ಪ್ರಚಲಿತ

ಭಾರತದ ಇತಿಹಾಸಕ್ಕೆ ಸಂಬಂಧಪಟ್ಟ ಮೊತ್ತ ಮೊದಲ ಭೌತಿಕ ಸಾಕ್ಷ್ಯ ಉತ್ತರ ಪ್ರದೇಶದಲ್ಲಿ ಲಭ್ಯ!! 2000 ವರ್ಷ ಪುರಾತನ ಕಂಚಿನ ಯುಗದ ರಥಗಳು ಉತ್ಖನನ ಕಾಲದಲ್ಲಿ ಪತ್ತೆ!!

ಭಾರತದ ಇತಿಹಾಸಕ್ಕೆ ಸಂಭಂಧ ಪಟ್ಟ ಅತಿ ಮಹತ್ವಪೂರ್ಣವೆನಿಸುವ ಭೌತಿಕ ಧಾಖಲೆ ಭಾರತೀಯ ಪುತಾತತ್ವ ಸರ್ವೇಕ್ಷಣ ಸಂಸ್ಥೆಗೆ ದೊರಕಿದೆ. ಉತ್ತರ ಪ್ರದೇಶದ ಬಾಗ್ಪಾಟಿನ ಸನೌಲಿ ಗ್ರಾಮದ ಸಮೀಪ ಭಾರತದ ಪುರಾತತ್ತ್ವ ಇಲಾಖೆ ಕೈಗೊಂಡ ಇತ್ತೀಚಿನ ಉತ್ಖನನದಲ್ಲಿ 2000 BC ಯ ಅವಧಿಯಲ್ಲಿ ಬಳಸಿದ ರಥಗಳ ಮೊತ್ತ ಮೊದಲ ದೈಹಿಕ ಪುರಾವೆ ದೊರೆತಿದೆ ಎಂದು ವರದಿ ಮಾಡಲಾಗಿದೆ. ಈ ರಥ ಕಂಚಿನ ಯುಗಕ್ಕೆ ಸಂಬಂಧ ಪಟ್ಟದ್ದೆಂದು ಅಂದಾಜಿಸಲಾಗಿದೆ. ವರದಿಗಳ ಪ್ರಕಾರ ರಾಜ ಪರಿವಾರದ ಸಮಾಧಿ ಸ್ಥಳದಲ್ಲಿ ನಡೆಸಿರುವ ಉತ್ಖನದಲ್ಲಿ ದೊರೆತಿರುವ ಅತ್ಯಾಧುನಿಕ ಆಯುಧಗಳು, ಆಭರಣಗಳು, ಕುಂಬಾರಿಕೆ ಮತ್ತು ಇತರ ಸಾಮಗ್ರಿಗಳಿಂದ ಈ ಪ್ರದೇಶದಲ್ಲಿ ಅತ್ಯಂತ ಅಧುನಿಕ ‘ಯೋಧ ವರ್ಗದ’ ನಾಗರೀಕತೆ ಇತ್ತೆನ್ನುವುದನ್ನು ಪುಷ್ಟೀಕರಿಸಲ್ಪಡುತ್ತದೆ.

ಅಲ್ಲಿಗೆ ವೇದ-ಪುರಾಣ-ಮಹಾಕಾವ್ಯಗಳಲ್ಲಿ ಬರೆದದ್ದು ಸುಳ್ಳಲ್ಲ ಎನ್ನುವ ವಿಚಾರಕ್ಕೆ ಬಲ ಬಂದಾಯಿತು. ಈ ವರ್ಷದ ಮಾರ್ಚಿನಲ್ಲಿ ಪ್ರಾರಂಭವಾದ ಉತ್ಖನನ ಸತತ ಮೂರು ತಿಂಗಳು ನಡೆಸಲಾಗಿದೆ. ಈ ಪ್ರದೇಶದಲ್ಲಿದ್ದ 116 ಸಮಾಧಿ ಸ್ಥಳಗಳನ್ನು ಅಗೆದಾಗ ಇಲ್ಲಿನ ನಾಗರಿಕತೆ ಬಹುತೇಕ ಹರಪ್ಪಾ ನಾಗರಿಕತೆಯನ್ನು ಹೋಲುತ್ತದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ! ಭಾರತೀಯ ಪುರಾತತ್ವ ಇಲಾಖೆಯ ಪ್ರಕಾರ ಸಂಪೂರ್ಣ ತನಿಖೆ ಮುಗಿಯುವವರೆಗೂ ಇಲ್ಲಿನ ಜನಾಂಗದ ಸಂಬಂಧ ಹರಪ್ಪಾ ನಾಗರಿಕತೆಯ ಜೊತೆ ಇತ್ತೆನ್ನುವುದನ್ನು ಹೇಳಲು ಬರುವುದಿಲ್ಲ. ತಾಮ್ರದಿಂದ ಮಾಡಲ್ಪಟ್ಟ ವಿವಿಧ ರೀತಿಯಿಂದ ಅಲಂಕರಿಸಲ್ಪಟ್ಟ ಒಟ್ಟು ಮೂರು ರಥಗಳು ಇದುವರೆಗೂ ಪ್ರಾಪ್ತವಾಗಿದೆ.

ಈ ಸಂಶೋಧನೆಗಳು ಮಹಾಭಾರತದ ಇತಿಹಾಸ ಮತ್ತು ದಿನಾಂಕದ ಕುರಿತಾದ ಸಂಶೋಧನೆಗಳಿಗೆ ಇನ್ನಷ್ಟು ಒಳನೋಟಗಳನ್ನು ಬೀರಲು ಸಹಾಯಕವಾಗಲಿದೆ ಎಂದು ದಿ ಡೈಲಿ ಪಯೋನಿಯರ್ ಪತ್ರಿಕೆ ಉಲ್ಲೇಖಿಸಿದೆ. ಅಲ್ಲಿಗೆ ಎಡಪಂಥೀಯರ ಮಹಾಭಾರತ-ರಾಮಾಯಣ ಕಟ್ಟು ಕಥೆ, ಅವು ನಡೆದೆ ಇಲ್ಲ, ರಾಮ-ಕೃಷ್ಣ ದೇವರೆ ಅಲ್ಲ ಎನ್ನುವ ಎಡಬಿಡಂಗಿ ವಾದಕ್ಕೆ ಎಳ್ಳು ನೀರು ಬಿಟ್ಟಂತೆಯೆ. ಇನ್ಸ್ಟಿಟ್ಯೂಟ್ ಆಫ್ ಆರ್ಕಿಯಾಲಜಿ ನಿರ್ದೇಶಕ ಎಸ್.ಕೆ.ಮಂಜುಲ್ ಅವರ ಪ್ರಕಾರ ರಥಗಳ ಚಕ್ರಗಳು ಕರಡು ಧ್ರುವದಿಂದ ಎರಡು ಪ್ರಾಣಿಗಳಿಗೆ ಜೋಡಿಸಲಾದ ಒಂದು ಸ್ಥಿರ ಅಚ್ಚಿನ ಮೇಲೆ ಸುತ್ತುವಂತೆ ನಿರ್ಮಿಸಲಾಗಿದೆ. ಈ ಪ್ರಾಣಿಗಳು ಬಹುಶಃ ಕುದುರೆಗಳು ಆಗಿದ್ದಿರಬಹುದು ಎಂದು ಶಂಕಿಸಲಾಗಿದೆ.

ಸಮಾಧಿ ಸ್ಥಳಗಳಲ್ಲಿ ದೊರೆತ ಶವ ಪೆಟ್ಟಿಗೆಯ ಮೇಲಿರುವ ತಾಮ್ರದ ಅಲಂಕಾರಗಳು ಇದು ರಾಜ ಪರಿವಾರದ ಸದಸ್ಯರಿಗೆ ಸಂಬಂಧ ಪಟ್ಟ ಪೆಟ್ಟಿಗೆಗಳು ಎನ್ನುವುದನ್ನು ಸೂಚಿಸುತ್ತವೆ. ಮಂಜುಲ್ ಅವರ ಪ್ರಕಾರ ಭಾರತ ಉಪದ್ವೀಪದಲ್ಲಿ ಮೊತ್ತ ಮೊದಲ ಬಾರಿಗೆ ಇಂತಹ ಶವಪೆಟ್ಟಿಗೆಗಳು ಕಂಡು ಬಂದಿವೆ. ಹರಪ್ಪಾ ಮತ್ತು ಮೊಹಂಜಾದಾರೋ ಮತ್ತು ಧೋಲಾವೀರನಲ್ಲಿ ಸಿಕ್ಕಿದ ಶವಪೆಟ್ಟಿಗೆಗಳಲ್ಲೂ ಈ ತೆರನಾದ ಕಲಾಕೃತಿ ಕಂಡು ಬಂದಿಲ್ಲ. ಇಲ್ಲಿ ದೊರೆತ ರಥಗಳು ಹೆಚ್ಚು ಕಡಿಮೆ ಟಿವಿಯಲ್ಲಿ ಧಾರಾವಾಹಿಗಳಲ್ಲಿ ತೋರಿಸುತ್ತಿದ್ದ ರಥಗಳಂತೆಯೆ ಇವೆ ಎಂದು ಮಂಜುಲ್ ಹೇಳುತ್ತಾರೆ.

ಇತರ ಸಂಶೋಧನೆಗಳ ಪೈಕಿ ಯುದ್ದಕ್ಕೆ ಉಪಯೋಗಿಸುವ ಶಿರಸ್ತ್ರಾಣಗಳು, ಖಡ್ಗಗಳು, ಕಠಾರಿಗಳು ಮತ್ತು ಗುರಾಣಿಗಳು ದೊರಕಿವೆ. ಮಾತ್ರವಲ್ಲದೆ, ಬಾಚಣಿಗೆ, ಕನ್ನಡಿ, ಮಣಿಗಳು, ಮಡಕೆಗಳಂತಹ ನಿತ್ಯೋಪಯೋಗಿ ವಸ್ತುಗಳು ಕೂಡಾ ದೊರೆತಿವೆ. ಈ ಎಲ್ಲಾ ವಸ್ತುಗಳು ನೋಡಿದಾಗ ಸಾಂಸ್ಕೃತಿಕವಾಗಿ, ಕಲಾತ್ಮಕವಾಗಿ ಮತ್ತು ವೈಜ್ಞಾನಿಕವಾಗಿ ಅತ್ಯಂತ ಮುಂದುವರಿದ ನಾಗರಿಕತೆಯೊಂದು ಇಲ್ಲಿ ನೆಲೆಸಿತ್ತು ಎನ್ನುವುದನ್ನು ಇದು ಸ್ಪಷ್ಟಪಡಿಸುತ್ತದೆ ಎನ್ನುವುದು ಮಂಜುಲ್ ಅವರ ಅಭಿಪ್ರಾಯ. ಈ ಸಂಶೋಧನೆಯು ನಮ್ಮ ಇತಿಹಾಸವನ್ನು ಸರಿಯಾದ ದೃಷ್ಟಿಯಲ್ಲಿ ಅಧ್ಯಯನ ಮಾಡಲು ಸಹಾಯಕವಾಗಲಿದೆ ಎಂದು ಅಂದಾಜಿಸಲಾಗಿದೆ. 1880-2200 BC ಗೂ ಪೂರ್ವದ್ದಾಗಿರಬಹುದಾದ ಈ ನಾಗರಿಕತೆಯು ಮೆಸೊಪಟೋಮಿಯಾ, ಜಾರ್ಜಿಯಾ ಮತ್ತು ಗ್ರೀಕ್ ನಾಗರೀಕತೆಗಳೊಂದಿಗೆ ಸಮಕಾಲೀನವಾಗಿತ್ತೆಂದು ಅಂದಾಜಿಸಲಾಗಿದೆ.

ದೇಶ-ವಿದೇಶಗಳಲ್ಲಿ ನಡೆಯುತ್ತಿರುವ ಉತ್ಖನನಗಳು ಸನಾತನ ಧರ್ಮ ಪ್ರಪಂಚದಾದ್ಯಂತ ಹಬ್ಬಿತ್ತು ಎನ್ನುವ ವಾದಕ್ಕೆ ಪುಷ್ಟಿ ಕೊಡುತ್ತಲಿವೆ. ಈ ಸಂಶೋಧನೆಗಳು ನಮ್ಮ ಪುರಾಣಗಳಲ್ಲಿ ಉಲ್ಲೇಖಿಸಲಾದ ವಿಶಯಗಳಿಗೂ ಮತ್ತು ಈಗ ದೊರೆಯುತ್ತಿರುವ ವಸ್ತುಗಳಿಗೂ ಹಾಗೂ ವಿಜ್ಞಾನ ಜಗತ್ತಿನಲ್ಲಿ ನಡೆಸಲಾಗುತ್ತಿರುವ ಸಂಶೋಧನೆಗಳಿಗೂ ಸಂಬಂಧ ಇದೆ ಎನ್ನುವುದನ್ನು ಸಾರಿ ಸಾರಿ ಹೇಳುತ್ತಿದೆ. ನಮ್ಮಲ್ಲಿ ಕೆಲ ಬುದ್ದಿ ಜೀವಿಗಳು ಅವೆಲ್ಲ ಕಾಗೆ-ಗೂಬೆ ಕಥೆ ಎನ್ನುತ್ತಾರೆ. ಆದರೆ ಇದೆ ಎಡಬಿಡಂಗಿಗಳು ಯೇಸು-ಅಲ್ಲಾ ನಿಜವಾಗಿ ಹುಟ್ಟಿದ್ದರು, ಅವರೆ ನಿಜವಾದ ದೇವರು ಎಂದು ಪುಂಗಿ ಊದುತ್ತಾರೆ!! ಇಷ್ಟರಲ್ಲಾಗಲೆ ರಾಮ ಸೇತು ಮಾನವ ನಿರ್ಮಿತ ಎನ್ನುವುದು ಸಾಬೀತಾಗಿದೆ. ಇನ್ನು ಕುರುಕ್ಷೇತ್ರ ಯುದ್ದ ನಿಜವಾಗಿಯೂ ಸಂಭವಿಸಿತ್ತು ಎನ್ನುವುದಕ್ಕೆ ಇಂತಹ ದಾಖಲೆಗಳು ಪೂರಕವಾಗುತ್ತವೆ. ಆದಷ್ಟು ಬೇಗ ಸತ್ಯ ಹೊರಬಂದು ಭಾರತದ ಸನಾತನ ಸಂಸ್ಕೃತಿಯ ಅಸ್ತಿತ್ವದ ಪರಿಚಯ ಪ್ರಪಂಚಕ್ಕಾಗಲಿ.

-ಶಾರ್ವರಿ

Tags

Related Articles

Close