ಪ್ರಚಲಿತ

19 ಲಕ್ಷ ಜನ ತಿನ್ನಬೇಕಾಗಿದ್ದ ಆಹಾರವನ್ನು ಮಣ್ಣುಪಾಲು ಮಾಡಿದ ಕೀರ್ತಿ ಇವರಿಗೇ ಸಲ್ಲುತ್ತದೆ!

ಕರ್ನಾಟಕ ಕಾಂಗ್ರೆಸ್ ಸರಕಾರ ಭಾಗ್ಯಗಳ ಮೇಲೆ ಭಾಗ್ಯಗಳನ್ನು ನೀಡುತ್ತಾ ಬಂದಿದ್ದು, ಈಗ ಹೊಸ ಭಾಗ್ಯವೊಂದನ್ನು ಕರ್ನಾಟಕದ ಜನತೆ ನೀಡಿದೆ!! ಹಸಿವು ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ತಂದ ಅನ್ನಭಾಗ್ಯದ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ, ಇದರ ಜೊತೆಗೆ ಹೊಸ ಆಫರ್ ಒಂದನ್ನು ನೀಡಿದೆ ಸಿದ್ದರಾಮಯ್ಯ ಸರಕಾರ!! ಏನಿದು ಗೊತ್ತಾ, ಈ ಹೊಸ ಭಾಗ್ಯ ?? ಅದು ಬೇರೇನೂ ಅಲ್ಲ, ಅನ್ನಭಾಗ್ಯದ ಜೊತೆಗೆ ಹುಳುಭಾಗ್ಯ!!

ಹೌದು… ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಸಿವು ಮುಕ್ತ ಕರ್ನಾಟಕದ ನಿರ್ಮಾಣಕ್ಕಾಗಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು ಈಗ ಇತಿಹಾಸ. ತದ ನಂತರದಲ್ಲಿ ಭಾಗ್ಯಗಳ ಮೇಲೆ ಭಾಗ್ಯಗಳನ್ನು ನೀಡುತ್ತಿರುವ ಸಿದ್ದರಾಮಯ್ಯ ಸರಕಾರದಲ್ಲಿ ಅನ್ನಭಾಗ್ಯ ವಿಶೇಷವಾದ ಇತಿಹಾಸವನ್ನು ಸೃಷ್ಟಿಸಿದೆ. ಆದರೆ ಅನ್ನಭಾಗ್ಯ ಯೋಜನೆ ಜನರಿಗೆ ಎಷ್ಟು ಅನುಕೂಲವಾಗಿದೆ, ಅನ್ನಭಾಗ್ಯದಲ್ಲಿ ನೀಡುವ ಪಡಿತರ ಹೇಗಿದೆ ಎಂದು ಕೇಳಿದರೆ ಒಂದು ಕ್ಷಣ ದಂಗಾಗುವಿರಿ!!

ಆರಂಭದಿಂದಲೂ ಒಂದಲ್ಲ, ಒಂದು ಗೊಂದಲ, ವಿವಾದಗಳಿಂದಲೇ ಸುದ್ದಿಯಲ್ಲಿರುವ ಸರಕಾರದ ಅನ್ನಭಾಗ್ಯ ಯೋಜನೆ ಮತ್ತೊಂದು ಎಡವಟ್ಟಿನ ಮೂಲಕ ಸದ್ದು
ಮಾಡಿದೆ. ಯೋಜನೆಯಡಿ ಪಡಿತರದಾರರಿಗೆ ಹಂಚಿಕೆ ಆಗಬೇಕಿದ್ದ 38,072 ಕ್ವಿಂಟಾಲ್ ಗೋಧಿ ದಾಸ್ತಾನು ವಿತರಣೆ ಭಾಗ್ಯ ಕಾಣದೆ ರಾಜ್ಯಾದ್ಯಂತ
ಗೋದಾಮುಗಳಲ್ಲೇ ಕೊಳೆಯಲಾರಂಭಿಸಿದೆ. ಹಾಗಾಗಿ, ಕಳೆದ ವರ್ಷದ ಡಿಸೆಂಬರ್‍ನಿಂದಲೇ ಗೋದಾಮುಗಳಲ್ಲಿರಿಸಲಾಗಿರುವ ಈ ದಾಸ್ತಾನಿಗೆ ಹುಳಬಿದ್ದಿದ್ದು,
ಮನುಷ್ಯರಿರಲಿ, ಪಶು, ಪಕ್ಷಿಗಳಿಗೂ ಬಳಸಲಾಗದಷ್ಟು ಹಾಳಾಗಿದೆ ಈ ಆಹಾರ!!

ಆದರೆ, ಬಡವರಿಗೆ ನೀಡುತ್ತಿರುವ ಪಡಿತರವನ್ನು ಕಸಕ್ಕಿಂತ ಕಡೆಯಾಗಿ ನೋಡಲಾಗುತ್ತಿದೆಯಾ ಎನ್ನುವ ಅನುಮಾನಗಳು ಕಾಡುತ್ತಿದ್ದು, ಆದರೆ ಅನ್ನಭಾಗ್ಯದ
ಪಡಿತರವೆಲ್ಲ ಹುಳುಗಳಿಗೆ ಆಹಾರವಾಗಿರುವ ಸತ್ಯ ಇದೀಗ ಹೊರಬಿದ್ದಿದ್ದು, 2015ರ ಆಗಸ್ಟ್ ನಿಂದ ಸರಕಾರ ರಾಜ್ಯದ ಜನತೆಗೆ ಪಡಿತರ ಅಂಗಡಿ ಮೂಲಕ
ನೀಡುತ್ತಿದ್ದ ಗೋಧಿಯನ್ನು ಬ್ಯಾನ್ ಮಾಡಿದ ಕಾರಣ ಕೋಟ್ಯಾಂತರ ರೂಪಾಯಿಯ ಗೋದಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಮತ್ತು ಎಫ್‍ಸಿಐ ಭಾರತೀಯ ಆಹಾರ ನಿಗಮದಲ್ಲಿ ಕೊಳೆಯುತ್ತಿವೆ.

ಪಡಿತರ ಗೋಧಿ ವಿತರಣೆಗೂ ಪೂರ್ವದಲ್ಲಿ ಕೆಎಫ್‍ಸಿಎಸ್‍ಸಿ ಹಾಗೂ ಟಿಎಪಿಸಿಎಂಎಸ್‍ಗಳು ಕೇಂದ್ರ ಸರಕಾರದ ಎಫ್‍ಸಿಐಗೆ ಪ್ರತಿ ಕ್ವಿಂಟಾಲ್ ಗೋಧಿಗೆ 200
ರೂಪಾಯಿಯಂತೆ ಡಿಡಿ ಮೂಲಕ ಹಣವನ್ನು ಮುಂಗಡವಾಗಿ ಪಾವತಿಸಿವೆ. ರಾಜ್ಯ ಸರಕಾರ ಆ ಮೊತ್ತವನ್ನು ಟಿಎಪಿಸಿಎಂಎಸ್ ಮತ್ತು ಕೆಎಫ್‍ಸಿಎಸ್‍ಸಿಗೆ ಇನ್ನಷ್ಟೇ ಪಾವತಿಸಬೇಕಿದೆ.!! ಆದರೆ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಉಪ ನಿರ್ದೇಶಕರಾದ ಟಿ.ನಾಗೇಂದ್ರಪ್ಪ ಹೇಳುವ ಪ್ರಕಾರ, “ಇಲಾಖೆ ಕೇಂದ್ರ ಕಚೇರಿ ಅನುಮತಿ ಇಲ್ಲದೆ ಯಾವುದೇ ಮಾಹಿತಿ ನೀಡಬಾರದು ಎಂದು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸರಕಾರ ಸುತ್ತೋಲೆ ಹೊರಡಿಸಿದೆ. ಇದರಿಂದ ದಾಸ್ತಾನು, ಪೂರೈಕೆ ಮತ್ತು ಉಳಿಕೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ” ಎಂದು ಹೇಳಿದೆ!!

19 ಲಕ್ಷ ಜನ ತಿನ್ನಬೇಕಿದ್ದ ಆಹಾರ ಈಗ ಮಣ್ಣುಪಾಲು!!

ಈಗಾಗಲೇ ಖಾಸಗಿ ಚಾನೆಲ್ ಒಂದು, ಬರೊಬ್ಬರಿ 15 ಜಿಲ್ಲೆಗಳಲ್ಲಿ ನಡೆಸಿರುವ ಸ್ಟಿಂಗ್ ಆಪರೇಶನ್‍ನಲ್ಲಿ ಕಳೆದ ಎಂಟು ತಿಂಗಳಲ್ಲಿ ಗೋಧಿ, ಎಣ್ಣೆ, ಸಕ್ಕರೆ,
ಹೆಸರುಕಾಳನ್ನು ನೀಡದೆ ಹಾಗೆ ಗೋದಾಮಿನಲ್ಲಿರುವ ಲಕ್ಷ ಲಕ್ಷ ಕ್ವಿಂಟಾಲ್ ಪದಾರ್ಥಗಳು ಸಂಪೂರ್ಣವಾಗಿ ಹಾಳಾಗಿರುವುದು ಕಂಡುಬಂದಿದೆ. ಆದರೆ ಹುಳ ಹಿಡಿದ ಗೋಧಿ ವಿತರಣೆಗೆ ಬರುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆಯೇ ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿಗಳು ಪರ್ಯಾಯ ದಾರಿ ಹುಡುಕಾಡುತ್ತಿದ್ದಾರೆ. ಕೊಳೆಯುತ್ತಿರುವ ಗೋಧಿಯನ್ನು ಪಶು ಆಹಾರಕ್ಕೆ ಬಳಸಬಹುದೇ??? ಎಂಬುದನ್ನು ಪರಿಶೀಲಿಸಿ ವರದಿ ನೀಡುವಂತೆ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ!!

ಸರಕಾರದ ನಿರ್ಲಕ್ಷ್ಯದಿಂದಾಗಿ 19 ಲಕ್ಷ ಜನ ತಿನ್ನಬೇಕಿದ್ದ ಆಹಾರ ಈಗ ಮಣ್ಣುಪಾಲಾಗಿದ್ದು, ಗೋಧಿ ಖರೀದಿಗೆ ವ್ಯಯ ಮಾಡಿರುವ 10 ಕೋಟಿ ರೂಪಾಯಿ
ವ್ಯರ್ಥವಾಗಿದೆ. ದಾಸ್ತಾನು ಮಾಡಲಾಗಿದ್ದ 38072 ಕ್ವಿಂಟಾಲ್ ಗೋಧಿ ಹಾಳಾಗಿದೆ!! ಅಲ್ಲದೇ, ಹೋಲ್‍ಸೇಲ್ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗೋಧಿ ಬೆಲೆ 2600 ರಿಂದ 3200 ರೂಪಾಯಿವರೆಗೆ ಇದೆ. ಆದರೆ ಸರಕಾರ ಕ್ವಿಂಟಾಲ್‍ಗೆ ಅಂದಾಜು 2600 ರೂಪಾಯಿ ಕೊಟ್ಟು ಖರೀದಿ ಮಾಡಿದೆ ಎಂದಾದರೂ 9.9 ಕೋಟಿ ರೂಪಾಯಿ ಆಗುತ್ತದೆ!! ಕುಟುಂಬದ ತಲಾ ಒಬ್ಬರಿಗೆ 2 ಕೆ.ಜಿ. ಗೋಧಿ ವಿತರಣೆ ಮಾಡಿದ್ದರೆ 19 ಲಕ್ಷ ಜನ ಇದರ ಫಲಾನುಭವಿಗಳಾಗುತ್ತಿದ್ದರು. ಆದರೆ ಇದೀಗ 19 ಲಕ್ಷ ಜನ ಸೇವಿಸಬೇಕಿದ್ದ ಆಹಾರ ಮಣ್ಣು ಸೇರುವಂತಾಗಿದೆ!!

ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಹಾರದ ಸ್ಥಿತಿಗತಿ…!!

ರಾಜ್ಯದ ಗಡಿ ಜಿಲ್ಲೆಯಾದ ಬೀದರ್‍ನಲ್ಲಿ, ಸರಕಾರಿ ಅಧಿಕಾರಿ ಹೇಳುವ ಪ್ರಕಾರವೇ 2 ಸಾವಿರ ಕ್ವಿಂಟಲ್ ಗೋಧಿ ಇಲ್ಲಿ ಕೊಳೆಯುತ್ತಿದೆ!! ಇನ್ನೂ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಬಸವರಾಜ್ ಅವರು ಹೇಳುವ ಪ್ರಕಾರ ಕರ್ನಾಟಕ ಆಹಾರ ನಿಗಮದಲ್ಲಿ 2 ಸಾವಿರ ಕ್ವಿಂಟಲ್ ಗೋಧಿ ಕೊಳೆಯುತ್ತಿವೆ. ಈಗಾಗಲೇ ಲ್ಯಾಬಿಗೆ ಸ್ಯಾಂಪಲ್ ಕಳುಹಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ!! ಇನ್ನು, ಕಲಬುರಗಿ ಜಿಲ್ಲೆಯೊಂದರಲ್ಲಿಯೇ ಎಂಟು ಗೋದಾಮುಗಳಲ್ಲಿ 10 ಸಾವಿರ ಕ್ವಿಂಟಾಲ್‍ಗೂ ಅಧಿಕ ಗೋಧಿ ಉಳಿದುಕೊಂಡಿದ್ದು, ಹುಳ ಬಿದ್ದಿದೆ. 1 ಲಕ್ಷ ಲೀಟರ್‍ಗೂ ಅಧಿಕ ಎಣ್ಣೆ, ಸಕ್ಕರೆ ಕೂಡ ಹಾಳಾಗಿದ್ದು, ಜಿಲ್ಲಾದ್ಯಂತ 800 ಕ್ವಿಂಟಾಲ್‍ಗೂ ಅಧಿಕ ಸ್ಟಾಕ್ ಇದೆ. ಸುಮಾರು 700 ಕ್ವಿಂಟಾಲ್‍ಗೂ ಅಧಿಕ ಹೆಸರುಕಾಳಿಗೆ ಹುಳ ಬಿದ್ದಿದ್ದು, ಕಾಳು ಪುಡಿಯಾಗಿ ಮಾರ್ಪಟ್ಟಿದೆ!!

ಇವಿಷ್ಟೇ ಅಲ್ಲದೇ, ಯಾದಗಿರಿ ಜಿಲ್ಲೆಯಲ್ಲಿ ಕ್ವಿಂಟಾಲ್‍ಗಟ್ಟಲೆ ಗೋಧಿ ಹುಳು ಹಿಡಿದು ಹಾಳಾಗುತ್ತಿದೆ. ಕಳೆದ 8 ತಿಂಗಳಿನಿಂದ ಪಡಿತರು ವಿತರಣೆಯಾಗದೆ
ಗೋದಾಮುಗಳಲ್ಲಿ ಸ್ಟಾಕ್ ಆಗಿ ಉಳಿದು ಬಿಟ್ಟಿದ್ದು, ಜಿಲ್ಲೆಯ ವಿವಿಧ ಗೋಧಾಮುಗಳಲ್ಲಿ ಒಟ್ಟು 1691 ಕ್ವಿಂಟಾಲ್ ಗೋಧಿ ಸ್ಟಾಕ್ ಆಗಿದೆ. ಯಾದಗಿರಿ ಗೋದಾಮಿನಲ್ಲಿಯೇ 553 ಕ್ವಿಂಟಾಲ್ ಗೋಧಿ ಕೊಳೆಯುತ್ತಿದ್ದರೆ, ಸುರಪುರ ಗೋದಾಮಿನಲ್ಲಿ 528 ಕ್ವಿಂಟಾಲ್ ಗೋಧಿ ಮತ್ತು ಶಹಾಪುರ ಗೋದಾಮಿನಲ್ಲಿ 610 ಕ್ವಿಂಟಾಲ್ ಗೋಧಿ ಹುಳು ಹಿಡಿದು ಹಾಳಾಗಿದೆ ಎಂದು ಖಾಸಗಿ ನ್ಯೂಸ್ ಚಾನೆಲ್ ಕಾರ್ಯಚರಣೆ ಬಯಲು ಮಾಡಿದೆ.

ಎಲ್ಲೆಲ್ಲಿ ಗೋಧಿ ದಾಸ್ತಾನು ಆಗಿದೆ ಎಂಬುದರ ಬಗ್ಗೆ ಕೂಡಲೆ ಪರಿಶೀಲಿಸಿ ಮಾಹಿತಿ ನೀಡುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್
ಸೋಮವಾರ ವಿಕಾಸೌಧದಲ್ಲಿ ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಸೂಚಿಸಿದರು. ಗೋಧಿ ದಾಸ್ತಾನು ಬಗ್ಗೆ ತಕ್ಷಣ ಪರಿಶೀಲನೆ ನಡೆಸುವಂತೆ ತಾಕೀತು
ಮಾಡಿದ್ದಾರೆ. ಆದರೆ, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಗೋಧಿಗೆ ತುಂಬಾ ಬೇಡಿಕೆ ಇದೆ. ಅಲ್ಲಿನ ಜನರು 7 ಕೆಜಿ ಅಕ್ಕಿ ಜತೆ 2 ಕೆ.ಜಿ ಗೋಧಿ ಕೊಡಿ ಎಂದು
ಜನರೇ ಕೇಳುತ್ತಿದ್ದಾರೆ. ಹೀಗಾಗಿ ಮೊದಲು ಪರಿಶೀಲಿಸಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ!!

ಈಗಾಗಲೇ ರಾಜ್ಯದಲ್ಲಿ ಒಟ್ಟು 1,38,22,881 ಬಿಪಿಎಲ್ ಕಾರ್ಡ್‍ದಾರರಿದ್ದು, ಅದರಲ್ಲಿ 1,08,70,757 ಪಡಿತರ ಚೀಟಿದಾರರು ಆಹಾರ ಪಡೆಯುತ್ತಿದ್ದಾರೆ.
ಎಪಿಎಲ್ ಕಾರ್ಡ್‍ದಾರರು 1,83856 ಪಡಿತರ ಪಡೆಯುತ್ತಿದ್ದಾರೆ. ಇನ್ನು, ಮಂಡ್ಯ, ಕೊಡಗು, ದಾವಣಗೆರೆ, ಉಡುಪಿ, ಚಿಕ್ಕಬಳ್ಳಾಪುರ, ರಾಯಚೂರು, ಮಂಗಳೂರು, ಹಾಸನ ಜಿಲ್ಲೆಗಳಲ್ಲಿ ಗೋಧಿ ದಾಸ್ತಾನು ಇಲ್ಲದೇ ಆಹಾರಗಳು ಹಾಳಾಗುತ್ತಿರುವ ವಿಚಾರ ಬೆಳಕಿಗೆ ಬಂದಿದೆ!! ಈ ಬಗ್ಗೆ ಕಾರವಾರದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕರಾದ ರಘುನಾಥ್ ಹೇಳುವ ಪ್ರಕಾರ, ಪಡಿತರದಾರರಿಗೆ ಗೋಧಿ ವಿತರಣೆಯನ್ನು ಸರಕಾರ ಬಂದ್ ಮಾಡಿದ್ದರಿಂದ ಎತ್ತುವಳಿ ಮಾಡಿದ್ದ ಗೋಧಿ ಗೋದಾಮುಗಳಲ್ಲಿ ಸಂಗ್ರಹವಿದೆ. ಬಳಕೆಗೆ ಅಯೋಗ್ಯವಾಗಿದ್ದರಿಂದ ಹರಾಜು ಹಾಕಿ ಪಶು ಆಹಾರಕ್ಕಾಗಿ ಮಾರಾಟ ಮಾಡುವ ಕುರಿತು ಪ್ರಕ್ರಿಯೆ ನಡೆದಿದೆ. ಹಾಗಾಗಿ ಸರಕಾರದಿಂದ ಅನುಮತಿ ಬರಬೇಕಿದೆ ಎಂದಿದ್ದಾರೆ!!

ಒಟ್ಟಾರೆಯಾಗಿ, ಬಡವರ ಹೊಟ್ಟೆ ತುಂಬಿಸಬೇಕಿದ್ದ ಪಡಿತರ ಸರಕಾರದ ನಿರ್ಲಕ್ಷ್ಯದಿಂದ ಹುಳುಭಾಗ್ಯವಾಗಿ ಮಾರ್ಪಟ್ಟಿದ್ದು, ತಿನ್ನುವ ಅನ್ನಕ್ಕೂ ಕುತ್ತು ಬಂದಂತಾಗಿದೆ!! ಅಷ್ಟಾದರೂ ಕೂಡ ಈ ಬಗ್ಗೆ ಸರಕಾರ ಯಾವುದೇ ಕ್ರಮ ಜರುಗಿಸದೇ, ಕಣ್ಮುಚ್ಚಿ ಕುಳಿತಿರುವುದು ಮಾತ್ರ ವಿಪರ್ಯಾಸ!!!

ಮೂಲ:http://vijayavani.net/dighvijay-sting-operation-reveals-undistributed-ration-under-annabhagya-scheme-rotten-in-warehouse/

– ಅಲೋಖಾ

 

Tags

Related Articles

Close