ಪ್ರಚಲಿತ

60,00,00,00,00,000 ರೂ. ಡೀಲು ಪ್ರಕರಣಕ್ಕೆ ಹೊಸ ಟ್ವಿಸ್ಟ್!!!! ಸಿಬಿಐ ನೀಡಿದ ಸಮನ್ಸ್ ಅನ್ನು ಚಿದಂಬರಂ ಪುತ್ರ ಸ್ವೀಕರಿಸಲಾರೆ ಎಂದಿದ್ಯಾಕೆ…!!!

ಏರ್ಸೆಲ್-ಮ್ಯಾಕ್ಸಿಸ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಲು ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ನಿರಾಕರಿಸಿದ್ದು, ತನಗೆ ನೀಡಿರುವ ಸಮನ್ಸ್ ಹಿಂಪಡೆಯುವಂತೆ ತನಿಖಾ ಸಂಸ್ಥೆಗೆ ಮನವಿ ಮಾಡಿದ್ದಾರೆ. ಪ್ರಕರಣವನ್ನು ಎದುರಿಸಲು ಹಿಂದೇಟು ಹಾಕುತ್ತಾ ಕಾಲಹರಣ ಮಾಡುತ್ತಿರುವ ಕಾರ್ತಿ ಚಿದಂಬರಂ ಅವರ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಏರ್ಸೆಲ್-ಮ್ಯಾಕ್ಸಿಸ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ತನಿಖೆ ನಡೆಸುತ್ತಿದ್ದು ವಿಚಾರಣೆಗೆ ಹಾಜರಾಗುವಂತೆ ಕಾರ್ತಿ ಚಿದಂಬರಂಗೆ ಸಮನ್ಸ್ ಕಳಿಸಿದೆ.
ಆದರೆ ಸಿಬಿಐ ನೀಡಿರುವ ಸಮನ್ಸ್ ಪ್ರಶ್ನಿಸಿ ಕಾರ್ತಿ ಚಿದಂಬರಂ ಅವರು ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಿದ್ದು, ಅರ್ಜಿ ಇತ್ಯಾರ್ಥವಾಗುವವರೆಗೆ ತಮಗೆ ನೀಡಿರುವ
ಸಮನ್ಸ್ ಹಿಂಪಡೆಯುವಂತೆ ಕಾರ್ತಿ ಸಿಬಿಐಗೆ ಇಂದು ಮನವಿ ಮಾಡಿದ್ದಾರೆ.

ಕಳೆದ ತಿಂಗಳು ಏರ್ ಸೆಲ್-ಮ್ಯಾಕ್ಸಿಸ್ ಹಗರಣಕ್ಕೆ ಸಂಬಂಧಿಸಿದಂತೆ ನಿಮ್ಮ ಹಣಕಾಸು ದಾಖಲೆಗಳೊಂದಿಗೆ ಒಂದು ವಾರದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಕಾರ್ತಿ ಚಿದಂಬರಂಗೆ ಸಮನ್ಸ್ ನೀಡಿತ್ತು. ವಿಚಾರಣೆಗೆ ಹಾಜರಾಗುವಂತೆ ಸೆಪ್ಟೆಂಬರ್ 26ರಂದು ನನ್ನ ಕಕ್ಷಿದಾರರಿಗೆ ನೀಡಿರುವ ಸಮನ್ಸ್ ಅನ್ನು ಹಿಂಪಡೆಯುವಂತೆ ನಾನು ಮನವಿ ಮಾಡಿಕೊಳ್ಳುತ್ತೇನೆ ಮತ್ತು ಸುಪ್ರೀಂ ಕೋರ್ಟ್ ಆದೇಶ ನೀಡುವವರೆಗೆ ಕಾಯಿರಿ ಎಂದು ಕಾರ್ಚಿ ಚಿದಂಬರಂ ಪರ ವಕೀಲ ನಟರಾಜನ್ ಅವರು ಸಿಬಿಐಗೆ ಪತ್ರ ಬರೆದಿದ್ದಾರೆ. ಈ ರೀತಿ ಕಾಲಹರಣ ಮಾಡುವುದರ ಹಿಂದೆ ಯಾವುದೋ ನಿಗೂಢವೊಂದು ಕಾರಣವೂ ಇದೆ ಎಂಬ ಪ್ರಶ್ನೆ ತೇಲಿಬಂದಿದೆ.

ಪಿ. ಚಿದಂಬರಂ ಅವರ ಏರ್ಸೆಲ್ ಮಾಕ್ಸಿಸ್ ಡೀಲ್ ಕುರಿತು ಸುಬ್ರಹ್ಮಣಿಯನ್ ಸ್ವಾಮಿ ಕಾನೂನು ಸಮರ ನಡೆಸುತ್ತಾ ಬರುತ್ತಿದ್ದಾರೆ. ಈ ಡೀಲ್‍ನಿಂದ ಸರಕಾರದ
ಬೊಕ್ಕಸಕ್ಕೆ ಸುಬ್ರಹ್ಮಣಿಯನ್ ಸ್ವಾಮಿ ಪ್ರಕಾರ ಬರೋಬ್ಬರಿ 60,00,00,00,00,000 ಅಂದ್ರೆ ಆರು ಲಕ್ಷ ಕೋಟಿ ರೂ. ಹಣ. ನಷ್ಟವಾಗಿತ್ತು ಎಂದು ಗಂಭೀರ ಆರೋಪ ಮಾಡಿದ್ದರು. 2ಜಿ ಸೇವೆ ಒದಗಿಸಲೆಂದು ಶಿವಶಂಕರನ್ ಮಾಲಕತ್ವದ ಏರ್ಸೆಲ್ ಮಾಕ್ಸಿಸ್ ಕಂಪೆನಿಯನ್ನು ಒತ್ತಾಯಪೂರ್ವಕವಾಗಿ ಶೇ. 100 ಶೇರ್ ಮಲೇಶಿಯಾದ ವ್ಯಕ್ತಿ ಆನಂದ್ ಕೃಷ್ಣನ್ ಎಂಬವರಿಗೆ ಮಾರಲಾಯಿತು. ಅದುಕೂಡಾ ಶೇ. 100 ಶೇರ್ ಮೂಲಕ ಮಾರಲಾಗಿದ್ದು, ನಿಯಮಗಳ ಪ್ರಕಾರ ಭಾರತದ ಕಂಪೆನಿಯೊಂದನ್ನು ಶೇ. ನೂರರಷ್ಟು ಹೊರದೇಶದ ವ್ಯಕ್ತಿಗೆ ಮಾರುವಂತಿಲ್ಲ. ಯಾಕೆಂದರೆ ವಿದೇಶಿ ಹೂಡಿಕೆ ವಿಚಾರದಲ್ಲಿ ಇಂಥದೊಂದು ನಿಯಮವಿದೆ ಎನ್ನುವುದು ಸುಬ್ರಹ್ಮಣಿಯನ್ ಸ್ವಾಮಿ ಅವರ ಆರೋಪವಾಗಿದೆ.

ಚಿದಂಬರಂ ನಡೆಸಿದ ಡೀಲ್‍ನಿಂದ ಸರಕಾರದ ಬೊಕ್ಕಸಕ್ಕೆ ಬರೋಬ್ಬರಿ ಆರು ಲಕ್ಷ ಕೋಟಿ ರೂ. ನಷ್ಟವುಂಟಾಗಿದೆ ಎಂಬ ಗಂಭೀರ ಆರೋಪವನ್ನು ಸ್ವಾಮಿ
ಮಾಡುತ್ತಾರೆ. ಈ ಬಗ್ಗೆ ಅವರ ಬಳಿ ದಾಖಲೆಯೂ ಇದೆ. ಚಿದಂಬರಂನ 21 ಸೀಕ್ರೆಟ್ ಬ್ಯಾಂಕ್ ಅಕೌಂಟ್ ಇತ್ಯಾದಿಗಳ ಬಗ್ಗೆ ಸ್ವಾಮಿ ಬಳಿಯಲ್ಲಿ ದಾಖಲೆ ಇದೆ. ಈ
ಖಾತೆಗಳನ್ನು ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ನಿಯಂತ್ರಿಸುತ್ತಿದ್ದರು. ವಿದೇಶದ ನಾನಾ ಬ್ಯಾಂಕ್‍ಗಳಲ್ಲಿ ತಂದೆ ಮಗ ಖಾತೆಗಳನ್ನು ಹೊಂದಿದ್ದು ಅದರಲ್ಲಿ ಕೋಟಿಗಟ್ಟಲೆ ಹಣವಿದೆ. ಬ್ಯಾಂಕ್‍ಗಳ ಹೆಸರನ್ನೂ ಸ್ವಾಮಿ ಉಲ್ಲೇಖಿಸಿದ್ದಾರೆ. ಮೊನಕೋ ದೇಶದ ಬರ್ಕೇಲ್ಸ್ ಬ್ಯಾಂಕ್, ಯುನೈಟೆಡ್ ಕಿಂಗ್‍ಡಂನ ಮೆಟ್ರೊ ಬ್ಯಾಂಕ್, ಸಿಂಗಾಪುರದ ಸ್ಟಾಂಡರ್ಡ್ ಕ್ಯಾರೆಕ್ಟೆಡ್ ಬ್ಯಾಂಕ್, ಸಿಂಗಾಪುರದ ಒಎಸ್‍ಬಿಸಿ ಬ್ಯಾಂಕ್, ಯುಕೆಯ ಎಚ್‍ಎಸ್‍ಬಿಸಿ, ಫ್ರಾನ್ಸ್‍ನ ಡ್ಯೂಷೆ ಬ್ಯಾಂಕ್, ಸ್ವಿಝರ್ಲ್ಯಾಂಡ್‍ನ ಯುಬಿಎಸ್ ಬ್ಯಾಂಕ್, ಕ್ಯಾಲಿಫೆÇೀರ್ನಿಯಾದ ವೆಲ್ಸ್ ಫಾರ್ಗೊ ಬ್ಯಾಂಕ್ ಇತ್ಯಾದಿಗಳಲ್ಲಿ ಹಣ ಇಟ್ಟಿದ್ದಾರೆ ಎಂದು ಆರೋಪಿಸಿದ್ದರು. ಕಾರ್ತಿ ಚಿದಂಬರಂ ಅವರು ವಿದೇಶದಲ್ಲಿರುವ ತಮ್ಮ ಹಲವು ಬ್ಯಾಂಕ್ ಖಾತೆಗಳನ್ನು ಕ್ಲೋಸ್ ಮಾಡುತ್ತಿರುವುದರಿಂದ ಅವರ ವಿದೇಶ ಪ್ರಯಾಣ ತಡೆಯುವುದಕ್ಕಾಗಿ ಸಿಬಿಐ ಆತನ ವಿರುದ್ಧ ಲುಕ್‍ಔಟ್ ನೋಟಿಸ್ ಜಾರಿ ಮಾಡಿತ್ತು.

ಇದೀಗ ಕಾರ್ತಿ ಚಿದಂಬರಂ ಅವರು ಪ್ರಕರಣದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸಿಬಿಐ ನೀಡಿರುವ ಸಮನ್ಸ್ ಅನ್ನೇ ಪ್ರಶ್ನಿಸಿ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಇತ್ಯರ್ಥವಾಗುವವರೆಗೆ ತಮಗೆ ನೀಡಿರುವ ಸಮನ್ಸ್ ಹಿಂದೆ ಪಡೆಯುವಂತೆ ಕಾರ್ತಿ ಸಿಬಿಐಗೆ ಮನವಿ ಮಾಡಿರುವುದು ಸಾಕಷ್ಟು ಸಂಶಯಕ್ಕೆ ಕಾರಣವಾಗಿದೆ. ಸುಪ್ರೀಂ ಕೋರ್ಟಲ್ಲಿ ಈ ಅರ್ಜಿ ಇತ್ಯರ್ಥವಾಗುವವರೆಗೆ ಸಾಕಷ್ಟು ಸಮಯ ತೆಗೆದುಕೊಳ್ಳುವುದರಿಂದ ಅಷ್ಟರವರೆಗೆ ವಿದೇಶದಲ್ಲಿರುವ ಬ್ಯಾಂಕ್ ಖಾತೆಗಳನ್ನು ಕ್ಲೋಸ್ ಮಾಡುತ್ತಾರೋ ಎಂಬ ಸಂಶಯ ಕಾಡಲಾರಂಭಿಸಿದೆ.

Source : Original Link

-ಚೇಕಿತಾನ

Tags

Related Articles

Close