ಪ್ರಚಲಿತ

33 ಕೋಟಿ ದೇವರುಗಳನ್ನು ಪೂಜಿಸುವ ಹಿಂದೂಗಳಿಗೆ ಏಸು ಹಾಗೂ ಅಲ್ಲಾ ಹೆಚ್ಚಾಗಲಾರರು ಆದರೆ… – ಹಿಂದೂ ಫೈರ್ ಬ್ರಾಂಡ್ ಅನಂತ್ ಕುಮಾರ್ ಹೆಗಡೆ!

ಅದು ಕೇಂದ್ರ ಸಚಿವ ಸಂಪುಟದ ಪುನರಚನಾ ಸಮಯ! ದೇಶಕ್ಕೆ ದೇಶವೇ ಹೊಸ ಸಚಿವ ಯಾರೆಂಬ ಕಾತುರದಿಂದ ಕಾಯುತ್ತಿದ್ದರು!.. ಬಿಜೆಪಿ ಸಂಸದರು ಮಂತ್ರಿ ಸ್ಥಾನ ಸಿಗಬೇಕೆಂಬ ಲಾಭಿಯಲ್ಲಿ ತೊಡಗಿದ್ದರು. ಕರ್ನಾಟಕದಲ್ಲಂತೂ ತನಗೆ ಸಿಗಬೇಕು ನನಗೆ ಸಿಗಬೇಕು ಎಂಬ ಯೋಚನೆಯಲ್ಲಿ ಪ್ರಮಾಣ ವಚನಕ್ಕೆ ಸಿದ್ಧರಾಗಿ ಹೊಸ ಪೈಜಾಮನ್ನು ಹೊಲಿಸಿ ಸಿದ್ಧರಾಗಿ ಪ್ರಧಾನಿ ಕಚೇರಿಯ ಕರೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಆದರೆ ಮೋದಿ ಸರಕಾರದ ನೀತಿ ನಿಯಮಗಳು ಗೊತ್ತೆ ಇದೆಯಲ್ಲಾ..ದೇಶವೇ ಊಹಿಸಲಾರದ ಹೊಸ ಯೋಜನೆಗಳನ್ನು ವಿನೂತನ ನಿರ್ಧಾರಗಳನ್ನು ಪ್ರಕಟಿಸುವ ಮೂಲಕ ಒಂದಲ್ಲ ಒಂದು ರೀತಿಯಲ್ಲಿ ಶಾಕ್ ನೀಡುತ್ತಿದ್ದರು.

ಮಂತ್ರಿ ಮಂಡಲ ಪುನರ್‍ರಚನಾ ವಿಚಾರದಲ್ಲೂ ನಡೆದದ್ದೂ ಇದೇನೆ. ಕರ್ನಾಟಕದ ಹಲವಾರು ಸಂಸದರು ಕರೆಗಾಗಿ ಕಾಯುತ್ತಿದ್ದರು. ಯಾವ ಸಂಸದನಿಗೂ ಕರೆಗಳು ಬಂದೇ ಇಲ್ಲ. ಆದರೆ ಯಾವುದೇ ಮಹತ್ವಾಕಾಂಕ್ಷೆ ಇಲ್ಲದೆ ತನ್ನಿಷ್ಟಕ್ಕೆ ತಾನು ಜನಸೇವೆಯನ್ನು ಮಾಡುತ್ತಾ ಐದು ಬಾರಿ ಸಂಸದರಾಗಿ ಕಟ್ಟರ್ ಹಿಂದುತ್ವವಾದಿಯಾಗಿದ್ದ ಯುವ ಸಂಸದನಿಗೆ ಪ್ರಧಾನಿ ಸಚಿವಾಲಯದಿಂದ ಕರೆ ಬರುತ್ತೆ. “ಆಪ್ ಸಚಿವ್ ಸ್ಥಾನ್ ಕೇಲಿಯೇ ಚುನೇ ಗಯೇ ಹೈ, ಪ್ರಮಾಣ್ ವಚನ್ ಸ್ವೀಕಾರ್ ಕರ್‍ನೇ ಕೇಲಿಯೇ ದೆಹಲಿ ಆಯಿಯೇ”..

ಇಂತಹ ಕರೆ ಕೇಳಿದ ಸ್ವತಃ ಆ ವ್ಯಕ್ತಿಯೇ ದಂಗಾಗಿ ಹೋದರು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಐದು ಬಾರಿ ಸಂಸದರಾಗಿ ಹಿಂದುತ್ವದ ಫೈರ್ ಬ್ರಾಂಡ್ ಆಗಿ ಆಪೇಕ್ಷಿತರಾದರೂ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರದ ಪ್ರಕಾರ ಅವರ ಹೆಸರು ಹಾಕಿದರೆ ವೇದಿಕೆಗೆ ಬಂದು ಟಿಪ್ಪುವಿನ ಅನಾಚಾರಗಳನ್ನು ಬಯಲಿಗೆಳೆದು ಆತನ ಜನ್ಮವನ್ನು ಜಾಲಾಡಿ ಬಿಡುವೆ. ತಾಕತ್ತಿದ್ದರೆ ಸಿದ್ದರಾಮಯ್ಯನವರು ಎದುರಿಸಲಿ ಎಂದು ದಿಟ್ಟ ಸವಾಲೆಸೆದ ಆ ಯುವ ರಾಜಕಾರಣಿಯೇ ಉತ್ತರ ಕರ್ನಾಟಕದ ಸಂಸದ ಅನಂತ್ ಕುಮಾರ್ ಹೆಗಡೆ. ಖಾಸಗಿ ಸುದ್ಧಿವಾಹಿನಿಗೆ ಬಂದ ಅನಂತ್ ಕುಮಾರ್ ಹೆಗಡೆ ಯಾವ ರೀತಿಯಾಗಿ ತನ್ನ ಮೃದು ಸ್ವಭಾವದಲ್ಲಿ ಸಂದರ್ಶನ ನೀಡಿದ್ದರು ಎಂಬುವುದನ್ನು ನಾವು ಗಮನಿಸಬಹುದು.

ಕೇಂದ್ರ ಸಚಿವರಾಗಿದ್ದು ಆಕಸ್ಮಿಕವೋ ಅಥವಾ ನಿಮಗೆ ನಿರೀಕ್ಷೆ ಇತ್ತೋ?

ತನ್ನ ಜೀವನದಲ್ಲಿ ಅನಿರೀಕ್ಷಿತ ಪದವಿಯಾಗಿದ್ದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಹುದ್ದೆಯನ್ನು ಅಲಂಕರಿಸಿದ್ದು  ಒಂದು ನನ್ನ ಆಕಸ್ಮಿಕ ಹುದ್ದೆ. ಅವಕಾಶ ಬಯಸದೆ ಸಿಕ್ಕಿದ ಪದವಿಯಾಗಿತ್ತು. 5 ಬಾರಿ ಸಂಸದರಾಗಿ ಬೇರೆ ಬೇರೆ ಕಡೆಗಳಲ್ಲಿ, ಕೆಲಸ ನಿರ್ವಹಿಸಿದ್ದೇನೆ. ತದನಂತರ ಹೊಸ ಪ್ರತಿಭೆಗಳಿಗೆ ಅವಕಾಶ ಸಿಗಲೆಂದು ರಾಜಕೀಯದಿಂದ ದೂರ ಉಳಿದಿದ್ದೆ.

ಪ್ರಧಾನಿ ಮೋದಿಯ ಸ್ಕಿಲ್ ಇಂಡಿಯಾ ಬಗ್ಗೆ ನಿಮ್ಮ ಅಭಿಪ್ರಾಯ ಎನ್ನುವ ಪ್ರಶ್ನೆಗೆ ಸಜವಾಗಿಯೇ ಉತ್ತರಿಸಿದ ಅನಂತ ಕುಮಾರ್ ಹೆಗಡೆ.

ಸ್ಕಿಲ್ ಇಂಡಿಯಾ, ಪ್ರಧಾನಿ ಮೋದಿಯ ಕನಸಿನ ಕೂಸಾಗಿದ್ದು, ಕೌಶಲ್ಯಾಭಿವೃದ್ಧಿಯಾಗಬೇಕು ಎನ್ನುವ ನಿಟ್ಟಿನಲ್ಲಿ ಜೂನ್ 11, 2014 ರಂದು ಲೋಕ ಸಭೆಯಲ್ಲಿ ಪ್ರಧಾನಿ ಘೋಷಿಸಿದ್ದು, ಜುಲೈ 15 ರಂದು ಕೌಶಲ್ಯ ಭಾರತಕ್ಕೆ ಮೋದಿಯಿಂದ ಚಾಲನೆ ದೊರಕಿದೆ. 2022ರ ವೇಳೆಗೆ ಸುಮಾರು 40.2 ಕೋಟಿ ಯುವ ಸಮುದಾಯವನ್ನು ಕೌಶಲ್ಯ ಪೂರ್ಣರನ್ನಾಗಿಸುವ ಗುರಿ ಹೊಂದಲಾಗಿದೆ. ಸ್ಕಿಲ್ ಇಂಡಿಯಾ ಮಿಷನ್ ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿಯ ಜೊತೆಗೆ ಹೊಸ ಉದ್ದಿಮೆ ಸ್ಥಾಪನೆಗೆ ಯುವ ಸಮುದಾಯವನ್ನು ಹುರಿದುಂಬಿಸುವ ಹಾಗೂ ತರಬೇತಿ ನೀಡುವ ಕಾರ್ಯಕೈಗೆತ್ತಿ ಕೊಳ್ಳಲಾಗುತ್ತದೆ. ಇದಲ್ಲದೆ ಕೌಶಲ್ಯ ಅಭಿವೃದ್ಧಿ ಸಾಲ ಯೋಜನೆ 5 ಸಾವಿರ ರೂ. ನಿಂದ 1.5 ಲಕ್ಷ ರೂ ತನಕ ಸಾಲ ಪಡೆಯಬಹುದು. ಇದು ದೇಶದ 34 ಲಕ್ಷ ಸಮುದಾಯಕ್ಕೆ ನೆರವಾಗಲಿದೆ. ಕೌಶಲ್ಯಾಭಿವೃದ್ಧಿ ನಿಗಮ(ಎನ್‍ಎಸ್‍ಡಿಸಿ) ವತಿಯಿಂದ ಯೋಜನೆಯ ಕಾರ್ಯರೂಪ ಹಾಗೂ ನಿರ್ವಹಣೆ ದೇಶದೆಲ್ಲೆಡೆ ನಡೆಯಲಿದೆ ಎಂಬ ಕೌಶಲ್ಯಾಭಿವೃದ್ಧಿಯ ಬಗ್ಗೆ ಮಾಹಿತಿಯನ್ನು ಸ್ಪಷ್ಟವಾಗಿ ನೀಡಿದರು.

ತಮ್ಮ ಹಿಂದುತ್ವವಾದವು ತಮ್ಮ ರಾಜಕೀಯ ಬೆಳವಣಿಗೆಗೆ ಅಡ್ಡಿಯಾಗಿಲ್ಲವೇ ಎಂಬರ್ಥದ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಸಚಿವರು:

ನಾವು 33 ಕೋಟಿ ದೇವರುಗಳನ್ನು ಪೂಜಿಸುವ ನಮಗೆ ನಮಗೆ ಏಸು ಹಾಗೂ ಅಲ್ಲಾಹ್ ಇಬ್ಬರು ಜಾಸ್ತಿ ಆಗುವುದಿಲ್ಲ. ವೈಚಾರಿಕ ಸೀಮಿತ ಚೌಕಟ್ಟಿನಲ್ಲಿ ಬದುಕುತ್ತಿರುವ ನಾವು ಎಲ್ಲರನ್ನು ಸೋದರರು ಎನ್ನುವ ಮನೊಭಾವನೆಯಿಂದ ಬದುಕುತ್ತಿದ್ದೇವೆ. ಅದೇ ಭಾವನೆ ಅವರಲ್ಲಿದೆಯಾ? ನಾವು ಹೇಗೆ ರಹೀಮನನ್ನು ಪೂಜೆ ಮಾಡಲು ಬಯಸುತ್ತೇವೆಯೋ ಹಾಗೆ ಮುಸ್ಲಿಮರು ರಾಮನ್ನು ಪೂಜಿಸಲು ಇಚ್ಚಿಸುತ್ತಾರಾ? ನಾವು ಹೇಗೆ ಏಸುವನ್ನು ಪೂಜಿಸಲು ಬಯಸುತ್ತೇವೆಯೋ, ನಾವೆಲ್ಲಾ ನಮ್ಮ ಮನೆಗಳಲ್ಲಿ ಅವರ ಫೋಟೋವನ್ನು ಇಟ್ಟುಕೊಂಡು ಅದಕ್ಕೆ ಹಾರ ಹಾಕಿ ಪೂಜಿಸುತ್ತೇವೆಯೋ ಅದೇ ರೀತಿ ಕೃಷ್ಣನನ್ನು ಪೂಜಿಸಲು ತಯಾರಿರುತ್ತಾರೋ ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ವ್ಯತ್ಯಾಸ ಬಂದಿರುವಂತಹದ್ದು ಇಲ್ಲಿ! ತಿದ್ದಿಕೊಳ್ಳ ಬೇಕಾದವರು ನಾವಲ್ಲ, ಬದಲಾಗಿ ತಿದ್ದಿಕೊಳ್ಳ ಬೇಕಾದವರು ಅವರು. ಅಲೆಮಾರಿಗಳಾಗಿ ನಮ್ಮ ದೇಶಕ್ಕೆ ಬಂದವರಿಗೆ ದೇವಸ್ಥಾನ , ಅವರಿಗೆ ಮನೆಯ ವ್ಯವಸ್ಥೆ ,ತಿನ್ನಲು ಅನ್ನ, ಬಟ್ಟೆ ಎಲ್ಲಾ ವ್ಯವಸ್ಥೆ ಮಾಡಿಕೊಟ್ಟವರಿಗೆ ಯಾರೂ ನಮ್ಮನ್ನು ಸಂಪ್ರದಾಯವಾದಿಗಳು ಎಂದು ಕರೆಯುವ ಅಗತ್ಯವಿಲ್ಲ, ಒಂದು ಉನ್ನತ ಮಟ್ಟವಾಗಿ ಸುಸಂಸ್ಕøತ ಹಿನ್ನಲೆ ಹೊಂದಿರುವಂತಹ ಜನಾಂಗ ಎಂದು ಕರೆಯಿರಿ ಅದರಲ್ಲಿ ನಮಗೆ ಹೆಮ್ಮೆಯಿದೆ ಎಂದು ಹೇಳಿದ್ದಾರೆ.

ಇತಿಹಾಸವೇ ನಮ್ಮ ಬದುಕು! ಅದನ್ನು ಅಭ್ಯಸಿಸಿ ನಮ್ಮ ಬದುಕನ್ನು ಸೃಷ್ಟಿ ಮಾಡಿ ಬದುಕುತ್ತೇವೆ ಎಂದು  ಜೀವನಕ್ಕೆ ಅರ್ಥವಿಲ್ಲ ಎಂಬ ಮಾತನ್ನು ಹೇಳುತ್ತಾರೆ. ಹಿಂದುತ್ವವಾದಿಯಾಗಿರುವ ನಾನು ಹಿಂದುತ್ವದ ಪಟ್ಟಾ ಅಭಿಮಾನಿಯಾಗಿದ್ದು ಒಬ್ಬ ವ್ಯಕ್ತಿ ತನ್ನ ದೇಶದ ಬಗ್ಗೆ ತನ್ನ ತನದ ಬಗ್ಗೆ ತನ್ನ ಪರಂಪರೆಯ ಅಪಾರ ಗೌರವ ಭಕ್ತಿ, ಗರ್ವವನ್ನು ಹೊಂದಿರುವುದನ್ನು ಇತರರು ಇದನ್ನೇ ಅಪರಾಧ ಎಂದರೆ ಅದನ್ನು ನಾನು ಮೂರ್ಖತನ ಎಂದು ಖಂಡಿತಾ ಹೇಳಬಲ್ಲೆ ಎಂದು ಹೇಳುತ್ತಾರೆ.

ಭಾಮಕ ಜಗತ್ತಿನಲ್ಲಿ ಬದುಕುವ ಅಗತ್ಯವಿಲ್ಲ, ವ್ಯಾವಹಾರಿಕ ಜಗತ್ತಿನಲ್ಲಿ ಬದುಕುವ ಹಂಬಲ ನನಗಿದೆ. ಈ ಸೋಗಲಾಡಿ ಸಿದ್ಧಾಂತದ ಜೊತೆಗೆ ತೊಳಕು ಹಾಕಿಕೊಂಡು ಬದುಕುವ ಅಭ್ಯಾಸ ಕೂಡಾ ನನಗಿಲ್ಲ. ಅಕ್ಷರಗಳನ್ನು ಮಾರಾಟ ಮಾಡುವಂತಹ ಮಾಧ್ಯಮಗಳಿಗೆ ನಾನು ಉತ್ತರ ಕೊಡುವ ಅವಶ್ಯಕತೆ ಇಲ್ಲ. ನಮ್ಮ ವಿಚಾರ ಮತ್ತು ನಮಗೆ ನಮ್ಮ ಹಿರಿಯರು ಕೊಟ್ಟಂತಹ ಪ್ರೇರಣೆ , ಈ ದೇಶ ಈ ಜನಸಮುದಾಯ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದ ಪ್ರಭಾವದಿ0ದಾಗಿ ನಾವು  ಎಲ್ಲಿಗೆ ಹೋಗಬೇಕು ಎನ್ನುವ ಗೊತ್ತು, ಗುರಿ, ಸ್ಪಷ್ಟತೆ ನಮಗೆಲ್ಲರಿಗೂ ಇದೆ. ಇದೇ ವಿಚಾರವನ್ನಿಟ್ಟುಕೊಂಡು ಇಲ್ಲಿಯವರೆಗೆ ಬಂದಿದ್ದೇನೆ.

ಇದು ಯಾವುದೇ ನಿರೀಕ್ಷೆಯನ್ನಿಟ್ಟುಕೊಳ್ಳದ ಸರಳ ಸಜ್ಜನಿಕೆಯ ಸಂಸದ, ಸಚಿವ ಸ್ಥಾನ ಪಟ್ಟ ಒಲಿದ ನಂತರದ ಮೃದು ಮಾತುಗಳು. ಮಾತುಗಳು ಎಷ್ಟು ಮೃದುವೋ ಅಷ್ಟೇ ಮನಸ್ಸನ್ನು ಕೂಡಾ ಮೃದುತ್ವವಾಗಿಟ್ಟುಕೊಂಡ ನಾಯಕ!

-ಪವಿತ್ರ

Tags

Related Articles

Close