ಅಂಕಣಪ್ರಚಲಿತ

ಸುನಂದಾ ಪುಷ್ಕರ್ ಳ ಸಾವು ಸಹಜವಲ್ಲ ಎಂದ ಉಚ್ಚ್ಛ ನ್ಯಾಯಾಲಯದ ಅಭಿಪ್ರಾಯವೊಂದು ಶಶಿ ತರೂರ್ ನ ಇನ್ನೊಂದು ಮುಖವನ್ನು ಬಯಲು ಮಾಡಿದ್ದು ಹೇಗೆ ಗೊತ್ತಾ?

`ಅದು ಸಹಜ ಸಾವಲ್ಲ….’ ಈ ಮಾತನ್ನು ಬೇರೆ ಯಾರಾದರೂ ಹೇಳಿದ್ದರೆ ಸಾರಾಗಟವಾಗಿ ತಿರಸ್ಕರಿಸಬಹುದಿತ್ತು. ಆದರೆ ಸ್ವತಃ ಹೈಕೋರ್ಟ್ ಈ ಮಾತನ್ನು
ಹೇಳಿರುವುದರಿಂದ ಗಂಭೀರವಾಗಿ ಯೋಚಿಸುವಂತೆ ಮಾಡಿದೆ. ಅಂದಹಾಗೆ ಹೈಕೋರ್ಟ್ ಹೀಗೆ ಹೇಳಿದ್ದು ಬೇರ್ಯಾರಿಗೂ ಅಲ್ಲ… ಅದು ಹೇಳಿದ್ದು ಶಶಿ ತರೂರು ಪತ್ನಿ ಸುನಂದಾ ಪುಷ್ಕರ್ ಅವರ ನಿಗೂಢ ಸಾವಿನ ಕುರಿತು…!

ಸುನಂದಾ ಪುಷ್ಕರ್ ಅವರ ಸಾವಿನ ಬಗ್ಗೆ ದೆಹಲಿ ಪೊಲೀಸರು ಜವಾಬ್ದಾರಿಯಿಂದ ಕೆಲಸ ಮಾಡುತ್ತಿಲ್ಲ ಎಂದು ಹೈಕೋರ್ಟ್ ದೆಹಲಿ ಪೊಲೀಸರಿಗೆ ಛೀಮಾರಿ ಹಾಕಿದೆ. ಸುನಂದಾ ಸಾವಿನ ಕುರಿತಾದ ವೈದ್ಯಕೀಯ ಮತ್ತು ವೈಜ್ಞಾನಿಕ ವರದಿಯನ್ನು ಹಾಜರುಪಡಿಸುವಂತೆ ಹೈಕೋರ್ಟ್ ಹೇಳಿದೆ. ವರದಿ ಇದ್ದರೂ ತನಿಖೆ ವಿಳಂಬ ಯಾಕೆ ಎಂದು ಹೈಕೋರ್ಟ್ ಪ್ರಶ್ನಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ದೆಹಲಿ ಪೊಲೀಸರಿಗೆ ಎರಡು ವಾರಗಳ ಗಡುವು ವಿಧಿಸಿದ್ದು, ಪ್ರಕರಣದ ಯಾವುದೆಲ್ಲಾ ಬೆಳವಣಿಗೆ ನಡೆದಿದೆಯೋ ಅದನ್ನೆಲ್ಲಾ ನ್ಯಾಯಾಲಯದ ಗಮನಕ್ಕೆ ತರಬೇಕು. ಜೊತೆಗೆ ಎರಡು ವಾರಗಳಲ್ಲಿ ಪ್ರಕರಣದ ಚಾರ್ಜ್‍ಶೀಟನ್ನು ಕೋರ್ಟ್‍ಗೆ ಹಾಜರುಪಡಿಸಬೇಕು. ನೀವೇನಾದರೂ ಹೊಸತನ್ನು ಮಾಡಿದ್ದರೆ ಅದನ್ನು ಕೂಡಾ ಎರಡು ವಾರಗಳೊಳಗೆ ಕೋರ್ಟಿಗೆ ತಿಳಿಸಬೇಕು. ಒಂದು ವೇಳೆ ನಿಮಗೆ ತನಿಖೆ ನಡೆಸಲಾಗದಿದ್ದರೆ ನಾವೇ ನಡೆಸುತ್ತೇವೆ ಎಂದು ಹೈಕೋರ್ಟ್ ದೆಹಲಿ ಪೊಲೀಸರಿಗೆ ಛೀಮಾರಿ ಹಾಕಿದೆ.
ಸುನಂದಾ ಪುಷ್ಕರ್ ನಿಗೂಢ ಕೊಲೆಯ ಕುರಿತು ಸಿಬಿಐ ತನಿಖೆ ನಡೆಸುವಂತೆ ಬಿಜೆಪಿ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ. ತನಿಖಾ ಸಂಸ್ಥೆ ಸುನಂದಾ ಸಾವು ವಿಷಪ್ರಾಶನದಿಂದ ನಡೆದಿದೆ ಎಂದು ತಿಳಿಸಿದೆ. ಆದರೆ ಅದು ಯಾವ ತರದ ವಿಷವೆಂದು ತಿಳಿಯಬೇಕಾದ ಸತ್ಯ ಎಂದು ಸ್ವಾಮಿ ಆಗ್ರಹಿಸಿದ್ದಾರೆ. ಹೈಕೋರ್ಟ್ ಎಫ್‍ಬಿಐ(ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷ್) ನೀಡಿದ ವರದಿಯನ್ನು ಗಮನಿಸುತ್ತಿದೆ. ಡಾ. ಸುಧೀರ್ ಗುಪ್ತಾ ನೀಡಿದ ಮರಣೋತ್ತರ ಪರೀಕ್ಷೆಯ ವರದಿಯ ಅನ್ವಯ ಪುಷ್ಕರ್ ಅವರ ಸಾವು ಪೊಲಿನಿಮಂ-210ನಿಂದ ಸಂಭವಿಸಿದೆ ಎಂದು ಎಫ್‍ಬಿಐ ತಿಳಿಸಿದೆ. ಆದರೆ ತನಿಖಾ ಸಂಸ್ಥೆ ತನಿಖೆಯನ್ನು ವಿಳಂಬಗತಿಯಿಂದ ನಡೆಸುತ್ತಿದೆ ಎಂದು ಸ್ವಾಮಿ ಆರೋಪಿಸಿದ್ದಾರೆ.

ಎಎಸ್‍ಜಿ ಸಂಜಯ್ ಜೈನ್ ಅವರು ತನಿಖೆಯ ಬೆಳವಣಿಗೆಯ ಬಗ್ಗೆ ಹೈಕೋರ್ಟ್‍ಗೆ ಸಲ್ಲಿಸಿದ ವರದಿಯನ್ನು ಹೈಕೋರ್ಟ್ ಪರಿಶೀಲಿಸಿ ತನಿಖೆಯ ಬೆಳವಣಿಗೆಯ ಬಗ್ಗೆ ಅವರ ಅಭಿಪ್ರಾಯವನ್ನು ಕೇಳಿದೆ. ಅದಕ್ಕೆ ಉತ್ತರಿಸಿದ ಸಂಜಯ್ ಜೈನ್ ಇನ್ನೆರಡು ವಾರಗಳಲ್ಲಿ ಇನ್ನಷ್ಟು ಪೂರಕ ಮಾಹಿತಿಯನ್ನು ಕೋರ್ಟ್‍ಗೆ ಸಲ್ಲಿಸುವುದಾಗಿ ತಿಳಿಸಿದ್ದು ಎರಡು ವಾರಗಳ ಸಮಯವನ್ನು ಕೇಳಿದ್ದಾರೆ. ಅದರಂತೆ ಕೋರ್ಟ್ ಅವರಿಗೆ ಎರಡು ವಾರಗಳ ಸಮಯಾವಕಾಶವನ್ನು ನೀಡಿದ್ದು, ಸೆಪ್ಟೆಂಬರ್ 21ಕ್ಕೆ ಈ ಪ್ರಕರಣ ಮತ್ತೆ ವಿಚಾರಣೆಗೆ ಬರಲಿದೆ.

ಇದು ಸಹಜ ಸಾವಲ್ಲ… ಏನು ಹೇಳುತ್ತೀರಿ ಮಿಸ್ಟರ್ ತರೂರು?
ಕಾಂಗ್ರೆಸ್ ಪ್ರಭಾವಿ ಮುಖಂಡ ಶಶಿ ತರೂರು ಅವರ ಪತ್ನಿ ಸುನಂದಾ ಪುಷ್ಕರ್ ಅವರು ಜನವರಿ 2014ರಲ್ಲಿ, ದೆಹಲಿ ಫೈವ್‍ಸ್ಟಾರ್ ಹೋಟೆಲ್‍ನ ಕೋಣೆಯೊಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಆದರೆ ಸ್ವಲ್ಪ ಹೊತ್ತಾದ ಬಳಿಕ ಆಕೆಯನ್ನು ಒಂದು ರೂಮಿನಿಂದ ಮತ್ತೊಂದು ರೂಮಿಗೆ ಸ್ಥಳಾಂತರಿಸುವುದು ಕಂಡುಬಂದಿತ್ತು. ಈ ರೀತಿ ಮಾಡಿರುವುದರ ಉದ್ದೇಶವೇನು? ಇದರ ಬಗ್ಗೆ ಮಿಸ್ಟರ್ ತರೂರು ಸ್ಪಷ್ಟೀಕರಿಸುತ್ತಾರಾ? ಹೀಗೆಂದು ಪ್ರಶ್ನಿಸುವ ಕಾಲ ಬಂದಿದೆ. ಒಟ್ಟಿನಲ್ಲಿ ವಿಚಾರಣೆಯ ನಂತರ ಪ್ರಕರಣ ಯಾವ ರೀತಿ ಬದಲಾಗಬಹುದು, ಯಾರೆಲ್ಲಾ ಸಿಕ್ಕುಬೀಳಬಹುದು ಎಂದು ಹೇಳುವಂತಿಲ್ಲ. ಆದ್ದರಿಂದ ಸೆ.21ರವರೆಗೆ ಸಾಕಷ್ಟು ಕುತೂಹಲ ಮೂಡಿಸಿದೆ.ಪುಷ್ಕರ್ ಅವರ ಮೃತದೇಹ ಪತ್ತೆಯಾಗಿದ್ದ ಸ್ಥಳ ದೆಹಲಿಯ ಹೋಟೆಲ್ ಲೀಲಾ ಪ್ಯಾಲೇಸ್‍ನ ಕೊಠಡಿ ಸಂಖ್ಯೆ 345. ಕಳೆದ ವಾರ ಕೋರ್ಟ್ ಕೊಠಡಿಯನ್ನು ತೆರೆದು ಪರಿಶೀಲಿಸುವಂತೆ ತಿಳಿಸಿತ್ತು.
ಸುನಂದಾ ಪುಷ್ಕರ್ ಸಾವಿಗೀಡಾಗಿ ಸುಮಾರು ಮೂರೂವರೆ ವರ್ಷ ಸಂದಿದೆ. ಇಷ್ಟು ದಿನಗಳಾದರೂ ಈಕೆಯ ಸಾವಿಗೆ ನಿಖರ ಕಾರಣಗಳೇನು ಎಂದು ಇನ್ನೂ
ತಿಳಿದುಬಂದಿಲ್ಲ. ತನಿಖೆ ಯಾವ ಹಂತದಲ್ಲಿದೆ ಎಂದೂ ತಿಳಿದುಬಂದಿಲ್ಲ. ಈಕೆಯ ಸಾವಿಗೆ ಕಾರಣ ಏನು? ಉದ್ದೇಶವೇನು? ಅಷ್ಟಕ್ಕೂ ಈಕೆಯನ್ನು ಕೊಲೆ ಮಾಡಿದ್ದು ಯಾರು ಎಂದು ಇನ್ನೂ ಬಹಿರಂಗಗೊಂಡಿಲ್ಲ. ಇದನ್ನೆಲ್ಲಾ ನೋಡಿದ ಹೈಕೋರ್ಟ್ ತನಿಖಾ ತಂಡವನ್ನು ತರಾಟೆಗೆ ತೆಗೆದುಕೊಂಡಿದೆ.

-ಚೇಕಿತಾನ

Tags

Related Articles

Close