ಪ್ರಚಲಿತ

ಸ್ಫೋಟಕ ಮಾಹಿತಿ ಬಹಿರಂಗ! ಗಾಂಧಿಯನ್ನು ಕೊಂದವನು ನಾಥೂರಾಂ ಗೋಡ್ಸೆಯಲ್ಲ : ಅಮೆರಿಕಾ ಗುಪ್ತಚರ ಇಲಾಖೆ!!

ಮಹಾತ್ಮಾ ಗಾಂಧೀಜಿಯನ್ನು ಕೊಂದವನು ನಾಥೂರಾಂ ಗೋಡ್ಸೆ ಎಂದು ಆತನನ್ನು ಗಲ್ಲಿಗೇರಿಸಲಾಗಿದೆ. ಆದರೆ ಗಾಂಧಿ ಹತ್ಯೆಯಲ್ಲಿ ನಾಥೂರಾಮ್ ಗೋಡ್ಸೆ ಅಲ್ಲದೆ ಮತ್ತೊಬ್ಬ ಹಂತಕ ಭಾಗಿಯಾಗಿದ್ದನೇ ಎಂಬ ಬಗ್ಗೆ ಕುತೂಹಲಕಾರಿ ಪ್ರಶ್ನೆಯೊಂದು ಮೂಡಿದೆ. ಗಾಂಧಿ ಕೊಲೆ ಪ್ರಕರಣದ ಕುರಿತ ಕೆಲವು ರಹಸ್ಯಗಳನ್ನು ಮುಚ್ಚಿ ಹಾಕಲಾಗಿದೆ. ನಿಜವಾಗಿಯೂ ಗಾಂಧಿ ಕೊಲೆಯ ಹಿಂದಿರುವ ಆ ನಿಗೂಢ ವ್ಯಕ್ತಿಗಳು ಯಾರು. ಈ ವ್ಯಕ್ತಿಗಳನ್ನು ರಕ್ಷಿಸಲಾಗಿದೆಯೇ ಎಂಬ ಹಲವಾರು ಪ್ರಶ್ನೆಗಳಿವೆ.

ಆದರೆ ಇದೀಗ ಸ್ಫೋಟಕ ಮಾಹಿತಿಯೊಂದ ಹೊರಬಿದ್ದಿದ್ದು, ಗಾಂಧಿ ಹತ್ಯೆ ಹಿಂದಿನ ಆ ನಿಗೂಢ ವ್ಯಕ್ತಿಗಳ ರಹಸ್ಯ ಅಮೆರಿಕಾದ ಗುಪ್ತಚರ ಇಲಾಖೆಯ ಬಳಿ ಇದೆ. ಆ
ರಹಸ್ಯವನ್ನು ಭೇದಿಸಲು ಮುಂಬೈನ ಅಭಿನವ್ ಭಾರತ್‍ನ ಟ್ರಸ್ಟಿ ಹಾಗೂ ಅಧ್ಯಯನಕಾರ ಡಾ. ಪಂಕಜ್ ಫಡ್ನಿಸ್ ಎಂಬವರು ಮುಂದಾಗಿದ್ದಾರೆ. ಅದರಂತೆ ಗಾಂಧಿ ಹತ್ಯೆ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸಲ್ಲಿಸಲಾಗಿದೆ. ಇದರಲ್ಲಿ ಉಲ್ಲೇಖಿಸಲಾಗಿರುವಂತೆ ಗಾಂಧಿ ಕೊಲೆಯಲ್ಲಿ ಹಲವಾರು ರಹಸ್ಯಗಳಿವೆ. ಈ ರಹಸ್ಯವನ್ನು ಬಯಲುಗೊಳಿಸಬೇಕೆಂದು ಅರ್ಜಿಯಲ್ಲಿ ವಿನಂತಿಸಲಾಗಿದೆ.

ಗಾಂಧಿ ಅವರ ಹತ್ಯೆ ಪ್ರಕರಣವು, ಚರಿತ್ರೆಯಲ್ಲಿ ಮುಚ್ಚಿಹಾಕಲಾಗಿರುವ ದೊಡ್ಡ ಪ್ರಕರಣಗಳಲ್ಲಿ ಒಂದಾಗಿದೆಯೇ ಎಂಬ ಪ್ರಶ್ನೆಯೊಂದು ಮೂಡಿದ್ದು, ಈ ರಹಸ್ಯ ಕೆಲವೇ ದಿನಗಳಲ್ಲಿ ಹೊರಬೀಳುವ ಸಾಧ್ಯತೆ ಇದೆ. ಇನ್ನೊಂದು ರಹಸ್ಯದ ಪ್ರಕಾರ ಮಹತ್ಮಾ ಗಾಂಧಿಯನ್ನು ರಕ್ಷಿಸಲು ಪ್ರಯತ್ನಿಸಲಾಗಿದ್ದು, ಆದರೆ ಅದು ವಿಫಲಗೊಂಡ ಕಾರಣ ಗಾಂಧೀಜಿಯ ಕಲೆ ನಡೆದುಹೋಗಿದೆಯೇ ಎಂಬ ಪ್ರಶ್ನೆಯನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಉಲ್ಲೇಖಿಸಲಾದ ಮಾಹಿತಿಯ ಪ್ರಕಾರ ಗಾಂಧಿಯನ್ನು ರಕ್ಷಿಸಲು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆಯಾಗಿದ್ದ ಆಫೀಸ್ ಆಫ್ ಸ್ಟ್ರಾಟೆಜಿಕ್ ಸರ್ವೀಸಸ್ (ಒಎಸ್‍ಎಸ್) ಮತ್ತು ನಂತರದ ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿ (ಸಿಐಎ) ಇವೆರಡು ಮುಂದಾಗಿದ್ದವು ಎಂಬ ಸ್ಫೋಟಕ ವಿಚಾರಗಳಿವೆ ಎಂದು ವರದಿಯಾಗಿದೆ.

ಇದರ ಪೂರ್ಣಪಾಠ ಇಲ್ಲಿದೆ:

ಗಾಂಧೀಜಿ ಹತ್ಯೆಯ ಕುರಿತು ಮರುತನಿಖೆ ನಡೆಯಬೇಕು ಎನ್ನುವುದು ಹಲವಾರು ಮಂದಿಯ ಆಗ್ರಹವಾಗಿದೆ. ಅದರಂತೆ ಮುಂಬೈನ ಅಭಿನವ್ ಭಾರತ್‍ನ ಟ್ರಸ್ಟಿ ಹಾಗೂ ಅಧ್ಯಯನಕಾರ ಡಾ. ಪಂಕಜ್ ಫಡ್ನಿಸ್ ಅವರು ಗಾಂಧಿ ಅವರ ಹತ್ಯೆ ಪ್ರಕರಣವು, ಚರಿತ್ರೆಯಲ್ಲಿ ಮುಚ್ಚಿಹಾಕಲಾಗಿರುವ ದೊಡ್ಡ ಪ್ರಕರಣಗಳಲ್ಲಿ ಒಂದಾಗಿದೆಯೇ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. 1948ರ ಜನವರಿ 30ರಂದು ಗಾಂಧೀಜಿ ಹತ್ಯೆಯಾಗಿದ್ದರು. ಈ ವೇಳೆ ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯಿಂದ ವಾಷಿಂಗ್ಟನ್‍ಗೆ ಹತ್ಯೆಯ ಕುರಿತು ಒಂದು ಟೆಲಿಗ್ರಾಂ ಕಳುಹಿಸಲಾಗಿತ್ತು. ಆದರೆ ಅದಕ್ಕೆ ಸಂಬಂಧಿಸಿದ ಒಂದು ವರದಿಯು ಇನ್ನೂ ರಹಸ್ಯವಾಗಿಯೇ ಇದೆ ಎಂಬ ಪ್ರಶ್ನೆಯನ್ನು ಫಡ್ನಿಸ್ ಅರ್ಜಿಯಲ್ಲಿ ಹೇಳಿದ್ದಾರೆ.

ಫಡ್ನಿಸ್ ಅವರು 2017ರ ಮೇ ತಿಂಗಳಲ್ಲಿ ಅಮೆರಿಕದ ಮೇರಿಲ್ಯಾಂಡ್‍ನಲ್ಲಿರುವ ನ್ಯಾಷನಲ್ ಆರ್ಕೈವ್ಸ್ ಆಂಡ್ ರಿಸರ್ಚ್ ಅಡ್ಮಿನಿಸ್ಟ್ರೇಷನ್‍ಗೆ ಭೇಟಿ ನೀಡಿದ್ದರು. ಗಾಂಧಿ ಹತ್ಯೆಯ ಸಂದರ್ಭದಲ್ಲಿ ಅಂದು ಅಮೆರಿಕಕ್ಕೆ ಕಳುಹಿಸಿದ್ದ ಟೆಲಿಗ್ರಾಂಗಳ ಬಯಲಾಗದ ದಾಖಲೆಗಳನ್ನು ಅಧಿಕೃತವಾಗಿ ಪಡೆದಿದ್ದರು. ಈ ದಾಖಲೆಗಳನು ಈಗ ಸಲ್ಲಿಸಿರುವ ಅರ್ಜಿಯಲ್ಲಿ ಅವರು ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.

ನಿರ್ಬಂಧಿತ ಟೆಲಿಗ್ರಾಂನಲ್ಲಿದೆ ಬಯಲಾಗದ ನಿಗೂಢ ರಹಸ್ಯ!!!

ಗಾಂಧಿಜಿಯನ್ನು ಹತ್ಯೆ ನಡೆಸಿದ ದಿನವಾದ 1948ರ ಜನವರಿ 30ರಂದು ರಾತ್ರಿ 8 ಗಂಟೆಗೆ ಅಮೆರಿಕದ ರಾಯಭಾರ ಕಚೇರಿಯಿಂದ ವಾಷಿಂಗ್ಟನ್‍ಗೆ ಟೆಲಿಗ್ರಾಂ
ಕಳುಹಿಸಲಾಗಿದೆ. ಈ ಟೆಲಿಗ್ರಾಂ ಹೊರಬೀಳದಂತೆ ನಿರ್ಬಂಧಿಸಲಾಗಿದ್ದು ಇದರ ಪ್ರಕಾರ, ಅಮೆರಿಕದ ಅಂದಿನ ಅಧಿಕಾರಿ ಹರ್ಬರ್ಟ್ ಟಾಮ್ ರೀನರ್ ಅವರು ಗಾಂಧಿ ಅವರನ್ನು ಹತ್ಯೆ ಮಾಡಿದ ಸ್ಥಳದಿಂದ ಕೇವಲ 5 ಅಡಿ ದೂರದಲ್ಲಿದ್ದರು ಮತ್ತು ಭಾರತದ ಭದ್ರತಾ ಸಿಬ್ಬಂದಿ ನೆರವಿನಿಂದ ಹಂತಕನನ್ನು ಹಿಡಿದಿದ್ದರು ಎಂಬ ಮಾಹಿತಿ ಇದೆ ಎಂದು ಫಡ್ನಿಸ್ ಕಲೆ ಮಾಡಿರುವ ದಾಖಲೆಗಳು.

ಹರ್ಬರ್ಟ್ ಟಾಮ್ ರೀನರ್ ಅವರು ಗಾಂಧಿ ಹತ್ಯೆಯಾದ ಬಳಿಕ ಅಮೆರಿಕಾದ ರಾಯಭಾರ ಕಚೇರಿಗೆ ತೆರಳಿ ಗಾಂಧೀಜಿ ಹತ್ಯೆಯ ಕುರಿತು ವಿವರವಾದ ವರದಿ
ಸಲ್ಲಿಸಿದ್ದರು. ಆದರೆ ಆ ವರದಿಯಲ್ಲಿ ಏನಿತ್ತು ಎಂದು ಇಂದಿಗೂ ನಿಗೂಢವಾಗಿಯೇ ಉಳಿದುಕೊಂಡಿದೆ. ಇದೀಗ ಫಡ್ನಿಸ್ ಅವರು ಈ ವರದಿಯನ್ನು ಬಹಿರಂಗ ಪಡಿಸಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿಯೇ ಫಡ್ನಿಸ್ ಅವರು ಅಮೆರಿಕಾದ ಮಾಹಿತಿ ಸ್ವಾತಂತ್ರ್ಯ ಕಾಯಿದೆಯಡಿಯಲ್ಲಿ ರೀನರ್ ಸಲ್ಲಿಸಿದ ವರದಿಯ ವಿವರಗಳನ್ನು ಬಯಲುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. ಇದೇ ವಿಚಾರವನ್ನು ಫಡ್ನಿಸ್ ಅವರು ಸುಪ್ರೀಂಕೋರ್ಟ್‍ಗೆ ಸಲ್ಲಿಸಿದ ಅರ್ಜಿಯಲ್ಲೂ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.

ಮುಖ್ಯವಾಗಿ ರೀನರ್ ಅವರು ಸಲ್ಲಿಸಿದ ಮೂರನೇ ಟೆಲಿಗ್ರಾಂನಲ್ಲಿ ಗಾಂಧಿ ಹತ್ಯೆಯ ಕುರಿತ ಬಯಲಾಗದ ಹಲವಾರು ರಹಸ್ಯಗಳಿವೆ ಎನ್ನುವುದನ್ನು ಫಡ್ನಿಸ್ ಅರ್ಜಿಯಲ್ಲಿ ತಿಳಿಸಿದ್ದಾರೆ. ಈ ಅರ್ಜಿಯು ಅಕ್ಟೋಬರ್ 6ರಂದು ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆಗೆ ಬರುವ ನಿರೀಕ್ಷೆ ಇದೆ ಎಂದು ಫಡ್ನಿಸ್ ತಿಳಿಸಿದ್ದಾರೆ. ವಿಚಾರಣೆ ನಡೆದ ಬಳಿಕ ಗಾಂಧಿ ಹತ್ಯೆಯ ಹಿಂದಿನ ರಹಸ್ಯ ಒಂದೊಂದಾಗಿಯೇ ಬಯಲಾಗಬಹುದು ಎಂದು ನಂಬಲಾಗಿದೆ…

ಹತ್ಯೆಯ ಹಿಂದೆ ಯಾರೆಲ್ಲಾ ಇದ್ದಾರೆ..???

ಸಾಮಾನ್ಯವಾಗಿ ಗಾಂಧೀಜಿಯನ್ನು ಕೊಂದವನು ನಾಥೂರಾಂ ಗೋಡ್ಸೆ ಎಂದು ಇದುವರೆಗೆ ನಂಬಲಾಗಿದೆ. ಆದರೆ ಗಾಂಧಿ ಹತ್ಯೆಯನ್ನು ನಿಜವಾಗಿಯೂ ನಡೆಸಿದ್ದು ಯಾರು ಎಂದು ಹಲವಾರು ಜಿಜ್ಞಾಸೆಗಳಿವೆ. ಗಾಂಧೀಜಿ ಹತ್ಯೆಯಾದ ದಿನ ಇನ್ನೊಬ್ಬ ಹಂತಕ ಭಾಗಿಯಾಗಿದ್ದನೇ. ಆತ ಯಾರು, ಯಾರ ಚಿತಾವಣೆಯಿಂದ ಆತ ಭಾಗಿಯಾಗಿದ್ದ. ಅಥವಾ ಹತ್ಯೆಯಲ್ಲಿ ವಿದೇಶಿ ವ್ಯಕ್ತಿಯ ಕೈವಾಡ ಇದೆಯೇ ಮುಂತಾದ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಅದಕ್ಕಾಗಿಯೇ ಫಡ್ನಿಸ್ ಅವರು ಅಮೆರಿಕದ ಬಳಿ ಇರುವ ರಹಸ್ಯ ದಾಖಲೆಗಳನ್ನು ಪಡೆಯುಲು ಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ.

ಕಳೆದ 1996ರಿಂದ ಫಡ್ನಿಸ್ ಅವರು ಈ ಬಗ್ಗೆ ಅಧ್ಯಯನ ನಡೆಸುತ್ತಲೇ ಬಂದಿದ್ದಾರೆ. ಅಧ್ಯಯನದ ವೇಳೆ ಅಮೆರಿಕಾದ ಬಳಿ ಈ ರಹಸ್ಯ ಇದ್ದು, ಆದರೆ ಬಯಲಾಗದೆ ಉಳಿದುಕೊಂಡಿದೆ. ರೀನರ್ ಸಲ್ಲಿಸಿದ ಮೂರನೇ ಟೆಲಿಗ್ರಾಂನಲ್ಲಿ ರಹಸ್ಯಗಳಿರುವುದನ್ನು ಕಂಡುಕೊಂಡ ಫಡ್ನಿಸ್ ಅವರು ಮೂರನೇ ಟೆಲಿಗ್ರಾಂನ ವಿವರ ಬಹಿರಂಗಪಡಿಸುವಂತೆ ಶ್ವೇತಭವನಕ್ಕೆ ಮನವಿ ಮಾಡಿದ್ದಾರೆ. ಜೊತೆಗೆ ಈ ರಹಸ್ಯದ ಬಗ್ಗೆ ಆನ್‍ಲೈನ್ ಅಭಿಯಾನವನ್ನೂ ನಡೆಸಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಗಾಂಧೀಜಿ ಹತ್ಯೆ ಮಾಡಿದವರು ಯಾರು ಎಂಬ ವಿಚಾರಗಳ ಬಗ್ಗೆ 1948ರಿಂದಲೇ ಚರ್ಚೆಯಾಗುತ್ತಲೇ ಬಂದಿದೆ. ಗಾಂಧೀಜಿಯನ್ನು ಹತ್ಯೆ ಮಾಡಿದಾತ ನಾಥೂರಾಮ್ ಗೋಡ್ಸೆ ಎಂದು ದಾಖಲೆಗಳು ಹೇಳಿದ್ದರೂ ಅದನ್ನು ಸಂಪೂರ್ಣ ನಂಬುವುದು ಈ ದೇಶದ ಜನಕ್ಕೆ ಸಾಧ್ಯವಾಗುತ್ತಿಲ್ಲ. ಇದಕ್ಕಾಗಿಯೇ ಗಾಂಧಿ ಹತ್ಯೆ ಕುರಿತಾಗಿ ಖ್ಯಾತ ವಿದ್ವಾಂಸ ಡಾ. ಕೆ. ಎಸ್. ನಾರಾಯಣಾಚಾರ್ಯ ಅವರು `ಗಾಂಧಿಯನ್ನು ನಿಜವಾಗಿ ಕೊಂದವರು ಯಾರು?’ ಕೃತಿ. `ಹೂ ರಿಯಲಿ ಕಿಲ್ಡ್ ಗಾಂಧಿ’ ಎಂಬ ಪುಸ್ತಕವನ್ನೂ ಬರೆದಿದ್ದು, ಇದೀಗ ದೇಶದಾದ್ಯಂತ ಸಾಕಷ್ಟು ಸಂಚಲನವನ್ನು ಸೃಷ್ಟಿಸಿದೆ.

ಇದೀಗ ಮುಂಬೈನ ಅಭಿನವ್ ಭಾರತ್‍ನ ಟ್ರಸ್ಟಿ ಹಾಗೂ ಅಧ್ಯಯನಕಾರ ಡಾ. ಪಂಕಜ್ ಫಡ್ನಿಸ್ ಅವರು ಗಾಂಧಿ ಹತ್ಯೆಯ ಕುರಿತು ಅಮೆರಿಕಾದ ಬಳಿ ರಹಸ್ಯ ಇದೆ
ಎಂದು ಹೇಳಿರುವುದು ದೇಶದಾದ್ಯಂತ ಮತ್ತೊಮ್ಮೆ ಸಂಚಲನ ಸೃಷ್ಟಿಸಿದೆ.

ಇನ್ನೊಂದು ವಿಷಯವನ್ನು ಸೂಕ್ಷ್ಮವಾಗಿ ತಿಳಿಸಲ್ಪಡಬೇಕಿದೆ!

1948, ‘ಹರಿಜನ’ ಪತ್ರಿಕೆಯ ಜನವರಿಯ ಸಂಚಿಕೆಯಲ್ಲಿ ಮಹಾತ್ಮಾ ಗಾಂಧಿಯ ಕೊನೆಯ ಲೇಖನವೊಂದು ಪ್ರಕಟವಾಗಿತ್ತು. ಅದರಲ್ಲಿ ಕಾಂಗ್ರೆಸ್ ಪಕ್ಷವನ್ನು ತ್ಯಜಿಸುವುದಾಗಿ ಹಾಗೂ, ಕಾಂಗ್ರೆಸ್ ಪಕ್ಷವನ್ನೇ ವಿಸರ್ಜಿಸಬೇಕೆಂದು ಹಲವಾರು ಕಾರಣಗಳನ್ನು ನೀಡಿ ವಾದಿಸಿ ಲೇಖನ ಬರೆದಿದ್ದರು! ಅದಾದ ಮೂರೇ ದಿವಸದಲ್ಲಿ ಗಾಂಧಿಯ ಕಗ್ಗೊಲೆ ನಡೆದಿತ್ತು.

-ಚೇಕಿತಾನ

Tags

Related Articles

Close