ಇತಿಹಾಸ

21 ಸಿಖ್ಖರು 10000 ಅಫ್ಘನ್ನರ ವಿರುದ್ಧ ವಿರುದ್ಧ ಖಡ್ಗ ಝಳಪಿಸಿದ್ದರು! ಪ್ರಪಂಚದ ಅತ್ಯಂತ ಮಾರಣಾಂತಿಕ ಸಾರಾಗರ್ಹಿಯ ಯುದ್ಧವೊಂದು ಸಿಖ್ಖರ ಇತಿಹಾಸವನ್ನೇ ಬರೆದಿದ್ದು ಹೇಗೆ ಗೊತ್ತೇ?!

ಭಾರತದಲ್ಲಿ ಗಂಡುಗಲಿಗಳಿಗೆ ಯಾವತ್ತೂ ಕೊರತೆಯಾಗಿಲ್ಲ ಬಿಡಿ! ದಾಳಿ ಮಾಡಿದ ಪ್ರತೀ ಪರಕೀಯನೂ ಸಹ, ದಾಳಿ ಮಾಡುವ ಮುನ್ನ ಒಮ್ಮೆ ಯೋಚಿಸಿಯೇ ಕಾಲಿಟ್ಟಿದ್ದಾನೆ ಭಾರತಕ್ಕೆ! ಬೇಕಾದರೆ ನೋಡಿ! ಜಗತ್ತಿನ ಬೇರಾವ ಭಾಗದಲ್ಲಿಯೂ ಸಹ ಭಾರತದಲ್ಲಿದ್ದಂತಹಷ್ಟು ಅದಮ್ಯ ಯೋಧರು ಇರಲಿಕ್ಕಿಲ್ಲ! ತಾಯಿ ಭಾರತಿಯ ಉಸಿರು ತಾಕಿ ಜನಿಸಿದವರೆಲ್ಲ ತಮ್ಮ ತಾ ಕರೆಸಿಕೊಂಡಿದ್ದು ವೀರಕಲಿಗಳೆಂದೇ!

ಭಾರತ ಜಗದ್ಗುರುವಾಗಿದ್ದದ್ದು ಸುಖಾ ಸುಮ್ಮನೆ ಅಲ್ಲ! ಬದಲಾಗಿ, ಭಾರತೀಯರೆನ್ನಿಸಿಕೊಂಡಿದ್ದವರ ಅದೆಷ್ಟೋ ರಕ್ತ ಸುರಿದಿದೆ! ತಾಯ್ನಾಡನ್ನು ರಕ್ಷಿಸುವ ಸಲುವಾಗಿ ತಮ್ಮ ಬದುಕನ್ನೇ ಅರ್ಪಿಸಿಕೊಂಡ ಅದೆಷ್ಟೋ ಜನರ ನೆತ್ತರಿನಿಂದಷ್ಟೇ ಭಾರತ ತಲೆ ಎತ್ತಿ ನಿಲ್ಲಲು ಸಾಧ್ಯವಾಗಿದ್ದಷ್ಟೆ! ಅದರಲ್ಲೂ, ಅದೆಷ್ಡು ತೆರನಾದ ಯುದ್ಧಗಳು ನಡೆದಿಲ್ಲ ಹೇಳಿ?!

ಅದರಲ್ಲೂ, ಕೆಲವು ಯುದ್ಧಗಳು ಮಾತ್ರ ತೀರಾ ಎನ್ನುವಷ್ಟು ವಿರೋಚಿತವಾಗಿಉರುವಂತಹದ್ದು! ಈ ಯುದ್ಧವೊಂದು ಭಾರತದಲ್ಲಿ ನಡೆದ ಎಲ್ಲಾ ಯುದ್ಧಗಳಿಗಿಂತ ತೀರಾ ಎನ್ನುವಷ್ಟು ಭಿನ್ನ ಮತ್ತು ಸರಿ ಸಮನಾದದ್ದು ಯಾವ ಯುದ್ಧವೂ ನಡೆದಿಲ್ಲ ಎಂದೇ ಹೇಳಲಾಗುವಾಗ, ಯೆಸ್! ನಿಮಗೆ ಈ ಯುದ್ಧವೊಂದರ ಅರಿವಾಗಲೇ ಬೇಕು!

ಅವತ್ತು, ಸೆಪ್ಟೆಂಬರ್ ೧೨, ೧೮೯೭!! ಇವತ್ತಿಗೆ ೧೧೯ ವರ್ಷಗಳ ಹಿಂದೆ, ಕೇವಲ ೨೧ ಸಿಖ್ಖರು ಬರೋಬ್ಬರಿ ೧೦೦೦೦ ಅಫ್ಘನ್ನರ ವಿರುದ್ಧ ತಿರುಗಿ ಬಿದ್ದಿದ್ದರು! ಸಣ್ಣ ಸಂಖ್ಯೆಯಲ್ಲಿದ್ದರೂ ತಾಯ್ನಾಡಿನ ಉಳಿವಿಗೆ ಹೋರಾಡಲೇಬೇಕಾದ ಅನಿವಾರ್ಯತೆ ಅವತ್ತು ಅವರೆದುರಿಗಿತ್ತು! ಅದು, ಸಾರಾಗಾರ್ಹಿಯ ಯುದ್ಧ!!

ಬ್ರಿಟಿಷ್ ಇಂಡಿಯಾದ ಸಿಖ್ ರೆಜಿಮೆಂಟಿನ ನಾಲ್ಕನೇ ಬೆಟಾಲಿಯನ್ ಎಂದು ಕರೆಯಲ್ಪಡುತ್ತಿದ್ದ ೩೬ ನೇ ಸಿಖ್ ಬ್ರಿಟಿಷ್ ಇಂಡಿಯನ್ ಕಾಂಟಿಜೆಂಟ್ ನ ೨೧ ಸಿಖ್ಖರು ಅವತ್ತು ಪ್ರಸ್ತು ಪಾಕಿಸ್ಥಾನದ ಭಾಗವಾಗಿರುವ ಸಮನಾ ರೇಂಜ್ ನ ಕೊಹತ್ ಜಿಲ್ಲೆಯ ಸಾರಾಗಾರ್ಹಿ ಎಂಬ ಹಳ್ಳಿಯ ಗಡಿ ಭಾಗದಲ್ಲಿ ಕತ್ತಿ ಹಿರಿದು ನಿಂತಾಗ ಬೆಳಗ್ಗೆ ೯ ಗಂಟೆ!! ಅವತ್ತು ೧೦೦೦೦ ಅಫ್ಘನ್ನರು ಮತ್ತು ಓರಾಕ್ಝಾಯ್ ಬುಡಕಟ್ಟು ಜನಾಂಗದವರು ನಾರ್ತ್ ವೆಸ್ಟ್ ಫ್ರಂಟಿಯರ್ ಪ್ರಾವಿನ್ಸ್ ನ ಬಳಿ ಒಟ್ಟುಗೂಡಿದ್ದರು!!

ಗುರು ಮುಖ್ ಸಿಂಗ್ ಅಫ್ಘನ್ನರ ಚಲನವಲನಗಳನ್ನು ನೋಡುತ್ತ ನಿಂತಿದ್ದರು! ಅಲ್ಲೇ ಹತ್ತಿರದಲ್ಲಿದ್ದ ಫೋರ್ಟ್ ಲಾಕಾರ್ಟ್ ಗೆ ಹೀಲಿಯೋಗ್ರಾಫ್ ಮುಖಾಂತರ ಸಂದೇಶಗಳನ್ನು ನೀಡತೊಡಗಿದ್ದರು! ಅಲ್ಲೇ, ಮೈಲುಗಳಷ್ಟು ದೂರದಲ್ಲಿದ್ದ ಸಾರಾಗರ್ಹಿಯಲ್ಲಿ ೨೧ ಸಿಖ್ಖರು ಕಾಯುತ್ತ ಕುಳಿಯತಿದ್ದರು! ಯಾವಾಗ, ಗುರುಮುಖ್ ಸಿಂಗ್ ರು, ಬೃಹತ್ತಾದ ಮೊಘಲ್ ಸೈನ್ಯವೊಂದನ್ನು ಕಂಡರೋ, ತಕ್ಷಣವೇ ಕಾಲೋನೆಲ್ ಹಾಫ್ಟನ್ ಗೆ ತಕ್ಷಣವೇ ಸಂದೇಶ ಕಳುಹಿಸಿದರು! ಆದರೆ, ಕಾಲೋನೆಲ್ ತಕ್ಷಣ ಸಹಾಯವನ್ನು ಒದಗಿಸುವುದು ಸಾಧ್ಯವೇ ಇಲ್ಲ ಎಂದರು! ಕಾರಣವಿಷ್ಟೇ!! ವಿರೋಧಿಗಳು ತಮಗಿಂತ ಜಾಸ್ತಿ ಸಂಖ್ಯೆಯಲ್ಲಿರುವ ಕಾರಣ ಸಹಾಯ ಕಷ್ಟ ಎಂಬುದಷ್ಟೇ!! ಗುರುಮುಖ್ ಸಿಂಗ್ ಅಷ್ಟಕ್ಕೇ ಬಿಡಲಿಲ್ಲ! ತಾವು ಬ್ರಿಟಿಷ್ ರಾಜ್ ರಿಂದ ಯಾವುದೇ ತೆರನಾದ ಸಹಾಯ ಸಿಗುತ್ತಿಲ್ಲಕವೆಂದ ಗುರುಮುಖ್ ರ ಸಂದೇಶ ತಲುಪುತ್ತಿದ್ದಂತೆ, ಅತ್ತ ೨೧ ಸಿಖ್ಖರು ತಮ್ಮ ಶೌರ್ಯ ತೋರಲು ಸಿದ್ಧರಾಗಿದ್ದರು!

ಇತಿಹಾಸ ಹೇಳುವ ಪ್ರಕಾರ, ಗುರುಮುಖ್ ಸಿಂಗ್ ತಮ್ಮ ಸಿಖ್ಖರಿಗೆ ಸಾರಾಗರ್ಹಿ ಪ್ರದೇಶವನ್ನು ಬಿಟ್ಟು ತೆರಳಲು ಅವಕಾಶವಿದೆ ಎಂದಾಗ, ೨೧ ಸಿಖ್ಖರು ಪ್ರತ್ಯುತ್ತರಿಸಿದ್ಧರು!!

“ಇದು ವಾಹಿ ಗುರುವಿನ ನಾಡು! ಈ ನಾಡು ಅದೆಷ್ಟೋ ಯೋಧರಿಗೆ ಜನ್ಮ ನೀಡಿದೆ! ಅಕಸ್ಮಾತ್, ಇವತ್ತು ಹೇಡಿಗಳಂತೆ ನಾವು ನಮ್ಮ ನಾಡನ್ನು ಬಿಟ್ಟು ಹೋದರೆ, ನಮ್ಮ ಪೂರ್ವಜರ ಬದುಕಿಗೆ ನಾವು ಮಾಡಿದ ಅತಿ ದೊಡ್ಡ ದ್ರೋಹವಾಗುತ್ತದೆ! ಆದ್ದರಿಂದ, ನಾವು ಇಲ್ಲಿಯೇ ಉಳಿಯಬೇಕು! ಕಟ್ಟ ಕಡೆಯ ಶತ್ರುವಿನ ರುಂಡ ಕತ್ತರಿಸಿ ಬೀಳುವವರೆಗೂ ನಾವು ಹೋರಾಡುತ್ತೇವೆ! ಅದು ನಮಗೆ ಗೌರವ ಮತ್ತು ಘನತೆಯನ್ನು ತರುತ್ತದೆ!”

ವ್ಹಾ!! ಎಂದರು ಗುರುಮುಖ್ ಸಿಂಗ್! ಸಂದೇಶಗಳ ಮೂಲಕ ಆ ೨೧ ಸಿಖ್ಖರಿಗೆ ರಣಕಹಳೆಯ ದೀಕ್ಷೆಯನ್ನು ನೀಡಿದರು! ಇತಿಹಾಸ ಕಂಡು ಕೇಳರಿಯದ ಹಾಗೆ ಅದಮ್ಯವಾಗಿ ಹೋರಾಡಿ ಎಂದಬ್ಬರಿಸಿದ ಗುರುಮುಖ್ ಸಿಂಗ್, ಅವತ್ತು ಹೇಳಿದ್ದರು!

“ನೀವು ಹೇಳಿದ ಹಾಗೆ, ನಮ್ಮ ತಾಯ್ನಾಡಿನ ಋಣ ತೀರಿಸಲು ಇವತ್ತು ನಮಗಿದು ಅದ್ಭುತ ಅವಕಾಶ!”

ಅಷ್ಟೇ!! ಯುದ್ಧ ಪ್ರಾರಂಭವಾಗಿತ್ತು! ಕೆಲ ನಿಮಿಷಗಳಲ್ಲಿ, ನಿಪುಣ ಯೋಧರಾದ ಭಗವಾನ್ ಸಿಂಗ್ ರ ಪ್ರಾಣ ಹರಣವಾಗಿತ್ತು! ಇನ್ನೊಬ್ಬ ಯೋಧರಾದ ಲಾಲ್ ಸಿಂಗ್ ಗಂಭೀರವಾಗಿ ಗಾಯಗೊಂಡರು! ಉಳಿದ ಸಿಖ್ಖರು ಆ ಇಬ್ಬರೂ ಯೋಧರನ್ನು ಬೇರೆಡೆಗೆ ಕಳುಹಿಸುವಲ್ಲಿ ನಿರತರಾದಾಗ, ಇತ್ತ ಶತ್ರುಗಳು ಕೋಟೆಯನ್ನು ಕಾಯುತ್ತಿದ್ದ ಒಂದು ಭಾಗದ ಗೋಡೆಯ ಭಾಗವನ್ನು ಮುರಿದು ಒಳ ನುಗ್ಗಿದ್ದರು! ಕಾಲೋನೆಲ್ ಹಾಫ್ಟನ್ ರ ಅಂದಾಜಿನ ಪ್ರಕಾರ, ೧೦೦೦ ದಿಂದ ೧೪೦೦೦ ಪಶ್ತೂನ್ ಗಳು ಸಾರಾಗರ್ಹಿ ಮೇಲೆ ದಾಳಿ ಮಾಡಿದ್ದರು! ಯುದ್ಧವು ಮುಂದುವರೆದಂತೆ, ಕೇವಲ ಆ ೨೧ ಸಿಖ್ಳರು ಪ್ರತಿರೋಧವನ್ನು ಒಡ್ಡುತ್ತಲೇ ಹೋದರೂ, ಮತ್ತೊಂದು ಭಾಗದ ಗೋಡೆಯನ್ನೂ ಕೆಡವಲಾಯಿತು! ಒಳ ನುಗ್ಗಿದ ಶತ್ರು ಸೈನಿಕರ ತಲೆ ಉರುಳ ತೊಡಗಿತ್ತು! ಯಾರದೇ ಸಹಾಯವಿಲ್ಲದೇ, ಯುದ್ಧದಲ್ಲಿ ಹೋರಾಡುವ ಧೈರ್ಯ ತೋರಿದ ಸಿಖ್ಖ್ ಯೋಧರ ಮನದಲ್ಲಿ ಮೊಳಗುತ್ತಿದ್ದ ರಣಕಹಳೆಯೊಂದೇ! “ವಾಹೇ ಗುರೂಜಿ ಕಾ ಖಾಲ್ಸಾ! ವಾಹೇ ಗುರೂಜಿ ಕಿ ಫತೇ!”

ಯುದ್ಧದ ಸಾರಥ್ಯ ವಹಿಸಿದ ಇಶಾರ್ ಸಿಂಗ್ ಒಂದಷ್ಟು ಸಿಖ್ಖರನ್ನು ಹಿಂದೆ ಸರಿಯುವಂತೆ ಸೂಚಿಸಿದ್ದಲ್ಲದೇ, ಮತ್ತೊಂದಿಷ್ಟು ಸಿಖ್ಖರನ್ನು ಯುದ್ಧದಲ್ಲಿ ಮುನ್ನುಗ್ಗಿಸಿದರು! ಯಾವಾಗ, ಇಶಾರ್ ಸಿಂಗ್ ರ ಯುದ್ಧ ತಂತ್ರ ಬದಲಾಯಿತೋ, ಶತ್ರು ಪಾಳಯದ ಎದುರಿಗೆ ಹೋರಾಡುತ್ತಿದ್ದ ಸಿಖ್ಖರ ಕತ್ತಿಯ ಝಳಪಿಗೆ ಶತ್ರು ಗಳು ನೆಲ ಕಚ್ಚತೊಡಗಿದ್ದರು! ಅಲ್ಲಿದ್ದ ಪ್ರತೀ ಸಿಖ್ಖನಿಗೂ ಗೊತ್ತಿತ್ತು! ತಾವು ಈ ಯುದ್ಧ ಗೆಲ್ಲಲು ಸಾಧ್ಯವಿಲ್ಲ ಎಂಬುದು! ಅಲ್ಲಿದ್ದ ಪ್ರತಿಯೊಬ್ಬ ಸಿಖ್ಖನಿಗೂ ತಿಳಿದಿತ್ತು! ತಾವಿವತ್ತು ಹುತಾತ್ಮರ ಪಟ್ಟಕ್ಕೆ ಅರ್ಹರಾಗಲಿದ್ದೇವೆ ಎಂದು! ತಲೆ ಉಳಿದಷ್ಟು ಹೊತ್ತೂ ಕತ್ತಿ ಝಳಪಿಸಬೇಕು! ಶತ್ರುಗಳ ತರಿಯಬೇಕು! ತಾಯ್ನಾಡು ಪಾವನವಾಗಬೇಕು! ಅದೊಂದೇ ಇದ್ದದ್ದು ಧ್ಯೇಯ! ಅಷ್ಟೇ ನೋಡಿ! ನೂರಾರು ವರ್ಷಗಳ ನಂತರವೂ ಸಹ ಅಮರರಾಗಿಯೇ ಉಳಿದು ಹೋದರು!

ಅದಷ್ಟೂ ಸಿಖ್ಖರ ನಂತರ ಉಳಿದವರು ಗುರುಮುಖ್ ಸಿಂಗ್!! ಪುಶ್ತುನ್ ಗಳು ಅವರಿದ್ದ ಪೂರ್ತಿ ಪ್ರದೇಶವನ್ನೇ ಅಗ್ನಿಗೆ ಸಮರ್ಪಿಸಿದ್ದರು! ಗುರುಮುಖ್ ಸಿಂಗ್ ಬೆಂಕಿಯುರಿಯಲ್ಲಿ ಬೆಂದು ಹುತಾತ್ಮರಾಗುವ ಮುನ್ನ ೨೦ ಕ್ಕೂ ಹೆಚ್ಚು ಪುಶ್ತುನ್ ಗಳನ್ನು ತರಿದಿದ್ದರು! ಡೇರೆಗಿಟಗ್ಟಿದ್ದ ಬೆಂಕಿ ಹತ್ತಿ ಉರಿಯತೊಡಗಿದಂತೆ, ಒಂದೇ ಸ್ವರ ಕೇಳಿ ಬಂದಿತ್ತು! “ಬೋಲೇ ಸೋ ನಿಹಾಲ್! ಸತ್ ಶ್ರೀ ಅಕಾಲ್!”

ಗುರುಮುಖ್ ರು ಹತರಾದ ನಂತರ, ಸಾರಾಗರ್ಹಿಯನ್ನು ನಾಶ ಮಾಡಲಾಯಿತು! ತದನಂತರ ಗುಲಿಸ್ತಾನದ ಕೋಟೆಯ ಮೇಲೆ ಕಣ್ಣು ಹಾಕಿದರು! ಆದರೆ, ಅವರಿಗಲ್ಲಿ ಅರ್ಥವಾಗಿದ್ದೊಂದೇ! ಈ ೨೧ ಯೋಧರ ಹೋರಾಟವೊಂದು ಅವರ ಅದೆಷ್ಡೋ ಸೈನಿಕರನ್ನು ತರಿದು ಹಾಕಿತ್ತು! ಅದಲ್ಲದೇ, ಗುಲಿಸ್ತಾನದ ಕೋಟೆಯಲ್ಲಿ ಅಫ್ಘನ್ನರ ಸೈನಿಕರಿಗೋಸ್ಕರ ಕಾಯುತ್ತ ಕುಳಿತಿತ್ತು ಮೃತ್ಯು! ಯಾವಾಗ, ಗುಲಿಸ್ಥಾನದ ಕೋಟೆ ಹತ್ತಿರದ ಸಹಾಯ ಪಡೆದುಕೊಂಡು ಶಸ್ತ್ರ ಸಜ್ಜಿತವಾಗಿ ಕುಳಿತಿತೋ, ಇತ್ತ ಅಫ್ಘನ್ನರು ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಓಡತೊಡಗಿದ್ದರು!

ಪಶ್ತುನ್ ಗಳು ಸರಾಸರಿ ೧೮೦ ಯೋಧರನ್ನು ಕಳೆದುಕೊಂಡಿದ್ದರು! ೨೧ ಸಿಖ್ಖ ಸೈನಿಕರಲ್ಲಿ ಅಕಸ್ಮಾತ್ ೫೦ ಸೈನಿಕರಿದ್ದಿದ್ದರೆ, ಇಡೀ ಬುಡಕಟ್ಟು ಜನಾಂಗದ ಸೈನಿಕರ ನಾಶವಾಗುತ್ತಿತ್ತು ಎಂದು ಪಶ್ತುನ್ ಗಳು ಒಪ್ಪಿಕೊಂಡರು! ಸುತ್ತ ಮುತ್ತ, ೬೦೦ ಸತ್ತ ಹೆಣಗಳು ಬಿದ್ದಿದ್ದವು! ಅದಾಗ್ಯೂ, ಸೆಪ್ಟೆಂಬರ್ ೧೪ ರಂದು ಫಿರಂಗಿದಳದವರ ಸಹಾಯ ಪಡೆದು ಕೋಟೆಯನ್ನು ಮರು-ವಶ ಪಡಿಸಿಕೊಂಡರು ಗುಲಿಸ್ತಾನದ ಕಲಿಗಳು! ಸಂಪೂರ್ಣ ಸಾರಾಗರ್ಹಿ ಯುದ್ಧದಲ್ಲಿ ಹತರಾದವರ ಸಂಖ್ಯೆ ೪೮೦೦ ಎಂದರೆ ಊಹಿಸಿ! ತಮ್ಮ ತಾಯ್ನಾಡಿನ ಮೇಲಿದ್ದ ಆ ಸಾರಾಗಾರ್ಹಿಗಳ ಅಭಿಮಾನ! ಪ್ರೀತಿ!

ಸಾರಾಗರ್ಹಿಯ ಕದನದಲ್ಲಿ ಹತರಾದ ೨೧ ಸಿಖ್ಖರಿಗೆ ಅವತ್ತಿನ ಬ್ರಿಟಿಷರಿಂದ ಅತ್ಯುನ್ನತ ಶೌರ್ಯ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಯಿತು! ಅದು , ಅವತ್ತು ಒಬ್ಬ ಭಾರತೀಯನು ಅಥವಾ ಬ್ರಿಟಿಷರನಲ್ಲದವನು ರಾಣಿ ವಿಕ್ಟೋರಿಯಾಳ ಅಡಿಯಲ್ಲಿ ನೀಡಲಾಗುತ್ತಿದ್ದ ಅತ್ಯುನ್ನತ ಪ್ರಶಸ್ತಿ! ಅದು, ಇವತ್ತಿನ ಭಾರತ ಸರಕಾರದ ಪರಮವೀರ ಚಕ್ರಕ್ಕೆ ಸಮನಾದ ಪ್ರಶಸ್ತಿ!

ಇವತ್ತಿನ ತನಕವೂ, ಆ ಯುದ್ಧವೊಂದು ಇತಿಹಾಸ ಕಂಡು ಕೇಳರಿಯದ ಅದ್ಭುತ ಯುದ್ಧ! ಇವತ್ತಿಗೂ, ಆ ೨೧ ಸಿಖ್ಖ್ ಸೈನಿಕರು ದಂತ ಕಥೆಗಳಾಗಿ ಉಳಿದಿದ್ದಾರೆ! ಅದಷ್ಟೂ ಸಿಖ್ಖರ ಜನ್ಮ ಸ್ಥಳ ಪಂಜಾಬ್ ನ ಮಝಾ ಪ್ರದೇಶ!

ಅತ್ಯುನ್ನತ ಶೌರ್ಯ ಪ್ರಶಸ್ತಿಯನ್ನು ಪಡೆದುಕೊಂಡಂತಹ ೨೧ ಸಿಖ್ಖರ ಹೆಸರು ಈ ಕೆಳಗಿನಂತಿದೆ!

ಹವಿಲ್ದಾರ್ ಇಶಾರ್ ಸಿಂಗ್ (ರೆಜಿಮೆಂಟ್ 165)
ನಾಯ್ಕ್ ಲಾಲ್ ಸಿಂಗ್ (332)
ನಾಯ್ಕ್ ಚಂದಾ ಸಿಂಗ್ (546)
ಲಾನ್ಸ್ ನಾಯಕ್ ಸುಂದರ್ ಸಿಂಗ್ (1321)
ಲಾನ್ಸ್ ನಾಯಕ್ ರಾಮ್ ಸಿಂಗ್ (287)
ಲಾನ್ಸ್ ನಾಯಕ್ ಉತ್ತರ್ ಸಿಂಗ್ (492)
ಲಾನ್ಸ್ ನಾಯಕ್ ಸಾಹಿಬ್ ಸಿಂಗ್ (182)
ಸಿಪಾಯ್ ಹೀರಾ ಸಿಂಗ್ (359)
ಸಿಪಾಯಿ ದಯಾ ಸಿಂಗ್ (687)
ಸಿಪಾಯಿ ಜೀವನ್ ಸಿಂಗ್ (760)
ಸಿಪಾಯಿ ಭೋಲಾ ಸಿಂಗ್ (791)
ಸಿಪಾಯಿ ನಾರಾಯಣ್ ಸಿಂಗ್ (834)
ಸಿಪಾಯಿ ಗುರುಮುಖ್ ಸಿಂಗ್ (814)
ಸಿಪಾಯ್ ಜೀವನ್ ಸಿಂಗ್ (871)
ಸಿಪಾಯಿ ಗುರುಮುಖ ಸಿಂಗ್ (1733)
ಸಿಪಾಯಿ ರಾಮ್ ಸಿಂಗ್ (163)
ಸಿಪಾಯಿ ಭಗವಾನ್ ಸಿಂಗ್ (1257)
ಸಿಪಾಯಿ ಭಗವಾನ್ ಸಿಂಗ್ (1265)
ಸಿಪಾಯಿ ಬತಾ ಸಿಂಗ್ (1556)
ಸಿಪಾಯಿ ಜೀವನ್ ಸಿಂಗ್ (1651)
ಸಿಪಾಯಿ ನಂದ ಸಿಂಗ್ (1221)


postcard team

Tags

Related Articles

Close