ಅಂಕಣಪ್ರಚಲಿತ

100‌ಮೀ. ಹಿಂದೆ ಸರಿಯಲು ತಯಾರಿದ್ದ‌ ಚೀನಾಕ್ಕೆ 250 ಮೀ. ಹಿಂದೆ ಸರಿಯಲು ಸೂಚಿಸಿದ ಭಾರತ!!!

ದೋಕ್ಲಾಮ್ ವಿಚಾರದಲ್ಲಿ ಭಾರತ ಹಾಗೂ ಚೀನಾದ ‌ನಡುವೆ ಶೀತಲ ಸಮರ ನಡೆಯುತ್ತಲೇ ಇವೆ. ಆ ವಿಚಾರದ ಕುರಿತಾಗಿ ಹೊಸ ಬೆಳವಣಿಗೆಯ ವರದಿ ಈಗ ಬೆಳಕಿಗೆ ಬಂದಿದೆ. ದೋಕ್ಲಾಮ್ ನ ವರದಿಯ ಪ್ರಕಾರ ಚೀನಾ ಸೇನೆ ತಾವು ನೆಲೆನಿತ್ತ ಪ್ರದೇಶದಿಂದ 100 ಮೀ ಹಿಂದೆ ಸರಿಯುವುದಾಗಿ ಹೇಳಿತ್ತು. ಆದರೆ ಭಾರತ, ಚೀನಾ ಮಾಡಿದ ವಾಗ್ದಾನವನ್ನು ತಿರಸ್ಕರಿಸಿದ್ದಲ್ಲದೇ, ಚೀನೀ ಸೈನಿಕರನ್ನು 250 ಮೀ ಹಿಂದೆ ಸರಿಯಲು ಸೂಚಿಸಿದೆ. ಹಾಗೆ ಸರಿದಲ್ಲಿ ಮಾತ್ರ ಭಾರತ ‌ಕೂಡ ಆ ಪ್ರದೇಶದಿಂದ ಸೈನಿಕರನ್ನು ವಾಪಾಸು ಕರೆಸಲಿದೆ ಅನ್ನುವ ಖಡಕ್ ಸಂದೇಶವನ್ನು ಚೀನಾ ದೇಶಕ್ಕೆ ಭಾರತ ಕೊಟ್ಟಿದೆ.

ಇನ್ನೊಂದೆಡೆ 100 ಮೀ ಹಿಂದೆ ಸರಿಯಲು ಯಾವುದೇ ತಕರಾರು ಮಾಡದ ಚೀನಾ, ಭಾರತದ ಸೈನಿಕರು ಮಾತ್ರ ಸಂಪೂರ್ಣ ಹಿಂದೆ ಸರಿಬೇಕೆಂಬುದಾಗಿ ಹೇಳಿತ್ತು. ದೋಕ್ಲಾಮ್ ಪ್ರದೇಶದಿಂದ ಎರಡೂ ದೇಶಗಳು ಕೂಡ ಹಿಂದೆ ಸರಿಯುವ ಕುರಿತು ಗಂಭೀವಾದ ‌ಚಿಂತನೆಯನ್ನು ಮಾಡುತ್ತಿವೆಯೆಂದು ಈ ವರದಿಯಿಂದ ಸ್ಪಷ್ಟವಾಗುತ್ತದೆ.

ದೋಕ್ಲಾಮ್ ಪ್ರದೇಶದಿಂದ 300-400 ಚೀನೀ ಸೈನಿಕರು 1 ಕಿಮೀ ವಿಸ್ತೀರ್ಣದ ವರೆಗೆ ಬೀಡು ಬಿಟ್ಟಿದ್ದಾರೆ ಅನ್ನುವ ವರದಿ ಈಗ‌ ಲಭ್ಯವಾಗಿದೆ. ಇನ್ನೊಂಡೆದೆ ಭಾರತೀಯ‌ ಸೇನೆಯು ಸಂಪೂರ್ಣವಾಗಿ ತಯಾರಿರಬೇಕೆಂದು ಸೇನೆ ಸೂಚಿಸಿದೆ. ಆದೇಶ ಬರುವವರೆಗೂ ಅದೇ ಸ್ಥಿತಿಯನ್ನು ದೋಕ್ಲಾಮ್ ಪ್ರದೇಶದಲ್ಲಿ ಕಾಪಾಡಿ ಅನ್ನುವ ಸಂದೇಶವನ್ನು ಭಾರತೀಯ ಸೈನಿಕರಿಗೆ ಕೊಡಲಾಗಿದೆ. “ಯುದ್ಧವಿಲ್ಲದೇ ಶಾಂತಿಯಿಲ್ಲ” ಅನ್ನುವ ಸಂಕಲ್ಪವನ್ನು ಚೀನೀ ಸೈನಿಕರ ವಿರುದ್ಧ ದೋಕ್ಲಾಮ್ ವಿಚಾರದಲ್ಲಿ ಭಾರತ‌ ಮಾಡಿದಂತಿದೆ. ಸಿಕ್ಕಿಮ್ ಮತ್ತು ಆ ಪ್ರದೇಶಗಳಲ್ಲಿ ಭಾರತೀಯ ಸೇನೆ ನಿಗಾವಹಿಸಿದೆ ಅನ್ನುವ ವರದಿ ಕೂಡ‌ ಈಗ‌ ಲಭ್ಯವಾಗಿದೆ.

ಚೀನಾ ಈ ವಿಚಾರದಲ್ಲಿ ಆಕ್ರಮಣಕಾರಿ ನಿಲುವನ್ನು ಹೊಂದಿದಂತಿದೆ. ಚೀನಾ ಸರ್ಕಾರದ ಪ್ರಾಯೋಜಕತ್ವದ ಪತ್ರಕೆಗಳಾದ ಚೀನಾ ಡೈಲಿ ಮತ್ತು ಇತರೆ ಪತ್ರಿಕೆಗಳು ನಿತ್ಯ‌ಆ ವಿಚಾರದ‌ ಕುರಿತಾಗಿ ವರದಿಯನ್ನು ಪ್ರಸಾರ‌ ಮಾಡುತ್ತಿವೆ.

ಚೀನಾದ ಗಡಿರೇಖೆ ಹಾಗೂ ಸಾಗರ ವ್ಯವಹಾರದ‌ ಉಪನಿರ್ದೇಶಕರಾದ ವಾಂಗ್ ವೆನ್ಲಿ ಕಾಶ್ಮೀರ ಮತ್ತು ಉತ್ತರಾಖಂಡದ ಮೇಲೆ ಆಕ್ರಮಣ ಮಾಡುವ ಬೆದರಿಕೆಯನ್ನಿಟ್ಟಿದ್ದಾರೆ. ಇದಕ್ಕೆ ಭಾರತ‌ ಕೂಡ ಕಠಿಣ ಸಂದೇಶವನ್ನೂ‌‌ ಚೀನಾಕ್ಕೆ ರವಾನಿಸಿದೆ.

ಚೀನಾ ದೈಲಿ ಪತ್ರಿಕೆಯು ಆರಂಭದಿಂದಲೂ ಆಕ್ರಮಣ ಶೈಲಿಯಲ್ಲಿಯೇ ವರದಿ ಮಾಡುತ್ತಿದೆ. ಭಾರತ-ಚೀನಾ ಸೈನಿಕರ ಮುಖಾಮುಖಿಗೆ ಕ್ಷಣಗಣನೆ ಮುಂತಾದ ಶೀರ್ಷಿಕೆಯನ್ನಿಟ್ಟು ವರದಿ ಪ್ರಸಾರ‌‌ ಮಾಡಿದೆ. ಅಷ್ಟೆ‌ ಅಲ್ಲದೆ “ಸಮಯ ಸಮೀಪಿಸುತ್ತಿದೆ”, “ಮುಂದೆ ಭಾರತ ತನ್ನನ್ನೇ ದೂಷಿಸಬೇಕಾದ‌ ಪರಿಸ್ಥಿತಿ ನಿರ್ಮಾಣವಾಗಲಿದೆ” ಎಂಬಿತ್ಯಾದಿಗಳಿಂದ ಕೂಡಿದ ಸುದ್ದಿಯನ್ನು ಪ್ರಸರಿಸುತ್ತಿವೆ. ಇದು ಯುದ್ಧದ‌ ಮುನ್ಸೂಚನೆಯನ್ನು ಮುಂಚೆಯೇ ಕೊಟ್ಟಂತೆ ಭಾಸವಾಗುತ್ತಿವೆ.
ಎರಡೂ ದೇಶಗಳೂ “ಯುದ್ಧವಿಲ್ಲದೇ ಶಾಂತಿಯಿಲ್ಲ” ವೆನ್ನುವ ಚಿಂತನೆಯನ್ನೇ ಬಲಪಡಿಸಿರುವುದು ಸುಮಾರು 2 ತಿಂಗಳುಗಳಿಂದ. 2012 ರಲ್ಲಿ ಭಾರತೀಯ ಸೇನೆಯು ಲಾಲ್ಟೆನ್ ಪ್ರದೇಶದಲ್ಲಿ ಬಂಕರ್ ಗಳನ್ನು ಹೊಂದಿದ್ದವು. ಯಾವಾಗ ಆ ಬಂಕರ್ ಗಳನ್ನು ತೆರವುಗೊಳಿಸಲು ಜೂನ್ ಒಂದರಂದು ಪಿಎಲ್ಎ ಸೂಚಿಸಿತ್ತೋ ಆವಾಗಿನಿಂದ‌ ಈ ಬಿಕ್ಕಟ್ಟು ಪ್ರಾರಂಭವಾಗಿದೆ.

2012ರಲ್ಲಿ ಭಾರತೀಯ ಸೇನೆ ಆ ಪ್ರದೇಶದಲ್ಲಿ ಬಂಕರ್ ಗಳನ್ನು ಹೊಂದುವ ಸುಮಾರು ವರ್ಷಗಳ ಹಿಂದೆಯೇ ಸೈನಿಕರು ಆ ಪ್ರದೇಶಗಳಲ್ಲಿ ನಿಗಾವಹಿಸುತ್ತಿದ್ದರು. ಭಾರತೀಯ ಗಡಿ ಸಂರಕ್ಷಣೆ ಸುಗಮವಾಗಿಸಲು ಹಾಗೂ ಭೂತಾನ್-ಚೀನಾ ಗಡಿಯನ್ನು ರಕ್ಷಿಸಲು ಇದು ಅತ್ಯಗತ್ಯ.

ಜೂನ್ 16, 2017ರಂದು ಚೀನಾದ ಸೇನೆ ಡೋಕ್ಲಾಮ್ ಪ್ರದೇಶದ ಭೂತಾನ್ ಸೇನಾ ಕ್ಯಾಂಪ್ ಬಳಿ ರಸ್ತೆ ನಿರ್ಮಾಣಕ್ಕೆ ಆರಂಭಿಸಿತ್ತು. ಎರಡೂ ದೇಶಗಳು ಗಡಿ ವಿಚಾರವಾಗಿ ಶಾಂತಿ ಸಂಯಮ ಕಾಪಾಡಬೇಕೆಂದು 1988 ಮತ್ತು 1998ರ ಲಿಖಿತ ಒಪ್ಪಂದ ಮಾಡಿಕೊಂಡಿವೆ. ಗಡಿ ವಿಚಾರವಾಗಿ ಏಕಪಕ್ಷೀಯ ನಿರ್ಧಾರ, ಅಥವಾ ಬಲಪ್ರಯೋಗ, ಗಡಿಯ ಸ್ಥಿತಿಯನ್ನು ಬದಲಾಯಿಸುವಂತಿಲ್ಲ ಎನ್ನುತ್ತದೆ ಆ ಒಪ್ಪಂದ. ಇದನ್ನು ಚೀನಾ ಉಲ್ಲಂಘಿಸಿದೆ ಎಂದು ಭೂತಾನ್ ಹೇಳಿದೆ.

ಈ ಭಾಗದಲ್ಲಿ ರಸ್ತೆ ನಿರ್ಮಿಸುವುದರಿಂದ ಮೂರು ದೇಶಗಳ ಗಡಿ ಸ್ಥಿತಿ ಬದಲಾಗುತ್ತದೆ. ಇದು ಭಾರತದ ಭದ್ರತಾ ಸಮಸ್ಯೆಗೂ ಕಾರಣವಾಗುತ್ತದೆ ಎಂದು ಭಾರತ ಚೀನಾಗೆ ಸ್ಪಷ್ಟಪಡಿಸಿದೆ. ಡೋಕ್ಲಾಮ್ ಭಾಗದಿಂದ ಎರಡೂ ದೇಶದ ಸೇನೆ ಹಿಂದಕ್ಕೆ ಸರಿದರೆ ಆಗ ಮಾತುಕತೆಗೆ ಸಿದ್ಧ ಎಂದು ಭಾರತ ಈಗಾಗಲೆ ಚೀನಾಗೆ ಸ್ಪಷ್ಟವಾಗಿ ಹೇಳಿದೆ. ಆದರೂ ಚೀನಾ ಇಲ್ಲಸಲ್ಲದ ತಕರಾರುಗಳನ್ನು ಮಾಡುತ್ತಲೇ ಬರುತ್ತಿದೆ.

ಇದೇ ವೇಳೆಯಲ್ಲಿ , ಜೂನ್ ಆರನೇ ತಾರೀಖಿಗೆ ಚೀನೀ ಸೈನಿಕರು ಬುಲ್ಡೋಜರ್ ಗಳನ್ನು ತಂದು 2 ಬಂಕರ್ ಗಳನ್ನು ಧ್ವಂಸ ಮಾಡಿವೆ. ಚೀನಾಕ್ಕೆ ಸಂಬಂಧಪಟ್ಟ ಪ್ರದೇಶಗಳಲ್ಲಿ ಭಾರತ ಅಥವಾ ಭೂತಾನ್ ಸೈನಿಕರು ನೆಲೆಯೂರಲು ಸಾಧ್ಯವಿಲ್ಲ‌ ಅನ್ನುವ ವಾದವನ್ನು ಚೀನಾ ಮಂಡಿಸಿತ್ತು. ವಾಸ್ತವವಾಗಿ ಚೀನಾ ವಾದಿಸಿದ್ದು ಸುಳ್ಳಿನ ಕಂತೆಯಾಗಿತ್ತು.

– ವಸಿಷ್ಠ

Tags

Related Articles

Close