ರೆಸ್ ಸರಕಾರ! ನ್ಯಾಯ ನೀಡಬೇಕಾಗಿರುವುದು ಕಾಂಗ್ರೆಸ್ ಆಗಿದ್ದರೂ ಹೋರಾಟಗಾರರು ಬಿಜೆಪಿಯ ಕಚೇರಿ ಮುಂದೆ ಪ್ರತಿಭಟನೆಗಿಳಿದಿದ್ದರು!

ಅಲ್ಲ ಸ್ವಾಮಿ?! ಇದಕ್ಕೇನಾದರೂ ಅರ್ಥವಿದೆಯೇ?!

ಯಡಿಯೂರಪ್ಪನವರು ಹರಸಾಹಸ ಪಟ್ಟು ಮನೋಹರ್ ಪರಿಕ್ಕರ್ ಹತ್ತಿರ ಸಂಧಾನಕ್ಕೆ ಒಪ್ಪಿಸಿ ಪತ್ರ ತೆಗೆದುಕೊಂಡು ಬಂದರು! ಅಂತಹವರ ವಿರುದ್ಧ
ಇವರು ಪ್ರತಿಭಟನೆಗೆ ಶುರುವಿಟ್ಟರು! ಹಾಗಾದರೆ, ಯಡಿಯೂರಪ್ಪನವರು ಪ್ರಯತ್ನ ಪಟ್ಟಿದ್ಧೇ ತಪ್ಪಾಗಿತ್ತಾ?! ಅಥವಾ, ಬಿಜೆಪಿಯೇ ಗತಿ ಎಂಬುದಕ್ಕೆ ಧರಣಿ ಕೂತಿದ್ದಾ?!

ಅಂತೂ ಇಂತೂ ಮತ್ತೆ ಶುರುವಾಗಿದೆ ಮಹಾ ಸಂಗ್ರಾಮ!

ಈಗ ಮಹದಾಯಿ ಹೋರಾಟಗಾರರು ಮತ್ತೆ ಹೋರಾಟಕ್ಕಿಳಿದಿದ್ದಾರೆ, ವೀರೇಶ್ ಸೊಬರದಮಠ ನೇತೃತ್ವದಲ್ಲಿ ಪ್ರತಿಭಟನೆಗಿಳಿದಿರುವ ಮಹದಾಯಿ ಹೋರಾಟಗಾರರು, ರಾಜ್ಯದ ಮುಖ್ಯಮಂತ್ರಿಯಾದ ಸಿದ್ಧರಾಮಯ್ಯರವರ ಅಧಿಕೃತ ನಿವಾಸವಾದ, ‘ಕಾವೇರಿ’ಗೆ ಮುತ್ತಿಗೆ ಹಾಕಿದ್ದಾರೆ! ಮೈಸೂರು ಪ್ರವಾಸದಲ್ಲಿರುವ ಸಿದ್ಧರಾಮಯ್ಯ ಈಗ ಹೋರಾಟಗಾರರನ್ನು ಚದುರಿಸಲು ಲಾಠಿ ಚಾರ್ಜ್ ಗೆ ಆದೇಶ ಮಾಡುತ್ತಾರೋ, ಅಥವಾ ಮಾಡಿದ ಕುತಂತ್ರ ಬುದ್ಧಿಯನ್ನು ಒಪ್ಪಿಕೊಂಡು ವಾಪಾಸ್ಸು ಬಂದು ಪರಿಹರಿಸುತ್ತಾರೋ ಗೊತ್ತಿಲ್ಲ!

ಅಮಿತ್ ಷಾ ಕರ್ನಾಟಕಕ್ಕೆ ಬಂದಾಗಲೂ ಸಹ ಪ್ರತಿಭಟನೆಗಿಟ್ಟುಕೊಂಡಿದ್ದ ಮಹದಾಯಿ ಹೋರಾಟಗಾರರು, ಸೋನಿಯಾ ಗಾಂಧಿ ‘ಒಂದು ಹನಿ ಮಹದಾಯಿ ನೀರನ್ನೂ ಕರ್ನಾಟಕಕ್ಕೆ ಬಿಡುವುದಿಲ್ಲ’ ಎಂಬುದನ್ನು ಒಪ್ಪಿಕೊಂಡರೇ ಹಾಗಾದರೆ?!

ಮಹದಾಯಿ ಹೋರಾಟಗಾರರ ಬೇಡಿಕೆಗಳೇನಿದೆ ಗೊತ್ತಾ?!

1. ಪ್ರತಿಭಟನೆ ನಿಲ್ಲಿಸಬೇಕೆಂದರೆ ಸಿಎಂ ಬರಬೇಕು!
2.ಪ್ರಧಾನಿ ಮೋದಿಯ ಬಳಿ ಸರ್ವಪಕ್ಷ ನಿಯೋಗವನ್ನು ಕೊಂಡೊಯ್ಯಬೇಕು!
3.ಕೂಡಲೇ ಮಹದಾಯಿ ವಿಚಾರದಲ್ಲಿ ರಾಹುಲ್ ಗಾಂಧಿ ಸ್ಪಷ್ಟನೆ ನೀಡಬೇಕೆಂಬ ಒತ್ತಾಯ!

ಹೋರಾಟಗಾರರಿಗೆ ಕೊನೆಗೂ ಬುದ್ಧಿ ಬಂದಂತಿದೆ!

ಈ ಹಿಂದೆ, ಕರ್ನಾಟಕ ರಾಜ್ಯ ಸರಕಾರದ ಮುಖ್ಯಮಂತ್ರಿ ‘ನಾನೇಕೆ ಹೋಗಲಿ ಗೋವಾ ಮುಖ್ಯಮಂತ್ರಿಯ ಹತ್ತಿರ?!” ಎಂದು ಸೊಕ್ಕು ಮಾಡಿ ಕುಳಿತಿದ್ದರಲ್ಲದೇ, ಕೊನೆಗೆ ಮಹದಾಯಿ ತರುವುದು ನಾನು, ಬಿಜೆಪಿಯವರಲ್ಲ ಎಂದಿದ್ದ ಸಿದ್ಧರಾಮಯ್ಯ ಒಳಗೊಳಗೇ ಪಿತೂರಿ ನಡೆಸಿ, ಗೋವಾ ಕಾಂಗ್ರೆಸ್ ರವರಿಂದ ಮನೋಹರ್ ಪರಿಕ್ಕರ್ ಗೆ ಮಾತುಕಥೆ ನಡೆಸದಂತೆ ಒತ್ತಡ ತಂದಿದ್ದರು!

ಇತ್ತ ಮಹದಾಯಿ ಹೋರಾಟಗಾರರ ಮುಂದೆ ಪೋಸು ಕೊಟ್ಟ ಸಿದ್ಧರಾಮಯ್ಯ ಎಸಿ ಕೋಣೆಗೆ ಹೋದ ತಕ್ಷಣ ಪಿತೂರಿ ಶುರು ಹಚ್ಚಿದ್ಷರು! ಆದರೀಗ, ಮಹದಾಯಿ ಹೋರಾಟಗಾರರು ಸಿದ್ಧುವಿನ.ನಿವಾಸಕ್ಕೇ ಹೋಗಿ ಗುದ್ದು ಕೊಡುತ್ತಿದ್ದಾರೆ!

– ಪೃಥು ಅಗ್ನಿಹೋತ್ರಿ

Tags

Related Articles

Close