ಪ್ರಚಲಿತ

2014 ರ ಚುನಾವಣೆಗೂ ಮುನ್ನ ತಾನೊಬ್ಬ ಹಿಂದೂ ರಾಷ್ಟ್ರವಾದಿ ಅಂತ ಹೇಳಿಕೊಂಡಿದ್ದ ಮೋದಿ ಪ್ರಧಾನಿಯಾದ ನಂತರ ಹಿಂದುತ್ವ ಮರೆತರೆ?

ಅದು 2014, Reuters ಏಜೆನ್ಸಿ ಎಂಬ ಸುದ್ಧಿ ಸಂಸ್ಥೆಯೊಂದು ನರೇಂದ್ರ ಮೋದಿಯವರ ಇಂಟರ್‌ವ್ಯೂ ಒಂದನ್ನ ನಡೆಸಿದ್ದರು. ಅಲ್ಲಿ ಮೋದಿಯವರಿಗೆ ಹಲವಾರು ಪ್ರಶ್ನೆಗಳನ್ನ ಕೇಳಲಾಗಿತ್ತು.

ಹೇಗಾದರೂ ಮಾಡಿ ನರೇಂದ್ರ ಮೋದಿಯನ್ನು ಮುಸ್ಲಿಂ ವಿರೋಧಿ ಅಂತ ಬಿಂಬಿಸೋಕೆ ಪ್ರಯತ್ನಪಡಲಾಯಿತು, ಅಂದರೆ ಆ ರೀತಿಯ ಪ್ರಶ್ನೆಗಳನ್ನೂ ಸಂದರ್ಶನದಲ್ಲಿ ಕೇಳಲಾಗಿತ್ತು. ಆದರೆ ಮೋದಿ ಮಾತ್ರ ಇವರ ಯಾವ ಪೂರ್ವಾಗ್ರಹಪೀಡಿತ ಪ್ರಶ್ನೆಗಳಿಗೂ ಎದೆಗುಂದದೆ ಸಮರ್ಥವಾಗಿ ಉತ್ತರಿಸಿದ್ದರು.

ಆದರೆ ಅಲ್ಲಿ ಇಂಟರ್‌ವ್ಯೂವರ್ ಒಂದು ಪ್ರಶ್ನೆಯನ್ನ ಕೇಳಿದ್ದ,
“ನಿಮ್ಮದು ಹಿಂದೂ ಧರ್ಮ ಅಲ್ಲವೇ?”

ಈ ಪ್ರಶ್ನೆಗೆ ಉತ್ತರಿಸಿದ್ದ ಮೋದಿ ಹೇಳಿದ್ದಿಷ್ಟು

“ಹೌದು ನಾನು ಹುಟ್ಟಿದ್ದು ಹಿಂದೂ ಧರ್ಮದಲ್ಲಿ, ನಾನೊಬ್ಬ ರಾಷ್ಟ್ರವಾದಿ, ಹಾಗಾಗಿ ನಾನೊಬ್ಬ ಹಿಂದೂ ರಾಷ್ಟ್ರವಾದಿ”

ಈ ಸಂದರ್ಶನ ಸುದ್ಧಿಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ವಿರೋಧಿಗಳು ಮೋದಿಯವರ ಮೇಲೆ ಮುಗಿಬಿದ್ದೇ ಬಿಟ್ಟರು, ಅದ್ಹೇಗೆ ಮೋದಿ ಹಿಂದೂ ಅಂತ ಹೇಳಿದರು, ಅವರೊಬ್ಬ ಕೋಮುವಾದಿ, 2002 ರ ಗುಜರಾತ್ ದಂಗೆಯಲ್ಲಿ ಮುಸಲ್ಮಾನರನ್ನ ಕೊಂದ ಕೊಲೆಗಡುಕ ಅಂತೆಲ್ಲ ಬಾಯಿಗೆ ಬಂದಂತೆ ಬೊಗಳೋಕೆ ಶುರು ಮಾಡಿಕೊಂಡರು.

ಮೋದಿಯವರ ಹಿಂದೂ ರಾಷ್ಟ್ರವಾದಿ ಎಂಬ ಆ ಸಾಲುಗಳನ್ನಿಟ್ಟುಕೊಂಡು ಮಹಾರಾಷ್ಟ್ರದಲ್ಲಿ ಅವರ ಅಭಿಮಾನಿಗಳಿಂದ “ಮೋದಿ ಹಿಂದೂ ರಾಷ್ಟ್ರವಾದಿ” ಅನ್ನೊ ಫ್ಲೆಕ್ಸ್, ಬ್ಯಾನರ್ ಗಳು ಹಾಕಲ್ಪಟ್ಟವು.

ಅಷ್ಟಕ್ಕೂ ಮೋದಿ ಹೇಳಿದ್ದರಲ್ಲಿ ತಪ್ಪೇನಿತ್ತು? ಒಬ್ಬ ಮುಸ್ಲಿಂ ವ್ಯಕ್ತಿಗೆ ನಿನ್ನ ಧರ್ಮ ಯಾವುದಂತ ಕೇಳಿದರೆ ಆತ ಇಸ್ಲಾಂ ಅಂತ ಉತ್ತರಿಸುತ್ತಾನೋ ಅಥವ ತಾನು ‘ಸೆಕ್ಯೂಲರ್’ ಧರ್ಮಕ್ಕೆ ಸೇರಿದವನಂತ ಹೇಳಿಕೊಳ್ತಾನಾ?

ತಾನು ಹುಟ್ಟಿದ ಧರ್ಮದ ಬಗ್ಗೆ ಸೋ ಕಾಲ್ಡ್ ಸೆಕ್ಯೂಲರ್ ಗಳಿಗೆ ಧರ್ಮಾಭಿಮಾನ ಇರದಿರಬಹುದು ಆದರೆ ಮೋದಿ ಇಂತಹ ಢೋಂಗಿಗಳಂತಲ್ಲ ಅನ್ನೋದನ್ನ ಅಂದು ಸ್ಪಷ್ಟವಾಗಿ ತಮ್ಮ ಇಂಟರ್‌ವ್ಯೂ ಮೂಲಕ ಜಗತ್ತಿಗೆ ಸಾರಿದ್ದರು.

ಅಂದು ಮೋದಿ ತಾನೊಬ್ಬ ಹಿಂದೂ ರಾಷ್ಟ್ರವಾದಿ ಅಂತ ಹೇಳಿದ್ದಾಗ ಅವರ ವಿರೋಧ ಮಾಡಿದ್ದ ಜನಗಳೇ ಇಂದು ಮೋದಿ ಜಾರಿಗೆ ತರುತ್ತಿರುವ ಯೋಜನೆಗಳನ್ನೂ ವಿರೋಧಿಸುತ್ತಿದ್ದಾರೆ, ಅಂದು ಮೋದಿಗೆ ಬೆಂಬಲ ನೀಡಿದ್ದ ಹಿಂದುಗಳೂ ಇಂದು ಪ್ರಧಾನಿ ಮೋದಿ ಹಿಂದುಗಳಿಗಾಗಿ ಏನು ಮಾಡಿದ್ದಾರೆ ಅನ್ನೋದನ್ನ ಕೇಳ್ತಿದಾರೆ.

ಇವರು ಮೋದಿಯವರನ್ನ ಕುರಿತು ಕೇಳುತ್ತಿರುವ ಪ್ರಶ್ನೆಗಳನ್ನ ನೋಡಿದರೆ
2014 ರ ಚುನಾವಣೆಗೂ ಮುನ್ನ ತಾನೊಬ್ಬ ಹಿಂದೂ ರಾಷ್ಟ್ರವಾದಿ ಅಂತ ಹೇಳಿಕೊಂಡಿದ್ದ ಮೋದಿ ಪ್ರಧಾನಿಯಾದ ನಂತರ ಹಿಂದುತ್ವ ಮರೆತರೆ? ಎನ್ನುವ ಅನುಮಾನಗಳು ಕಾಡುತ್ತವೆ.

ಜಿಎಸ್‍ಟಿ, ನೋಟು ಅಮಾನ್ಯೀಕರಣ ಮೇಕ್ ಇನ್ ಇಂಡಿಯಾ ಅಂತ ಮೋದಿಯ ವಿರುದ್ಧ ಬಾಯಿ ಬಾಯಿ ಬಡ್ಕೊಳ್ತಿರೋ ಸೋ ಕಾಲ್ಡ್ ಸೆಕ್ಯೂಲರ್ ಹಿಂದುಗಳ ಕಣ್ಣಿಗೆ

ದೇಶದ ಯುವಕರನ್ನ ಭಯೋತ್ಪಾದನಾ ಸಂಘಟನೆಗಳಿಗೆ ಸೇರಲು ಪ್ರೇರೇಪಿಸಿದ್ದ ಜಾಕೀರ್ ನಾಯಕ್ ನ್ನ ಭಯೋತ್ಪಾದಕ, ಪಲಾಯನವಾದಿಯಂತ ಘೋಷಣೆ ಮಾಡಿದ್ದು ಇವರ ಕಣ್ಣಿಗೆ ಕಾಣಲಿಲ್ಲವಾ?

ತನ್ನ ದೇಶ ಬರ್ಮಾದಲ್ಲೇ ಭಯೋತ್ಪಾದನ ಕೃತ್ಯಗಳನ್ನೆಸಗಿ, ಪಾಕಿಸ್ತಾನದ ಲಷ್ಕರ್ ನಂತಹ ಭಯೋತ್ಪಾದನಾ ಸಂಘಟನೆಗಳ ಜೊತೆ ನಂಟು ಹೊಂದಿ ಭಾರತಕ್ಕೆ ನಿರಾಶ್ರಿತರ ಸೋಗಿನಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಭಾರತದಲ್ಲಿ ನೆಲೆಯೂರಿದ್ದ ರೋಹಿಂಗ್ಯಾ ಮುಸಲ್ಮಾನರನ್ನ ದೇಶದಿಂದ ಓಡಿಸೋಕೆ ಮೋದಿ ಪ್ರಯತ್ನ ಪಡ್ತಿರೋದು ಇವರ ಕಣ್ಣಿಗೆ ಕಾಣಲಿಲ್ಲವಾ?

ಸ್ವಾತಂತ್ರ್ಯ ಬಂದಾಗಿನಿಂದ ಒಂದಿಲ್ಲೊಂದು ದೇಶವಿರೋಧಿ ಮಾನಸಿಕತೆಯಿಂದ ಬಳಲುತ್ತಿರುವ ಕಾಶ್ಮೀರದಲ್ಲಿ ತಮ್ಮ ಭಯೋತ್ಪಾದನಾ ಚಟುವಟಿಕೆ, ಪ್ರತ್ಯೇಕತಾವಾದಿ ವಿಚಾರಗಳನ್ನ ಬಿತ್ತಿ ಅಕ್ಷರಶಃ ನರಕ ಮಾಡಿಕೊಂಡು ಓಡಾಡುತ್ತಿದ್ದವರನ್ನ ಹೆಡೆಮುರಿ ಕಟ್ಟಿ ಇಲ್ಲಿಯವರೆಗೆ ಸರಿಸುಮಾರು 200 ಇಸ್ಲಾಮಿಕ್ ಉಗ್ರರನ್ನ ಹೊಡೆದುರುಳಿಸಿ ಕಾಶ್ಮೀರವನ್ನ ಭಯೋತ್ಪಾದನಾ ಮುಕ್ತ ರಾಜ್ಯ ಮಾಡುತ್ತಿರೋದು ಇವರ ಕಣ್ಣಿಗೆ ಕಾಣುತ್ತಿಲ್ಲವಾ?

ಅಮರನಾಥ ಯಾತ್ರೆಗೆ ಹೋಗಬೇಕೆಂದರೆ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿಯಿದ್ದದ್ದನ್ನ ಹಿಂದುಗಳಿಗೆ ನಮ್ಮ ಸರ್ಕಾರ ನಿಮ್ಮ ರಕ್ಷಣೆಗಿದೆ ಅಂತ ಧೈರ್ಯ ನೀಡಿ ಅದರ ಜೊತೆಗೆ
ಅಮರನಾಥ ಯಾತ್ರೆಗೆ ಸಬ್ಸಿಡಿ ಘೋಷಿಸಿದ್ದನ್ನೂ ಇವರು ಮರೆತುಬಿಟ್ಟಿರಾ?

ಜೀವನದಲ್ಲಿ ಒಮ್ಮೆಯಾದರೂ ಮಾನಸಸರೋವರ ಯಾತ್ರೆ ಮಾಡಬೇಕು ಆದರೆ ಅದರ ಖರ್ಚು ವೆಚ್ಚ ನಮ್ಮ ಕೈಲಾಗಲ್ಲ ಅಂತಿದ್ದ ಹಿಂದುಗಳಿಗೆ ಕೈಲಾಸ ಮಾನಸ ಸರೋವರ ಯಾತ್ರೆಗೆ ಸಬ್ಸಿಡಿ ಘೋಷಿಸಿದ್ದು ಇವರ ಕಣ್ಣಿಗೆ ಕಾಣಲಿಲ್ಲವಾ?

ಕಾನೂನು ಬಾಹಿರವಾಗಿ ನಡೆಯುತ್ತಿರೋ, ಭಯೋತ್ಪಾದನಾ ಕೇಂದ್ರಗಳಾಗಿ ಮಾರ್ಪಟ್ಟಿರುವ ಮದರಾಸಾಗಳ ಮೇಲೆ ಕಣ್ಣಿಟ್ಟು ಅವುಗಳ ನಿಯಂತ್ರಣಕ್ಕೆ ಮುಂದಾಗಿರೋದು ಇವರ ಕಣ್ಣಿಗೆ ಕಾಣಲಿಲ್ಲವಾ?

ಪಾಕಿಸ್ತಾನ, ಬಾಂಗ್ಲಾದೇಶದ ನಿರ್ಗತಿಕ, ಶೋಷಿತ ಹಿಂದುಗಳನ್ನ ಭಾರತದಲ್ಲಿ ಬದುಕೋಕೆ ಅವಕಾಶ ನೀಡುತ್ತಿರೋದು ಇವರ ಕಣ್ಣಿಗೆ ಕಾಣಲಿಲ್ಲವಾ?

ಜಾತಿ ಮತ ಪಂಥವೆನ್ನೋದನ್ನ ನೋಡದೆ ದೇಶದ 125 ಕೋಟಿ ಜನರಿಗೋಸ್ಕರ ಪ್ರಾಣ ನೀಡೋಕೂ ತಯಾರು ಅಂತ ದಿನವೊಂದಕ್ಕೆ 18 ಗಂಟೆಗಳ ಕಾಲ ದುಡಿಯುತ್ತಿರುವ ಪ್ರಧಾನಿ ಅದ್ಹೇಗೆ ತಾನೊಬ್ಬ ಹಿಂದೂ ರಾಷ್ಟ್ರವಾದಿಯಲ್ಲ ಅಂತ ಹೇಳ್ತೀರ?

ಅಷ್ಟಕ್ಕೂ ಹಿಂದೂ ರಾಷ್ಟ್ರವಾದಿ ಅಂದರೆ ಇವರು ಅರ್ಥ ಮಾಡಿಕೊಂಡಿದ್ದಾದರೂ ಏನು? ಹಿಂದೂ ಧರ್ಮ ಯಾವತ್ತಿದ್ದರೂ “ಸರ್ವೇ ಜನ ಸುಖಿನೋ ಭವಂತು” ಅನ್ನೋದನ್ನೇ ಹೇಳುತ್ತೆ, ಅದನ್ನೇ ಪ್ರಧಾನಿ ಮೋದಿ ಪಾಲಿಸುತ್ತಿದ್ದಾರೆ.

ಅವರ ಪ್ರತಿ ಭಾಷಣದಲ್ಲೂ “125 ಕೋಟಿ ದೇಶವಾಸಿಗಳು” ಅಂತಲೇ ಹೇಳುವಾಗ ಅವರು ಸರ್ವೇ ಜನ ಸುಖಿನೋ ಭವಂತು ಎಂಬ ಹಿಂದೂ ತತ್ವದಡಿಯಲ್ಲೇ ಕೆಲಸ ಮಾಡುತ್ತಿದ್ದಾರನ್ನೋದು ಯಾಕೆ ಅರ್ಥವಾಗಲಿಲ್ಲ ಇವರಿಗೆ?

ಅಥವ ಮೋದಿಯನ್ನ ವಿರೋಧಿಸಲೇಬೇಕು ಅನ್ನೋ ಕಾರಣಕ್ಕಾಗಿ ಇಷ್ಟೆಲ್ಲಾ ಸ್ಟಂಟ್ಸ್ ಮಾಡುತ್ತಿರೋದಾ?

2014 ರಲ್ಲಿ ತಾನೊಬ್ಬ ಹಿಂದೂ ರಾಷ್ಟ್ರವಾದಿ ಅಂತ ಹೇಳಿಕೊಂಡಿದ್ದ ಮೋದಿ ಹಿಂದೂ ರಾಷ್ಟ್ರವಾದಿಯೇ, ಅವರದು ಯಾವತ್ತೂ ಬದಲಾಗದ ವ್ಯಕ್ತಿತ್ವ!!

– Vinod Hindu Nationalist

Tags

Related Articles

Close