ಪ್ರಚಲಿತ

ಹಿರಿಯ ಕಾಂಗ್ರೆಸ್ ನಾಯಕರಿಗೆ ಗಂಟು ಮೂಟೆ ಕಟ್ಟಲು ಹೇಳಿದ ರಾಹುಲ್ ಗಾಂಧಿ… ಇಷ್ಟು ವರ್ಷ ಪಕ್ಷ ಹಾಗೂ ವಂಶವನ್ನು ಬೆಳಗಿಸಿದ ಹಿರಿಯ ನಾಯಕರು ಬೇಡವಾದರೇ..?!

ಅದೇನೋ ಗೊತ್ತಿಲ್ಲ. ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ ದೊರೆಯುವುದು ಸ್ವತಃ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಿಗೂ ಇಷ್ಟವಿರಲಿಲ್ಲ ಅಂತಾ ಕಾಣಿಸುತ್ತೆ. ಮೊನ್ನೆ ತಾನೇ ಬಹಿರಂಗವಾಗಿ ರಾಹುಲ್ ಗಾಂಧಿಗೆ ಅಧ್ಯಕ್ಷಗಿರಿ ದೊರೆಯುವುದನ್ನು ವಿರೋಧಿಸಿದ ಕಾಂಗ್ರೆಸ್ ನಾಯಕ ಹಾಗೂ ಗಾಂಧಿ ಪರಿವಾರದ ನಾಯಕನೇ ಆದಂತಹ ಶಹೇಜೆದ್ ಪೂನಾವಾಲ ಕೇವಲ ಯುವಕರಿಗೆ ಮಾತ್ರ ಅವಕಾಶವಿಲ್ಲ ಎಂಬುವುದನ್ನು ಸಾರಿದ್ದರು. ಆದರೆ ಈಗಿನ ಬೆಳವಣಿಗೆ ಅದೆಲ್ಲವನ್ನೂ ಉಲ್ಟಾ ಮಾಡಿದೆ.

ಕಾಂಗ್ರೆಸ್‍ನಲ್ಲಿದ್ದಾರೆ ಅತ್ಯಂತ ಹಿರಿಯ ನಾಯಕರು…

ಕಾಂಗ್ರೆಸ್ ಪಕ್ಷ ಎಂದರೆ ಸುಮ್ನೇನಾ. ಅದು 132 ವರ್ಷಗಳ ಇತಿಹಾಸವುಳ್ಳಂತಹ ಪಕ್ಷ. ನೆಹರೂ ಕಾಲದಿಂದ ಹಿಡಿದು ಇಂದಿನವರೆಗೂ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದವರು ಕಾಂಗ್ರೆಸ್ ಪಕ್ಷದ ಹಿರಿಯರು. ಇಂದಿಗೂ ಹಲವಾರು ಹಿರಿಯರು ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿದ್ದಾರೆ. ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಕಾಲದ ನಾಯಕರು ಈಗಲೂ ಇದ್ದಾರೆ, ಈಗಲೂ ಪಕ್ಷವನ್ನು ಕಟ್ಟುತ್ತಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ, ದಿಗ್ವಿಜಯ ಸಿಂಗ್, ಪ್ರಣಬ್ ಮುಖರ್ಜಿ ಸಹಿತ ಅನೇಕ ಕಾಂಗ್ರೆಸ್‍ನ ಹಿರಿಯ ನಾಯಕರೆಲ್ಲರೂ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿಯ ಸರ್ಕಾರದಲ್ಲಿ ನಿಖಟ ಸಂಪರ್ಕ ಹೊದಿದ್ದವರು. ಮಾತ್ರವಲ್ಲದೆ ಹಲವಾರು ಹಿರಿಯರು ಆ ಕಾಲದಲ್ಲಿ ಸಚಿವರೂ ಆಗಿದ್ದವರು. ಸೋನಿಯಾ ಗಾಂಧಿಗೂ ಆಪ್ತರಾಗಿದ್ದು ಅವರ ರಾಜಿಕೀಯ ಏಳಿಗೆಗೆ ಹಗಲಿರುಳು ದುಡಿದವರು.

ರಾಜೀವ್ ಗಾಂಧಿ ಹತ್ಯೆ ನಂತರ ಗಾಂಧಿ ಪರಿವಾರದಲ್ಲಿ ಕಾಣಿಸಿಕೊಂಡಿದ್ದು ಸೋನಿಯಾ ಗಾಂಧಿ. ಆದರೆ ಇಟಲಿಯ ಮಗಳಾಗಿರುವ ಸೋನಿಯಾ ಗಾಂಧಿಗೆ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಗಂಧ ಗಾಳಿನೂ ಗೊತ್ತಿರಲಿಲ್ಲ. ಆದರೂ ತಾನು ಅಧಿಕಾರ ಹಿಡಿಯಬೇಕೆಂಬ ಬಯಕೆ ಅತಿಯಾಗಿಯೇ ಇತ್ತು. ಈ ಸಮಯದಲ್ಲಿ ಅವರಿಗೆ ನೆರವಾಗಿದ್ದು ಇದೇ ಕಾಂಗ್ರೆಸ್‍ನ ಹಿರಿಯ ಮುಖಂಡರು.

ಆದರೆ ಸೋನಿಯಾ ಗಾಂಧಿಯ ಪ್ರಧಾನಿ ಆಗುವ ಕನಸು ಈಡೇರಲೇ ಇಲ್ಲ. ಪ್ರಧಾನಿ ಪಟ್ಟಕ್ಕೆ ಸನ್ನದ್ದರಾಗಿ ನಿಂತಿರುವಾಗಲೇ ಬಿಜೆಪಿ ನಾಯಕ ಸುಬ್ರಹ್ಮಣ್ಯ ಸ್ವಾಮಿ ಬಹುದೊಡ್ಡ ಆಘಾತವೊಂದನ್ನು ನೀಡಿದ್ದರು. ಸೋನಿಯಾ ಗಾಂಧಿ ಇಟಲಿ ಪ್ರಜೆ. ಹೀಗಾಗಿ ಅವರಿಗೆ ಇಲ್ಲಿ ಪ್ರಧಾನಿ ಆಗುವ ಅರ್ಹತೆ ಇಲ್ಲ ಎಂದು ವಾದಿಸಿದ್ದರು. ಇದು ಸಾಭೀತು ಕೂಡಾ ಆಗಿತ್ತು. ಹೀಗಾಗಿ ಪ್ರಧಾನಿ ಆಗುವ ತನ್ನ ಕನಸಿಗೆ ಅದಾಗಲೇ ಮುದುಡಿ ಹೋಗಿತ್ತು.

ಹಿರಿಯರೇ ಗಂಟು ಮೂಟೆ ಕಟ್ಟಿ-ರಾಹುಲ್ ಗಾಂಧಿ…

ಹೀಗೆ ಅನೇಕ ಕಾಲದಿಂದಲೂ ತನ್ನ ಪಕ್ಷಕ್ಕಾಗಿ ತನ್ನ ಪರಿವಾರಕ್ಕಾಗಿ ದುಡಿದ ಕಾಂಗ್ರೆಸ್ ಪಕ್ಷದ ಹಿರಿಯರಿಗೆ ಅತಿದೊಡ್ಡ ಆಘಾತವೊಂದನ್ನು ರಾಹುಲ್ ಗಾಂಧಿ ನೀಡಿದ್ದಾರೆ. ಅದೆಷ್ಟೋ ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದ ಹಿರಿಯ ಕಾಂಗ್ರೆಸ್ ನಾಯಕರಿಗೆ ಗಂಟು ಮೂಟೆ ಕಟ್ಟಿ ಮನೆಗೆ ಹೊರಡಲು ಸೂಚಿಸಿದ್ದಾರೆ. ನಿಮ್ಮ ಸೇವೆ ಪಕ್ಷಕ್ಕೆ ಸಾಕು. ಇನ್ನೇನಿದ್ದರೂ ನಮ್ಮದೇ ದರ್ಬಾರ್ ಎಂದು ಸಾರುತ್ತಿದ್ದಾರೆ.

ಯಾವಾಗ ತನಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ಒಲಿದು ಬಂತೋ ಅಂದಿನಿಂದ ರಾಹುಲ್ ಗಾಂಧಿ ಪಕ್ಷವನ್ನು ಸರ್ಜರಿ ಮಾಡಲು ಹೊರಟಿದ್ದಾರೆ. ಯುವಕರಿಗೆ ಅವಕಾಶ ಎಂಬ ನೆಪವೊಡ್ಡಿ ಹಿರಿಯರಿಗೆ ಕೋಕ್ ನೀಡಲಾಗುತ್ತಿದೆ. ಈ ಮೂಲಕ ತಾನು ಅಧ್ಯಕ್ಷನಾದ ನಂತರ ನಿಮ್ಮ ಆಟ ನಡೆಯಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸಾರಲು ಹೊರಟಿದ್ದಾರೆ.

ಯಾರ್ಯಾರಿಗೆ ನೀಡಲಾಗುತ್ತೆ ಗೇಟ್ ಪಾಸ್..?

ಅಂತೂ ಕಾಂಗ್ರೆಸ್‍ನ ಹಿರಿಯ ನಾಯಕರಿಗೆ ಕೋಕ್ ನೀಡಲು ರಾಹುಲ್ ಗಾಂಧಿ ಮುಂದಾಗಿದ್ದು ಹಿರಿಯ ಕಾಂಗ್ರೆಸ್ಸಿಗರಲ್ಲಿ ನಡುಕ ಹುಟ್ಟಿಸಿದೆ. ಎಲ್ಲಿ ತಮ್ಮ ವಿಕೆಟ್‍ನ್ನು ಪತನಗೊಳಿಸುತ್ತಾರೋ ಎಂದು ದೊರೆಗಳ ಮೊರೆಗೆ ಮುಂದಾಗಿದ್ದಾರೆ. ಈಗಾಗಲೇ ಹಲವಾರು ಮಂದಿಗೆ ಪಟ್ಟವನ್ನು ತ್ಯಜಿಸಿ ಎಂದು ರಾಹುಲ್ ಗಾಂಧಿಯಿಂದ ಸೂಚನೆ ನೀಡಲಾಗಿದೆಯಂತೆ.

ಕಾಂಗ್ರೆಸ್‍ನ ಖಜಾಂಚಿಯಾಗಿರುವ ಮೋತಿಲಾಲ್ ವೋರಾ ಅವರಿಗೆ, “ನಿಮ್ಮ ಸೇವೆ ಸಾಕು” ಎಂದು ಹೇಳುವ ಮೂಲಕ ಅವರನ್ನು ಕೆಳಗಿಳಿಸುವ ಸೂಚನೆ ನೀಡಿದ್ದಾರೆ. ಮೋತಿಲಾಲ್ ವೋರಾ ಅವರಿಗೆ ನೇರವಾಗಿಯೇ ಹೇಳಿರುವ ರಾಹುಲ್ ಗಾಂಧಿ, ವಯಸ್ಸಿನ ಆಧಾರದಲ್ಲಿ ಪಕ್ಷದ ಉನ್ನತ ಹುದ್ದೆಗಳನ್ನು ತ್ಯಜಿಸುವಂತೆ ಆದೇಶಿಸಿದ್ದಾರೆ.

ಇನ್ನು ತಾನು ಅತ್ಯಂತ ವಿಪರೀತವಾಗಿ ನಂಬಿಕೆ ಇರಿಸಿದಂತಹ ಕನಿಷ್ಕಾ ಸಿಂಗ್ ವೋರಾ ಅವರಿಂದ ಲೆಕ್ಕ ಪತ್ರಗಳ ವ್ಯವಹಾರಗಳನ್ನು ಕಲಿಯುತ್ತಿದ್ದಾರೆ. ತಾನು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮಾತ್ರಕ್ಕೆ ಎಲ್ಲವೂ ಸರಿಯಾಗುವುದಿಲ್ಲ. ಲೆಕ್ಕ ಪತ್ರವನ್ನೂ ತಾನೇ ನೋಡಿಕೊಳ್ಳಬೇಕೆಂಬ ನಿಯಮವನ್ನೂ ರಾಹುಲ್ ಗಾಂಧಿ ಜಾರಿಗೆ ತಂದಿದ್ದಾರೆ.

ಕಾಂಗ್ರೆಸ್‍ನ ಹಿರಿಯ ನಾಯಕರಾದ ಅಹಮದ್ ಪಟೇಲ್, ದಿಗ್ವಿಜಯ್ ಸಿಂಗ್, ಅಂಬಿಕಾ ಸೋನಿ ಹಾಗೂ ಜನಾರ್ಧನ್ ದ್ವಿವೇದಿಯಂತಹ ಹಿರಿಯ ನಾಯಕರನ್ನು ಕೆಳಗಿಳಿಸುವ ಚಿಂತನೆಯೂ ನಡೆದಿದ್ದು, ಮೊದಲನೇ ಹಂತವಾಗಿ ಈ ನಾಯಕರನ್ನು ಕೆಳಗಿಳಿಸಲು ಸಕಲ ಸಿದ್ಧತೆಗಳು ನಡೆದಿದೆ. ಇವರೆಲ್ಲಾ ವಿವಾದ ಹಾಗೂ ಪಕ್ಷಕ್ಕೆ ತೊಂದರೆ ಉಂಟುಮಾಡುವ ನಾಯಕರಾಗಿದ್ದು, ಇವರನ್ನು ಇಳಿಸಿದರೆ ಮಾತ್ರ ಕಾಂಗ್ರೆಸ್ ಪಕ್ಷದ ಇಮೇಜ್‍ನ್ನು ಬದಲಾಯಿಸಬಹುದು ಎಂಬ ನಿಲುವನ್ನು ಹೊಂದಿದ್ದಾರೆ.

ಇವರಿಗಿಲ್ಲ ಕೋಕ್…

ಹೀಗೆ ಹಲವಾರು ಹಿರಿಯ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ಗೇಟ್ ಪಾಸ್ ನೀಡಿದರೂ ಇನ್ನು ಕೆಲವು ಕಾಂಗ್ರೆಸ್ ನಾಯಕರನ್ನು ಹುದ್ದೆಯಲ್ಲಿ ಇಟ್ಟುಕೊಳ್ಳುವ ಚಿಂತನೆ ನಡೆಸಿದ್ದಾರಂತೆ. ಈಗ ಕಾಂಗ್ರೆಸ್ ಪಕ್ಷದಲ್ಲಿದ್ದು ಪ್ರಮುಖ ಹುದ್ದೆಗಳನ್ನು ಅಲಂಕರಿಸಿರುವ ಗುಲಾಂ ನಬಿ ಅಜಾದ್ ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ತುಂಬಾನೆ ವಿಶ್ವಾಸವಿದೆಯಂತೆ. ಹೀಗಾಗಿಯೇ ಅವರನ್ನು ಮತ್ತಷ್ಟು ಭದ್ರವಾಗಿ ಇಟ್ಟುಕೊಳ್ಳಲು ರಾಹುಲ್ ಗಾಂಧಿ ಯೋಚಿಸಿದ್ದಾರೆ.

ಈಗಾಗಲೇ ಹಲವಾರು ಕಾರಣಗಳಿಂದ ಹಿರಿಯರು ಪಕ್ಷದಲ್ಲಿ ಮೂಲೆಗುಂಪಾಗಿದ್ದಾರೆ. ಕರ್ನಾಟಕವನ್ನೇ ತೆಗೆದುಕೊಂಡರೆ ಕೇಂದ್ರದ ಮಾಜಿ ವಿತ್ತ ಸಚಿವ ಜನಾರ್ಧನ ಪೂಜಾರಿ, ಝಾಫರ್ ಶರೀಪ್ ಸಹಿತ ಅನೇಕ ಮುಖಂಡರು ಮೂಲೆಗುಂಪಾಗಿದ್ದರೆ, ಎಸ್.ಎಂ.ಕೃಷ್ಣ ಹಾಗೂ ಹೆಚ್.ವಿಶ್ವನಾಥ್ ಸಹಿತ ಅನೇಕ ಕಾಂಗ್ರೆಸ್ ನಾಯಕರು ಪಕ್ಷವನ್ನು ತ್ಯಜಿಸಿ ಬೇರೆ ಪಕ್ಷಗಳಿಗೆ ಸೇರ್ಪಡೆಗೊಂಡಿದ್ದಾರೆ.

ಕೇವಲ ಹಿರಿಯರೇ ತುಂಬಿರುವ ಕಾಂಗ್ರೆಸ್ ಪಕ್ಷದಲ್ಲಿ ಯುವಕರಿಗೆ ಅದೇಗೆ ಸ್ಥಾನಮಾನ ನೀಡುತ್ತಾರೋ ಗೊತ್ತಿಲ್ಲ. ಆದರೆ ಸರ್ಜರಿ ನೆಪದಲ್ಲಿ ತನಗೆ ಮಾರಕವಾಗಿದ್ದ ಹಿರಿಯರನ್ನು ಕಿತ್ತೆಗೆಯುವುದರ ಮೂಲಕ ಪಕ್ಷವನ್ನು ಮತ್ತಷ್ಟು ಇಕ್ಕಟ್ಟಿಗೆ ಕೊಂಡೊಯ್ಯಲು ರಾಹುಲ್ ಗಾಂಧಿ ಪ್ಲಾನ್ ಮಾಡಿಕೊಂಡಿದ್ದಾರೆ. ಹಲವಾರು ಹಿರಿಯ ಕಾಂಗ್ರೆಸ್ಸಿಗರಿಗೆ, ರಾಹುಲ್ ಗಾಂಧಿಗೆ ಎಐಸಿಸಿ ಅಧ್ಯಕ್ಷ ಸ್ಥಾನದ ಪಟ್ಟ ಕಟ್ಟುವುದು ಇಷ್ಟವಿರಲಿಲ್ಲ ಅನ್ನೋದೂ ಅಷ್ಟೇ ಸತ್ಯ…

soure:
http://dhunt.in/3e9jT?s=a&ss=pd via Dailyhunt

-ಸುನಿಲ್ ಪಣಪಿಲ

Tags

Related Articles

Close