ಪ್ರಚಲಿತ

14 ಸಾವಿರ ಬಂಕರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್!! ಪಾಕ್ ಉಗ್ರರನ್ನು ಹೊಡೆದುರಿಳಿಸಲು ಸಿದ್ಧರಾದ ಭಾರತೀಯ ಸೇನೆ!!

ಗಡಿ ಪ್ರದೇಶದಲ್ಲಿ ಪಾಕ್ ಸೈನಿಕರನ್ನು ಬಗ್ಗು ಬಡಿಯಲು ಪ್ರಧಾನಿ ನರೇಂದ್ರ ಮೋದಿ ಸರಕಾರ ಮತ್ತೊಂದು ಬೃಹತ್ ಮಟ್ಟದ ಯೋಜನೆಯನ್ನು ಮಾಡಿದೆ!! ಈ ಪಾಪಿ ಪಾಕಿಸ್ಥಾನವನ್ನು ಭಾರತೀಯ ಸೈನಿಕರು ಕೆರಳಿಸದೇ ಇದ್ದರೂ ಮತ್ತೆ ಮತ್ತೆ ತನ್ನ ನರಿಬುದ್ಧಿಯನ್ನು ತೋರಿಸಿ ಭಾರತೀಯ ಯೋಧರನ್ನು ಕೆಣಕುತ್ತನೇ ಇರುತ್ತಾರೆ!! ಮುಸ್ಲಿಮರ ಪವಿತ್ರ ಮಾಸವಾದ ರಂಜಾನ್ ನಿಮಿತ್ತ ಕಾಶ್ಮೀರದಲ್ಲಿ ಭಾರತೀಯ ಸೇನೆ ಕೈಗೊಳ್ಳುತ್ತಿದ್ದ ಕಾರ್ಯಾಚರಣೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿತ್ತು. ಮುಸ್ಲಿಮರು ನೆಮ್ಮದಿಯಿಂದ ಹಬ್ಬ ಆಚರಿಸಲು ಅವಕಾಶ ನೀಡಿತ್ತು. ಆದರೆ ಪಾಕಿಸ್ತಾನ ಮಾತ್ರ ಭಾರತೀಯ ಯೋಧ ಔರಂಗಜೇಬನ್ನು ರಂಜಾನ್ ಸಮಯದಲ್ಲಿಯೇ ಅಪಹರಿಸಿ ಕೊಲೆ ಮಾಡಿತ್ತು!! ಇದಕ್ಕೆ ಇಡೀ ದೇಶವೇ ಆಕ್ರೋಶ ವ್ಯಕ್ತಪಡಿಸಿತ್ತು!! ಇದೀಗ ಹಿಂದೂಗಳಲ್ಲದೆ ಯೋಧರ ಸಾವಿಗೆ ಮುಸ್ಲಿಮರೂ ಕೂಡಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ!! ಇದಕ್ಕೆ ಪ್ರತೀಕಾರವನ್ನು ತೀರಿಸದೆ ಮಾತ್ರ ನಮ್ಮ ಭಾರತೀಯ ಸೇನೆ ಬಿಡುವವರಲ್ಲ!! ಭಾರತೀಯರೇ ಹಾಗೆ… ತಾವು ಯಾರನ್ನು ಕೆರಳಿಸಲ್ಲ ಕೆರಳಿಸಿದರೆ ಮತ್ತೆ ಅವರಿಗೆ ಪ್ರತ್ಯುತ್ತರ ತೀರಿಸದೆ ಬಿಡಲ್ಲ!! ರಂಜಾನ್ ನಿಮಿತ್ತ ಸ್ಥಗಿತವಾಗಿದ್ದ ಕಾರ್ಯಾಚರಣೆ ಈಗಾಗಲೇ ಆರಂಭಿಸಿದ್ದು ಮೊದಲೇ ದಿನವೇ ನಾಲ್ವರ ತಲೆ ಉರುಳಿಸಿ ತಮ್ಮ ಯೋಧನ ಸಾವಿಗೆ ಪ್ರತೀಕಾರ ತೀರಿಸಿಯೇ ಬಿಟ್ಟಿದ್ದರು!! ಇದೀಗ ಮತ್ತೆ ಗಡಿಯಲ್ಲಿ ಉಗ್ರರ ಅಟ್ಟಹಾಸವನ್ನು ಮುರಿಯಲು ಮೋದಿ ಸರಕಾರ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದೆ!!

ಸುಮಾರು 400 ವೆಚ್ಚದಲ್ಲಿ 14 ಸಾವಿರ ಬಂಕರ್‍ಗಳ ನಿರ್ಮಾಣ!!

ನಿರಂತರವಾಗಿ ಗಡಿ ನಿಯಮ ಉಲ್ಲಂಘಿಸುವ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಪಾಕಿಸ್ತಾನ ಮತ್ತು ಭಯೋತ್ಪಾದಕರಿಗೆ ಏಕಕಾಲಕ್ಕೆ ಬಿಸಿ ಮುಟ್ಟಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಭಾರತ ಪಾಕಿಸ್ತಾನದ ಗಡಿಯಲ್ಲಿ 14 ಸಾವಿರ ಬಂಕರ್ ಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಪಾಕಿಸ್ತಾನದ ಗಡಿಯಲ್ಲಿರುವ ಗ್ರಾಮಗಳಲ್ಲಿರುವ ಸಾಮಾನ್ಯರ ಪ್ರಾಣ ರಕ್ಷಣೆಯ ಜೊತೆಗೆ ಗಡಿಯಲ್ಲಿ ಅಕ್ರಮವಾಗಿ ನುಸುಳುವ ಭಯೋತ್ಪಾದಕರನ್ನು ನಿಯಂತ್ರಿಸುವುದು ಮತ್ತು ವಿನಾಕಾರಣ ಅಪ್ರಚೋದಿತ ದಾಳಿ ಮಾಡುವ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುವುದು ಬಂಕರ್‍ಗಳ ನಿರ್ಮಾಣದ ಉದ್ದೇಶವಾಗಿದೆ.

ಕೇಂದ್ರ ಲೋಕೋಪಯೋಗಿ ಇಲಾಖೆ ಸಚಿವ ನಯೀಮ್ ಅಖ್ತರ್ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಯಲ್ಲಿ, `ಅಂತಾರಾಷ್ಟ್ರೀಯ ಗಡಿ’ ಮತ್ತು `ಗಡಿ ನಿಯಂತ್ರಣ ರೇಖೆ’ಯ ಬಳಿ ಸುರಕ್ಷತಾ ಬಂಕರ್‍ಗಳು ಹಾಗೂ ಪುನರ್ವಸತಿ ಕೇಂದ್ರಗಳ ನಿರ್ಮಾಣ ಕಾಮಗಾರಿ ಬಗ್ಗೆ ಚರ್ಚಿಸಲಾಗಿದ್ದು, ಸುಮಾರು 400 ಕೋಟಿ ರೂ. ವೆಚ್ಚದಲ್ಲಿ 13,029 ವೈಯಕ್ತಿಕ ಬಂಕರ್‍ಗಳು ಮತ್ತು 1,431 ಸಮುದಾಯ ಬಂಕರ್‍ಗಳನ್ನು ನಿರ್ಮಿಸಲಾಗುವುದು ಎಂದು ರಕ್ಷಣಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ಪೂಂಚ್ ಮತ್ತು ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ 7,298 ಬಂಕರ್ ನಿರ್ಮಿಸಲಾಗುತ್ತಿದೆ. ಜಮ್ಮು, ಕಠುವಾ ಮತ್ತು ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ 7,162 ಅಂಡರ್ ಗ್ರೌಂಡ್ ಬಂಕರ್ ನಿರ್ಮಿಸಲು ನಿರ್ಧರಿಸಲಾಗಿದೆ. 160 ಚದರ ಅಡಿಗಳ ವೈಯಕ್ತಿಕ ಬಂಕರ್‍ನಲ್ಲಿ 8 ಜನ ಮತ್ತು 800 ಚದರ ಅಡಿಯ ಸಮುದಾಯ ಬಂಕರ್‍ನಲ್ಲಿ 40 ಯೋಧರು ಅಡಗಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಸ್ನಿಪರ್ ಪಡೆಗಳ ಮೂಲಕ ಉಗ್ರರ ಸೊಕ್ಕು ಮುರಿಯಲು ಮುಂದಾದ ಭಾರತೀಯ ಸೇನೆ!!

ಒಂದು ಕಡೆಯಲ್ಲಿ ಬಂಕರ್ ನಿರ್ಮಾಣಕ್ಕೆ ಸಿದ್ಧತೆ ನಡೆಸಿದರೆ ಮತ್ತೊಂದು ಕಡೆಯಲ್ಲಿ ಗಡಿಯಲ್ಲಿ ಜಮ್ಮು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ಒಳನುಸುಳಲು ಯತ್ನಿಸುವ ಪಾಕಿಸ್ತಾನಿ ಉಗ್ರರು, ಅವರಿಗೆ ಸಹಾಯ ಮಾಡುವ ಪಾಕಿಸ್ತಾನ ಸೈನಿಕರಿಗೆ ತಿರುಗೇಟು ನೀಡಲು ಭಾರತದ ಗಡಿ ಭದ್ರತಾ ಪಡೆಯ ಸ್ನಿಪರ್ ಪಡೆ ಕಾರ್ಯನಿರತವಾಗಿದೆ. ಅಮರನಾಥ ಯಾತ್ರೆ ವೇಳೆ ದಾಳಿ ನಡೆಸುವ ಉದ್ದೇಶದಿಂದ ನೂರಾರು ಉಗ್ರರು ಗಡಿಯಲ್ಲಿ ನುಸುಳಲು ಸಜ್ಜಾಗಿದ್ದಾರೆ ಎಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಸ್ನಿಪರ್ ಪಡೆಯನ್ನು ಗಡಿಯ ಹಲವು ಭಾಗಗಳಲ್ಲಿ ನಿಯೋಜಿಸಲಾಗಿದೆ ಪದೇ ಪದೇ ಉಪಟಳವನ್ನು ಮಾಡುವ ಪಾಕ್‍ಗೆ ಮತ್ತೊಮ್ಮೆ ಸೊಕ್ಕು ಮುರಿಯಲು ನಮ್ಮ ಸೇನೆ ತಯಾರಾಗಿ ನಿಂತಿದೆ!! ಆಯಾ ವಾತಾವರಣಕ್ಕೆ ತಕ್ಕಂತೆ ವೇಷ ಭೂಷಣ ಧರಿಸಿ ಆ ವಾತಾವರಣದಲ್ಲೇ ವಿಲೀನರಾಗಿದ್ದುಕೊಂಡು ಶತ್ರುಪಡೆಯ ಚಲನವಲನ ಗಮನಿಸುತ್ತ ದಾಳಿ ನಡೆಸುವಂತಹ ಪಡೆ!! ಗಡಿಯಲ್ಲಿ ಅರಣ್ಯ, ಮಂಜಿನ ಗುಡ್ಡಗಳು ಸೇರಿ ಆಯಾ ವಾತಾವರಣಕ್ಕೆ ತಕ್ಕಂತೆ ಸೈನಿಕರಿಗೆ ವೇಷಭೂಷಣಗಳನ್ನು ಸಿದ್ಧಪಡಿಸಿ, ಆ ವಾತಾವರಣದಲ್ಲಿ ಸೈನಿಕರನ್ನು ವಿಲೀನಗೊಳಿಸಿ, ಶತ್ರುಗಳ ವಿರುದ್ಧ ಹೋರಾಡುವುದೇ ಸ್ನಿಪರ್ ಪಡೆಯು ಕಾರ್ಯ ನಿರ್ವಹಿಸುತ್ತದೆ!! ಸ್ನಿಪರ್ ಪಡೆಯ ಸದಸ್ಯರಿಗೆ ಮಧ್ಯಪ್ರದೇಶದ ಇಂದೋರ್ನಲ್ಲಿರುವ ಸೆಂಟ್ರಲ್ ಸ್ಕೂಲ್ ಆಫ್ ವೆಪನ್ ಆಂಡ್ ಟ್ಯಾಕ್ಟಿಕ್ಸ್ ಕೇಂದ್ರದಲ್ಲಿ ಕಠಿಣ ತರಬೇತಿ ನೀಡಲಾಗುತ್ತದೆ. ತರಬೇತಿಯಲ್ಲಿ ಭಾಗಿಯಾದ ನೂರು ಯೋಧರಲ್ಲಿ ಒಬ್ಬರನ್ನು ಮಾತ್ರ ಸ್ನಿಪರ್ ಪಡೆಗೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಯೋಧರಿಗೆ ಸುಮಾರು 60 ದಿನಗಳ ಕಾಲ ಪುನಃ ತರಬೇತಿ ನೀಡಲಾಗುತ್ತದೆ.

ಉಗ್ರರು ಒಳನುಸುಳುವ ಪ್ರದೇಶವನ್ನು ಮೊದಲು ಗುರುತಿಸಲಾಗುತ್ತದೆ. ಈ ಪ್ರದೇಶದ ಮೇಲೆ ನಿಗಾ ಇಡಲು ಸಮೀಪದಲ್ಲೇ ಇನ್ನೊಂದು ಜಾಗವನ್ನು ಸ್ನಿಪರ್ ಪಡೆ ಆಯ್ಕೆಮಾಡಿಕೊಳ್ಳುತ್ತದೆ. ಈ ಜಾಗದಲ್ಲಿ ಅವಿತುಕೊಂಡು ಉಗ್ರರ ಚಲನವಲನ ಮೇಲೆ ಕಣ್ಣಿಡಲಾಗುತ್ತದೆ. ಅಗತ್ಯಬಿದ್ದಲ್ಲಿ ಶತ್ರು ದೇಶದ ಗಡಿಯನ್ನೂ ಪ್ರವೇಶಿಸಿ ಅಲ್ಲಿನ ಸೈನಿಕರ ಕಾರ್ಯದ ಮೇಲೆ ನಿಗಾ ಇಡಲಾಗುತ್ತದೆ. ಸ್ನಿಪರ್ ಪಡೆ ಒಮ್ಮೆ ಇಟ್ಟ ಹೆಜ್ಜೆಯನ್ನು ಹಿಂದಿಡುವುದಿಲ್ಲ. ಯಾವುದೇ ವಾತಾವರಣ, ಸ್ಥಳದಲ್ಲಾದರೂ ಈ ಪಡೆ ಕಾರ್ಯ ನಿರ್ವಹಿಸುತ್ತದೆ. ಹಿಮಾಚ್ಛಾದಿತ ಪ್ರದೇಶದಿಂದ ಹಿಡಿದು ದುರ್ಗಮ ಕಣಿವೆ ಪ್ರದೇಶದಲ್ಲೂ ಇವರು ಕಾರ್ಯನಿರ್ವಹಿಸುತ್ತಾರೆ.

ಹೀಗಾಗಿ ಭಾರತವೂ ಗಡಿಯಲ್ಲಿ ಸ್ನಿಪರ್ಗಳನ್ನು ಹೆಚ್ಚಿನ ಸಂಖ್ಯೆಗಳಲ್ಲಿ ನಿಯೋಜಿಸಿದೆ. ಎಂಥಹ ಸಂದರ್ಭ ಬಂದರೂ, ಎಂತಹ ವಾತಾವರಣದಲ್ಲೂ ಕಾರ್ಯನಿರ್ವಹಿಸುವ ಸ್ನಿಪರ್ ಪಡೆಯು ಹಿಮಚ್ಛಾದಿತ ಪ್ರದೇಶದಿಂದ ಹಿಡಿದು ದುರ್ಗಮವಾದ ಅರಣ್ಯ, ಗುಡ್ಡ ಕಾಡುಗಳಲ್ಲೂ ಕಾರ್ಯ ನಿರ್ವಹಿಸುವ ಕ್ಷಮತೆಯನ್ನು ಹೊಂದಿರುತ್ತದೆ. ಭಯೋತ್ಪಾದಕರು ಒಳನುಸುಳುವ ಪ್ರದೇಶವನ್ನು ಮೊದಲು ಗುರುತಿಸಿ, ಆ ಪ್ರದೇಶದ ಮೇಲೆ ನಿಗಾ ಇಡಲು ಅದರ ಸಮೀಪದಲ್ಲಿ ಇನ್ನೊಂದು ಸ್ಥಳವನ್ನು ಗುರುತಿಸಿ, ಅಲ್ಲಿಯೇ ಅಡಗಿ ಕುಳಿತು ಕಾರ್ಯಾಚರಣೆ ನಡೆಸಲಾಗುತ್ತದೆ. ಈ ಪಡೆಯು ಅಗತ್ಯಬಿದ್ದರೇ ಶತ್ರು ರಾಷ್ಟ್ರವನ್ನು ಪ್ರವೇಶಿಸಿ ವಿಶೇಷ ಕಾರ್ಯಾಚರಣೆಯನ್ನು ನಡೆಸುತ್ತದೆ. ಕಾಶ್ಮೀರದ ಸುಂದರ್ಬನಿ ಪ್ರದೇಶದಲ್ಲಿ ಇತ್ತೀಚೆಗೆ ಬಿಎಸ್‍ಎಫ್ ಸಬ್‍ಇನ್ಸ್‍ಪೆಕ್ಟರ್ ಎಸ್.ಎನ್. ಯಾದವ್ ಹಾಗೂ ಕಾನ್‍ಸ್ಟೆಬಲ್ ವಿ. ಪಾಂಡೆ ಎಂಬುವವರನ್ನು ಪಾಕಿಸ್ತಾನ ಸೇನೆಯ ಸ್ನಿಪರ್ಗಳು ಹತ್ಯೆ ಗೈದಿದ್ದರು. ಇನ್ನು ಏನಾದರೂ ಪಾಕಿಸ್ತಾನದ ಗಡಿ ದಾಟಿ ಬರಲು ಪ್ರಯತ್ನಿಸಿದಲ್ಲಿ ಅವರ ಕಾಲು ಮುರಿಯಲು ನಮ್ಮ ಸೈನಿಕರು ರೆಡಿಯಾಗಿ ಗಡಿಯಲ್ಲಿ ಕಾಯುತ್ತಿರುತ್ತಾರೆ!! ಪಾಕಿಗಳು ಗಡಿದಾಟಲು ಪ್ರಯತ್ನಿಸಿದರೆ ಯಮ ಲೋಕಕ್ಕೆ ಹೋಗುವುದು ಅಂತು ಗ್ಯಾರಂಟಿ!!

source: vijayavani

  • ಪವಿತ್ರ
Tags

Related Articles

Close