ಅಂಕಣ

ಸರ್ವಾಧಿಕಾರಿ ಹಿಟ್ಲರ್ ಕೂಡಾ ಸನಾತನ ಧರ್ಮಕ್ಕೆ ತಲೆಬಾಗಿದ್ದನಾ?!

ಹಿಟ್ಲರ್ ಎಂದರೆ ನೆನಪಾಗುವುದು ಅವನ ಕ್ರೂರತೆ.. ಇಂತಹ ಕ್ರೂರಿ ಮನುಷ್ಯ ಭಾರತದ ಸನಾತನ ಧರ್ಮದ ಬಗ್ಗೆ ಒಲವು ತೋರಿಸಿದ್ದರು ಎಂದರೆ ನಂಬಲು ಸಾಧ್ಯವೇ?!ನಿಜವಾಗಿಯೂ ಯಾರೂ ಊಹಿಸಲೂ ಸಾಧ್ಯವಿಲ್ಲ. ಅಂತಹ ಒಬ್ಬ ಕ್ರೂರಿ ಕೂಡಾ ಸನಾತನ ಭಾರತದ ಸ್ವಸ್ತಿಕ್ ಚಿಹ್ನೆಯನ್ನು ಬಳಸುತ್ತಾನೆ ಎಂದರೆ ಅದರ ಅರ್ಥ ಏನಿರಬಹುದು. ಅಷ್ಟೇ ಅಲ್ಲದೆ ನಾಝಿ ಜರ್ಮನಿ ಮತ್ತು ಪ್ರಾಚೀನ ಭಾರತಗಳ ಸಂಬಂಧವೊಂದು ಸ್ವಸ್ತಿಕ್ ಚಿಹ್ನೆಗಷ್ಟೇ ಸೀಮಿತವಾಗಿರಲಿಲ್ಲ. ಅದನ್ನು ಇನ್ನಷ್ಟು ಕೆದಕಿದಲ್ಲಿ ಅದೆಷ್ಟೋ ಅಚ್ಚರಿಯ ಸಂಗತಿಗಳು ನಮಗೆ ದೊರಕುತ್ತದೆ. ಹಿಟ್ಲರನು ಸಂಸ್ಕೃತ ವೈದಿಕ ಗ್ರಂಥಗಳಲ್ಲಿ ಭಾರೀ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಎಂಬುವುದೇ ಅನೇಕ ಜನರಿಗೆ ತಿಳಿದೇ ಇಲ್ಲ. ಅವರು ಮಾನವಕುಲದ ಅಗಾಧ ಶಕ್ತಿಯ ಜ್ಞಾನವನ್ನು ನಂಬಿದ್ದರು. ಹಿಟ್ಲರನು ಓರ್ವ ಪ್ರಸಿದ್ಧ ಭಾರತೀಯ ವಿದ್ವಾಂಸನೊಂದಿಗೆ ಸಂಬಂಧ ಹೊಂದಿದ್ದನು.

ಭಾರತ ಮತ್ತು ಯುರೋಪಿನ ಇತಿಹಾಸಕಾರರು, “ಆರ್ಯ ಜನಾಂಗ, ಪುರಾತನವಾದ ವೈದಿಕ ಹಿಂದೂ ಭಾರತದ ಪುರಾಣಗಳು ಜರ್ಮನಿಯ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು !” ಹಿಟ್ಲರ್ ನಿಗೆ ತೀರಾ ತಲೆ ಕೆಡಿಸಿದ್ದು ಭಾರತದ ಪುರಾಣಗಳು… ಭಾರತದ ಹಿಂದೂ ಸಂಪ್ರದಾಯಗಳನ್ನು ಒಪ್ಪುತ್ತಿದ್ದ ವ್ಯಕ್ತಿಯಾದ ಹಿಟ್ಲರ್ ಅವತ್ತಿನ ಕಾಲದ ಸೂಕ್ಷ್ಮತೆಗಳಿಲ್ಲದ ಸರ್ವಾಧಿಕಾರಿಯಾಗಿ ಹೋಗಿದ್ದ! ತೀರಾ ಕ್ರೂರತೆಗೆ ಬಿದ್ದ ಹಿಟ್ಲರ್ ಅದೆಷ್ಟೋ ಲಕ್ಷ ಯಹೂದಿಗಳ ಸಾವಿಗೆ ಮುನ್ನುಡಿಯಿಟ್ಟದಲ್ಲದೇ, ಹತ್ಯಾಕಾಂಡದ ಅಧ್ಯಾಯವೊಂದು ಜರ್ಮನಿಯಲ್ಲಿ ಪ್ರಾರಂಭವಾಗಲು ಪ್ರಮುಖ ಕಾರಣನೂ ಆಗಿದ್ದ…

ಎರಡನೇ ಜಾಗತಿಕ ಯುದ್ಧದಲ್ಲಿ ಜರ್ಮನ್ ಉಪಯೋಗಿಸಿದ್ದ ಕ್ಷಿಪಣಿಗಳಿಗೆ ಸನಾತನ ಭಾರತದಲ್ಲಿ ಮೊದಲೇ ಕಂಡುಹಿಡಿದು ವೇದಗಳಲ್ಲಿ ಉಲ್ಲೇಖವಾದ ತಂತ್ರಜ್ಞಾನ ಬಳಸಲಾಗಿತ್ತು. ಆ ತಂತ್ರಜ್ಞಾನವನ್ನು ಅಳವಡಿಸುವ ಸಲುವಾಗಿ ಸರ್ವಾಧಿಕಾರಿ ಹಿಟ್ಲರ್ 1938ರಲ್ಲಿ ಯಜುರ್ವೇದ ಮತ್ತು ಅಥರ್ವ ವೇದಗಳಲ್ಲಿನ ಸಂಸ್ಕೃತವನ್ನು ಡೀಕೋಡ್ ಮಾಡಲು ಜರ್ಮನ್ನರಿಗೆ ಆದೇಶ ಕೊಟ್ಟನು. ಇದಕ್ಕಾಗಿ ಜರ್ಮನಿಯವರು ಪ್ರಾಚೀನ ಭಾರತದ ವಿಷಯಗಳ ಬಗ್ಗೆ ಕುತೂಹಲ ಮೂಡಿಸಿಕೊಂಡು, ಒಂದಷ್ಟು ಸಂಸ್ಕೃತದ ದಾಖಲೆಗಳನ್ನು ತೆಗೆದುಕೊಂಡು, ಭಾರತದ ಪರ್ಯಟನೆಗೆ ಬಂದಿದ್ದರು. ಬಂದ ಉದ್ದೇಶವಿಷ್ಟೇ ಯಜುರ್ವೇದ ಮತ್ತು ಅಥರ್ವವೇದಗಳಲ್ಲಿ ಉಲ್ಲೇಖವಾದ ಸಂಸ್ಕೃತವನ್ನು ತಿಳಿದುಕೊಂಡು ಅಲ್ಲಿನ ತಂತ್ರಜ್ಞಾನವನ್ನು ಬಳಸಿಕೊಂಡು ಕ್ಷಿಪಣಿಗಳನ್ನು ತಯಾರು ಮಾಡುವ ಮಹಾದಾಸೆಯನ್ನು ಹೊಂದಿದ್ದರು.

ಹಿಂದೂ ಧರ್ಮದ ಮೂಲವಾದ ವೇದ ಗ್ರಂಥಗಳ ಮೇಲೆ ತೀರಾ ಎನ್ನುವಷ್ಟು ಅಧ್ಯಯನಕ್ಕಿಳಿದಿದ್ದ ಹಿಟ್ಲರ್ “ವೇದಗಳಲ್ಲಿದ್ದ ಮಾನವ ಕುಲಕ್ಕೆ ಅಗತ್ಯವಿದ್ದಂತಹ ಜ್ಞಾನದ ಅಗಾಧ ಶಕ್ತಿಯೊಂದರ ಜಾಡು ಹಿಡಿದಿದ್ದ!” ಆದರೆ, ಸಂಸ್ಕೃತ ದ ವ್ಯಾಕರಣಗಳನ್ನು ಮತ್ತು, ಶಬ್ದಗಳನ್ನು ಬಿಡಿಸುವುದು, ಅರ್ಥೈಸುವುದು ಅಷ್ಟು ಸುಲಭವಾಗಿರದ ಕಾರಣ, ಹಿಟ್ಲರ್ ಭಾರತೀಯ ಸಂಸ್ಕೃತ ವಿದ್ವಾಂಸರ ಜೊತೆ ಸಂಪರ್ಕ ಬೆಳೆಸಲು ಪ್ರಾರಂಭಿಸಿದ್ದ! ಆತನ ವೇದ ಶಾಸ್ತ್ರಗಳೆಡಗಿನ ಆಸಕ್ತಿ ಗಾಢವಾದಂತೆ ಸಂಸ್ಕೃತ ವಿದ್ವಾಂಸರನ್ನು ಜರ್ಮನಿಗೇ ಕರೆಸಿಕೊಳ್ಳುವಷ್ಟರ ಮಟ್ಟಿಗಿತ್ತೆಂದರೆ ಅದಕ್ಕೆ ಬಲವಾದ ಕಾರಣವೂ ಇತ್ತು!

ಹಿಟ್ಲರ್ ನ ಈ ವೇದಗಳ ಕುತೂಹಲವೊಂದು, ಅವತ್ತಿನ ಭಾರತದಲ್ಲಿ ಪ್ರಖ್ಯಾತ ಸಂಸ್ಕೃತ ವಿದ್ವಾಂಸರಾಗಿದ್ದ ಆಂಧ್ರ ಪ್ರದೇಶದ “ಬ್ರಹ್ಮಶ್ರೀ ದಂಡಿಭಟ್ಲ ವಿಶ್ವನಾಥ ಶಾಸ್ತ್ರಿ” ಯವರಲ್ಲಿಗೆ ಕೊಂಡೊಯ್ದಿತ್ತು. 1938 ರಲ್ಲಿ, ರಾಜಮಹೇಂದರವರಮ್ ನ ವಿದ್ವಾಂಸರು ಬ್ರಹ್ಮಶ್ರೀಯವರನ್ನು ಜರ್ಮನಿಯ ವಿಜ್ಞಾನಿಗಳು ಆಹ್ವಾನಿಸಿದ್ದರು. ಜಾಗತಿಕ ಯುದ್ಧದಲ್ಲಿ ಬಳಸಲಾದ ಕ್ಷಿಪಣಿ ತಂತ್ರಜ್ಞಾನಕ್ಕೆ ಪುರಾತನ ಭಾರತದಲ್ಲಿ ಬಳಸಲಾಗಿದ್ದ ರಹಸ್ಯ ಮಂತ್ರಗಳನ್ನು “ಅರ್ಥೈಸುವುದಕ್ಕೆ ಕೇಳಿಕೊಂಡಿದ್ದರು. ಭಾರತದ ಪುರಾಣಗಳಲ್ಲಿ ಉಲ್ಲೇಖವಾಗಿದ್ದಂತಹ, ಇಡೀ ಮನುಕುಲವನ್ನೇ ನಾಶ ಮಾಡಬಲ್ಲಂತಹ ಶಸ್ತ್ರಾಸ್ತ್ರಗಳು ವೇದಗಳಲ್ಲಿತ್ತು! ಅದೆಷ್ಟೋ ರಹಸ್ಯ ಮಂತ್ರಗಳಲ್ಲಿ ಹೇಗೆ ಶಸ್ತ್ರಾಸ್ತ್ರಗಳನ್ನು ಬಳಸಬಹುದು ಎಂಬ ಸಂಪೂರ್ಣ ಮಾಹಿತಿ ಕೂಡಾ ವೇದಕಾಲದ ಗ್ರಂಥಗಳಲ್ಲಿದ್ದದ್ದು ಹಿಟ್ಲರ್ ನಿಗೆ ತಲೆ ಕೆಡಿಸಿತ್ತು! ಇದೊಂದೇ ಕಾರಣಕ್ಕೆ, ಸರ್ವಾಧಿಕಾರಿಯಾಗಿದ್ದ ಹಿಟ್ಲರ್ ಭಾರತದ ಸಂಸ್ಕೃತ ವಿದ್ವಾಂಸರ ಸಂಪರ್ಕ ಸಾಧಿಸತೊಡಗಿದ್ದ!

ಅದರಲ್ಲೂ, ವಿಶ್ವನಾಥ ಶಾಸ್ತ್ರಿಗಳು ತರ್ಕ, ವ್ಯಾಕರಣ ಮತ್ತು ಮೀಮಾಂಸವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ಪಾಂಡಿತ್ಯ ಗಳಿಸಿದ್ದರು! ಅವರು ಸಂಪೂರ್ಣ ಯಜುರ್ವೇದ ಕರ್ಮಕಾಂಡ ಭಾಗ ಮತ್ತು ಅಥರ್ವ ವೇದದ ಮಂತ್ರ ಪ್ರಯೋಗ ಭಾಗದಲ್ಲಿ ಪಾಂಡಿತ್ಯ ಗಳಿಸಿದ್ದಂತಹವರು! ಅದಲ್ಲದೇ, ನಾಝಿಗಳು ತಮ್ಮ ವಿ-8 ರಾಕೆಟ್ ” ಬಜ್ ಬಾಂಬು”ಗಳಿಗೆ ಹೊಸದಾದ ರೂಪು ರೇಷೆ ನೀಡಿದ್ದರು! ಜೆಟ್ ಎಂಜಿನ್ ಗಳನ್ನು ಅಭಿವೃದ್ಧಿಪಡಿಸಿದ್ದ ಹಿಟ್ಲರ್ ನ ನಾಝಿ ಸಿಬ್ಬಂದಿಗಳು ಪ್ರಾಚೀನ ಭಾರತದ ಮತ್ತು ಟಿಬೆಟ್ ನ ಬಗ್ಗೆ ಅಗಾಧವಾಗಿ ಅಧ್ಯಯನ ಮಾಡಿದ್ದು ಇವೇ ಕಾರಣಗಳಿಗೋಸ್ಕರ! 1930 ರ ನಂತರ, ಜರ್ಮನಿಯ ಒಂದಷ್ಟು ಸಿಬ್ಬಂದಿಗಳು ಈ ಎರಡೂ ರಾಷ್ಟ್ರಗಳಿಗೆ ವರ್ಷಕ್ಕೊಮ್ಮೆ ಬರುತ್ತಿದ್ದರು!! ಕೆಲವು ಸಾಕ್ಷ್ಯಗಳನ್ನು ಸಂಗ್ರಹಿಸುವುದಕ್ಕೋ ಅಥವಾ, ವೈಜ್ಞಾನಿಕ ಕ್ಷೇತ್ರಕ್ಕೆ ಬೇಕಾದಂತಹ ಮಾಹಿತಿ ಪಡೆಯುವುದಕ್ಕೋ, ಒಟ್ಟಾರೆಯಾಗಿ ಭಾರತದೆಡೆಗಿನ ಸಂಪರ್ಕ ಜಾಸ್ತಿಯಾಗಿತ್ತು.

ಈ ಸಿದ್ದಾಂತಕ್ಕೆ ಪೂರಕವಾಗಿ ಹಲವಾರು ಸಂಪಾದಕೀಯ ತುಣುಕುಗಳನ್ನು ಸಂಕ್ಷಿಪ್ತ ವಿವರಣೆಯೊಂದಿಗೆ ಒಟ್ಟುಗೂಡಿಸಲಾಯಿತು. ಎಲ್ಲವೂ ತಯಾರಾದ ನಂತರ, ಮುನಿಚ್ ವಿಶ್ವವಿದ್ಯಾ ನಿಲಯದಲ್ಲಿ ದ್ದ ಜರ್ಮನ್ ವಿಜ್ಞಾನಿಗಳು ಭಾರತೀಯ ಸಂಸ್ಕೃತ ವಿದ್ವಾಂಸರನ್ನು ಆಹ್ವಾನಿಸಿದ್ದರು. ಸಂಸ್ಕೃತ ವಿದ್ವಾಂಸರ ಪಟ್ಟಿಯಲ್ಲಿ ಬ್ರಹ್ಮಶ್ರೀಯವರ ಹೆಸರೂ ಇತ್ತು! ಆದರೆ, ಯಾವತ್ತು ಹಿಟ್ಲರ್ ಬ್ರಹ್ಮಶ್ರೀಯವರ ಬಗ್ಗೆ ಕೇಳಲ್ಪಟ್ಟನೋ, ಅವರ ಅಧ್ಯಯನ ಪ್ರಾಕಾರಗಳು ಬಹುತೇಕ ಅದಾಗಲೇ ಆಕರ್ಷಿಸಿತ್ತು ಹಿಟ್ಲರ್ ನನ್ನು ತಕ್ಷಣವೇ, ಮ್ಯುನಿಚ್ ವಿಶ್ವ ವಿದ್ಯಾನಿಲಯದಿಂದ ಬ್ರಹ್ಮಶ್ರೀಯವರನ್ನು ಆಹ್ವಾನಿಸಿದ ಹಿಟ್ಲರ್ ತನ್ನ ಘನತೆಗೆ ತಕ್ಕುದಾಗಿಯೇ ನಡೆದುಕೊಂಡಿದ್ದ! ಸಂಸ್ಕೃತ ಇಲಾಖೆಯಲ್ಲಿ ಗೌರವಾನ್ವಿತ ಸ್ಥಾನವನ್ನು ಅಲಂಕರಿಸಿದ ಬ್ರಹ್ಮಶ್ರೀ ಜಾಗತಿಕ ಯುದ್ಧದಲ್ಲಿ ಹಿಟ್ಲರ್ ನ ಸೇನೆಗೆ ಬಹುದೊಡ್ಡ ಕೊಡುಗೆ ನೀಡಿದರು. ಇವತ್ತಿಗೂ ಕೂಡಾ, ಬ್ರಹ್ಮಶ್ರೀ ವಿಶ್ವನಾಥ ಶಾಸ್ತ್ರೀಯವರ ದೊಡ್ಡ ಭಾವಚಿತ್ರವೊಂದನ್ನು ಜರ್ಮನಿಯ ಫ್ರಾಂಕ್ಫರ್ಟ್ ವಿಶ್ವ ವಿದ್ಯಾನಿಲಯದ ಗೋಡೆಯ ಮೇಲೆ ಗೌರವಾರ್ಥವಾಗಿ ತೂಗು ಹಾಕಲಾಗಿದೆ! ಇವತ್ತಿಗೂ, ಭಾರತದ ಸಂಸ್ಕೃತ ವಿದ್ವಾಂಸರಿಗೆ ಜರ್ಮನಿಯಲ್ಲಿರುವಷ್ಟು ಬೆಲೆ ಬಹುಷಃ ಭಾರತದಲ್ಲಿಯೂ ಇರಲು ಸಾಧ್ಯವಿಲ್ಲ ಅಂತಸುತ್ತದೆ.

ಆ ಶ್ರೇಷ್ಠ ವ್ಯಕ್ತಿ ಆಂಧ್ರಪ್ರದೇಶದ ಮಹಾನ್ ವ್ಯಾಕರಣ ಶಾಸ್ತ್ರಜ್ಞ ಹಾಗೂ ವೇದ ಪಂಡಿತರಾಗಿದ್ದಂತವರು. ವಿಶ್ವನಾಥ ಶಾಸ್ತ್ರೀಯವರು ತರ್ಕವನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಹಾಗೆಯೇ ವ್ಯಾಕರಣ, ಮೀಮಾಂಸದ ಆಳವಾದ ಅಧ್ಯಯನವೂ ಮಾಡಿದ್ದರು. ಇಡೀ ಯಜುರ್ವೇದದ ಬೇರು ಸಮೇತ ಎಲ್ಲವನ್ನು ವಿಶ್ವನಾಥ ಶಾಸ್ತ್ರಿಯವರು ಅರಿದು ಕುಡಿದಿದ್ದರು. ವಿಶ್ವನಾಥ ಶಾಸ್ತ್ರಿಯವರ ಮೇಧಾವಿತನಕ್ಕೆ, ಜರ್ಮನಿನಲ್ಲಿ ವೇದಗಳಲ್ಲಿನ ಸಂಸ್ಕೃತವನ್ನು ಡೀಕೋಡ್ ಮಾಡಿ ಕ್ಷಿಪಣಿ ತಯಾರಿಯಾಗುವುದಕ್ಕೆ ಕಾರಣರಾದ ನಮ್ಮ ಭಾರತೀಯ ವಿಶ್ವನಾಥ ಶಾಸ್ತ್ರಿಯವರ ಫೋಟೊವನ್ನು ಜರ್ಮನ್ನಿನ ಫ್ರಾಂಕ್ ಫರ್ಟ್ ವಿಶ್ವವಿದ್ಯಾಲಯದಲ್ಲಿ ಹಾಕಿದ್ದಾರೆ.

ಪೈಥಾಗೋರಸ್ ಪ್ರಮೇಯವನ್ನು ಕಂಡುಹಿಡಿಯವ ಮೊದಲೇ ಆ ಪ್ರಮೇಯವನ್ನು ಪ್ರಾಚೀನ ಭಾರತದ ರೇಖಾ ಗಣಿತಜ್ಞ ಕಂಡುಹಿಡಿದಿದ್ದ. ಇಲ್ಲಿ ಪ್ಲಾಸ್ಟಿಕ್ ಸರ್ಜರಿಗಳು ನಡೆದಿದ್ದವು. ಪ್ಲಾಸ್ಟಿಕ್ ಸರ್ಜರಿ ಕುರಿತು ಸಮರ್ಪಕ ಮಾಹಿತಿ ತಿಳಿದಿದ್ದ ಪ್ರಾಚೀನ ಭಾರತದ ಶ್ರೇಷ್ಠ ಶಸ್ತ್ರಚಿಕಿತ್ಸಕ ಸುಶ್ರುತ. ಇಡೀ ಜಗತ್ತು ತಾನೇನೆಂದು ತಿಳಿಯುವ ಮುನ್ನವೇ ಭಾರತದಲ್ಲಿ ವಿಶ್ವವಿಖ್ಯಾತ ವಿಶ್ವವಿದ್ಯಾಲಯಗಳಿದ್ದವು. ಅವುಗಳಲ್ಲಿ ಮೊದಲನೆಯದು ತಕ್ಷಶಿಲಾ ವಿಶ್ವವಿದ್ಯಾಲಯ 700 ಕ್ರಿ.ಪೂ.ದಲ್ಲೇ ಈ ವಿಶ್ವ ವಿದ್ಯಾಲಯ ತಲೆ ಎತ್ತಿ ನಿಂತಿತ್ತು. ಇಲ್ಲಿ ಜಗತ್ತಿನ ಎದೆಷ್ಟೋ ರಾಷ್ಟ್ರದ ಜನ ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದರು. ಜಗತ್ತಿಗೆ ಸೊನ್ನೆಯನ್ನು ಯನ್ನು ಭಾರತವೇ ಕೊಟ್ಟದ್ದು. ನಾವು ಸೊನ್ನೆಯನ್ನು ಈ ಜಗತ್ತಿಗೆ ಕೊಡದಿದ್ದರೆ ಇಷ್ಟು ಮಟ್ಟದ ಆರ್ಥಿಕ ಕ್ರಾಂತಿ ನಡೆಯುತ್ತಿರಲಿಲ್ಲ ಎಂಬುವುದು ಇಡೀ ಜಗತ್ತಿಗೆ ತಿಳಿದಿರುವ ವಿಚಾರ…

ಭಾರತೀಯರು ಎಲ್ಲಿ ಎಡವಿದ್ದು ಎಂದರೆ ಎಲ್ಲಾ ವಿದ್ಯೆಯೂ ಭಾರತೀಯರಿಗೆ ತಿಳಿದಿತ್ತು!! ಅದಲ್ಲದೆ ಎಲ್ಲವನ್ನೂ ಆವಿಷ್ಕಾರ ಮಾಡಿದ್ದು ಭಾರತೀಯರೇ.. ಅದರೆ ತಾನೂ ಮಾಡಿದ್ದಕ್ಕೆ ಯಾವ ಪೇಟೆಂಟೂ ಮಾಡುತ್ತಿರಲಿಲ್ಲ!! ಆದರೆ ಆದರೆ ವಿದೇಶಿಯರು ಭಾರತದ ವಿದ್ಯೆಯನ್ನೆಲ್ಲಾ ಕದ್ದು ನಾವು ಮಾಡಿದ್ದು ಅಂತಾ ಪೇಟೆಂಟ್ ಮಾಡಿಕೊಂಡು ಜಗತ್ತಿಗೆ ನಾವೇ ಶ್ರೇಷ್ಟರು ಎಂದು ಸಾರಿ ಬಿಟ್ಟರು!! ಜರ್ಮನಿಯಲ್ಲಿ ಕ್ಷಿಪಣಿ ತಯಾರಿಕೆಗೆ ಸಹಾಯ ಮಾಡಿದ ನಮ್ಮ ಹೆಮ್ಮೆಯ ವಿಶ್ವನಾಥ ಶಾಸ್ತ್ರಿಯವರು ಫೆÇ?ಟೋ ಇಂದಿಗೂ ಅಲ್ಲಿ ನಾವು ಕಾಣಬಹುದು… ನಿಜಕ್ಕೂ ನಾವು ಹೆಮ್ಮೆ ಪಡಬೇಕು..

Tags

Related Articles

FOR DAILY ALERTS
Close