ಪ್ರಚಲಿತ

ಒಂದೇ ದಿನ 14 ಹಿಂದೂ ದೇವಾಲಯಗಳು ನೆಲಸಮ: ಕಂಗೆಟ್ಟ ಸ್ಥಿತಿಯಲ್ಲಿ ಹಿಂದೂಗಳು!

ಹಿಂದೂ ದೇವಾಲಯಗಳ ಮೇಲಿನ ದಾಳಿ ಕೆಲ ದೇಶಗಳಲ್ಲಿ ಸುದ್ದಿಯಾಗುತ್ತಲೇ ಇದೆ. ಕಳೆದ ಕೆಲ ದಿನಗಳಿಂದ ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ, ಧ್ವಂಸ ಪ್ರಕರಣಗಳು ಹೆಚ್ಚಾಗಿ ಸುದ್ದಿಯಾಗುತ್ತಿದ್ದವು. ಇದರ ಬೆನ್ನಲ್ಲೇ ಇದೀಗ ಬಾಂಗ್ಲಾದೇಶ ದಲ್ಲಿ ಹಿಂದೂ ದೇಗುಲಗಳನ್ನು ಧ್ವಂಸ ಮಾಡಿ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿರುವ ಘಟನೆ ನಡೆದಿದೆ‌.

ಬಾಂಗ್ಲಾದೇಶದಲ್ಲಿ ಬರೋಬ್ಬರಿ ೧೪ ಹಿಂದೂ ದೇಗುಲಗಳ ಮೇಲೆ ದುರುಳರು ಇಂತಹ ವಿದ್ವಂಸಕ ಕೃತ್ಯ ಎಸಗಿದ್ದಾರೆ. ೧೪ ಹಿಂದೂ ದೇಗುಲಗಳ ಮೇಲೆ ದಾಳಿ ನಡೆಸಿ, ವಿಗ್ರಹಗಳನ್ನು ಧ್ವಂಸ ಮಾಡಲಾಗಿದೆ. ಹಿಂದೂ ಧರ್ಮದ ವಿರೋಧಿಗಳು ಈ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ. ಈ ದುಷ್ಕೃತ್ಯ ಠಾಕೂರ್ಗಾಂವ್‌ನ ಬಲಿಯಾದಂಗಿಯಲ್ಲಿ ನಡೆದಿದೆ.

ಈ ಘಟನೆಯಿಂದ ಅಲ್ಲಿನ ಹಿಂದೂಗಳು ಭಯಭೀತರಾಗಿದ್ದು, ತಮ್ಮ ಜೀವಕ್ಕೆ, ಆಸ್ತಿ ಪಾಸ್ತಿಗೆ ರಕ್ಷಣೆ ನೀಡುವಂತೆಯೂ ಒತ್ತಾಯಿಸಿದ್ದಾರೆ. ಈ ಕುಕೃತ್ಯ ನಡೆಸಿದ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಅಲ್ಲಿನ ಪೊಲೀಸ್ ಇಲಾಖೆ ತಿಳಿಸಿದೆ. ಕತ್ತಲಿರುವ ಪ್ರದೇಶಗಳಲ್ಲಿರುವ ದೇಗುಲಗಳನ್ನು ಈ ದುಷ್ಕರ್ಮಿಗಳು ಧ್ವಂಸ ಮಾಡಿ ವಿಕೃತಿ ಮೆರೆದಿದ್ದಾರೆ.

ಕೋಲು, ಕಲ್ಲು ಸೇರಿದಂತೆ ಇನ್ನಿತರ ಆಯುಧಗಳನ್ನು ಬಳಸಿ ೧೪ ದೇಗುಲಗಳನ್ನು ಧ್ವಂಸ ಮಾಡಲಾಗಿದೆ. ದೇವಾಲಯದೊಳಗಿನ ವಿಗ್ರಹಗಳ ಮೇಲೆಯೂ ದೌರ್ಜನ್ಯ ಮೆರೆದಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಇಂತಹ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಇಂತಹ ಘಟನೆಗಳು ಜಗತ್ತನ್ನೇ ತಲೆತಗ್ಗಿಸುವಂತೆ ಮಾಡುತ್ತಿವೆ ಎನ್ನುವುದರಲ್ಲಿ ಎರಡು ಮಾಡಿಲ್ಲ.

Tags

Related Articles

Close