ಅಂಕಣದೇಶಪ್ರಚಲಿತ

ಜಗತ್ತಿನ ಟಾಪ್ 10 ಪ್ರಬಲ ಸೇನಾ ಶಕ್ತಿಯನ್ನು ಹೊಂದಿರುವ ರಾಷ್ಟ್ರಗಳಾವುದು ಗೊತ್ತೇ?! ಭಾರತಕ್ಕೆ 10 ರಲ್ಲಿ ಎಷ್ಟನೆಯ ಸ್ಥಾನ?!

‘ಇಂದಿರಾ ಗಾಂಧಿಯವರೇ ನೀವು ನಿಮ್ಮ ಕೆಲಸ ನೋಡಿಕೊಳ್ಳಿ ಅದನ್ನು ಬಿಟ್ಟು ಭಾರತೀಯ ಸೇನೆಯ ಆಂತರಿಕ ವಿಷಯಗಳ ಬಗ್ಗೆ ತೊಡಗಿಕೊಳ್ಳಬೇಡಿ ಎಂದು
ಭಾರತದ ಪ್ರಭಾವಿ ಸೈನಿಕ ಮರ್ಷಾಲ್ ಮನೆಕ್ಷ್ವಾ, ಇಂದಿರಾಗಾಂಧಿಗೆ ಹೇಳಿದ್ದರು!!! ಆದರೆ ನಾವು ನಮ್ಮ ದೇಶದ ಸೈನಿಕರಿಗೆ ಮೊದಲ ಪ್ರಾಶಸ್ತ್ಯವನ್ನು ನೀಡುತ್ತಿದ್ದೇವೆ ಎಂಬುವುದು ಎಲ್ಲರಿಗೆ ತಿಳಿದ ವಿಚಾರ. ಭಾರತೀಯ ಸೈನಿಕರು ತೋರಿಸಿದ ನಂಬಿಕೆ ಮತ್ತು ಧೈರ್ಯಕ್ಕೆ ಬೇರಾರು ಸಾಟಿಯಿಲ್ಲ ಬಿಡಿ!!! ನಮ್ಮ ದೇಶದ ಗಡಿಯನ್ನು ಕಾಯುವ ಸೈನಿಕರು ಅದೆಷ್ಟೋ ಕಷ್ಟದ ಸನ್ನಿವೇಶಗಳನ್ನು ಎದುರಿಸಿ, ತೀವ್ರವಾದ ತಾಪಮಾನದೊಂದಿಗೆ ದೇಶವನ್ನು ಕಾಯುತ್ತಿದ್ದಾರೆ ಎಂದರೆ ಅವರಿಗೆ ದೇಶದ ಮೇಲಿರುವ ದೇಶಭಕ್ತಿ, ಶ್ರದ್ಧೆಯನ್ನು ನಾವು ಗೌರವಿಸಲೇಬೇಕು. ಅಷ್ಟೇ ಅಲ್ಲದೇ ದೇಶದ ಮೇಲೆ ಅವರಿಗಿರುವ ಪ್ರಮುಖ ಶ್ರದ್ಧೆಯೇ ‘ಜವಾಬ್ದಾರಿ’.

ಹೌದು.. ದೇಶದ ಗಡಿಯನ್ನು ಕಾಯುವ ಜವಾಬ್ದಾರಿ, ದೇಶವನ್ನು ಭಯೋತ್ಪಾದಕರಿಂದ ರಕ್ಷಣೆ ಮಾಡುವ ಜವಾಬ್ದಾರಿ, ಗಡಿನಾಡಿನಲ್ಲಿ ಉಗ್ರಗಾಮಿಗಳೊಂದಿಗೆ
ಹೋರಾಡಿ ಉಗ್ರರನ್ನು ತಡೆಯುವ ಜವಾಬ್ದಾರಿ, ಇವೆಲ್ಲವೂ ಸೈನಿಕನ ಜವಾಬ್ದಾರಿಯ ಕಿರುಪಾತ್ರವನ್ನು ತೋರಿಸುತ್ತೆ. ಅಂತಹ ಅದೆಷ್ಟೋ ಜವಬ್ದಾರಿಯನ್ನು
ನಿರ್ವಹಿಸುತ್ತಿರುವ ಸೈನಿಕರು ದೇಶದ ರಕ್ಷಕರಾಗಿದ್ದಾರೆ. ಆದರೆ ಪ್ರಸ್ತುತ ಸನ್ನಿವೇಶಗಳಲ್ಲಿ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು ಅಂದರೆ ನಾವು ಯುದ್ದವನ್ನು ಎದುರಿಸುವಲ್ಲಿ ಎಷ್ಟು ತಯಾರಿಯಲ್ಲಿದ್ದೇವೆ? ಮತ್ತುನಮ್ಮ ಎದುರಾಳಿಗಳನ್ನು ಎದುರಿಸುವಷ್ಟು ಸಾಮಥ್ರ್ಯವನ್ನು ಹೊಂದಿದ್ದೇವೆಯೇ ನಾವು? ಎಂದು.

ಆದರೆ ದೇಶದ ರಕ್ಷಣಾ ವಿಚಾರದ ಬಗ್ಗೆ ಅಭಿಪ್ರಾಯವನ್ನು ನೀಡಲು ನನಗೆ ಯುದ್ಧದ ಬಗೆಗೆ ಯಾವುದೇ ರೀತಿಯ ಅನುಭವವಿಲ್ಲ. ಆದರೆ ಒಬ್ಬ ವೀಕ್ಷಕನಾಗಿ
ಹೇಳುವುದಾದರೆ ನರೇಂದ್ರ ಮೋದಿ ಸರಕಾರ ದೇಶದ ರಕ್ಷಣಾ ವಿಚಾರವಾಗಿ ಬಹಳಷ್ಟು ಯಶಸ್ಸಿಯಾದ ಯೋಜನೆಗಳನ್ನು ಮಾಡಿದ್ದಲ್ಲದೇ, ಸೈನಿಕರಿಗೆ ಯುದ್ದದ
ಸಲಕರಣೆಗಳನ್ನು ನೀಡುವಲ್ಲಿ ಸೇನಾಪಡೆಗೆ ನೆರವಾಗಿದೆ. ಆದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಮಾಡದ ಕೆಲಸವನ್ನು ನರೇಂದ್ರ ಮೋದಿ ಸರಕಾರ
ಮಾಡಿದ್ದಾರೆ ಎಂದು ಅದು ಹೆಮ್ಮೆಯ ವಿಚಾರ.

ಮನೋಹರ್ ಪರಿಕ್ಕರ್ ನವೆಂಬರ್ 9, 2014ರಂದು ರಕ್ಷಣಾ ಸಚಿವರಾಗಿ ನೇಮಕಗೊಂಡ ನಂತರ ಹಲವು ರೀತಿಯಲ್ಲಿ, ರಕ್ಷಣಾ ಕ್ಷೇತ್ರದಲ್ಲಿ ಬದಲಾವಣೆ ಕಂಡಿದೆ
ಎಂದರೆ ನೀವು ನಂಬ್ತೀರಾ?. ಹೌದು.. ಇದು ನಂಬಲೇಬೇಕಾದ ಸತ್ಯ. ಮೋದಿ ಸರಕಾರದಲ್ಲಿ ಸಮರ್ಥ ರೀತಿಯ ಯುದ್ಧ ಸಲಕರಣೆಗಳನ್ನು ಸೈನಿಕರು
ಪಡೆದುಕೊಂಡಿದ್ದಾರೆ. ಅಲ್ಲದೇ ಒಆರ್‍ಒಪಿಯನ್ನು ಅನುಷ್ಠಾನಕ್ಕೆ ತಂದಿದ್ದಲ್ಲದೇ ಅದರಲ್ಲಿ ಯಾವುದೇ ರೀತಿಯ ವಂಚನೆಗಳು ನಡೆದಿಲ್ಲ ಎನ್ನುವುದು ಮತ್ತೊಂದು ವಿಚಾರ. ಆದರೆ ದುಖಃಕರ ಸಂಗತಿ ಎಂದರೆ ಎಲ್ಲಾ ಸೈನಿಕರಿಗೆ ಬುಲೆಟ್‍ಪ್ರೂಫ್ ಜಾಕೆಟ್‍ಗಳು ಸಿಗದೆ ಅದರಿಂದ ವಂಚಿತರಾಗಿದ್ದು, ಹಾಗಾಗಿ ಅದಷ್ಟೂ ಬೇಗ ಎಲ್ಲಾ ಸೈನಿಕರು ಬುಲೆಟ್ ಪ್ರೋಫ್ ಜಾಕೆಟ್ ಪಡೆದುಕೊಳ್ಳಲಿದ್ದಾರೆ!! ಇತ್ತೀಚಿನ ಬೆಳವಣಿಗೆಯ ಪ್ರಕಾರ ನಮ್ಮ ದೇಶವನ್ನು ಕಾಯುವ ಸೈನಿಕರಿಗೆ ಲೈಟರ್ ಹೆಲ್ಮೆಟ್‍ನ್ನು ನೀಡಲಾಗಿದ್ದು, ಇದು ಅತ್ಯಂತ ಕಠಿನ ಸಂದರ್ಭದಲ್ಲೂ ವೇಗವಾಗಿ ಚಲಿಸಲು ಸಹಾಯ ಮಾಡುತ್ತದೆ ಎಂದರೆ ನರೇಂದ್ರ ಮೋದಿ ಸರಕಾರ ದೇಶದ ರಕ್ಷಣಾ ವಿಚಾರವಾಗಿ ಹೆಚ್ಚಿನ ಗಮನಹರಿಸಿರುವುದನ್ನು ನಾವು ಶ್ಲಾಘಿಸಲೇಬೇಕು.

ಪ್ರಬಲ ಸೇನಾಬಲವನ್ನು ಹೊಂದಿರುವ ವಿಶ್ವದ 10 ದೇಶಗಳು!!!

10. ಬ್ರೆಜಿಲ್:
ಸಾಕರ್ ಕ್ಷೇತ್ರದಲ್ಲಿ ತಮ್ಮ ಡ್ರಿಬ್ಲಿಂಗ್ ಕೌಶಲ್ಯಕ್ಕೆ ಹೆಸರುವಾಸಿಯಾಗಿರುವ ದಕ್ಷಿಣ ಅಮೇರಿಕಾದ ರಾಷ್ಟ್ರವೂ ಹತ್ತನೇ ಸ್ಥಾನದಲ್ಲಿದೆ. ಇವರು ಕಾಫಿ, ಮೋಜು ಮತ್ತು
ಮನರಂಜನೆಯಲ್ಲಿ ಬಹಳ ಪ್ರಸಿದ್ಧರಾಗಿದ್ದಾರೆ. ರಕ್ಷಣಾ ವಿಚಾರಕ್ಕೆ ಬಂದಾಗ ಬ್ರೆಜಿಲ್ ಅತ್ಯುತ್ತಮರೆನಿಸಿದ್ದಾರೆ. 0.6912 ವಿದ್ಯುತ್ ಸೂಚ್ಯಂಕವನ್ನು ಹೊಂದಿರುವ
ಇವರ ರಕ್ಷಣಾ ಬಜೆಟ್ 31,576,000,000 ಡಾಲರ್‍ನಷ್ಟಿದೆ. ಇಷ್ಟೇ ಅಲ್ಲದೇ 3,71,199ರಷ್ಟು ಸಕ್ರೀಯಾವಾದ ಸೇನಾ ಸಿಬ್ಬಂದಿಗಳನ್ನು ಹೊಂದಿದೆ. ಒಟ್ಟು
104,700,000ರಷ್ಟು ಸೈನಿಕರನ್ನು ಹೊಂದಿದ್ದು, 822 ವಿಮಾನಗಳು ಮತ್ತು 106ರಷ್ಟು ನೌಕಾ ಸಾಮಥ್ರ್ಯವನ್ನು ಹೊಂದಿರುವ ಬ್ರೆಜಿಲ್, ಪ್ರಬಲಶಾಲಿ ದೇಶಗಳ ಪೈಕಿ 10ನೇ ಸ್ಥಾನದಲ್ಲಿದೆ.

9. ಇಟಲಿ:
ಪ್ರಪಂಚದಲ್ಲಿ ಪಿಜ್ಜಾ ಮತ್ತು ಪಾಸ್ಟಾಗಳಿಗೆ ಅತ್ಯಂತ ಹೆಸರುವಾಸಿದ್ದಲ್ಲದೇ ಫ್ಯಾಷನ್‍ಲೋಕದಲ್ಲಿ ತಮ್ಮದೇ ಹೆಸರನ್ನು ಬರೆದಿದೆ ಈ ಯುರೋಪಿಯನ್ ದೇಶ.
0.6838ರ ವಿದ್ಯುತ್ ಸೂಚ್ಯಂಕವನ್ನು ಹೊಂದಿದ್ದು, 31,946,000,000 ಡಾಲರ್ ರಕ್ಷಣಾ ಬಜೆಟ್ ಹಾಗೂ ಸುಮಾರು 293,202ರಷ್ಟು ಕ್ರೀಯಾಶೀಲ ಸೇನಾ
ಸಿಬ್ಬಂದಿಗಳನ್ನು ಹೊಂದಿದೆ. ಅತ್ಯಂತ ಶಕ್ತಿಶಾಲಿ ರಕ್ಷಣಾ ಪಡೆಗಳ ಪೈಕಿ ಇಟಲಿ 9ನೇ ಸ್ಥಾನದಲ್ಲಿದ್ದು, 25,080,000ರಷ್ಟು ಕಾರ್ಮಿಕ ಶಕ್ತಿಯನ್ನು ಹೊಂದಿದೆ. 770 ವಿಮಾನಗಳನ್ನು ಮತ್ತು ಒಟ್ಟು 179ರಷ್ಟು ನೌಕಾಬಲವನ್ನು ಹೊಂದಿರುವ ದೇಶವಾಗಿದೆ.

8. ದಕ್ಷಿಣ ಕೊರಿಯ:                                                                                                                                                                               ಏಷ್ಯಾದ ದೇಶವು ಪ್ರಮುಖ ದೇಶಗಳಲ್ಲಿ ಒಂದಾದ ದಕ್ಷಿಣ ಕೊರಿಯಾ ಸ್ವಯಂ ನಂಬಿಕೆಯ ತತ್ವವನ್ನು ಪ್ರತಿಪಾದಿಸುತ್ತದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಬಲ ದೇಶ
ಎನಿಸಿಕೊಂಡಂತಹ ದಕ್ಷಿಣ ಕೊರಿಯಾ ಸ್ಯಾಮ್‍ಸಂಗ್ ಹಾಗೂ ಇತರ ತಂತ್ರಜ್ಞಾನವನ್ನು ಕಂಡುಹಿಡಿದ ಇವರು ಆರ್ಥಿಕ ಶಕ್ತಿಯಲ್ಲಿ ಪ್ರಭಾವಿಗಳೆಂದೆನೆಸಿದ್ದಾರೆ. ವಿಶ್ವದ ಅಗ್ರ ಪಟ್ಟಿಯಲ್ಲಿ 8ನೇ ಸ್ಥಾನವನ್ನುಪಡೆದಿರುವ ಇವರು ವಿದ್ಯುತ್ ಸೂಚ್ಯಂಕದಲ್ಲಿ 0.6547ರಷ್ಟಿದ್ದು, ಗಂಗ್ನಮ್ ಸ್ಟೈಲ್‍ನಲ್ಲಿ ಹೆಸರುವಾಸಿಯಾಗಿರುವ ದೇಶ. ರಕ್ಷಣಾ ಕ್ಷೇತ್ರದ ಬಜೆಟ್‍ನಲ್ಲಿ ಸುಮಾರು 28,280,000,000 ಡಾಲರ್ ಹೊಂದಿರುವ ಇವರು ಸುಮಾರು 653,000ರಷ್ಟು ಸಕ್ರೀಯ ಮಿಲಿಟರಿ ಸಿಬ್ಬಂದಿಗಳನ್ನು ಹೊಂದಿದ್ದಾರೆ. ಅಷ್ಟೆ ಅಲ್ಲದೇ 25,100,100ರಷ್ಟು ಕಾರ್ಮಿಕ ಪಡೆಗಳನ್ನು ಹೊಂದಿರುವ ಇವರು ತಮ್ಮ ಎದುರಾಳಿಗಳನ್ನು ಎದುರಿಸುವಲ್ಲಿ ಸಮರ್ಥರಾಗಿದ್ದಾರೆ. 871 ವಿಮಾನಗಳು ಹಾಗೂ 190 ನೌಕಾಬಲವನ್ನು ಹೊಂದಿದ್ದಾರೆ.

7. ಜರ್ಮನಿ:
ವಿಶ್ವದ ಅಗ್ರಪಟ್ಟಿಯಲ್ಲಿ ಏಳನೇ ಸ್ಥಾನವನ್ನು ಹೊಂದಿರುವ ಜರ್ಮನಿ ವಿದ್ಯುತ್ ಸೂಚ್ಯಂಕದಲ್ಲಿ 0.6491ನ್ನು ಹೊಂದಿದ್ದರೇ ರಕ್ಷಣಾ ಬಜೆಟ್ 43,478,000,000 ಡಾಲರ್ ರಷ್ಟಿದೆ. ಸುಮಾರು 148,996 ಸಕ್ರೀಯ ಮಿಲಿಟರಿ ಸಿಬ್ಬಂದಿಗಳನ್ನು ಹೊಂದಿದ್ದು 43,620,000ರಷ್ಟು ಕಾರ್ಮಿಕ ಬಲವನ್ನು ಹೊಂದಿದೆ. ಅಷ್ಟೇ ಅಲ್ಲದೇ 92 ವಿಮಾನಗಳನ್ನು ಮತ್ತು 67 ನೌಕಾ ಸಾಮಥ್ರ್ಯವನ್ನು ಹೊಂದಿದ್ದು, ಐರೋಪ್ಯ ದೇಶದಲ್ಲಿ ಪ್ರಬಲ ಮಿಲಿಟರಿ ಶಕ್ತಿಯನ್ನು ಹೊಂದಿದೆ.

6. ಫ್ರಾನ್ಸ್:
ಯುರೋಪಿಯನ್ ದೇಶದಲ್ಲಿ ಒಂದಾಗಿರುವ ಫ್ರಾನ್ಸ್ ಮಿಲಿಟರಿ ಸೇನೆಯಲ್ಲಿ 6ನೇ ಸ್ಥಾನದಲ್ಲಿದೆ. ವಿದ್ಯುತ್ ಸೂಚ್ಯಂಕದ ಪ್ರಕಾರ 0.6163ರಷ್ಟಿದ್ದು, ರಕ್ಷಣಾ
ಬಜೆಟ್‍ನಲ್ಲಿ 58,244,000,000 ಡಾಲರ್‍ರನ್ನು ಹೊಂದಿದೆ. ಇವರು ಕೇವಲ ಐರೋಪ್ಯ ದೇಶದಲ್ಲಿ ಉತ್ತಮ ಸಾಮಥ್ರ್ಯವನ್ನು ಹೊಂದಿದ್ದಲ್ಲದೇ ವಿಶ್ವದಲ್ಲಿ ಪ್ರಭಾವಿ ರಾಷ್ಟ್ರ ಎಂದೆನಿಸಿಕೊಂಡ ರಾಷ್ಟ್ರ. 362,485 ಸಕ್ರೀಯ ಮಿಲಿಟರಿ ಸಿಬ್ಬಂದಿಗಳನ್ನು ಹೊಂದಿದದ್ದು, 29,610,000 ಕಾರ್ಮಿಕ ಶಕ್ತಿಯನ್ನು, 544 ವಿಮಾನಗಳು ಹಾಗೂ 180 ನೌಕಾಪಡೆಗಳನ್ನು ಹೊಂದಿದ ದೇಶವಾಗಿದೆ.

5. ಯುನೈಟೆಡ್ ಕಿಂಗ್‍ಡಮ್:
ಮಿಲಿಟರಿ ಸಾಮಥ್ರ್ಯದಲ್ಲಿ 5ನೇ ಸ್ಥಾನವನ್ನು ಹೊಂದಿರುವ ಇಂಗ್ಲೆಂಡ್, ವಿದ್ಯುತ್ ಸೂಚ್ಯಂಕದ ಪ್ರಕಾರ 0.5185 ರಷ್ಟಿದ್ದು, ರಕ್ಷಣಾ ಬಜೆಟ್‍ನಲ್ಲಿ
57,875,170,000 ಡಾಲರ್‍ರಷ್ಟನ್ನು ಹೊಂದಿದೆ. 224,500 ಸಕ್ರೀಯ ಮಿಲಿಟರಿ ಸಿಬ್ಬಂದಿ ಮತ್ತು 31,720,000 ಕಾರ್ಮಿಕ ಶಕ್ತಿಯನ್ನು ಹೊಂದಿದೆ.
ಅಷ್ಟೇ ಅಲ್ಲದೇ 1412 ವಿಮಾನಗಳನ್ನು ಹಾಗೂ 77 ನೌಕಾಪಡೆಗಳನ್ನು ಹೊಂದಿದ್ದು, ಯುದ್ದದ ಸಂದರ್ಭದಲ್ಲಿ ಸಮರ್ಥವಾಗಿ ಎದುರಾಳಿಗಳೊಂದಿಗೆ ಹೋರಾಡುವ ಪ್ರಬಲಶಕ್ತಿಯನ್ನು ಹೋದಿದೆ ಇಂಗ್ಲೆಂಡ್.

4. ಭಾರತ:
29 ಸೆಪ್ಟೆಂಬರ್ 2016ರಂದು ಭಾರತ ಪಿಒಕೆಯ ವಿರುದ್ದ ನಡೆಸಿದ ಸರ್ಜಿಕಲ್ ಸ್ಟ್ರೇಕ್‍ನಿಂದ ಅಪಾರವಾದ ಸಾವ Åನೋವುಗಳು ಉಂಟಾಗಿದ್ದವು. ಆದರೆ
ಭಾರತದ ಸೈನ್ಯ ಉಗ್ರರಿಗೆ ಪ್ರಬಲವಾದ ರಿತಿಯಲ್ಲಿ ಎಚ್ಚರಿಕೆಯನ್ನು ನೀಡಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿತ್ತು. ವಿದ್ಯುತ್ ಸೂಚ್ಯಂಕದ ಪ್ರಕಾರ ಭಾರತ
0.4346ರಷ್ಟಿದ್ದು, ರಕ್ಷಣಾ ಬಜೆಟ್‍ನಲ್ಲಿ 44,282,000,000 ಡಾಲರ್‍ನ್ನು ಹೊಂದಿದೆ. ಭಾರತ ಮಿಲಿಟರಿ ಶಕ್ತಿಯಲ್ಲಿ 4ನೇ ಸ್ಥಾನವನ್ನು ಪಡೆದಿದ್ದು,
13,25,000 ಸಕ್ರೀಯ ಮಿಲಿಟರಿ ಸಿಬ್ಬಂದಿ ಮತ್ತು 487,600,000 ಕಾರ್ಮಿಕ ಶಕ್ತಿಯನ್ನು ಹೊಂದಿದೆ. ಅಷ್ಟೇ ಅಲ್ಲದೇ 1962 ವಿಮಾನಗಳನ್ನು ಹಾಗೂ 170 ನೌಕಾ ಬಲವನ್ನು ಹೊಂದಿದ್ದು, ಸೇನಾಬಲದಲ್ಲಿ ಭಾರತ ಅಗ್ರ ಸ್ಥಾನದಲ್ಲಿರುವುದು ಹೆಮ್ಮೆಯ ವಿಚಾರ.

3. ಚೀನಾ :
ಚೀನಾ ತನ್ನ ಶಕ್ತಿ ಸಾಮಾಥ್ರ್ಯದಿಂದ ಪಾಕಿಸ್ತಾನಿ ಭಯೋತ್ಪಾದಕರನ್ನು ರಕ್ಷಿಸುವಲ್ಲಿ ಹೆಚ್ಚಿನ ರಕ್ಷಣೆಯನ್ನು ನೀಡುತ್ತಿದೆ. ಜಾಗತೀಕ ಮಟ್ಟದಲ್ಲಿ ತಾವೇ ಮುಂದೆ
ಇದ್ದೇವೆಯೆಂದು ತಮ್ಮನ್ನು ತಾವೇ ಪರಿಗಣಿಸಿದ್ದಾರೆ. ವಿದ್ಯುತ್ ಸೂಚ್ಯಂಕದ ಪ್ರಕಾರ 0.3351ರಷ್ಟಿದ್ದು, ರಕ್ಷಣಾ ಬಜೆಟ್ 129,272,000,000 ಡಾಲರ್‍ಗಳನ್ನು
ಹೊಂದಿರುವ ದೇಶ. ಇಷ್ಟೇ ಅಲ್ಲದೇ 22, 85,000 ರಷ್ಟು ಸಕ್ರೀಯಾವಾದ ಸೇನಾ ಸಿಬ್ಬಂದಿಗಳನ್ನು ಹೊಂದಿದೆ. ಒಟ್ಟು 795,500,000 ರಷ್ಟು ಕಾರ್ಮಿಕ ಶಕ್ತಿಯನ್ನು ಹೊಂದಿದ್ದು, 5048 ವಿಮಾನಗಳು ಮತ್ತು 972 ರಷ್ಟು ನೌಕಾ ಸಾಮಥ್ರ್ಯವನ್ನು ಹೊಂದಿರುವ ಚೀನಾಪ್ರಬಲಶಾಲಿ ದೇಶಗಳಲ್ಲಿ 3ನೇ ಸ್ಥಾನದಲ್ಲಿದೆ.

2. ರಷ್ಯಾ:
1991ರಲ್ಲಿ ಸೋವಿಯತ್ ಒಕ್ಕೂಟ ವಿಭಜನೆಗೊಂಡ ನಂತರವೂ ರಷ್ಯಾ ಎಡರನೇ ಸ್ಥಾನದಲ್ಲಿದೆ. ವಿದ್ಯುತ್ ಸೂಚ್ಯಂಕದ ಪ್ರಕಾರ 0.2618 ರಷ್ಟು ಮತ್ತು ರಕ್ಷಣಾ
ಬಜೆಟ್‍ನಲ್ಲಿ 64,000,000,000 ಡಾಲರ್ ಹೊಂದಿದೆ. 1,200,000 ಸಕ್ರೀಯ ಮಿಲಿಟರಿ ಸಿಬ್ಬಂದಿ ಮತ್ತು 75,330,000 ಕಾರ್ಮಿಕ ಶಕ್ತಿಯನ್ನು
ಹೊಂದಿದೆ. ಅಷ್ಟೇ ಅಲ್ಲದೇ 4498 ವಿಮಾನಗಳನ್ನು ಹಾಗೂ 224 ನೌಕಾಪಡೆಗಳನ್ನು ಹೊಂದಿದೆ.

1. ಅಮೆರಿಕಾ:
ವಿಶ್ವದಲ್ಲಿ ಒಂದನೇ ಸ್ಥಾನವನ್ನು ಹೊಂದಿರುವ ಅಮೆರಿಕಾ, ವಿಶ್ವದ ದೊಡ್ಡಣ್ಣ ಖ್ಯಾತಿಗೆ ಪಾತ್ರವಾಗಿದೆ. 0.2475 ವಿದ್ಯುತ್ ಸೂಚ್ಯಂಕವನ್ನು ಹೊಂದಿರುವ ಇವರ ರಕ್ಷಣಾ ಬಜೆಟ್ 689,591,000,000 ಡಾಲರ್ ರಷ್ಟಿದೆ. ಇಷ್ಟೇ ಅಲ್ಲದೇ 1,477,896 ರಷ್ಟು ಸಕ್ರೀಯಾವಾದ ಸೇನಾ ಸಿಬ್ಬಂದಿಗಳನ್ನು ಹೊಂದಿದೆ. ಒಟ್ಟು 153,600,000ರಷ್ಟು ಸೈನಿಕರನ್ನು ಹೊಂದಿದ್ದು, 15.293ವಿಮಾನಗಳು ಮತ್ತು 290 ರಷ್ಟು ನೌಕಾ ಸಾಮಥ್ರ್ಯವನ್ನು ಹೊಂದಿದೆ ಅಮೇರಿಕಾ.

(Note: Nuclear capabilities have not been taken into consideration. Rankings are based on every
Nation’s potential war making capabilities across land, sea & air.)

-ಅಲೋಖಾ

Tags

Related Articles

Close