ಪ್ರಚಲಿತ

2025 ರೊಳಗೆ ಮಿಲಿಟರಿ ಸರಕು ಮತ್ತು ಸೇವೆಗಳಲ್ಲಿ ಮಹತ್ತರವಾದ ಗುರಿ ತಲುಪಲು ರಕ್ಷಣಾ ಸಚಿವಾಲಯ ಮಾಡಿದ್ದೇನು ಗೊತ್ತೇ??

ಈಗಾಗಲೇ “ಸಮಗ್ರ ಸುಧಾರಣೆಗಳನ್ನು ಕೈಗೊಳ್ಳುತ್ತಿರುವ ಮಹತ್ವಾಕಾಂಕ್ಷೆಯ ನರೇಂದ್ರ ಮೋದಿ ನೇತೃತ್ವದ ಸರ್ಕಾರವಿದ್ದು, ಇದರಿಂದಾಗಿ ಭಾರತ ಅಗಾಧವಾದ ಬೆಳವಣಿಗೆಯ ಸಾಮರ್ಥ್ಯಗಳನ್ನು ಹೊಂದಿದೆ” ಎಂದು ವಿಶ್ವಬ್ಯಾಂಕ್ ಪ್ರಶಂಸಿಸಿರುವ ವಿಚಾರ ತಿಳಿದೇ ಇದೆ!! ಅಷ್ಟೇ ಅಲ್ಲದೇ ನರೇಂದ್ರ ಮೋದಿ ಸರ್ಕಾರವು ಈಗಾಗಲೇ ರಕ್ಷಣಾ ಕ್ಷೇತ್ರಗಳಿಗೆ ಅತೀ ಹೆಚ್ಚಿನ ಸವಲತ್ತುಗಳನ್ನು ನೀಡುತ್ತಲೇ ಬರುತ್ತಿದ್ದು, ಇದೀಗ ಮಿಲಿಟರಿ ಸರಕು ಮತ್ತು ಸೇವೆಗಳಲ್ಲಿ ಮಹತ್ವದ ಗುರಿಯನ್ನು ತಲುಪುವ ಸಲುವಾಗಿ ರಕ್ಷಣಾ ಸಚಿವಾಲಯ ಮಹತ್ತರವಾದ ಹೆಜ್ಜೆಯನ್ನಿಟ್ಟಿದೆ!!

ಒಂದು ದೇಶ ಮಹಾನ್ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಮಿಲಿಟರಿ ಶಕ್ತಿಯೇ ಪ್ರಮುಖ ಆಧಾರ. ಇತಿಹಾಸವನ್ನು ಮೆಲುಕು ಹಾಕುವುದಿದ್ದರೆ, ಭಾರತೀಯ ರಕ್ಷಣಾ ಉದ್ದಿಮೆಗೆ 200 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದ್ದು, ಬ್ರಿಟಿಷರ ಕಾಲದಲ್ಲಿ ಬಂದೂಕುಗಳು ಹಾಗೂ ಸಿಡಿಗುಂಡುಗಳ ಉತ್ಪಾದನೆಗಾಗಿ ಶಸ್ತ್ರಾಸ್ತ್ರ ಕಾರ್ಖಾನೆಗಳು ಸ್ಥಾಪನೆಯಾಗಿದ್ದವು. ಈಗ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯೆಡೆಗೆ ಹೆಜ್ಜೆ ಹಾಕುತ್ತಿರುವ ಭಾರತದ ರಕ್ಷಣಾ ಕ್ಷೇತ್ರವು , ಇದೀಗ ಮಿಲಿಟರಿ ಸರಕು ಮತ್ತು ಸೇವೆಗಳಲ್ಲಿ 2025ರೊಳಗೆ ರೂಪಾಯಿ 1,70,000 ವಹಿವಾಟು ನಡೆಸುವ ಗುರಿಯನ್ನು ಸಾಧಿಸುವ ಮಹತ್ವದ ಕರಡು ನೀತಿಯನ್ನು ರಕ್ಷಣಾ ಸಚಿವಾಲಯ ಸಿದ್ದಪಡಿಸಿದೆ.

ಹೌದು… ಮೇಕ್ ಇನ್ ಇಂಡಿಯಾ ಯೋಜನೆಯ ಯಶಸ್ವಿಗಾಗಿ ಅದೇ ರೀತಿ ಭಾರತದಲ್ಲೇ ರಕ್ಷಣಾ ಶಸ್ತ್ರಾಸ್ತ್ರ ಗಳ ಉತ್ಪಾದನೆಯ ಮಹತ್ವಾಕಾಂಕ್ಷಿ ಉದ್ದೇಶದಿಂದ ನಾನಾ ನಿರ್ಧಾರಗಳನ್ನು ಕೈಗೆತ್ತಿಕೊಂಡಿರುವ ಕೇಂದ್ರ ಸರ್ಕಾರ ಈಗಾಗಲೇ ಇಂಡೋ – ಫ್ರಾನ್ಸ್ ಒಪ್ಪಂದದ ವೇಳೆ ರಕ್ಷಣೆ, ಭದ್ರತಾ ವಿಷಯಗಳಲ್ಲಿ ಉಭಯ ದೇಶಗಳ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯಡಿ ರಕ್ಷಣಾ ವಲಯದಲ್ಲಿ ಹೂಡಿಕೆ ಮಾಡುವಂತೆ ಫ್ರಾನ್ಸ್ ಗೆ ಆಹ್ವಾನ ನೀಡಲಾಗಿರುವ ವಿಚಾರವನ್ನು ಸ್ವತಃ ನರೇಂದ್ರ ಮೋದಿಯವರು ಈ ಹಿಂದೆ ತಿಳಿಸಿದ್ದರು.

ಆದರೆ ಇತ್ತೀಚೆಗಷ್ಟೇ ರಕ್ಷಣಾ ಪಡೆಗಳ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡಿರುವ ಕೇಂದ್ರ ಸರಕಾರ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ 83 ತೇಜಸ್
ವಿಮಾನಗಳ ಖರೀದಿಗೆ ಗ್ರೀನ್ ಸಿಗ್ನಲ್ ನೀಡಿದೆ. ಅಷ್ಟೇ ಅಲ್ಲದೇ ಭಾರತೀಯ ವಾಯುಪಡೆ 50,025 ಕೋಟಿ ರೂಪಾಯಿ ವೆಚ್ಚದಲ್ಲಿ ಯುದ್ಧವಿಮಾನಗಳ ಖರೀದಿಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್) ಕಂಪನಿಗೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು!! ಹಾಗಾಗಿ ವಾಯುಪಡೆ ಈಗಾಗಲೇ ಎಚ್ ಎ ಎಲ್ ನಿಂದ 40 ತೇಜಸ್ ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿತ್ತು!! ಆದರೆ ಇದೀಗ 2025ರೊಳಗೆ ರೂಪಾಯಿ 1,70,000 ವಹಿವಾಟು ನಡೆಸುವ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಮಿಲಿಟರಿ ಸರಕು ಮತ್ತು ಸೇವೆಗಳಲ್ಲಿ ಮಹತ್ವದ ತೀರ್ಮಾನವನ್ನು ಕೈಗೊಳ್ಳಲು ರಕ್ಷಣಾ ಸಚಿವಾಲಯ ಕರಡು ನೀತಿಯನ್ನು ಸಿದ್ದಪಡಿಸಿದೆ.

ಸಾರ್ವಜನಿಕ ಮತ್ತು ಖಾಸಗಿ ವಲಯದ ಸಕ್ರೀಯ ಭಾಗವಹಿಸುವಿಕೆಯ ಮೂಲಕ ಭಾರತವನ್ನು ರಕ್ಷಣಾ ವಲಯದ ಟಾಪ್ 5 ಉತ್ಪಾದಕರಲ್ಲಿ ಒಂದನ್ನಾಗಿಸುವ ಮಹತ್ವದ ಗುರಿಯನ್ನು ಈ ನೀತಿ ಒಳಗೊಂಡಿರುವುದೇ ಹೆಮ್ಮೆಯ ವಿಚಾರವಾಗಿದೆ. 2025ರೊಳಗೆ ರೂಪಾಯಿ 1,70,000 ವಹಿವಾಟು ನಡೆಸುವ ಗುರಿಯನ್ನು ಸಾಧಿಸುವ ಮಹತ್ವದ ಗುರಿಯನ್ನು ಇಟ್ಟುಕೊಂಡಿದ್ದಲ್ಲದೇ ಇದರಿಂದಾಗಿ 2 ರಿಂದ 3 ಮಿಲಿಯನ್ ಭಾರತೀಯರಿಗೆ ಉದ್ಯೋಗ ಕಲ್ಪಿಸಿಕೊಡಲು ಮುಂದಾಗಿರುವುದೇ ಹೆಮ್ಮೆಯ ವಿಚಾರ!! ಈ ನಿಟ್ಟಿನಲ್ಲಿ ರಕ್ಷಣಾ ಸಚಿವಾಲಯದ ಕರಡು ನೀತಿಯ ಬಗ್ಗೆ ಅಬಿಪ್ರಾಯ ಗಳನ್ನು ತಿಳಿಸುವಂತೆ ತಜ್ಞರಿಗೆ, ಷೇರುದಾರರಿಗೆ ತಿಳಿಸಲಾಗಿದೆ ಎನ್ನುವ ವಿಚಾರವೂ ತಿಳಿದು ಬಂದಿದೆ.

ಹಾಗಾಗಿ ದೇಶೀಯ ರಕ್ಷಣಾ ಇಂಡಸ್ಟ್ರೀಗಳನ್ನು ಉತ್ತೇಜಿಸುವ ಮೂಲಕ 2025ರ ವೇಳೆಗೆ ರೂಪಾಯಿ 35000 ಕೋಟಿ ಮಿಲಿಟರಿ ಪರಿಕರ ಮತ್ತು ಸೇವೆಗಳನ್ನು ರಫ್ತು ಮಾಡುವುದು ಈ ನೀತಿಯ ಪ್ರಮುಖ ಉದ್ದೇಶವಾಗಿದೆ. ಆದರೆ 2000ನೇ ಇಸವಿವರೆಗೆ ನಮ್ಮ ಬಹುತೇಕ ಪ್ರಮುಖ ರಕ್ಷಣಾ ಸಾಧನಗಳು ಹಾಗೂ ಶಸ್ತ್ರಾಸ್ತ್ರ ವ್ಯವಸ್ಥೆಗಳು ಆಮದಾಗುತ್ತಿದ್ದವು ಅಥವಾ ದೇಶದಲ್ಲಿನ ಶಸ್ತ್ರಾಸ್ತ್ರ ಕಾರ್ಖಾನೆಗಳಲ್ಲಿ ಅಥವಾ ಸಾರ್ವಜನಿಕ ವಲಯದ ರಕ್ಷಣಾ ಉದ್ದಿಮೆಗಳಲ್ಲಿ ಪರವಾನಗಿ ಉತ್ಪಾದನೆಯಡಿ ತಯಾರಾಗುತ್ತಿದ್ದವು.

ಅಷ್ಟೇ ಅಲ್ಲದೇ ದೇಶದ ಏಕೈಕ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ಈ ವಲಯದಲ್ಲಿ ತಂತ್ರಜ್ಞಾನ ಅಭಿವೃದ್ಧಿಗೆ ಸಕ್ರಿಯ ಕೊಡುಗೆ ನೀಡಿದ್ದಲ್ಲದೆ, ದೇಶಿ ಉತ್ಪಾದನೆಯ ಪ್ರಯತ್ನಗಳಿಗೆ ಪೂರಕವಾಗಿ ಸಾಕಷ್ಟು ಬೆಂಬಲ ನೀಡಿತ್ತು!! ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಉತ್ಪಾದನೆಯಲ್ಲಿ ಡಿಆರ್ ಡಿಒ ಮತ್ತು ಸಾರ್ವಜನಿಕ ವಲಯದ ರಕ್ಷಣಾ ಉದ್ದಿಮೆಗಳ ಪ್ರಯತ್ನಗಳ ಫಲವಾಗಿ ದೇಶ ಬಹುತೇಕ ಎಲ್ಲ ಬಗೆಯ ರಕ್ಷಣಾ ಸಾಧನಗಳು ಹಾಗೂ ವ್ಯವಸ್ಥೆಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದುವಂತಾಯಿತು.

ಇಂದು ಸ್ಥೂಲ ವಿಶ್ಲೇಷಣೆಯ ಪ್ರಕಾರ, ನಮ್ಮ ಒಟ್ಟಾರೆ ರಕ್ಷಣಾ ಖರೀದಿಯಲ್ಲಿ ಶೇಕಡ 40 ಭಾಗ ದೇಶಿ ಉತ್ಪಾದನೆಯಾಗಿದೆ. ಕೆಲವೊಂದು ಪ್ರಮುಖ ವಲಯಗಳಲ್ಲಿ ಗಮನಾರ್ಹ ಮಟ್ಟದಲ್ಲಿ ದೇಶಿ ಉತ್ಪಾದನೆ ಸಾಧ್ಯವಾಗಿದೆ. ಉದಾಹರಣೆಗೆ ಟಿ-90 ಟ್ಯಾಂಕ್ ಶೇಕಡ 74 ದೇಶೀಕರಣಗೊಂಡಿದೆ. ಇನ್ ಫೆಂಟ್ರಿ ಯುದ್ಧ ವಿಮಾನ(ಬಿಎಂಪಿ ಐಐ) ಶೇಕಡ 97, ಸುಖೋಯ್ 30 ಸಮರ ವಿಮಾನ ಶೇ.58 ಹಾಗೂ ಕೊಂಕುರ್ಸ್ ಕ್ಷಿಪಣಿ ಶೇ.90 ದೇಶೀಯವೆನಿಸಿವೆ.

ಪರವಾನಗಿ ಉತ್ಪಾದನೆಯಡಿ ರಕ್ಷಣಾ ಸಾಧನಗಳ ದೇಶೀಕರಣ ಮಾತ್ರವಲ್ಲದೆ ನಮ್ಮದೇ ಆದ ಸಂಶೋಧನೆ ಮತ್ತು ಅಭಿವೃದ್ಧಿಯ ಮೂಲಕ ಕೆಲವೊಂದು ಪ್ರಮುಖ ವ್ಯವಸ್ಥೆಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸುವಲ್ಲಿಯೂ ನಾವು ಯಶ ಕಂಡಿದ್ದೇವೆ. ಅವುಗಳಲ್ಲಿ ಆಕಾಶ್ ಕ್ಷಿಪಣಿ ವ್ಯವಸ್ಥೆ, ಸುಧಾರಿತ ಹಗುರ ಹೆಲಿಕಾಪ್ಟರ್?ಗಳು, ಲಘು ಸಮರ ವಿಮಾನಗಳು, ಪಿನಾಕ ರಾಕೆಟ್ ಗಳು, ವಿವಿಧ ಪ್ರಕಾರಗಳ ಸೆಂಟ್ರಲ್ ಅಕ್ವಿಸಿಶನ್ ರಾಡಾರ್ ಗಳು, ಶಸ್ತ್ರಾಸ್ತ್ರ ಪತ್ತೆಹಚ್ಚುವ ರಾಡಾರ್ ಗಳು, ಯುದ್ಧಭೂಮಿ ಕಣ್ಗಾವಲು ರಾಡಾರ್‍ಗಳು ಸೇರಿವೆ.

ಮೊದಲು ರಕ್ಷಣಾ ಸಾಮಗ್ರಿಗಳ ಖರೀದಿದಾರ ಮಾತ್ರವಾಗಿದ್ದ ಭಾರತ, ಇಂದು ಪ್ರಮುಖ ಉತ್ಪಾದಕ ರಾಷ್ಟ್ರವಾಗಿದೆ. ಮುಂದಿನ ದಿನಗಳಲ್ಲಿ ವಿಶ್ವದ ಅನೇಕ ರಾಷ್ಟ್ರಗಳಿಗೆ ಭಾರತ ರಕ್ಷಣಾ ಸಾಮಗ್ರಿಗಳ ಪೂರೈಕೆ ಮಾಡುವ ಸಾಮರ್ಥ್ಯ ಹೊಂದಲಿದೆಯಲ್ಲದೇ ದೇಶದ ರಕ್ಷಣೆಗೆ ನಮ್ಮ ಸಾರ್ವಜನಿಕ ಉದ್ದಿಮೆಗಳ ಕೊಡುಗೆ ಸ್ಮರಣಾರ್ಹವಾಗಿದೆ. ರಕ್ಷಣಾ ವಲಯದ ಸಾರ್ವಜನಿಕ ವಲಯ ಘಟಕವಾದ ಹೆಚ್ ಎ ಎಲ್ ದೇಶೀಯವಾಗಿ ಮೊದಲ ಬಾರಿಗೆ ಮೇಲ್ದರ್ಜೆಗೇರಿಸಿದ ಯುದ್ಧ ವಿಮಾನ, ಅನ್ನೋ ಖ್ಯಾತಿಗೂ ಒಳಗಾಗಿದೆ ಎನ್ನುವುದೇ ಹೆಮ್ಮೆಯ ವಿಚಾರವಾಗಿದೆ.

ಒಟ್ಟಿನಲ್ಲಿ ಮಿಲಿಟರಿ ಸರಕು ಮತ್ತು ಸೇವೆಗಳಲ್ಲಿ 2025ರೊಳಗೆ 1,70,000 ರೂಪಾಯಿ ವಹಿವಾಟು ನಡೆಸುವ ಗುರಿಯನ್ನು ಸಾಧಿಸುವ ಮಹತ್ವದ ಕರಡು ನೀತಿಯನ್ನು ರಕ್ಷಣಾ ಸಚಿವಾಲಯ ಸಿದ್ದಪಡಿಸಿದ್ದು, ಈ ಮೂಲಕ ದೇಶೀಯ ರಕ್ಷಣಾ ಇಂಡಸ್ಟ್ರೀಗಳನ್ನು ಉತ್ತೇಜಿಸುವ ಮೂಲಕ ದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಮಹತ್ತರವಾದ ಕಾರ್ಯವನ್ನು ಕೈಗೊಂಡಿದೆ ಎಂದರೆ ಇದಕ್ಕಿಂತಲೂ ದೊಡ್ಡ ಹೆಮ್ಮೆಯ ವಿಚಾರ ಮತ್ತೊಂದಿಲ್ಲ!!

source:https://economictimes.indiatimes.com/news/defence/government-releases-draft-policy-on-defence-production/articleshow/63432107.cms

– ಅಲೋಖಾ

Tags

Related Articles

Close