ಅಂಕಣ

2004-05 ರಲ್ಲಿ ಪಾಕಿಸ್ಥಾನದ ಪ್ರಖ್ಯಾತ ವಕೀಲನನ್ನು ಸೋನಿಯಾ ಗಾಂಧಿ ತನ್ನ ವಕೀಲರನ್ನಾಗಿ ಮಾಡಿಕೊಂಡಿದ್ದು ಯಾಕೆ?! ನಂತರ ಭಾರತಕ್ಕಾದ ಅತಿದೊಡ್ಡ ದ್ರೋಹವೇನು?!

ಪಾಕಿಸ್ತಾನದಲ್ಲಿ ಬಂಧನದಲ್ಲಿಟ್ಟಿರುವ ಕುಲಭೂಷಣ್ ಯಾದವ್ ಪ್ರಕರಣದಲ್ಲಿ ಭಾರತದ ಪರ ಖ್ಯಾತ ವಕೀಲ ಹರೀಶ್ ಸಾಲ್ವೆ ವಾದಿಸಿ ಗೆದ್ದರೆ, ಪಾಕ್ ಪರ ವಾದಿಸಿ
ಸೋತದ್ದು, ಇಂಗ್ಲೆಂಡ್‍ನಲ್ಲಿ ನೆಲೆಸಿರುವ ಪಾಕಿಸ್ತಾನ ಮೂಲದ ವಕೀಲ ಖುವಾರ್ ಖುರೇಷಿ.! ಹರೀಶ್ ಸಾಲ್ವೆ ಅಂತರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿ
ಕುಲಭೂಷಣ್ ಯಾದವ್‍ಗೆ ಗಲ್ಲು ಶಿಕ್ಷೆಯಾಗದಂತೆ ಚರ್ಚಿಸಿ ನ್ಯಾಯಾಲಯದಲ್ಲಿ ಶಿಕ್ಷೆಯನ್ನು ಮುಂದೂಡಿದ್ದಾರೆ. ಆದರೆ 2004ರಲ್ಲಿ ಭಾರತದ ಪರ ವಾದಿಸಲು ನೇಮಿಸಿದ್ದು ಸೋನಿಯಾ-ಮನಮೋಹನ್ ನೇತೃತ್ವದ ಯುಪಿಎ ಸರಕಾರ. ಆಶ್ಚರ್ಯವೆಂದರೆ ಭಾರತದ ಪರ ಬಹಳ ಚೆನ್ನಾಗಿ ವಾದ ಮಂಡಿಸಿ ಕೇಸು ಗೆಲ್ಲುವ ಹಂತದಲ್ಲಿದ್ದ ವಕೀಲ ಸಾಲ್ವೆಯರನ್ನೇ ಉಚ್ಛಾಟಿಸಿ ಅವರ ಜಾಗದಲ್ಲಿ ಪಾಕ್‍ನ ವಕೀಲ ಖುವಾರ್ ಖುರೇಷಿಯನ್ನು ಕಾಂಗ್ರೆಸ್ ಸರಕಾರ ನೇಮಕ ಮಾಡಿತ್ತು. ಕೇಸು ಗೆಲ್ಲಿಸಬಹುದಾಗಿದ್ದ ನಮ್ಮದೇ ದೇಶದ ಹರೀಶ್ ಸಾಲ್ವೆಯನ್ನು ಬದಲಿಸಿ ಪಾಕಿಸ್ತಾನದ ಈ ಖುವಾರ್ ಖುರೇಷಿಯನ್ನು ನೇಮಕ ಮಾಡಿದ ಹಿಂದೆ ಬಹುದೊಡ್ಡ ಷಡ್ಯಂತ್ರ ಅಡಗಿತ್ತು…!!

ಇದರ ಹಿಂದೆ ಸೋನಿಯಾ-ಮನಮೋಹನ್ ಸಿಂಗ್ ಅಲ್ಲದೆ ಅಂದಿನ ಘಟಾನುಘಟಿ ಮಂತ್ರಿಗಳಾಗಿದ್ದ ಚಿದಂಬರಂ, ಸಲ್ಮಾನ್ ಖುರ್ಷಿದ್, ಮಣಿಶಂಕರ್ ಅಯ್ಯರ್, ಶರದ್ ಪವಾರ್ ಮುಂತಾದವರ ನೇರ ಕೈವಾಡವಿತ್ತು. ಆದರೆ ಈ ಮಹತ್ವದ ದಾಭೋಲ್ ಪ್ರಕರಣದಲ್ಲಿ ಪ್ರಪಂಚದ ಬಹುದೊಡ್ಡ ಕಾರ್ಪೋರೇಟ್ ಉದ್ಯಮಗಳು
ಒಳಗೊಂಡಿದ್ದವು. ಈ ಷಡ್ಯಂತ್ರದ ಬಗ್ಗೆ ತಿಳಿಯ ಬೇಕಾದರೆ ಮಹಾರಾಷ್ಟ್ರ ಸರಕಾರ ಅಮೆರಿಕಾದ ಬೃಹತ್ ವಿದ್ಯುತ್ ಉತ್ಪಾದನಾ ಕಂಪನಿ ಎನ್ರಾನ್ ಜೊತೆ
ಮಾಡಿಕೊಂಡ ಒಪ್ಪಂದದ ಬಗ್ಗೆ ತಿಳಿಯಲೇಬೇಕು. ದೇಶದ ವಿದ್ಯುತ್ ಕೊರತೆಯನ್ನು ನೀಗಿಸಲು ಶರತ್ ಪವಾರ್ ನೇತೃತ್ವದ ಆಗಿನ ಸರಕಾರ ಮಹಾರಾಷ್ಟ್ರದ
ಧಾಬೋಲ್‍ನಲ್ಲಿ ಒಂದು ಬೃಹತ್ ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಮುಂದಾಗಿತ್ತು. ಈ ಬಗ್ಗೆ ಒಪ್ಪಂದಗಳಿಗೂ ಸಹಿ ಹಾಕಿತ್ತು. ಅದರೆ ನಂತರ ಕೇಂದ್ರದಲ್ಲಿ ವಾಜಪೇಯಿ ಸರಕಾರ ಬಂದ ಮೇಲೆ ಈ ಯೋಜನೆಯಿಂದ ದೇಶಕ್ಕೆ ಭಾರಿ ನಷ್ಟವಾಗುವುದನ್ನು ಮನಗಂಡು ಯೋಜನೆಯನ್ನು ರದ್ದುಪಡಿಸಿಕೊಂಡಿತ್ತು.

ಎನ್ರಾನ್ ಜೊತೆಗೆ ಆ ಬೃಹತ್ ಯೋಜನೆಯಲ್ಲಿ ಅಮೇರಿಕಾದ ಜನರಲ್ ಎಲೆಕ್ಟ್ರಿಕಲ್ ಬೆಕ್ಟೆಲ್ ಕಂಪನಿಗಳೂ ತಲಾ ಶೇಖಡಾ 10 ರಷ್ಟು ಷೇರು ಹೊಂದಿದ್ದವು.
1193 ರಲ್ಲಿ ವಾಜಪೇಯಿ ಸರಕಾರ ರದ್ದು ಮಾಡಿದಾಗ ಎನ್ರಾನ್, ಜನರಲ್ ಎಲೆಕ್ಟ್ರಿಕಲ್ ಕಂಪನಿಗಳು ಭಾರತ ಸರಕಾರವನ್ನು ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಕರೆದೊಯ್ಯಿತು. ಆಗ ಭಾರತ ಸರಕಾರ ಅದೇ ಹರೀಶ್ ಸಾಲ್ವೆಯನ್ನು ವಕೀಲನಾಗಿ ನೇಮಕ ಮಾಡಿತ್ತು. ಭಾರತ ಸರಕಾರದ ವಿರುದ್ಧ $6 ಬಿಲಿಯನ್ ಡಾಲರ್‍ಗಳಷ್ಟು ಭಾರೀ ಮೊತ್ತದ ದಾವೆ ಹೂಡಿತ್ತು.

ಪಾಕಿಸ್ತಾನದ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಖುರೇಷಿ ಧೋಬಾಲ್ ಹಗರಣದ ಬಗ್ಗೆ ವಾದಿಸಿದ್ದಾರೆ. ಧೋಬಾಲ್ ಪ್ರಕರಣಕ್ಕೆ ಭಾರತ ಸರಕಾರವು ಎನ್ರಾನ್ $6 ಶತಕೋಟಿ ಮಧ್ಯಸ್ಥಿಕೆ ವಹಿಸಿತ್ತು. ದುರಾದೃಷ್ಟವಶಾತ್ ಖುರೇಷಿ ಭಾರತೀಯ ಸರಕಾರವನ್ನು ಪ್ರತಿನಿಧಿಸುತ್ತಿದ್ದರು. ಸೆರ್ಲ್ ಕೋರ್ಟ್ ಚೇಂಬರ್ಸ್‍ನ ವಕೀಲರಾದಂತಹ ಖುವಾರ ಖುರೇಷಿ ಅವರನ್ನು ಭಾರತ ಸರ್ಕಾರದ ಸಲಹೆಗಾರನಾಗಿ ನೇಮಿಸಲಾಯಿತು. ನಂತರ 2004 ರಲ್ಲಿ ಭಾರತದ ಪ್ರಕರಣವನ್ನು ತೆಗೆದುಕೊಳ್ಳಲು ಆಮಂತ್ರಿಸಲಾಗಿತ್ತು. ಹೊಸ ಅಟಾರ್ನಿ ಜನರಲ್ ನೇಮಕಗೊಂಡ ನಂತರ ಭಾರತೀಯ ಕಾನೂನು ಸಲಹೆಗಾರರನ್ನು ಒಳಗೊಂಡಂತೆ ಸಂಪೂರ್ಣ ಕಾನೂನು ತಂಡವನ್ನು ಬದಲಿಸಲಾಯಿತು. ಭಾರತೀಯ ಕಾನೂನನ್ನೇ ಪರೀಕ್ಷಿಸುವಂತೆ ಸೋನಿಯಾ ಗಾಂಧಿ ಸರಕಾರ ಪಾಕಿಸ್ತಾನದ ವಕೀಲನ್ನು ಆಯ್ಕೆ ಮಾಡಬೇಕಿತ್ತೆ? ಯಾಕೆ ಕುಲಭೂಷಣ್ ಯಾದವ್ ಪ್ರಕರಣದಲ್ಲೇ ಭಾರತೀಯ ವಕೀಲ ಹರೀಶ್ ಸಾಲ್ವೆ ಪಾಕಿಸ್ತಾನದ ಅಂತರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿ ಪ್ರಶ್ನಿಸಿದವರಿಗೆ ಧೋಬಾಲ್ ಪ್ರಕರಣವನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲವೇ? ಯುಪಿಎ ಸರಕಾರ ಭಾರತೀಯ ವಕೀಲರನ್ನು ಏನೆಂದು ತಿಳಿದುಕೊಂಡಿದ್ದಾರೆ? ನಾಚಿಕೆಯಾಗಬೇಕು ಸೋನಿಯ ಗಾಂಧಿಗೆ..!

ಕಾಂಗ್ರೆಸ್ ಮಾಡಿದ ಒಳ್ಳೆ ವಿಷಯಗಳು ಯಾವುದೆಂದು ಕಂಡುಹಿಡಿಯುವುದೇ ನಮಗೆಲ್ಲಾ ಕಷ್ಟದ ವಿಷಯವಾಗಿದೆ. ಯಾಕೆಂದರೆ ಇವರು ಯಾವುದೇ ಒಳ್ಳೇ ರೀತಿಯ ಕೆಲಸಗಳನ್ನು ಮಾಡಲು ಸಿದ್ಧರೇ ಇಲ್ಲ ಅಂತಾರೆ ಈ ಕಾಂಗ್ರೆಸ್ ಜನಗಳು! ಇವರ ಆಡಳಿತದಲ್ಲಿದ್ದರೆ ನಮ್ಮ ಪರಿ ಕೇಳೋರಿಲ್ಲ… ಸೋನಿಯಾ ಗಾಂಧಿಯ ಅಡಿಯಲ್ಲಿ ಕಾಂಗ್ರೆಸ್ ಅಕ್ಷರಶಃ ನಾಶವಾಗಿ ಹೋಗಿದೆ. ಇದಕ್ಕಾಗಿ ದೇಶ ಭಾರೀ ಪ್ರಮಾಣದ ಬೆಲೆ ತೆರ ಬೇಕಾಗುತ್ತದೆ. ವಂಚನೆ ಮತ್ತು ಭ್ರಷ್ಟಾಚಾರ ಮಾಡಿದರೂ ಕಾಂಗ್ರೆಸ್ ಮಾತ್ರ ಸರಕಾರದಿಂದ ಉತ್ತಮ ಭದ್ರತೆಯನ್ನು ಹೊಂದಿದೆ. ಕುಲಭೂಷಣ್ ಯಾಧವ್ ಪ್ರಕರಣ ಅಂತರಾಷ್ಟ್ರೀಯ ನ್ಯಾಯಾಲಯದವರೆಗೆ ಸುದ್ದಿಯಾದ ವಿಷಯ ನಮಗೆಲ್ಲಾ ತಿಳಿದಿದೆ . ಆದರೆ ಆಘಾತಕಾರಿ ಮಾಹಿತಿ ಎಂದರೆ ಭಾರತದ ದೋಬಾಲ್ ಪ್ರಕರಣ 2004 ರಲ್ಲಿ ಕಾಂಗ್ರೆಸ್ ಸರಕಾರ ಪಾಕಿಸ್ತಾನದ ನ್ಯಾಯಾಧೀಶನನ್ನು ನೇಮಕ ಮಾಡಿರುವುದು ಬಹಿರಂಗವಾಗಿದ್ದು ಇದು ನಮಗೆಲ್ಲರಿಗೂ ಆಘಾತಕಾರಿ ವಿಷಯವಾಗಿದೆ.

ಧೋಬಾಲ್ ಪ್ರಕರಣ ಎಂದರೇನು?

ಧೋಬಾಲ್ ಪವರ್ ಕಂಪನಿ (ಈಗ ಆರ್‍ಜಿಪಿಪಿಎಲ್-ರತ್ನಗಿರಿ ಗ್ಯಾಸ್ ಮತ್ತು ಪವರ್ ಪ್ರೈವೆಟ್ ಲಿಮಿಟೆಡ್ ಎಂದು ಕರೆಯಲ್ಪಡುತ್ತದೆ). 1992 ರಲ್ಲಿ ಸ್ಥಾಪನೆಯಾದ ಮಹಾರಾಷ್ಟ್ರ ಮೂಲದ ಕಂಪನಿಯಾಗಿದೆ. ಧೋಬಾಲ್ ಪವರ್ ಸ್ಥಾವರವನ್ನು ನಿಯಂತ್ರಿಸಲು ಧೋಬಾಲ್ ಸ್ಥಾವರವನ್ನು ನಿರ್ಮಿಸಲಾಗಿದೆ. ಎನ್ರಾನ್, ಜಿಇ ಮತ್ತು ಬೆಚ್ಟೆಲ್ ಡಬೊಲ್‍ಗೆ ಟರ್ಬೈನ್‍ಗಳನ್ನು ಒದಗಿಸಿದೆ. ದೈಹಿಕ ಸ್ಥಾವರ ಮತ್ತು ಎನ್ರಾನ್ ಈ ಯೋಜನೆಗಳನ್ನು ಎನ್ರಾನ್ ಮೂಲಕ ನಿರ್ವಹಿಸುತ್ತದೆ.

ಎನ್ರಾನ್ ಕಂಪನಿ ಅಮೇರಿಕಾ ಅಧ್ಯಕ್ಷರಿಗೆ ಆಪ್ತವಾಗಿದ್ದರಿಂದ ಯೋಜನೆ ರದ್ದಾಗಿದ್ದನ್ನು ಅಮೇರಿಕಾವನ್ನು ಕೆರಳಿಸಿತ್ತು. 2004ರಲ್ಲಿ ಯುಪಿಎ ಸರಕಾರ ಅಧಿಕಾರಕ್ಕೆ
ಬಂದಾಗ ಎನ್ರಾನ್ ಜೊತೆಗೆ ಜನರಲ್ ಎಲೆಕ್ಟ್ರಿಕಲ್ ಮತ್ತು ಬೆಕ್‍ಟೆಲ್ ಕಂಪನಿಗಳು ತಮಗೆ 25 ಸಾವಿರ ಕೋಟಿ ನಷ್ಟ ತುಂಬಿ ಕೊಡಬೇಕೆಂದು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ದಾವೆ ಹೂಡಿದವು. ಅದೇ ಸಮಯದಲ್ಲಿ ಸೋನಿಯಾ ಗಾಂಧಿ ಸರಕಾರವು ಎಲ್ಲಾ ವಕೀಲರನ್ನು ತೆಗೆದು ಹಾಕಿ ಹೊಸ ವಕೀಲರನ್ನು ನೇಮಕ ಮಾಡಿತು. ಅದೇ ಸಮಯದಲ್ಲಿ ಎನ್ರಾನ್ ಕೇಸ್‍ನಲ್ಲಿ ವಾದಿಸುತ್ತಿದ್ದ ಹರೀಶ್ ಸಾಲ್ವೆಯನ್ನು ತೆಗೆದು ಹಾಕಿ ಖವಾರ್ ಖುರೀಷಿಯನ್ನು ನೇಮಕ ಮಾಡಲಾಗಿತ್ತು. ಇದರ ಹಿಂದೆ ಆಗಿನ ಪ್ರಭಾವಿ ಸಚಿವ ಚಿದಂಬರಂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಇಂಧನ ಸಚಿವ ಮಣಿಶಂಕರ್ ಅಯ್ಯರ್ ಮತ್ತು ಶರದ್ ಪವಾರ್ ಇದ್ದರು.

ವಕೀಲನ್ನೇ ಬದಲಿಸಿದ್ದರಿಂದ ತನಗೆ ಎರಡು ಮೂರು ತಿಂಗಳುಗಳ ಕಾಲ ಕಾಲಾವಧಿ ಬೇಕೆಂದು ಭಾರತ ಸರಕಾರದ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಬೇಡಿಕೊಂಡ ನಾಚಿಕೆಯ ಪ್ರಸಂಗವೂ ನಡೆದಿತ್ತು. ಆಶ್ಚರ್ಯವೆಂಬಂತೆ ಪೆಟ್ರೋಲಿಯಂ ಸಚಿವ ಮಣಿಶಂಕರ್ ಅಯ್ಯರ್ ಮಗಳು ಸುರಯ್ಯ ಅಯ್ಯರ್ ಕೂಡಾ ಈ ಹೊಸ ವಕೀಲರ ತಂಡದಲ್ಲಿದ್ದಳು. ಆದರೆ ಪ್ರಧಾನಿ ಮನಮೋಹನ್ ಸಿಂಗ್ ಆಕ್ಷೇಪಿಸಿದರಿಂದ ಆಕೆಯನ್ನು ತಂಡದಿಂದ ತೆಗೆಯಲಾಯಿತು. ಸಲ್ಮಾನ್ ಖುರ್ಷಿದ್ ಹಾಗೂ ಮಣಿಶಂಕರ್ ಅಯ್ಯರ್ ಪಾಕಿಸ್ತಾನದ ರಾಜಕಾರಣಿಗಳೊಡನೆ ಬಹಳ ನಿಕಟ ಸಂಪರ್ಕವನ್ನು ಹೊಂದಿದ್ದರು. ಧಾಬೋಲ್ ಕೇಸ್‍ನಲ್ಲಿ ಭಾರತದ ಪರ ಖವಾರ್ ಖುರೇಷಿಯನ್ನು ನೇಮಿಸಿದಾಗ ಕೇಂದ್ರ ಕಾನೂನು ಮಂತ್ರಿಯಾಗಿದ್ದ ಸಲ್ಮಾನ್ ಖುರ್ಷಿದ್ ತಮ್ಮ ಅಧಿಕೃತ ಇಂಗ್ಲೆಂಡ್ ಪ್ರವಾಸದ ಅವಧಿಯಲ್ಲಿಯೇ ಖವಾರ್ ಖುರೇಷಿಯನ್ನು ಭೇಟಿಯಾಗಿದ್ದರು. ಖವಾರ್ ಖುರೇಷಿ 2004 ರಲ್ಲಿ ವಕೀಲನಾಗಿ ನೇಮಕಗೊಂಡ ಒಂದೇ ವರ್ಷಕ್ಕೆ ಭಾರತದ ಕೇಸು ಸೋತು ಹೋಗುವ ಹಂತಕ್ಕೆ ತಲುಪಿ, ರಾಜಿ ಸೂತ್ರ ಮುಂದಿಟ್ಟು ಎನ್ರಾನ್,ಜನರಲ್ ಎಲೆಕ್ಟ್ರಿಕಲ್ ಮತ್ತು ಬೆಕ್ಟೆಲ್ ಕಂಪನಿಗಳಿಗೆ ಭಾರೀ ಮೊತ್ತದ ಹಣವನ್ನು
ಪರಿಹಾರವಾಗಿ ನೀಡಲು ಒಪ್ಪಿಕೊಂಡಿತು.!!

ಆದರೆ ಕಾಂಗ್ರೆಸ್ ಸರಕಾರವು ಪಾಕಿಸ್ತಾನದ ವಕೀಲರನ್ನು ಭಾರತೀಯ ವಿರುದ್ಧ ಹೋರಾಡಲು ನೇಮಕ ಮಾಡಿಕೊಂಡ ಕಾರಣವೆಂದರೆ ಅವರು ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು ಹಾಗೂ ಭಾರೀ ಪ್ರಮಾಣದ ಮೊತ್ತವನ್ನು ಪಾವತಿಸುತ್ತೇವೆಂದು ಕಾಂಗ್ರೆಸ್ ಸರಕಾರ ಒಪ್ಪಿಕೊಂಡಿತ್ತು. ಇದಕ್ಕಾಗಿ ಭಾರತ ಸರಕಾರ ಭಾರೀ ಮೊತ್ತ ತೆರಬೇಕಾಯಿತು.

ಆದರೆ 2005ರ ಪ್ರಕರಣದಲ್ಲಿ ಖುರೇಷಿಯವರು ಸೋಲನ್ನು ಕಂಡುಕೊಳ್ಳ ಬೇಕಾಗಿ ಬಂತು, ಇದಕ್ಕಾಗಿ ಈ ಪ್ರಕರಣದಿಂದ ಹೊರ ಬರಬೇಕಾದರೆ ಅದೆಷ್ಟೋ ದೊಡ್ಡ ಮೊತ್ತದ ಹಣವನ್ನು ಪಾವತಿಸಬೇಕಾಯಿತು. ಇಂತವರನ್ನು ಕಾಂಗ್ರೆಸ್ ನೇಮಕ ಮಾಡಿಕೊಂಡಿರುವ ವಿಷಯ ಅವಮಾನಕರ. ಭಾರತವನ್ನು ಪ್ರತಿನಿಧಿಸಲು ಪಾಕಿಸ್ತಾನಿ ವಕೀಲರನ್ನು ಆಯ್ಕೆ ಮಾಡಿದ್ದಕ್ಕೆ ದಾಖಲೆಯನ್ನು ಕಳೆದುಕೊಳ್ಳುವುದರ ಜೊತೆಗೆ ಹರೀಶ್ ಸಾಲ್ವೆಗಿಂತ ಮೂರು ಸಾವಿರ ಪಟ್ಟು ಹೆಚ್ಚು ಶುಲ್ಕವನ್ನು ಆತನಿಗೆ ಪಾವತಿಸಬೇಕಾಯಿತು.

ಯಾವುದೇ ಕೆಲಸಕ್ಕೆ ಬರುವ ವಿಷಯಗಳನ್ನು ಕೈಗೆತ್ತಿಕೊಳ್ಳದ್ದಿದ್ದ ಮನಮೋಹನ್ ಸಿಂಗ್ ಸೂತ್ರದ ಗೊಂಬೆಯಂತೆ ಇದ್ದಿದ್ದು ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಗೇಡು.. ಇತ್ತ ಸೋನಿಯಾ ಗಾಂಧಿಯೊಂದಿಗೆ ಎಲ್ಲಾ ಕಾಂಗ್ರೆಸ್ ಮುಖಂಡರು ಉತ್ತಮ ಬಾಂಧವ್ಯವನ್ನು ಹೊಂದಿದ್ದು, ಸೋನಿಯಾಗಾಂಧಿ ತಾಳಕ್ಕೆ ಇವರೆಲ್ಲರೂ ಕುಣಿಯುತ್ತಿದ್ದಾರೆ.!! ಮುಂದೊಂದು ದಿನ ಇವರ ನರಿ ಬುದ್ಧಿ ಅರಿವಾಗುತ್ತೆ ಎನ್ನುವುದರಲ್ಲಿ ಸಂಶಯವಿಲ್ಲ.

-ಶೃಜನ್ಯಾ

Tags

Related Articles

Close