ಅಂಕಣಇತಿಹಾಸದೇಶ

1857 ರಲ್ಲಷ್ಟೇ ಸಿಪಾಯಿ ದಂಗೆಯಾಗಿತ್ತಾ? ಎರಡನೆ ಸಿಪಾಯಿ ದಂಗೆ ಅಥವ RIN Mutiny ಬಗ್ಗೆ ಎಷ್ಟು ಜನರಿಗೆ ಗೊತ್ತು?!

1857 ರಲ್ಲಿ ಮಂಗಲ್ ಪಾಂಡೆ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ತಿರುಗಿಬಿದ್ದಿದ್ದ ಭಾರತೀಯ ಸೈನ್ಯದ ಬಗ್ಗೆ ತಮಗೆಲ್ಲರಿಗೂ ಗೊತ್ತೇ ಇರುತ್ತೆ. ಬ್ರಿಟೀಷರನ್ನ ಬಗ್ಗುಬಡಿದು ದೇಶ ಬಿಟ್ಟೋಡಿಸಲು ನಡೆದ ಆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ಬ್ರಿಟೀಷರೇನೋ ತಹಬಂದಿಗೆ ತಂದು ಬ್ರಿಟಿಷ್ ಸೈನ್ಯದಲ್ಲಿದ್ದುಕೊಂಡು ದಂಗೆಯೆಬ್ಬಿಸಿದ ಅನೇಕ ಭಾರತೀಯ ಸೈನಿಕರನ್ನ ಕಂಡಲ್ಲಿ ಗುಂಡಿಟ್ಟು ಕೊಂದರು.

ಆಗ ಭಾರತೀಯರೆಂದರೆ ಯಾರು ಅವರ ಸಾಮರ್ಥ್ಯವೆಷ್ಟು ಅನ್ನೋದು ಬ್ರಿಟಿಷರಿಗೆ ಅರ್ಥವಾಗಿತ್ತು. ಮಂಗಲ್ ಪಾಂಡೆ ನೇತೃತ್ವ ವಹಿಸಿದ್ದ ಆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಬ್ರಿಟಿಷರ ನಿದ್ದೆಗೆಡಿಸಿತ್ತನ್ನೋದಂತೂ ಸುಳ್ಳಲ್ಲ.

ಆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ನಮಗೆಲ್ಲ ಗೊತ್ತಿರುವ ವಿಚಾರವೇ. ಆದರೆ ಎರಡನೆ ಸಿಪಾಯಿ ದಂಗೆ ಅಥವ *RIN Mutiny* ಬಗ್ಗೆ ಎಷ್ಟು ಜನರಿಗೆ ಗೊತ್ತು? ಈ RIN Mutiny ನಡೆದಿತ್ತು ಎಂಬುವುದೂ ಅನೇಕ ಭಾರತೀಯರಿಗೆ ಇಂದಿಗೂ ಗೊತ್ತಿಲ್ಲ.

ಭಾರತ ಸ್ವಾತಂತ್ರ್ಯವಾದ ನಂತರ ಭಾರತಕ್ಕೆ ಭೇಟಿ ನೀಡಿದ ಬ್ರಿಟನ್ ಪ್ರಧಾನಿಯಾಗಿದ್ದ *ಕ್ಲೆಮೆಂಟ್ ಆ್ಯಟ್ಲಿ* ಪಶ್ಚಿಮ ಬಂಗಾಳದ ರಾಜ್ಯಪಾಲ *ಚಕ್ರವರ್ತಿ*ಯವರನ್ನ ಭೇಟಿಯಾದ ಸಂದರ್ಭದಲ್ಲಿ ಚಕ್ರವರ್ತಿಯವರು ಆ್ಯಟ್ಲಿಯನ್ನ ಕುರಿತು ಒಂದು ಪ್ರಶ್ನೆಯನ್ನ ಮುಂದಿಟ್ಟಿದ್ದರು

*ಚಕ್ರವರ್ತಿ* : “ಗಾಂಧಿಯವರು 1942 ರಲ್ಲಿ ಕರೆ ಕೊಟ್ಟಿದ್ದ ಕ್ವಿಟ್ ಇಂಡಿಯಾ ಚಳುವಳಿ 1947ಕ್ಕಿಂತ ಮುಂಚೆಯೇ ಪ್ರಾಯೋಗಿಕವಾಗಿ ಸೋತು ಸತ್ತು ಹೋಗಿತ್ತು. ಹಾಗಾದ್ರೆ ನೀವು ಭಾರತವನ್ನ ಅಷ್ಟು ತರಾತುರಿಯಲ್ಲಿ ಬಿಟ್ಟು ಹೋಗುವುದರ ಹಿಂದಿನ ಕಾರಣವೇನಿತ್ತು” ಈ ಪ್ರಶ್ನೆಗೆ ಆ್ಯಟ್ಲಿ ಕೊಟ್ಟ ಉತ್ತರ ಕೇಳಿದರೆ ನೀವು ಶಾಕ್ ಆಗ್ತೀರ

*ಆ್ಯಟ್ಲಿ*: “ಸುಭಾಷ್ ಚಂದ್ರ ಬೋಸರ ಆಜಾದ್ ಹಿಂದ್ ಫೌಜ್(Indian National Army) ಬ್ರಿಟಿಷ್ ರಾಜ್ ಕುಗ್ಗಿಸಿಬಿಟ್ಟಿತ್ತು ಹಾಗು ರಾಯಲ್ ಇಂಡಿಯನ್ ನೇವಿ ಯ ದಂಗೆ(RIN Mutiny) ನಮ್ಮನ್ನ ಭಾರತ ಬಿಟ್ಟು ಹೊರಡೋ ಹಾಗೆ ಮಾಡಿದ್ದು”

*ಚಕ್ರವರ್ತಿ*: “ಹಾಗಾದರೆ 1942 ರಲ್ಲಿ ಗಾಂಧಿ ಕರೆಕೊಟ್ಟ ಕ್ವಿಟ್ ಇಂಡಿಯಾ ಚಳುವಳಿಯಿಂದ ನಿಮಗೇನೂ ಎಫೆಕ್ಟ್ ಆಗಲೇ ಇಲ್ವಾ?”

*ಆ್ಯಟ್ಲಿ*: “Minimal”

ಅಂದರೆ ಅತಿ ಚಿಕ್ಕ ಪ್ರಮಾಣದಲ್ಲಿ ಗಾಂಧಿಯ ಕ್ವಿಟ್ ಇಂಡಿಯಾ ಚಳುವಳಿ ನಮಗೆ ಎಫೆಕ್ಟ್ ಮಾಡಿದ್ದು ಅಂತ ಬ್ರಿಟನ್ ಪ್ರಧಾನಿ ಕ್ಲೆಮೆಂಟ್ ಆ್ಯಟ್ಲಿ ಹೇಳಿದ್ದ. ಇದರರ್ಥ ಗಾಂಧಿಯಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದಲ್ಲ, ಭಾರತದ ಸ್ವಾತಂತ್ರ್ಯಕ್ಕೆ ಕಾರಣ ಮಹಾತ್ಮಾ ಸುಭಾಷ್ ಚಂದ್ರ ಬೋಸ್’ರು

ಕ್ಲೆಮೆಂಟ್ ಆ್ಯಟ್ಲಿ ಉಲ್ಲೇಖಿಸಿದ ಸುಭಾಷ್ ಚಂದ್ರ ಬೋಸರ ಇಂಡಿಯನ್ ನ್ಯಾಷನಲ್ ಆರ್ಮಿ(INA) ಬಗ್ಗೆ ನಮಗೆ ಗೊತ್ತು ಆದರೆ ಅದೇನದು RIN Mutiny? *RIN* ಎಂದರೆ ರಾಯಲ್ ಇಂಡಿಯನ್ ನೇವಿ. ಸ್ವತಂತ್ರ ಪೂರ್ವದಲ್ಲಿ ಭಾರತದಲ್ಲಿದ್ದ ಬ್ರಿಟಿಷರ ಸೈನ್ಯವನ್ನ *Royal Indian Army, Royal Indian Navy, Royal Indian Airforce* ಅಂತ ವಿಭಾಗಿಸಿದ್ದರು.

1940 ರಲ್ಲಿ ಸುಭಾಷ್ ಚಂದ್ರ ಬೋಸರು ವಿನಾಯಕ ದಾಮೋದರ್ ಸಾವರ್ಕರ್’ರನ್ನ ಭೇಟಿಯಾಗಿ ಬ್ರಿಟಿಷರನ್ನ ಭಾರತದಿಂದ ಒದ್ದೋಡಿಸೋಕೆ ಸಲಹೆ ಕೇಳಿದ್ದರು. ಸಾವರ್ಕರ್ ಸುಭಾಷರನ್ನ ಕುರಿತು ನಿಮ್ಮ ಪ್ಲ್ಯಾನ್ ಗಳೇನಿವೆ ಹೇಳಿ ಅಂದಾಗ ಸುಭಾಷರು *ನಾನು ಭಾರತದ ಜನರನ್ನೊಗ್ಗೂಡಿಸಿ ಭಾರತದಾದ್ಯಂತ ಇರೋ ಬ್ರಿಟಿಷ್ ಪುತ್ಥಳಿಗಳನ್ನ ಧ್ವಂಸ ಮಾಡಿ ಭಾರತೋಯರಲ್ಲಿ ಸ್ವಾತಂತ್ರ್ಯ ಕಿಚ್ಚು ಹಚ್ಚಬೇಕೆಂದಿದ್ದೇನೆ* ಅಂದಿದ್ದರು.

ಇದಕ್ಕೆ ಮುಗುಳ್ನಗುತ್ತ ಉತ್ತರಿಸಿದ ಸಾವರ್ಕರ್ ಹೇಳ್ತಾರೆ *ಸುಭಾಷ್ ಬಾಬು ನೀವು ಆ ರೀತಿಯಲ್ಲೇನಾದ್ರೂ ಹೋರಾಟ ಮಾಡೋಕೆ ನಿಂತರೆ ಬ್ರಿಟಿಷರರು ನನ್ನಂತೆಯೇ ನಿಮ್ಮನ್ನೂ ಕಾಲಾಪಾನಿ ಸಜೆ ನೀಡಿ ಜೈಲಿಗಟ್ಟಿಬಿಡುತ್ತಾರೆ, ಇದರಿಂದ ಬ್ರಿಟಿಷ್ ಮುಕ್ತ ಭಾರತ ಅಸಾಧ್ಯವಾಗುತ್ತೆ*

ಹಾಗಾದ್ರೆ ನಾನೇನು ಮಾಡಲಿ ಅಂತ ಸುಭಾಷರು ಮರುಪ್ರಶ್ನೆ ಹಾಕಿದಾಗ ಸಾವರ್ಕರರು ಹೇಳಿದ್ದು *ಸುಭಾಷ್ ಬಾಬು ಈ ಬ್ರಿಟಿಷರು ಭಾರತೀಯ ಸೈನಿಕರನ್ನ ಎರಡನೇ ಮಹಾಯುದ್ಧದಲ್ಲಿ ಜಪಾನ್ ವಿರುದ್ಧ ಗುಲಾಮರಂತೆ ಬಳಸಿಕೊಂಡು ಯುದ್ಧ ನಡೆಸಿದ್ದಾರೆ, ಆ ಯುದ್ಧದಲ್ಲಿ ಸುಮಾರು 70,000 ಭಾರತೀಯ ಯೋಧರು ಜಪಾನ್ ಜರ್ಮನಿಯಲ್ಲಿ ಯುದ್ಧ ಕೈದಿಗಳಾಗಿ ಬಂಧಿಯಾಗಿದ್ದಾರೆ.*
*ಆ ಸೈನಿಕರಿಗೆಲ್ಲಾ ಯುದ್ಧ ಕಲೆಗಳು ಗೊತ್ತಿವೆ, ನೀವೇನಾದರೂ ಆ ದೇಶಗಳಿಗೆ ತೆರಳಿ ಆ ದೇಶದ ನಾಯಕರ ಮನವೊಲಿಸಿ ಅಲ್ಲಿರೋ ನಮ್ಮ ಭಾರತೀಯ ಸೈನಿಕರನ್ನ ಬಂಧಮುಕ್ತಗೊಳಿಸಿ ಅವರನ್ನ ಬ್ರಿಟಿಷರ ವಿರುದ್ಧ ತೊಡೆ ತಟ್ಟುವಂತೆ ಮಾಡಿದರೆ ಬ್ರಿಟಿಷ್ ಮುಕ್ತ ಭಾರತದ ಕನಸು ನನಸಾಗುತ್ತೆ*.

ವಿನಾಯಕ್ ದಾಮೋದರ ಸಾವರ್ಕರ್ ಹೇಳಿದ ಈ ಉಪಾಯ ಸುಭಾಷರಿಗೆ ಉಚಿತವೆಂದೆನಿಸಿ ಭಾರತದಿಂದ ಜರ್ಮನಿ, ಜಪಾನಿಗೆ ತೆರಳಿ ಅಲ್ಲಿರುವ ಭಾರತೀಯ ಯುದ್ಧ ಕೈದಿಗಳನ್ನ ಬಂಧಮುಕ್ತಗೊಳಿಸಿ ಆಜಾದ್ ಹಿಂದ್ ಫೌಜ್ ಎಂಬ ಆರ್ಮಿಯನ್ನ ಬ್ರಿಟಿಷರ ವಿರುದ್ಧ ತೊಡೆ ತಟ್ಟುವಂತೆ ಮಾಡಿಯೇಬಿಟ್ಟರು. ಆಜಾದ್ ಹಿಂದ್ ಫೌಜ್ ಅಥವ Indian National Army ಯ ಬಗ್ಗೆಯಂತೂ ನಿಮಗೆ ಗೊತ್ತೇ ಇದೆ.

ಈ ಇಂಡಿಯನ್ ನ್ಯಾಷನಲ್ ಆರ್ಮಿ ಅಥವ ಆಜಾದ್ ಹಿಂದ್ ಫೌಜ್ ಆರ್ಮಿಯನ್ನ ಮೊದಲು 1942 ರಲ್ಲಿ ಕಟ್ಟಿದ್ದು *ಮೋಹನ್ ಸಿಂಗ್* ಎಂಬ ದೇಶಭಕ್ತ. ಆದರೆ ಏಷ್ಯಾದಲ್ಲಿ ನಮ್ಮ ಪರವಾಗಿ ಈ ಆರ್ಮಿ ಹೋರಾಡಬೇಕು ಅಂತ ಜಪಾನ್ ಹೇಳಿದಾಗ ಅವರೊಂದಿಗಿನ ಮನಸ್ತಾಪದಿಂದ ಈ ಇಂಡಿಯನ್ ನ್ಯಾಷನಲ್ ಆರ್ಮಿ ಬಹುತೇಕ ತಟಸ್ಥವಾಗಿತ್ತು. ಆದರೆ ಇದನ್ನ ಮತ್ತೆ *1943*ರಲ್ಲಿ ಪುನಶ್ಚೇತನಗೊಳಿಸಿದ್ದು *ಸುಭಾಷ್ ಚಂದ್ರ ಬೋಸ್*

ಮುಂದೆ ಸುಭಾಷರ ಇಂಡಿಯನ್ ನ್ಯಾಶನಲ್ ಆರ್ಮಿ ಭಾರತದ ಮೇಲೆ ದಾಳಿಗೆ ಸಜ್ಜಾಗಿ ಬ್ರಿಟಿಷ್ ಪಾರುಪತ್ಯವಿದ್ದ ಅಂಡಮಾನ್ ನಿಕೋಬಾರ್ ದ್ವೀಪಗಳನ್ನ ವಶಪಡಿಸಿಕೊಂಡು ಬ್ರಿಟಿಷ್ ಮುಕ್ತ ದೇಶವೆಂದು ಘೋಷಿಸಿ ನಂತರ ಬರ್ಮಾ ದೇಶದ ಮೂಲಕ ಭಾರತ ಪ್ರವೇಶಿಸಿ *1944 ರಲ್ಲಿ* ಮೊಟ್ಟ ಮೊದಲ ತ್ರಿವರ್ಣ ಧ್ವಜವನ್ನ ಹಾರಿಸಿದ್ದು ಭಾರತದ *ಕೋಹಿಮಾ*ದಲ್ಲಿ. ನಂತರ ಇಂಫಾಲ್ ಪ್ರವೇಶಿಸಲು ಮುಂದಾದಾಗ ಜಪಾನ್ ಆರ್ಮಿ ಕೈ ಕೊಟ್ಟ ಕಾರಣ INA ಶಕ್ತಿ ಕಳೆಗುಂದುತ್ತ ಹೋಯಿತು.

ಆದರೆ ಸುಭಾಷರ ಕೆಚ್ಚೆದೆಯ ಹೋರಾಟ ಹಾಗು ಆಜಾದ್ ಹಿಂದ್ ಫೌಜ್ ಬ್ರಿಟಿಷರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಹೀಗಾಗಿಯೇ ಸುಭಾಷರನ್ನ ಹೇಗಾದರೂ ಮಾಡಿ ಮಣಿಸಲೇಬೇಕು ಅಥವ ಕೊಲ್ಲಲೇಬೇಕೆಂದು ನಿರ್ಧರಿಸಿದ ಬ್ರಿಟಿಷರು ಟಾರ್ಗೇಟ್ ಮಾಡಿದ್ದು ಆಜಾದ್ ಹಿಂದ್ ಫೌಜ್’ನ್ನು.

ಸೆರೆಸಿಕ್ಕ ಆಜಾದ್ ಹಿಂದ್ ಫೌಜ್ ನ ಸೈನಿಕರೆಲ್ಲರ ವಿರುದ್ಧ ಮೊಕದ್ದಮೆಗಳು ದಾಖಲಾದವು, ಹಲವರಿಗೆ ಗಲ್ಲು ಶಿಕ್ಷೆಗಳಾದವು, ಮತ್ತೆ ಕೆಲವರಿಗಂತೂ ಉಗ್ರ ಶಿಕ್ಷೆಗೊಳಪಡಿಸಲಾಯಿತು.

ಆದರೆ ಸ್ವಾತಂತ್ರ್ಯ ಎಂಬ ಕಿಚ್ಚು ಮಾತ್ರ ಭಾರತೀಯರ ಎದೆಯಲ್ಲಾರದೆ ಹೊತ್ತಿ ಉರಿಯುತ್ತಿತ್ತು. ಇದರ ನಡುವೆ ಬ್ರಿಟಿಷರಿಗೆ ಅರಿವಿದ್ದೋ ಅಥವ ಅರಿವಿಲ್ಲದೆಯೋ ಒಂದು ದೊಡ್ಡ ತಪ್ಪನ್ನ ಮಾಡಿಬಿಟ್ಟಿದ್ದರು. ಎರಡನೆ ವಿಶ್ವ ಮಹಾಯುದ್ಧದ ಹೊತ್ತಲ್ಲಿ ತಮ್ಮ ಪರವಾಗಿ ಯುದ್ಧದಲ್ಲಿ ಹೋರಾಡಲು ಬ್ರಿಟಿಷರು ಸುಮಾರು ಹತ್ತು ಲಕ್ಷ ಸೈನಿಕರನ್ನ ಸೇನೆಗೆ ಭರ್ತಿ ಮಾಡಿಸಿದ್ದರು.

ಭರ್ತಿಮಾಡಿಕೊಂಡು ತರಬೇತಿ ಕೊಟ್ಟ ಸೈನಿಕರು ಯಾರಾಗಿದ್ದರು? ಬ್ರಿಟನ್ನಿನ ಸೈನಿಕರೇ? ಅಲ್ಲವೇ ಅಲ್ಲ. ಬ್ರಿಟಿಷರು ತರಬೇತಿ ನೀಡಿ ವಿಶ್ವಯುದ್ಧಕ್ಕೆ ಸನ್ನದ್ಧಗೊಳಿಸಿದ್ದು ಭಾರತೀಯ ಯುವಕರನ್ನೇ.

ಈಗ ಬ್ರಿಟಿಷರ ಭಾರತೀಯ ಸೈನ್ಯದಲ್ಲಿದ್ದ ಸೈನಿಕರಿಗೆ ಮದ್ದುಗುಂಡುಗಳ ತಯಾರಿಕೆ, ಮಷಿನ್ ಗನ್’ಗಳನ್ನ ಆಪರೇಟ್ ಮಾಡುವ ವಿಧಾನ, ಬಾಂಬ್ ತಯಾರಿಕೆ, ತೋಪುಗಳ ಉಡಾವಣೆ ಎಲ್ಲವೂ ತಿಳಿದಿತ್ತು. 95% ಭಾರತೀಯ ಯುವಕರೇ ಬ್ರಿಟಿಷರ ಭಾರತೀಯ ಸೈನ್ಯದಲ್ಲಿದ್ದರು.

ಎರಡನೆ ವಿಶ್ವಮಹಾಯುದ್ಧದ ಸಂದರ್ಭದಲ್ಲಿ ಕಂಡ ಕಂಡ ದೇಶಗಳಿಗೆ ನಮ್ಮ ದೇಶದ ಯುವ ಸೈನಿಕರನ್ನ ತಮ್ಮ ಪರವಾಗಿ ಹೋರಾಡಲು ಕಳಿಸಿ ಬ್ರಿಟಿಷರು ಅನೇಕ ಯುವಕರ ಮಾರಣಹೋಮಕ್ಕೆ ಕಾರಣವಾಗಿದ್ದರು.

ಪ್ರಾಣತೆತ್ತ ಯೋಧರ ಸಮ್ಮಾನಚಾದರೂ ಮಾಡಿದರೇ? ಉಹೂಂ ಅದೂ ಇಲ್ಲ. ಇನ್ನೂ ನಿಕೃಷ್ಟವಾಗಿ ನಮ್ಮ ಸೈನಿಕರನ್ನ ನಡೆಸಿಕೊಂಡ ಬ್ರಿಟಿಷರ ವಿರುದ್ಧ ಎರಡನೆ ಸಿಪಾಯಿ ದಂಗೆ 1946 ರಲ್ಲಿ ಆರಂಭವಾಗೇ ಬಿಟ್ಟಿತು.ಬಹುಶಃ ಸಾಕಷ್ಟು ಭಾರತೀಯರಿಗೆ ಈ ವಿಷಯ ಈಗಲೂ ತಿಳಿದಿಲ್ಲ. ತಿಳಿದಿಲ್ಲ ಅನ್ನೋದಕ್ಕಿಂದ ಅದನ್ನ ಇತಿಹಾಸದಿಂದ ಮರೆಮಾಚೋಕೆ ನೆಹರು ಸಂತತಿಯ ಕೃಪಾಪೋಷಿತ ಇತಿಹಾಸಕಾರರು ಕಾರಣವೆಂದರೆ ತಪ್ಪಾಗಲಾರದು.

ಇರಲಿ. ಆ ಎರಡನೆಯ ಸಿಪಾಯಿ ದಂಗೆಯ ಬಗ್ಗೆ ತಿಳಿಯೋಣ ಬನ್ನಿ ಆ ಎರಡನೆ ಸಿಪಾಯಿ ದಂಗೆಯೇ 1946 ರಲ್ಲಿ ಬ್ರಿಟಿಷರ ವಿರುದ್ಧ ಶುರುವಾದ RIN Mutuny ಬ್ರಿಟಿಷರಿಂದ ತೀರಾ ತಾತ್ಸಾರಕ್ಕೊಳಗಾಗಿ ತೀರಾ ಕೆಟ್ಟದಾಗಿ ನಡೆಸಿಕೊಂಡ ರಾಯಲ್ ಇಂಡಿಯನ್ ನೇವಿ ಬ್ರಿಟಿಷರ ವಿರುದ್ಧ ಮುಂಬೈನಲ್ಲಿ ತಿರುಗಿಬಿದ್ದಿತ್ತು.

ಬ್ರಿಟಿಷರು ತಮಗೆ ಹಳಸಿದ, ತಂಗಳು ಊಟ ನೀಡುತ್ತಿದ್ದಾರೆ ಇದರ ಬಗ್ಗೆ ಸೂಕ್ತ ಕ್ರಮ ತಗೊಳ್ಳಿ ಅಂತ RIN ಸೈನಿಕರು ಮೇಲಾಧಿಕಾರಿಗಳಿಗೆ ಪರಿಪರಿಯಾಗಿ ವಿವರಿಸಿದರೂ ಅದು ಮೇಲಾಧಿಕಾರಿಗಳ ಕಿವಿಗೆ ಕೇಳಿಸಲೇ ಇಲ್ಲ.

ಇದರ ವಿರುದ್ಧ ಮೊಟ್ಟ ಮೊದಲಿಗೆ ರೊಚ್ಚಿಗೆದ್ದದ್ದು *ಫೆಬ್ರವರಿ 18, 1946* ರಲ್ಲಿ *HMIS ತಳವಾರ್(His Majesty’s Indian Ship Talwar)* ಎಂಬ ರಾಯಲ್ ಇಂಡಿಯನ್ ನೇವಿಯ ಯುದ್ಧ ನೌಕೆಯಲ್ಲಿ, ಈ ಸುದ್ದಿಯನ್ನ ವೈರಲೆಸ್ ಮುಖಾಂತರ ಎಲ್ಲ ನೇವಿ ಸ್ಟೇಷನ್ಗಳಿಗೂ ಮುಟ್ಟಿಸಿದ HMIS Talwar ಗೆ ಪ್ರಬಲವಾಗಿ ಬೆಂಬಲಿಸಿದ್ದು ಕರಾಚಿಯ RIN.

ನೋಡು ನೋಡುತ್ತಿದ್ದಂತೆ ನೌಕೆಯಿಂದಿಳಿದ ನೇವಲ್ ಆಫೀಸರ್ ಗಳು ಬಾಂಬೆ ರೋಡಿಗಿಳಿದು ಧರಣಿ ಶುರುಮಾಡಿಯೇಬಿಟ್ಟರು. ಇವರ ಜೊತೆಗೆ ತಮ್ಮ ಬೆಂಬಲವೂ ಇದೆಯಂತ ಒಟ್ಟು *78 ಶಿಪ್’ಗಳು, 20 ಸಮುದ್ರ ತೀರದ ಚಿಕ್ಕ ಪುಟ್ಟ ಯುದ್ಧ ಹಡಗುಗಳ ಮೂಲಕ ಸುಮಾರು 20,000 ನೇವಲ್ ಸೈನಿಕರು ಕೈಜೋಡಿಸಿದರು*.

ಬಾಂಬೆಯ ರೋಡಿಗಿಳಿದ ಎಲ್ಲಾ ಪ್ರತಿಭಟನಾಕಾರರ ಬಾಯಲ್ಲಿ ಮೊಳಗುತ್ತಿದ್ದ ಘೋಷಣೆಗಳು *Strike for Bombay(ಬಾಂಬೆಗಾಗಿ ಹೋರಾಟ)*, *Release 11,000 INA Prisoners(11,000 ಆಜಾದ್ ಹಿಂದ್ ಫೌಜ್’ರನ್ನ ಬಂಧಮುಕ್ತಗೊಳಿಸಿ)*, *ಜೈ ಹಿಂದ್* ಪ್ರತಿಭಟನಾ ನಿರತರು ತ್ರಿವರ್ಣ, ಕಾಂಗ್ರೆಸ್, ಮುಸ್ಲಿಂ ಲೀಗ್, ಕಮ್ಯುನಿಸ್ಟ್ ಧ್ವಜಗಳನ್ನ ಹಾರಿಸಿ ಅಲ್ಲಿದ್ದ ಅಮೇರಿಕಾದ ಧ್ವಜಗಳನ್ನೆಲ್ಲ ಸುಟ್ಟು ಹಾಕಿದರು.

ಇದು ಬರೀ ತಮಗೆ ನೀಡುತ್ತಿದ್ದ ತಂಗಳೂಟದ ವಿರುದ್ಧದ ದಂಗೆಯಾಗಿರಲಿಲ್ಲ, ಇದು ಸುಭಾಷರು ಭಾರತಕ್ಕಾಗಿ ತಮ್ಮ ಸರ್ವಸ್ವವನ್ನೇ ಪಣಕ್ಕಿಟ್ಟು ಬ್ರಿಟಿಷರನ್ನ ಭಾರ ಬಿಟ್ಟು ತೊಲಗಿಸಲು ಹೋರಾಡುತ್ತಿದ್ದ ಛಾತಿ ಈ ರಿನ್ ಮ್ಯೂಟಿನಿ ಅಥವ RIN ದಂಗೆಗೆ ಸ್ಪೂರ್ತಿಯಾಗಿತ್ತು.

ಬಾಂಬೆಯಲ್ಲಿ ನಡೆಯುತ್ತಿದ್ದ ನೇವಲ್ ಸೈನಿಕರ ಹೋರಾಟಕ್ಕೆ ಬಾಂಬೆ ನಗರದ ಸಾವಿರಾರು ಜನರೂ ಕೈ ಜೋಡಿಸಿಬಿಟ್ಟಿದ್ದರು. ಅಕ್ಷರಶಃ ಬಾಂಬೆ ನಗರ ಬಂದ್ ಆಗಿಬಿಟ್ಟಿತ್ತು. ಬರೀ ಬಾಂಬೆ ಅಷ್ಟೇ ಅಲ್ಲ *ಕರಾಚಿ, ಮದ್ರಾಸ್, ಕೊಚ್ಚಿ, ವೈಜಾಗ್*ನಲ್ಲೂ Royal Indian Army ದಂಗೆಯೆದ್ದುಬಿಟ್ಟಿದ್ದರು.

ಬಾಂಬೆನಲ್ಲಿ ಶುರುವಾದ ಈ ಕಿಚ್ಚು ಕರಾಚಿಗೂ ಹಬ್ಬಿತ್ತು. ಕರಾಚಿಯಲ್ಲಿ ಪ್ರತಿಭಟನೆ ನಡೆಸುತ್ತಿರೋರ ಮೇಲೆ ಗುಂಡು ಹಾರಿಸಲು ಅಲ್ಲಿದ್ದ ಗೂರ್ಖಾಗಳಿಗೆ ಬ್ರಿಟಿಷರು ಆದೇಶವಿತ್ತರು. ಆದರೆ ಗೂರ್ಖಾಗಳು ನೇವಲ್ ಆರ್ಮಿಯವರ ಮೇಲೆ ಗುಂಡಿನ ದಾಳಿ ಮಾಡಲು ನಿರಾಕರಿಸಿ ಅವರೂ ಈ ಪ್ರತಿಭಟನೆಗೆ ಸಾಥ್ ನೀಡಿದರು.

ಆದರೆ ಈ RIN Mutiny ಕೇವಲ 4 ದಿನಗಳವರೆಗೆ ಮಾತ್ರ ನಡೆದು ನಂತರ ಠುಸ್ ಆಗಿಹೋಯಿತು. ಕಾರಣ ಕಾಂಗ್ರೆಸ್ ಆಗಲಿ ಮುಸ್ಲಿಂ ಲೀಗ್ ಆಗಲಿ ಇದಕ್ಕೆ ಬೆಂಬಲ ಕೊಡದೆ ಇದ್ದದ್ದು. ಇಷ್ಟೇ ಅಲ್ಲ ಗಾಂಧಿ ಈ ಪ್ರತಿಭಟನಾಕಾರರನ್ನ ಕುರಿತು ಹೀಗೆ ಹೇಳಿದ್ದ “ನೀವು ನಮ್ಮ ಪಾರ್ಟಿಯ ಮುಂದೆ ಈ ಪ್ರತಿಭಟನೆಯ ಪ್ರಸ್ತಾಪ ಇಟ್ಟು ಒಪ್ಪಿಗೆ ಪಡೆಯಬೇಕಾಗಿತ್ತು. ಆತುರದಲ್ಲಿ ಹಿಂಸೆಯನ್ನು ಕೈಗೆತ್ತಿಕೊಂಡು ಬಿಟ್ಟರೆ ನಮಗೆ ಸಿಗುವ ಸ್ವಾತಂತ್ರ್ಯ ಇನ್ನೂ ಮುಂದಕ್ಕೆ ಹೋಗುತ್ತೆ”

ಆದರೆ ಈ ಪ್ರತಿಭಟನೆಗೆ ಬೆಂಬಲ ನೀಡಿದ್ದು ಮಾತ್ರ ಆಗಿನ ಕಮ್ಯುನಿಸ್ಟ್ ಪಾರ್ಟಿ ಹಾಗು ಕಾಂಗ್ರೆಸ್ಸಿನ ಒಬ್ಬಳೇ ಒಬ್ಬ ಸದಸ್ಯೆ *ಅರುಣಾ ಆಸಫ್ ಅಲಿ*. ಈ ಪ್ರತಿಭಟನೆಯಲ್ಲಿ ಸುಮಾರು 228 ನಾಗರಿಕರು ಪ್ರಾಣಬಿಟ್ಟರೆ 1,046 ಜನ ಗಾಯಾಳುಗಳಾದರು.  ಕೊನೆಗೆ ಫೆಬ್ರವರಿ 23 ಕ್ಕೆ ಹೋರಾಟಕ್ಕಿಳಿದಿದ್ದ RIN ಸೈನಿಕರು ಶರಣಾಗತರಾದರು. ಹಲವರನ್ನು ಕೋರ್ಟ್ ಮಾರ್ಷಲ್ ಮಾಡಲಾಯಿತು.

ಈ ದಂಗೆಯೂ ಬ್ರಿಟಿಷರ ಝಂಗಾಬಲವನ್ನೇ ಉಡುಗಿಸಿಬಿಟ್ಟಿತ್ತು. ಭಾರತೀಯರೆಲ್ಲ ರೊಚ್ಚಿಗೆದ್ದಿದ್ದಾರೆ, ಅವರು ಯಾವ ಕ್ಷಣದಲ್ಲಿ ಬೇಕಾದರೂ ನಮ್ಮನ್ನು ಈ ದೇಶದಿಂದ ಹೊರಗೋಡಿಸಬಹುದು ಎಂದು ಬ್ರಿಟಿಷರಿಗೆ ಆಗ ಅರ್ಥವಾಗತೊಡಗಿತ್ತು.

ಬ್ರಿಟಿಷರೇನೋ ಎರಡನೆ ಮಹಾಯುದ್ಧ ಗೆದ್ದಿದ್ದರು ಆದರೆ ಆ ಯುದ್ಧದಲ್ಲಿ ಸಾಕಷ್ಟು ನಷ್ಟವಾಗಲೇ ಬ್ರಿಟನ್’ಗಾಗಿತ್ತು. ಇನ್ನು ಭಾರತದ ಮೇಲೆ ಸವಾರಿ ಮಾಡೋದು ನಮ್ಮ ಕೈಯಿಂದಾಗದೆಂದು RIN Mutiny ನಡೆದ ಒಂದೂವರೆ ವರ್ಷಗಳ ಅವಧಿಯಲ್ಲೇ ಬ್ರಿಟಿಷರು ಭಾರತ ಬಿಟ್ಟು ಹೋದರು.

ಈ RIN Mutiny ಬಗ್ಗೆಯೇ 1955 ರಲ್ಲಿ ಬ್ರಿಟನ್ ಪ್ರಧಾನಿ ಕ್ಲೆಮೆಂಟ್ ಆ್ಯಟ್ಲಿ ಉಲ್ಲೇಖಿಸಿ *ಸುಭಾಷರ INA ಹಾಗು RIN Mutiny ಯೇ ನಾವು ತರಾತುರಿಯಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟು ನಮ್ಮ ದೇಶಕ್ಕೆ ತೆರಳಿದ್ದು* ಅಂತ ಹೇಳಿದ್ದು

*ಈ ದೇಶಕ್ಕೆ ಯಾವನೋ ಚರಕ ಸುತ್ತೋಕೆ, ಭಜನೆ ಮಾಡೋಕೆ, ಉಪವಾಸ ಮಾಡೋಕೆ, ಕೈಲಿರೋ ಆಯುಧಗಳನ್ನೆಲ್ಲ ತ್ಯಜಿಸಿ ಶಾಂತಿಯ ಮೂಲಕ ಹೋರಾಡಿ ಅಂದ ಅನ್ನೋ ಬೋಗಸ್ ತತ್ವ ಸಿದ್ಧಾಂತಗಳಿಂದ ನಮಗೆ ಸ್ವಾತಂತ್ರ್ಯ ಸಿಗಲಿಲ್ಲ ಸ್ವಾಮಿ ನಮಗೆ ಸ್ವಾತಂತ್ರ್ಯ ಸಿಕ್ಕದ್ದು ಸುಭಾಷ್ ಚಂದ್ರ ಬೋಸ್’ನಿಂದ*

*ಮಹಾತ್ಮ ಎಂಬ ಬಿರುದೇನಾದರೂ ಸಲ್ಲಬೇಕಾದರೆ ಅದು ಸುಭಾಷ್ ಚಂದ್ರ ಬೋಸರಿಗೆ ಮಾತ್ರ ಸಲ್ಲಬೇಕು* ಇತಿಹಾಸವನ್ನ ಮರೆಮಾಚಿ, ತಿರುಚಿ ನಮ್ಮ ಜನಗಳ ತಲೇಲಿ ತುಂಬಿರೋದ್ರಿಂದ ಇಂಥ ನೈಜ ಇತಿಹಾಸಗಳು ಅದೆಷ್ಟು ಭಾರತದ ಮಣ್ಣಲ್ಲಿ ಹುದುಗಿ ಹೋಗಿವೆಯೋ ಆ ಭಾರತಾಂಬೆಯೇ ಬಲ್ಲಳು. ಇಂತಹ ಇತಿಹಾಸದ ತುಣುಕುಳನ್ನ ನಿಮ್ಮೆದುರಿಡೋ ಪ್ರಾಮಾಣಿಕ ಪ್ರಯತ್ನವಷ್ಟೇ ನನ್ನದು.

– Vinod Hindu Nationalist*

Tags

Related Articles

Close