ಇತಿಹಾಸ

14ನೆಯ ಶತಮಾನದಲ್ಲಿ ನಾಸ್ಟ್ರಡೋಮಸ್ ಮೋದಿಯವರ ಕುರಿತಾಗಿ ಹೇಳಿದ ಭವಿಷ್ಯವಾಣಿಯು ಸತ್ಯವಾಗುತ್ತಿದೆಯಾ??

ಮಾನವನ ಸ್ವಭಾವವೇ ಹಾಗಿರಬೇಕು. ಪ್ರತೀ ಬಾರಿಯೂ ಆತ ತನ್ನ ಮುಂದಿನ ಭವಿಷ್ಯದ ಕುರಿತಾಗಿ ತಿಳಿಯಲು ಇಚ್ಛಿಸುತ್ತಾನೆ. ವಾಸ್ತವದ ವಿಚಾರವೇನೆಂದರೆ ಸ್ವತಃ ಪ್ರಕೃತಿಯೇ ಮುಂದೆ ಆಗಬಹುದಾದ ಘಟನೆಗಳ ಕುರಿತಾಗಿ ಚಿಕ್ಕ ಸುಳಿವನ್ನೂ ಕೊಡುವುದಿಲ್ಲ, ಆದರೆ ಮಾನವ ಮಾತ್ರ ಘಟನೆಗಳನ್ನು ನೈಜವಾಗಿಯೂ ಅನುಭವಿಸುವ ಮುಂಚೆ ತಿಳಿಯಬಯಸುತ್ತಾನೆ. ಇದು ವಿಚಿತ್ರವಾದರೂ ಸತ್ಯ.

ತನ್ನ ಜೀವನವನ್ನು ಅರ್ಥಮಾಡಿಕೊಳ್ಳಲು ಹಾಗೂ ಮುಂದಿನ ಭವಿಷ್ಯದ ಅರಿವಾಗಲು ಅನೇಕರು ಜ್ಯೋತಿಷಾಭ್ಯಾಸವನ್ನು ಮಾಡುತ್ತಾರೆ. ನಕ್ಷತ್ರಗಳು ಹಾಗೂ ಅದರ ಚಲನೆವಲನೆಗಳ ಆಧಾರ ಮೇಲೆ ಭವಿಷ್ಯವನ್ನು ಹೇಳುವ ಚಾಕಚಕ್ಯತೆಯನ್ನು ಕೆಲವೇ ಕೆಲವು ಮಂದಿಗೆ ಲಭಿಸುತ್ತದೆ. ಇದನ್ನು ಸಾಕ್ಷಾತ್ಕಾರ ಅಥವಾ ಆಂತರಿಕ ಜ್ಞಾನವೆಂಬುದಾಗಿಯೂ ಕರೆಯಬಹುದು. ಅಂತಹ ಅಪರೂಪದ ವ್ಯಕ್ತಿಗಳಲ್ಲೊಬ್ಬರು ನಾಸ್ಟ್ರಡೋಮಸ್. ಹಲವಾರು ಶತಮಾನಗಳ ಹಿಂದೆಯೇ ಮುಂದೆ ವಿಶ್ವದಲ್ಲಿ ಆಗಬಹುದಾದ ಬದಲಾವಣೆಯನ್ನು ನುಡಿದ್ದ ಮಹಾನ್ ಜ್ಯೋತಿಷಿ ನಾಸ್ಟ್ರಡೋಮಸ್.

ಅನೇಕ ಘಟನೆಗಳು ಹಾಗೂ ಅಭಿವೃದ್ಧಿಗಳನ್ನು ಆ ಫ್ರೆಂಚ್ ಸನ್ಯಾಸಿ ಬರೆದಿಟ್ಟುಕೊಂಡಿದ್ದಾರೆನ್ನಲಾಗಿದೆ. ಆತ ನುಡಿದಿದ್ದ ಭವಿಷ್ಯದ ನಿಖರತೆ ಹಾಗೂ ಅಂಕಿ-ಅಂಶಗಳನ್ನು ಗಮನಿಸಿದರೆ ಆತನಿಗೆ ವಿಶೇಷ ಶಕ್ತಿಯೊಂದು ಪ್ರಾಪ್ತವಾಗಿವೆ ಎನ್ನಬಹುದು. ಚಕಿತವಾಗಿಸುವ ಸಂಗತಿಯೇನೆಂದರೆ ಆತ ನುಡಿದ ಅನೇಕ ಭವಿಷ್ಯಗಳು ಇವತ್ತು ಸತ್ಯವಾಗಿವೆ. ಹಾಗಾಗಿ ಆತನ ನುಡಿಗಳು ಆಧಾರ ಸಹಿತವಾಗಿಯೇ ಇವೆ ಎಂಬ ನಂಬಿಕೆ ಜನರಲ್ಲಿ ಬೆಳೆದಿದೆ.

ಅಮೇರಿಕಾದ ಅವಳಿ ಗೋಪುರದ ಪತನದ ಕುರಿತಾಗಿ ಭವಿಷ್ಯ ನುಡಿದ ಪ್ರಥಮ ವ್ಯಕ್ತಿ ಆತ. ಆತನ ತನ್ನ ಪುಸ್ತಕದಲ್ಲಿ ಬರೆಯುತ್ತಾನೆ.

“ನವ ಶತಮಾನ ಹಾಗೂ
ಒಂಭತ್ತು ತಿಂಗಳುಗಳ ಅವಧಿಯಲ್ಲಿ
ಆಕಾಶದಿಂದ ಭಯೋತ್ಪಾದಕ ರಾಜ ಧರೆಗಿಳಿಯುತ್ತಾನೆ…
ಆಕಾಶವು ನಲವತ್ತೈದು ಡಿಗ್ರಿಗಳಷ್ಟು ಸುಡಲ್ಪಟ್ಟು,
ಮಹಾನ್ ನಗರವೊಂದನ್ನು ಬೆಂಕಿಯು ಆವರಿಸುತ್ತದೆ..”

ಯಾರ್ಕ್ ನಗರದಲ್ಲಿ ದೊಡ್ಡ ಕುಸಿತವುಂಟಾಗುತ್ತದೆ,
ಅವಳಿ ಸಹೋದರರು ಅವ್ಯವಸ್ಥೆಯಿಂದ ಛಿದ್ರವಾಗುತ್ತಾರೆ
ಕೋಟೆಗಳು ಧರೆಗಪ್ಪಳಿಸಿದಾಗ ಮಹಾನ್ ನಾಯಕ ಸಡಿಲವಾಗುತ್ತಾನೆ
ದೊಡ್ಡ ನಗರವು ಸುಡುವ ಸಂದರ್ಭದಲ್ಲಿ ಮೂರನೆಯ ಮಹಾಯುದ್ಧವು ಪ್ರಾರಂಭವಾಗುತ್ತದೆ.”

ಇಲ್ಲಿ ಅವಳಿ ಸಹೋದರರರನ್ನು ನ್ಯೂ ಯಾರ್ಕ್ ನಗರದ ಅವಳಿ ಗೋಪುರಗಳಿಗೆ ಹೋಲಿಸಲಾಗಿದೆ. ಭಯೋತ್ಪಾದಕ ರಾಜನನ್ನು ಒಸಾಮಾ ಬಿನ್ ಲಾಡೆನ್ ನನ್ನು ಸಂಭೋಧಿಸಲಾಗಿದೆ. ದಾಳಿ ನಡೆಯುವ ಸಮಯವನ್ನು ಕೂಡ ನಿಖರವಾಗಿ ಆತ ಊಹಿಸಿದ್ದ “ನವ ಶತಮಾನ ಹಾಗೂ ಒಂಭತ್ತು ತಿಂಗಳುಗಳ ಅವಧಿಯಲ್ಲಿ” ಅಂದ್ರೆ 2001 ರ ಸಪ್ಟೆಂಬರ್. ಆ ತಿಂಗಳು ವರ್ಷದ 9 ನೆಯ ತಿಂಗಳಾಗಿತ್ತು.

ಕೇಳಿದರೆ ಅಚ್ಚರಿಪಡ್ತೀರಿ. ಅಮೇರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗುತ್ತಾರೆಂಬುದಾಗಿ ಭವಿಷ್ಯ ನುಡಿದಿದ್ದರು ನಾಸ್ಟ್ರಡೋಮಸ್. ಆತ ಬರಿಯುತ್ತಾನೆ, “ಮಹಾನ್, ನಾಚಿಕೆಯಿಲ್ಲದ, ಧೈರ್ಯದಿಂದ ಜಗಳವಾಡುವವ ಸೇನೆಯ ನಾಯಕನಾಗಿ ಆಯ್ಕೆಯಾಗುತ್ತಾನೆ. ಅನೇಕರು ಟ್ರಂಪ್, ಟ್ರಂಪ್, ಟ್ರಂಪ್… ಎಂಬುದಾಗಿ ಕರೆಯಲ್ಪಡುವ ವ್ಯಕ್ತಿ ವಿಶ್ವದ ಶಕ್ತಿಶಾಲೀ ಸೇನೆಯ ನೇತೃತ್ವವನ್ನು ವಹಿಸುತ್ತಾನೆ.!!

ಚುನಾವಣಾ ಹೋರಾಟವನ್ನು ಅವರು “ಲಿಂಗಗಳ ನಡುವಿನ ಯುದ್ಧ” ವೆಂದು ವಿವರಿಸುತ್ತಾರೆ. ಬಿಳಿ ಕೂದಲಿನ ಹಾಗೂ ಉದ್ದ ಮೂಗಿನ ನಡುವೆಯ ಹೋರಾಟವನ್ನು ಡೊನಾಲ್ಡ್ ಮತ್ತೆ ಕ್ಲಿಂಟನ್ ನಡುವೆಯ ಹೋರಾಟವನ್ನು ಬಣ್ಣಿಸಿದ್ದಾರೆ.

ಅನೇಕರು ಈತನ ಭವಿಷ್ಯದ ನುಡಿಗಳನ್ನು ಅಲ್ಲಗಳೆಯುತ್ತಾರೆ. ಆದರೆ ಆಸಕ್ತಿದಾಯಕ ಸಂಗತಿಯೇನೆಂದರೆ ಕಳೆದ 400 ವರ್ಷಗಳಲ್ಲಿ 800 ಭವಿಷ್ಯಗಳು
ನಿಜವಾಗಿವೆ. 1942ರಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಅಂತ್ಯವಾಗುತ್ತದೆ ಎಂಬುದಾಗಿಯೂ ಆತ ನುಡಿದಿದ್ದ.

ಅದರಲ್ಲಿಯೂ ಭಾರತದ ಕುರಿತಾಗಿ ಆತ ನುಡಿದಿದ್ದ ಭವಿಷ್ಯಗಳು ವಾಸ್ತವಿಕವಾಗಿವೆ. ಭಾರತವು ವಿಶ್ವದಲ್ಲಿ ಉದಯಿಸುವ ಶಕ್ತಿ ಯಾಗಿ ಬೆಳೆಯಲಿದೆ ಅನ್ನುವ ಅಂಶವನ್ನೂ ಒಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದ ನಾಸ್ಟ್ರಡೋಮಸ್.

ಕುತೂಹಲಕಾರಿಯ ವಿಚಾರವೆಂದರೆ , ಭಾರತವನ್ನು ಆ ಸ್ಥಾನಕ್ಕೆ ಕೊಂಡೊಯ್ಯುವ ಓರ್ವ ವ್ಯಕ್ತಿಯ ಕುರಿತಾಗಿ
ಬಹಳವಾಗಿ ಆತ ಬಣ್ಣಿಸಿದ್ದ.

ವಿಶ್ವದ ಜಾಗತಿಕ ಶಕ್ತಿಯ ಕುರಿತಾಗಿ 1555 ರಲ್ಲಿ ನಾಸ್ಟ್ರಡೋಮಸ್ ಭವಿಷ್ಯ ನುಡಿಯುತ್ತಾನೆ. ಆತ ಹೇಳುತ್ತಾನೆ..

ಕ್ವಾಟ್ರೈನ್ 75/ ಸೆಂಚುರಿ X

“ದೀರ್ಘ ಕಾಲ ಕಾಯುತ್ತಿದ್ದವು, ಅವರು ಯುರೋಪಿನಲ್ಲಿ ಜನಿಸುವುದಿಲ್ಲ,
ಭಾರತ ಅಮರ ಆಡಳಿತಗಾರರನ್ನು ಉತ್ಪಾದಿಸುತ್ತದೆ.,
ಅನಿಯಮಿತ ವ್ಯಾಪ್ತಿಯ ಜ್ಞಾನ ಹಾಗೂ
ಶಕ್ತಿಯನ್ನು ನೋಡುವಾಗ ವಿಜಯಶಾಲಿಯಾದ ಈ ವಿದ್ವಾಂಸರ ಮುಂದೆ ಏಷ್ಯಾವೇ ಶಿರ ಬಾಗಿಸುತ್ತದೆ.”

ಕ್ವಾಟ್ರೈನ್ 96/ ಸೆಂಚುರಿ X

“ಸಾಗರದಾಚೆಗಿನ ವಿಜಯದ ಹೆಸರಿನ ಧರ್ಮ
ಖಲೀಫ್ ನ್ಯಾಯಾಲಯದ ಮತಾಂಧತೆಯ ವಿರುದ್ಧ
ಮಿಥ್ಯ ನಂಬಿಕೆಯ ಕೊಲೆಗಾರರ ಅಟ್ಟಹಾಸ,
ಹಿಂದೂಗಳು ಹಾಗೂ
ಕ್ರಿಶ್ಚಿಯನ್ನರು ನಡುವೆ ಸಿಕ್ಕಿಹಾಕಿಕೊಳ್ಳುತ್ತಾರೆ.”

ಕ್ವಾಟ್ರೈನ್ 50, ಸೆಂಚುರಿ L

“ಮೂರು ಸಾಗರಗಳು ಭೇಟಿಯಾಗುವ ಪರ್ಯಾಯ ದ್ವೀಪದಿಂದ,
ಗುರುವಾರ ಪವಿತ್ರವೆಂದು ತಿಳಿಯುವವರು ಆಡಳಿತ ಮಾಡುತ್ತಾರೆ,
ಆತನ ಬುದ್ಧಿವಂತಿಕೆ ಹಾಗೂ
ಶೌರ್ಯಕ್ಕೆ ಎಲ್ಲಾ ರಾಷ್ಟ್ರಗಳು ತಲೆಬಾಗಿಸುತ್ತವೆ,
ಏಷ್ಯಾದಲ್ಲಿ ಅವರನ್ನು ವಿರೋಧಿಸುವುದೂ ಮೂರ್ಖತನವಾಗುತ್ತದೆ.”

ಸ್ಪಷ್ಟವಾಗಿ ಇದು ಭಾರತದ ಹಿಂದೂ ವ್ಯಕ್ತಿಯೆಂಬುದಾಗಿ ಸೂಚಿಸುತ್ತದೆ. ಆದರೆ ಈ ವಾಕ್ಯವು ನರೇಂದ್ರ ಮೋದಿಯವರಿಗೆ ಸಂಬಂಧಪಟ್ಟ ಹಾಘೆ ಗೋಚರಿಸಿವುದಿಲ್ಲ, ಯಾಕೆಂದರೆ ಅವರು ದಕ್ಷಿಣ ಭಾರತದಿಂದ ಬಂದವರಲ್ಲ. 2014ರಿಂದ ಭಾರತದಲ್ಲಿ ಹಿಂದೂ ವ್ಯಕ್ತಿಯು ಭಾರತವನ್ನು ವಿಶ್ವಗುರು ಸ್ಥಾನಕ್ಕೆ ಕೊಂಡೊಯ್ಯುತ್ತಾರೆಂಬ ಸೂಚನೆಯನ್ನು ಕೊಟ್ಟಿದ್ದರು ಖ್ಯಾತ ಜ್ಯೋತಿಷಿ.

“2014ರಿಂದ ತೊಡಗಿ 2026 ರ ತನಕ ಹಿಂದುತ್ವದ ಪ್ರತಿನಿಧಿ ಭಾರತವನ್ನು ಮುನ್ನಡೆಸುತ್ತಾನೆ, ಪ್ರಾರಂಭದ ಹಂತದಲ್ಲಿ ಆತನ್ನು ಅನೇಕರು ವಿರೋಧಿಸಿದರೂ
ನಂತರ ಆತನನ್ನು ಮನಸ್ಸಿನಿಂದ ಗೌರವಿಸಲು , ಪ್ರೀತಿಸಲು ಪ್ರಾರಂಭಿಸುತ್ತಾರೆ. ಅದೇ ವ್ಯಕ್ತಿ ದೇಶದ ಅಭಿವೃದ್ಧಿಯ ವಿಜಯದ ಪತಾಕೆಯನ್ನೇ ಹಾರಿಸಲಿದ್ದಾರೆ.

ಮಧ್ಯವಯಸ್ಸಿನ ಜಾಗತಿಕ ಶಕ್ತಿಯ ಆಡಳಿತಗಾರ ಭಾರತದಲ್ಲಿ ಮಾತ್ರವಲ್ಲ ವಿಶ್ವದಲ್ಲಿಯೂ ಸುವರ್ಣಯುಗವನ್ನು ಪ್ರತಿಷ್ಠಾಪಿಸಲಿದ್ದಾರೆ.

ಈತನ ಆಡಳಿತದ ಅವಧಿಯಲ್ಲಿ ಭಾರತವು ವಿಶ್ವಗುರುವಾಗಿ ನಿರ್ಮಾಣವಾಗುವುದು ಮಾತ್ರವಲ್ಲದೇ, ಅನೇಕ ರಾಷ್ಟ್ರಗಳೂ ಭಾರತದ ಆಶ್ರಯವನ್ನು ಪಡೆಯಲಿವೆ. “ಪ್ರಸ್ತುತ ಸನ್ನಿವೇಶಗಳನ್ನು ಗಮನಿಸಿವಾಗ ಇದು ಸತ್ಯವಾಗುತ್ತಿದೆಯೆಂಬ ಭಾವನೆಯೇ ಭಾಸವಾಗುತ್ತಿದೆ. ಹಿಂದುತ್ವದ ಚಿಂತನೆಯುಳ್ಳ ವ್ಯಕ್ತಿಯೇ 2014ರಲ್ಲಿ ಭಾರತದ ಪ್ರಧಾನಿಯಾಗುತ್ತಾರೆ. ಮೊದಲು ಆ ವ್ಯಕ್ತಿಯನ್ನು ಏನೆಲ್ಲಾ ಅಂದು ತೆಗಳಿದ ದೇಶಭಕ್ತರು ನಂತರ ಕೋಟ್ಯಾಂತರ ಅಭಿಮಾನಿಗಳ ಹೃದಯಸಿಂಹಾಸನದಲ್ಲಿ ಸ್ಥಾಯಿಯಾದರು. ಯಾವುದೇ ಸಂಶಯವಿಲ್ಲದೇ ನಾವು ಆ ವ್ಯಕ್ತಿ ಯಾರೆಂದು ಊಹಿಸಬಹದು.

ಆತ ಭಾರತವನ್ನಷ್ಟೇ ಅಲ್ಲದೇ ವಿಶ್ವಕ್ಕೇ ಸುವರ್ಣಯುಗಯನ್ನು ದಯಪಾಲಿಸುತ್ತಾನೆಂದು ನಾಸ್ಟ್ರಡೋಮಸ್ ಅಭಿವರ್ಣಿಸಿದ್ದರು. ಭಾರತವನ್ನು ಅಭಿವೃದ್ಧಿಯಲ್ಲಿ ಉತ್ತುಂಗ ಶಿಖರಕ್ಕೆ ಕೊಂಡೊಯ್ಯುತ್ತಾನೆ ಎಂಬುದಾಗಿ ಆತ ಬಣ್ಣಿಸಿದ್ದ.

ಆ ನಾಯಕ ಬೇರಾರೂ ಅಲ್ಲ,, ನಮ್ಮ ನಿಮ್ಮ ನೆಚ್ಚಿನ ನಾಯಕ ನರೇಂದ್ರ ದಾಮೋದರ್‍ದಾಸ್ ಮೋದಿ!! ಕೋಮಿವಾದಿ ನಮ್ಮ ಪ್ರಧಾನಿ ಎಂದು ಜರೆದರು ಅನೇಕರು. ಆದರೆ 3 ವರ್ಷಗಳ ಅವಧಿಯಲ್ಲಿ ಭಾರತ ಹಿಂದೆಂದೂ ಕಂಡಿರದ ಮಹಾನ್ ನಾಯಕ ಹಾಗೂ ಚತುರ ಆಡಳಿತಗಾರರಾಗಿ ಹೊರಹೊಮ್ಮಿದರು. ಭಾರತವನ್ನು ಅಭಿವೃದ್ದಿಯ ಹಾದಿಯಲ್ಲಿ ಕೊಂಡೊಯ್ಯುವ ಹಾಗೂ ನವ ಭಾರತದ ಸೃಷ್ಟಿಸುವ ಸಂಕಲ್ಪವನ್ನು ಮಾಡಿದ್ದಾರೆ. ಚಾಣಕ್ಯನ ಕಾಲದಿಂದ ನಂತರ ನಾವೆಲ್ಲಾ ಕಾಣುವ ಕನಸಾದ ವಿಶ್ವಗುರು ಭಾರತ ನಿರ್ಮಾಣವಾಗುವ ದೃಷ್ಟಿಯಿಂದ ಸತತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮೋದೀಜಿ.!! ಪ್ರಸ್ತುತ ನಡೆಯುತ್ತಿರು ಘಟನೆಗಳಿಗೂ ನಾಸ್ಟ್ರಡೋಮಸ್ ಹೇಳಿದ ಭವಿಷ್ಯಕ್ಕೂ ಸಾಮ್ಯತೆಯಿದೆ .. ಗಮನಿಸಿ.!! ದೇವೇಗೌಡರೇ ಅದಕ್ಕೆ ನಿದರ್ಶನ. ಮೊದಲು ಮೋದಿ ಪ್ರಧಾನಿ ಆದರೆ ವಿದೇಶಕ್ಕೆ ಹೋಗುತ್ತೇನೆಂದವರು ನಂತರ ಅವರ ಓರ್ವ ಮಹಾನ್ ನಾಯಕ ಎಂಬುದಾಗಿ ಬಣ್ಣಿಸಿದ್ದರು.

ಅವರಲ್ಲಿರುವ ಬಲವಾದ ತತ್ತ್ವಗಳು ಹಾಗೂ ವ್ಯಕ್ತಿತ್ವ ಸಾಮಾನ್ಯವಾಗಿ ಕಾಣಸಿಗುವುದಿಲ್ಲ. ಅವರ ಬದ್ಧತೆ, ಸಮರ್ಪಣೆ, ಹಾಗೂ ಸತತ ಪ್ರಯತ್ನಗಳನ್ನು ನಿರ್ಲಕ್ಷಿಸುವ ಹಾಗಿಲ್ಲ. ನಮ್ಮ ದೇಶದ ಅಂತಃಸತ್ವವವನ್ನು ಅರಿತು ವಿಶ್ವವೇ ಈಗ ಭಾರತವನ್ನು ಗೌರವಿಸುತ್ತದೆ.

ಅನೇಕರು ಭವಿಷ್ಯಗಳನ್ನು, ಊಹನೆಯ ವಿಚಾರವನ್ನು ಕಡೆಗಣಿಸಬಹುದು, ಆದರೆ ವಾಸ್ತವವಾಗಿಯೂ ನಾವು ಬದಲಾವಣೆಯ ಸಂಕೇತವನ್ನು ಕಾಣುತ್ತಿದ್ದೇವೆ,
ಅಭಿವೃದ್ಧಿಯ ಉನ್ನತ ಹಾದಿ ಹಾಗೂ ದೇಶವು ಓರ್ವ ಮಹಾನ್ ನಾಯಕನಿಗೆ ಜನ್ಮನೀಡಿದನ್ನು ನಾವು ಗಮನಿಸಬಹುದು.

– ವಸಿಷ್ಠ

Tags

Related Articles

Close