ಅಂಕಣಪ್ರಚಲಿತ

4ನೇ ತರಗತಿಯಲ್ಲಿ ಹಿಂದೂವಿರೋಧಿ 12ನೆ ತರಗತಿಯಲ್ಲಿ ಜಿಹಾದ್ : ಇದು ಪಾಕಿಸ್ತಾನದ ಪಠ್ಯ!!

“1947 ಜೂನ್, ಜುಲೈ ತಿಂಗಳುಗಳಲ್ಲಿ ಭಾರತವು ಹೊತ್ತಿ ಉರಿಯುತ್ತಿತ್ತು. ದೆಹಲಿಯ ಇಂಪೀರಿಯಲ್ ಹೋಟೆಲಿನಲ್ಲಿ ನಡೆದ ಸಭೆಗೆ ಹೊರಟಿದ್ದ ಜಿನ್ನಾರ ಮೇಲೆ ಉದ್ರಿಕ್ತ ಮುಸಲ್ಮಾನರು ಕೈ ಮಾಡಿದ್ದರು. ಪಾಕಿಸ್ತಾನ ಅಂದರೆ ಏನರ್ಥ? ವೆಂಬುದನ್ನು ಕಿಂಚಿತ್ತೂ ಅರಿಯದ ಮುಸ್ಲಿಮರಿಗೆ ದೇಶಾದ್ಯಂತ ಹತ್ತಿ ಉರಿಯಲಾರಂಭಿಸಿದ ವಿಸ್ಫೋಟಕ ಪರಿಸ್ಥಿತಿಯಿಂದಾಗಿ ಅದರ ಅಲ್ಪಸ್ವಲ್ಪ ಕಲ್ಪನೆ ಬರತೊಡಗಿತ್ತು. ಸಿಂಧ್, ಪಂಜಾಬ್ ಗಡಿನಾಡ ಪ್ರಾಂತಗಳ ಮುಸ್ಲಿಮರು ಈಗಾಗಲೇ ಅಧಿಪತಿಗಳಾಗಿಬಿಟ್ಟಿದ್ದಾರೆ; ಅವರಿಗೆ ಸ್ವಾತಂತ್ರ್ಯವೂ ದೊರಕುತ್ತದೆ. ಆದರೆ ಹಿಂದೂಸ್ಥಾನದಲ್ಲಿರುವ‌ ಮುಸಲ್ಮಾನರ ಗತಿಯೇನು? ಪಾಕಿಸ್ತಾನಕ್ಕೆ ಸೇರಲು ಸಾಧ್ಯವಿರದಿದ್ದ ಪ್ರದೇಶದಿಂದಲೇ ಆ ಬೇಡಿಕೆ ಏರುಕಂಠದಿಂದ ಹೊರಬಂದಿತ್ತು. ಆದರೆ ಆ ಮುಸ್ಲಿಮರು ಸ್ವತ: ಅಲ್ಲಿಗೆ ಹೋಗುವುದು ಅಸಾಧ್ಯವಾಗಿತ್ತು. ಇಲ್ಲಿರುವ ತಮ್ಮ ಆಸ್ತಿಪಾಸ್ತಿಯನ್ನೆಲ್ಲಾ ಬಿಟ್ಟು ಅಲ್ಲಿಗೆ ವಲಸೆ ಹೋದರೆ ಅಲ್ಲಿ ಏನು ದೊರಕೀತೆಂಬ ಖಾತರಿಯೂ ಇರಲಿಲ್ಲ. ಜಿನ್ನಾರು ಆಶ್ವಾಸನೆ ನೀಡಿದ್ದ ಪಾಕಿಸ್ತಾನ ಕುದುರೆಯು ಈಗ ಕತ್ತೆಯಾಗಿಬಿಟ್ಟಿತ್ತು. ಅದರ ಒದೆತದ ರುಚಿಯೂ ಅವರಿಗೆ ದೊರಕಲಾರಂಭವಾಗಿತ್ತು.

ನಮಗೆ ಪರಿಚಿತರಿದ್ದ ಹಳೆಯ ಮುಸ್ಲಿಮ್ ಲೀಗ್ ನ ಸದಸ್ಯರು ನಮಗೆ, ಲೀಗಿನೊಂದಿಗೆ ಏನಾದರೊಂದು ಒಡಂಬಡಿಕೆಗೆ ಬನ್ನಿ, ಇಲ್ಲವಾದರೆ ಬ್ರಿಟಿಷರು ತೆರಳುವ ಮುನ್ನ ದೇಶವನ್ನು ತುಂಡರಿಸುತ್ತಾರೆ – ಎಂದೂ ಹೇಳುತ್ತಿದ್ದರು. ಹಿಂದೂ-ಮುಸ್ಲಿಂ ಸಮಸ್ಯೆಗೆ ಪಾಕಿಸ್ತಾನ ನಿರ್ಮಾಣ ಪರಿಹಾರವಲ್ಲವೆಂಬುದು ಅವರಿಗೆ ಸ್ಪಷ್ಟವಾಗಿತ್ತು. ಪಾಕಿಸ್ತಾನದೊಳಗೆ ಸೇರುವ ಮುಸಲ್ಮಾನರಿಗೆ ದೇಶ ವಿಭಜನೆಯ‌ ದಿನವು ‘ಈದ್’ (ಸಂತೋಷದ ದಿನ) ವೆನಿಸಬಹುದು; ಆದರೆ ಮಿಕ್ಕ ಭಾರತದಲ್ಲಿ ಉಳಿಯುವರಿಗೆ ‘ಮೊಹರಂ'(ದು:ಖದ ದಿನ) ಆದೀತು.”

ಹೀಗೆಂದು ಹೇಳಿದವರು ಸ್ವತಂತ್ರ ಭಾರತ ಸರಕಾರದ ಪ್ರಥಮ ಮಂತ್ರಿ ಮಂಡಲದಲ್ಲಿನ ಸದಸ್ಯರಾಗಿದ್ದ ಎನ್.ವಿ. ಗಾಡ್ಗಿಳರು. ಬಹುಶ: ಮುಂದೆ ಆಗಬಹುದಾದ ಅನಾಹುತಗಳನ್ನು ಅವರು ಗ್ರಹಿಸಿದ್ದಿರಬಹುದು. ಆದರೆ ವಾಸ್ತವವಾಗಿ ಅವರು ನುಡಿದ ಮಾತುಗಳು ಇವತ್ತು ಅಕ್ಷರಶ: ಸತ್ಯವಾಗಿದೆ.

ಭಾರತ-ಪಾಕಿಸ್ತಾನ ವಿಭಜನೆಯಿಂದ ಕೇವಲ ಒಗ್ಗಟ್ಟು, ಸಾಮರಸ್ಯ ವಿಂಗಡನೆ ಆಗಿಲ್ಲ, ಬದಲಾಗಿ ಪರಸ್ಪರ ಸಂಬಂಧವನ್ನು ಮುಂದೆ ಮಾಡಲ ಶಕ್ಯವಲ್ಲವಂಬಂತೆ ದ್ವೇಷವನ್ನು ಬಿತ್ತುತ್ತಿದೆ. ಹಾಗೆ ಬಿಂಬಿಸುವುದಾದರೆ ಭಾರತವೇ ಪಾಕಿಸ್ತಾನಕ್ಕೆ ಜನ್ಮವನ್ನಿಟ್ಟ‌ ರಾಷ್ಟ್ರ. ಭರತಖಂಡಕ್ಕೆ ಮಾತೃಸ್ಥಾನವನ್ನಿಟ್ಟು ಪಾಕಿಸ್ತಾನ ಗೌರವಿಸಬೇಕಾಗಿತ್ತು. ತಮ್ಮ ದೇಶದ ಪ್ರಜೆಗಳಿಗೆ ಬ್ರಿಟಿಷರ ಕಪಿಮುಷ್ಟಿಯಿಂದ ರಾಷ್ಟ್ರವನ್ನು ಯಾವ ರೀತಿಯಲ್ಲಿ ಸ್ವಾತಂತ್ರ್ಯವನ್ನು ಪಡೆದೆವೆಂಬುದನ್ನು ಬೋಧಿಸಬೇಕಿತ್ತು. ಸರಿ. ಒಪ್ಪೋಣ. ಅದು ಮುಸಲ್ಮಾನ ರಾಷ್ಟ್ರ. ಸ್ವಾತಂತ್ರ್ಯ ಹೋರಾಟಗಾರರು ಹಿಂದೂಗಳಾಗಿದ್ದರು ಅನ್ನುವ ಭಾವನೆ ಅವರಲ್ಲಿರಬಹುದು. ಆದರೆ ಅಬ್ಹಾಸ್ ಅಲಿ, ಅಸಫ್ ಅಲಿ, ಖಾನ್ ಅಬ್ದುಲ್ ಗಫರ್ ಖಾನ್ ಮುಂತಾದ ವೀರಕಲಿಗಳೂ ಸ್ವಾತಂತ್ರ್ಯ‌ಪಡೆಯಲೋಸುಗವಾಗಿ ತಮ್ಮ ಪ್ರಾಣವನ್ನು ಮಾತೃಭೂಮಿಗೆ ಅರ್ಪಿಸಿದ್ದಾರೆ. ಕನಿಷ್ಠ ಪಕ್ಷ ಅವರ ಕುರಿತಾಗಿಯಾದರೂ ಹೇಳಿ ದೇಶಭಕ್ತಿಯ ಚಿಂತನೆಯನ್ನು ಮಕ್ಕಳಲ್ಲಿ ಬೆಳೆಸುವ ಪ್ರಯತ್ನ ಮಾಡಬಹುದಿತ್ತು. ಆದರೆ ಪ್ರಸ್ತುತ‌ ಅಲ್ಲಿ ಆಗುತ್ತಿರುವುದೇ ದ್ವೇಷದ‌ ಪಾಠ.

ಪಾಕಿಸ್ತಾನದ ಸರಕಾರೀ ಶಾಲೆಗಳಲ್ಲಿ 70% ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಲಾಗುತ್ತಿದೆ. ಅವರ ಪಠ್ಯಗಳ್ಳಲ್ಲಿ ಬೋಧಿಸಲಾಗುವ ವಿಚಾರಗಳನ್ನು‌ ತಿಳಿದರೆ ಗಾಬರಿ ಹಾಗೂ ಅಚ್ಚರಿಯಾಗುತ್ತದೆ ..

8-10 ಪ್ರಾಯದ 4 ಹಾಗೂ 5ನೇ ತರಗತಿಯ ‌ಮಕ್ಕಳಿಗೆ ಹಿಂದೂವಿರೋಧಿ ಹಾಗೂ ಸಿಖ್ ವಿರೋಧದ ಕುರಿತಾಗಿ ಪಾಠ, 12 ಪ್ರಾಯಕ್ಕೆ ತಲುಪಿದಾಗ ಅಂದರೆ 6 ನೆಯ ತರಗತಿಯಲ್ಲಿ ಕ್ರಿಶ್ಚಿಯನ್ ವಿರೋಧ, ಬ್ರಿಟಿಷ್ ವಿರೋಧ ಹಾಗೂ ಈರೋಪ್ ವಿರೋಧದ ಕುರಿತಾಗಿ, 9-10 ನೇ ತರಗತಿಗೆ ತಲುಪುವಾಗ ಜಿಹಾದಿನ ಪ್ರಾಮುಖ್ಯತೆಯ ಕುರಿತಾಗಿ ಪಾಕಿಸ್ತಾನದಲ್ಲಿ ಬೋಧಿಸಲಾಗುತ್ತಿದೆ.

ಪಾಪಿಸ್ತಾನದಲ್ಲಿ ಯಾವ ರೀತಿಯಾದ‌ ಪಠ್ಯಗಳನ್ನು ಬೋಧಿಸಲಾಗುತ್ತಿದೆ?

ತರಗತಿ :4. ಪಠ್ಯ : ಸಮಾಜವಿಜ್ಞಾನ

“ಸುಟ್ಲೆಜ್ ನದೀ ತಟದಲ್ಲಿದ್ದ ಮುಸಲ್ಮಾನರ ಪಟ್ಟಣಗಳನ್ನು ಸಿಖ್ಖರು ಧ್ವಂಸ ಮಾಡಿ, ಅಲ್ಲಿದ್ದ ಮಸೀದಿಗಳನ್ನು ಕೆಡವಿ ಗುರುದ್ವಾರಗಳನ್ನು ಸ್ಥಾಪಿಸಿದರು”. (ಪುಟ 80-81).

ತರಗತಿ 4. ಪಠ್ಯ : ಸಮಾಜವಿಜ್ಞಾನ

“ಪಾಕಿಸ್ತಾನದಲ್ಲಿದ್ದ ಹಿಂದೂ ಹಾಗೂ ಸಿಖ್ಖರಿಗೆ ಪುನ: ಭಾರತಕ್ಕೆ ಮರಳಲು ಸರ್ವ ರೀತಿಯ ಸೌಲಭ್ಯಗಳನ್ನು ಪಾಕಿಸ್ತಾನದ ಮುಸಲ್ಮಾನರು ಮಾಡಿದ್ದರು. ಆದರೆ ಭಾರತದ ಹಿಂದೂಗಳು ಅಲ್ಲಿದ್ದ ಮುಸಲ್ಮಾನರನ್ನು ದೋಚಿದರು, ಅವರ ಮೇಲೆ ದಾಳಿ ಮಾಡಿದರು. ಅದರ ಪರಿಣಾಮವಾಗಿ 1 ಕೋಟಿ ಮುಸಲ್ಮಾನರು ದಾರಿ ಮಧ್ಯದಲ್ಲಿ ತಮ್ಮ ಸ್ವಗೃಹಕ್ಕೆ‌ ಹೋಗಬೇಕಾದರೆ ಹುತಾತ್ಮರಾದರು” (ಪುಟ – 83)

ತರಗತಿ :5. ಪಠ್ಯ : ಸಮಾಜವಿಜ್ಞಾನ

“1965ರ ಯುದ್ಧದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಸೋತಾಗ ಭಾರತದ ಪ್ರಧಾನಿ ಪೂರ್ವ ಪಾಕಿಸ್ತಾನದ ಮುಸಲ್ಮಾನರು ಪಶ್ಚಿಮ ಪಾಕಿಸ್ತಾನದ ಮುಸಲ್ಮಾರನ್ನು ವಿರೋಧಿಸುವ ಹಾಗೆ ತಂತ್ರ ರೂಪಿಸಿದರು. ಅದಕ್ಕಾಗಿ ಪೂರ್ವ ಪಾಕಿಸ್ತಾನದಲ್ಲಿರುವ ಹಿಂದೂಗಳ ಸಹಾಯ ‌ಪಡೆದರು. ಅಂತಿಮವಾಗಿ ಡಿಸೆಂಬರ್ 1971ರಲ್ಲಿ ಪೂರ್ವ ಪಾಕಿಸ್ತಾನಕ್ಕೆ ದಾಳಿ ಮಾಡಿ 2 ಪಾಕಿಸ್ತಾನಕ್ಕಿದ್ದ ಸಂಬಂಧವನ್ನು ಕಡಿದು ಹಾಕಿದರು. ಪೂರ್ವ ಪಾಕಿಸ್ತಾನಕ್ಕೆ ಬಾಂಗ್ಲಾದೇಶ ಅನ್ನುವ ನಾಮವನ್ನಿಟ್ಟು ಸ್ವತಂತ್ರ ರಾಷ್ಟ್ರ ವೆಂದು ಘೋಷಿಸಿದರು.” (ಪುಟ – 123)

ತರಗತಿ 9-10. ಪಠ್ಯ : ಪಾಕಿಸ್ತಾನೀ ಅಧ್ಯಯನ

” ಪೂರ್ವ ಪಾಕಿಸ್ತಾನ ಹಿಂದೂಗಳ ಆಧೀನದಲ್ಲಿತ್ತು. ಭಾರತದ ನಿರ್ದೇಶನದಂತೆ ಬಾಂಗ್ಲಾದೇಶಿಯರಲ್ಲಿ ಪಾಕಿಸ್ತಾನೀಯರ ವಿರುದ್ಧ ವಿಷವನ್ನು ಬಿತ್ತಿ ವಿರೋಧಿಸುವಂತೆ ಮಾಡಲಾಯಿತು. ” (ಪುಟ – 53)

ತರಗತಿ 12 ಪಠ್ಯ : ಪಾಕಿಸ್ತಾನೀ ಅಧ್ಯಯನ

“ಇಸ್ಲಾಂ ನಲ್ಲಿ ಜಿಹಾದಿ ಕಾರ್ಯಕ್ಕೆ ಉನ್ನತ ಮಹತ್ವವನ್ನು ಕೊಡಲಾಗುತ್ತದೆ. ಸರ್ವರನ್ನೂ ಏಕಮಾತ್ರ ಭಗವಂತನಾದ‌ ಅಲ್ಲಾ ನನ್ನು ಪೂಜಿಸುವಂತೆ ಮಾಡುವುದು ಇದರ ಉದ್ದೇಶ. ಅದಕ್ಕೋಸ್ಕರ ತಮ್ಮ ಐಶ್ವರ್ಯ ಹಾಗೂ ಜೀವನ-ಜೀವವನ್ನು ಸಮರ್ಪಿಸಲು ತಯಾರಿರಬೇಕು.” (ಪುಟ – 28)

ಶಾಲಾ ಮಕ್ಕಳ ಮೇಲೆ ಇಂತಹ ಚಿಂತನೆಗಳನ್ನು ಚಿಕ್ಕಂದಿನಿಂದಲೇ ನೀಡಿರುವ ಕಾರಣ ಇವತ್ತು ಪಾಪಿಸ್ತಾನ ಯಾವ ರೀತಿಯಾಗಿ ವರ್ತಿಸುತ್ತಿದೆಯೆಂದು ‌ಕಾಣಬಹುದು. ದುರ್ದೈವದ ಸಂಗತಿಯೇನೆಂದರೆ ಭಾರತದಲ್ಲಿಯೂ ‌ಅಂತಹ ಚಿಂತನೆಯನ್ನೇ ಉಣಬಡಿಸಬೇಕೆಂದು ಕೆಲ ಮಹನೀಯರು ಮುಂದಾಗುತ್ತಿರುವುದು. ಬಹುಶ: ಇದಕ್ಕೆಲ್ಲಾ ಮುಕ್ತಾಯವೆಂದು ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಿದೆ.

– ವಸಿಷ್ಠ

Tags

Related Articles

Close