ಭಾರತದ ಸ್ವಾತಂತ್ರ್ಯ ಕಥೆಯು ಸ್ಪೂರ್ತಿದಾಯಕ ವ್ಯಕ್ತಿಗಳೊಂದಿಗೆ ಅನೇಕ ಕೆಚ್ಚೆದೆಯ ಘಟನೆಗಳನ್ನು ಹೊಂದಿದೆ. ಭಗತ್‍ಸಿಂಗ್ , ಚಂದ್ರಶೇಖರ್ ಆಜಾದ್, ರಾಜ್ಗುರು ಮುಂತಾದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕಾಗಿ ಹೋರಾಡುವ ಮೂಲಕ ತಮ್ಮ ಜೀವವನ್ನೇ ತ್ಯಾಗ ಮಾಡಿದ ಅಮರ ಜೀವಿಗಳು. ಇಡೀ ದೇಶವೇ ಹೆಮ್ಮೆ ಪಡುವಂತಹ ವ್ಯಕ್ತಿಗಳು ಇವರಾದರು. ಆದರೆ ನಾವು ನಂಬಿದ್ದ ಕೆಲವರು ಮಾತ್ರ ನಮ್ಮನ್ನು ತಲೆತಗ್ಗಿಸುವ ಕೆಲಸ ಮಾಡಿದ್ದಾರೆ ಎಂದರೆ ನಂಬಲು ಸಾಧ್ಯವೇ? ಹೌದು ಭಾರತವನ್ನು ದೂಷಿಸುವ ಮತ್ತು ಅದನ್ನು ಅಸಮರ್ಥ ಎಂದು ಪ್ರತಿಪಾದಿಸಿದ ಒಬ್ಬ ವ್ಯಕ್ತಿಯು ಇದ್ದಾರೆ ಎಂದರೆ ಅದು ಜವಾಹರ್‍ಲಾಲ್ ನೆಹರೂ.
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಭಾರತವನ್ನು ಆಳ್ವಿಕೆ ನಡೆಸಿದ್ದು ನಮಗೆಲ್ಲರಿಗೂ ತಿಳಿದ ವಿಷಯ. ಬ್ರಿಟಿಷರು ಕೆಲ ಪ್ರದೇಶಗಳನ್ನು ನಿರ್ವಹಿಸುತ್ತಿದ್ದರು ಮತ್ತು 530 ಸ್ಥಳೀಯ ಪ್ರದೇಶಗಳನ್ನು ರಾಜರು ನಿರ್ವಹಿಸುತ್ತಿದ್ದರು . 1947ರಲ್ಲಿ ಯಾವಾಗ ನಮಗೆ ಸ್ವತಂತ್ರ ಸಿಕ್ಕಿತೋ ಆ ಸಮಯದಲ್ಲಿ ಅನೇಕ ರಾಜರುಗಳು ತಮ್ಮ
ಭೂಮಿಯನ್ನು ಮರಳಿ ಪಡೆಯಲು ಮತ್ತು ಸ್ವತಂತ್ರ ರಾಷ್ಟ್ರವಾಗಿ ಉಳಿಯಲು ಬಯಸಿದ್ದರು. ಆದರೆ ಮಹಾನ್ ನೆಹರು ಮಾತ್ರ ಅವರನ್ನು ಏಕಕಾಲದಲ್ಲಿ ಉಳಿಯಲು ಮನವರಿಕೆ ಮಾಡಲಿಲ್ಲ ಮತ್ತು ಭಾರತವನ್ನು ಒಂದು ರಾಷ್ಟ್ರವೆಂದು ಘೋಷಣೆ ಮಾಡಿದರು. ಇವರು ಈ ಕಠಿಣ ಕೆಲಸವನ್ನು ಸರ್ದಾರ್‍ಗೆ ನೀಡುವುದರ ಮೂಲಕ ನೆಹರು ಕೈತೊಳೆದು ಕೊಂಡರು. ಬಿಸ್ಮಾರ್ಕ್ ಚುರುಕುತನ ಮತ್ತು ಅಖಂಡತೆಗಳೊಂದಿಗೆ ಸರ್ದಾರ್ 562 ರಾಜಪ್ರಭುತ್ವದ ರಾಜ್ಯಗಳನ್ನು ಸಂಯೋಜಿಸಿದರು. ಸರ್ದಾರ್ ಒಬ್ಬ ಮಹಾನ್ ಸಮಗ್ರತೆ ಹೊಂದಿದ ವ್ಯಕ್ತಿಯಾಗಿದ್ದರು ಮತ್ತು ಭಾರತೀಯರು ಒಂದು ಗೂಡಬೇಕೆಂದು ಬಯಸಿದ್ದರು. ಆದರೆ ಕಾಶ್ಮೀರ, ಹೈದರಬಾದ್ ಮತ್ತು ಜುನಾಗಢ್ ಮೂರು ರಾಜ್ಯಗಳು ಭಾರತೀಯರ ಪ್ರಜಾಪ್ರಭುತ್ವದ ಭಾಗವಾಗಲು ಅಸಮ್ಮತಿ ಹೊಂದಿದ್ದವು.
ಸ್ವಾತ0ತ್ರ್ಯಾ ನಂತರ ಪಾಕಿಸ್ತಾನ ಕಾಶ್ಮೀರ ಮತ್ತು ಲಕ್ಷದ್ವೀಪದಂತಹ ರಾಜ್ಯಗಳ ಮೇಲೆ ಕಣ್ಣಿಟ್ಟಿತ್ತು. ಸರ್ದಾರ್ ಪಟೇಲ್‍ಗೆ ಜಿನ್ನಾ ಒಬ್ಬ ನಂಬಿಕೆಗೆ ಅರ್ಹನಾದ ವ್ಯಕ್ತಿ ಅಲ್ಲ ಎಂಬ ವಿಷಯ ಅವರಿಗೆ ಮೊದಲೇ ತಿಳಿದಿತ್ತು. ಪಾಕಿಸ್ತಾನದವರು ಲಕ್ಷದ್ವೀಪವನ್ನು ವಶಪಡಿಸಿಕೊಳ್ಳಲು ಯೋಜಿಸಿದ್ದರು ಮತ್ತು ಈ ಪ್ರತ್ಯೇಕ ದ್ವೀಪವನ್ನು
ವಶಪಡಿಸಿಕೊಳ್ಳಲು ಅನೇಕ ನೌಕಾ ಹಡಗುಗಳನ್ನು ಕಳುಹಿಸಿದ್ದರು.. ಭಾರತೀಯ ನೌಕಾಪಡೆಗೆ ಸರ್ದಾರ್ ಸರಿಯಾಗಿ ತರಭೇತಿ ನೀಡಿ ಪಾಕಿಸ್ತಾನದ ಹಡಗುಗಳನ್ನು ಪ್ರತಿಬಂಧಿಸಿ ಎಚ್ಚರಿಕೆ ನೀಡಿದ್ದರು. ಅವರನ್ನು ವಾಪಸ್ಸು ಪಾಕಿಸ್ತಾನಕ್ಕೆ ಅಟ್ಟಿದರು. ಸರ್ದಾರ್‍ರಿಂದ ಒಂದು ಪ್ರಮುಖ ವಿಪತ್ತು ನಿವಾರಣೆಯಾಯಿತು ಎಂದು ಹೇಳಬಹುದು.
ಸರ್ದಾರ್ ಪಟೇಲ್ ಅವರು ಹೈದರಬಾದ್ ಮತ್ತು ಜುನಾಗಢ್‍ಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಹೊಸ ತಂತ್ರವನ್ನು ರೂಪಿಸಿ ಸ್ವಾಧೀನ ಪಡಿಸಿಕೊಂಡರು. ಆದರೆ ಕಾಶ್ಮೀರವನ್ನು ಭಾರತೀಯ ಪ್ರಾಂತ್ಯಕ್ಕೆ ತರುವ ಕಾರ್ಯವನ್ನು ನೆಹರು ತೆಗೆದುಕೊಂಡರು. ಆದರೆ ಇದರ ಪರಿಣಾಮವಾಗಿ ಇಂದಿಗೂ ಕಾಶ್ಮೀರದಲ್ಲಿ ಸಮಸ್ಯೆ ಮುಂದುವರಿದಿದೆ. ನೆಹರೂ ಅವರ ಆಳ್ವಿಕೆಯ ಸಮಯದಲ್ಲಿ ನಾವು ಚೀನಾ ಮತ್ತು ಪಾಕಿಸ್ತಾನಕ್ಕೆ 1.25 ಲಕ್ಷ ಚದರ ಮೀಟರ್‍ಗಳಷ್ಟು ಭೂಮಿ ಕಳೆದುಕೊಂಡಿದ್ದೇವೆ. ಆದರೆ ನೆಹರೂ ಇದರ ಬಗ್ಗೆ ಯಾವತ್ತೂ ತಲೆಕೆಡಿಸಿಕೊಂಡೇ ಇಲ್ಲ.
ಹೈದರಬಾದ್ ಮತ್ತು ಜುನಾಗಢ್ ರಾಜ್ಯಗಳು ಭಾರತಕ್ಕೆ ಏಕೀಕರಣಗೊಳ್ಳುವ ಮೊದಲು ಸರ್ದಾರ್ ಪಟೇಲ್ ದೊಡ್ಡ ಸವಾಲುಗಳನ್ನು ಎದುರಿಸಬೇಕಾಯಿತು. ಆದರೆ ಅವರ ನಿರ್ಣಯ ಮತ್ತು ಬದ್ಧತೆಯು ಅವರನ್ನು ಕೆಲಸದಿಂದ ಹಿಂದೆಗೆದುಕೊಳ್ಳಲಿಲ್ಲ. ಆದರೆ ಮತ್ತೊಂದೆಡೆ ನೆಹರೂ ಪರಿಸ್ಥಿತಿ ಸಂಪೂರ್ಣವಾಗಿ ಹತಾಶಗೊಂಡಿತ್ತು. ಮತ್ತು ಪಟೇಲ್ ರಾಜ್ಯವನ್ನು ಮರಳಿಪಡೆಯಲು ಸಮರ್ಥರಾಗಿದ್ದಾರೆ ಎಂದು ನೆಹರು ನಂಬಲು ತಯಾರಿರಲಿಲ್ಲ. ಆದ್ದರಿಂದ ನೆಹರೂ ಸ್ವಾತಂತ್ರ್ಯವನ್ನು ಬಿಟ್ಟುಕೊಡಲು ಯೋಜಿಸಿದ್ದರು. ಭಾರತದ ಭೂಪ್ರದೇಶದ ಮೇಲೆ ನಿಯಂತ್ರಣವನ್ನು ಪಡೆಯಲು ಲಾರ್ಡ್ ಮೌಂಟ್ ಬ್ಯಾಟನ್ ಬಯಸಿದ್ದರು. ಇದೇ ಕಾರಣಕ್ಕಾಗಿ ಸ್ವಾತಂತ್ರ್ಯಾ ನಂತರವೂ ಮೌಂಟ್‍ಬ್ಯಾಟನ್ ಭಾರತದ ಗವರ್ನರ್ ಜನರಲ್ ಆಗಿದ್ದರು.
ನೆಹರುವಿನ ಪ್ರಮಾದ ಒಂದ? ಎರಡಾ? ಪ್ರಮಾದಗಳನ್ನು ಹೇಳುತ್ತಾ ಇದ್ದರೆ ಪುಸ್ತಕವನ್ನೇ ಬರೆಯಬಹುದು. ಹೈದರಬಾದ್ ಕ್ರಿಯೆಯಲ್ಲಿ ನೆಹರೂ ಹೇಗೆ ನಿಧಾನವಾಗಿ ಮತ್ತು ಮೃದುವಾಗಿ ಹೋಗಬೇಕೆಂಬುದನ್ನು ಮುಸ್ಲಿಮರಿಗೆ ಸಮಾಧಾನಗೊಳಿಸುವ ಸಂದರ್ಭವನ್ನು ಮಣಿಬೆಲ್ ಪಟೇಲ್‍ರ ಡೈರಿಯಲ್ಲಿ ಸಂಪೂರ್ಣ ವಿವರಗಳನ್ನು ನೀಡುತ್ತದೆ. ಆದರೆ ಸರ್ದಾರ್ ಮತ್ತು ರಾಜಗೋಪಾಲಚಾರಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ನೆಹರೂವಿಗೆ ಅತ್ಯಂತ ಬಲವಾಗಿ ಎಚ್ಚರಿಕೆಯನ್ನು ಕೂಡಾ ನೀಡುತ್ತಾರೆ. ಇದೇ ರೀತಿಯಾಗಿ ನೀವು ಅವರಿಗೆ ಬೆಂಬಲವನ್ನು ನೀಡುತ್ತಾ ಬಂದರೆ ಒಂದು ಬದಿಯಲ್ಲಿ ಪಾಶ್ಚಿಮಾತ್ಯ ಪಾಕಿಸ್ತಾನ ಮತ್ತು ಇನ್ನೊಂದೆಡೆ ಪೂರ್ವ ಪ್ಯಾನಿಸ್ಲಾಮಿಕ್ ತಮ್ಮ ಕಲ್ಪನೆಯೊಂದಿಗೆ ದೆಹಲಿಗೆ ಬಂದು ಮತ್ತೆ ಮೊಘಲ್ ಸಾಮ್ರಾಜ್ಯವನ್ನು ಸ್ಥಾಪಿಸುತ್ತಾರೆ ಎಂದು ನೆಹರುವಿಗೆ ಸರ್ದಾರ್ ಖಾರವಾಗಿಯೇ ಹೇಳಿದ್ದರು ಎಂದು ಡೈರಿಯಲ್ಲಿ ಉಲ್ಲೇಖಿಸಿದ್ದರು.
ಭಾರತದ ಯಾವುದೇ ಅಭಿವೃದ್ಧಿಗೆ ನೆಹರೂ ಯಾವುದೇ ಅಸ್ತಕ್ಷೇಪ ಮಾಡಿಲ್ಲ ಎಂಬುವುದನ್ನು ಆ ಡೈರಿ ಹೇಳುತ್ತದೆ. ಕೇವಲ ಜನರ ಕಣ್ಣಿಗೆ ಮಣ್ಣೆರಚಿರುವುದೇ
ಜಾಸ್ತಿಯಾಗಿದೆ. ಸಾತಂತ್ರ್ಯ ಕಾಲದಿಂದಲೂ ಪ್ರಜಾಪ್ರಭುತ್ವ ರಾಜಕೀಯದಲ್ಲಿ ಮಾತ್ರ ಅವರು ಕೇಂದ್ರೀಕರಿಸಿದ್ದಾರೆ. ನೆಹರೂ ಲಿಖಾಯತ್ ಅಲಿಗೆ ಒತ್ತುಕೊಟ್ಟಿರುವುದು ಸರ್ದಾರ್ ಪಾಟೇಲರಿಗೆ ಇಷ್ಟವಿರಲಿಲ್ಲ ಅದನ್ನು ಅವರು ವಿರೋಧಿಸುತ್ತಿದ್ದರು. ಅನೇಕ ಹಿಂದೂಗಳಿಗೆ ಇದರಿಂದ ತೊಂದರೆಯಾಗಿತ್ತು.
ಬಂಗಾಳದ ಕ್ಷಾಮದಲ್ಲಿ 30 ಲಕ್ಷ ಜನರು ಮರಣ ಹೊಂದಿದರೂ ನೆಹರೂ ಯಾವುದೇ ಆತಂಕವನ್ನು ಹೊಂದದಿರುವುದನ್ನು ಸರ್ದಾರ್ ಗಮನಿಸುತ್ತಿದ್ದರು. ಮಹಿಳೆಯರ ಮೇಲೆ ಆಕ್ರಮಣ ನಡೆದಿದ್ದರೂ, ಮತಾಂತರ ಮಾಡಿದರೂ ನೆಹರೂ ಮಾತ್ರ ಕ್ಯಾರೇ ಎನ್ನಲಿಲ್ಲ. ಇದರ ಬಗ್ಗೆ ಸರ್ದಾರ್ ಮತ್ತಷ್ಟು ಹೇಳಿದ್ದರು. ಆದರೆ ಯಾವುದನ್ನೂ ನೆಹರೂ ತಲೆಗೆಹಾಕಿಕೊಳ್ಳಲಿಲ್ಲ. ನೆಹರೂ ಅವರು ಶೇಖ್ ಅಬ್ದುಲ್ಲಾ ಅವರ ಆತ್ಮೀಯ ಗೆಳೆಯರಾಗಿದ್ದರು. ಆದರೆ ಸರ್ದಾರ್ ಅವರನ್ನು ಯಾವತ್ತೂ ನಂಬಲಿಲ್ಲ.
ಬಚ್ಚಿ ಗುಲಾಮ್ ಮೊಹಮ್ಮದ್ ಅವರು ಹೈದರಬಾದನ್ನು ವಶಪಡಿಸಿದಂತೆ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಬೇಕೆಂದು ಸರ್ದಾರ್‍ರನ್ನು ಒತ್ತಾಯಿಸಿದರು. ಆದರೆ ಕಾಶ್ಮೀರದ ಮೇಲೆ ಸರ್ದಾರ್‍ಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆಹರೂರವರ ಅನುಮತಿ ಇರಲಿಲ್ಲ. ಕಾಶ್ಮೀರ ವಿಚಾರ ಸಂಕೀರ್ಣಗೊಂಡಾಗ ನೆಹರು ಮತ್ತು ಅವರ ನಿಷ್ಠಾವಂತರು ಜಮ್ಮುವನ್ನು ಭಾರತದೊಂದಿಗೆ ಉಳಿಸಿಕೊಳ್ಳಲು ಪ್ರಸ್ತಾವನೆಯನ್ನು ತಂದರು ಮತ್ತು ಉಳಿದ ಭಾಗವನ್ನು ಪಾಕಿಸ್ತಾಕ್ಕೆ ಹಸ್ತಾಂತರಿಸಲು ತಯಾರಾಗಿದ್ದರು. ಆ ಸಮಯದಲ್ಲಿ ಸರ್ದಾರ್ ಇದನ್ನು ಖಂಡಿಸಿ “ಇಡೀ ಪ್ರದೇಶವನ್ನು ನಾವು ಬಯಸುತ್ತೇವೆ ಮತ್ತು ಕಾಶ್ಮೀರಕ್ಕಾಗಿ ನಾವು ಹೋರಾಡಬೇಕಾಗಿದೆ ಎಂದರು. ಸರ್ದಾರ್ ಈ ಹೇಳಿಕೆಯನ್ನು ನೆಹರೂ ಸಂಪೂರ್ಣವಾಗಿ ತಿರಸ್ಕರಿಸಿ ಅವರನ್ನು ಅಪಹಾಸ್ಯಕ್ಕೊಳಪಡಿಸಿದರು. ನೆಹರೂವಿನ ಈ ನಿರ್ಣಯವನ್ನು ಸರ್ದಾರ್ ನೆಹರೂ ಜೀವಂತ ಇರುವವರಗೂ ಮರೆಯುದಿಲ್ಲ ಎಂದು ಹೇಳಿದರು. ಸರ್ದಾರ್‍ರ ಧೈರ್ಯದ ನಿರ್ಧಾರ ಕಾಶ್ಮೀರ ಭಾರತಕ್ಕೆ ಸಿಗುವಂತಾಯಿತು ಇಲ್ಲದಿದ್ದರೆ ಪಾಕಿಸ್ತಾನದ ಪಾಲಾಗುತ್ತಿತ್ತು.
-ಪವಿತ್ರ