ಅಂಕಣಪ್ರಚಲಿತ

3016 ವಿದ್ಯಾರ್ಥಿಗಳ ಜತೆ ಸರಕಾರ ಚೆಲ್ಲಾಟವಾಡುತ್ತಿದ್ದಾರೂ ಮಾಧ್ಯಮದವರು ಮೌನವಾಗಿರೋದು ಯಾಕೆ? ನಮಗೆ ಸಹಾಯಹಸ್ತ ಚಾಚಿ. ಭಿಕ್ಷಾಂ ದೇಹಿ

ಭಾರತೀಯ ಸಂಸ್ಕೃತಿಯ ಪ್ರತಿಪಾದನೆ ಮಾಡುತ್ತಿರುವ, ಅಂತಹ ಶ್ರೇಷ್ಠ ತತ್ವವನ್ನು , ಉತ್ತಮ ಸಂಸ್ಕಾರವನ್ನು ತಮ್ಮ ಮಕ್ಕಳಿಗೆ ಉಣಬಡಿಸುತ್ತಿರುವ ಶಾಲೆ ಮಂಗಳೂರಿನ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರ. ಮಾನವೀಯ ಮೌಲ್ಯಗಳೊಂದಿಗೆ ವಿದ್ಯಾರ್ಥಿಗಳಲ್ಲಿ ದೈಹಿಕ, ಬೌದ್ಧಿಕ, ಹಾರ್ದಿಕ ಮತ್ತು ಆಧ್ಯಾತ್ಮಿಕ ಸಾಮರ್ಥ್ಯ ಬೆಳೆಸುವುದರೊಂದಿಗೆ ರಾಷ್ಟ್ರೀಯ ಚಿಂತನೆಯ ಸಂಸ್ಕಾರವನ್ನೂ ಈ ಶಾಲೆ ಸತತವಾಗಿ ನೀಡುತ್ತಾ ಬಂದಿದೆ. ನೂರಾರು ಯುವಕರಿಗೆ ಸ್ಫೂರ್ತಿಯ ತಾಣವಾಗಿ, ಸದಾ ಪ್ರೇರಣೆಯ ಸ್ಥಳವಾಗಿ ಪ್ರಸ್ತುತ ಕಲ್ಲಡ್ಕ ಶಾಲೆಯು ಬೆಳೆಯುತ್ತಿದೆ. ರಾಷ್ಟ್ರೀಯತೆಯ ಉಳಿವಿಗಾಗಿ ಸದಾ ಹೋರಾಟಕ್ಕಾಗಿ ಹಲವು ನಾಯಕರನ್ನು ತೊಡಗಿಸಿಕೊಳ್ಳಲು ಇವತ್ತು ಕಲ್ಲಡ್ಕ ಪ್ರೇರಣೆಯಾಗಿದೆ ಎಂದರೆ ತಪ್ಪಾಗಲಾರದು.

ಕಲ್ಲಡ್ಕದಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ರಾಷ್ಟ್ರೀಯ ಕಾರ್ಯದಲ್ಲಿ ತೊಡಗಿದ ಉದಾಹರಣೆಯನ್ನು ಕೊಡಬಹುದೇ ಹೊರತು ಅನೈತಿಕ ಚಟುವಟಿಕೆಯಲ್ಲಿ ತೊಡಗಿದವರನ್ನಲ್ಲ. ಅಂತಹ ಶಿಸ್ತನ್ನು ತಮ್ಮ ವಿದ್ಯಾರ್ಥಿಗಳಲ್ಲಿ ತುಂಬಲು ಕಲ್ಲಡ್ಕ ಶಾಲೆಯು ಸಫಲವಾಗಿದೆ ಎನ್ನಬಹುದು. ಶ್ರೀ ಕಲ್ಲಡ್ಕ ಪ್ರಭಾಕರ ಭಟ್ಟರ ನೇತೃತ್ವದಲ್ಲಿ ಶ್ರೀ ರಾಮ ವಿದ್ಯಾ ಕೇಂದ್ರವು ಉತ್ತಮ ಸಮಾಜಹಿತವಾದ ಕಾರ್ಯವನ್ನೇ ಮಾಡುತ್ತಿದೆ.

ಆದರೆ ಯಾವಾಗ ಉತ್ತಮ ಕಾರ್ಯವನ್ನು ಮಾಡಲು ಹೊರಡುತ್ತಾರೋ ಆಗಲೇ ವಿಘ್ನಗಳು ಬಂದೊದಗುತ್ತವೆ ಎನ್ನುವುದು ಪ್ರತೀಬಾರಿಯೂ ಸಾಬೀತಾಗುತ್ತಿವೆ. ಕಲ್ಲಡ್ಕ ಶಾಲೆಯು ಹಿಂದೂ ಚಿಂತನೆಯನ್ನು, ಸನಾತನ ಪರಂಪರೆಯನ್ನು ವಿದ್ಯಾರ್ಥಿಗಳಲ್ಲಿ ಬಿಂಬಿಸುವಂತ ಪ್ರಯತ್ನ ಮಾಡುತ್ತಾ ಇವೆ. ಆ ಮೂಲಕ ಅವರ ಸರ್ವಾಂಗೀಣ ಅಭಿವೃದ್ದಿಯ ಮೂಲ ಕರ್ತೃ ಅವರೇ ಆಗಿದ್ದಾರೆ.

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ನೇತೃತ್ವವನ್ನು ಕಲ್ಲಡ್ಕ ಪ್ರಭಾಕರ ಭಟ್ಟರು ವಹಿಸಿದ್ದಾರೆ. “ಮಕ್ಕಳ ರೂಪದಲ್ಲಿರುವ ನಮ್ಮನ್ನು ದೇವರೆತ್ತರಕ್ಕೆ ಏರಿಸಿಕೊಳ್ಳುವ ಪ್ರಕ್ರಿಯೆಯೇ ಶಿಕ್ಷಣ” ಅನ್ನವ ಮೂಲ ತತ್ವವನ್ನು ಬಲವಾಗಿ ಪ್ರತಿಪಾದಿಸಿ ಅದರಂತೆಯೇ ಶಿಕ್ಷಣ ಕೊಡಿಸುತ್ತಾ, ಇತರೆ ಸಾಮಾಜಿಕ ಕಾರ್ಯವನ್ನು ಮಾಡಿತ್ತಾ ತಮ್ಮ ಇಡೀ ಜೇವನವನ್ನು ಸಮಾಜದ ಹಿತಕ್ಕಾಗಿ ಮೀಸಲಿಟ್ಟವರು ಶ್ರೀ ಪ್ರಭಾಕರ ಭಟ್.

ನಮ್ಮ ರಾಜ್ಯದಲ್ಲಿ ಎಲ್ಲ ಇದ್ದು, ಆಳುವ ರಾಜ ಅಸಂಬದ್ಧವಾದ ಯೋಜನೆಗಳನ್ನು ತಂದು ಪ್ರಜೆಗಳಿಗೆ ಅದು ಮಾರಕವಾದರೆ ಏನು ಪ್ರಯೋಜನ? ನಿಜ ಅಲ್ಲವೇ? ಕಲ್ಲಡ್ಕ ಶಾಲೆಗೆ ಕೊಲ್ಲೂರು ಶ್ರೀ ಮೂಕಾಂಬಿಕ ದೇವಾಲಯದಿಂದ ಅನುದಾನವು ಬರುತ್ತಿತ್ತು. ಆ ಅನುದಾನವನ್ನು ಶಾಲೆಯು ಮಕ್ಕಳಿಗಾಗಿ ವ್ಯವಸ್ಥೆ ಮಾಡಲಾದ ಬಿಸಿಯೂಟಕ್ಕೆ ವಿನಿಯೋಗಿಸಲಾಗುತ್ತಿತ್ತು. ಅದನ್ನೂ ಈಗ ಸ್ಥಗಿತ ಮಾಡಿ ಆ ವ್ಯವಸ್ಥೆಗೆ ತಣ್ಣೀರೆರಚಿ ಸರ್ಕಾರ ಕೈ ತೊಳೆದುಕೊಳ್ಳಲು ಪ್ರಯತ್ನಿಸುತ್ತಿದೆ. ಕೇವಲ ವೈಷಮ್ಯಕ್ಕೆ ಇಂತಹ ಕಠಿಣ ನಿರ್ಧಾರವನ್ನು ತೆಗೆದು ಮಕ್ಕಳ ಭವಿಷ್ಯಕ್ಕೇ ಇವರು ಮಾರಕವಾಗಿ ಪರಿಣಮಿಸಿರುವುದು ಪ್ರಜಾಪ್ರಭುತ್ವಕ್ಕೇ ಮಾರಕವೆನ್ನಬಹುದು. ಈಗ ಸರ್ಕಾರವು ಅನುದಾನವನ್ನು ಹಿಂತೆಗೆದು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಇಂತಹ ಅನುದಾನರಹಿತ ಶಾಲೆಗಳಿಗೆ ಅನುದಾನ ಕೊಡುವುದಕ್ಕೆ ಅವಕಾಶವಿಲ್ಲವೆಂದು ಬೊಬ್ಬಿಡುತ್ತಿರುವುದು ನೋಡಿದರೆ ಸರಕಾರದ ಹೀನ ಮನಸ್ಥಿತಿಯನ್ನು ನಾವು ಅವಲೋಕಿಸಬಹುದು.

ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ :

1 . ಕರ್ನಾಟಕ ಸರಕಾರದ ಘನಮುಖ್ಯಮಂತ್ರಿಯವರಾದ ಸಿದ್ಧರಾಮಯ್ಯನವರು ಅಹಿಂದಕ್ಕಾಗಿ ಹೋರಾಟ, ಮೀಸಲಾತಿಯನ್ನು ಕೊಟ್ಟಿದ್ದಾರೆ. ಕಲ್ಲಡ್ಕ ಶಾಲೆಯ ವಿದ್ಯಾರ್ಥಿಗಳ ಕುರಿತಾದ ಅಂಕಿ-ಅಂಶಗಳನ್ನು ನೋಡುವಾಗ 94% ವಿದ್ಯಾರ್ಥಿಗಳು ಅಹಿಂದ ಗುಂಪಿಗೇ ಸೇರಿದವರಾಗಿದ್ದಾರೆ. ಹಾಗಾದರೆ ಕಲ್ಲಡ್ಕ ಶಾಲೆಯ ಅಹಿಂದ ವಿದ್ಯಾರ್ಥಿಗಳು ಮೇಲೆ ಇವರಿಗೆ ಕನಿಕರ ಇಲ್ಲವೇ?? ಅಹಿಂದ ಅನ್ನುವುದು ಕೇವಲ ಮತಬೇಟೆಗಾಗಿ ಇವರು ಮಾಡುತ್ತಿರುವ ಕುತಂತ್ರವೇ?
2. ಕನ್ನಡ ಮಾಧ್ಯಮದಲ್ಲಿ ಎಲ್ಲರೂ ಕಲಿಯಬೇಕು ಅನ್ನುವ ಚಿಂತನೆಯನ್ನು ಸರಕಾರ ಕೊಡುತ್ತಿದೆ. ಕರ್ನಾಟಕದ ಅತೀ ಡೊಡ್ಡ ಕನ್ನಡ ಮಾಧ್ಯಮ ಶಾಲೆಯಾದ ಕಲ್ಲಡ್ಕಕ್ಕೆ ಅನುದಾನ ಸ್ಥಗಿತ ಮಾಡಿರುವುದು ಇವರ ಕನ್ನಡಪ್ರೇಮವನ್ನು ಪ್ರಸ್ತುತಪಡಿಸಿದ ರೀತಿಯೇ? ಕನ್ನಡ ಪರವಾದ ಹೋರಾಟಗಾರರೂ ಇದರ ಕುರಿತಾಗಿ ಮೌನವನ್ನು ವಹಿಸಿರುವುದು ಯಾಕೆ?
3. ಕಲ್ಲಡ್ಕ ಶಾಲೆಯಲ್ಲಿ ಒಟ್ಟು 3016 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಅವರಿಗೆ ಇದುವರೆಗೆ ಬಿಸಿಯೂಟವನ್ನು ಬರುತ್ತಿರುವ ಅನುದಾನದಿಂದಲೇ ಕೊಡಲಾಗುತ್ತಿತ್ತು. ಈಗ ಅವರ ಹೊಟ್ಟೆಗೆ ತಣ್ಣೀರಬಟ್ಟೆ ಕಟ್ಟಿ ಸರಕಾರ ಸಾಧಿಸಲು ಹೊರಟಿರುವುದಾದರೂ ಏನನ್ನು ? ಕರ್ನಾಟಕದ ಕೀರ್ತಿಯನ್ನು ಬೆಳಗಬಹುದಾದ ವಿದ್ಯಾರ್ಥಿಗಳಿಗೆ ನೀವು ಕೊಟ್ಟ ಉಡುಗೊರೆಯೇ ಇದು?
4. ಸರಕಾರ ಇದುವರೆಗೆ ಹಿಂದೂ ಧಾರ್ಮಿಕ ಸಂಸ್ಥೆಗಳ ಅನುದಾನಕ್ಕೆ ಮಾತ್ರ ಕತ್ತರಿ ಹಾಕಿತ್ತು. ಇನ್ನಿತರೆ ಧಾರ್ಮಿಕ ಸಂಸ್ಥೆಗಳಿಗೆ ಬೇಕಾದಷ್ಟು ಅನುದಾನವನ್ನೂ ಸರಕಾರ ಕೊಟ್ಟಿದೆ. ಹಾಗಾದರೆ ಅವರ ಮತ ಬೇಟೆಗೋಸ್ಕರ ಉಪಯೋಗವಾಗುವ ಧರ್ಮದ ಸಂಸ್ಥೆಗೆ ಮಾತ್ರವೇ ಅನುದಾನವನ್ನು ನೀಡುತ್ತದೆಯೇ?? ಉಳಿದ ಮಕ್ಕಳ ಭವಿಷ್ಯ ಅವರಿಗೆ ಬೇಡವಾಯಿತೇ?
5. ತಮ್ಮ ರಾಜಕೀಯ ದ್ವೇಷವನ್ನು ಮುಗ್ಧಮಕ್ಕಳ ಮೇಲೆ ಹೇರಿ ಅವರನ್ನು ಕತ್ತಲೆಗೆ ತಳ್ಳುವುದು ಎಷ್ಟು ಸರಿ?
6. ಇಷ್ಟೆಲ್ಲಾ ಅನ್ಯಾಯ ಮುಗ್ಧ ಮಕ್ಕಳ ಮೇಲೆ ಆಗುತ್ತಿದ್ದರೂ ಮಾಧ್ಯಮದವರು ಯಾಕೆ ಈ ವಿಚಾರದಲ್ಲಿ ಮೌನವಾಗಿದ್ದಾರೆ?

ಯಾವಾಗ ಓರ್ವ ರಾಜನಿಗೆ ಪ್ರಜೆಯನ್ನು ಕಾಪಾಡಲು ಅಸಾಧ್ಯವೋ, ಆಗ ಅದರ ಹೊಣೆ ಸಮಾಜದಲ್ಲಿ ಒಂದಾಗಿರುವ ನಮ್ಮ ಮೇಲಿರುತ್ತದೆ. ಈ ವಿಚಾರದ ಕುರಿತಾಗಿ ಪೋಸ್ಟ್ ಕಾರ್ಡ್ ತಂಡ ಕಲ್ಲಡ್ಕಕ್ಕೆ ಭೇಟಿಯಿಟ್ಟಾಗ ಅಲ್ಲಿ ಕಾಣಸಿಕ್ಕಿದ್ದು ಎರಡೇ ವಿಚಾರಗಳು. ಬಡವಿದ್ಯಾರ್ಥಿಗಳು ಹಾಗೂ ಖಾಲಿ ಬುತ್ತಿ. ಹಾಗಾಗಿ ಈಗ ಸಮಾಜ ಕಾರ್ಯ ಮಾಡಬೇಕಾದ ಹೊಣೆ ನಮ್ಮ-ನಿಮ್ಮೆಲ್ಲರದ್ದು. ನಮಗೆ ಅವರ ಜಾತಿಗಳು ಪ್ರಮುಖ ಆಗಲಿಲ್ಲ. ನಮಗೆ ಅವರು ವಿದ್ಯಾರ್ಥಿಗಳು ಮಾತ್ರ. ಅವರ ಪ್ರಸ್ತುತ ಹಾಗೂ ಮುಂದಿನ ಜೀವನ ಬಹಳ ಮುಖ್ಯ. ನಮಗೆಲ್ಲಾ ಗೊತ್ತಿದೆ – ಈ ತುಘಲಕ್ ಸರಕಾರ ಇನ್ನು ಮುಂದಿನ 8 ತಿಂಗಳುಗಳ ಕಾಲ ಆಳ್ವಿಕೆ ಮಾಡಲಿದೆ. ಅಷ್ಟೂ ಸಮಯ ಅವರ ಊಟದ ವ್ಯವಸ್ಥೆ ಸಮಾಜಹಿತವನ್ನು ಬಯಸುವ ನಾವು ಮಾಡಬೇಕಾಗಿದೆ. ಹಾಗಾಗಿ ಪೋಸ್ಟ್ ಕಾರ್ಡ್ ತಂಡ ಮುಗ್ಧ ಮಕ್ಕಳ ಪರವಾಗಿ ಬಿಕ್ಷೆಯನ್ನು ಬೇಡುತ್ತಾ ನಿಮ್ಮ ಮುಂದೆ ಬಂದಿದೆ. ಈ ಆಂದೋಲನಕ್ಕೆ ನಿಮ್ಮೆಲ್ಲರ ಸಹಕಾರ-ಪ್ರೋತ್ಸಾಹವನ್ನು ನಿರೀಕ್ಷಿಸುತ್ತಿದ್ದೇವೆ. ಒಂದು ವಿದ್ಯಾರ್ಥಿಗೆ ತಲಾ 10 ರೂ ನಂತೆ ದಿನಾ ಖರ್ಚು ಬೀಳುತ್ತದೆ. ಹೀಗೆ 3016 ವಿದ್ಯಾರ್ಥಿಗಳ ಖರ್ಚನ್ನು ನಾವು ನೋಡಿಕೊಳ್ಳೋಣ. ಆ ಮಕ್ಕಳನ್ನು ಅವರಿಗೆ ಲಭಿಸಬೇಕಾದ ಆಹಾರವನ್ನು ಕೊಡಲು ದತ್ತು ತೆಗೆದುಕೊಳ್ಳಬಹುದು. ನಮಗೆ ಲಭಿಸಿದ ಸಮಾಜೋದ್ಧಾರದ ಕಾರ್ಯವನ್ನು ಖುಷಿಯಿಂದಲೇ ಮಾಡಿ ಮಕ್ಕಳ ಭವಿಷ್ಯ ಉಜ್ವಲವಾಗಲಿಯೆಂದು ಪ್ರಾರ್ಥಿಸೋಣ.

8 ತಿಂಗಳುಗಳ ಕಾಲ ಯಜ್ಞದಂತೆ ಈ ಕಾರ್ಯವನ್ನು ಮಾಡೋಣ. ಈ ಬಾರಿ ನಮಗೆ ನೀವು ಭಿಕ್ಷೆ ನೀಡಿ. ಮುಂದಿನ ಬಾರಿ ಸಮಾಜಕ್ಕೆ ಅಗತ್ಯವಿದ್ದಾಗ ಮತ್ತೆ ನಿಮ್ಮ ಮುಂದೆ ಭಿಕ್ಷೆಗಾಗಿ ಹಸ್ತವನ್ನು ಚಾಚುತ್ತೇವೆ. “ಭಿಕ್ಷಾಂ ದೇಹಿ”

ನೀವು ಈ ಮೂಲಕ ಹಣ ಕಳಿಸಬಹುದು :
Sri Rama Vidya Kendra Trust

A/C : 2832500100045001
IFSC code : KARB0000283
Karnataka Bank

ನಿಮಗೆ ಲಭಿಸಿದ ಹಣದ ರಶೀದಿಯ ಪ್ರತಿಯನ್ನು ಈ ಕೆಳಗಿನ ಲಿಂಕ್ ಗೆ ಕಳುಹಿಸಿ:

WhatsApp : 8747004965
E-mail : postcardkannada@gmail.com
Tweet : @mvmeet
Fb : Mahesh Vikram Hegde and Vivek Shetty

Tags

Related Articles

Close