ಪ್ರಚಲಿತ

15 ಬಿಲಿಯನ್ ಹಣ, ವಜ್ರಗಳು ಹಾಗೂ ಒಡವೆಗಳು!! ಭಾರತದ ಪ್ರಭಾವೀ ಮಹಿಳಾ ರಾಜಕಾರಣಿಯ ಅತಿಭಯಂಕರ ಮಾಫಿಯಾವೊಂದು ಇವತ್ತು ಅಂತ್ಯ ಕಂಡಿದೆ!!

ಈ ಭ್ರಷ್ಟನೆಂಬುವವನು ಬಹುಷಃ ಈಗಿನ ಭಾರತದಲ್ಲಿ ಎಲ್ಲಿಯೂ ಅಡಗಿ ಕೂರಲು ಸಾಧ್ಯವೇ ಇಲ್ಲ ಬಿಡಿ! ಮೋದಿ ಸರಕಾರವೂ ಸಹ ಇದನ್ನು ಸಾಬೀತುಪಡಿಸಿದೆ.
ಎಲ್ಲದಕ್ಕಿಂತ ಹೆಚ್ಚಾಗಿ, ಇವತ್ತು ಕೇವಲ ಭಯದ ತಳಹದಿಯ ಮೇಲೆ ಸಾಮ್ರಾಜ್ಯವನ್ನಾಳಿದ್ದ ಮಹಿಳೆಯ ಅಧಿಕಾರವೊಂದು ಅಂತ್ಯಗೊಂಡಿದೆ! ಆಕೆಗೆ, ವಿರೋಧ
ಪಕ್ಷವನ್ನು ಸದ್ದಿಲ್ಲದೇ ನಿಶ್ಯಬ್ದವಾಗಿಸುವ ಕಲೆಯೊಂದು ಆಕೆಗೇ ಇವತ್ತು ಮುಳುವಾಗಿದೆಯಷ್ಟೇ!

ಶಶಿಕಲಾ!!!

ಇದೊಂದೇ ಹೆಸರು ಇತ್ತೀಚೆಗೆ ಬಹಳಷ್ಟು ಸದ್ದುಮಾಡುತ್ತಿದೆ! ಮಾಜಿ ಮುಖ್ಯಮಂತ್ರಿಯಾಗಿದ್ದ ಜಯಲಲಿತಾರ ಸಾವಾದ ಮೇಲಂತೂ, ‘ಶಶಿಕಲಾ’ ಎಂಬ ಅತಿಬುದ್ಧಿವಂತೆಯ ಪರಿಚಯವಾಗಿತ್ತು ಪ್ರಜೆಗಳಿಗೆ! ತಮಿಳುನಾಡಿನ ಮುಖ್ಯಮಂತ್ರಿಯ ಸ್ಥಾನಕ್ಕೆ ಸ್ಪರ್ಧಿಸಲಿದ್ದ ಶಶಿಕಲಾಳ ದುರಾಸೆಯೊಂದನ್ನು ನೀರುಪಾಲು ಮಾಡಿದ್ದು ಭಾರತದ ನ್ಯಾಯಾಂಗ ವ್ಯವಸ್ಥೆ! ಬಿಡಿ! ಶಶಿಕಲಾರನ್ನು ಬೇನಾಮಿ ಆಸ್ತಿಯ ವಿಚಾರವಾಗಿ ಜೈಲಿಗಟ್ಟಿದರೂ ಸಹ, ಕರ್ನಾಟಕ ಪೋಲಿಸರಿಂದ ಆಕೆಗಲ್ಲಿಯೂ ರಾಜಾತಿಥ್ಯವೇ ದೊರಕಿ ಸುದ್ದಿಯಾಗಿತ್ತು. ಅದಕ್ಕಿಂತ ಅಚ್ಚರಿಯೆಂದರೆ, ಬುರ್ಖಾ ತೊಟ್ಟು ಆರಾಮಾಗಿಯೇ ಜೈಲಿನಿಂದ ಹೊರ ಹೋಗಿ ಬೆಂಗಳೂರಿನ ಬೀದಿಗಳಲ್ಲಿ ಸ್ವಚ್ಛಂದವಾಗಿ ತಿರುಗಿ ಬಂದಿದ್ದರೂ ಶಶಿಕಲಾರನ್ನು ಯಾರೂ ಪ್ರಶ್ನಿಸಲಿಲ್ಲ! ಹಾಗಿದ್ದಾಗಲೇ, ಆಕೆಯ ಪವರ್ರು ಎಷ್ಟಿರಬಹುದೆಂದು ಊಹಿಸಿ!

ಆಘಾತಕಾರಿಯಾದ ಒಂದಷ್ಟು ವಿಷಯಗಳೇನು ಗೊತ್ತೇ?!

1. ಆಕೆಯ ಹೆಸರಲ್ಲಿದ್ದ 16 ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡರು ತೆರಿಗೆ ಅಧಿಕಾರಿಗಳು!
2. ಅದೆಷ್ಟೋ ವಜ್ರದ ಒಡವೆಗಳನ್ನು ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡರೂ, ಇನ್ನೂ ಅದರ ಬೆಲೆ ಯನ್ನು ಲೆಕ್ಕಹಾಕಿಲ್ಲ. ಆದರೆ, ಅದಷ್ಟೂ ಒಡವೆಗಳ ಬೆಲೆ ದೊಡ್ಡ ಮೊತ್ತವನ್ನೇ ಹೊಂದಿದೆ.
3. ದಾಖಲೆಗಳ ಪ್ರಕಾರ, ನೋಟು ನಿಷೇಧವಾದಾಗ ದೊಡ್ಡಮೊತ್ತದ ಅದೆಷ್ಟೋ ಕಪ್ಪು ಹಣಗಳು ಮಿಡಾಸ್ ನಲ್ಲಿ ಚಿನ್ನವಾಗಿ ಮಾರ್ಪಾಟಾಗಿದೆ!
4. ಅಕ್ರಮವಾಗಿ 1,430 ಕೋಟಿ ಹಣವನ್ನು ರಿಯಲ್ ಎಸ್ಟೇಟ್ ಗೆ ಹೂಡಲಾಗಿದೆ.
5. ಒಟ್ಟಾರೆಯಾಗಿ ಶಶಿಕಲಾಗೆ ಸೇರಿದ 187 ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ.
6. ಶೆಲ್ ಸಂಸ್ಥೆಗಳು ಮತ್ತು ಅನುಮಾನಾಸ್ಪದವಾದ ಹೂಡಿಕೆಗಳು ದಾಳಿಯ ಪ್ರಮುಖ ಗುರಿಗಳಾಗಿದ್ದವು.

ತಮಿಳುನಾಡಿನ ಖಾಲಿ ಹಾಸ್ಟೆಲ್ಲು ರೂಮುಗಳಲ್ಲಿ ವಜ್ರಗಳು!

ಪೋಸ್ ಗಾರ್ಡನ್ ಆಸ್ತಿಯ ಮೇಲಾದ ದಾಳಿಯೊಂದು. . . .

“ನಾವಿನ್ನೂ ಪೂರ್ತಿಯಾಗಿ Poes Garden ಆಸ್ತಿಗಳ ಮೇಲೆ ದಾಳಿ ನಡೆಸಿಲ್ಲ. ರಾತ್ರಿ 9 ಕ್ಕೆ ಪ್ರಾರಂಭವಾದ ನಮ್ಮ ದಾಳಿ ಕೇವಲ ಶಶಿಕಲಾ ಬಳಸುತ್ತಿದ್ದ ಕೋಣೆ,
ಕಂಪ್ಯೂಟರ್ ಹಾಗೂ ರೆಕಾರ್ಡ್ಸ್ ರೂಮ್ ಗಳ ಮೇಲಷ್ಟೇ ಗಮನ ಹರಿಸಿತ್ತು.” ಎಂದು ಅಧಕಾರಿ ಹೇಳಿದ್ದರು. ಈವರೆಗೂ, ಒಂದು Laptop, ನಾಲ್ಕು ಪೆನ್ ಡ್ರೈವ್ಸ್,
ಮತ್ತು ಒಂದು ಡೆಸ್ಕ್ ಟಾಪ್ ಗಳನ್ನಷ್ಟೇ ವಶಪಡಿಸಿಕೊಂಡಿದ್ದಾರೆ ಅಧಿಕಾರಿಗಳು.

ಕೆಲವು ದಿನಗಳ ಹಿಂದೆ, 1800 ತೆರಿಗೆ ಅಧಿಕಾರಿಗಳು ಶಶಿಕಲಾಗೆ ಸೇರಿದ 187 ಆಸ್ತಿಗಳ ಮೇಲೆ ದಾಳಿ ನಡೆಸಿದ್ದಾರೆ! ಹಣದ ನೋಟುಗಳನ್ನು ಹಾಗೂ 1,430 ಕೋಟಿ ರೂ ಅಕ್ರಮ ಹೂಡಿಕೆಗೆ ಸಂಬಂಧಿಸಿದಂತೆ ಇದ್ದ ದಾಖಲೆಗಳನ್ನು ಪತ್ತೆ ಹಚ್ಚಲಾಗಿದೆ! ವಶಪಡಿಸಿಕೊಳ್ಳಲಾದ ದಾಖಲೆಗಳು ಹೇಗೆ ಶಶಿಕಲಾ ಕಪ್ಪುಹಣವನ್ನು ಬಿಳಿಹಣವನ್ನಾಗಿಸಲು ಶೆಲ್ ಕಂಪೆನಿಗಳನ್ನು ಬಳಸಿಕೊಂಡಿದ್ದಳೆಂದು ಬಹಿರಂಗಪಡಿಸಿದೆ! ಯಾವತ್ತೂ ಸಕ್ರಿಯವಾಗದಿದ್ದ ಶೆಲ್ ಕಂಪೆನಿಗಳು ನೋಟು ನಿಷೇಧದ ನಂತರ ಸಕ್ರಿಯವಾದದ್ದಲ್ಲದೇ, ಇದ್ದಕ್ಕಿದ್ದಂತೆ ಬ್ಯಾಂಕ್ ಖಾತೆಗಳಲ್ಲಿ ಹಣ ವರ್ಗಾವಣೆಯಾದ ಪರಿ ತೆರಿಗೆ ಅಧಿಕಾರಿಗಳಿಗೆ ಅನುಮಾನ ಹುಟ್ಟಿಸಿತ್ತು.

ಶಶಿಕಲಾ ಸಂಬಂಧಿಕರ ಕಾಲೇಜಿನಲ್ಲಿ ದೊರಕಿತ್ತು ರಾಶಿಗಟ್ಟಲೇ ಹಣ ಹಾಗೂ ವಜ್ರಗಳು!

ತೆರಿಗೆ ಅಧಿಕಾರಿಗಳು, “ಶಶಿಕಲಾ ಸಂಬಂಧಿಯ ಕಾಲೇಜಿನಲ್ಲಿ 67 ಕೋಟಿ ರೂ ಹಣದ ನೋಟುಗಳು, ವಜ್ರಗಳು, ಒಡವೆಗಳನ್ನು ಪತ್ತೆಹಚ್ಚಿದ್ದನ್ನು” ಬಹಿರಂಗಗೊಳಿಸಿದ್ದರು.

“ಹಣವನ್ನು ವಶಪಡಿಸಿಕೊಂಡು ದಾಖಲೆ ನೀಡಿದ್ದೇವೆ. ಅದೇ ರೀತಿ, ವಜ್ರಗಳನ್ನು ಹಾಗೂ ಒಡವೆಗಳನ್ನು ವಶಪಡಿಸಿಕೊಂಡರೂ ಸಹ, ಅದರ ಬೆಲೆಯನ್ನು ಇನ್ನೂ ಲೆಕ್ಕ ಹಾಕಿಲ್ಲ. ಸಂಬಂಧಪಟ್ಟ ಮೇಲಧಿಕಾರಿಗಳ ಒಪ್ಪಿಗೆಯ ಮೇರೆಗೆ, ಅವನ್ನಷ್ಟೂ ಲೆಕ್ಕ ಹಾಕಿ ದಾಖಲೆ ನೀಡಲಾಗುವುದು” ಎಂದು ತೆರಿಗೆ ಅಧಿಕಾರಿಗಳು ಹೇಳಿದ‌್ದಾರೆ.

https://twitter.com/mageshbabuj/status/930101637556838400

ತಮಿಳುನಾಡಿನಲ್ಲಿ ಅಷ್ಟೆಲ್ಲ ಅಕ್ರಮ ಆಸ್ತಿಗಳನ್ನು ಹೊಂದಲು ಹೇಗೆ ಸಾಧ್ಯವಾಯಿತು ಗೊತ್ತೇ?!

ಆಕೆ ಮೊದಲು ವೀಡಿಯೋ ಟೇಪ್ ಅಂಗಡಿಯೊಂದನ್ನು ನಡೆಸುತ್ತಿದ್ದವಳು! ಜಯಲಲಿತಾ ಭಾಗವಹಿಸುವ ಪ್ರತಿ ಮದುವೆಯ ವೀಡಿಯೋಗಳನ್ನು ಮಾಡುತ್ತಿದ್ದವಳು. ನಂತರ, ಜಯಲಲಿತಾರ ನಂಬಿಕೆಯನ್ನು ಗಳಿಸಿಕೊಂಡ ಶಶಿಕಲಾ, ಕೊನೆಗೆ ದುರುಪಯೋಗವನ್ನೂ ಮಾಡಿಕೊಂಡಳು. ಹೇಳಬೇಕೆಂದರೆ, ಹಿರಿಯ IPS, IAS ಅಧಿಕಾರಿಗಳೂ ಕೂಡ ಮನ್ನಾರ್ ಗುಡಿ ಮಾಫಿಯಾ ದಂತಹ ಹಗರಣಗಳನ್ನು ವಿರೋಧಿಸದಷ್ಟು ಶಶಿಕಲಾ ತನ್ನ ಅಧಿಕಾರವನ್ನು ವ್ಯಾಪಿಸಿಬಿಟ್ಟಿದ್ದಳಷ್ಟೇ!

ಆದರೆ, ಕೊನೆಗೆ ಸರ್ವೋಚ್ಛ ನ್ಯಾಯಾಲಯವೇ ಶಶಿಕಲಾಳನ್ನು ತಪ್ಪಿತಸ್ಥೆಯೆಂದು ತೀರ್ಪು ನೀಡಿ, ಭ್ರಷ್ಟಾಚಾರದ ಆರೋಪದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿತು! “Representation of the People Act ಪ್ರಕಾರ, ಆಕೆ ಬಿಡುಗಡೆಯಾಗುವ ದಿನದಿಂದ ಮುಂದಿನ ಆರು ವರ್ಷಗಳು ಆಕೆ ಮುಖ್ಯಮಂತ್ರಿಯಾಗುವ ಹಾಗಿಲ್ಲ.” ಎಂದು ಲಿವ್ ಮಿಂಟ್ ವರದಿ ಮಾಡಿದೆ!

ಶಶಿಕಲಾ ಹಾಗೂ ಜಯಲಲಿತಾರ ಭ್ರಷ್ಟಾಚಾರವನ್ನು ಮೊದಲು ಬಯಲಿಗೆಳೆದದ್ದು ಸುಬ್ರಹ್ಮಣಿಯನ್ ಸ್ವಾಮಿ! 1991 ರಿಂದ 1996 ರವರೆಗೆ ಜಯಲಲಿತಾ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಮಾಡಿದ ಭ್ರಷ್ಟಾಚಾರಗಳ ಬಗ್ಗೆ ಸುಬ್ರಹ್ಮಣಿಯನ್ ಸ್ವಾಮಿ ಮೊಕದ್ದಮೆಯನ್ನು ಹೂಡಿದ್ದರು. ಆ ಸಮಯದಲ್ಲಿ ಜಯಲಲಿತಾ ಅಕ್ರಮವಾಗಿ ಗಳಿಸಿದ್ದ ಆಸ್ತಿಯ ಮೊತ್ತ 66.65 ಕೋಟಿ ರೂ!

ಕೊನೆಗೂ, ತಮಿಳುನಾಡಿನಲ್ಲಿ ಅಕ್ರಮವಾಗಿಯೇ ಆಡಳಿತ ನಡೆಸಿದ್ದ ಮಹಿಳಾ ನಾಯಕರಿಬ್ಬರ ಅಂತ್ಯವೂ ಒಂದೊಂದು ತೆರನಾಗಿದೆ ಅಷ್ಟೇ.

– ಪೃಥು ಅಗ್ನಿಹೋತ್ರಿ

Tags

Related Articles

Close