ಪ್ರಚಲಿತ

ಸ್ಫೋಟಕ ಮಾಹಿತಿ! ಸಿದ್ಧರಾಮಯ್ಯನ ಸರಕಾರ ಕಸದಲ್ಲೂ ಹಗರಣದ ಮೂಲಕ ರಸ ಹುಡುಕಿದ್ದು ಹೇಗೆ ಗೊತ್ತೇ?

ಸಿದ್ದರಾಮಯ್ಯ ಸರಕಾರದಲ್ಲಿ ಯಾವ ರೀತಿಯ ಹಗರಣಗಳು ನಡೆಯುತ್ತೆ ಎಂದೂ ಗೊತ್ತಾಗುತ್ತಿಲ್ಲ ಯಾಕೆಂದರೆ ಹಣ ಮಾಡುವ ಛಾಳಿಯನ್ನು ಹೊಂದಿರುವುದೇ ಇವರ ಧ್ಯೇಯ ಉದ್ದೇಶವೆಂದು ತೋರಿ ಬರುತ್ತೆ!! ಯಾಕೆಂದರೆ ಈಗಾಗಲೇ ಅದೆಷ್ಟೋ ಹಗರಣಗಳು ಕಾಂಗ್ರೆಸ್‍ನಲ್ಲಿ ನಡೆದುಹೋಗಿದೆ. ಆದರೆ ಇವರು ಕಸದಲ್ಲೂ ಹಣ ಮಾಡಹೊರಟಿದ್ದಾರೆ ಎಂದರೆ ನೀವು ನಂಬ್ತೀರಾ? ಆದರೆ ಇದು ನಂಬಲೇ ಬೇಕಾದ ಸತ್ಯ ಸಂಗತಿ!! ಕಸದಲ್ಲಿಯೂ ಮೃಷ್ಟಾನ್ನ ಭೋಜನವನ್ನುಂಡಲು ಬಯಸುತ್ತಾರೆ ಅಂದರೆ ಎತ್ತ ಸಾಗುತ್ತಿದೆ ಸಿದ್ದರಾಮಯ್ಯ ಸರಕಾರ???

ದೇಶದಲ್ಲಿ ಪ್ರಧಾನಿ ಮೋದಿ ಸ್ವಚ್ಛ ಭಾರತವನ್ನು ನಿರ್ಮಾಣ ಮಾಡ ಹೊರಟರೇ ರಾಜ್ಯದಲ್ಲಿ ನಮ್ಮ ಸಿದ್ದರಾಮಯ್ಯ ಭಾರಿ ಗಾತ್ರದ ಹಣವನ್ನು ಮಾಡುವಲ್ಲಿ
ನಿರತರಾಗಿದ್ದಾರೆ ಎಂದರೆ ತಪ್ಪಾಗಲಾರದು!! ಯಾಕೆಂದರೆ ಈಗಾಗಲೇ ತಾಜ್ಯ ವಿಲೇವಾರಿ ವಾಹನ, ಉಪಕರಣಗಳ ಖರೀದಿಯಲ್ಲಿ ಭಾರಿ ಅವ್ಯವಹಾರವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಮತ್ತು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಎಸಿಬಿಯಲ್ಲಿ ದೂರು ದಾಖಲಾಗಿದೆ. ಬಿಬಿಎಂಪಿಯ ಕಸ ವಿಲೇವಾರಿ ವಾಹನಗಳ ಖರೀದಿಯಲ್ಲಿ ಅವ್ಯವಹಾರವಾಗಿದ್ದು, ಕೋಟ್ಯಾಂತರ ರೂಪಾಯಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಕಸವನ್ನೇ ಮೃಷ್ಠಾನ್ನ ಭೋಜನ ಮಾಡಿಕೊಂಡಿರುವ ವಂಚನೆಯ ಬಗ್ಗೆ ಬಿಜೆಪಿ ಘಟಕದ ವಕ್ತಾರ ಎನ್ ಆರ್ ರಮೇಶ್‍ರವರು ಈ ಬಗ್ಗೆ ಬೆಂಗಳೂರಿನ ಮೆಟ್ರೋಪಾಲಿಟನ್ ಟಾಸ್ಕ್‍ಫೋರ್ಸ್ ಮತ್ತು ಅಡಿಶನಲ್ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾರೆ!! 2016-2017ರ ಹಣಕಾಸು ವರ್ಷದಲ್ಲಿ ತ್ಯಾಜ್ಯ ವಿಲೇವಾರಿಗಾಗಿ ಬಿಬಿಎಂಪಿ 1,066ಕೋಟಿ ರೂಪಾಯಿ ಖರ್ಚು ಮಾಡಿತ್ತು. ಅಷ್ಟೇ ಅಲ್ಲದೇ 2015-16ರ ಹಣಕಾಸು ವರ್ಷದಲ್ಲಿ 385ಕೋಟಿ ರೂಪಾಯಿಗಳ ವೆಚ್ಚ ಹಣ ವಿಲೇವಾರಿ ಮಾಡಿತ್ತು ಎಂದು ಹೇಳಿದ್ದಾರೆ. ಹಾಗಾಗಿ ಈ ಭಾರಿ ತ್ಯಾಜ್ಯ ವಿಲೇವಾರಿ ವೆಚ್ಚದಲ್ಲಿ 688 ಕೋಟಿ ರೂಪಾಯಿ ಏರಿಕೆಯಾಗಿದ್ದು, ಇದು ಸುಮಾರು 265%ದಷ್ಟು ಹೆಚ್ಚಳವಾಗಿದೆ ಎಂದು ರಮೇಶ್ ಹೇಳಿದ್ದಾರೆ.

ಈ ಹಿಂದೆ, ಕಸ ವಿಲೇವಾರಿ ಹಾಗೂ ಸಂಸ್ಕರಣಾ ಘಟಕಗಳಲ್ಲಿ ನಡೆಯುತ್ತಿರುವ ಕೋಟ್ಯಂತರ ರೂ.ಗಳ ಅವ್ಯವಹಾರದ ಹೇಳಿಕೆಗೆ ಈಗಲೂ ನಾನು ಬದ್ಧನಾಗಿದ್ದು , ಈ ಕುರಿತಂತೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರು ನಗರಾಭಿವೃದ್ಧಿ ಸಚಿವ ಜಾರ್ಜ್ ಅವರಿಗೆ ಸವಾಲು ಹಾಕಿದ್ದಾರೆ.ಇತ್ತೀಚೆಗೆ ಪೌರಕಾರ್ಮಿಕರ ವೇತನ ಬಿಡುಗಡೆಯಲ್ಲಿ ಆಗುತ್ತಿರುವ ಕೋಟ್ಯಂತರ ರೂಪಾಯಿ ಅವ್ಯವಹಾರ ಹಾಗೂ 440 ಕೋಟಿ ರೂಪಾಯಿ ಅನುದಾನ ಬಂದಿದ್ದರೂ ಕಸ ಸಂಸ್ಕರಣ ಘಟಕಗಳನ್ನು ಅಭಿವೃದ್ದಿಪಡಿಸದಿರುವ ಕುರಿತಂತೆ ನಾನು ಬಿಡುಗಡೆ ಮಾಡಿದ ದಾಖಲೆಗಳ ಬಗ್ಗೆ ಜಾರ್ಜ್ ಅವರು ಅಪಹಾಸ್ಯ ಮಾಡಿದ್ದಾರೆ. ಹೀಗಾಗಿ ನಾನು ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದೇನೆ ಎಂದು ಎನ್.ಆರ್.ರಮೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದರು!!

ಪಾಲಿಕೆಯಲ್ಲಿ ಖಾಯಂ ಪೌರಕಾರ್ಮಿಕರನ್ನು ಹೊರುತಪಡಿಸಿ 27,716 ಮಂದಿ ಗುತ್ತಿಗೆ ಪೌರಕಾರ್ಮಿಕರಿದ್ದಾರೆ ಎಂದು ತಪ್ಪು ಮಾಹಿತಿ ನೀಡಿ ಗುತ್ತಿಗೆದಾರರು ಬಿಬಿಎಂಪಿಗೆ ವಂಚಿಸುತ್ತಿದ್ದಾರೆ. ಇದರ ಬಗ್ಗೆ ನನ್ನಲ್ಲಿ ಅಗತ್ಯ ದಾಖಲೆ ಇದೆ. ನೀವು ನಗರಾಭಿವೃದ್ದಿ ಸಚಿವರಾಗಿ ಇಂತಹ ವಂಚನೆಯನ್ನು ತಪ್ಪಿಸಬೇಕು ಎಂದು ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆ 300ರಿಂದ 400 ಕೋಟಿ ಹಣವನ್ನು ಉಳಿಸಬಹುದಾಗಿತ್ತು. ಅದೇ ರೀತಿ ಏಳು ವೈಜ್ಞಾನಿಕವಾಗಿ ಕಸ ಸಂಸ್ಕರಣ ಘಟಕಗಳನ್ನು ಸ್ಥಾಪಿಸುವ ಹೆಸರಿನಲ್ಲಿ 410 ಕೋಟಿ ರೂ. ಖರ್ಚು ಮಾಡಲಾಗಿದೆ ಎಂಬ ಅಧಿಕಾರಿಗಳ ಹೇಳಿಕೆ ತಪ್ಪು ಮಾಹಿತಿಯಿಂದ ಕೂಡಿದೆ.

ಕಸ ಮಾಫಿಯಾದಲ್ಲಿ ತೊಡಗಿ ಕೊಂಡಿರುವವರ ಹೆಸರುಗಳನ್ನು ಬಹಿರಂಗ ಪಡಿಸಿದ್ದೇ ಅಲ್ಲದೆ, ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 48 ಗುತ್ತಿಗೆದಾರರು,
ವಂಚನೆಗೆ ಸಹಕರಿಸಿದ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಹಿಂದಿನ ಆಯುಕ್ತ ಕುಮಾರ್ನಾಯಕ್, ವಿಶೇಷ ಆಯುಕ್ತರಾದ ದರ್ಪಣ್‍ಜೈನ್, ಸುಬೋದ್‍ಯಾದವ್ ಮತ್ತಿತರ ಅಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ದಾಖಲಿಸಲಾಗುವುದು ಹಾಗೂ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದರು!!

ವಂಚಕ ಗುತ್ತಿಗೆದಾರರು ಇಷ್ಟೆಲ್ಲಾ ಅಕ್ರಮ ಮಾಡುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಕಣ್ಮುಚ್ಚಿಕೊಂಡು ಹಣ ಬಿಡುಗಡೆ ಮಾಡುತ್ತಿರುವುದನ್ನು ನೋಡಿದರೆ ಅವರೂ
ಅಕ್ರಮದಲ್ಲಿ ಭಾಗಿ ಯಾಗಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಇಲಾಖೆ ವತಿಯಿಂದ ನಿರ್ವ ಹಣೆ ಹೆಸರಿನಲ್ಲಿ ಈ ಹಿಂದೆ ಗುತ್ತಿಗೆದಾರರಿಗೆ ನೀಡಲಾಗುತ್ತಿದ್ದ ಹಣದ ನಾಲ್ಕು ಪಟ್ಟು ಹೆಚ್ಚು ಹಣವನ್ನು ಬಿಡುಗಡೆ ಮಾಡ ಲಾಗಿದೆ. 22,176 ಮಂದಿಗೆ ಪಿಎಫ್ ಮತ್ತು ಇಎಸ್‍ಐ ಪಾವತಿ ಸುತ್ತಿಲ್ಲ ಎನ್ನುವುದನ್ನು ಸಫಾಯಿ ಕರ್ಮಚಾರಿಗಳ ಆಯೋಗದ ತನಿಖೆಯಲ್ಲಿ ಪತ್ತೆಯಾಗಿದೆ. ಪೌರಕಾರ್ಮಿಕರ ಶೇ.90ರಷ್ಟು ಪಿಎಫ್ ಮತ್ತು ಇಎಸ್‍ಐನ ನೂರಾರು ಕೋಟಿ ಹಣವನ್ನು ವಂಚನೆ ಮಾಡಲಾಗಿದೆ. ಈ ಅವ್ಯವಹಾರದ ವಿರುದ್ಧ ಈಗಾಗಲೇ ಆಯುಕ್ತರು ಸಿಐಡಿ ತನಿಖೆಗೂ ಆದೇಶಿಸಿದ್ದಾರೆ. 22,176 ಪೌರ ಕಾರ್ಮಿಕರಿಗೆ ಪ್ರತಿ ತಿಂಗಳು 5 ಕೋಟಿ 77 ಲಕ್ಷ ಇಎಸ್‍ಐ, ಪಿಎಫ್ ಹಣ ತುಂಬಿಲ್ಲ. ಆದರೆ ಈ ಬಾರಿ ತ್ಯಾಜ್ಯ ವಿಲೇವಾರಿ ವೆಚ್ಚದಲ್ಲಿ 688 ಕೋಟಿ ರೂಪಾಯಿ ಏರಿಕೆಯಾಗಿದ್ದು ಮಾತ್ರ ವಿಪರ್ಯಾಸದ ಸಂಗತಿ!!

ಕಸ ವಿಲೇವಾರಿಯಲ್ಲಿಯೂ ಅಕ್ರಮವಾಗಿ ಕೋಟ್ಯಾಂತರ ರೂಪಾಯಿ ವಂಚಿಸಿರುವ ಇವರು ಇನ್ನೂ ಯಾವ ರೀತಿಯಲ್ಲಿ ರಾಜ್ಯದ ಜನರನ್ನು ವಂಚಿಸಿರಬೇಕು ನೀವೇ ಹೇಳಿ!! ಹಣ ಮಾಡುವುದನ್ನೇ ಕಸುಬು ಮಾಡಿಕೊಂಡಿದ್ದಾರೋ ಗೊತ್ತಿಲ್ಲ, ಆದರೆ ರಾಜ್ಯದ ಬೊಕ್ಕಸವನ್ನು ತುಂಬಿಸುವ ಬದಲು ತಮ್ಮ ಕುಟುಂಬದ ಬೊಕ್ಕಸವನ್ನು ತುಂಬಿಸುವಲ್ಲಿ ನಿರತರಾಗಿದ್ದು ಮಾತ್ರ ನಿಜ!!

ಮೂಲ:Garbage Scam – Karnataka

– ಅಲೋಖ

Tags

Related Articles

Close