ಅಂಕಣಪ್ರಚಲಿತ

ಸ್ವಾಮಿ ವಿವೇಕಾನಂದರು ಅಮೇರಿಕಾದಲ್ಲಿ ಅಬ್ಬರಿಸಲು ಕಾರಣರಾದ ಈ ಕನ್ನಡಿಗ ಯಾರು ಗೊತ್ತಾ?!

ಪ್ರಪಂಚದ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದ ದಿನ 1893 ನೇ ಸೆಪ್ಟೆಂಬರ್ 11. ಇವರ ಒಂದೇ ವಾಕ್ಯವು ಇಡೀ ಸಭೆಯನ್ನು ತಲ್ಲಣಗೊಳಿಸಿತ್ತು.!! ಚಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ, “ಅಮೇರಿಕಾದ ನನ್ನ ಪ್ರೀತಿಯ ಸಹೋದರ, ಸೋದರಿಯರೇ” ಎಂಬ ಐದು ಪದಗಳ ಕಂಚಿನ ಕಂಠದ ವಾಕ್ಯವು ಪಾಶ್ಚಾತ್ಯರನ್ನು ತನ್ನ ಕಾಲ ಬುಡಕ್ಕೆ ಬೀಳುವಂತೆ ಮಾಡಿತ್ತು. ಅಲ್ಲಿ ಆರಂಭವಾದ ಇವರ ಭಾಷಣ ಇಡೀ ಪಾಶ್ಚಾತ್ಯರನ್ನು ತಲ್ಲಣಗೊಳಿಸಿತ್ತು. ಹೀಗೆ ಹಿಂದೂ ಧರ್ಮವನ್ನು ಕಡೆಗಣಿಸುತ್ತಿದ್ದ ಪಾಶ್ಚಾತ್ಯರಿಗೆ ಸನಾತನ ಧರ್ಮದ ಮಹತ್ವವನ್ನು ಕೇವಲ ಒಬ್ಬ ವ್ಯಕ್ತಿ ವಿಶ್ವದಾದ್ಯಂತ ಸಾರಿದ್ದರು. ಅವರೇ ತಮ್ಮ ಧರ್ಮಸೇವೆಯೊಂದಿಗೆ ದೇಶ ಸೇವೆಯನ್ನು ಮಾಡಲು ಟೊಂಕಕಟ್ಟಿನಿಂತ ಮಹಾ ಸನ್ಯಾಸಿ ಸ್ವಾಮಿ ವಿವೇಕಾನಂದರು.. ಸತ್ಯ, ಸ್ವಾಮಿ ವಿವೇಕಾನಂದರ ಚಿಕಾಗೋ ಸಮ್ಮೇಳನದ ಯಶೋಗಾಥೆ ದೇಶವಾಸಿಗಳಿಗೆ ಗೊತ್ತಿಲ್ಲದೇನಿಲ್ಲ. ಆದರೆ ಅವರ ಈ ಸಾಧನೆಯ ಹಿಂದೆ ಒಬ್ಬ ಮಹಾಪುರುಷ ಇದ್ದಾನೆ ಎಂದರೆ ನಂಬಲೇ ಬೇಕು..

ಸೆಪ್ಟೆಂಬರ್ 11, 1893ರಂದು ಚಿಕಾಗೋದಲ್ಲಿ ನಡೆದ ವಿಶ್ವ ಸರ್ವ ಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಭಾರತದ ಕೀತಿಯನ್ನು ಎತ್ತಿ ಹಿಡಿದ ಮಹಾನ್ ಪುರುಷ ಸ್ವಾಮಿ ವಿವೇಕಾನಂದರು.. ಅದು ಸ್ವತಂತ್ರಪೂರ್ವ ಕಾಲ. ಭಾರತೀಯತೆ, ಭಾರತೀಯ ಸಂಸ್ಕøತಿ, ಭಾರತೀಯ ಪರಂಪರೆ ಮತ್ತು ಹಿಂದೂ ಧರ್ಮವನ್ನು ನಿಂದಿಸುತ್ತಿದ್ದ ಕಾಲವದು. ಅಂತಹ ಸಂದರ್ಭದಲ್ಲಿ ವಿದೇಶಕ್ಕೆ ಪ್ರಯಣ ಬೆಳೆಸಿ ಭಾರತೀಯತೆಯನ್ನು ಹಿಂದೂ ಧರ್ಮದ ಸಾರವನ್ನು ವಿದೇಶಿಯರಿಗೆ ಭೋಧಿಸಿ ಭಾರತೀಯರ ಸದ್ಗುಣಗಳನ್ನು ಜಾಗತಿಕ ಮಟ್ಟದಲ್ಲಿ ಮಿಂಚಿಸಿದ್ದು ಸ್ವಾಮಿ ವಿವೇಕಾನಂದರು. ವಿಶ್ವ ಧರ್ಮ ಸಮ್ಮೇಳನದಲ್ಲಿ ವಿಶ್ವಕ್ಕೆ ಭಾರತದ ಜ್ಞಾನ ಸಂಪತ್ತನ್ನು ಪರಿಚಯಿಸಿದ ಕೀರ್ತಿ ವಿವೇಕಾನಂದರದ್ದು. ಇವರು ಚಿಕಾಗೊಕ್ಕೆ ಹೋಗಿ ಅಲ್ಲಿ ಇಡೀ ಪಾಶ್ಚಿಮಾತ್ಯರನ್ನು ನಡುಗಿಸಿಲು ಕಾರಣರಾದವರು ಮೈಸೂರಿನ ಚಾಮರಾಜೇಂದ್ರ ಒಡೆಯರ್!!

ಹೌದು!! ವಿಶ್ವ ವಿಖ್ಯಾತ ವಿಶ್ವ ಸರ್ವ ಧರ್ಮ ಸಮಾವೇಶಕ್ಕೆ ಸ್ವಾಮಿ ವಿವೇಕಾನಂದರ ಸಂಪೂರ್ಣ ಪ್ರಯಾಣ ಪ್ರಾಯೋಜಿಸಿದರು ನಮ್ಮ ಮೈಸೂರಿನ 10 ನೇ ಚಾಮರಾಜೇಂದ್ರ ಒಡೆಯರ್‍ರವರು.!!! ವಿಶ್ವ ಧರ್ಮ ಸಮ್ಮೇಳನದ ಖರ್ಚನ್ನು ಭರಿಸಿದವರು ಚಾಮರಾಜೇಂದ್ರ ಒಡೆಯರ್‍ರವರೇ..!! ಸ್ವಾತಂತ್ರ್ಯ ಪೂರ್ವದಲ್ಲಿ ಅದೆಷ್ಟೋ ರಾಜರುಗಳು ತಮ್ಮ ಆಳ್ವಿಕೆಯನ್ನು ನಡೆಸಿ ಅಪಾರವಾದ ಸಂಪತ್ತನ್ನು ಗಳಿಸಿದ್ದರು…ಅವರು ಕೇವಲ ಆಳ್ವಿಕೆ ಮಾಡಿರುವಂತಹದ್ದು ಕೇವಲ ಅಧಿಕಾರದ ಆಸೆ  ಮತ್ತು ಸಂಪತ್ತು ಗಳಿಕೆಗಾಗಿ!!..

ಆದರೆ ಮೈಸೂರು ರಾಜ್ಯದಲ್ಲಿ  ಆಳ್ವಿಕೆ ಮಾಡಿದ ಪ್ರತೀಯೊಬ್ಬ ರಾಜನೂ  ಅತ್ಯುತ್ತಮವಾಗಿ ಆಡಳಿತವನ್ನು ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ!!..ಚಾಮರಾಜೇಂದ್ರ ಒಡೆಯರ್ ಮೈಸೂರು ಸಾಮ್ರಾಜ್ಯವನ್ನು ಆಳಿದ ಶ್ರೇಷ್ಠ ರಾಜರ ಪೈಕಿ ಒಬ್ಬರಾಗಿದ್ದರು. ಮೈಸೂರು ಸಂಸ್ಥಾನದ ಬೆಟ್ಟದ ಕೋಟೆ ಶಾಖೆಯ ಚಿಕ್ಕ ಕೃಷ್ಣರಾಜ ಅರಸ್‍ರವರ ಮೂರನೇ ಮಗನಾಗಿ ಫೆಭ್ರವರಿ 22, 1863ರಂದು ಜನಿದರು. ಅವರ ತಾಯಿ ರಾಜಕುಮಾರಿ ಶ್ರೀ ಪುಟ್ಟ ಅಮ್ಮಣಿ ಅವರು ಮುಮ್ಮುಡಿ ಕೃಷ್ಣರಾಜ ಒಡೆಯರ್‍ರ ಹಿರಿಯ ಮಗಳು, ಅವರ ತಂದೆ ಜಯಚಾಮರಾಜೇಂದ್ರ ಹುಟ್ಟಿದ ಒಂದು ವಾರದ ಮುಂಚೆ ಮರಣವನ್ನಪ್ಪುತ್ತಾರೆ. ತಮಗೆ ಗಂಡು ಸಂತಾನವಿಲ್ಲದ ಕಾರಣ ತಮ್ಮ ಉತ್ತರಾಧಿಕಾರಿ ಪಟ್ಟಕ್ಕಾಗಿ ತಮ್ಮ ಮೊಮ್ಮಗ ಜಯಚಾಮರಾಜೇಂದ್ರರನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್‍ರವರು ಜೂನ್ 18 1868 ರಂದು ದತ್ತು ಸ್ವೀಕಾರ ಮಾಡುತ್ತಾರೆ.

1868ರಲ್ಲಿ ಚಾಮರಾಜೇಂದ್ರ ಒಡೆಯರ್ ಸಿಂಹಾಸವನ್ನು ಏರುತ್ತಾರೆ. 1831ರಿಂದ ಮೈಸೂರು ಬ್ರಿಟಿಷರ ನೇರ ಆಳ್ವಿಕೆಗೆ ಒಳಪಟ್ಟಿದ್ದು, 1881ರಲ್ಲಿ ರಲ್ಲಿ ಬ್ರಿಟಿಷರು ಮೈಸೂರು ಆಳ್ವಿಕೆಯನ್ನು ಚಾಮರಾಜೇಂದ್ರ ಒಡೆಯರ್ ಕೈಗೆ ಒಪ್ಪಿಸುತ್ತಾರೆ. ತದನಂತರ ಚಾಮರಾಜೇಂದ್ರರು ಉನ್ನತ ಆಡಳಿತವನ್ನು ಮಾಡುತ್ತಾರೆ. ಸ್ವತಂತ್ರ ಪೂರ್ವ ಭಾರತದಲ್ಲಿ ಮೊದಲ ಪ್ರಜಾಪ್ರಭುತ್ವದ ಶಾಸನವಾದ ಮೈಸೂರಿನಲ್ಲಿ ವಿಧಾನ ಸಭೆ ರಚಿಸುವುದು ಸಂಪೂರ್ಣ ರಾಜನಾಗಿದ್ದ ಅವರ ಮೊದಲ ಕಾರ್ಯವಾಗಿತ್ತು. ಮೊದಲ ದಿಟ್ಟ ಹೆಜ್ಜೆಯನ್ನು ನೀಡುವ ಮೂಲಕ 1883ರಲ್ಲಿ ಸರ್.ಕೆ ಶೇಷಾದ್ರಿ ಅಯ್ಯರ್ ಅವರನ್ನು ಮೈಸೂರಿನ ದಿವಾನ ಆಗಿ ನೇಮಿಸಲಾಯಿತು. ಶೇಷಾದ್ರಿ ಅಯ್ಯರ್ ಅವರು ನಮ್ಮ ನಾಡು ಕಂಡ ಅಭಿವೃದ್ಧಿಯ ಪ್ರಮುಖ ಹರಿಕಾರರಲ್ಲೊಬ್ಬರು. ಸುಮಾರು ಹದಿನೆಂಟು ವರ್ಷಗಳ ಕಾಲ ಮೈಸೂರು ಸಂಸ್ಥಾನದ ದಿವಾನರಾಗಿ ದಕ್ಷತೆಯಿಂದ ರಾಜ್ಯಾಡಳಿತ ನಡೆಸಿದವರು ಶೇಷಾದ್ರಿ ಅಯ್ಯರ್. ಅಷ್ಟು ಮಾತ್ರವಲ್ಲ, ಉತ್ತಮ ಮಟ್ಟದ ರಾಜ್ಯ ವ್ಯವಹಾರ ನಿಪುಣ ಎಂಬ ಕೀರ್ತಿಯೂ ಅವರದ್ದು.

ಶೇಷಾದ್ರಿ ಅಯ್ಯರ್ ಮತ್ತು ಚಾಮರಾಜೇಂದ್ರ ಒಡೆಯರ್ ಇವರು ಇಬ್ಬರ ಸಂಯೋಜನೆಯು ನಿಜವಾಗಿಯೂ ಅದ್ಭುತವಾದದ್ದು.

ಮಹಾರಾಜ ಕಾಲೇಜು

1889ರಲ್ಲಿ ಆರಂಭಿಸಿದ್ದು, ಉನ್ನತ ಶಿಕ್ಷಣಕ್ಕಾಗಿ ನಿರ್ಮಿಸಲ್ಪಟ್ಟ ಮೊದಲ ಕಾಲೇಜು. ಮೈಸೂರಿನಲ್ಲಿ ಬಹಳ ಹಿರಿಯ ಕಾಲೇಜು ಎಂಬ ಹೆಗ್ಗಳೆಕೆಗೆ ಕಾರಣವಾಯಿತು.

ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ 1891 ರಲ್ಲಿ ಗ್ರಂಥಾಲಯವಾಗಿ ಪ್ರಾರಂಭಸಲಾಗಿದ್ದು ಅದರಲ್ಲಿ ಸಂಸ್ಕøತ, ಕನ್ನಡ ,ತುಳು, ಮಳಯಾಳಂ ಮತ್ತು ಇತರ ಭಾಷೆಗಳಲ್ಲಿ  ಪ್ರಾಚೀನ ಹಸ್ತ ಪ್ರತಿಗಳನ್ನು ಈ ಇನ್ಸ್ಟಿಟ್ಯೂಟ್ ವ್ಯವಹರಿಸುತ್ತಿತ್ತು. ಇದು ಕೌಟಿಲ್ಯರ ಅರ್ಥಶಾಸ್ತ್ರವನ್ನು ಒಳಗೊಂಡಂತೆ ವ್ಯಾಪಕವಾದ ಹಸ್ತಪ್ರತಿಗಳನ್ನು ಹೊಂದಿದೆ. ಇಂದು ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ 30,000ಕ್ಕೂ ಹೆಚ್ಚಿನ ಹಸ್ತಪ್ರತಿಗಳನ್ನು ಹೊಂದಿದೆ.

ಶತಮಾನದಷ್ಟು ಹಳೆಯದಾದ ಮೈಸೂರು ಝೂ ಎಂದೇ ಪ್ರಸಿದ್ಧಿ ಹೊಂದಿದ್ದು ಭಾರತದಲ್ಲಿನ ಮೃಗಾಲಯಗಳಲ್ಲಿ ಪ್ರಧಮ ಸ್ಥಾನ ಗಳಿಸಿದೆ. ಜೊತೆಗೆ ಏಷ್ಯಾದಲ್ಲಿನ ಅತ್ಯುತ್ತಮಪ್ರಾಣಿ ಸಂಗ್ರಹಾಲಯದ ಪಟ್ಟಿಯಲ್ಲಿ 25 ಝೂ ಗಳನ್ನು ಹಿಂದಿಕ್ಕಿ ತೃತೀಯ ಸ್ಥಾನದ ಹೆಗ್ಗಳಿಕೆ ತನ್ನದಾಗಿಸಿಕೊಂಡಿದೆ.

1892ರಲ್ಲಿ ಚಾಮರಾಜ ಪೇಟೆ ನಿರ್ಮಾಣ

ಸಾಂಪ್ರದಾಯಿಕ ಲಾಲ್‍ಬಾಗ್ ಗ್ಲಾಸ್‍ಹೌಸ್ ಅನ್ನು 1889ರಲ್ಲಿ ಬೊಟಾನಿಕಲ್ ಗಾರ್ಡನ್ನಲ್ಲಿ ನಿರ್ಮಿಸಲಾಯಿತು. ಇದೆಲ್ಲಾ ಜಯಚಾಮರಾಜೇಂದ್ರ ಒಡೆಯರ್ ಮತ್ತು ದಿವಾನ್ ಶೇಷಾದ್ರಿ ಅಯ್ಯರ್ ಇಬ್ಬರೂ ಸೇರಿ ಅಭೂತ ಪೂರ್ವ ಸಾಧನೆಯನ್ನು ಮಾಡಿದ್ದಾರೆ.

ಮಹಾರಾಜ ಕಲೆ ಮತ್ತು ಸಂಗೀತದ ಉತ್ತಮ ಪೋಷಕರಾಗಿದ್ದರು. ಅವರು ಸ್ವತ: ಕರ್ನಾಟಿಕ್ ಸಂಗೀತದ ಪ್ರತಿಪಾದಕರಾಗಿದ್ದರು. ಮಹಾರಾಜನು 1894ರಲ್ಲಿ ಅಕಾಲಿಕ ಮರಣವನ್ನು ಹೊಂದುತ್ತಾರೆ. ಅವರು ನಿಧನರಾದಾಗ ಅವರಿಗೆ 31 ವರ್ಷ ವಯಸ್ಸಾಗಿತ್ತು. ಅವರ ಪುತ್ರ 4ನೇಕೃಷ್ಣರಾಜ ಒಡೆಯರ್ ಉತ್ತರಾಧಿಕಾರಿಯಾಗಿ ತಮ್ಮ ತಂದೆಯ ಹೆಜ್ಜೆಗಳನ್ನು ಅನುಸರಿಸುತ್ತಾ ರಾಜ್ಯಕ್ಕೆ ಇನ್ನಷ್ಟು ವೈಭವವನ್ನು ತರುತ್ತಾರೆ.!! ಶೇಷಾದ್ರಿ ಅಯ್ಯರ್‍ರವರು ತಮ್ಮ ಅತ್ಯುತ್ತಮ ಕೆಲಸವನ್ನು ಮುಂದುವರಿಸಿದರು ಮತ್ತು 1902ರಲ್ಲಿ ಕೋಲಾರ ಚಿನ್ನದ ಗಣಿಗಳ ಸ್ಥಾಪನೆ  ಮತ್ತು ನಂತರದಲ್ಲಿ ಶಿವನಸಮುದ್ರದಲ್ಲಿನ ಜಲ ಕೇಂದ್ರವನ್ನು ಸ್ಥಾಪಿಸುವ ಹೊಣೆಗಾರಿಕೆಯನ್ನು ಹೊತ್ತು ಅಭೂತ ಪೂರ್ವ ಸಾಧನೆಯನ್ನು ಮಾಡುವಲ್ಲಿ ತೊಡಗುತ್ತಾರೆ. ಈ ಕಾರಣದಿಂದಾಗಿ ಬೆಂಗಳೂರು ಏಷ್ಯಾದ ಆರಂಭಿಕ ನಗರಗಳಲ್ಲಿ ಒಂದಾಗಿ ವಿದ್ಯುತ್ ಪೂರೈಕೆ ಮಾಡಲಾಯಿತು. ಇವರು ಬೆಂಗಳೂರನ್ನು  ಆಧುನಿಕ ಬೆಂಗಳೂರನ್ನಾಗಿ ಮಾಡಿದ ಹೆಗ್ಗಳಿಕೆಗೂ ಪಾತ್ರರಾಗುತ್ತಾರೆ.

ಆಧುನಿಕ ಕರ್ನಾಟಕವನ್ನು ಅಡಿಪಾಯ ಹಾಕಿದ  ಒಡೆಯರ್‍ಗೆ ನಾವು ಯಾವಾಗಲೂ ಗೌರವಯುತ ಭಾವನೆಯಿಂದ ಕಾಣ ಬೇಕು. ಚಾಮರಾಜೇಂದ್ರ ಒಡೆಯರ್, ನಾಲ್ವಡಿ ಕೃಷ್ಣ ರಾಜೇಂದ್ರ ಒಡೆಯರ್, ದಿವಾನ್ ಶೇಷಾದ್ರಿ ಅಯ್ಯರ್ ಮಾಡಿರುವ ಸಾಧನೆ ಒಂದಾ ಎರಡಾ? ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತ್ರ  ಆಧುನಿಕ ಮೈಸೂರಿನ ರೂವಾರಿ ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ಏಕವಚದಲ್ಲಿ ಮಾತನಾಡಿರುವುದು ಎಷ್ಟು ಸರಿ!!.. ಪಾಪ ಈ ಕಾಂಗ್ರೆಸ್ ಜನಕ್ಕೆ ಯಾರಿಗೆ ಗೌರವ ಕೊಡಬೇಕು ಯಾರಿಗೆ ಗೌರವ ಕೊಡಬಾರದು  ಎನ್ನುವ ಸಾಮಾನ್ಯ ಜ್ಞಾನ ಕೂಡಾ ಇಲ್ಲ.!!..ಅವರ ಜೀವನವನ್ನೇ ದೇಶದ ಒಳಿತಿಗಾಗಿ ಮುಡಿಪಿಟ್ಟವರಿಗೇ ಗೌರವ ಕೊಡದವರು ಇನ್ನು ಸಾಮಾನ್ಯ ಜನರನ್ನು ಯಾವ ರೀತಿಯಾಗಿ ಬಳಸಿಕೊಳ್ಳಬಹುದು…? “ವಿನಾಶಕಾರಿ ವಿಪರೀತ ಬುದ್ಧಿ” ಎನ್ನುವ ಮಾತು ಇವರಿಗೆ ಸರಿಯಾಗಿ ಹೊಂದಾಣಿಕೆಯಾಗುತ್ತದೆ.

-ಪವಿತ್ರ

Tags

Related Articles

Close