ಪ್ರಚಲಿತ

ಭಗವಾ ರಾಜ್ಯದಲ್ಲಾಗಲಿದೆ ದೇಶದ ಭದ್ರತೆಯನ್ನು ಸುರಕ್ಷಿತಗೊಳಿಸುವ ರಕ್ಷಣಾ ಕ್ರಾಂತಿ: 20000 ಕೋಟಿಯ ರಕ್ಷಣಾ ಕೈಗಾರಿಕಾ ಕಾರಿಡಾರಿಗೆ ಉತ್ತರ ಪ್ರದೇಶದ ಹೆಬ್ಬಾಗಿಲು ತೆರೆದ ಯೋಗಿ ಸರಕಾರ!

ರಾಜ್ಯದಲ್ಲಿ ರಕ್ಷಣಾ ಉತ್ಪಾದನೆಯನ್ನು ಸ್ಥಾಪಿಸುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಉತ್ತರ ಪ್ರದೇಶ ಸರ್ಕಾರವು ಜಗತ್ತಿನ ಎಲ್ಲಾ ರಕ್ಷಣಾ ಉತ್ಪಾದಕ ಕಂಪನಿಗಳಿಗೆ ಉತ್ತರ ಪ್ರದೇಶದ ಹೆಬ್ಬಾಗಿಲನ್ನು ತೆರೆದಿದೆ. ಭಗವಾ ರಾಜ್ಯದಲ್ಲಿ ದೇಶದ ರಕ್ಷಣೆಗೆ ಸಂಬಂಧ ಪಟ್ಟ ಉಪಕರಣಗಳ ಉತ್ಪಾದನೆಗಾಗಿ 20000 ಕೋಟಿ ವೆಚ್ಚದಲ್ಲಿ “ರಕ್ಷಣಾ ಕೈಗಾರಿಕಾ ಕಾರಿಡಾರ್” ನಿರ್ಮಿಸಲಾಗುವುದು. ಭಾಜಪಕ್ಕೆ ಏಕೆ ಮತ ನೀಡಬೇಕು? ಎಂದು ಕೇಳುವವರೇ… ನೋಡಿ, ಭಾಜಪ ಶಾಸನವಿರುವ ರಾಜ್ಯಗಳಲ್ಲಿ ಯಾವ ರೀತಿಯ ಅಭಿವೃದ್ದಿಗಳಾಗುತ್ತಿವೆ ಎಂಬುದನ್ನು. ಮಾತ್ರವಲ್ಲ, ದೇಶದ ರಕ್ಷಣೆಯ ವಿಷಯದಲ್ಲಿ ಭಾಜಪ ಸರಕಾರ ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ. ಇದನ್ನು ನಾವು ಅಟಲ್ ಕಾಲದಲ್ಲೂ ನೋಡಿದ್ದೇವೆ ಈಗ ಮೋದಿ ಕಾಲದಲ್ಲೂ ನೋಡುತ್ತಿದ್ದೇವೆ. ದೇಶ ರಕ್ಷಣೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದು ಲಜ್ಜೆಗೆಟ್ಟ ಕಾಂಗ್ರೆಸ್ ಸರಕಾರ.

ಈ ವರ್ಷದ ಫೆಬ್ರವರಿಯಲ್ಲಿ ಉತ್ತರ ಪ್ರದೇಶ ಸರ್ಕಾರ ಆಯೋಜಿಸಿದ್ದ ಎರಡು ದಿನದ ರಕ್ಷಣಾ ಹೂಡಿಕೆದಾರರ ಶೃಂಗದಲ್ಲಿ ಮೋದಿ ಸರಕಾರವು ರಾಜ್ಯದಲ್ಲಿ ರಕ್ಷಣಾ ಕೈಗಾರಿಕಾ ಕಾರಿಡಾರ್ ಸ್ಥಾಪಿಸುವ ಬಗ್ಗೆ ಘೋಷಣೆ ಮಾಡಿತ್ತು. ಈ ಯೋಜನೆಯ ಪ್ರಕಾರ ದೇಶದಲ್ಲಿ ಇಂತಹ ಎರಡು ಕೈಗಾರಿಕಾ ಕಾರಿಡಾರ್ ಗಳನ್ನು ಸ್ಥಾಪಿಸಲಾಗುವುದು. ಒಂದು ಚೆನ್ನೈ ಮತ್ತು ಬೆಂಗಳೂರಿನಿಂದ ಹಾದುಹೋಗುವ ಕೊಯಮತ್ತೂರಿನಲ್ಲಿ ಸ್ಥಾಪನೆಯಾದರೆ ಮತ್ತೊಂದು ಉತ್ತರ ಪ್ರದೇಶದ ಬುಂದೇಲ ಖಂಡ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ಅಲಿಘಢ್, ಆಗ್ರಾ, ಝಾನ್ಸಿ, ಚಿತ್ರಕುಟ್, ಕಾನ್ಪುರ್ ಮತ್ತು ಲಕ್ನೋ ಮೂಲಕ ಹಾದುಹೋಗುವ ಸುಮಾರು 3000 ಹೆಕ್ಟೇರ್ ಪ್ರದೇಶದಲ್ಲಿ ಈ ಕೈಗಾರಿಕಾ ಕಾರಿಡಾರ್ ನಿರ್ಮಾಣವಾಗಲಿದೆ.

ಈ ಕೈಗಾರಿಕಾ ಕಾರಿಡಾರ್ ನಿರ್ಮಾಣದಿಂದ ಭಾರತಕ್ಕಾಗುವ ಲಾಭವೇನು?

ಮೊತ್ತ ಮೊದಲನೆಯದಾಗಿ ವಿದೇಶದಿಂದ ರಕ್ಷಣಾ ಉತ್ಪನ್ನಗಳನ್ನು ಖರೀದಿಸುವ ಜಂಜಾಟ ತಪ್ಪುವುದು ಮತ್ತು ದೇಶೀಯ ಉತ್ಪಾದನೆಯನ್ನು ಖರೀದಿಸಲು ಉತ್ತೇಜನ ದೊರೆಯುವುದು. ಇದರಿಂದ ದೇಶದ ಬೊಕ್ಕಸಕ್ಕೆ ಆಗುತ್ತಿದ್ದ ಮಿಲಿಯನ್ ಗಟ್ಟಲೆ ರುಪಾಯಿಯ ಖರ್ಚು ಉಳಿತಾಯವಾಗುವುದು. ಜಾಗತಿಕ ಮಟ್ಟದಲ್ಲಿ ವಿದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುವ ಅತಿ ದೊಡ್ಡ ರಾಷ್ಟ್ರ ಭಾರತ. 2012 ಮತ್ತು 2016 ರ ನಡುವೆ, ಭಾರತವು 13% ನಷ್ಟು ಜಾಗತಿಕ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿದೆ. ತನ್ನ ನೆರೆಹೊರೆಯ ದೇಶಗಳಿಂದ ಸದಾ ಯುದ್ದ ಭೀತಿಯನ್ನೆದುರಿಸುತ್ತಿರುವ ಭಾರತಕ್ಕೆ ತನ್ನ ಬಜೆಟಿನ ಬಹುಪಾಲನ್ನು ರಕ್ಷಣಾ ಕ್ಷೇತ್ರಕ್ಕೆ ಮೀಸಲಾಗಿಡಬೇಕಾಗುತ್ತದೆ. ರಕ್ಷಣಾ ಇಲಾಖೆಯ ಬಹು ಪಾಲು ಶಸ್ತ್ರಾಸ್ತ್ರಗಳನ್ನು ವಿದೇಶದಿಂದ ದುಬಾರಿ ಬೆಲೆ ಕೊಟ್ಟು ಖರೀದಿಸಲಾಗುತ್ತದೆ.

ವಿದೇಶದಿಂದ ಆಮದು ಮಾಡಿಕೊಳ್ಳಲಾಗುವ ಶಸ್ತ್ರಾಸ್ತ್ರಗಳನ್ನು ಭಾರತದಲ್ಲೇ ನಿರ್ಮಿಸಿದರೆ ಭಾರತದ ಬೊಕ್ಕಸಕ್ಕೆ ಮಿಲಿಯನ್ ಗಟ್ಟಲೆ ಉಳಿತಾಯವಾಗುವುದರ ಜೊತೆಗೆ ಶಸ್ತ್ರಾಸ್ತ್ರಗಳನ್ನು ಇತರ ದೇಶಗಳಿಗೆ ರಫ್ತು ಮಾಡುವುದರಿಂದ ಆದಾಯವೂ ಬರುತ್ತದೆ. ಮೋದಿ ಸರ್ಕಾರವು ಸುಮಾರು 300 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವ ಅಥವಾ ರಾಜ್ಯದಲ್ಲಿ ಕನಿಷ್ಠ 1,000 ನೇರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಘಟಕಗಳಿಗೆ ಭೂಮಿಯ ವೆಚ್ಚದಲ್ಲಿ 25% ನಷ್ಟು ಮರುಪಾವತಿಯನ್ನು ನೀಡುತ್ತದೆ. ಇದರಿಂದ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಭಾರತ ಸ್ವಾವಲಂಬಿಯಾಗುವ ಜೊತೆಗೆ ದೇಶದ ಯುವಕರಿಗೆ ಉದ್ಯೋಗವೂ ದೊರಕುತ್ತದೆ. ಮೋದಿಯೆಂದರೆ ಹಾಗೆನೆ, ಒಂದೇ ಏಟಿಗೆ ಏರಡು ಹಕ್ಕಿಗಳನ್ನು ಬೀಳಿಸುವ ಜಾಣ್ಮೆ ಅವರಿಗೆ ಕರಗತವಾಗಿ ಬಿಟ್ಟಿದೆ!!

ರಕ್ಷಣಾ ಉತ್ಪನ್ನಗಳನ್ನು ತಯಾರಿಸಲು ಆಸಕ್ತಿ ಇರುವ ಸಾರ್ವಜನಿಕ ವಲಯ ಘಟಕಗಳಿಗೆ ಸಬ್ಸಿಡಿ ಆಧಾರದಲ್ಲಿ ಭೂಮಿಯನ್ನು ಗುತ್ತಿಗೆ ನೀಡಲಾದರೆ ಖಾಸಗಿ ವಲಯದ ಕಂಪೆನಿಗಳಿಗೆ ಪ್ರೋತ್ಸಾಹ ನೀಡಲು ಸಬ್ಸಿಡಿ ಜೊತೆಗೆ ಸಂಶೋಧನೆ ಮತ್ತು ಅಭಿವೃದ್ಧಿ, ಪರೀಕ್ಷಾ ಘಟಕ, ಬಂಡವಾಳ ವೆಚ್ಚ, ಮೂಲಸೌಕರ್ಯ, ಸಂಪೂರ್ಣ ವಿನಾಯಿತಿ ಮತ್ತು ಸ್ಟ್ಯಾಂಪ್ ಡ್ಯೂಟಿಯಲ್ಲಿ 70% ರಿಂದ 90% ರಷ್ಟು ರಾಜ್ಯ ಜಿ.ಎಸ್.ಟಿ ಯಲ್ಲಿ ಮರುಪಾವತಿ ನೀಡಲಾಗುವುದು. ಖಾಸಗಿ ವಲಯವು ತ್ವರಿತವಾಗಿ ತಮ್ಮ ಘಟಕಗಳನ್ನು ಸ್ಥಾಪಿಸಲು ಮತ್ತು ತಂತ್ರಜ್ಞಾನ ವರ್ಗಾವಣೆಯ ನಿಯಮಗಳೊಂದಿಗೆ ಜಂಟಿ ಉತ್ಪಾದನೆಗೆ ಭಾರತೀಯ ಕಂಪೆನಿಗಳೊಂದಿಗೆ ಪಾಲುದಾರಿಕೆಯನ್ನು ಅಭಿವೃದ್ಧಿಪಡಿಸಲು ಅಗತ್ಯ ಮೂಲಸೌಕರ್ಯವನ್ನು ಸೃಷ್ಟಿಸಲು 30 ಶತಕೋಟಿ ರೂಪಾಯಿಗಳನ್ನು ಖುದ್ದು ಮೋದಿ ಸರಕಾರವೆ ರಾಜ್ಯಗಳಿಗೆ ನೀಡಲಿರುವುದು!!

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ – ಕಾನ್ಪುರ್ (IIT-K) ಮತ್ತು ಬನಾರಸ್ ಹಿಂದೂ ಯೂನಿವರ್ಸಿಟಿ (BHU)ಗಳು ರಕ್ಷಣಾ ಕ್ಷೇತ್ರದ ತಮ್ಮ ಜ್ಞಾನವನ್ನು ಕಂಪನಿಗಳಿಗೆ ಧಾರೆ ಎರೆಯಲಿವೆ. ಮೋದಿ ಸರಕಾರದ ಮಹತ್ವಾಕಾಂಕ್ಷಿ “ಮೇಕ್ ಇನ್ ಇಂಡಿಯಾ” ಯೋಜನೆಯ ಭಾಗವಾಗಿರುವ “ರಕ್ಷಣಾ ಕೈಗಾರಿಕಾ ಕಾರಿಡಾರ್” ದೇಶಾದ್ಯಂತ 2.5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎನ್ನಲಾಗಿದೆ. ತನ್ನ ಮೇಲೆ ಭಾರತದ ಜನತೆ ಇಟ್ಟ ವಿಶ್ವಾಸಕ್ಕೆ ಯಾವತ್ತೂ ದ್ರೋಹ ಬಗೆಯುವುದಿಲ್ಲ ಮೋದಿ ಮತ್ತು ಅವರ ಶಿಷ್ಯ ಯೋಗಿ. ಕಡೆ ಉಸಿರಿರುವವರೆಗೂ ಭಾರತ ಮಾತೆಯ ಸೇವೆಗೆ ತಮ್ಮ ಸರ್ವಸ್ವವನ್ನೂ ಧಾರೆಯೆರುವ ಮೋದಿ-ಯೋಗಿ ಜೋಡಿ ಭಾರತದ ಗೌರವ, ಸನಾತನ ಧರ್ಮದ ಹೆಮ್ಮೆ. ಮೋದಿ-ಯೋಗಿ ಜೋಡಿಯಿಂದ ದೇಶ ಮತ್ತು ಧರ್ಮ ರಕ್ಷಣೆಯ ಮಹತ್ತರ ಕಾರ್ಯಗಳು ಹೀಗೆ ಸಾಂಗವಾಗಿ ನೆರವೇರಲಿ.

-ಶಾರ್ವರಿ

Tags

Related Articles

Close