ಪ್ರಚಲಿತ

NCERT ಪುಸ್ತಕಗಳಲ್ಲಿ 1,334 ಬದಲಾವಣೆ!! ರಾಷ್ಟ್ರವಾದಿ ನಾಯಕರಿಗೆ ಹೆಚ್ಚು ಒತ್ತು ಕೊಡುವ ನಿಟ್ಟಿನಲ್ಲಿ ಭಗತ್ ಸಿಂಗ್ ಅಧ್ಯಾಯದಿಂದ “ಕಾಮ್ರೇಡ್” ಪದವನ್ನು ಕಿತ್ತು ಬಿಸಾಕಿದ ಮೋದಿ ಸರಕಾರ!!

ಭಾರತೀಯ ಶಿಕ್ಷಣ ಪದ್ದತಿ ಎಕ್ಕುಟ್ಟು ಹೋಗಿರುವುದು “ಕೆಂಪು ಕಾಮ್ರೇಡ್” ಗಳಿಂದ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಎಡಪಂಥೀಯ ವಿಚಾರಧಾರೆಯ ಕಮ್ಮ್ಯೂನಿಷ್ಟರನ್ನು ತಲೆ ಮೇಲೆ ಹೊತ್ತು ಅವರಿಗೆ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಆಟವಾಡಲು ಬಿಟ್ಟಿದ್ದು ನೆಹರು. ಅಂದಿನಿಂದ ಇಂದಿನವರೆಗೂ ಇತಿಹಾಸವನ್ನು ತಿರುಚಿ ಶಾಲೆಗಳಲ್ಲಿ ಉಣಬಡಿಸಿದ ಕೆಂಪು ಉಗ್ರರು ದೇಶಭಕ್ತ ಭಗತ್ ಸಿಂಗ್ ಅವರನ್ನೂ “ಕಾಮ್ರೇಡ್”, ಆತಂಕವಾದಿ ಎಂದು ಬಿಂಬಿಸಿದ್ದಾರೆ ಎಂದರೆ ಇವರಿಗೆ ರಾಷ್ಟ್ರನಾಯಕರ ಬಗ್ಗೆ ಅದೆಷ್ಟು ಅಭಿಮಾನ ಇರಬಹುದು ನೀವೆ ಯೋಚಿಸಿ.

ತಮ್ಮ ಸ್ವಾರ್ಥ ಸಾಧನೆಗಾಗಿ ಆಳುವ ಪಕ್ಷದ ಚಾಪಲೂಸಿ ಮಾಡುತ್ತಿದ್ದ ಈ ಗಂಜಿ ಗಿರಾಕಿಗಳ ಬಟ್ಟಲಿಗೆ ಕಲ್ಲು ಹಾಕಿದ್ದು ಮೋದಿ. ಈಗ ಇವರ ಬಟ್ಟಲಿಗೆ ಗಂಜಿ ಬೀಳುತ್ತಿಲ್ಲ ಆ ಕಾರಣಕ್ಕಾಗಿಯೆ ಮೋದಿ ಅವರನ್ನು ಕಂಡರೆ ಕೆಂಡಾಮಂಡಲವಾವುದು ಇವರೆಲ್ಲ. ಶಾಲಾ ಪಠ್ಯ ಪುಸ್ತಕಗಳಲ್ಲಿರುವ ಕೊಳೆಯನ್ನು ತೊಳೆಯಲು ಹೊರಟಿರುವ ಮೋದಿ ಸರಕಾರ, ‘ಸ್ವಚ್ಚ ಪುಸ್ತಕ ಅಭಿಯಾನ್’ ಮಾಡಿ ದೇಶದ ರಾಷ್ಟ್ರವಾದಿ ನಾಯಕರ ಬಗ್ಗೆ ಹೆಚ್ಚು ಒತ್ತು ಕೊಟ್ಟು ಪಠ್ಯ ಪುಸ್ತಕಗಳನ್ನು ಮರು ಬಿಡುಗಡೆ ಮಾಡಲಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಾ 182 ಪಠ್ಯಪುಸ್ತಕಗಳಲ್ಲಿ ಕನಿಷ್ಠ 1,334 ಬದಲಾವಣೆಗಳನ್ನು ಮಾಡಿದೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ಸ್ ಪತ್ರಿಕೆ ವರದಿ ಮಾಡಿದೆ. ಸರಕಾರದ ಈ ನಿರ್ಧಾರದಿಂದ ಕಾಮ್ರೇಡ್ ಗಳ ಕಣ್ಣಲ್ಲಿ ರಕ್ತ ಕಣ್ಣೀರು ಸುರಿಯುವುದು ಖಚಿತ. ಈಗ ಕಾಮ್ರೇಡ್ ಗಳು ಮೋದಿ ಶಾಲಾ ಪಠ್ಯ ಪುಸ್ತಕವನ್ನು “ಕೇಸರೀಕರಣ” ಮಾಡಿ ಬಿಟ್ಟರು ಎಂದು ಊಳಿಡುತ್ತವೆ.

ವರದಿಯ ಪ್ರಕಾರ 573 ವಿಜ್ಞಾನ ಪುಸ್ತಕಗಳಿಗೆ, 316 ಸಾಮಾಜಿಕ ವಿಜ್ಞಾನ ಪುಸ್ತಕಗಳಿಗೆ ಮತ್ತು 163 ಸಂಸ್ಕೃತ ಪುಸ್ತಕಗಳಿಗೆ ಸರ್ಜರಿ ಮಾಡಲಾಗಿದೆ. ಆರನೆ ತರಗತಿಯಿಂದ ಹತ್ತನೆ ತರಗತಿವರೆಗಿನ ಪಠ್ಯಪುಸ್ತಕಗಳಿಗೆ ಹಲವಾರು ವಿಷಯಗಳ ಸೇರ್ಪಡೆ, ತಿದ್ದುಪಡಿಗಳು ಮತ್ತು ಡೇಟಾ ನವೀಕರಣ ಮಾಡಿ ಬದಲಾವಣೆ ಮಾಡಲಾಗಿದೆ. ದೇಶದ ರಾಷ್ಟ್ರವಾದಿ ನಾಯಕರಾದ ಮರಾಠಾ ಪೇಶ್ವೆ ಬಾಜೀರಾವ್ ಬಲ್ಲಾಳ್, ಜಾಟ್ ರಾಜ ಸೂರಜ್ ಮಾಲ್, ರಜಪೂತ ಮಹಾನಾಯಕ ಮಹಾರಾಣಾ ಪ್ರತಾಪ್, ಹಿಂದೂ ಸಾಮ್ರಾಜ್ಯ ಸ್ಥಾಪಿಸಿದ ಅಪ್ರತಿಮ ವೀರ ಛತ್ರಪತಿ ಶಿವಾಜಿ ಮಾಹಾರಾಜ, ಸ್ವಾತಂತ್ರ್ಯ ಸೇನಾನಿಗಳಾದ ಲಾಲಾ ಲಜಪತ್ ರಾಯ್ ಮತ್ತು ವಲ್ಲಭಭಾಯಿ ಪಟೇಲ್, ಆಧ್ಯಾತ್ಮಿಕ ನಾಯಕರುಗಳಾದ ಶ್ರೀ ಅರಬಿಂದೋ ಮತ್ತು ಸ್ವಾಮಿ ವಿವೇಕಾನಂದರಂತಹ ಮಹಾಪುರುಷರ ವಿಷಯಗಳನ್ನು ಇತಿಹಾಸದ ಪುಸ್ತಕಗಳಲ್ಲಿ ಸೇರಿಸಲಾಗುವುದು ಎಂದು ವರದಿ ಹೇಳಿದೆ. ದೇಶದ ನಿಜವಾದ ನಾಯಕರನ್ನು ಮೂಲೆಗುಂಪಾಗಿಸಿ, ಅಕಬರ, ಬಾಬರ, ತೈಮೂರ, ಜಹಾಂಗೀರರಂತಹ ಮತಾಂಧರನ್ನು ಮಹಾನಾಯಕರನ್ನಾಗಿಸಿ ಗಂಜಿ ಉಂಡ ಕಾ-ಕಗಳ ಹೊಟ್ಟೆಗೆ ಬಿಂಕಿ ಬೀಳುವುದು ಖಂಡಿತ.

ಕಾಮಾಲೆ ಕಣ್ಣಿಗೆ ಜಗವೆಲ್ಲ ಹಳದಿ ಎನ್ನುವಂತೆ ಎಡಪಂಥೀಯರಿಗೆ ಎಲ್ಲೆಲ್ಲೂ ಕಾಮ್ರೇಡ್ ಗಳೆ ಕಾಣುತ್ತಾರೆ. ಅದಕ್ಕಾಗಿಯೆ ಮಹಾನ್ ಕ್ರಾಂತಿಕಾರಿಗಳನ್ನು ಕಾಮ್ರೇಡ್ ಎಂದು ಸಂಬೋಧಿಸಿದ್ದು ಅವರು. ಭಗತ್ ಸಿಂಗ್ ಬಗ್ಗೆ ಇರುವ ಅಧ್ಯಾಯದಲ್ಲಿ ಭಗತ್ ಸಿಂಗ್ ಮತ್ತು “ಆತನ ಕಾಮ್ರೇಡ್” ಗಳು ಎನ್ನುವ ಪದವನ್ನು ಕಿತ್ತು ಹಾಕಿ ಚಂದ್ರಶೇಖರ್ ಆಜಾದ್ ಮತ್ತು ಸುಖದೇವ್ ಎಂದು ಕ್ರಾಂತಿಕಾರಿಗಳ ಹೆಸರನ್ನು ಸೇರಿಸಿ ಅವರ ಬಲಿದಾನಕ್ಕೆ ಬೆಲೆ ಬರುವಂತೆ ಮಾಡುತ್ತಿದೆ ಮೋದಿ ಸರಕಾರ. ದೇಶದ ನೈಜ ಇತಿಹಾಸವನ್ನು ಶಾಲಾ ಮಕ್ಕಳಿಗೆ ತಿಳಿಸಿ ಪಾಠ ಪುಸ್ತಕಗಳಲ್ಲಿ ತುಂಬಿರುವ ಕೊಳಕನ್ನು ಸ್ವಚ್ಚ ಮಾಡುವ ಈ ಮಹತ್ವದ ನಿರ್ಧಾರಕ್ಕೆ ಮೋದಿ ಸರಕಾರಕ್ಕೊಂದು ದೀರ್ಘದಂಡ ನಮಸ್ಕಾರ.

ಭಾರತದ ಈಗಿನ ಬೌದ್ದಿಕ ದಿವಾಳಿತನಕ್ಕೆ ಮೆಕಾಲೆ ಪ್ರಾಯೋಜಿಸಿದ, ಕಾ-ಕಗಳು ಪೋಷಿಸಿಕೊಂಡು ಬಂದ ಶಿಕ್ಷಣ ವ್ಯವಸ್ಥೆಯೆ ಕಾರಣ. ಮೊದಲು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಸ್ವಚ್ಚತಾ ಅಭಿಯಾನ ನಡೆಯಬೇಕು. ಭಾರತ ಮತ್ತೆ ಗುರುಕುಲ ಶಿಕ್ಷಣ ಪದ್ದತಿಗೆ ಹಿಂದಿರುಗುವಂತಾಗಬೇಕು. ಭಾರತವನ್ನು ವಿಶ್ವಗುರುವಾಗಿಸುವ ಮೋದಿ ಅವರ ಪ್ರಯತ್ನಕ್ಕೆ ದೇಶವಾಸಿಗಳೆಲ್ಲ ಬೆಂಬಲ ನೀಡಬೇಕು. ದೇಶ ಬದಲಾಗಬೇಕಿದ್ದರೆ ಮೊದಲು ನಾವು ಬದಲಾಗಬೇಕು. ಪಾಶ್ಚಾತ್ಯರ ಗುಲಾಮಗಿರಿಯ ಮನಸ್ಥಿತಿಯಿಂದ ಹೊರ ಬಂದು ದೇಶ ಕಟ್ಟುವ ಕಾರ್ಯದಲ್ಲಿ ಕಾಯಾ-ವಾಚಾ-ಮನಸಾ ತೊಡಗಿಸಿಕೊಳ್ಳಬೇಕು.

-ಶಾರ್ವರಿ

Tags

Related Articles

Close