ಅಂಕಣಇತಿಹಾಸದೇಶಪ್ರಚಲಿತ

2002ರ ಗೋದ್ರಾ ಗಲಭೆಯ ಪ್ರಧಾನ ಸೂತ್ರಧಾರ ಯಾರು ಗೊತ್ತೇ? ಪೇಯ್ಡ್ ಮೀಡಿಯಾಗಳಿಗೆ ಅವನ ಹೆಸರನ್ನು ತಿಳಿಸುವ ಧೈರ್ಯವಿಲ್ಲ!! ಯಾಕೆ  ಗೊತ್ತಾ??

ಪ್ರತಿಯೊಂದು ಕ್ರಿಯೆಗೂ ತಕ್ಕ ಪ್ರತಿಕ್ರಿಯೆ ಇದೆ. ಕಳೆದ 15 ವರ್ಷಗಳಿಂದ ಮಾಧ್ಯಮಗಳು ಕೇವಲ ಪ್ರತಿಕ್ರಿಯೆಯ ಬಗ್ಗೆ ಮಾತ್ರ ಮಾತಾಡುತ್ತಿದೆ. ಹೌದು, ನಾನಿಂದು 2002 ಗೋದ್ರಾ ಗಲಭೆಯ ಬಗ್ಗೆ ಕೆಲವೊಂದು ಸತ್ಯಗಳನ್ನು ಹೇಳಲೇಬೇಕಾದ ಅನಿವಾರ್ಯತೆ ಇದೆ. ಯಾಕೆಂದರೆ ಗಲಭೆಯ ಸಂದರ್ಭ ಪ್ರಧಾನಿ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಕಾಲವಾಗಿತ್ತು.

ಕಳೆದ ಹಲವಾರು ವರ್ಷಗಳಿಂದ ಗೋದ್ರಾ ಗಲಭೆಯನ್ನು ಮುಂದಿಟ್ಟುಕೊಂಡು ವಿರೋಧಿಗಳು ನರೇಂದ್ರಮೋದಿಯವರನ್ನು ಅಪರಾಧಿ ಸ್ಥಾನದಲ್ಲಿ ನಿಂತು
ನೋಡುತ್ತಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸಿಗರಂತೂ ಹಲವಾರು ಮುಸ್ಲಿಮರನ್ನು ಕೊಲ್ಲಲಾಯಿತು ಎಂದು ಅರಚಾಟ ನಡೆಸಿದ್ದೇ ನಡೆಸಿದ್ದು. ಆದರೆ ಸತ್ಯ ಒಂದಲ್ಲಾ ಒಂದು ದಿನ ಹೊರಬರಲೇಬೇಕು. ಭಾರತೀಯರಾದ ನಾವು ಭಾರತದ ಸಂವಿಧಾನವನ್ನು ಗೌರವಿಸುತ್ತೇವೆ. ಯಾಕೆಂದರೆ ಈ ಪ್ರಕರಣದಲ್ಲಿ ನರೇಂದ್ರ ಮೋದಿಯವರಿಗೆ ನ್ಯಾಯಾಲಯ ಕ್ಲೀನ್‍ಚಿಟ್ ನೀಡಿತು. ಇದರಿಂದ ಅವರು ಈ ಪ್ರಕರಣದಿಂದ ನಿರಪರಾಧಿಯೆಂದು ಸಾಬೀತಾಯಿತು. ಅದಕ್ಕೇ ಹೇಳಿದ್ದು, ಸತ್ಯ ಒಂದಲ್ಲಾ ಒಂದು ದಿನ ಹೊರಬರಲೇಬೇಕು..

ಗೋದ್ರಾ ಗಲಭೆ ಆರಂಭಗೊಂಡಿದ್ದು ಯಾಕೆ?

ಅಂದು ಫೆಬ್ರವರಿ 27, 2002ರ ಸಮಯ. ಸಬರಮತಿ ಎಕ್ಸ್‍ಪ್ರೆಸ್ ಎನ್ನುವ ರೈಲು ಅಯೋಧ್ಯಾದಿಂದ ಗೋದ್ರಾ ನಿಲ್ದಾಣದತ್ತ ಬರುತ್ತಿತ್ತು. ಇದರಲ್ಲಿ ನೂರಾರು
ಕರಸೇವಕರು ಬರುತ್ತಿದ್ದರು. ಅಯೋಧ್ಯಾದಿಂದ ಗೋದ್ರಾಕ್ಕೆ ಬರುವ ರೈಲಿನಲ್ಲಿ ನೂರಾರು ಹಿಂದೂ ಕರಸೇವಕರಿರುವ ಮಾಹಿತಿ ಪಡೆದಿದ್ದು ಮುಸ್ಲಿಂ ಸಮುದಾಯದ ಗುಂಪೊಂದು ಮೊದಲೇ ಸಿದ್ಧವಾಗಿ ನಿಂತಿತ್ತು. ಆ ಗುಂಪಿನಲ್ಲಿ ಸುಮಾರು 10ರಿಂದ 15 ಮಂದಿ ಮುಸ್ಲಿಮರಿದ್ದರು. ಅವರ ಕೈಯ್ಯಲ್ಲಿ 200 ಲೀಟರಿಗಿಂತಲೂ ಅಧಿಕ ಪೆಟ್ರೋಲ್ ಇತ್ತು. ಎಕ್ಸ್‍ಪ್ರೆಸ್‍ನ ಬೋಗಿಯಲ್ಲಿದ್ದ ಕರಸೇವಕರನ್ನೇ ದೃಷ್ಟಿಯಲ್ಲಿರಿಸಿ ಬೋಗಿಯ ಬಾಗಿಲನ್ನು ಮುಚ್ಚಿ, ಕರಸೇವಕರು ಹೊರಬರದಂತೆ ತಡೆಯಲಾಯಿತು.ಆಮೇಲೆ ಬೋಗಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಯಿತು. ಆ ಮೇಲೆ ಕರಸೇವಕರ ಮೇಲೆ ಕಲ್ಲಿನಿಂದ ತೂರಲಾಯಿತು. ಆಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಯಿತು. ಬೋಗಿ ಧಗಧಗನೆ ಉರಿಯುತ್ತಿತ್ತು. ಕರಸೇವಕರು ಪ್ರಾಣ ಉಳಿಸಿಕೊಳ್ಳಲು ಇನ್ನಿಲ್ಲದ್ದಂತೆ ಒದ್ದಾಡುತ್ತಿದ್ದರು. ಅವರು ಪ್ರಾಣವೇದನೆಯಿಂದ ಅರಚಾಡುತ್ತಿದ್ದರೆ ಬೆಂಕಿ ಜ್ವಾಜಲ್ಯಮಾನವಾಗಿ ಉರಿದು ಒಬ್ಬೊಬ್ಬರೇ ಕರಸೇವಕರನ್ನು ಆಹುತಿ ಪಡೆಯುತ್ತಿತ್ತು. ಕೇವಲ 15 ನಿಮಿಷಗಳಷ್ಟೆ, ಸುಮಾರು 59 ಕರಸೇವಕರು ಬೆಂಕಿಯಲ್ಲಿ ಸುಟ್ಟು ಹೋಗಿದ್ದರು. ಎಷ್ಟು ಸುಟ್ಟು ಹೋಗಿದ್ದರೆಂದರೆ ಅವರ ಮುಖವನ್ನೂ ಗುರುತುಹಿಡಿಯುವುದೂ ಅಸಾಧ್ಯವಾಗಿತ್ತು.

ಕರಸೇವಕರನ್ನು ಸುಟ್ಟ ಹಂತಕರು ಕಾಂಗ್ರೆಸಿಗರು!!!

ಕರಸೇವಕರನ್ನು ಸುಡಲು ನೇತೃತ್ವ ವಹಿಸಿದ್ದ ವ್ಯಕ್ತಿಗೆ ಕಾಂಗ್ರೆಸ್ ಜೊತೆ ನೇರ ಸಂಪರ್ಕವಿತ್ತು ಎಂದು ಇದುವರೆಗೂ ಯಾರೂ ಹೇಳದೇ ಇರುವ ಸತ್ಯ. ಆತ
ಬೇರ್ಯಾರೂ ಅಲ್ಲ… ಆತನ ಹೆಸರು ಫಾರೂಕ್ ಭಾನಾ. ಈತ ಕರಸೇವಕರನ್ನು ಸುಟ್ಟು ಕೊಲ್ಲಲು ಐಡಿಯಾ ರೂಪಿಸಿದ್ದ ಓರ್ವ ಮತಾಂಧ ಮುಸ್ಲಿಮ್. ಘಟನೆ ನಡೆದ ಬಳಿಕ ಈತ ಬರೋಬ್ಬರಿ 14 ವರ್ಷಗಳ ಕಾಲ ತಲೆಮರಿಸಿಕೊಂಡಿದ್ದ. ಕಳೆದ ವರ್ಷ ಆತನನ್ನು ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ದ ಅಧಿಕಾರಿಗಳು
ಬಂಧಿಸಿದ್ದರು. ಈತ ಕಾಂಗ್ರೆಸ್ ಜಿಲ್ಲಾ ಸಮಿತಿಯ ಕಾರ್ಯದರ್ಶಿಯಾಗಿದ್ದ. ಅಪ್ಪಟ ಕಾಂಗ್ರೆಸಿಗನಾಗಿದ್ದ ಈತನ ಬಗ್ಗೆ ಇದುವರೆಗೆ ಯಾವ ಮಾಧ್ಯಮಗಳೂ ತಿಳಿಸದೆ ಜಾಣಕುರುಡು ಮೆರೆದಿದ್ದವು.

ಕರಸೇವಕರನ್ನು ಸುಟ್ಟ ಇನ್ನುಳಿದವರೂ ಕೂಡಾ ಕಾಂಗ್ರೆಸ್ ಜೊತೆ ಬೆಳೆದವರು. ಇದರಲ್ಲಿ ಸಲೀಂ ಅಬ್ದುಲ್ ಗಫರ್ ಎನ್ನುವಾತ ಯುವ ಕಾಂಗ್ರೆಸ್‍ನ ಮಂಡಲ ಪಂಚಾಯತ್ ಅಧ್ಯಕ್ಷ. ಇನ್ನುಳಿದಂತೆ ಅಬ್ದುಲ್ ರೆಹಮಾನ್, ಅಬ್ದುಲ್ ಮಜೀದ್ ಘಂಟ್ಯಾ ಹಾಗೂ ಹಾಜಿ ಬಿಲಾಲ್ ಇವರೆಲ್ಲಾ ಕಾಂಗ್ರೆಸ್ ಕಾರ್ಯಕರ್ತರು. ಇದರಲ್ಲಿ ಮುಖ್ಯ ಆರೋಪಿ, ಕಾಂಗ್ರೆಸ್‍ನ ಅಲ್ಪಸಂಖ್ಯಾತ ಸೆಲ್‍ನಲ್ಲಿ ಆರು ವರ್ಷಗಳ ಕಾಲ ಸಂಚಾಲಕನಾಗಿದ್ದ ಮೊಹಮ್ಮದ್ ಹುಸೈನ್ ಕಲೋಟಾ ಎಂಬಾತನನ್ನು ಸಾಕ್ಷಿಯ ಕೊರತೆಯ ಕಾರಣ ಖುಲಾಸೆಗೊಳಿಸಲಾಯಿತು.

ಹಾಗೆ ನೋಡಿದರೆ ಗೋಧ್ರಾದಲ್ಲಿ 2002ರಲ್ಲಿ ಮಾತ್ರ ಕೋಮುಗಲಭೆ ನಡೆದಿದ್ದಲ್ಲ. ಅಲ್ಲಿ 1947, 1952, 1959, 1961, 1965, 1967, 1972, 1974, 1980, 1983, 1989 1990 ಹಾಗೂ 1992ರಲ್ಲಿ ಸಾಕಷ್ಟು ಬಾರಿ ಕೋಮುಗಲಭೆ ಸಂಭವಿಸಿತ್ತು.

ಆದರೆ 2002ರ ಕೋಮುಗಲಭೆಯನ್ನೇ ಯಾಕೆ ದೊಡ್ಡ ಪ್ರಕರಣವನ್ನಾಗಿ ರೂಪಿಸಲಾಯಿತು ಗೊತ್ತಾ?

2002ರ ಮುಂಚೆ ನಡೆದ ಗಲಭೆಗಳ ವೇಳೆ ಅಲ್ಲಿದ್ದುದು ಕಾಂಗ್ರೆಸ್ ಸರಕಾರ. ಈ ವೇಳೆ ಸಾವಿರಾರು ಮಂದಿ ಹಿಂದೂಗಳೇ ಗಲಭೆಗೆ ತುತ್ತಾಗಿದ್ದರು.

ಕರಸೇವಕರನ್ನು ಸುಡುವ ಮುಂಚೆ ಲೌಡ್ ಸ್ಪೀಕರ್‍ನಲ್ಲಿ ಹಂತಕರಿಗೆ ಮಾಹಿತಿ ನೀಡಲಾಗುತ್ತಿತ್ತು ಎಂದು ಇತರ ಪ್ರಯಾಣಿಕರು ಹೇಳಿದ್ದರು. ಈ ವೇಳೆ ಅವರು ಎಷ್ಟೊಂದು ಭಯಭೀತರಾಗಿತ್ತರೆಂದರೆ ತನ್ನ ಪ್ರಾಣಕೂಡಾ ಇದೇ ರೀತಿ ಬೀಭತ್ಸವಾಗಿ ಹೋಗಬಹುದೆಂಬ ಶಾಕ್‍ಗೆ ಒಳಗಾಗಿದ್ದರು. ಹಂತಕರು ಎಷ್ಟು ವ್ಯಗ್ರರಾಗಿದ್ದರೆಂದರೆ ಎಲ್ಲೆಂದರಲ್ಲಿ ಕಲ್ಲು, ಪೆಟ್ರೋಲ್‍ಬಾಂಬ್‍ಗಳನ್ನು ಎಸೆಯುತ್ತಿದ್ದರು. ಬೆಂಕಿಯಲ್ಲಿ ಸುಡುತ್ತಿದ್ದ ಕರಸೇವಕರತ್ತ ಕಲ್ಲು ತೂರಿ ವಿಕೃತ ಆನಂದ ಪಡುತ್ತಿದ್ದರು. ಇವರಿಗೆಲ್ಲಾ ಸಮೀಪದ ಮಸೀದಿಯಿಂದ ಲೌಡ್‍ಸ್ಪೀಕರ್ ಮುಖಾಂತರ ಮಾಹಿತಿ ನೀಡಲಾಗುತ್ತಿತ್ತು ಎಂದು ಕೆಲವರು ತಿಳಿಸಿದ್ದಾರೆ. (ಮಸೀದಿಯ ಸಮೀಪ `ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಿಸಲಾಗುತ್ತಿತ್ತು.  ಕಾಫಿರ್‍ಗಳನ್ನು ಸುಟ್ಟು ಹಾಕಿ ಎಂದು ಬೊಬ್ಬೆ ಹೊಡೆಯಲಾಗುತ್ತಿತ್ತು).

ಗಲಭೆ ನಡೆಸುತ್ತಿದ್ದ ಮುಸ್ಲಿಮರು ಗಲಭೆ ನಡೆಯುತ್ತಿದ್ದ ಸ್ಥಳಕ್ಕೆ ಅಗ್ನಿಶಾಮಕ ದಳದ ಟ್ಯಾಂಕರ್ ಹೋಗದಂತೆ ತಡೆದು ವಿಕೃತಿ ಮೆರೆದರು.

ಇಷ್ಟೆಲ್ಲಾ ರಾಕ್ಷಸೀ ಪ್ರವೃತ್ತಿ ಮೆರೆದ ಹಂತಕರು ಕಾಂಗ್ರೆಸಿಗರೆಂದು ಇದುವರೆಗೆ ಯಾವ ಮಾಧ್ಯಮಗಳೂ ವಿವರಿಸಿಲ್ಲ. ಕರಸೇವಕರನ್ನು ಇಷ್ಟೊಂದು ಕ್ರೂರವಾಗಿ ಕೊಂದ ಕಾಂಗ್ರೆಸಿಗರ ಅಟ್ಟಹಾಸದ ಸತ್ಯ ಕೊನೆಗೂ ಬಯಲಾಗಿದೆ.

ಈ ಘಟನೆಯ ಬಗ್ಗೆ ಕಾಂಗ್ರೆಸ್ ಇನ್ನಾದರೂ ಉತ್ತರಿಸುವುದೇ?

ಇಸ್ಲಾಂ ಮತದ ಅಫೀಮನ್ನು ತಲೆಗೆ ಹತ್ತಿಸಿಕೊಂಡ ಕಾಂಗ್ರೆಸಿಗರು ಹಿಂದೂಗಳನ್ನು ನಿರ್ದಯವಾಗಿ ಹತ್ಯೆ ಮಾಡಿದರು ಎಂಬ ಸತ್ಯ ಕೊನೆಗೂ ಬೆಳಕಿಗೆ ಬಂದಿದೆ.

ಹಿಂದೂಗಳಿಂದ ಮುಸ್ಲಿಮರಿಗೆ ದೌರ್ಜನ್ಯ ನಡೆಯುತ್ತಲೇ ಇದೆ ಎಂದು ಬೊಬ್ಬೆ ಇಡುವ ಕಾಂಗ್ರೆಸಿಗರು ಈ ಘಟನೆಯ ಬಗ್ಗೆ ಯಾಕೆ ಮಾತಾಡುವುದಿಲ್ಲ ಎಂದೇ
ಅರ್ಥವಾಗುವುದಿಲ್ಲ. ಕಾಂಗ್ರೆಸಿಗರ ಪಾಪದ ಕೊಡ ತುಂಬಿ ತುಳುಕುತ್ತಿದೆ. ಪಾಪಕ್ಕೆ ತಕ್ಕ ಪ್ರತಿಫಲ ಖಂಡಿತಾ ಸಿಗದೇ ಹೋಗುವುದಿಲ್ಲ. ಯಾಕೆಂದರೆ ಅದಕ್ಕೆ
ಕೋಟ್ಯಂತರ ಹಿಂದೂಗಳ ಶಾಪ, ನೋವು, ಕಣ್ಣೀರಿದೆ.

-ಚೇಕಿತಾನ

 

Tags

Related Articles

Close