ಅಂಕಣಇತಿಹಾಸದೇಶಪ್ರಚಲಿತ

ಹಿರೋಶಿಮಾ – ನಾಗಸಾಕಿಗಿಂತಲೂ ಭೀಕರ ದುರಂತ! ವಿದೇಶಿಯನೊಬ್ಬ ಭಾರತಕ್ಕೆ ಬಂದು 20,000 ಭಾರತೀಯರ ಮಾರಣಹೋಮ ನಡೆಸಲು ಸಹಾಯ ಮಾಡಿದ ಭಾರತೀಯ ಪ್ರಧಾನಿ ಯಾರು?!

ಅಂದು 1984ರ ಡಿಸೆಂಬರ್ 2ರ ರಾತ್ರಿ ನಡೆದ ದುರಂತದಲ್ಲಿ, ಸುಮಾರು 20,000 ಜನರ ಮರಣಾಂತಿಕ ಹೋಮ ನಡೆದಿತ್ತು. ಈ ದುರಂತಕ್ಕೆ ಸುಮಾರು 2
ಲಕ್ಷಕ್ಕಿಂತಲೂ ಹೆಚ್ಚು ಜನರು ಗಾಯಗೊಂಡಿದ್ದರು. ಹೌದು… ಇಂತಹ ಕ್ರೂರ ದುರಂತ ನಡೆದಿದ್ದು ಎಲ್ಲಿ ಅಂದರೆ ನಮ್ಮ ಭಾರತದಲ್ಲಿ, ಅದು ಭೋಪಾಲ್ ಯೂನಿಯನ್ ಕಾರ್ಬೈಟ್ ಕಂಪನಿಯಲ್ಲಿ ತಯಾರಿಸಲ್ಪಟ್ಟ ರಾಸಾಯನಿಕ ಮತ್ತು ರಸಗೊಬ್ಬರದಿಂದ.

ಇಂತಹ ಕ್ರೂರ ಹಿಂಸೆಗೆ ಇಲ್ಲಿ ವಾಸಿಸುತ್ತಿರುವ 5 ಲಕ್ಷಕ್ಕಿಂತಲೂ ಹೆಚ್ಚಿನ ಜನರು ಅನಿಲ ಸೋರಿಕೆಯ ದುರಂತಕ್ಕೆ ಒಳಗಾಗಿದ್ದರು. ಅಂತೂ ಭೋಪಾಲ್ ನ ಇಡೀ ನಗರ ಅಕ್ಷರಶಃ ಸಮಾಧಿಯ ಭೂಮಿಯಾಗಿದ್ದಂತೂ ನಿಜ.

ಅನಿಲ ಸೋರುವಿಕೆಯಲ್ಲಿ 42 ಟನ್ ವಿಷಾನಿಲ (ಮಿಥೈಲ್‍ಐಸೋ ಸೈನೇಟ್) ವಾತಾವರಣದಲ್ಲಿ ಸೇರಿಕೊಂಡ ಪರಿಣಾಮವಾಗಿ, ಈ ಕಾರ್ಖಾನೆಯ ಸುತ್ತಲಿನ ಕೊಳಚೆ ಪ್ರದೇಶಗಳಲ್ಲಿದ್ದ ಸುಮಾರು 3,800 ಜನ ತಕ್ಷಣ ಅಸುನೀಗಿದರೆ; ನಂತರದ ಎರಡು ದಶಕಗಳಲ್ಲಿ ಈ ಸೋರುವಿಕೆಯ ಪರಿಣಾಮವಾಗಿ 20,000 ಜನ ಸತ್ತ ವರದಿಯಾಗಿದೆ. ಇದೀಗಾ ಈ ಭೋಪಾಲ್  ನ ಅರ್ಧದಷ್ಟು ಜನಸಂಖ್ಯೆ, ಅನೇಕ ಬಗೆಯ ಅಂಗವಿಕಲತೆಗಳು ಹಾಗೂ ಅನಾರೋಗ್ಯಪೀಡಿತರಾಗಿ, ಉಸಿರಾಡುವ ಶವಗಳಂತಿದ್ದಾರೆ.

ಈ ಎಲ್ಲಾ ದುರಂತಕ್ಕೆ ಕಾರಣಕರ್ತರಾದವರೇ ಯೂನಿಯನ್ ಕಾರ್ಬೈಟ್ ಕಂಪನಿ. ಭಾರತದಲ್ಲಿ ಮೊದಲ ಬಾರಿಗೆ ಹೂಡಿಕೆ ಹೂಡಿದ ಕಂಪನಿಯೇ ಯೂನಿಯನ್
ಕಾರ್ಬೈಟ್ ಕಂಪನಿ. ಈ ಕಂಪನಿಯ ಅನಿಲ ಸೋರಿಕೆಯಿಂದಾದ ದುರಂತವು ಇಂದಿಗೂ ಕೂಡ ಕಣ್ಣೆದುರೇ ರಾಚುತ್ತಿದೆ. ಇಲ್ಲಿ ಇಂದಿಗೂ ಜೀವಂತವಾಗಿ ನರಳುತ್ತಲೇ ಜೀವನ ಸಾಗಿಸುತ್ತಿರುವ, ನರಕ ಯಾತನೆ ಅನುಭವಿಸುತ್ತಿರುವ ಲಕ್ಷಾಂತರ ಮಂದಿ ಪ್ರತ್ಯಕ್ಷ ಸಾಕ್ಷಿಗಳೇ ಇದ್ದರೂ ಕೂಡ ಆರೋಪಿ ಸ್ಥಾನದಲ್ಲಿರುವವರಿಗೆ ತಕ್ಕನಾದ ಶಿಕ್ಷೆಯಾಗಲಿಲ್ಲ.

ಇಷ್ಟೆಲ್ಲಾ ದುರಂತಗಳ ಸರಮಾಲೆ ನಡೆದರೂ, ಈ ಅನಿಲ ಸೋರಿಕೆಯ ಪರಿಣಾಮ ಇಂದಿಗೂ ಭೋಪಾಲ ಸುತ್ತಮುತ್ತಲಿನ ಜನರ ಮೈಕೈಗಳಲ್ಲಿ ಇಂದಿಗೂ
ಗೋಚರಿಸುತ್ತಿದೆ. ಆದರೆ ಈ ಸಾಮೂಹಿಕ ನರಮೇಧಕ್ಕೆ ಕಾರಣವಾದ, ಯೂನಿಯನ್ ಕಾರ್ಬೈಡ್ ಕಂಪನಿಯ ಭಾರತೀಯ ಘಟಕದ ಮುಖ್ಯಸ್ಥ ವಾರೆನ್ ಆಂಡರ್ಸನ್‍ನ ಹೆಸರೇ ಈ ಶಿಕ್ಷಿತರ ಪಟ್ಟಿಯಲ್ಲಿ ಇಲ್ಲ ಎಂದರೆ, ಅನಿಲ ದುರಂತಕ್ಕೆ ತಪ್ಪೇ ಮಾಡದೇ ಅದೆಷ್ಟೋ ಕಂದಮ್ಮಗಳ ನರಕಯಾತನೆ ಅನುಭವಿಸಿದ್ದಾರೋ ಏನೋ?.. ದುರಂತಕ್ಕೆ ಬಲಿಪಶುಗಳಾದವರ ಆತ್ಮ ಎಷ್ಟೊಂದು ನಲುಗುತ್ತಿರಬಹುದು ಅಲ್ವೇ?.

ಈ ಒಂದು ದುರಂತಕ್ಕೆ ಯೂನಿಯನ್ ಕಾರ್ಬೈಡ್ ಕಂಪನಿಯ ಮುಖ್ಯಸ್ಥ ವಾರೆನ್ ಆಂಡರ್ಸನ್ ಎಂದು ಗೊತ್ತಿದ್ದರೂ ಕೂಡ ಅಂದಿನ ಸರಕಾರ ತಪ್ಪಿತಸ್ಥರಿಗೆ ನೆರವು ನೀಡಲು ಮುಂದಾದರೇ ಹೊರತು ಆರೋಪಿಗಳಿಗೆ ಶಿಕ್ಷೆಯಾಗಲು ಬಿಡಲಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿ ಕೊಡುಗೆಗಳನ್ನು ನೀಡುತ್ತಿದ್ದರೂ ಎಂದು ಹೇಳಲ್ಪಟ್ಟ ಕಾಂಗ್ರೆಸ್ ಸರಕಾರ ಭೋಪಾಲ್ ಅನಿಲ ಸೋರಿಕೆಯ ದುರಂತಕ್ಕೆ ಯಾಕೆ ಯಾವುದೇ ರೀತಿಯ ನೆರವನ್ನು ನೀಡಲಿಲ್ಲ?. ಅಂದಿನ ಭಾರತದ ರಾಷ್ಟ್ರೀಯ ಕಾಂಗ್ರೇಸ್ ಅಧಿಕಾರದಲ್ಲಿ ಇರಬೇಕಾದರೆ ಭಾರತದ ಪ್ರಜೆಗಳ ಜೀವನ ತೀರಾ ಕೆಳಮಟ್ಟದಲ್ಲಿತ್ತು ಎನ್ನಲಿಕ್ಕೆ ಸಾಕ್ಷಿಯಾಗಿದ್ದೇ ಸಿಖ್ ನರಮೇಧ. ಇದಾದ ಕೇಲವೇ ವಾರಗಳಲ್ಲಿ ಭೋಪಾಲ್ ಅನಿಲ ಸೋರಿಕೆಯ ದುರಂತ ನಡೆಯಿತಾದರೂ ಭಾರತೀಯ ಜೀವಕ್ಕೇ ಬೆಲೆಯೇ ಇಲ್ಲಂದತೆ ವರ್ತಿಸಿತು ಅಂದಿನ ರಾಜೀವ್ ಗಾಂಧಿ ಸರಕಾರ.

ಅನಿಲ ದುರಂತಕ್ಕೆ ಕಾರಣಕರ್ತರಾದ ವಾರೆನ್ ಆಂಡರ್ಸನ್, ಘಟನೆ ನಡೆದ ಕೇಲವೇ ಘಂಟೆಗಳಲ್ಲಿ ತಪ್ಪಿಸಿಕೊಂಡಿದ್ದ. ಆದರೆ 1984ರ ಡಿಸೆಂಬರ್ 7ರಂದು ಈತನನ್ನು ಬಂಧಿಸಲಾಯಿತು ಕೂಡ. ದುರಂತ ಎಂದರೆ ಭಾರತದ ಪ್ರಧಾನಿ ಈತ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ರು ಎಂದರೆ ನಂಬ್ತೀರಾ ?. ಹೌದು.. ಇದು ನಂಬಲೇ ಬೇಕಾದಂತಹ ಸತ್ಯ ಸಂಗತಿ.

ಆಂಡರ್ಸನ್‍ನನ್ನು 1984ರಲ್ಲಿ ಅರ್ಜುನ್ ಸಿಂಗ್ ಮುಖ್ಯಮಂತ್ರಿಯಾಗಿದ್ದ ಮಧ್ಯಪ್ರದೇಶ ಸರಕಾರವು ಬಂಧಿಸಿತ್ತು. ವಿರ್ಪಯಾಸ ಎಂದರೆ ಕೆಲವೇ ಗಂಟೆಗಳಲ್ಲಿ
ಜಾಮೀನು ಕೂಡಾ ನೀಡಲಾಗಿತ್ತು! ಆ ಬಳಿಕ ರಾಜೀವ್ ಗಾಂಧಿ ಅಧಿಕಾರಾವಧಿಯಲ್ಲಿ ಆತನಿಗೆ ಖಾಸಗಿ ವಿಮಾನದಲ್ಲಿ ಅಮೆರಿಕಕ್ಕೆ ಮರಳಿ ಹೋಗಲು ಅವಕಾಶವನ್ನೂ ಕೊಡಲಾಗಿತ್ತು! ಈ ಹೊತ್ತಿಗೆ ಭೋಪಾಲ ಸಂತ್ರಸ್ತರ ತೀವ್ರ ಆಕ್ರೋಶವನ್ನು ಎದುರಿಸುವುದು ಸಾಧ್ಯವಿಲ್ಲ ಎಂದಾದಾಗ, ಆತನನ್ನು ‘ತಲೆಮರೆಸಿಕೊಂಡಿದ್ದಾನೆ’ ಎಂದು ಸಾರಲಾಗಿತ್ತು.

ರಾಜೀವ್ ಗಾಂಧಿ ನೇರವಾಗಿ ಆಂಡರ್ಸನ್ ಭಾರತದಿಂದ ಪಾರಾಗಲು ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನುವುದು ಎಲ್ಲರಿಗೆ ಗೊತ್ತಿರುವ ವಿಷಯವಾದರೂ ಕೂಡ,
ರಾಜೀವ್ ಗಾಂಧಿ ಆಂಡರ್ಸನ್‍ಗೆ ಸಹಾಯ ಮಾಡಿರುವ ಉದ್ದೇಶ ಮಾತ್ರ ಯಾರಿಗೂ ಗೊತ್ತಿಲ್ಲ.

ಸ್ಪೇನ್‍ಗೆ ಭಾರತದ ಮಾಜಿ ರಾಯಭಾರಿಯಾಗಿ ಹಾಗೂ ಹಲವು ಕಾಲ ಭಾರತದ ಟ್ರೇಡ್ ಫೇರ್ ಅಥಾರಿಟಿಯಲ್ಲಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದವರೇ ಮೊಹಮ್ಮದ್ ಯುನುಸ್.  ಅಲ್ಲದೇ ಗಾಂಧೀ ಕುಟುಂಬದ ಆಪ್ತರಲ್ಲೊಬ್ಬನಾಗಿದ್ದ ಕೂಡ. ಮೊಹಮ್ಮದ್ ಯುನುಸ್ ಖಾನ್ ಅಬ್ದುಲ್ ಗಫರ್ ಖಾನ್‍ನ ಸಂಬಂಧಿಯಾಗಿದ್ದಲ್ಲದೇ ಪಾಕಿಸ್ತಾನ ಭಾರತದಿಂದ ವಿಭಜನೆಗೊಂಡ ನಂತರ ಕಾಂಗ್ರೆಸ್‍ನ ನಾಯಕನಾಗಲು ಸಿದ್ದನಿದ್ದ. ಯುನಸ್‍ನ ಮಗ ಅದಿಲ್ ಶಹರಿಯರ್‍ನನ್ನು 1981ರ ಆಗಸ್ಟ್‍ಲ್ಲಿ ಶೆರಟನ್ ಬೀಚ್ ಹೋಟೆಲ್‍ನಲ್ಲಿ ತಂಗಿದ್ದ ಮಿಯಾಮಿ ಅಧಿಕಾರಿಗಳ ಕೋಣೆಗೆ ಬೆಂಕಿ ಹಾಕಲು ಪ್ರಯತ್ನಿಸಿದ್ದ ಕಾರಣಕ್ಕೆ ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿ ನೇತಾಜಿ ಬೋಸ್ ಬಗೆಗಿನ ರಹಸ್ಯಗಳು ತನಗೆ ಗೊತ್ತಿದೆ ಎಂದು ಯುನಸ್ ರಾಜೀವ್ ಗಾಂಧಿಗೆ ಬೆದರಿಕೆ ಹಾಕಲಾರಂಭಿಸಿದ್ದ. ಮಾತ್ರವಲ್ಲದೇ ತನ್ನ ಮಗ ಅದಿಲ್ ಶಹರಿಯರ್‍ಯನ್ನು ಬಿಡುಗಡೆ ಮಾಡದಿದ್ದರೆ ನೆಹರೂ ಬಗೆಗಿನ ನಿಜಾಂಶವನ್ನು ಹೊರತರುವುದಾಗಿ ಬೆದರಿಸಿದ. ಹಾಗಾಗಿ ರಾಜೀವ್ ಗಾಂಧಿ ಆಂಡರ್ಸನ್‍ನನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದಲ್ಲದೇ ಇವನ ಬದಲಾಗಿ ಅದಿಲ್ ಶಹರಿಯರ್‍ನ್ನು ಬಂಧಿಸಲಾಯಿತು. ನಂತರ ಜೂನ್ 11, 1985ರಂದು ರಾಜೀವ್ ಗಾಂಧಿ ಸರಕಾರ ಕ್ಷಮೆ ಕೋರಿ ಬಿಡುಗಡೆಗೊಳಿಸಲಾಯಿತು. ಬಿಡುಗಡೆ ಮಾಡಿದ ಸಂದರ್ಭದಲ್ಲಿ ರಾಜೀವ್‍ಗಾಂಧಿ ಭಾರತದಲ್ಲಿರದೇ ಅಮೇರಿಕಾಕ್ಕೆ ಪಲಾಯನ ಮಾಡಿದ್ದರು.

ಆ ಸಂದರ್ಭವನ್ನು ಕುರಿತು ಮೂದಲಿಸಿದ್ದ ಸುಷ್ಮ ಸ್ವರಾಜ್, ರಾಹುಲ್ ಗಾಂಧಿ ತನ್ನ ತಾಯಿಯಲ್ಲಿ “ಮಮ್ಮಿ ಮಮ್ಮಿ 15,000 ಜನರನ್ನು ಕೊಂದ ನನ್ನ ಅಪ್ಪ,
ಕೊಲೆಗಾರನನ್ನು ಹೇಗೆ ಬಂಧಮುಕ್ತಗೊಳಿಸಿದರು” ಎಂದು ಕೇಳಿರಬಹುದು ಎಂದು ಹೇಳಿದ್ದಾರೆ.

ಮದ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗಳಾಗಿದ್ದ ಅರ್ಜುನ್ ಸಿಂಗ್ ಆತ್ಮಚರಿತ್ರೆಯಲ್ಲಿ ರಾಜೀವ್ ಗಾಂಧಿ ಅರ್ಜುನ್ ಸಿಂಗ್ ಕಿವಿಯಲ್ಲಿ ಗುಣುಗಿದ ವಿಷಯವನ್ನು
ಹೇಳಿದ್ದರಂತೆ. “ಆಂಡರ್ಸನ್‍ನ್ನು ಬಂಧಮುಕ್ತಗೊಳಿಸಿ, ಈ ಸತ್ಯ ನನ್ನಲ್ಲೇ ಇದ್ದು ನಾನು ಸತ್ತ ನಂತರ ಚಿತೆಯಲ್ಲಿಯೇ ಭಸ್ಮವಾಗಲಿದೆ” (ಮೆರೆ ಸಾಥ್ ಚಿತ ಮೇ ಭಸ್ಮ ಹೊ ಜಯೇಗಾ)ಎಂದು ಗುಣುಕಿದ್ದಾರೆ ಎಂದು ಸುಷ್ಮಾ ಸ್ವರಾಜ್ ಪುನರಾರ್ವತಿಸಿದ್ದಾರೆ. ಸತ್ಯಕ್ಕೆ ಸಾವಿಲ್ಲ ಎಂಬುವುದಕ್ಕೆ ಅರ್ಜುನ್ ಸಿಂಗ್ ಬರೆದಿರುವ ಆತ್ಮಚರಿತ್ರೆಯೇ ಸಾಕ್ಷಿ. ಸಾವಿರಾರು ಜನ ಭಾರತೀಯರು ಸತ್ತಾಗ ಸುಮ್ಮನಿದ್ದ ರಾಜೀವ್ ಗಾಂಧಿ ತಮ್ಮ ಕುಟುಂಬದ ಕರಾಳ ಸತ್ಯ ಬಯಲಾಗುತ್ತೆ ಎನ್ನುವ ಚಿಂತೆಯಲ್ಲಿದ್ದರೇ ಹೊರತು ಬೇರಾವುದಕ್ಕೂ ಅಲ್ಲ.

ಅನಿಲ ಸೋರಿಕೆಯ ಪರಿಣಾಮವಾಗಿ ಹಲವು ಮಂದಿ ತಮ್ಮ ಕರುಳ ಕುಡಿಗಳನ್ನು, ಬದುಕಿನ ಆಧಾರಗಳನ್ನು, ಪ್ರೀತಿಯ ಜೀವಗಳನ್ನು, ಬಂಧುಗಳನ್ನು
ಕಳೆದುಕೊಂಡಿದ್ದಾರೆ. ಅನಿಲಕ್ಕೆ ಒಡ್ಡಿಕೊಂಡ ಮಕ್ಕಳು ಈಗಲೂ ಕೈಕಾಲು ಸರಿ ಇಲ್ಲದೆ, ದೃಷ್ಟಿ ಸರಿ ಇಲ್ಲದೆ, ವಿಭಿನ್ನ ಅನಾರೋಗ್ಯಗಳಿಗೆ ತುತ್ತಾಗಿ ನರಕಯಾತನೆಯ ಜೀವನ ಸಾಗಿಸುತ್ತಿದ್ದಾರೆ ಎಂದರೆ ನರ ಭಕ್ಷರರನ್ನು ಪೋಷಿಸುವ ಸಮಾಜಕ್ಕೆ ಧಿಕ್ಕಾರವಿರಲಿ. ಜೀವದ ಜೊತೆ ಚೆಲ್ಲಾಟ ಆಡಿರುವ ಪ್ರತಿಯೊಬ್ಬನಿಗೂ ಕಿಂಚಿತ್ತು ಕನಿಕರ ಇದ್ದಿದ್ದರೇ, ಭಾರತೀಯರ ನೆಲದಲ್ಲಿ ಉಪ್ಪು ತಿಂದು ಬೆಳೆದಿದ್ದರೆ ಭಾರತ ಮಾತೆ ಮಕ್ಕಳಿಗೆ ಅನ್ಯಾಯ ನಡೆಯಲು ಬಿಡುತಿದ್ದರೇ?. ನೀವೇ ಕೊಂಚ ಯೋಚಿಸಿ.

– ಅಲೋಕ

Tags

Related Articles

Close