ಪ್ರಚಲಿತ

ರಾಜೀವ್ ಗಾಂಧಿಯ ಆಪ್ತಗೆಳೆಯನಾಗಿದ್ದ ಸುಬ್ರಹ್ಮಣಿಯನ್ ಸ್ವಾಮಿಯವರು ಯಾವ ರಹಸ್ಯವನ್ನು ತಿಳಿದ ನಂತರ ಸೋನಿಯಾಳನ್ನು ದ್ವೇಷಿಸಲಾರಂಭಿಸಿದರು ಗೊತ್ತೇ?!

ಸೋನಿಯಾ ಗಾಂಧಿಯ ಜಾತಕ ಜಾಲಾಡುವ ಸುಬ್ರಹ್ಮಣಿಯನ್ ಸ್ವಾಮಿಯವರಿಗೆ ಆಕೆಯ ಪೂರ್ವಾಪರವೆಲ್ಲ ಅಷ್ಟು ನಿಖರವಾಗಿ ಹೇಗೆ ತಿಳಿದಿರಬಹುದೆಂದು ಅನುಮಾನ ಮೂಡುವಾಗಲೇ ಕೆಲವೊಂದಿಷ್ಟು ರಹಸ್ಯಗಳು ಬಟಾಬಯಲಾಗುತ್ತವೆ!

ಕಾಂಗ್ರೆಸ್ ನನ್ನು ಸುಬ್ರಹ್ಮಣಿಯನ್ ಸ್ವಾಮಿ ದ್ವೇಷಿಸುವ ಹಿಂದೆ ಬಲವಾದ ಕಾರಣವಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಸೋನಿಯಾ ಕುಟುಂಬ ದೇಶಕ್ಕೆ ಅದೆಷ್ಟು ಬಗೆಯಲ್ಲಿ
ದ್ವೇಷ ಬಗೆದಿದೆ ಎಂಬುದರ ಅರಿವಿದ್ದೇ ಮಾತನಾಡುವ ಸ್ವಾಮಿಗೆ ಸೋನಿಯಾ ಪತಿ ರಾಜೀವ್ ಗಾಂಧಿಯ ಜೊತೆ ನಿಕಟವಾದ ಸ್ನೇಹವಿತ್ತು ಎಂಬುದು ನಂಬಲು
ಕಷ್ಟಸಾಧ್ಯವಾದರೂ ಸತ್ಯ!

ರಾಜೀವ್ ಗಾಂಧಿ ಹಾಗೂ ಸ್ವಾಮಿಯವರ ನಿಕಟ ಸ್ನೇಹ ಎಷ್ಟಿತ್ತೆಂದರೆ ಮಧ್ಯರಾತ್ರಿ 2 ಗಂಟೆಗೂ ಸಹ ಭೇಟಿಯಾಗಿ ರಾಜಕೀಯ ವಿಷಯಗಳನ್ನು ಗಹನವಾಗಿ
ಚರ್ಚಿಸುವಷ್ಟು! ಇಂದಿರಾ ಗಾಂಧಿ ಪ್ರಧಾನ ಮಂತ್ರಿಯಾಗಿದ್ದಾಗ ಸಂಸತ್ತಿನಲ್ಲಿ ಅಕ್ಕ ಪಕ್ಕ ಕುಳಿತುಕೊಳ್ಳುತ್ತಿದ್ದ ಈ ಇಬ್ಬರೂ ಸಹ ರಾಜಕೀಯ ವಲಯದಲ್ಲಿ
ಸುಪರಿಚಿತರೇ!!!

1980 ರ ತನಕವೂ ಇಂದಿರಾ ಗಾಂಧಿಯನ್ನು ಅತಿಯಾಗಿ ವಿರೋಧಿಸುತ್ತಿದ್ದ ಸ್ವಾಮಿ ತುರ್ತು ಪರಿಸ್ಥಿತಿಯ ನಂತರದ ವರ್ಷಗಳಲಿ ಆಕೆ ಮತ್ತೆ ಅಧಿಕಾರಕ್ಕೆ ಬಂದಾಗ ಮುಂಚೆಯಷ್ಟು ವಿರೋಧ ಕಂಡು ಬರದಿದ್ದರೂ ಸಹ ಸ್ವಾಮಿಗೆ ಆಗಿದ್ದು ವಿಶ್ವಾಸಾಘಾತವೇ ಸರಿ! ಇಂದಿರಾ ಗಾಂಧಿ ಚೀನಾದ ವಿಷಯದಲ್ಲಿ ಸ್ವಾಮಿಯವರ ಹತ್ತಿರ ಅದೆಷ್ಟೋ ಸಲಹೆಗಳನ್ನು ಕೇಳುತ್ತಿದ್ದರಾದರೂ ಸ್ವಾಮಿಯವರ ದೇಶಭಕ್ತಿಯ ಬಗೆಗೆ ಸಣ್ಣ ಹೆದರಿಕೆ ಇತ್ತು!

ಇತ್ತ ಸ್ವಾಮಿಯವರು ನೆಹರೂವನ್ನು ವೈಯುಕ್ತಿಕವಾಗಿ ದ್ವೇಷಿಸುತ್ತಿರಲಿಲ್ಲವಾದರೂ ರಾಜಕೀಯ ಸಿದ್ಧಾಂತಗಳಿಗೆ ವಿರೋಧವಿದ್ದೇ ಇತ್ತು!

ಬೋಫೋರ್ಸ್ ಹಗರಣದಲ್ಲಿಯೂ ಸಹ ರಾಜೀವ್ ಗಾಂಧಿಯನ್ನು ಬೆಂಬಲಿಸಿದ್ದ ಸುಬ್ರಹ್ಮಣಿಯನ್ ಸ್ವಾಮಿ ತನ್ನ ಗೆಳೆಯನನ್ನು ದೇಶಭಕ್ತ, ಮುಗ್ಧನೆಂದೇ ನಂಬಿದ್ದರು! ಸಂಸತ್ತಿನಲ್ಲಿಯೂ ಸಹ ರಾಜೀವ್ ಗಾಂಧಿಯ ತಪ್ಪಿದ್ದರೂ ಸಹ ಬಿಟ್ಟುಕೊಡದೇ ಪರವಕಾಲತ್ತು ವಹಿಸಿದ್ದ ಸ್ವಾಮಿಯವರು anti-congress ಆಗಿ ಬದಲಾದ ಕಾರಣ ಏನು ಗೊತ್ತೇ?!

‘ಸೋನಿಯಾ ಗಾಂಧಿ!’

ಪ್ರತಿ ಹಂತದಲ್ಲಿಯೂ ಸಹ ರಾಜೀವ್ ನನ್ನು ಬೆಂಬಲಿಸಿಕೊಂಡೇ ಬಂದಿದ್ದ ಸ್ವಾಮಿಯವರು ಇದ್ದಕ್ಕಿದ್ದಂತೆ ಬದಲಾಗಿದ್ದರು. ಯಾವಾಗ ಮನುಷ್ಯನ ಅಂತಃಸತ್ವಕ್ಕೆ ಪೆಟ್ಟು ಬೀಳುವುದೋ, ಆಗಲೇ ಆತನ ನಿಜವ್ಯಕ್ತಿತ್ವ ಅರಿವಿಗೆ ಬರುವುದು ಎಂದು ಅಕ್ಷರಶಃ ಸತ್ಯವೇ!

ಸೋನಿಯಾ ಗಾಂಧಿಯ ಜೊತೆಗೆ ಮೊದ ಮೊದಲು ಸ್ನೇಹದಿಂದಲೇ ಇದ್ದರು ಸ್ವಾಮಿ! ಎಲ್ಲಿಯ ತನಕವೆಂದರೆ, ಆಕೆಯ ಇಚ್ಛೆಗೆ ಅನುಗುಣವಾಗಿ 1998 ರ ಚುನಾವಣೆಯಲ್ಲಿ ವಾಜಪೇಯಿ ಸರಕಾರವನ್ನು ಉರುಳಿಸಿದ್ದರು ಸ್ವಾಮಿ! ಅದಾದ ಮೇಲೂ ಸಹ, ಸೋನಿಯಾ ಗಾಂಧಿ ವಾಜಪೇಯಿಯವರ ಜೊತೆ ಮಲೇಶಿಯಾದಿಂದ ಕ್ವಾಟ್ರೋಚಿಯನ್ನು ಸ್ವತಂತ್ರ್ಯಗೊಳಿಸುವಂತೆ ಒಪ್ಪಂದ ಮಾಡಿಕೊಂಡಿದ್ದಕ್ಕೂ ಸಹಕರಿಸಿದ್ದ ಸ್ವಾಮಿ, ಬೋಫೋರ್ಸ್ ಹಗರಣದಲ್ಲಿ ದುಡ್ಡು ಬಾಚಿಕೊಂಡವನು ಸೋನಿಯಾ ಗೆಳೆಯನಾದ ಕ್ವಾಟ್ರೋಚಿ ಹೊರತು ರಾಜೀವ್ ಅಲ್ಲ ಎಂದೇ ವಾದಿಸಿದ್ದರು!!!!!

ರಾಜೀವ್ ಗೂ ಸೋನಿಯಾಳ ಮೇಲೆ ಅನುಮಾನವಿತ್ತು ಎಂಬುದನ್ನೇ ವಾದಿಸಿದ್ದ ಸ್ವಾಮಿಯವರಿಗೆ ಮಾತ್ರ ರಾಜೀವ್ ರನ್ನು ಬಹಳವಾಗಿ ನಂಬಿದ್ದರು!!! ರಾಜೀವ್
ಮೂಲಕವೇ ನನಗೆ ಸೋನಿಯಾಳ ಪಾಲೇಸ್ತೇನಿಯನ್ಸ್ ಕ್ರೈಸ್ರ ಭಯೋತ್ಪಾದಕ ಸಂಘಟನೆಗಳಿಗೆ ಹಣ ಹೋಗುತ್ತಿರುವುದು ಅರಿವಿಗೆ ಬಂದದ್ದು ಎಂದು ಹೇಳಿದ್ದರು
ಸ್ವಾಮಿ! ಕೊನೆಗೂ ಅನುಮಾನವನ್ನು ಬಗೆಹರಿಸಲು ರಾಜೀವ್ ತನ್ನನ್ನು ಟುನಿಸೀಯಾದಲ್ಲಿ ಯಾಸ್ಸೆರ್ ಅರಾಫತ್ ನನ್ನು ಭೇಟಿಯಾಗಿ ಸೋನಿಯಾಳ ಗೆಳೆಯನಾದ ಜಾರ್ಜ್ ಹಬಾಷ್ ನ ಬಗ್ಗೆ, ದುಡ್ಡು ವರ್ಗಾವಣೆ ಆಗಿರುವುದೇ ಎಂಬುದಾಗಿ ನಿಖರವಾಗಿ ಹೇಳಲು ಸ್ವತಃ ರಾಜೀವ್ ಹೇಳಿದ್ದ ಎಂದು ಒಪ್ಪಿದ್ದರು!

ಯಾವಾಗ ಸೋನಿಯಾಳ ಜಾತಕ ಕೈ ಗೆ ಬಂದಿತ್ತೋ, ಸ್ವಾಮಿ ಅಸಮಾಧಾನಗೊಂಡಿದ್ದೂ ಅಲ್ಲದೇ ಮುಂಚೆಯ ತರಹದ ಯಾವ ಸ್ನೇಹವನ್ನೂ ಇಟ್ಟುಕೊಂಡಿರಲಿಲ್ಲ! ಆದರೆ, ವಾರಕ್ಕೊಂದು ದಿನ ಅನಿವಾರ್ಯವಾಗಿ ರಾಜಕೀಯ ಕಾರಣಗಳಿಂದ ಭೇಟಿಯಾಗಲೇ ಬರುತ್ತಿದ್ದರಿಂದ ಸ್ವಾಮಿಯವರು ಸೋನಿಯಾ ಸಂಪರ್ಕದಲ್ಲಿರುವುದು ಅನಿವಾರ್ಯವಾಗಿತ್ತೆನ್ನಬಹುದು!!!

ಎಂತಹ ಪರಿಸ್ಥಿತಿಯಲ್ಲಿಯೂ ರಾಜೀವ್ ನನ್ನು ಸಮರ್ಥಿಸಿಕೊಂಡಿದ್ದ ಸ್ವಾಮಿಯವರಿಗೆ ಒಂದು ದಿನ ತನ್ನ ಇಟಾಲಿಯನ್ ಬುದ್ಧಿಯನ್ನು ತೋರಿಸಿದ್ದಳು ಸೋನಿಯಾ! ಆಕೆಯ ಒಂದೇ ಮಾತು ಸಾಕಾಗಿತ್ತು ಸ್ವಾಮಿಯವರಿಗೆ!

‘ನಾನು ಒಬ್ಬಳು ಭಾರತೀಯಳೆನ್ನುವುದಕಿಂತ ಒಬ್ಬಳು ಸಿಜಿಲಿಯನ್ (Sicilian).’

‘ಯಾಕೆ ಹಾಗೆ ಹೇಳುತ್ತಿರುವುರಿ ಸೋನಿಯಾ?!’

‘ಯಾಕೆಂದರೆ, ಭಾರತೀಯರು ತುಳಿತಕ್ಕೊಳಲ್ಪಡಲು ಇಷ್ಟಪಡುತ್ತಾರೆ, ಆದರೆ ನೀನೊಬ್ಬ ಆ ವಿಷಯದಲ್ಲಿ ಕಠೋರನಾಗಿದ್ದೀಯೆ.’

ಆ ಸಮಯದಲ್ಲಿ ಜಯಲಲಿತಾಳ ಮೇಲೆ ದಾವೆ ಹೂಡಲು ತಯಾರಾಗುತ್ತಿದ್ದರು ಸ್ವಾಮಿ!!!

ಅದೇ ಸ್ವಾಮಿಯವರ ಹಾಗೂ ಸೋನಿಯಾಳ ಕೊನೆಯ ಭೇಟಿಯಾಗಿತ್ತು!!! ತಿರುಗಿ ನಿಂತ ಸ್ವಾಮಿಯವರು ಚಾಟಿ ಬೀಸಿದ್ದರು!!

‘ ಇದು ನನ್ನ ನಿನ್ನ ಕೊನೆಯ ಭೇಟಿ! ಇನ್ನು ನಿನ್ನನ್ನು ನಾನು ಯಾವತ್ತೂ ಭೇಟಿಯಾಗಲಾರೆ. ಆದರೆ, ನೀನು ಭಾರತೀಯಳಿಗಿಂತ ಸಿಜಿಲಿಯನ ಎಂದೆಯಲ್ಲವೇ, ನಾನಿನ್ನು ನಿನಗೆ ಹೇಳುತ್ತೇನೆ ಸಿಜಿಲಿಯನ್ ಎನ್ನುವುದು ಏನು ಯಾರು ಹೇಗೆ ಎಂದು.’!!!!

ಬಿರ ಬಿರ ನಡೆದ ಸ್ವಾಮಿಯವರು ಮತ್ತೆ ಗಾಂಧಿಯ ನಿವಾಸಕ್ಕೆ ಕಾಲಿಡಲಿಲ್ಲ. ಕೊನೆಗೆ ಸೋನಿಯಾಳ ಪ್ರತಿ ರಹಸ್ಯವನ್ನೂ ಬಿಚ್ಚಿಟ್ಟ ಸ್ವಾಮಿಯವರಿಗೆ ಅವತ್ತು ಆಕೆ
ಹೇಳಿದ್ದು ‘ನೀನ್ಯಾಕೆ ಉಳಿದ ಭಾರತೀಯರ ಹಾಗೆ ತುಳಿತಕ್ಕೊಳಲ್ಪಡುವುದಿಲ್ಲ’ ಎಂಬ ಅತಿರೇಕದ ಸಾಲುಗಳನ್ನು!

ತದನಂತರದಲ್ಲಿ ನಡೆದದ್ದೆಲ್ಲ ಭಾರತೀಯ ಇತಿಹಾಸವನ್ನೇ ಸೋನಿಯಾಳ ಕಡೆಗೆ ತೋರಿಸಿ ಪ್ರಶ್ನೆ ಮಾಡುವಂತಹ ಘಟನೆಗಳು ಬಿಡಿ!!!

– ತಪಸ್ವಿ

Tags

Related Articles

Close