ಅಂಕಣ

2020 ಹಿಂಸಾವರ್ಷ, ಜಗತ್ತಿಗೆ ಕಂಟಕ!: ನಾಸ್ಟ್ರಾಡಾಮಸ್ ಭವಿಷ್ಯ ನಿಜವಾಗುತ್ತಿದೆಯೇ

ಖ್ಯಾತ ಭವಿಷ್ಯಕಾರ ನಾಸ್ಟ್ರಾಡಾಮಸ್‍ರ 2020 ಹಿಂಸಾವರ್ಷವಾಗಲಿದ್ದು, ಜಗತ್ತಿಗೆ ಕಂಟಕ ತಪ್ಪಿದ್ದಲ್ಲ ಎಂದು ಹೇಳಿದ್ದರು. ಇದು ನಿಜವಾಗುತ್ತಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿದೆ.

ಯಾರದು ನಾಸ್ಟ್ರಾಡಾಮಸ್:

ಫ್ರಾನ್ಸ್‍ನ ಫಾದ್ರಿ ನಾಸ್ಟ್ರಾಡಾಮಸ್ 16ನೇ ಶತಮಾನದಲ್ಲಿ (1503-1566) ಶ್ರೇಷ್ಠ ಭವಿಷ್ಯಕಾರ ಎಂದು ಹೆಸರು ಪಡೆದಿರುವ ವ್ಯಕ್ತಿ. ಮುಂದಿನ 400 ವರ್ಷಗಳಲ್ಲಿ ಈ ಭೂಮಿಯಲ್ಲಿ ಏನೆಲ್ಲಾ ಸಂಭವಿಸಲಿದೆ ಎಂದು ತಂನ್ನ `ದ ಪ್ರೊಫೆಸೀಸ್’ ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.

ಅತ್ಯಂತ ಕರಾಳ ವರ್ಷ 2020

2020 ಇದು ಅತ್ಯಂತ ಕರಾಳ ವರ್ಷವಾಗಲಿದ್ದು, ಮನುಕುಲದ ಪಾಲಿಗೆ ವಿನಾಶಕಾರಿಯಾಗಲಿದೆ. ಜಗತ್ತಿನ ಸಾಕಷ್ಟು ರಾಷ್ಟ್ರಗಳಿಗೆ ಆರ್ಥಿಕ ಸಂಕಷ್ಟ ಎದುರಾಗಲಿದೆ. ಭಾರತದ ಪಾಲಿಗೆ ಇದು ಅತ್ಯಂತ ಕೆಟ್ಟ ವರ್ಷ. ಜನರು ಆಧ್ಯಾತ್ಮದ ಹೊರಳುತ್ತಾರೆ.
ಅಮೆರಿಕಾ ಹಾಗೂ ಏಷ್ಯಾ ಖಂಡದಲ್ಲಿ ಸೈನ್ಯಾಭ್ಯಾಸ ನಡೆದು 3ನೇ ಯುದ್ದಕ್ಕೆ ಪ್ರಚೋದನೆ ನೀಡಲಿದೆ. ಭಾರತ, ಚೀನಾ, ಫ್ರಾನ್ಸ್ ದೇಶಗಳಲ್ಲಿ ಯುದ್ಧ ಸ್ಥಿತಿ ನಿರ್ಮಾಣವಾಗಲಿದೆ. ಪ್ರಪಂಚದ ಜನರು ಬೀದಿಗಿಳಿದು ಹೋರಾಟ ನಡೆಸುತ್ತಾರೆ. ಧಾರ್ಮಿಕ ಹಿಂಸಾಚಾರ ಹೆಚ್ಚುತ್ತದೆ.

ವಿದೇಶಗಳ ನೆಲೆಸಿದ ಜನ ಗುಂಪು ಗುಂಪಾಗಿ ಮಾತೃಭೂಮಿಗೆ ಮರಳುತ್ತಾರೆ. ಕೆಲವರು ಮಾತೃಭೂಮಿ ತೊರೆದು ಬೇರೆ ರಾಷ್ಟ್ರಕ್ಕೆ ವಲಸೆ ಹೋಗುತ್ತಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಹತ್ಯೆಗೆ ಯತ್ನ ನಡೆಯುತ್ತದೆ. ಬ್ರಿಟನ್ ರಾಣಿ ಸಾವು ತಿಂಗಳುಗಟ್ಟಲೆ ಇಂಗ್ಲೆಂಡ್ ಶೋಕದಲ್ಲಿ ಮುಳುಗಲಿದೆ.

ಅಮೆರಿಕಾ ಅಧ್ಯಕ್ಷ ಟ್ರಂಫ್ ಹಿನ್ನಡೆ ಅನುಭವಿಸುತ್ತಾರೆ. ಹವಾಮಾನ ವೈಪರಿತ್ಯ ಇತ್ಯಾದಿ ಪ್ರಕೃತಿ ವಿಕೋಪ ಸಂಭವಿಸುತ್ತದೆ. ವಿಷಗಾಳಿ, ಭೂಕಂಪ ಉಂಟಾಗಲಿದೆ. ಆಕಾಶದಲ್ಲಿ ಧೂಮಕೇತು ಕಾಣಿಸಿದ ಬಳಿಕ ಹಿಂಸೆ ಹೆಚ್ಚಲಿದೆ.

ತಮ್ಮ ಸಾವನ್ನು ತಾವೇ ಬರೆದುಕೊಂಡಿದ್ದ ನಾಸ್ಟ್ರಾಡಾಮಸ್:

ತನ್ನ ಸಾವಿನ ಬಗ್ಗೆಯೂ ನಾಸ್ಟ್ರಾಡಾಮಸ್ ಮೊದಲು ಬರೆದಿದ್ದರು. ಟೇಬಲ್ ಹಾಗೂ ಹಾಸಿಗೆ ನಡುವೆ ನನ್ನ ಸಾವು ಸಂಭವಿಸಲಿದೆ. ನಾಳೆ ನಾನು ಬದುಕಿರುವುದಿಲ್ಲ ಎಂದು ಬರೆದಿದ್ದರು.
ಅದರ ಮಾರನೇ ದಿನವೇ ಮಾರನೇ ದಿನ ಬೆಡ್‍ರೂಂನ ಟೇಬಲ್‍ನಲ್ಲಿ ಮಧ್ಯ ಸಾವಿಗೀಡಾಗಿದ್ದರು.

ಇದುವರೆಗೆ ನಿಜವಾದ ಭವಿಷ್ಯ:

-1789 ಫ್ರೆಂಚ್‍ಕ್ರಾಂತಿಯ ಬಗ್ಗೆ ಉಲ್ಲೇಖಿಸಿದ್ದು ಅದು ನಿಜವಾಗಿದೆ.

1945 ಜಪಾನ್‍ಗೆ ಅಣುಬಂಬ್ ದಾಳಿಯ ಬಗ್ಗೆ ಭವಿಷ್ಯ ನುಡಿದಿದ್ದರು. ಅದು ಕೂಡ‌ ಸಂಭವಿಸಿತ್ತು.

-1997ರಲ್ಲಿ ಸಂಭವಿಸಿದ ರಾಜಕುಮಾರಿ ಡಯಾನ ಸಾವಿನ ಬಗ್ಗೆ ಬರೆದಿದ್ದರು. ಸತ್ಯವಾಗಿತ್ತು.

-19ನೇ ಶತಮನದಲ್ಲಿ ಹಿಟ್ಲರ್ ಸರ್ವಾಧರಿಕಾರ ಬಗ್ಗೆಯೂ ಹೇಳಿದ್ದರು. ಈತನ ಕೆಟ್ಟ ಆಡಳಿತ ಜಗತ್ತು ಕಂಡಿತ್ತು.

2001ರಲ್ಲಿ ಅಮೆರಿಕದ ಮೇಲೆ ಉಗ್ರ ದಾಳಿಯ ಬಗ್ಗೆ ಉಲ್ಲೇಖಿಸಿದ್ದರು.

-2014ರಲ್ಲಿ ನರೇಂದ್ರ ಮೋದಿ ಯುಗದ ಬಗ್ಗೆ ಉಲ್ಲೇಖಿಸಿದ್ದು, ಮೋದಿತುಗವನ್ನು ಕಾಣುತ್ತಿದ್ದೇವೆ.

Tags

Related Articles

FOR DAILY ALERTS
Close