ಪ್ರಚಲಿತ

ಬಣ್ಣ ಬದಲಾಯಿಸುವ ವಿಸ್ಮಯಕಾರಿ ಶಿವಲಿಂಗದ ರಹಸ್ಯ ವಿಜ್ಞಾನಿಗಳಿಗೂ ಸವಾಲಾಗಿದೆ…

ವಿಶ್ವದ ನಾನಾ ಕಡೆಗಳಲ್ಲಿ ಶಿವನ ದೇವಾಲಯಗಳು ರಾರಾಜಿಸುತ್ತಿದ್ದು, ಸಾವಿರಾರು ವರ್ಷಗಳ ಇತಿಹಾಸದೊಂದಿಗೆ ಚರಿತ್ರೆಗಳನ್ನೂ ಒಳಗೊಂಡಿದೆ. ಹಿಂದೂ ಸಂಪ್ರದಾಯದಲ್ಲಿ ಮುಕ್ಕೋಟಿ ದೇವತೆಗಳನ್ನು ಆರಾಧಿಸುವ ನಾವು ಮಹಾದೇವ, ನೀಲಕಂಠ, ಭೋಲೇನಾಥ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಶಿವನನ್ನು ಬಹಳ ಶ್ರದ್ಧಾಪೂರ್ವಕವಾಗಿ ಪೂಜಿಸುತ್ತೇವೆ. ಕರಣಾಮಯಿಯಾಗಿರುವ ಕರುಣಾಕರನನ್ನು ಲಿಂಗರೂಪಿಯಾಗಿ ಆರಾಧಿಸುವ ಸಹಸ್ರರಾರು ಸಂಖ್ಯೆಯ ಭಕ್ತರು ಕೇವಲ ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದ ಅದೆಷ್ಟೋ ಕಡೆಗಳಲ್ಲಿ ನೆಲೆಸಿದ್ದಾರೆ. ಭಾರತದಲ್ಲಿರುವ ಪ್ರತೀಯೊಂದು ದೇವಾಲಯವು ಒಂದು ವಿಸ್ಮಯಕಾರಿಯೇ ಹೌದು. ವಿಜ್ಞಾನಿಗಳಿಗೂ ಕೆಲವೊಮ್ಮೆ ಅಚ್ಚರಿಯನ್ನುಂಟು ಮಾಡುವ ಅದೆಷ್ಟೋ ದೇವಾಲಯ ಭಾರತದಲ್ಲಿದೆ. ಇಂತಹ ವಿಸ್ಮಯಕಾರಿ ಸಂಗತಿಗಳನ್ನು ಯಾರೇ ಆದರೂ ನಂಬಲೇ ಬೇಕು… ದೇವರೇ ಇಲ್ಲ ಎಂದು ಹೇಳುವವರೂ ಇಂತಹ ವಿಸ್ಮಯಕಾರಿ ಘಟನೆಗಳಿಗೆ ತಲೆಬಾಗಲೇ ಬೇಕು.

ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುತ್ತೆ ಈ ಶಿವಲಿಂಗ.

ಹೀಗೆ ಸಾವಿರಾರು ವರ್ಷಗಳ ಹಳೆಯದಾದ ರಾಜಸ್ಥಾನದ ದೋಲ್‍ಪುರದ ಶಿವಾಲಯವು ನಿಗೂಢ ಮಂದಿರವೆಂದು ನಂಬಲಾಗಿದೆ. ಅಚಲೇಶ್ವರ ಮಹಾದೇವ ಮಂದಿರದ ಶಿವಲಿಂಗವು ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುತ್ತದೆ. ವಿಜ್ಞಾನಿಗಳು ಇದರ ಬಗ್ಗೆ ಹೆಚ್ಚಿನ ಸಂಶೋಧನೆಯನ್ನು ಮಾಡುತ್ತಿದ್ದಾರೆ ಇನ್ನೂ ದೃಢೀಕರಿಸುವ ಸಂಶೋಧನೆ ಮಾತ್ರ ನಡೆದಿಲ್ಲ. ಬೆಳಿಗ್ಗೆ ಶಿವಲಿಂಗವು ಕೆಂಪು ಬಣ್ಣದಲ್ಲಿದ್ದರೆ, ಮಧ್ಯಾಹ್ನದ ವೇಳೆಗೆ ಕೇಸರಿ ಬಣ್ಣಕ್ಕೆ ಪರಿವರ್ತನೆಯಾಗುತ್ತದೆ ನಂತರ ರಾತ್ರಿ ಕಪ್ಪು ಬಣ್ಣಕ್ಕೆ ಲಿಂಗ ತಿರುತ್ತದೆ.

ಶಿವನ ಕಾಲ್ಬೆರಳಿನ ಗುರುತಿನಿಂದಲೇ ದೇವಾಲಯ ನಿರ್ಮಾಣ.

ಈ ದೇವಸ್ಥಾನವು ಅದ್ಭುತಗಳ ಆಗರ ಎಂದೆನಿಸಿದೆ… ಈ ದೇವಸ್ಥಾನವನ್ನು 9ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಶಿವನ ಕಾಲ್ಬೆರಳಿನ ಗುರುತಿನಿಂದಾಗಿ ದೇವಾಲಯ ಕಟ್ಟಲ್ಪಟ್ಟಿದೆ. ಶಿವಲಿಂಗ ನೈಸರ್ಗಿಕ ಶಿವಲಿಂಗವನ್ನು ದೇವಳವು ಹೊಂದಿದ್ದು ಈ ಪ್ರದೇಶದ ಶ್ರೀಮಂತಿಕೆಯನ್ನು ಇದು ಎತ್ತಿಹಿಡಿದಿದೆ. ಇಲ್ಲಿ ಶಿವನ ಕಾಲ್ಬೆರಳಿಗೆ ಪೂಜೆಯನ್ನು ಮಾಡಲಾಗುತ್ತಿದ್ದು ಇದು ಅತ್ಯಂತ ವಿಶೇಷವಾಗಿದೆ. ಅಂತೆಯೇ ಸಂಪೂರ್ಣ ಹಿತ್ತಾಳೆಯಿಂದ ಮಾಡಿದ ನಂದಿಯನ್ನು ಈ ದೇವಾಲಯ ಹೊಂದಿದೆ. ಭೂಮಿಯ ಕೇಂದ್ರ ದೇವಾಲಯವು 2500 ವರ್ಷಗಳು ಹಳೆಯದಾಗಿದ್ದು ಶಿವನ ಕಾಲ್ಬೆರಳು ಪ್ರಪಂಚಕ್ಕೆ ದೇವರು ಅಡಿಇಟ್ಟಂತೆ ಕಾಣುತ್ತದೆ.  ಮುಸ್ಲಿಂ ದಾಳಿಕೋರರು ಶಿವಾಲಯದ ಮೇಲೆ ದಾಳಿ ಎಸಗಲು ನೋಡಿದಾಗ ನಂದಿ ಪ್ರತಿಮೆಯು ಉದ್ಭವವಾಯಿತು ಎಂದು ಹೇಳಲಾಗುತ್ತಿದೆ. ಶಿವಲಿಂಗದ ಮೂಲ ಒಮ್ಮೆ ಅನ್ವೇಷಕರು ಶಿವಲಿಂಗದ ಮೂಲವನ್ನು ಹುಡುಕಿಕೊಂಡು ಹೊರಟರು. ಆದರೆ ಎಷ್ಟು ಪ್ರಯತ್ನಿಸಿದರೂ ಇದರ ಮೂಲ ದೊರಕದೆ ನಿರಾಶರಾಗಿದ್ದ ಘಟನೆ ಕೂಡಾ ನಡೆದಿದೆ.

ಅದಲ್ಲದೆ ಇಲ್ಲಿಗೆ ಬರುವ ಭಕ್ತಾದಿಗಳು ಏನು ಬೇಡಿಕೊಂಡರೂ ಅತೀ ಶೀಘ್ರವಾಗಿ ನೆರವೇರುತ್ತದೆ. ಅದರಲ್ಲೂ ವಿಶೇಷವಾಗಿ ಕಂಕಣ ಭಾಗ್ಯ ಬಯಸುತ್ತಿರುವ ಹುಡುಗ, ಹುಡುಗಿಯರ ಈಡೇರಿಕೆಗಳು ಬಹು ಬೇಗ ಸಂಪನ್ನವಾಗುತ್ತದೆ ಎಂದು ಹೇಳಲಾಗುತ್ತದೆ. ವಿವಿಧ ಆಕಾರ ಮತ್ತು ಗಾತ್ರಗಳ ಶಿವಲಿಂಗಗಳು ಹೀಗೆ ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುತ್ತ, ಸಕಲರ ಇಷ್ಟಾರ್ಥಗಳನ್ನು ಈಡೇರಿಸುತ್ತ ನೆಲೆಸಿರುವ ಶಿವಲಿಂಗ ರೂಪದ ಶಿವನನ್ನು ಅಚಲೇಶ್ವರನೆಂದು ಕರೆಯಲಾಗುತ್ತದೆ.

ಕೌತುಕವನ್ನು ಸೃಷ್ಠಿ ಮಾಡುತ್ತೆ ಶಿವಲಿಂಗದ ಉದ್ದ.

ಈ ಪ್ರದೇಶವು ಬಹುತೇಕರಿಗೆ ತಿಳಿದಿಲ್ಲ ಹಾಗೂ ಇದು ಮಧ್ಯ ಪ್ರದೇಶ ಮತ್ತು ರಾಜಸ್ಥಾನಗಳ ಗಡಿಯಲ್ಲಿ ಸ್ಥಿತವಿದೆ. ಚಂಬಲ್ ಪ್ರದೇಶದ ನಿರ್ಜನ ಪ್ರದೇಶವೊಂದರಲ್ಲಿ ನೆಲೆಸಿರುವುದರಿಂದ ಇಲ್ಲಿಗೆ ತಲುಪುವುದು ತುಸು ಕಷ್ಟಕರವಾಗಿದ್ದರೂ ಇದರ ಕೌತುಕಮಯ ಅಂಶಗಳಿಂದ ಇತ್ತೀಚಿನ ಕೆಲ ವರ್ಷಗಳಿಂದ ಸಾಕಷ್ಟು ಜನಮನ್ನಣೆಗಳಿಸುತ್ತಿದೆ ಈ ದೇವಾಲಯ. ಮತ್ತೊಂದು ವಿಸ್ಮಯ ವಿಚಾರವೆಂದರೆ ಈ ನೆಲದಲ್ಲಿ ಸಾವಿರಾರು ಅಡಿ ಅಗೆದರೂ ಕೂಡ ಶಿವಲಿಂಗದ ಅಂತ್ಯ ಎಲ್ಲಾಗುತ್ತದೆಂದು ತಿಳಿದುಬಂದಿಲ್ಲ. ಆದ್ದರಿಂದ ಈ ಶಿವಲಿಂಗದ ನಿಖರ ಉದ್ದವು ಯಾರಿಗೂ ಗೊತ್ತಾಗಿಲ್ಲ.

ಒಮ್ಮೆ ಕೆಲವು ಭಕ್ತರು ಶಿವಲಿಂಗದ ಆಳವನ್ನು ತಿಳಿಯಲು ಸುತ್ತಲಿನ ಪ್ರದೇಶವನ್ನು ಅಗೆದರೂ ಇನ್ನೊಂದು ಕೊನೆಯನ್ನು ಮುಟ್ಟುವಲ್ಲಿ ಅಸಮರ್ಥರಾಗುತ್ತಾರೆ. ಅದಲ್ಲದೆ ಈ ಬಣ್ಣ ಬದಲಾವಣೆ ಕೂಡಾ ಏಕೆ ಈ ರೀತಿ ಬಣ್ಣ ಬದಲಾವಣೆಯಾಗುತ್ತದೆಂದು ಇಂದಿನವರೆಗೂ ಯಾರಿಂದಲೂ ತಿಳಿಯಲು ಸಾಧ್ಯವಾಗಿಲ್ಲ. ಇನ್ನೊಂದು ಕೌತುಕವೆಂದರೆ ಈ ಶಿವಲಿಂಗದ ತಳ. ಇದರ ತಳ ಎಷ್ಟು ಆಳವಾಗಿದೆ ಎಂದು ಇನ್ನೂ ತಿಳಯಲಾಗಿಲ್ಲವಂತೆ. ಹಿಂದೆ ಪಕ್ಕದ ಸ್ಥಳದಿಂದ ಭೂಮಿ ಅಗೆದರೂ ಎಷ್ಟು ಆಳ ಹೋದರೂ ಶಿವಲಿಂಗದ ತಳಪಾಯ ಪತ್ತೆ ಹಚ್ಚಲು ಸಾಧ್ಯವಾಗದೆ ಇದು ಶಿವನ ಮಹಾತ್ಮೆ ಎಂದು ತಿಳಿದ ಜನರು ಭೂಮಿ ಅಗೆಯುವ ಕಾರ್ಯವನ್ನೆ ಸ್ಥಗಿತಗೊಳಿಸಿದ್ದರು.

ಜಗತ್ತಿನಲ್ಲಿರುವ ಬೇರೆ ಬೇರೆ ಶಿವ ದೇವಾಲಯಗಳ ಬಗ್ಗೆ ನೀವು ಮಾಹಿತಿಯನ್ನು ಹೊಂದಿದ್ದರೂ ಶಿವಲಿಂಗದ ಬಣ್ಣ ಬದಲಾಗುವ ವಿಷಯ ಅತ್ಯಂತ ಕೌತುಕಮಯವಾಗಿದೆ. ರಾಜಸ್ಥಾನದ ಈ ಅಚಲೇಶ್ವರ ದೇವಾಲಯ ಶಿವಾಲಯದಲ್ಲಿರುವ ಶಿವಲಿಂಗವೇ ಈ ವಿಶಿಷ್ಟ ಶಕ್ತಿಯನ್ನು ಪಡೆದುಕೊಂಡಿದೆ. ದೇವಸ್ಥಾನವು ರಾಜಸ್ಥಾನದ ಮಧ್ಯಪ್ರದೇಶದಲ್ಲಿದ್ದು ಹೆಚ್ಚಿನ ಪ್ರವಾಸಿಗರ ಗಮನವನ್ನು ಸೆಳೆಯುತ್ತಿದೆ.

ಆದರೆ ಪ್ರಪಂಚದಲ್ಲಿ ನಡೆಯುವ ಅದೆಷ್ಟೋ ವಿಚಿತ್ರಗಳು ಒಂದು ಕ್ಷಣ ನಮ್ಮ ಕಣ್ಣು ತೆರೆಸುತ್ತವೆ. ಅಷ್ಟೇ ಅಲ್ಲದೇ, ಈ ವಿಚಿತ್ರಗಳು ನಡೆಯುವ ಸ್ಥಳಕ್ಕೆ ಬೇಟಿ ನೀಡಿ ಅದನ್ನೂ ಪರೀಕ್ಷಿಸಲೂ ಮುಂದಾಗುತ್ತೇವೆ ಕೂಡ. ದೇವರು ಇದ್ದಾನೆಯೇ ಅಥವಾ ಇಲ್ಲವೋ ಎಂಬ ಗೊಂದಲ ಇರುವವರಿಗೆ, ದೇವರು ಇಲ್ಲ ಎಂದು ವಾದಿಸುವವರ ಕಣ್ಣು ತೆರೆಸಬೇಕು ಎಂದು ಆ ಭಗವಂತನು ನಮಗೆ ಇಂತಹ ಅದ್ಭುತಗಳನ್ನು ಮಾಡಿ ತೋರಿಸುತ್ತಾನೋ ಏನೋ ಗೊತ್ತಿಲ್ಲ. ಇಂತಹ ವಿಸ್ಮಯಗಳನ್ನು ನಾವು ನಂಬಲೇ ಬೇಕು….

source: https://detechter.com/miraculous-shivling-changes-colours-thrice-day/

-ಪವಿತ್ರ

Tags

Related Articles

FOR DAILY ALERTS
Close