ಅಂಕಣ

2014 ರ ನಂತರ ಕಾಶ್ಮೀರದಲ್ಲಿ ಏನು ಬದಲಾಯಿತು ಎಂಬ ಪ್ರಶ್ನೆಗೆ ಒಬ್ಬ ಸೈನಿಕ ಕೊಟ್ಟ ಉತ್ತರ ಏನಿತ್ತು ಗೊತ್ತೇ?!

ನೂರಾರು ವರ್ಷಗಳ ಹಿಂದೆ ನಮ್ಮ ಹಿಂದೂಸ್ಥಾನ ಹೇಗಿತ್ತೆಂದರೆ, ವಜ್ರ ವೈಢೂರ್ಯಗಳನ್ನು ಬೀದಿಯಲ್ಲಿ ಮಾರುತ್ತಿದ್ದಂತಹ ಶ್ರೀಮಂತಭರಿತವಾದ ನಾಡಾಗಿತ್ತು. ಆದರೆ ಪರಕೀಯರ ದಾಳಿಯಿಂದ ನಮ್ಮ ಸಂಪತ್ತನ್ನೆಲ್ಲ ದೋಚಿಕೊಂಡು ಹೋಗಿದ್ದಾರೆ ಎನ್ನುವುದನ್ನು ಇತಿಹಾಸದಲ್ಲಿ ಓದಿದ್ದೀವಿ.. ಇದನ್ನೆಲ್ಲ ಕೇಳಿದಾಗ ಪರಕೀಯರನ್ನು ಸದೆಬಡಿಯುವುದಕ್ಕಿಂತ ಹೆಚ್ಚಾಗಿ ನರಿಬುದ್ದಿಯುಳ್ಳವರು ಅವರನ್ನು ಸಲಹಿದ್ದೇ ಹೆಚ್ಚು ಎಂದನಿಸುತ್ತೇ ಅಲ್ವೇ?? ಇಂತಹ ನರಿಬುದ್ದಿಯುಳ್ಳವರ ಅನುಯಾಯಿಗಳು ಇಂದಿಗೂ ನಮ್ಮ ದೇಶದಲ್ಲಿ ಇದ್ದು, ಭರತಖಂಡಕ್ಕೆ ಕೇಡು ಬಯಸುತ್ತಿದ್ದಾರೆ!!

ಪ್ರಸ್ತುತ ದಿನಗಳಲ್ಲಿ ನಮ್ಮ ದೇಶದ ಮೇಲೆ ದಾಳಿಗಳು ನಡೆಯುತ್ತಲೇ ಇದ್ದು, ಭಾರತದ ಶಿರವನ್ನು ತುಂಡರಿಸಲು ಅದೆಷ್ಟೋ ವಿಕೃತ ಭಯೋತ್ಪಾಕದರು ತುದಿಗಾಲಲ್ಲಿ ನಿಂತಿದ್ದಾರೋ ನಾ ಕಾಣೇ!! ಆದರೆ ಒಬ್ಬ ಕುಖ್ಯಾತ ಭಯೋತ್ಪಾದಕ ಬುರ್ಹಾನ್ ವಾನಿಯ ಹತ್ಯೆಯಾದಾಗ ಇಡೀ ದೇಶವೇ ಸಂಭ್ರಮಿಸಿತು! ಆದರೆ ಕೆಲ ಮಾಧ್ಯಮ ಮಂದಿ ಹಾಗೂ ಬುದ್ದಿಜೀವಿಗಳೆಂದೆನಿಸಿಕೊಂಡವರು ಪಾಕಿಸ್ತಾನದ ಜೊತೆ ಸೇರಿ ಕಣ್ಣೀರಧಾರೆಯನ್ನು ಹರಿಸಿದ್ರು!! ಎಂತಹ ನಾಚಿಕೆ ಕೇಡಿನ ಸಂಗತಿಯಲ್ವೇ!! ಬುರ್ಹಾನ್ ವಾನಿ ಒಬ್ಬ ದೇಶಕ್ಕೋಸ್ಕರ ಹೋರಾಡಿದ ವ್ಯಕ್ತಿ ಅಲ್ಲ, ಆತ ಒಬ್ಬ ಕುಖ್ಯಾತ ಭಯೋತ್ಪಾದಕ!!!

ಈ ಅವಕಾಶವನ್ನು ಉಪಯೋಗಿಸಿದ ಈ ಗುಳ್ಳೆನರಿಗಳು, ಕಣಿವೆಯಲ್ಲಿ ಹಿಂಸಾಚಾರಗಳು ನಡೆಯುತ್ತಿವೆ, ಈ ಹಿಂಸಾಚಾರವನ್ನು ಮಾಡುವವರ ವಿರುದ್ದ ಸೇನೆ ಗುಂಡಿನ ಬಂದೂಕನ್ನು ನಿಷೇಧಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಶುರುಮಾಡಿಬಿಟ್ಟರು!! ಅಷ್ಟೇ ಅಲ್ಲದೇ, ಕೆಲ ಪತ್ರಕರ್ತರು ರಾತ್ರಿ ಹಗಲೆನ್ನದೇ ಸೇನೆಯ ವಿರುದ್ದ ಲೇಖನಗಳನ್ನು ಬರೆದಿದ್ದೇ ಬರೆದಿದ್ದು!!! ಅಷ್ಟಕ್ಕೂ.. ಈ ಜನರು ಇದ್ದಕ್ಕಿದ್ದಂತೆ ನಡುಗಲು ಆರಂಭಿಸಿದ್ದಾದರೂ ಯಾಕೆ? ಅಲ್ಲದೇ ಇವರಿಗೆ ಅಸುರಕ್ಷಿತದ ಭಾವನೆ ಉಂಟಾಗಿದ್ದಾದರೂ ಯಾಕೆ??

ಒಬ್ಬ ಉದ್ಯಮಿ ಹೇಳಿದ ಒಂದು ಕುತೂಹಲಕಾರಿಯಾದ ಕಥೆ!!

ಈ ವರ್ಷದ ಜುಲೈನಲ್ಲಿ ಒಬ್ಬ ಉದ್ಯಮಿ, ದೆಹಲಿ ನಿಲ್ದಾಣದಿಂದ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ಕೇರಳದ ಮಿಲಿಟರಿ ಸೈನಿಕನನ್ನು ಭೇಟಿ ಮಾಡಿದ್ದರು. ಸ್ವಲ್ಪಮಟ್ಟಿಗೆ ಪ್ರಕೃತಿಯಿಂದ ದೂರ ಉಳಿದ ಈ ಉದ್ಯಮಿ ಎಲ್ಲಿಹೋದರಲ್ಲಿ ಸ್ನೇಹಿತರನ್ನು ಮಾಡಲು ಇಷ್ಟಪಡುತ್ತಿದ್ದರು. ಹಾಗಾಗಿ ಸೈನಿಕನ ಜೊತೆ ಸಂಭಾಷಣೆಗೆ ಇಳಿದರು ಕೂಡ!! ಸೈನ್ಯದಲ್ಲಿ ಸೈನಿಕರ ಜೀವನದ ಬಗ್ಗೆ, ಅವರ ದಿನಚರಿಯ ಬಗ್ಗೆ ಹಾಗೂ ತಮ್ಮ ಕುಟುಂಬವನ್ನು ವರ್ಷಗಳವರೆಗೆ ಬಿಟ್ಟಿರುವುದಾದರೂ ಹೇಗೆ ಎನ್ನುವ ಕುತೂಹಲಕಾರಿಯಾದ ಸಂಭಾಷಣೆಯಲ್ಲಿ ತೊಡಗಿದ್ದರು!! ಸೈನಿಕ ತುಂಬಾ ಖುಷಿಯಿಂದ ಎಲ್ಲವನ್ನು ಈ ಉದ್ಯಮಿಯೊಂದಿಗೆ ಹಂಚಿಕೊಳ್ಳುತ್ತಿದ್ದರು!!

ಅಷ್ಟೇ ಅಲ್ಲದೇ, ತಮ್ಮ ಮಾತುಕತೆಯಲ್ಲಿ ಈ ಉದ್ಯಮಿ, ಎರಡು ವರ್ಷಗಳಲ್ಲಿ ಪ್ರಧಾನಿ ಮೋದಿಯವರ ತಮ್ಮ ಸರಕಾರದಲ್ಲಿ ಆದ ಬದಲಾವಣೆಗಳ ಬಗ್ಗೆ ತಮ್ಮ
ಅಭಿಪ್ರಾಯವೇನೆಂದು ಕೇಳಿಬಿಟ್ಟರು!!! ಸೈನಿಕ ತಕ್ಷಣವೇ, ” ಸರ್, ನಾನೊಬ್ಬ ಸೈನಿಕ, ರಾಜಕಾರಣದ ಬಗ್ಗೆ ಯಾವುದೇ ರೀತಿಯ ಅಭಿಪ್ರಾಯವಿಲ್ಲ” ಎಂದು
ಉತ್ತರಿಸಿದ!! ತದನಂತರದಲ್ಲಿ ದೆಹಲಿ ಮತ್ತು ಕೇರಳದಲ್ಲಿನ ಹವಾಮಾನದ ಬಗ್ಗೆ, ಆಹಾರದ ಕುರಿತು ಮಾತನಾಡಲು ಶುರು ಮಾಡಿದರು. ಮೆಟ್ರೋ ಸ್ಟೇಷನ್
ಆಗಮಿಸಿದಾಗ ಸೈನಿಕ ಎದ್ದು ನಿಂತು ಗುಡ್ ಬೈ ಹೇಳಿದ, ಅಲ್ಲದೇ ಈ ಸೈನಿಕ ಹೊರಡುವ ಮೊದಲು ಹಿಂತಿರುಗಿ, ಈ ಉದ್ಯಮಿಗೆ ಮುಗುಳ್ನಕ್ಕು, “2014ರ ಮೊದಲು ಸೈನಿಕ ಸಾಯುವಾಗ ಮಾತ್ರ ಬಂದೂಕುಗಳನ್ನು ಬಳಸಲು ಸೂಚನೆ ಸಿಗುತ್ತಿತ್ತು. ಆದರೆ ಈಗ, ಬಂದೂಕುಗಳನ್ನು ಬಳಸಲು ಯಾವ ಸೈನಿಕನು ಸಾಯುವವರೆಗೆ ನಾವು ಕಾಯಬೇಕೆಂದಿಲ್ಲ…ಇದುವೇ ಆದ ಬದಲಾವಣೆ”!! ಎಂದು ಹೇಳಿದ ಈ ಸೈನಿಕ.

ಆದರೆ ಪಾಕಿಸ್ತಾನದ ಪರ ಮಾತನಾಡುವ ಬುದ್ದಿಜೀವಿಗಳ ಬಗ್ಗೆ, ಕಾಶ್ಮೀರದ ಸಮಸ್ಯೆಯ ಮೇಲೆ ಆದ ಬದಲಾವಣೆ ಇವೆಲ್ಲವೂ ಒಂದು ಸಲ ದಿಗ್ಭ್ರಮೆಗೊಳ್ಳುವಂತೆ
ಮಾಡುತ್ತೆ!! ಆದರೆ 1994ರಿಂದ 2016ರವರೆಗಿನ ಅಂಕಿ ಅಂಶಗಳ ವರದಿಯ ಪ್ರಕಾರ, ಕಾಶ್ಮೀರದಲ್ಲಿ ನಡೆದ ನಾಗರಿಕರ , ಭದ್ರತಾ ಪಡೆಗಳ ಮತ್ತು
ಭಯೋತ್ಪಾದಕರ ಸಾವುನೋವುಗಳ ಬಗ್ಗೆ ಕೆಲವೊಂದು ವಿಸ್ಮಯಕಾರಿಯಾದ ಸತ್ಯಗಳನ್ನು ಬಹಿರಂಗಪಡಿಸಿತ್ತು. ಈ ಸಾವುನೋವಿನ ವಿಚಾರ ಪ್ರಸ್ತುತವಾಗಿ ಗಣನೀಯ ಇಳಿಕೆಯನ್ನು ಕಂಡಿದೆ ಎಂದರೆ ನಂಬ್ತೀರಾ? ಹೌದು… ನಂಬಲೇಬೇಕು. ಯಾಕೆಂದರೆ ಎನ್‍ಡಿಎ ಸರಕಾರದ ಅವಧಿಯಲ್ಲಿ ಭಯೋತ್ಪಾದಕರ ಸಾವುಗಳು ಯುಪಿಎಗೆ ಹೋಲಿಸಿದರೆ ಬಹಳ ಗಮನಾರ್ಹವಾದ ರೀತಿಯಲ್ಲಿ ಕಂಡು ಬರುತ್ತೆ!! ಮೋದಿ ಸರಕಾರ ತಮ್ಮ ಅಧಿಕಾರವನ್ನು ಸ್ವೀಕರಿಸಿದ ನಂತರ ಕಾಶ್ಮೀರದಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಬಹಳ ಗಣನೀಯವಾಗಿ ಇಳಿಕೆಯನ್ನು ಕಂಡಿದ್ದಲ್ಲದೇ, ಭದ್ರತಾ ಪಡೆಗಳ ಹಾಗೂ ನಾಗರಿಕರ ಸಾವುಗಳು ಕಡಿಮೆಯಾಗಿದೆ!!! ಹೇಗೆಂದರೆ 1994ರಲ್ಲಿ ಒಟ್ಟು 4032 ಸಾವುಗಳು ಸಂಭವಿಸಿದ್ದು, ತದನಂತರದಲ್ಲಿ ಹಲವಾರು ಏರಿಳಿತಗಳನ್ನು ಕಂಡಿದೆ. ಆದರೆ 2016ರ ಒಟ್ಟು ಸಾವಿನ ಸಂಖ್ಯೆ 182 ಸಂಖ್ಯೆಗೆ ಇಳಿದಿದ್ದು, ಪ್ರಸ್ತುತ ಮೋದಿ ಸರಕಾರ ದೇಶದ ಬಗ್ಗೆ ದೇಶದ ನಾಗರಿಕರ ಬಗ್ಗೆ ತೋರಿಸಿದ ಕಾಳಜಿ ಈ ಒಂದು ಲೆಕ್ಕಾಚಾರದಲ್ಲಿ ಕಂಡು ಬಂದಿದೆ!!

ಇವೆಲ್ಲವೂ ಭಾರತ-ವಿರೋಧಿ ಲಾಬಿಗಳಿಗೆ ತೊಂದರೆ ನೀಡುತ್ತಿದೆಯೋ ಏನೋ ಗೊತ್ತಿಲ್ಲ!! ಆದರೆ, ತಮ್ಮ ಸಂಬಂಧಿಕಾರದ ಐಎಸ್‍ಐ ಮತ್ತು ಎಲ್‍ಇಟಿಯ ಜನ
ಸತ್ತಾಗ ಅಳುವುದಾದರೂ ಯಾಕೆ?? ನಮ್ಮ ದೇಶದ ಸಾವಿರಾರು ಜನ ಸೈನಿಕರು ದೇಶಕ್ಕೋಸ್ಕರ ಪ್ರಾಣವನ್ನೇ ತ್ಯಾಗಮಾಡಿದ್ದಾರೆ. ಭಯೋತ್ಪಾದಕರಿಂದ
ಕಾಶ್ಮೀರವನ್ನು ರಕ್ಷಿಸುವಲ್ಲಿ ನಮ್ಮ ಸೈನಿಕರು ಇಂದಿಗೂ ಸಾಯುತ್ತಿದ್ದಾರೆ!!! ಹತ್ತು ವರ್ಷಗಳಿಂದ ನಿಸ್ವಾರ್ಥ ಸೇವೆಯನ್ನು ಮಾಡುತ್ತಿರುವ ನಮ್ಮ ಯುವ ನಾಯಕರ ಬಗ್ಗೆ ಇವರಿಗೆ ಕಿಂಚಿತ್ತು ಕರುಣೆಯಿಲ್ಲದೇ, ದೇಶವಿರೋಧಿಗಳ ಬೆಂಗಾವಲಿಗೆ ನಿಂತಿದ್ದಾರೆ ಎಂದರೆ ಇವರು ಭಾರತದಲ್ಲಿ ಇರುವುದಾದರೂ ಯಾಕೆ??

ಮಾನವ ಹಕ್ಕುಗಳ ಬಗ್ಗೆ ಮಾತನಾಡುವ “ಸುಡೋ ಲಿಬರಲ್ಸ್”ನನ್ನು ಭಯೋತ್ಪಾದಕರೇ ಕೊಂದು ಹಾಕಿದರೇ!!! ದೇಶವಿರೋಧಿ ಹೇಳಿಕೆಯನ್ನು ನೀಡುವ
ಬುದ್ದಿಜೀವಿಗಳು ನಮ್ಮ ದೇಶದ ಬಗ್ಗೆ, ದೇಶದ ಸೈನಿಕರ ಬಗ್ಗೆ ಮಾತಾನಾಡುವ ಅಧಿಕಾರವಾದರೂ ಇದೆಯಾ?? ನಮ್ಮ ಸೈನ್ಯದ ವಿರುದ್ದ ಹೋರಾಡುವ
ಭಯೋತ್ಪಾದಕರು ತಮ್ಮ ಕಣ್ಣುಗಳನ್ನು ಕಳೆದುಕೊಂಡಾಗ ಈ ಬುದ್ದಿಜೀವಿಗಳಿಗೆ ಸಹಾನುಭೂತಿ ಉಕ್ಕಿ ಹರಿಯುತ್ತದೆ. ಆದರೆ ನಮ್ಮ ದೇಶದ ಸೈನಿಕನಿಗೆ ಈ ರೀತಿ ಆದಾಗ ಒಂದು ತೊಟ್ಟು ಕಣ್ಣೀರನ್ನಾದರೂ ಹಾಕಿದ್ದಾರಾ? ಅಥವಾ ಒಂದು ಸೈನಿಕನ ಕುಟುಂಬಕ್ಕಾದರೂ ಭೇಟಿ ಮಾಡಿದ್ದಾರಾ??

ನಮ್ಮ ಕೆಚ್ಚೆದೆಯ ಸೇನಾ ಪುರುಷರು ದೇಶಕ್ಕೋಸ್ಕಕರ ಮಾಡುತ್ತಿರುವ ತ್ಯಾಗಗಳಿಂದ ಇಂದು ನಾವು ಸುರಕ್ಷಿತರಾಗಿದ್ದೇವೆ. ಆದರೆ ದೇಶಕ್ಕೋಸ್ಕರ ತ್ಯಾಗ ಮಾಡಿದ ಸೈನಿಕರನ್ನು ಗೇಲಿ ಮಾಡಿ, ಭಯೋತ್ಪಾದಕರನ್ನು ಬೆಂಬಲಿಸಿದ ಇವರಿಗೆ ಭಾರತೀಯರಾದ ನಾವು ಎಂದಿಗೂ ಕ್ಷಮಿಸುವುದಿಲ್ಲ!!! ಅಷ್ಟಕ್ಕೂ ದೇಶವಿರೋಧಿಗಳು ನಮ್ಮ ಪವಿತ್ರವಾದ ದೇಶದಲ್ಲಿ ಇರುವುದಾದರೂ ಯಾಕೆ? ಅಸುರಕ್ಷಿತರೆನ್ನುವ ದೇಶವಿರೋಧಿಗಳು ಭಾರತದಲ್ಲಿದ್ದರೇ ಮಾತ್ರ ಸುರಕ್ಷಿತರು, ಬೇರೆ ದೇಶದಲ್ಲಿ ದೇಶವಿರೋಧಿಯಾಗಿ ಮಾತಾನಾಡುತ್ತಿದ್ದರೆ ನಿಮ್ಮ ರುಂಡವನ್ನು ಚೆಂಡಾಡುತ್ತಿದ್ದರು ಅದನ್ನು ನೆನಪಿಟ್ಟುಕೊಳ್ಳಿ, ಬುದ್ದಿ ಜೀವಿಗಳೇ!!!

-ಅಲೋಖಾ

Tags

Related Articles

Close