ಪ್ರಚಲಿತ

52 ಸೆಕೆಂಡ್‌ ನಿಲ್ಲಲಾಗದ ನರಸತ್ತವರನ್ನು ಕಂಡಿರಾ?!

ಕಾರ್ಯಕ್ರಮವೊಂದರಲ್ಲಿ ಚರ್ಚೆ ನಡೆಯುತ್ತಿತ್ತು. ಸಿನಿಮಾ ಹಾಲ್‌ನಲ್ಲಿ ರಾಷ್ಟ್ರಗೀತೆ ಹಾಕಿದಾಗ ಅದಕ್ಕೆ ನಿಂತುಕೊಳ್ಳಬೇಕೋ ಬೇಡವೋ ಎಂದು. ಒಬ್ಬರು ರಾಷ್ಟ್ರಗೀತೆಗೆ ನಿಂತುಕೊಳ್ಳಬೇಕು ವಾದ ಮಾಡುತ್ತಿದ್ದರೆ ಮತ್ತೊಬ್ಬರು ಇಲ್ಲವೇ ಇಲ್ಲ… ಮುದ್ಧಾಂ ನಿಲ್ಲಬಾರದು.. ಯಾಕ್‌ ನಿಲ್ಬೇಕು ಹೇಳ್ರೀ..? ರಾಷ್ಟ್ರಗೀತೆ ಹಾಕ್ಬುಟ್ರೆ ನಾವ್‌ ನಿಲ್ಬೇಕಾ? ನಾವ್‌ ಸಿನಿಮಾಗೆ ಮಜಾ ಮಾಡಕ್ಕೆ ಬಂದಿರ‍್ತೀವಿ, ಇಲ್ಲಿ ದೇಶಭಕ್ತಿ ತೋರಿಸ್ಬೇಕಾ?

ಇದು ಮೊದಲಿಗೆ ಯಾವುದೋ ಪಾಕಿಸ್ತಾನಿ ರಾಷ್ಟ್ರಗೀತೆಯ ಬಗ್ಗೆ ಇರಬೇಕು ಎಂದುಕೊಂಡೆ. ಆದರೆ, ಇಲ್ಲ. ಇದು ನಮ್ಮ ದೇಶದ್ದೇ ರಾಷ್ಟ್ರಗೀತೆಗೆ ಎದ್ದು ನಿಲ್ಲಬೇಕೋ ಬೇಡವೋ ಎನ್ನುವುದಕ್ಕೆ ಚರ್ಚೆಯಂತೆ. ಚರ್ಚೆಯಲ್ಲಿ ರಾಷ್ಟ್ರಗೀತೆಗೆ ನಿಲ್ಲಬಾರದು ಎನ್ನುತ್ತಿರುವವರಾದರೂ ಯಾರು? ಪಾಕಿಸ್ತಾನಿಯರಲ್ಲ, ಭಾರತೀಯರು ಸ್ವತಃ ಭಾರತೀಯರೇ, ರಾಷ್ಟ್ರಗೀತೆಗೆ ನಿಲ್ಲುವುದಿಲ್ಲ ಎಂದು ಹೇಳುವುದನ್ನು ಕಂಡಾಗ, ನಮಗಿನ್ನೂ ಸ್ವಾತಂತ್ರ‍್ಯ ಸಿಕ್ಕಿಲ್ಲ ಎಂದು ಅನಿಸಿದ್ದು ಸುಳ್ಳಲ್ಲ. ಇಂಥ ಹರಾಮಿಗಳಿಂದ ನಮಗಿನ್ನೂ ಸ್ವಾತಂತ್ರ‍್ಯ ಸಿಕ್ಕಿಲ್ಲ ಎಂದೆನಿಸಿತ್ತು. ಸಿನಿಮಾ ಹಾಲ್‌ನಲ್ಲಿ ರಾಷ್ಟ್ರಗೀತೆ ಹಾಕಿದಾಗ ಎದ್ದು ನಿಲ್ಲಬೇಕೋ ಬೇಡವೋ ಎಂಬ ಚರ್ಚೆ ದೊಡ್ಡದಾಗಿ ಅದು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದಾಗ, ಸಿನಿಮಾದಲ್ಲಿ ಹಾಕುವ ರಾಷ್ಟ್ರಗೀತೆಗೆ ನಿಲ್ಲಬೇಕಿಲ್ಲ ಎಂದು ಅಭಿಪ್ರಾಯಪಟ್ಟಿತು. ನೆನಪಿರಲಿ ಇದು ಸುಪ್ರೀಂ ಕೋರ್ಟ್‌ ಅಭಿಪ್ರಾಯ ಅಷ್ಟೇ ಹೊರತು, ಆದೇಶವಲ್ಲ. ಆದರೆ ಇಷ್ಟಕ್ಕೇ ರಾಹುಲ್‌ ಗಾಂಧಿ ರೊಚ್ಚಿಗೆದ್ದಿದ್ದಾರೆ. ಸಿನಿಮಾದಲ್ಲಿ ಹಾಕುವ ರಾಷ್ಟ್ರಗೀತೆಗೆ ಯಾಕೆ ಎದ್ದು ನಿಲ್ಲಬೇಕು ಎಂದಿದ್ದಾರೆ.ಆದರೆ, ಇದೇ ರಾಹುಲ್‌ ಗಾಂಧಿಯ ಅಪ್ಪ ರಾಜೀವ್‌ ಗಾಂಧಿ, ಸುಪ್ರೀಂ ಕೋರ್ಟ್‌ ವಿರುದ್ಧವೇ ಹೋಗಿ ರಾಷ್ಟ್ರಗೀತೆಗೆ ಎಲ್ಲರೂ ನಿಂತು ಗೌರವ ನೀಡಲೇ ಬೇಕುಎಂಬುದನ್ನು ಕಡ್ಡಾಯ ಮಾಡಲು ಹೊರಟಿದ್ದರು. ಆದರೆ ಅವರಿಗೇ ಹುಟ್ಟಿದ ರಾಹುಲ್‌ ಗಾಂಧಿ ಹೇಳುತ್ತಾರೆ “ರಾಷ್ಟ್ರಗೀತೆಗೆ ನಿಂತುಕೊಳ್ಳಲೇಬೇಕು ಎಂದೇನು ಇಲ್ಲ… ನಿಮಗೆ ಇಷ್ಟವಿಲ್ಲದಿದ್ದರೆ ಕುಳಿತುಕೊಂಡೇ ಇರಬಹುದು.” ಎಂದಿದ್ದಾರೆ! ಎಂಥ ಅಪ್ಪನಿಗೆ, ಎಂಥ ಮಗ? ರಾಜೀವ್‌ ಗಾಂಧಿಯ ಬಗ್ಗೆ ನೂರು ಆರೋಪಗಳಿರಬಹುದು, ಆದರೆ ಅವರು ದೇಶಕ್ಕೆ, ದೇಶದ ಗೀತೆಗಾಗಿ ತೆಗೆದುಕೊಳ್ಳಲು ಹೊರಟಿದ್ದ ನಿರ್ಧಾರವನ್ನು ನಾವೆಲ್ಲರೂ ತಲೆ ಬಾಗಲೇಬೇಕು.

ರಾಜೀವ್‌ ಗಾಂಧಿಯವರು ಏನು ಮಾಡುವುದಕ್ಕೆ ಹೊರಟಿದ್ದರು, ಈಗ ಕಾಂಗ್ರೆಸ್‌ ಏನು ಹೇಳುತ್ತಿದೆ ಎನ್ನುವುದೆಲ್ಲ ಪಕ್ಕಕ್ಕೆ ಇಡೋಣ. ಅದರ ಹೊರತಾಗಿ ನೋಡಿದರೂ ಕಾಂಗ್ರೆಸ್‌ ಮತ್ತೆ ಎಡಬಿಡಂಗಿಯ ಹಾಗೇ ಕಾಣಿಸುತ್ತದೆ. ಕಾಂಗ್ರೆಸಿಗರು ಯಾಕೆ ಎಡಬಿಡಂಗಿಗಳು ಎನ್ನುವುದಕ್ಕೆ ಮತ್ತೊಂದು ಇನ್ನೊಂದು ಉದಾಹರಣೆ ಕೊಡುತ್ತೇನೆ ಕೇಳಿ. ಸಿನಿಮಾ ಹಾಲ್‌ನಲ್ಲಿ ರಾಷ್ಟ್ರಗೀತೆ ಹಾಕಬೇಕು ಎಂದು ಮೊದಲು ಆರ್ಡರ್‌ ಪಾಸ್‌ ಮಾಡಿದ್ದು ಬಿಜೆಪಿಯೋ ಅಥವಾ ಇನ್ಯಾವುದೋ ಹಿಂದೂ ಸಂಘಟನೆಗಳಲ್ಲ. ಬದಲಿಗೆ ಇದೇ ಕಾಂಗ್ರೆಸ್‌ ಸರಕಾರ. 2003ರಲ್ಲಿ ಮಹಾರಾಷ್ಟ್ರದಲ್ಲಿದ್ದ ಕಾಂಗ್ರೆಸ್‌ ಸರಕಾರ ಇದನ್ನು ಅನುಷ್ಠಾನಕ್ಕೆ ತಂದಿದ್ದು. ಆಗಿನಿಂದಲೇ ಸಿನಿಮಾ ಹಾಲ್‌ನಲ್ಲಿ ರಾಷ್ಟ್ರಗೀತೆ ಪ್ರಸಾರವಾಗುತ್ತಿತ್ತು. ಆದರೆ, ಹಿಂದೆ ತಾವೇನು ಆದೇಶ ನೀಡಿದ್ದೇವೆ ಎಂಬುದನ್ನೇ ಅರಿಯದೇ, ಈಗ ಒಂದು ನಿರ್ದಿಷ್ಟ ಧರ್ಮವನ್ನು ಮೆಚ್ಚಿಸುವುದಕ್ಕೆ, ಮುಂದಿನ ಚುನಾವಣೆಯಲ್ಲಾದರೂ ಗೆಲ್ಲುವುದಕ್ಕೆ ತನ್ನ ದೇಶದ ರಾಷ್ಟ್ರಗೀತೆಗೇ ನಿಲ್ಲಬೇಕಿಲ್ಲ ಎನ್ನುವ ಕಾಂಗ್ರೆಸ್‌ ನಿಜಕ್ಕೂ ಭಾರತದಲ್ಲೇ ರಾಜಕಾರಣ ಮಾಡುತ್ತಿದೆಯೋ ಅಥವಾ ಪಾಕಿಸ್ತಾನದಲ್ಲೋ?

ಈ ರಾಹುಲ್‌ ಗಾಂಧಿಗೆ ಮತ್ತೊಬ್ಬ ಬಾಲಂಗೋಚಿ ಇದ್ದಾನೆ. “ಸಿನಿಮಾ ಹಾಲ್‌ನಲ್ಲಿ ರಾಷ್ಟ್ರಭಕ್ತಿಯನ್ನೇಕೆ ತೋರಿಸಬೇಕು? ಸಿನಿಮಾಗೆ ಹೋಗೋದು ಮನರಂಜನೆಗಾಗಿ… ರಾಷ್ಟ್ರಭಕ್ತಿಯ ಪ್ರದರ್ಶನಕ್ಕಲ್ಲವಲ್ಲ? ರಾಷ್ಟ್ರಪ್ರೇಮವನ್ನು ತೋರಿಸುವುದಕ್ಕೆ ಬೇರೆ ಬೇರೆ ಮಾರ್ಗಗಳಿವೆ” ಎಂದು ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ. ದೇಶದ ಗಡಿಯಲ್ಲಿ ನಮ್ಮನ್ನು ಕಾಯುವವರಿದ್ದಾರೆ ಎಂದು ಅರಿವಿರುವವನ್ಯಾರಾದರೂ ಇಂಥ ಮಾತಾಡುವುದಕ್ಕೆ ಸಾಧ್ಯವಾ? “ಹದಿನೈದು ನಿಮಿಷ ದೇಶದಲ್ಲಿ ಪೊಲೀಸ್‌ ಪಡೆಯನ್ನು ನಿಷ್ಕ್ರೀಯಗೊಳಿಸಿ, ಆಗ ತೋರಿಸ್ತೀವಿ ನಮ್‌ ತಾಕತ್ತೇನು ಅಂತ” ಎಂದು ಹೇಳಿದ ಅಕ್ಬರುದ್ದೀನ್‌ ಓವೈಸಿಯಂಥವರ ಕುಟುಂಬದಿಂದ ಇನ್ಯಾವ ದೇಶಭಕ್ತಿ ತಾನೆ ನಿರೀಕ್ಷಿಸಲು ಸಾಧ್ಯ ಹೇಳಿ? ಪಾಕಿಸ್ತಾನ ಅಂತ ಮುಸ್ಲಿಮರ ರಾಷ್ಟ್ರವಾದಾಗಲೂ ಇವರೆಲ್ಲ ಭಾರತದಲ್ಲಿರುವುದೇ ನಮ್ಮ ಪುಣ್ಯ ಎಂದುಕೊಳ್ಳಬೇಕಷ್ಟೇ ನಾವು.

ನೀವೇ ಆಲೋಚನೆ ಮಾಡಿ ಸ್ನೇಹಿತರೇ, -50 ಡಿಗ್ರಿ ಸೆಲ್ಶಿಯಸ್‌ ಇರುವ ಸಿಯಾಚಿನ್‌ ಗಡಿಯಲ್ಲಿ ನಿತ್ಯವೂ ರಾಷ್ಟ್ರಗೀತೆಗೆ ಸೈನಿಕರು ಎದ್ದು ನಿಲ್ಲುತ್ತಾರೆ. ಆದರೆ
ವಾರಕ್ಕೊಮ್ಮೆ ಮಲ್ಟಿಪ್ಲೆಕ್ಸ್‌ನಲ್ಲಿ ಎಸಿ ಹಾಲ್‌ನಲ್ಲಿ ಕೇವಲ ೫೨ ಸೆಕೆಂಡ್‌ ರಾಷ್ಟ್ರಗೀತೆ ಹಾಕಿದರೆ ಎದ್ದು ನಿಲ್ಲಬೇಕೋ ಬೇಡವೋ ಎಂಬುದಕ್ಕೂ ಚರ್ಚೆ ಮಾಡುತ್ತಾರೆ
ಎಂದರೆ ಎಲ್ಲಿಗೆ ಬಂದು ನಿಂತಿದೆ ನಮ್ಮ ದೇಶದ ಸ್ಥಿತಿ? ಮಾತೆತ್ತಿದರೆ ಸ್ವಾತಂತ್ರ‍್ಯ ಹೋರಾಟದಲ್ಲಿ ನಾವಿದ್ದೆವು, ನಿಮ್ಮ ಪಾಲೇನು? ಎಂದು ಅದೇ ಗಾಂಧೀಜಿಯ
ಕೋಲನ್ನೇ ಹಿಡಿದು ಎಲ್ಲರಿಗೂ ಬೀಸುವ ಕಾಂಗ್ರೆಸ್‌ಗೆ 52 ಸೆಕೆಂಡ್‌ ನಿಲ್ಲುವುದಕ್ಕೆ ನರ ಬಿದ್ದು ಹೋಗಿದೆಯಾ?

ಅಮೆರಿಕದಲ್ಲಿ ಅವರ ರಾಷ್ಟ್ರಗೀತೆ ಹಾಡುವಾಗ ಎಲ್ಲರೂ ಎದ್ದು ನಿಂತು ಎದೆಯ ಮೇಲೆ ಕೈ ಇಟ್ಟುಕೊಂಡು ಹಾಡುತ್ತಾರೆ. ಇಲ್ಲ ಭಾರತದಲ್ಲಿ ರಾಷ್ಟ್ರಗೀತೆಯ ಟೇಪ್‌
ಹಚ್ತೀವಪ್ಪ, ನಿಮ್‌ ಯೋಗ್ಯತೆಗೆ ಹಾಡುವುದು ಬೇಡ, ಬಾಯಿ ಮುಚ್ಚಿಕೊಂಡು ನಿಂತುಕೊಳ್ಳಿ ಎಂದರೂ ಅದು ಯಾವ ಕೋನದಿಂದ ಇವರಿಗೆಲ್ಲ ಹೇರಿಕೆಯಾಗಿ ಕಾಣುತ್ತದೆ.

ಇದೇ ಕಾಂಗ್ರೆಸ್‌ ನಾಯಕನೊಬ್ಬ ಹೇಳುತ್ತಾನೆ, ನಾವು ರಾಷ್ಟ್ರಗೀತೆಯನ್ನು ಯಾರ ಮೇಲೂ ಹೇರಿಕೆ ಮಾಡಬಾರದಂತೆ. ಇದೇ ಕಾಂಗ್ರೆಸ್‌ ನಾಯಕನಿಗೆ ಕೇಳಬೇಕಿದೆ, ಸೋನಿಯಾ ಗಾಂಧಿ ನಿಮ್ಮ ಎದುರಿಗೆ ಬಂದರೆ “ಸೋನಿಯಾ, ನೀವು ಬಂದರೆ ನಾವೇನು ನಿಂತುಕೊಳ್ಳಬೇಕಿಲ್ಲ” ಎಂದು ಹೇಳುವ ತಾಕತ್ತಿದೆಯೇ? ಸೋನಿಯಾ ಎದುರಿಗೆ ಬರುವುದಿರಲಿ, ಇನ್ನೂ ಹೆಲಿಕಾಪ್ಟರ್‌ನಲ್ಲಿದ್ದಾಗಲೇ ಇವತ್ತು ಅರಚಾಡುತ್ತಿರುವ ನಾಯಕರೆಲ್ಲ ತಮ್ಮ ಬಾಲವನ್ನು ಕಾಲುಗಳ ಮಧ್ಯೆ ಅಡಗಿಸಿಟ್ಟುಕೊಂಡು ನಿಲ್ಲುತ್ತಾರೆ. ಅಂದರೆ ಯಾವುದೋ ದೇಶದಿಂದ ಬಂದು ಇಲ್ಲೇ ಟಿಕಾಣಿ ಹೂಡಿರುವ ಸೋನಿಯಾ ಮೇಲಿರುಷ್ಟು ಮರ್ಯಾದೆಯೂ ನಮ್ಮ ರಾಷ್ಟ್ರಗೀತೆಯ ಮೇಲಿಲ್ಲ ಈ ಕಾಂಗ್ರೆಸ್‌ ನಾಯಕರಿಗೆ ಎಂದಾಯಿತಲ್ಲ? ಹೇಳಿ ಕಾಂಗ್ರೆಸ್‌ ನಾಯಕರೇ? “ಮಮ್ಮಿ ಸೋನಿಯಾ ಬಂದರೆ ಎದ್ದು ನಿಲ್ಲಬೇಕೆಂಬು‌ದೂ ಹೇರಿಕೆಯೇ” ಎಂದು ಹೇಳುವ ಗಂಡಸು ಕಾಂಗ್ರೆಸ್‌ನಲ್ಲಿ ಒಬ್ಬನೂ ಇಲ್ಲವೇ?

ದುರಂತ ಏನು ಗೊತ್ತಾ? ರಾಷ್ಟ್ರಗೀತೆಗೆ ಯಾಕ್ರೀ ಎದ್ದು ನಿಲ್ಲಬೇಕು ಎಂದು ಹೇಳುವವರೇ, “ನಮ್ಮ ದೇಶಭಕ್ತಿಯನ್ನು ಪ್ರಶ್ನೆ ಮಾಡಬೇಡಿ” ಎನ್ನುತ್ತಿದ್ದಾರೆ. ೫೨ವ ಸೆಕೆಂಡ್‌ ನಿಲ್ಲುವುದಕ್ಕೂ ನರದೌರ್ಬಲ್ಯ ಇರುವ ಷಂಡರು ಭಕ್ತಿಯ ಬಗ್ಗೆ ಮಾತಾಡುತ್ತಾರೆ ಎನ್ನುವುದಕ್ಕಿಂತ ಮತ್ತೊಂದು ದುರಂತ ಎಲ್ಲಾದರೂ ನೋಡಿದ್ದೀರಾ?
ಕಾಂಗ್ರೆಸಿಗರದ್ದಷ್ಟೇ ಅಲ್ಲ, ಕಮ್ಯೂನಿಸ್ಟ್‌ ಎಂಬ ಕಮ್ಮಿನಿಷ್ಟರದ್ದೂ ಇದೇ ತಾಳ. ಒಂದಿಲ್ಲೊಂದು ಕಾಮಿಡಿ ಮಾಡಿಕೊಂಡಿರುವ ರಾಹುಲ್‌ ಗಾಂಧಿಗೇ ಇವರೆಲ್ಲರೂ
ಜೋತುಬಿದ್ದಿದ್ದಾರೆ. ರಾಹುಲ್‌ ಗಾಂಧಿ ಹೇರಿಕೆ ಅಂದರೆ ಹೇರಿಕೆ, ರಾಷ್ಟ್ರಪ್ರೇಮ ಅಂದರೆ ರಾಷ್ಟ್ರಪ್ರೇಮ. ಸಿಪಿಐನ ಸಂಸದ ಡಿ ರಾಜಾ ಹಚ್ಚುವುದೇ ಮತ್ತದೇ ರಾಹುಲ್‌ ಭಾಷಣವನ್ನೇ. ಆದರೆ ಈ ಮನುಷ್ಯ ಹೇಳುತ್ತಾರೆ, “ನಾನು ಒಬ್ಬ ಕಮ್ಯುನಿಸ್ಟ್‌ ಆಗಿ ಹೇಳುತ್ತೇನೆ, ನನಗೆ ಯಾರಿಂದಲೂ ದೇಶಭಕ್ತಿಯ ಪಾಠ ಬೇಕಿಲ್ಲ ಅಥವಾ ದೇಶಪ್ರೇಮದ ಸರ್ಟಿಫಿಕೇಟ್‌ನ ಅವಶ್ಯಕತೆ ಇಲ್ಲ” ಎಂದು. ಆದರೆ ಇದೇ ಈ ಮನುಷ್ಯನ ಪಕ್ಷದವರೇ ಆದ ಸುನೀತ್‌ ಚೋಪ್ರಾ ಅವರು ಇತ್ತೀಚೆಗೆ ಕೊರಿಯಾಗೆ ಹೋದಾಗ, ಕೊರಿಯನ್‌ ರಾಷ್ಟ್ರಗೀತೆಗೆ ಎದ್ದು ನಿಂತು ಗೌರವ ಸಲ್ಲಿಸಿದ್ದಾರೆ. ಈ ಕಮ್ಯುನಿಷ್ಟರಿಗೆ ತಲೆ ಬುಡ ಅರ್ಥವಾಗದ ಕೊರಿಯನ್‌ ರಾಷ್ಟ್ರಗೀತೆ ನರಗಳು ನೆಟ್ಟಾನೇರ ನಿಲ್ಲುತ್ತವೆ ಆದರೆ ಜನ ಗಣ ಮನಕ್ಕೆ ಇವರ ಮನ ಮಿಡಿಯುವುದಿಲ್ಲ ಎಂದರೆ ಇಂಥ ಕಮ್ಯುನಿಷ್ಟರ ಅವಶ್ಯಕತೆಯಾದರೂ ದೇಶಕ್ಕೆ ಏನಿದೆ ಹೇಳಿ?

ಯಾರು ಏನೇ ಹೇಳಲಿ, ಈ ದೇಶ ನನ್ನದು ಎಂದುಕೊಂಡವನಿಗೆ, ಸಿನಿಮಾ ಹಾಲ್‌ನಲ್ಲಿ ಒಂದೇ ಅಲ್ಲ, ಮಧ್ಯ ರಸ್ತೆಯಲ್ಲಿ ಜನ ಗಣ ಮನ ಕೇಳಿದರೂ 52 ನಿಂತು ತನ್ನ ಗೌರವ ಸಮರ್ಪಣೆ ಮಾಡುತ್ತಾನೆ. ಇನ್ನುಳಿದವರು ಬಾರ್‌ನಲ್ಲಿ ಸೊಂಟ ತೋರಿಸಿಕೊಂಡಿದ್ದವಳು ಬಂದರೆ ಮಾತ್ರ ಎದ್ದು ನಿಲ್ಲುತ್ತಾರೆ. ದೇಶಪ್ರೇಮಿಗಳು ರಾಷ್ಟ್ರಗೀತೆಗೆ ನಿಲ್ಲುವವರೋ, ಅರೆಬರೆ ಬಟ್ಟೆಯಲ್ಲಿ ಅಂಗಾಗ ಕುಣಿಸುತ್ತಿದ್ದವಳಿಗೆ ಎದ್ದು ನಿಲ್ಲುವವರೋ ನೀವೇ ನಿರ್ಧರಿಸಿ.

– ಚಿರಂಜೀವಿ ಭಟ್‌

Tags

Related Articles

Close