ಭಾರತದ ರಾಜಕೀಯ ವಿಚಾರದಲ್ಲಿ ಯಾವಾಗಲೂ ಒಂದಲ್ಲ ಒಂದು ರೀತಿಯಿಂದ ಸುದ್ದಿಗಳನ್ನು ಮಾಡುತ್ತಲೇ ಇರುವುದು ಗೊತ್ತಿರುವ ವಿಷಯ!! ಆದರೆ ಕೆಲವು
ದಿನಗಳಿಂದ ಕೆಲ ಮಾಧ್ಯಮಗಳು ಹಾಗೂ ಕೆಲವೊಂದು ಜಾತ್ಯಾತೀತ ಪಕ್ಷಗಳು ಸೇರಿದಂತೆ, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನಕಾರಾತ್ಮಕ ವಿಷಯಗಳನ್ನು ಬಿತ್ತರಿಸಿ, ದೇಶದ ಯುವಕರನ್ನು ನೇರವಾಗಿ ಗುರಿಯಾಗಿಸಿಕೊಂಡು ಅಪಪ್ರಚಾರಗಳನ್ನು ನೀಡುತ್ತೆ ಎಂದರೆ ಮಾಧ್ಯಮಗಳು ಎತ್ತಕಡೆ ವಾಲುತ್ತಿದೆ??
ನಕಲಿ ಸುದ್ದಿಗಳನ್ನು ಬಿತ್ತರಿಸುವ ಮಾಧ್ಯಮಗಳು ಮತ್ತು ಕೆಲ ರಾಜಕೀಯ ಪಕ್ಷಗಳಿಗೆ ನರೇಂದ್ರ ಮೋದಿಯವರು ಬಹಳ ಜನಪ್ರಿಯ ನಾಯಕರೆಂದು
ತಿಳಿದುಕೊಂಡಿರುವುದು ಅಕ್ಷರಶ ಸಹ ನಿಜ!! ನರೇಂದ್ರ ಮೋದಿಯವರನ್ನು ಚುನಾವಣೆಗಳಲ್ಲಿ ಸೋಲಿಸುವುದು ಅಸಾಧ್ಯವೆಂದು ವಿರೋಧ ಪಕ್ಷಗಳಿಗೂ ಗೊತ್ತಿದೆ..
ಹಾಗಾಗಿ ಅವರನ್ನು ಸೋಲಿಸಲು ನಾನಾ ರೀತಿಯ ಪ್ರಯತ್ನಗಳು ನಡೆಯುತ್ತಿರುವುದು ನಮಗೆಲ್ಲಾ ಈಗಾಗಲೇ ತಿಳಿದಿದೆ. ಅದಕ್ಕಾಗಿ ಇನ್ನೊಂದು ಉತ್ತಮ ಮಾರ್ಗವನ್ನು ಕಂಡುಕೊಂಡ ರಾಜಕೀಯ ವಿರೋಧಿಗಳು, ಅವರನ್ನು ಕೋಮುವಾದಿಯೆಂದು ಬಿಂಬಿಸಿ ಕಾರ್ಯಸೂಚಿಯನ್ನು ದುರುಪಯೋಗಪಡಿಸಿಕೊಳ್ಳುವುದು!! ಅಷ್ಟೇ ಅಲ್ಲದೇ ಮೋದಿಯನ್ನು ಬೆಂಬಲಿಸುವ ಯುವಕರ ಮನಸ್ಸನ್ನು ವಿಭಜನೆಗೊಳ್ಳುವಂತೆ ಮಾಡುವುದೇ ಇವರ ಮುಖ್ಯ ಉದ್ದೇಶ!!
ಕಾಂಗ್ರೆಸ್ಸಿಗರ ಪ್ರಮುಖ ಕಾರ್ಯಸೂಚಿಯಾದರೂ ಏನುಗೊತ್ತೆ?
ಪ್ರಸ್ತುತ ದಿನಗಳಲ್ಲಿ ‘ಪ್ರಧಾನಿ ಮೋದಿಯವರ ಬೆಂಬಲವನ್ನು ಜನರು ಕಳೆದುಕೊಳ್ಳುತ್ತಿದ್ದಾರೆ’ ಎನ್ನುವುದನ್ನು ಪ್ರಚಾರ ಮಾಡಿ, ಮೋದಿಯ ಪ್ರಮುಖ ಬೆಂಬಲಿಗರನ್ನು ಮುರಿಯುವುದೇ ಇವರ ಮೂಲ ಉದ್ದೇಶ!! ಆದರೆ ಒಂದು ತಿಂಗಳ ಹಿಂದೆ ಸಿಎಸ್‍ಡಿಎಸ್ ಮತ್ತು ಇಂಡಿಯಾ ಟುಡೆ ಮಾಡಿರುವ ಸಮೀಕ್ಷೆಯ ಪ್ರಕಾರ, ಜನಸಾಮಾನ್ಯರಲ್ಲಿ ನರೇಂದ್ರ ಮೋದಿಯವರ ಜನಪ್ರಿಯತೆಯು ದಿನದಿಂದ ದಿನಕ್ಕೆ ಏರುತ್ತಿದ್ದು, ಮೋದಿಯವರು ಜನರಿಗೆ ನೀಡಿದ ಭರವಸೆಯನ್ನು ತಲುಪಲು ಸಮರ್ಥರಾಗಿದ್ದಾರೆ ಎಂಬುವುದು ಸಮೀಕ್ಷೆಯಲ್ಲಿ ಕಂಡುಬಂದಂತಹ ಸತ್ಯ ಸಂಗತಿ!!!
ಈ ವರದಿಯ ಪ್ರಕಾರ, ಲೋಕಸಭೆ ಚುನಾವಣೆಯು ಇಂದೇ ನಡೆದರೂ ಕೂಡ ಪ್ರಧಾನಿ ಮೋದಿ 330-349 ಸ್ಥಾನವನ್ನು ಪಡೆದು ಚುನಾವಣೆಯನ್ನು ಗೆಲ್ಲುತ್ತಾರೆ
ಎಂಬುವುದನ್ನು ಸಮೀಕ್ಷೆ ತೋರಿಸಿದೆ. ಅಷ್ಟೇ ಅಲ್ಲದೇ, ಬಿಜೆಪಿಯ ಮತ ಹಂಚಿಕೆ ಶೇಕಡ 39-40ದಷ್ಟು ಹೆಚ್ಚಾಗಿದ್ದು, 2014ರಿಂದ ಶೇಕಡ 9ರಷ್ಟು ಹೆಚ್ಚಾಗಿದೆ ಎಂದು ಸಮೀಕ್ಷೆ ಸೂಚಿಸಿದೆ!!!
ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಗಿನಿಂದಲೂ ಪ್ರಧಾನಿ ಮೋದಿ ಅದೆಷ್ಟೋ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರಲ್ಲದೇ 2019ರಲ್ಲಿ ಚುನಾಯಿತರಾದರೆ ಮೋದಿ ಅಭಿವೃದ್ಧಿ ಕಾರ್ಯಸೂಚಿಗಳನ್ನು ಮುಂದುವರಿಸುವುದಾಗಿ 63%ರಷ್ಟು ಜನರು ಭಾವಿಸಿದ್ದಾರೆ!! ಅಷ್ಟೇ ಅಲ್ಲದೇ, ನಗದುರಹಿತ ವಹಿವಾಟಿನ ಬಗೆಗಿರುವ ಪ್ರಶ್ನೆಗೆ, ಜನರು ಇದೊಂದು ಕಷ್ಟಕರವಾದ ನಿರ್ವಹಣೆ ಎಂದು ಭಾವಿಸಿದ್ದರು ಮಾತ್ರವಲ್ಲದೇ, ಇದು ದೇಶದ ಕಲ್ಯಾಣಕ್ಕಾಗಿ ಮತ್ತು ನಿರ್ಧಾರದ ಬಗ್ಗೆ ಹೆಚ್ಚು ಧನಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ ಎಂದು ನಂಬಿದ್ದಾರೆ!!
ಯಾವಾಗ ಪ್ರಧಾನಿ ಹುದ್ದೆಗೆ ಹೆಚ್ಚು ಆದ್ಯತೆ ಪಡೆದ ಅಭ್ಯರ್ಥಿ ಯಾರು ಎಂದು ಪ್ರಶ್ನಿಸಿದಾಗ, ಶೇಕಡ 44ರಷ್ಟು ಜನರು ಪ್ರಧಾನಿ ಮೋದಿಯನ್ನು ಬೆಂಬಲಿಸಿದರೆ, ಕೇವಲ 8 ಶೇಕಡ ದಷ್ಟು ಜನರು ರಾಹುಲ್ ಗಾಂಧಿಯನ್ನು ಬೆಂಬಲಿಸಿದ್ದಾರೆ!! ಹೆಚ್ಚಿನ ಜನರು, ರಾಹುಲ್ ಗಾಂಧಿ ಸಾಕಷ್ಟು ಪ್ರಬುದ್ದರಾಗಿಲ್ಲ ಹಾಗೂ 2014ರಿಂದ ಅವರಿಂದ ಯಾವುದೇ ರೀತಿ ಬದಲಾವಣೆಗಳು ನಡೆದಿಲ್ಲ ಎನ್ನುವುದು ಹೆಚ್ಚಿನ ಜನರ ಅಭಿಪ್ರಾಯವಾಗಿದೆ!!
ಆದರೆ ಇದೀಗ, ಕಾಂಗ್ರೆಸ್ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಂಚಿಕೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ. ಆದರೆ ಇದು ಯಾವತ್ತು 50-60 ಸೀಟುಗಳನ್ನು ದಾಟಲೇಬಾರದು. ಅಷ್ಟೇ ಅಲ್ಲದೇ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕೇ ಎನ್ನುವ ಪ್ರಶ್ನೆಗೆ ಶೇಕಡ 25 ರಷ್ಟು ಜನ ಇದನ್ನು ಬೆಂಬಲಿಸಿದರೆ, ಶೇಕಡ 10ರಷ್ಟು ಮಂದಿ ಸೋನಿಯಾ ಗಾಂಧಿ ಮುಂದುವರಿಯಬೇಕೆಂದು ಬಯಸುತ್ತಾರೆ ಆದರೆ ಶೇಕಡ 8ರಷ್ಟು ಮಂದಿ ಪ್ರಿಯಾಂಕಾ ಗಾಂಧಿಗೆ ಬೆಂಬಲವನ್ನು ಸೂಚಿಸಿದ್ದಾರೆ ಎನ್ನುವುದನ್ನು ಸಮೀಕ್ಷೆ ವರದಿ ಮಾಡಿದೆ!!
ಆದರೆ, ಮೋದಿ ಸರಕಾರದಲ್ಲಿ ಆದ ಬಹುದೊಡ್ಡ ಸಮಸ್ಯೆ ಎಂದರೆ ಜಿಎಸ್ಟಿಯನ್ನು ಅನುಷ್ಠಾನಗೊಳಿಸಿದ ನಂತರ ಆರ್ಥಿಕ ಮಟ್ಟವು ಸ್ವಲ್ಪಮಟ್ಟಿಗೆ ಕುಸಿತಕಂಡಿದ್ದು!!. ಅದಷ್ಟೇ ಅಲ್ಲದೇ ನಿಧಾನಗತಿಯಲ್ಲಿ ಸಾಗುತ್ತಿದ್ದ ಜಿಡಿಪಿಯ ಬೆಳವಣಿಗೆ, ತದನಂತರದಲ್ಲಿ ಕೆಲವು ಅರ್ಥಶಾಸ್ತ್ರಜ್ಞರಿಂದ ಸ್ವಲ್ಪಮಟ್ಟದ ಸುಧಾರಣೆಯನ್ನು ಕಂಡುಕೊಳ್ಳಲು ಸಾಧ್ಯವಾಯಿತು. ಹಾಗೆಯೇ, ಮೋದಿ ಸರಕಾರವು ಆರ್ಥಿಕತೆಯನ್ನು ಮರಳಿ ತರುವಲ್ಲಿ ಯಶಸ್ವಿಯಾಗಿದ್ದಾರೆ!! ದೇಶದಲ್ಲಿ ಆಮದು ಮಾಡಿಕೊಳ್ಳುವ ಸಂಖ್ಯೆ ಕಡಿಮೆಯಾಯಿತಲ್ಲದೇ ರಫ್ತಿನ ವಿಚಾರದಲ್ಲಿ ಉತ್ತಮ ಸುಧಾರಣೆಯನ್ನು ಹೊಂದುವಲ್ಲಿ ಯಶಸ್ವಿಯಾಗಿದೆ!! ಮೋದಿ ಸರಕಾರ ದೇಶದಲ್ಲಿ ತಮ್ಮ ಅಧಿಕಾರವನ್ನು ಸ್ಥಾಪಿಸಿದ ನಂತರ ದೇಶದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದು, 2019ರಲ್ಲಿ ಮೋದಿ ಚುನಾಯಿತರಾದರೆ ದೇಶ ಅಭಿವೃದ್ಧಿ ಪಥದತ್ತ ಸಾಗಲು ಇನ್ನೂ ಸಹಕಾರಿಯಾಗಲಿದೆ!!!
-ಅಲೋಖಾ