ಪ್ರಚಲಿತ

40 ಸಲ ಇರಿದು ಕೊಲೆ ಮಾಡಿದ್ದು ಅವಾರ್ಡ್ ವಾಪಸೀ ತಂಡಕ್ಕೆ ಅಸಹಿಷ್ಣು ಎಂದೆನಿಸಲಿಲ್ಲವೇ?

ಇತ್ತೀಚೆಗೆ ರಾಜೇಶ್ ಎಂಬುವವರನ್ನು ಬರ್ಬರವಾಗಿ ಹತ್ಯೆಗೈಯ್ಯಲಾಯಿತು. ದುರ್ದೈವದ ಸಂಗತಿಯೇನೆಂದರೆ ಯಾವ ಪಂಗಡ ಭಾರತದಲ್ಲಿ ಎಲ್ಲದರಲ್ಲೂ ಅಸಹಿಷ್ಣುತೆ ಇದೆಯೆಂದು ಬೊಬ್ಬಿಡುತ್ತಾ ತಿರುಗುತ್ತಿದ್ದರೋ, ಈ ದೇಶದಲ್ಲಿ ಯಾವದು ಸರಿಯಿಲ್ಲವೆಂದು ಹೇಳುತ್ತಿದ್ದರೋ ಈ ವಿಚಾರದಲ್ಲಿ ಮಾತ್ರ ಮೌನವಾಗಿದ್ದಾರೆ. ಕಾರಣ ಆತನ ಹೆಸರು ರೋಹಿತ್ ವೆಮುಲ ಆಗಿರಲಿಲ್ಲ, ಆತನ ಹೆಸರು ಜುನೈದ್ ಆಗಿರಲಿಲ್ಲ. ಬದಲಾಗಿ ರಾಜೇಶ್ ಆಗಿತ್ತು.

ರಾಜೇಶ್ ಎಡವಕೋಡ್, ರಾಷ್ಟ್ರೀಯ ಸ್ವಯಂ ಸೇವಕ ಸಂಘ ದ ಕಾರ್ಯಕರ್ತ, ತನ್ನ ಸಂಘಟನೆಯ ಬೈಠಕ್ ಮುಗಿಸಿ, ಮನೆಗೆ ತೆರಳುತ್ತಿರಬೇಕಾದರೆ ಅಧಮರು ಅವರ ಮೇಲೆ ದಾಳಿ ಮಾಡಿದರು. ಬರೋಬ್ಬರಿ 40 ಬಾರಿ ಆಯುಧಗಳಿಂದ ಇರಿದ ಗುರುತುಗಳಿದ್ದವು, ತನ್ನ ಎರಡೂ ಕೈಗಳನ್ನು ಕತ್ತಿರಿಸಿದ್ದರು. ಆದರೂ ಜನಪ್ರತಿನಿಧಿ ಎಂದು ಕರೆಯಲ್ಪಡುವ ಕೆಲವು ಪಕ್ಷದ ಸೇವಕರಿಂದ ಯಾವ್ದೇ ಪ್ರತಿಕ್ರಿಯೆ ಇಲ್ಲ. ಯಾಕೆಂದರೆ ಅದರಿಂದ ಅವರ ಮತ ಅಧಿಕವಾಗಲಿಕ್ಕಿಲ್ಲ. ಆದರೆ ಆ ಜೀವ ಈ ಲೋಕದ ಜನರ ಮನಸ್ಥಿತಿಯನ್ನು ಕಂಡು ಅದೆಷ್ಟು ನೊಂದಿರಬಹುದೋ??

ಆರ್‍ಎಸ್‍ಎಸ್ ಕಾರ್ಯಕರ್ತರ ಮೇಲೆ ಸಿಪಿಎಮ್ ಗೂಂಡಾಗಳಿಂದ ಸತತ ದಾಳಿ

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗಿನಿಂದಲೂ ಕಾರ್ಯಕರ್ತರ ಮೇಲೆ ಆಕ್ರಮಣಗಳು ನಡೆಯುತ್ತಾ ಇವೆ. ಅವರನ್ನು ಹತ್ಯೆಗೈಯ್ಯುತ್ತಲೇ ಇದ್ದಾರೆ. ಆದರೂ ಅವಾರ್ಡ್ ವಾಪಸೀ ತಂಡ ಇದರ ವಿರುದ್ಧ ಧ್ವನಿ ಎತ್ತಿಲ್ಲ. ಬಹುಶಃ ಕೆಲವರ ಜೀವ ಮಾತ್ರ ಅವರಿಗೆ ಬೆಲೆ ತಂದುಕೊಡುತ್ತದೇನೋ?? ಇವತ್ತಿನ ಕೇರಳದ ಪರಿಸ್ಥಿತಿ ಹೇಗಿದೆಯೆಂದರೆ ನೀವು ಯಾರಿಗೂ ಹಾನಿ ಮಾಡಬೇಕಾದ ಅಗತ್ಯ ಇಲ್ಲ, ಆದರೆ ನೀವು ರಾ.ಸ್ವ.ಸೇ ಸಂಘದ ಕಾರ್ಯಕರ್ತನಾ? ಹಾಗಾದರೆ ನೀವು ನಿಮ್ಮ ಜೀವವನ್ನು ಕೈಯಲ್ಲಿ ಹಿಡಿದು ಬದುಕಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.

ಕೇರಳದ ಮುಖ್ಯಮಂತ್ರಿ ಪಿನರಾಯಿಯವರಿಗೆ ನೂರಾರು ಕಿಲೋಮೀಟರ್ ಪ್ರಯಾಣ ಮಾಡಿ ಜುನೈದ್ ನ ಕುಟುಂಬವನ್ನು ಸಂದರ್ಶಿಸಲು ಸಮಯವಿದೆ, ಆದರೆ ಅಲ್ಲಿಯೇ 40 ಕಿಲೋಮೀಟರ್ ಅಣತಿ ದೂರದಲ್ಲಿರುವ ರಾಜೇಶ್ ನ ಕುಟುಂಬದವರನ್ನು ಸಮಾಧಾನಿಸುವ ಕನಿಷ್ಠ ಪ್ರಜ್ಞೆಯೂ ಆ ರಾಜ್ಯದ ಮುಖ್ಯಮಂತ್ರಿಗೆ ಇಲ್ಲದೇ ಹೋಯಿತು. 40 ಬಾರಿ ಆಯುಧಗಳಿಂದ ದಾಳಿ ಮಾಡಿದ್ದಾರೆ ಅಂದರೆ ಆ ಹತ್ಯೆಯ ಗಂಭೀರತೆಯನ್ನು ನಾವು ಗಮನಿಸಬಹುದು.

ಇತ್ತೀಚೆಗೆ ಬಿಜೆಪಿ ಕಾರ್ಯಾಲಯಕ್ಕೂ ದಾಳಿ ಆಯಿತು. ಅಲ್ಲೇ ಇದ್ದ ಪೋಲೀಸರು ದಾಳಿ ಮಾಡುವಾಗ ಸುಮ್ಮನಿದ್ದು, ಗೂಂಡಾಗಳು ತೆರಳಿದ ನಂತರ ಉತ್ತರ ಕುಮಾರನ ಪೌರುಷದಂತೆ ಅವರನ್ನು ತಡೆಯುವ ಪ್ರಯತ್ನ ಮಾಡಿದರು. ಇದು ಸಾಮಾಜಿಕ ಜಾಲತಾಣದಲ್ಲಿಯೂ ಪ್ರಚಾರವಾಗಿತ್ತು. ಈ ಎಲ್ಲಾ ವಿಚಾರದ ಕುರಿತಾಗಿ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ಯಾಕೆ ಮೌನವಾಗಿದೆ? ಜನರ ಸಮಸ್ಯೆಯನ್ನು ಚರ್ಚಿಸಬೇಕಾದ ವೇದಿಕೆಯಲ್ಲಿ ಯಾಕೆ ಜನಪ್ರತಿನಿಧಿಗಳು ಚಕಾರ ಶಬ್ದವನ್ನು ಎತ್ತುತ್ತಿಲ್ಲ? ಹಾಗಾದರೆ ಸಾಮಾನ್ಯ ಜನರ ಜೀವಕ್ಕೆ ಬೆಲೆಯೇ ಇಲ್ಲವೆ ? ಭ್ರಷ್ಟ ರಾಜಕಾರಣಿಗಳ ಮನೆಗೆ ತೆರಿಗೆ ಅಧಿಕಾರಿಗಳು ದಾಳಿ ಮಾಡಿದಾಗ ಅದನ್ನು ವಿರೋಧಿಸಲು ದೇಶಾದ್ಯಂತ ಬೀದಿ ಬೀದಿಗಳಲ್ಲಿ ಪ್ರತಿಭಟನೆ ಮಾಡುತ್ತಾರೆ. ಆದರೆ ಯಾವದೋ ರಾಜಕೀಯ ಹಿತಾಸಕ್ತಿಗೆ ಇನ್ನೊಬ್ಬರನ್ನು ಕೊಲೆ ಮಾಡಿದಾಗ ಯಾಕೆ ಇಂತಹದ್ದೇ ಪ್ರತಿಕ್ರಿಯೆ ದೇಶಾದ್ಯಂತ ವಿರೋಧ ವ್ಯಕ್ತವಾಗುವುದಿಲ್ಲ.?? ವಿಮರ್ಶಿಸಿ ನೋಡಿ.

ಇದು ನಿಜವಾದ ಅಸಹಿಷ್ಣುತೆ

ಸಿಪಿಎಮ್ ನಾಯಕರು ಅದೆಷ್ಟು ಶಾಂತಿಪ್ರಿಯರೆಂದರೆ ಭಾರತದ ಸೇನಾಪತಿವಾದ ಜನರಲ್ ಬಿಪಿನ್ ರಾವತ್ ಅವರನ್ನು ಅವಮಾನಿಸುವ ಪ್ರಯತ್ನ ಮಾಡಿದ್ದರು. ಕೆಲವರಿಗೆ ಪಾಕಿಸ್ತಾನದೊಂದಿಗೆ ಮಾತುಕತೆಯೇ ಪ್ರಮುಖವಾಗಿತ್ತು. ಕಾಂಗ್ರೆಸ್, ಸಿಪಿಎಮ್ ಸೇರಿದಂತೆ ಇತರ ಕೆಲ ಪಕ್ಷಗಳಿಗೂ ಭಾರತದಲ್ಲಿ ಅಸಹಿಷ್ಣುತೆ ಇದೆ ಎಂದು ಕಾಣುವಾಗ ಇಂತಹ ಬರ್ಬರ ಹತ್ಯೆಗಳು ಕಾಣುವುದಿಲ್ಲವೆಂಬುದು ಬಹಳ ಬೇಸರದ ಸಂಗತಿ. ಇಂತಹ ಕೊಲೆಗಳಿಗೆ ನೆರವಾಗಿ ಪ್ರೋತ್ಸಾಹಿಸುತ್ತಿರುವ ಸಿಪಿಎಮ್ ಗೆ ಈ ದೇಶದ ಸಂವಿಧಾನದ ಹಾಗೂ ಕಾನೂನಿನ ಕಿಂಚಿತ್ತೂ ಭಯ ಇಲ್ಲವೇ. ಇದ್ದರೆ ಇಂತಹ ಕೊಲೆಗಳು ಸತತವಾಗಿ ನಡೆಯುತ್ತಿದ್ದರೂ ಕ್ರಮ ಕೈಗೊಳ್ಳಬಹುದಿತ್ತು. ಇಂತಹ ಅನಾಚಾರವನ್ನು ತಡೆಯಬಹುದಿತ್ತು. ಆದರೆ ಹಾಗೆ ಆಗಲಿಲ್ಲ. ಮಕ್ಕಳಿಗೆ ಪಾಠ ಮಾಡಿತ್ತಿರುವಾಗ ಸಂಘದ ಕಾರ್ಯಕರ್ತನಾಗಿದ್ದ ಜಯಕೃಷ್ಣನ್ ಮಾಸ್ಟರ್ ಅವರನ್ನೂ ಕೊಲೆ ಮಾಡಿದ್ದ ನೀಚರನ್ನು ಹಿಡಿಯಲು ಇವರು ವಿಫಲರಾಗಿದ್ದಾರೆಂದರೆ ಅಸಹಿಷ್ಣುತೆ ಯಾವ ಮಟ್ಟದಲ್ಲಿದೆಯೆಂದು ಅಂದಾಜಿಸಬಹುದು.

ಸದಾ ಆರ್ ಎಸ್ ಎಸ್ ಗುರಿಯಾಗುತ್ತಿರುವುದು ಯಾಕೆ ?

ಪ್ರತಿಯೊಬ್ಬ ಭಾರತೀಯನಿಗೆ ಈ ಪ್ರಶ್ನೆ ಕಾಡುವುದು ಸಹಜ. ಅವರು ತಮ್ಮ ಪ್ರಾರ್ಥನೆಯಲ್ಲಿ ಕೆಲವು ಪ್ರತಿಜ್ಞೆಯನ್ನು ಕೈಗೊಳ್ಳುತ್ತಾರೆ. “ನಮಸ್ತೆ ಸದಾ ವತ್ಸಲೇ ಮಾತೃಭೂಮೇ” – ಈ ಮಾತೃಭೂನಿಗೆ ಸದಾ ನಾನು ವಂದಿಸುವೆ., ಪರಮ್ ವೈಭವಂ ನೇ ತಮೇ ತತ್ ಸ್ವರಾಷ್ಟ್ರಮ್” – ಭಾರತ ಪರಮ ವೈಭವದ ಸ್ಥಿತಿಗೆ ಪುನಃ ಮರಳಿಸಿವುದು ನಮ್ಮ ಧ್ಯೇಯ. ಅದಕ್ಕೋಸ್ಕರ ನಾವು ದುಡಿಯುತ್ತೇವೆ” ಅನ್ನುವ ಧ್ಯೇಯವನ್ನು ಅವರ ಕೈಗೊಳ್ಳುತ್ತಾರೆ. ಹಿಂಧೂ ಧರ್ಮದ ಸಂರಕ್ಷಣೆಯೂ ಅವರ ಧ್ಯೇಯವಾಗಿದೆ. ಕೇರಳದಲ್ಲಿ ಕ್ಷೀಣಿಸುತ್ತಿರುವ ಹಿಂದೂಗಳ ಸಬಲೀಕರಣ ಕಾರ್ಯ ಅಪರಾಧವೇ? ಭಾರತದ ಸನಾತನ ಸಂಸ್ಕøತಿಯ ಪ್ರತಿಪಾದಕರಾಗಿರುವ ಹಿಂದೂಗಳನ್ನು ಪೋಷಿಸುವುದು ತಪ್ಪೇ??? ಈ ಪ್ರಶ್ನೆಗಳಿಗೆ ಉತ್ತರ ಸಿಗಬುಹುದೇ? ಅದೂ ಸಂಶಯವೇ.

Tags

Related Articles

Close