ಅಂಕಣ

6 ಲಕ್ಷ ಕೋಟಿ ರೂಪಾಯಿಗಳಷ್ಟು ದೇಶಕ್ಕೆ ನಷ್ಟ! ಇದು 2G ಹಗರಣಕ್ಕಿಂತ ನಾಲ್ಕು ಪಟ್ಟು ದೊಡ್ಡದು, ಅದರೂ ದೇಶದ ಮಾಧ್ಯಮಗಳೆಲ್ಲ ಕಂಡೂ ಕುರುಡಾಗಿದೆ!

ಸುಬ್ರಮಣಿಯನ್ ಸ್ವಾಮಿ ಅವರು ಹಿಂದಿನಿಂದಲೂ ಹಲವಾರು ಭ್ರಷ್ಟ ರಾಜಕಾರಣಿಗಳ ಭ್ರಷ್ಟಾಚಾರದ ವಿರುದ್ಧ ಕಾನೂನು ಸಮರ ನಡೆಸುತಾ ಬರುತ್ತಿದ್ದಾರೆ. ಅದೇ ರೀತಿ ಮಾಜಿ ಹಣಕಾಸು ಮಂತ್ರಿ ಪಿ. ಚಿದಂಬರಂ ಅವರ ಏರ್ಸೆಲ್ ಮಾಕ್ಸಿಸ್ ಡೀಲ್ ಕುರಿತು ಕಾನೂನು ಸಮರ ನಡೆಸುತ್ತಾ ಬರುತ್ತಿದ್ದಾರೆ. ಈ ಡೀಲ್‍ನಿಂದ ಸರಕಾರದ ಬೊಕ್ಕಸಕ್ಕೆ ನಷ್ಟವಾದ ಹಣವಷ್ಟು ಗೊತ್ತಾ? ಸುಬ್ರಹ್ಮಣಿಯನ್ ಸ್ವಾಮಿ ಪ್ರಕಾರ ಬರೋಬ್ಬರಿ   60,00,00,00,00,000 ಅಂದ್ರೆ ಆರು ಲಕ್ಷ ಕೋಟಿ ರೂ. ಹಣ.

2011ರಂದು ಸುಬ್ರಮಣಿಯನ್ ಸ್ವಾಮಿ ಅವರು ಪ್ರಕರಣದ ರೂವಾರಿ ಪಿ.ಚಿದಂಬರಂ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದು, ಅಲ್ಲಿಂದ ಇಲ್ಲಿಯವರೆಗೆ ಕಾನೂನು ಸಮರ ನಡೆಯುತ್ತಾ ಬರುತ್ತಿದೆ. ಸುಬ್ರಮಣಿಯನ್ ಅವರು ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಹಾಗೂ  ಮಾರನ್ ಸಹೋದರರ ವಿರುದ್ಧ ಕಾನೂನು ಸಮರ ನಡೆಸುತ್ತಾ ಬರುತ್ತಿದ್ದಾರೆ. ಏರ್ಸೆಲ್ ಮಾಕ್ಸಿಸ್ ಒಪ್ಪಂದ ಅಕ್ರಮವಾಗಿದೆ ಎಂದು ಕೋರ್ಟ್ ಸಮರ ನಡೆಯುತ್ತಿದೆ. ಚಿದಂಬರಂ ಯಾವಾಗ ಬೇಕಾದರೂ ಅರೆಸ್ಟ್ ಆಗುವ ಸಾಧ್ಯತೆ ಇದೆ ಎನ್ನುವುದು ಸ್ವಾಮಿ ಲೆಕ್ಕಾಚಾರ. ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ನಡೆಸಿದ ಡೀಲ್ ಪ್ರಕರಣದ ಬಗ್ಗೆ ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಪಿ. ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ನಡೆಸಿದ ಅಕ್ರಮದ ಬಗ್ಗೆ 15 ದಿನಗಳಲ್ಲಿ ದಾಖಲೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಸ್ವಾಮಿಯವರಲ್ಲಿ ತಿಳಿಸಿತು. ಆದರೆ ಸ್ವಾಮಿ ಅವರು ಈ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಕೆಲವೊಂದು ಪುರಾವೆಗಳನ್ನು ಒದಗಿಸಿ ತಂದೆ ಮಗ ಇಡೀ ದೇಶವನ್ನು ಯಾವ ರೀತಿ ಮೋಸಗೊಳಿಸಿದ್ದಾರೆ ಎಂದು ವಿವರಿಸಿದ್ದಾರೆ.

2ಜಿ ಸೇವೆ ಒದಗಿಸಲೆಂದು ಶಿವಶಂಕರನ್ ಮಾಲಕತ್ವದ ಏರ್ಸೆಲ್ ಮಾಕ್ಸಿಸ್ ಕಂಪೆನಿಯನ್ನು ಒತ್ತಾಯಪೂರ್ವಕವಾಗಿ ಶೇ. 100 ಶೇರ್ ಮಲೇಶಿಯಾದ ವ್ಯಕ್ತಿ ಆನಂದ್ ಕೃಷ್ಣನ್ ಎಂಬವರಿಗೆ ಮಾರಲಾಯಿತು. ಅದುಕೂಡಾ ಶೇ. 100 ಶೇರ್ ಮೂಲಕ ಮಾರಲಾಗಿದ್ದು, ನಿಯಮಗಳ ಪ್ರಕಾರ ಭಾರತದ ಕಂಪೆನಿಯೊಂದನ್ನು ಶೇ. ನೂರರಷ್ಟು ಹೊರದೇಶದ ವ್ಯಕ್ತಿಗೆ ಮಾರುವಂತಿಲ್ಲ. ಯಾಕೆಂದರೆ ವಿದೇಶಿ ಹೂಡಿಕೆ ವಿಚಾರದಲ್ಲಿ ಇಂಥದೊಂದು  ನಿಯಮವಿದೆ.

ಚಿದಂಬರಂ ಅವರ ಆದೇಶದಂತೆ ಅಂದಿನ ಟಿಲಿಕಾಂ ಮಂತ್ರಿಯಾಗಿದ್ದ ದಯಾನಿಧಿ ಮಾರನ್ ಅವರು ಈ ಈ ಡೀಲ್ ಕುದುರಿಸಿ ವಿದೇಶಿ ವಿನಿಮಯಗಳ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಮಲೇಶಿಯಾದ ಕಂಪೆನಿಗೆ ಅನುಕೂಲ ಮಾಡಿದ ಕಾರಣ ಕಾನೂನು ಬಾಹಿರವಾಗಿ ಮಾರನ ಒಡೆತನದ ಸನ್ ಟಿವಿಗೆ 600 ಕೋಟಿ ರೂ. ಬಂಡವಾಳ ಹೂಡಿದ್ದಾರೆ ಎಂದು ಸ್ವಾಮಿ ಆರೋಪಿಸಿದ್ದಾರೆ.

ಸ್ವಾಮಿ ಅವರ ಪ್ರಕಾರ, ಈ ಪ್ರಕರಣದಲ್ಲಿ ಚಿದರಂಬ ಅವರ ಪಾತ್ರವೂ ಇದ್ದು, ಏರ್ಸೆಲ್  ಮಾಕ್ಸಿಸ್ ಕಂಪೆನಿಯನ್ನು ಪಿ ಚಿದಂಬರಂ ಪುತ್ರ ಕಾರ್ತಿ ನಿಯಂತ್ರಿಸುತ್ತಿದ್ದರು. ಚಿದಂಬರಂ ಅವರು ಹರಾಜು ಅಥವಾ ಮಾರುಕಟ್ಟೆ ದರದಲ್ಲಿ ತರಂಗ ಹಂಚಿಕೆಗೆ ತಮ್ಮ ಸಚಿವಾಲಯದ ಅಧಿಕಾರಿಗಳು ಮಾಡಿದ್ದ ಶಿಫಾರಸ್ಸನ್ನು ಧಿಕ್ಕರಿಸಿದ್ದರು. ಇದರಿಂದ ಸರಕಾರದ ಬೊಕ್ಕಸಕ್ಕೆ ಕೋಟಿಗಟ್ಟಲೆ ಹಣ ನಷ್ಟವಾಗಲು ಕಾರಣವಾದರು ಎಂದು ಆರೋಪಿಸಿದ್ದಾರೆ.

ಇಷ್ಟೆಲ್ಲಾ ಆರೋಪಗಳಿದ್ದರೂ ಚಿದಂಬರಂ ಮಾತ್ರ ತನ್ನ ಆರೋಪವನ್ನು ಅಲ್ಲಗಳೆಯುವಂಥಾ ಸ್ಪಷ್ಟ ಹೇಳಿಕೆ ನೀಡಿಲ್ಲ. ಚಿದಂಬರಂಗೆ ಟಾಂಗ್ ನೀಡಿದ ಸ್ವಾಮಿ, ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ಪ್ರಕಾರ ಒಬ್ಬ ಸಮಾಜ ಸೇವಕ, ಮಂತ್ರಿ ಭ್ರಷ್ಟಾಚಾರದಲ್ಲಿ ತೊಡಗಿದ್ದರೆ ಅಥವಾ ಭ್ರಷ್ಟಾಚಾರ ನಡೆಸಲು ಇನ್ನೊಬ್ಬರಿಗೆ ನೆರವಾದರೆ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅದೇ ರೀತಿ ಚಿದಂಬರಂ ಕೂಡಾ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು, ಈ ಡೀಲ್‍ನಲ್ಲಿ ಸಾಕಷ್ಟು ಹಣ ಪಡೆದಿದ್ದಾರೆ ಇವರನ್ನು ತಕ್ಷಣ ಬಂಧಿಸಬೇಕು ಎಂದು ಆರೋಪಿಸಿದ್ದಾರೆ.

ಚಿದಂಬರಂನಿಂದ ದೇಶಕ್ಕೆ 6 ಲಕ್ಷ ಕೋಟಿ ರೂ. ಖೋತಾ…
ಚಿದಂಬರಂ ನಡೆಸಿದ ಡೀಲ್‍ನಿಂದ ಸರಕಾರದ ಬೊಕ್ಕಸಕ್ಕೆ ಬರೋಬ್ಬರಿ ಆರು ಲಕ್ಷ ಕೋಟಿ ರೂ. ನಷ್ಟವುಂಟಾಗಿದೆ ಎಂಬ ಗಂಭೀರ ಆರೋಪವನ್ನು ಸ್ವಾಮಿ ಮಾಡುತ್ತಾರೆ. ಈ ಬಗ್ಗೆ ಅವರ ಬಳಿ ದಾಖಲೆಯೂ ಇದೆ. ಚಿದಂಬರಂನ 21 ಸೀಕ್ರೆಟ್ ಬ್ಯಾಂಕ್ ಅಕೌಂಟ್ ಇತ್ಯಾದಿಗಳ ಬಗ್ಗೆ ಸ್ವಾಮಿ ಬಳಿಯಲ್ಲಿ ದಾಖಲೆ ಇದೆ. ಈ ಖಾತೆಗಳನ್ನು ಚಿದಂಬರಂ ಹಾಗೂ ಅವರ ಪುತ್ರ  ಕಾರ್ತಿ ಚಿದಂಬರಂ ನಿಯಂತ್ರಿಸುತ್ತಿದ್ದರು. ವಿದೇಶದ ನಾನಾ ಬ್ಯಾಂಕ್‍ಗಳಲ್ಲಿ ತಂದೆ ಮಗ ಖಾತೆಗಳನ್ನು ಹೊಂದಿದ್ದು ಅದರಲ್ಲಿ ಕೋಟಿಗಟ್ಟಲೆ ಹಣವಿದೆ. ಬ್ಯಾಂಕ್‍ಗಳ ಹೆಸರನ್ನೂ ಸ್ವಾಮಿ ಉಲ್ಲೇಖಿಸಿದ್ದಾರೆ. ಮೊನಕೋ ದೇಶದ ಬರ್ಕೇಲ್ಸ್ ಬ್ಯಾಂಕ್, ಯುನೈಟೆಡ್ ಕಿಂಗ್‍ಡಂನ ಮೆಟ್ರೊ ಬ್ಯಾಂಕ್, ಸಿಂಗಾಪುರದ ಸ್ಟಾಂಡರ್ಡ್ ಕ್ಯಾರೆಕ್ಟೆಡ್ ಬ್ಯಾಂಕ್, ಸಿಂಗಾಪುರದ ಒಎಸ್‍ಬಿಸಿ ಬ್ಯಾಂಕ್, ಯುಕೆಯ ಎಚ್‍ಎಸ್‍ಬಿಸಿ, ಫ್ರಾನ್ಸ್‍ನ ಡ್ಯೂಷೆ ಬ್ಯಾಂಕ್, ಸ್ವಿಝರ್‍ಲ್ಯಾಂಡ್‍ನ ಯುಬಿಎಸ್ ಬ್ಯಾಂಕ್, ಕ್ಯಾಲಿಫೋರ್ನಿಯಾದ ವೆಲ್ಸ್ ಫಾರ್ಗೊ ಬ್ಯಾಂಕ್ ಇತ್ಯಾದಿಗಳಲ್ಲಿ ಹಣ ಇಟ್ಟಿದ್ದಾರೆ.

ಚಿದು ಪುತ್ರ ಕಾರ್ತಿ 2014 ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ನಾಮಪತ್ರ ಸಲ್ಲಿಸುವ ವೇಳೆ ತನ್ನ ವಿದೇಶಿ ಬ್ಯಾಂಕ್ ಖಾತೆಗಳ ಬಗ್ಗೆ ಉಲ್ಲೇಖಿಸಿಲ್ಲ. ಅಲ್ಲದೆ ತನ್ನ ಆಸ್ತಿಪಾಸ್ತಿ ಬಗ್ಗೆಯೂ ಪ್ರಸ್ತಾಪಿಸಿಲ್ಲ. ಇದೆಲ್ಲಾ ಚುನಾವಣಾ ನೀತಿಸಂಹಿತೆಯ ಉಲ್ಲಂಘನೆಯಾಗಿದೆ. ಅಕ್ರಮ ಏರ್ಸೆಲ್ ಮಾಕ್ಸಿಸ್ ಒಪ್ಪಂದದಲ್ಲಿ ಮಾರನ್ ಸಹೋದರರ ಪಿತೂರಿಯಿಲ್ಲ ಬದಲಿಗೆ ಇವರು ಮಧ್ಯವರ್ತಿಗಳಾಗಿ ಕೆಲಸ ಮಾಡಿದರು. ಬಳಿಕ ಇವರನ್ನೇ ಬಲಿಪಶುಗಳನ್ನಾಗಿ ಮಾಡಲಾಯಿತು. ಈ ಡೀಲ್‍ನಿಂದ ಕೋಟಿಗಟ್ಟಲೆ ಲಾಭ ಮಾಡಿದ್ದು ಮಾತ್ರ ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ. ಈ ಕೋಟಿಗಟ್ಟಲೆ ಹಣವನ್ನು ಅವರು ವಿದೇಶೀ ಬ್ಯಾಂಕ್‍ಗಳಲ್ಲಿ ಅಕ್ರಮವಾಗಿ ಡೆಪೋಸಿಟ್ ಮಾಡಿದ್ದಾರೆ ಎಂಬುದು ಸುಬ್ರಮಣಿಯನ್ ಸ್ವಾಮಿ ಅವರ ಗಂಭೀರ ಆರೋಪವಾಗಿದೆ.

ಸ್ವಾಮಿ ಈ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಪ್ರಸ್ತಾಪಿಸಿ, ಚಿದಂಬರಂ ಹಾಗೂ ಅವರ ಪುತ್ರ ನಡೆಸಿದ ಭ್ರಷ್ಟಾಚಾರದ ಕುರಿತು ಜಾರಿ ನಿರ್ದೇಶನಾಲಯ ಕೂಡಾ ಎಲ್ಲಾ ಪುರಾವೆಗಳನ್ನು ಕಲೆ ಹಾಕಿದೆ. ಜಾರಿ ನಿರ್ದೇಶನಾಲಯ ಅವರ ಮೇಲೆ ಸಧ್ಯದಲ್ಲೇ ದಾಳಿ ನಡೆಸಬಹುದು. ಆದರೆ ಕೆಲವು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸ್ವಾಮಿ ವಿರುದ್ಧ ಕ್ರಮ ಆಗದಂತೆ ನೋಡಿಕೊಳ್ಳುತ್ತಿದ್ದಾರೆ. ಆದ್ದರಿಂದ ತಂದೆ ಮಗನ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸ್ವಾಮಿ ಆಗ್ರಹವಾಗಿದೆ.

ಕೆಲವು ಅಧಿಕಾರಿಗಳು ಸುಬ್ರಹ್ಮಣಿಯನ್ ಸ್ವಾಮಿಯನ್ನು ರಕ್ಷಿಸುತ್ತಿದ್ದಾರೆ ಎನ್ನುವ ಸುಬ್ರಮಣಿಯನ್ ಸ್ವಾಮಿ ದಾಖಲೆ ಇಲ್ಲದೆ ಮಾತಾಡುವುದಿಲ್ಲ. ಇಂಥಾ ಅಧಿಕಾರಿಗಳ ಪಟ್ಟಿ ತಯಾರಿಸಿ ಐಟಿ ಪ್ರಮುಖರಿಗೆ ನೀಡಿದ್ದಾರೆ. ಇವರಿಗೆಲ್ಲಾ ಚಿದಂಬರಂ ಅವರು ಹಣದ ಆಮಿಷವೊಡ್ಡಿ ತನ್ನ ವಿರುದ್ಧ ಕ್ರಮ ಆಗದಂತೆ ನೋಡಿಕೊಂಡಿದ್ದಾರೆ ಎಂಬ ಆರೋಪ ಮಾಡಿದ್ದಾರೆ.

ಏರ್ಸೆಲ್ ಮಾಕ್ಸಿಸ್ ಕಂಪೆನಿಗೆ ಲಾಭ ಮಾಡಿಕೊಟ್ಟ ಚಿದಂಬರಂಗೆ ಕಿಕ್‍ಬ್ಯಾಕ್ ರೂಪದಲ್ಲಿ ಸಾಕಷ್ಟು ಹಣ ಸಿಕ್ಕಿದೆ. ಈ ಹಣವನ್ನು ವಿದೇಶದ ನಾಲ್ಕು ಬ್ಯಾಂಕ್‍ಗಳಲ್ಲಿ ಕೂಡಿಡಲಾಗಿದೆ. ಜಾರಿ ನಿರ್ದೇಶನಾಲಯವು ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಮಾಹಿತಿ ಕಲೆ ಹಾಕುವ ಸಾಧ್ಯತೆ ಇದೆ ಎಂಬುವುದನ್ನು ಸುಬ್ರಹ್ಮಣಿಯನ್ ಸ್ವಾಮಿ ಪತ್ರಿಕಾಗೋಷ್ಠಿ ಕರೆದು ಆರೋಪಿಸಿದ್ದಾರೆ.

ಕಾಂಗ್ರೆಸ್ ದೇಶವನ್ನು 70 ವರ್ಷಗಳ ಕಾಲ ಉಳಿಯಿತು. ಭಾರತೀಯರು ಇನ್ನೂ ಕೂಡಾ ಅನ್ನಭಾಗ್ಯದ ಅಕ್ಕಿಗೆ ಮೊರೆಹೋಗುವಂತಹಾ ಪರಿಸ್ಥಿತಿ ಇದೆ. ದೇಶದ ಕೋಟಿಗಟ್ಟಲೆ ಜನ ಒಪ್ಪೊತ್ತಿನ ಊಟಕ್ಕಾಗಿ ಕಷ್ಟ ಪಡುತ್ತಿದ್ದಾರೆ. ಇದೆಲ್ಲಾ ಕಾಂಗ್ರೆಸ್ ಸರಕಾರದ ದುರಾಡಳಿತದ ಫಲ.

-ಚೇಕಿತಾನ

Tags

Related Articles

Close