2014ರ ಲೋಕಸಭಾ ಚುನಾವಣೆಯ ಶಾಕ್‍ನಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಇನ್ನೂ ಹೊರ ಬಂದಿಲ್ಲ. 10 ದಶಕದ ನಂತರ ನೆಹರೂ ಕುಟುಂಬದ ಕುಡಿಯೊಬ್ಬ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಎನ್ನುವ ಉದ್ಧೇಶದಿಂದ ಹಠಕ್ಕೆ ಬಂದ್ದಂತೆ ಕೆಲಸ ಮಾಡಿದ್ದರೂ ಕೂಡಾ ಭಾರತದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ 40 ಅಂಕಿಯನ್ನು ದಾಟಲಾಗದೆ ಮಖಾಡೆ ಮಲಗಿತ್ತು. ದೇಶದಲ್ಲಿ ಮೋದಿ ಎಂಬ ತ್ಸುನಾಮಿ ಅಲೆ ಅಲೆಯಾಗಿ ಅಪ್ಪಳಿಸಿತ್ತು. ಮಿತ್ರ ಪಕ್ಷಗಳ ಸಹಾಯವೇ ಇಲ್ಲದೆ ಭಾರತೀಯ ಜನತಾ ಪಕ್ಷವೊಂದೇ ಅಧಿಕಾರ ಹಿಡಿಯುವಂತಹಾ ಸಾಮಾರ್ಥ್ಯ ಕ್ಕೆ ಬಂದು ಬಿಟ್ಟಿತ್ತು.
ಯಾವಾಗ ಭಾರತದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಆಯ್ಕೆಯಾಗಿ ಆಡಳಿತ ನಡೆಸಲು ಆರಂಭಿಸಿದರೋ ಅಂದಿನಿಂದ ದೇಶದಲ್ಲಿದ್ದ ಎಲ್ಲಾ ವಿರೋಧಿಗಳೂ ಒಂದಾಗುವತ್ತ ಹೆಜ್ಜೆ ಹಾಕುತ್ತಿದ್ದರು. ದೇಶದಲ್ಲಿರುವ ಬಹುತೇಕ ಎಲ್ಲಾ ಪ್ರಾದೇಶಿಕ ಪಕ್ಷಗಳು, ಬುದ್ಧಿಜೀವಿಗಳು, ಪ್ರಗತಿ ಪರ ಚಿಂತಕರು ಎಂಬಂತೆ ಒಂದು ಗೂಡಲು ಆರಂಭಿಸಿದರು. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ದಿನದಿಂದ ದಿನಕ್ಕೆ ಅವರ ಜನಪ್ರಿಯತೆ ಹೆಚ್ಚಾಗುತ್ತಲೇ ಹೋಯಿತು. ನಂತರ ನಡೆದ ಬಹತೇಕ ಎಲ್ಲಾ ರಾಜ್ಯಗಳಲ್ಲೂ ಭಾರತೀಯ ಜನತಾ ಪಕ್ಷ ಭರ್ಜರಿಯಾಗಿ ಜಯಭೇರಿ ಭಾರಿಸುತ್ತಲೇ ಹೋಯಿತು
.
ನೋಡ ನೋಡುತ್ತಲೇ 22 ರಾಜ್ಯಗಳಲ್ಲಿ ಕಮಲ ಪತಾಕೆ ಹಾರಿಯೇ ಬಿಟ್ಟಿತ್ತು. ಮತ್ತೆ ಪ್ರಧಾನ ಮಂತ್ರಿ ಆಗಬೇಕೆಂಬ ಕನಸು ಕಟ್ಟಿಕೊಂಡಿದ್ದ ರಾಹುಲ್ ಗಾಂಧಿಯ ಪ್ರಯತ್ನಗಳು ಒಂದೊಂದೇ ವಿಫಲವಾಗುತ್ತಲೇ ಬಂದಿತ್ತು. ಕಾಂಗ್ರೆಸ್ ಪಕ್ಷ ಕಂಡು ಕೇಳರಿಯದ ಹೀನಾಯ ಸೋಲನ್ನು ಅನುಭವಿಸಿತ್ತು. ಇತಿಹಾಸದಲ್ಲೇ ಮೊದಲ ಬಾರಿಗೆ ಕೇವಲ ಒಂದೇ ಒಂದು ರಾಜ್ಯದಲ್ಲಿ ಕೂಡಾ ಸಂಪೂರ್ಣ ಬಹುಮತದಿಂದ ಅಧಿಕಾರ ನಡೆಸುವಲ್ಲಿ ವಿಫಲವಾಗಿತ್ತು.
ನಂತರ ಕಂಡಿದ್ದೇ ತೃತೀಯ ರಂಗದ ಕನಸು. ಭಾರತದಲ್ಲಿ ಮೋದಿಯೊಬ್ಬನನ್ನು ಸೋಲಿಸಲು ಉಳಿದೆಲ್ಲಾ ಪಕ್ಷಗಳಿಗೂ ಕಾಂಗ್ರೆಸ್ ಪಕ್ಷ ಕರೆ ನೀಡಿತ್ತು. ಹೀಗಾಗಿ ಮೋದಿಯನ್ನು ಸೋಲಿಸಲು ಬಿಜೆಪಿಯಿಂದ ಸೋಲುಂಡ ಪಕ್ಷಗಳೆಲ್ಲಾ ಒಂದು ಗೂಡಿದವು. ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ, ಜತ್ಯಾತೀತ ಜನತಾ ದಳ, ಸಿಪಿಐ, ಕಾಂಗ್ರೆಸ್, ಆಮ್ ಆದ್ಮೀ,ಟಿಡಿಪಿ ಸಹಿತ ಅನೇಕ ಪಕ್ಷಗಳು ಮುಂದಿನ ಲೋಕ ಸಭಾ ಚುನಾವಂಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಭಾರತೀಯ ಜನತಾ ಪಕ್ಷವನ್ನು ಸೋಲಿಸಲೇ ಬೇಕು ಎಂದು ಜಿದ್ದಿಗೆ ಬಿದ್ದು ಹೋರಾಟ ನಡೆಸಿದ್ದರು.
ಮಹಾ ಮೈತ್ರಿಯಲ್ಲಿ ಮಹಾ ಬಿರುಕು?
ಆದರೆ ಇದೀಗ ತೃತೀಯ ರಂಗದ ಮೈತ್ರಿ ಕೂಟದಲ್ಲಿ ಬಿರುಕು ಮೂಡಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳೂ ಒಟ್ಟಾಗಿ ಸೇರಿ ಚುನಾವಣೆಯನ್ನು ಎದುರಿಸಿ ತೃತೀಯ ರಂಗವನ್ನು ಅಧಿಕಾರಕ್ಕೆ ತಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಪ್ರಧಾನ ಮಂತ್ರಿ ಮಾಡಬೇಕೆಂದುಯ ಕನಸು ಕಂಡಿದ್ದ ವಿರೋಧ ಪಕ್ಷಗಳ ಆಸೆಗೆ ತಣ್ಣೀರು ಎರೆಚಿದೆ.
ಮಾಜಿ ರಾಷ್ಟ್ರಪತಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಪ್ರಣಬ್ ಮುಖರ್ಜಿಯವರು ಇತ್ತೀಚೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಕಾಂಗ್ರೆಸ್ ಪಕ್ಷದ ದೋಸ್ತಿಯಿಂದ ದೂರ ಸರಿಯುವುದಾಗಿ ಎಐಎಂಐಎಂ ಪಕ್ಷದ ನಾಯಕ ಓವೈಸಿ ಹೇಳಿದ್ದರೆ ಮತ್ತೊಂದು ಕಡೆ ದೆಹಲಿಯನ್ನು ಪ್ರತ್ಯೇಕವಾಗಿ ನಮ್ಮ ಸುಪರ್ಧಿಗೇ ನೀಡಿದ್ರೆ ನಾವು ಭಾರತೀಯ ಜನತಾ ಪಕ್ಷದ ಪರವಾಗಿ ಪ್ರಚಾರ ಮಾಡುತ್ತೇವೆ ಎಂದು ಹೇಳಿದೆ.
ಈ ಹೇಳಿಕೆಯು ಕಾಂಗ್ರೆಸ್‍ಗೆ ಆಘಾತ ನೀಡುವಷ್ಟರ ಹೊತ್ತಿಗೆ ಇತ್ತ ಮತ್ತೊಂದು ಆಘಾತವನ್ನು ನೀಡಿದೆ. ಬಹುಜನ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಕಾಂಗ್ರೆಸ್‍ಗೆ ಹೊಡೆತ ನೀಡುವ ಹೇಳಿಕೆಯೊಂದನ್ನು ನೀಡಿದ್ದಾರೆ. ಬಿಎಸ್‍ಪಿ ಪಕ್ಷದ ರಾಜ್ಯಾಧ್ಯಕ್ಷ ನರ್ಮದಾ ಪ್ರಸಾದ್ ಈ ಬಗ್ಗೆ ಬಹಿರಂಗತ ಹೇಳಿಕಯೊಂದನ್ನು ನೀಡಿದ್ದು ತೃತೀಯ ರಂಗದ ಯೋಚನೆ ನಮ್ಮ ಪಕ್ಷಕ್ಕೆ ಇಲ್ಲ ಎಂದು ಹೇಳಿದ್ದಾರೆ. “ನಮ್ಮ ನಡುವೆ ಮೈತ್ರಿಯ ಯಾವ ಪ್ರಸ್ತಾಪವೂ ಇಲ್ಲ. ಮುಂಬರುವ ಎಲ್ಲಾ ಚುನಾವಣೆಗಳನ್ನೂ ನಾವು ಒಬ್ಬಂಟಿಯಾಗಿಯೇ ಎದುರಿಸುತ್ತೇವೆ. ಮಧ್ಯಪ್ರದೇಶ ವಿಧಾನ ಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ನಾವು ಸ್ಪರ್ಧಿಸುತ್ತೇವೆ. ಯಾವುದೇ ರಂಗದ ವಿಚಾರವೂ ಈವರೆಗೆ ಚರ್ಚೆ ನಡೆದಿಲ್ಲ. ಮಾತ್ರವಲ್ಲದೆ ಮುಂಬರುವ ಮಧ್ಯಪ್ರದೇಶದ ವಿಧಾನ ಸಭಾ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಜೊತರೆ ಮೈತ್ರಿ ಮಾಡಿಕೊಳ್ಳುವುದಿಲ್ಲ” ಎಂದು ಬಹುಜನ ಸಮಾಜವಾದಿ ಪಕ್ಷದ ಅಧ್ಯಕ್ಷ ನರ್ಮದಾ ಪ್ರಸಾದ್ ಅಹಿರ್ವಾರ್ ತಿಳಿಸಿದ್ದಾರೆ.
ಇದು ಪ್ರಧಾನಿ ಆಗಬೇಕೆಂದಿದ್ದೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಗೆ ಭಾರೀ ನಿರಾಸೆಯನ್ನು ತಂದಿಟ್ಟಿದೆ. ಕಳೆದ ಮಧ್ಯಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 165 ಹಾಗೂ ಕಾಂಗ್ರೆಸ್ 58 ಮತ್ತು ಬಿಎಸ್‍ಪಿ 4 ಸ್ಥಾನಗಳನ್ನು ಪಡೆದಿತ್ತು. ಈ ಬಾರಿ ಎಲ್ಲಾ ಪಕ್ಷಗಳು ಒಗ್ಗಟ್ಟಾಗಿ ಚುನಾವಣೆ ಎದುರಿಸುವ ಪ್ಲಾನ್ ನಡೆಸಿದ್ದು, ಇದು ಆರಂಭದಲ್ಲೇ ಠುಸ್ ಪಟಾಕಿಯಾಗಿದೆ. ಈ ಮೂರು ಪ್ರಮುಖ ಪಕ್ಷಗಳ ನಡೆ ಈಗ ಕಾಂಗ್ರೆಸ್ ಪ್ರಧಾನ ಮಂತ್ರಿ ಅಭ್ಯರ್ಥಿಗೆ ಕಗ್ಗಂಟಾಗಿ ಹೋಗಿದೆ.
ಮೂಲ : http://karunaadavaani.com/index.php/2018/06/18/modivsrestthirdwicket/
-ಸುನಿಲ್ ಪಣಪಿಲ