ಪ್ರಚಲಿತ

40,000 ಬಾಂಗ್ಲಾ ಉಗ್ರರು ದೇಶದ ನಾನಾಕಡೆ ಬಾಂಬ್ ಇಡಲು ಸಿದ್ಧತೆ ನಡೆಸಿದ್ದಾರೆ! ಜಾತ್ಯತೀತ ಕುಮಾರಸ್ವಾಮಿಯಿಂದ ಸಮಾಜವಾದಿ ಸಿದ್ದರಾಮಯ್ಯನಿಗೆ ಪತ್ರ!!

ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಬಾಂಗ್ಲಾದೇಶದ ಮುಸಲ್ಮಾನರು ಟೆಂಟ್ ಗಳನ್ನು ಕಟ್ಟಿಕೊಂಡು ಜೀವನ ಪ್ರಾರಂಭಿಸಿದ್ದು, ಅದರಂತೆಯೇ ಕರ್ನಾಟಕದಲ್ಲಿ ಬಾಂಗ್ಲಾ ಪ್ರಜೆಗಳು ಒಳನುಸುಳಿರುವ ಬಗ್ಗೆ ಅಪರೂಪಕ್ಕೊಮ್ಮೆ ವರದಿಯಾಗಿತ್ತಾದರೂ ಕೂಡ ಇಲ್ಲೇ ಇದ್ದಾರೆ, ಇಷ್ಟೇ ಪ್ರಮಾಣದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿರಲಿಲ್ಲ. ಆದರೆ ಇದೀಗ ಬಾಂಗ್ಲಾದೇಶದ ಅಕ್ರಮ ವಲಸಿಗರು ಕಳೆದ ಕೆಲವು ವರ್ಷಗಳಿಂದ ಕರ್ನಾಟಕದಲ್ಲಿ ವಾಸವಾಗಿದ್ದಾರೆ ಎಂದು ಜಾತ್ಯತೀತ ಹೆಚ್. ಡಿ.ಕುಮಾರಸ್ವಾಮಿ ಅವರೇ ಗಡಿಪಾರು ಮಾಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ!!

ಬಾಂಗ್ಲಾದೇಶದ 40,000 ಅಕ್ರಮ ವಲಸಿಗರು ಕಳೆದ ಕೆಲವು ವರ್ಷಗಳಿಂದ ಕರ್ನಾಟಕದಲ್ಲಿ ವಾಸವಾಗಿದ್ದಾರೆ ಎಂದು ಜೆಡಿಎಸ್ ನಾಯಕ ಹೆಚ್. ಡಿ.ಕುಮಾರಸ್ವಾಮಿ ಹೇಳಿದ್ದು, ಭಾರತಕ್ಕೆ ನುಸುಳಿರುವ ಬಾಂಗ್ಲಾ ವಲಸಿಗರಲ್ಲಿ ಶೇಕಾಡ 80 ರಷ್ಟು ಮಂದಿ ಕರ್ನಾಟಕದಲ್ಲಿದ್ದಾರೆ ಎಂದು ಹೇಳಿದ್ದಾರೆ!! ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮತ್ತು ಅಧಿಕಾರಿಗಳಿಗೆ ವಲಸೆಗಾರರ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ. ಆದರೆ ಅಕ್ರಮ ವಲಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯಲ್ಲದೇ, ಕರ್ನಾಟಕದಲ್ಲಿ ಜಾಂಡಾ ಹೂಡುತ್ತಿರುವುದು ಮಾತ್ರ ವಿಪರ್ಯಾಸ.

ಈ ಹಿಂದೆ ರಾಜಧಾನಿಯಲ್ಲಿ ಬಾಂಗ್ಲಾದೇಶಿಗರು ಮಾತ್ರವಲ್ಲದೆ, ಸಾವಿರಾರು ಮಂದಿ ವಿದೇಶಿಗರು ಅಕ್ರಮವಾಗಿ ನೆಲೆಸಿರುವ ಕುರಿತು ಮಾಹಿತಿ ಸಿಕ್ಕಿರುವುದು ಗೊತ್ತೇ ಇದೆ!!
ಆದರೆ ದೇಶದ ಗಡಿ ಭಾಗಗಳಿಂದ ನುಸುಳಿಕೊಂಡು ಬೆಂಗಳೂರು ನಗರಕ್ಕೆ ಬಾಂಗ್ಲಾ ದೇಶದ ಪ್ರಜೆಗಳು ಸೇರಿದಂತೆ ಇತರೆ ದೇಶದ ಸಾವಿರಾರು ಪ್ರಜೆಗಳು ಬಂದು ಅಕ್ರಮವಾಗಿ ನೆಲೆಸಿದ್ದಲ್ಲದೇ, ಬಾಂಗ್ಲಾ ಮತ್ತು ಇತರೆ ದೇಶದ ಪ್ರಜೆಗಳು ನಗರಕ್ಕೆ ಬಂದು ನಕಲಿ ದಾಖಲೆಗಳನ್ನು ನೀಡಿ ಆಧಾರ್‍ಕಾರ್ಡ್‍ಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಪೆÇಲೀಸರೇ ಮಾಹಿತಿ ನೀಡಿದ್ದರು. ಅಕ್ರಮವಾಗಿ ನಗರಕ್ಕೆ ಬಂದು ಕಟ್ಟಡ ನಿರ್ಮಾಣ, ಹೊಟೇಲ್, ಮಾರುಕಟ್ಟೆ, ಮಾಲ್‍ಗಳು, ಬಾರ್‍ಗಳು, ಇನ್ನಿತರ ಕಡೆಗಳಲ್ಲಿ ಕೂಲಿ ಕೆಲಸ ಮಾಡಿಕೊಂಡಿಕೊಂಡಿರುವ ವಿದೇಶಿ ಪ್ರಜೆಗಳ ಪೈಕಿ ಕೆಲವರು ಮಾದಕ ವಸ್ತು ಮಾರಾಟ ಸೇರಿದಂತೆ ಕೆಲ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವುದು ಸಹ ಕಂಡುಬಂದಿರುವುದು ತಿಳಿದಿತ್ತು. ಆದರೆ ಈ ಬಗ್ಗೆ ಯಾರೂ ಕೂಡ ಈವರೆಗೆ ಕ್ರಮಕೈಗೊಂಡಿಲ್ಲ!!

ಅಷ್ಟೇ ಅಲ್ಲದೇ, ಬಾಂಗ್ಲಾ ಒಳನುಸುಳುಕೋರರು ತಮ್ಮ ಕ್ಯಾಂಪಿನಲ್ಲೇ ಮಸೀದಿ ನಿರ್ಮಿಸಿ ಕುರಾನ್ ಪಠಿಸುತ್ತಾರೆ. ಅವರೇ ಹೇಳುವಂತೆ ಸ್ಥಳೀಯ ಮೌಲ್ವಿಗಳು ಆಗಾಗ ಬಂದು ಮಾರ್ಗದರ್ಶನ ನೀಡುತ್ತಾರೆ. ಇದರ ಅರ್ಥ ಸ್ಥಳೀಯ ಮಸೀದಿಗೆ ಬಾಂಗ್ಲಾ ನುಸುಳುಕೋರರ ಬಗ್ಗೆ ಮಾಹಿತಿಯಿದೆ ಎಂದು ತಿಳಿದು ಬರುತ್ತದೆ!! ಆದರೂ ಪೆÇಲೀಸರಿಗೆ ತಿಳಿಸದೆ ಸಹಾಯ ಮಾಡುತ್ತಿದ್ದಾರೆ. ಸ್ಥಳೀಯ ಮಸೀದಿಗಳು ಅಕ್ರಮವಾಗಿ ಭಾರತದೊಳಗೆ ಬಂದವರನ್ನು ಏಕೆ ವಿಶ್ವಾಸದಲ್ಲಿಟ್ಟುಕೊಂಡಿವೆ ಎಂಬುದು ಈ ಕಾಲಘಟ್ಟದ ಪ್ರಮುಖ ಪ್ರಶ್ನೆಗಳಲ್ಲೊಂದು.

ಆದರೆ ಇದೀಗ ಜೆಡಿಎಸ್ ಪಕ್ಷದ ನಾಯಕ ಹೆಚ್. ಡಿ.ಕುಮಾರಸ್ವಾಮಿಯವರು ಏಪ್ರಿಲ್ 18 ರಂದು ಸಿದ್ದರಾಮಯ್ಯ, ಕೆ ಜೆ ಜಾರ್ಜ್ ಮತ್ತು ಪೆÇಲೀಸ್ ಇನ್ಸ್ಪೆಕ್ಟರ್ ಜನರಲ್ ಪಿ. ಓಂ ಪ್ರಕಾಶ್, ಅವರಿಗೆ ಪತ್ರ ಬರೆದಿದ್ದು, ಈ ಪತ್ರದಲ್ಲಿ ಹಲವಾರು ಅಕ್ರಮ ಬಾಂಗ್ಲಾದೇಶಿ ವಲಸಿಗರು ಪೆರಿಯಾಪಟ್ನಾ, ಹುನ್ಸುರ್ ಮತ್ತು ಚಾಮರಾಜನಗರ ಸೇರಿದಂತೆ ರಾಜ್ಯದ ನಾನಾ ಪ್ರದೇಶದಲ್ಲಿ ನಿವಾಸವನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

“ಬೆಂಗಳೂರಿನಲ್ಲಿ ವಲಸಿಗರು ಬೆಲ್ಲಂದೂರು (ಸರೋವರದ ಹಿಂದೆ), ಇಬ್ಲೂರ್, ದೇವರಾಭೀಶನಹಳ್ಳಿ, ಸೊಮಾಸುಂದರಾಪಾಲ್ಯ, ಮುಲೆಕೆಲ್ಲಲು ಮತ್ತು ಇತರ ಪ್ರದೇಶಗಳಲ್ಲಿನ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ದುಃಖಕರ ಸಂಗತಿಯೆಂದರೆ, ಅವರ ಉಪಸ್ಥಿತಿಯನ್ನು ಅರಿತುಕೊಂಡಿದ್ದರೂ, ಬೆಂಗಳೂರಿನ ಪೆÇಲೀಸರು ಅವರ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಕುಮಾರಸ್ವಾಮಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಈ ವಲಸಿಗರಲ್ಲಿ ಹೆಚ್ಚಿನವರ ಬಳಿ ಮತದಾನದ ಗುರುತಿನ ಚೀಟಿ ಮತ್ತು ರೇಷನ್ ಕಾರ್ಡುಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೇ, ಸರಕಾರದಿಂದ ಸಿಗುವ ಎಲ್ಲಾ ಲಾಭಗಳನ್ನು ಈ ವಿದೇಶಿಯರು ಪಡೆಯುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅಷ್ಟೇ ಅಲ್ಲದೇ, “ಅನಕ್ಷರಸ್ಥ ಮತ್ತು ಬಡ ವಲಸಿಗರಾಗಿರುವ ಇವರ ಬಳಿ ನಕಲಿ ನೋಟುಗಳನ್ನು ಮುದ್ರಿಸುವ ಮಾದಕಸ್ತುಗಳಿಂದ ಹಿಡಿದು ವೇಶ್ಯಾವಾಟಿಕೆಗಳವರೆಗೆ ಎಲ್ಲಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಅಕ್ರಮ ವಲಸಿಗಾರರಲ್ಲಿರುವ ಶೇಕಾಡ 8ರಷ್ಟು ಮಹಿಳೆಯರು ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿದ್ದಾರೆ” ಎಂದು ಅವರು ತಿಳಿಸಿದ್ದಾರೆ.

ಇದಷ್ಟೇ ಅಲ್ಲದೇ ಅಕ್ರಮವಾಗಿ ಭಾರತಕ್ಕೆ ನುಸುಳಿರುವ ಬಾಂಗ್ಲಾ ವಲಸಿಗರಲ್ಲಿ ಶೇಕಾಡ 80 ರಷ್ಟು ಮಂದಿ ಕರ್ನಾಟಕದಲ್ಲಿದ್ದಾರೆ ಎನ್ನುವ ಮಾಹಿತಿಯನ್ನು ಈ ಪತ್ರದಲ್ಲಿ ಮುಖ್ಯಮಂತ್ರಿಗಳಿಗೆ ಕುಮಾರಸ್ವಾಮಿ ತಿಳಿಸಿದ್ದಾರೆ!! ಜಾತ್ಯತೀತ ಕುಮಾರಸ್ವಾಮಿಯವರೇ ಈ ಬಗ್ಗೆ ಪತ್ರಬರೆದಿರಬೇಕಾದರೆ ಸಿದ್ದರಾಮಯ್ಯ ಸರಕಾರ ಇನ್ನು ನಿದ್ದೆಯಿಂದ ಎದ್ದೇಳುವುದಾದರೂ ಯಾವಾಗ ಎನ್ನುವುದು ಮಾತ್ರ ಗೊತ್ತಾಗುತ್ತಿಲ್ಲ!!! ಮತದಾನದ ಗುರುತಿನ ಚೀಟಿ, ರೇಷನ್ ಕಾರ್ಡ್‍ನ ಜೊತೆಗೆ ಸರಕಾರದ ಎಲ್ಲ ಸೌಲಭ್ಯಗಳು ಇವರಿಗೆ ದೂರಕುತ್ತಿರಬೇಕಾದರೂ ಕೂಡ ಸಿದ್ದರಾಮಯ್ಯ ಸರಕಾರಕ್ಕೆ ಮಾತ್ರ ಈ ಬಗ್ಗೆ ಮೌನವಹಿಸಿದೆ.

ಮೂಲ: https://goo.gl/QpY2zw

– ಅಲೋಖಾ

Tags

Related Articles

Close