ಅಂಕಣ

ಸ್ಫೋಟಕಸುದ್ದಿ!! ಕ್ರೈಸ್ತ ಮತಾಂಧರ ಮಾಫಿಯಾ! ಹಿಂದೂಗಳ ಮತಾಂತರಕ್ಕೊಂದು ಹೊಸ ರೂಪ!

ವಿಚಾರಗಳನ್ನು ಪ್ರಸ್ತಾಪಿಸುವ ಮುಂಚೆ ಒಂದು ಉದಾಹರಣೆಯನ್ನು ನೀಡಲು ಇಚ್ಚಿಸುತ್ತೇನೆ. ಅಂತಿಮವಾಗಿ ನೀವೂ ಆಲೋಚಿಸಿ, ವಿಮರ್ಶಿಸಿದರೆ ಸತ್ಯಸಂಗತಿ
ಬಯಲಾಗುವುದು ನಿಶ್ಚಿತ ಮಾತ್ರವಲ್ಲ, ಕೆಲವು ಮತಾಂಧ ಬಾಂಧವರ ಅಂತರಾಳವನ್ನು ನಗ್ನವಾಗಿಸಬಹುದು. ಆ ಮೂಲಕ ನಮ್ಮ ರಾಷ್ಟ್ರದಲ್ಲಿ ಧಾರ್ಮಿಕತೆಯನ್ನು ಎತ್ತಿಹಿಡಿಯಬಹುದು, ಉಳಿಸಬಹುದು, ಪಾಲಿಸಬಹುದು, ಸಂರಕ್ಷಿಸಬಹುದು..!!

ನೀವು ಕಡು ಬಡತನದಲ್ಲಿದ್ದೀರಿ. ಗ್ರಾಮೀಣ ಪ್ರದೇಶದಲ್ಲಿಯೂ ವಾಸ್ತವ್ಯವನ್ನು ಹೂಡಿದ್ದೀರಿ. ನಿಮ್ಮ ಮಗು ಅನಾರೋಗ್ಯದಿಂದ ಬಳಲುತ್ತಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೀರಿ. ಆಗ, “ನಿಮ್ಮ ಸೌಭಾಗ್ಯ, ಆ ರೋಗವನ್ನು ವಾಸಿಮಾಡಬಹುದಾಗಿದೆ. ಆ ರೋಗವನ್ನು ವಾಸಿ ಮಾಡಲು ತಗಲಬಹುದಾದ ಮೊತ್ತ ಕೂಡ ಪಾವತಿಸಬಹುದಾದದ್ದೇ. ನಿಮಗೆ ಬೇಕಾದರೆ ಉಚಿತವಾಗಿಯೇ ಆ ರೋಗವನ್ನು ವಾಸಿಮಾಡಿಸುವ.” ಎನ್ನುತ್ತಿದ್ದ ಅಲ್ಲಿನ ಆರೋಗ್ಯಾಧಿಕಾರಿ. ಆದರೆ ನೀವು ಅಗತ್ಯವಾಗಿ ಮಾಡಬೇಕಾಗಿರುವ ಕಾರ್ಯವೂ ಒಂದಿದೆ. ಏನು ಗೊತ್ತಾ?? ಸಾವಿರಾರು ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿರುವ ನಂಬಿಕೆ, ಆಚರಣೆಗಳನ್ನು ಬಿಟ್ಟು ಪಾಶ್ಚಾತ್ಯ ಸಂಸ್ಕøತಿಗೆ ತಲೆಬಾಗಿ, ಗೌರವಿಸಿ ಅದನ್ನು ಸ್ವೀಕರಿಸಬೇಕು ಅಷ್ಟೇ.

ಮುಗ್ಧ ಜನರನ್ನು ವಂಚಿಸುತ್ತಿದೆ ಮತಾಂಧರ ಮಾಫಿಯಾ!!!

“ಫಿಲಿಪ್ ಗೋಲ್ಡ್‍ಬರ್ಗ್ ” ಈ ಹೆಸರನ್ನು ಅದೆಷ್ಟು ಮಂದಿ ಕೇಳಿದ್ದೀರೋ ಅರಿಯದು.
“ಅಮೆರಿಕದ ವೇದ : ಭಾರತದ ಆಧ್ಯಾತ್ಮ ಯಾವ ರೀತಿಯಲ್ಲಿ ಪಶ್ಚಿಮವನ್ನು ಬದಲಾಯಿಸಿತು ?” ಪುಸ್ತಕದ ಕರ್ತೃ ಆತ. ನಿಮಗೆ ನೆನಪಿರಲಿ. ಆತ ಓರ್ವ ಕ್ರಿಶ್ಚಿಯನ್ ಲೇಖಕ. ತನ್ನ ಧರ್ಮದ ಸೇವೆಗಳ ಸುತ್ತಮುತ್ತ ಅನೇಕ ಲೇಖನಗಳನ್ನು, ಪುಸ್ತಕವನ್ನೂ ಬರೆದವ ಆತ. ಆತ ಹೇಳುವ ಪ್ರಕಾರ, “ಕ್ರಿಶ್ಚಿಯನ್ ಧರ್ಮವನ್ನು ಭಾರತ ತುಂಬು ಹೃದಯದಿಂದ ಸ್ವಾಗತಿಸಿತ್ತು. ಅಷ್ಟೇ ಅಲ್ಲದೆ ಅವರ ಸೇವಾಚಟುವಟಿಕೆಯನ್ನು ಸಹ ಗೌರವಿಸಿತ್ತು ಜಂಬೂದ್ವೀಪ. ಹಿಂದೂಗಳು ಮನದಾಳದಿಂದ ಸೇವೆಯನ್ನು ಪ್ರಶಂಸಿರಿರುವುದನ್ನು ನಾನು ಕಂಡಿದ್ದೇನೆ. ಆದರೆ ಇವತ್ತು ಅದರ ಕರಾಳ ಮುಖವನ್ನು ನಾನು ಗಮನಿಸಿದೆ. ಬಡತನ ಹಾಗೂ ಅವಿದ್ಯಾವಂತನನ್ನು ಗುರಿಯಾಗಿಸಿ ಅವರಿಗೆ ಉದ್ಯೋಗ ನೀಡುವ ಭರವಸೆಯನ್ನು ಮಿಶನರಿಗಳು ಕೊಡಲು ಪ್ರಾರಂಭಿಸಿದ್ದಾರೆ. ಆದರೆ ಮತಾಂತರ ಆಗಬೇಕೆಂಬ ನಿರ್ಭಂಧ ಹೇರಲಾಗುತ್ತಿರುವುದು ಮಾತ್ರ ದುರಂತದ ಪರಮಾವಧಿ. ಇದರಿಂದ ತುಂಬು ಕುಟುಂಬ ಹೋಳಾಗಿರುವುದನ್ನು ಅನೇಕ ಬಾರಿ ನಾನು ಗಮನಿಸಿದ್ದೇನೆ.”

ಇಂತಹ ಅದೆಷ್ಟು ಉದಾಹರಣೆಯನ್ನು ಕೊಡಲಿ. ನೀವೂ ಗಮನಿಸಿರಬಹುದು. ಗಂಗಾ ನದಿಯ ಪ್ರವಾಹದ ಸಂದರ್ಭದಲ್ಲಿ ಅನೇಕ ಸಂಘ-ಸಂಸ್ಥೆಗಳು ಸೇವೆಗೈಯಲು ಆ ಪ್ರದೇಶಗಳಿಗೆ ತೆರಳಿ ಸೇವೆ ಮಾಡಿತ್ತಿದ್ದರು. ಅದೇ ರೀತಿಯಾಗಿ ಬಂದಿದ್ದವು ಮತಾಂಧ ಮಿಶನರಿಗಳು. ಪಾಪ..!! ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವವರನ್ನು ರಕ್ಷಣೆ ಮಾಡಬೇಕಾದರೆ ಇವರದ್ದು ಒಂದು ಶರತ್ತು. ನಮ್ಮ ಧರ್ಮಗ್ರಂಥದ ಮೇಲೆ ಪ್ರಮಾಣ ಮಾಡಿ, ನೀವೂ ಮತಾಂತರವಾಗಿ, ಜೀಸಸ್ ನಿಮ್ಮನ್ನು ರಕ್ಷಿಸುತ್ತಾನೆ.” ಎಂಬಿತ್ಯಾದಿ ಧ್ಯೇಯವನ್ನು ಹೊಂದಿಕೊಂಡು ಹೊರಟಿದ್ದವು. ಈ ವಿಚಾರ ಸಮಾಜಕ್ಕೆ ಗೊತ್ತಿಲ್ಲದೇ ಏನಲ್ಲ. ಆದರೂ ಎಲ್ಲರೂ ಮೌನವಹಿಸಿದ್ದಾರೆ. ದುರಂತದ ಪರಮಾವಧಿಯಿದು..!!

ಫಿಲಿಪ್ ಉಲ್ಲೇಖಿಸಿದ ಇನ್ನೊಂದು ವಿಚಾರ ಕೇಳಿ. “ಮಿಶನರಿಗಳು ಕಾವೀ ಬಟ್ಟೆಯನ್ನು ಧರಿಸಿ, ಸಾಕ್ಷಾತ್ ಹಿಂದೂ ಸನ್ಯಾಸಿಯಂತೆ ವೇಷ ಧರಿಸಿ ಜನರ ಮುಂದೆ ಸಾಗುತ್ತಾರೆ. ಮತ್ತೆ ಹಳ್ಳಿ ಮುಗ್ಧರಲ್ಲಿ, “ಎಲ್ಲಾ ಹಿಂದೂ ದೇವತೆಗಳು ಜೇಸಸ್ ನ ಸೃಷ್ಟಿಗಳು. ಶಿವನ ಹಣೆಯಲ್ಲಿರುವ ಮೂರು ರೇಖೆಗಳು ಏನನ್ನು ಸೂಚಿಸುತ್ತವೆ ಗೊತ್ತಾ?? ಉಪನಿಷತ್ತಿನ ವಾಕ್ಯವಾದ ಕತ್ತಲೆಯಿಂದ ಬೆಳಕಿನೆಡೆಗೆ ನನ್ನನ್ನು ಕರೆದುಕೊಂಡು ಹೋಗು ಎಂಬುದಾಗಿ ಜೇಸಸ್ ನ ಮುಂದೆ ಭಕ್ತರು ಪ್ರಾರ್ಥಿಸುವ ಸಂಕೇತವದು..!!”” ಎಂದೆಲ್ಲಾ ಹೇಳಿ ಅವರಿಗೆ ಮಂಕುಬೂದಿ ಎರಚಿ ಮತಾಂತರ ಕಾರ್ಯಕ್ಕೆ ಅಣಿಯಾಗುತ್ತಾರೆ.

ನಿಮ್ಮ ಅಮ್ಮನಿಗೆ ಅನಾರೋಗ್ಯವೇ?? ನಿಮ್ಮ ತಂದೆಯ ಆದಾಯದ ಎಲ್ಲ ಮೂಲವನ್ನು ಕಳೆದುಕೊಂಡು ತಮ್ಮ ಕುಟುಂಬವನ್ನು ಸಾಕಲು ಕಷ್ಟವಾಗುತ್ತಿದೆಯಾ??? ಒಂದು ಬೆಟ್ಟದ ಪ್ರದೇಶದಲ್ಲಿ ಬಸ್ ಸ್ಥಗಿತವಾಗಿ ಅಪಾಯದ ಪರಿಸ್ಥಿತಿಯಲ್ಲಿದೆಯಾ?? ಮತಾಂಧರು ಅಲ್ಲಿ ಪ್ರತ್ಯಕ್ಷ. ಅವರ ಒಂದೊಂದು ಮಾತುಗಳೂ ಸ್ವತಃ ಏಸುವಿನ ನುಡಿಗಳೇ.!! ಒಂದು ಕೆಲಸ ಮಾಡಿ. ನೀವು ಹಿಂದೂ ದೇವರಲ್ಲಿ ಪ್ರಾರ್ಥಿಸಿ. ಏನೂ ಸಂಭವಿಸುವುದಿಲ್ಲವೆಂದು ಊಹಿಸಿ. ಆಗ ಜೀಸಸ್ ನ ಪ್ರಾರ್ಥಿಸಿರುವುದರಿಂದ ಯಾವ ರೀತಿಯಾದ ಬದಲಾವಣೆಯಾಗಿರಬಹುದು?? ಅಲೆಲೂಯಾ..!!! ಊಹಿಸಲಾಧ್ಯವಾದ ಪವಾಡ.. ಅಮ್ಮನಿಗೆ ಔಷಧಿ ಲಭಿಸಿತು. ತಂದೆಗೆ ಪ್ರತಿದಿನ ಹೊಟ್ಟೆ ತುಂಬಿಸಿಬಹುದಾದ ಉದ್ಯೋಗ ಸಿಕ್ಕಿತು. ಹಾ.. ಅಪಾಯದ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಬಸ್ ನ ಇಂಜಿನ್ ಕೂಡ ಪ್ರಾರಂಭವಾಗಿ ಗಾಡಿ ಚಾಲನೆಯಾಯಿತು. ಜೀಸಸ್ ನ ಒಂದು ಪ್ರಾರ್ಥನೆ ಇಷ್ಟೆಲ್ಲಾ ಪವಾಡಗಳನ್ನು ಮಾಡಬಹುದಾಗಿದ್ದರೆ, ಅದೆಷ್ಟು ಮತಾಂತರಗಳು ನಡೆದಿರಲಿಕ್ಕಿಲ್ಲ?? ಜಸ್ಟ್ ಇಮೇಜಿನ್.!!!

ಒಂದು ನೈಜ ಉದಾಹರಣೆಯನ್ನು ಗಮನಿಸಿ. ಎಮ್ ಸೆಲ್ವಾನ್.. ತನ್ನ ಬಡತನವನ್ನು ಹೋಗಲಾಡಿಸುತ್ತೇವೆಂದ ಮತಾಂಧರ ಮಾತಿಗೆ ಕಿವಿಗೊಟ್ಟು ಮತಾಂತರವಾಗುತ್ತಾನೆ. ಹೆಸರನ್ನು ಪಾಲ್ ಜೋಸೆಫ್ ಎಂಬುದಾಗಿ ಬದಲಾಯಿಸುತ್ತಾನೆ. ಆದರೆ ಬರೋಬ್ಬರಿ 14 ವರ್ಷಗಳ ಕಾಲ ಆ ಕತ್ತಲೆಯಲ್ಲಿದ್ದ ನಂತರ ಜ್ಞಾನೋದಯವಾದ ಈತ ಮಗದೊಮ್ಮೆ ತಮ್ಮ ಮಾತೃಧರ್ಮಕ್ಕೆ ಮರಳುತ್ತಾನೆ. ಕಾರಣ, ಬಡತನ ನಿರ್ಮೂಲನೆಗೆ ಆ ಮತಾಂಧರು ಮಾಡಿದ ಕಾರ್ಯ ಶೂನ್ಯ. ಇದು 2 ವರ್ಷದ ಹಿಂದೆ ಕೇರಳದಲ್ಲಿ ನಡೆದ ಘಟನೆ. ಇಂತಹ ಅದೆಷ್ಟು ವಂಚನೆ, ದ್ರೋಹಗಳು, ಆ ಮತಾಂಧರು ಮಾಡಿರಲಿಕ್ಕಿಲ್ಲ??

ಕಳೆದ 5 ವರ್ಷಗಳಲ್ಲಿ ಸುಮಾರು 6000 ಜನರು ಒಂದು ಧರ್ಮಕ್ಕೆ ಮತಾಂತರವಾಗಿದ್ದಾರೆಂದರೆ ಅದರ ಹಿಂದಿನ ಕ್ರೌರ್ಯ, ವಂಚನೆ ಅದೆಷ್ಟಿರಬಹುದೆಂಬುದಾಗಿ ಚಿಂತಿಸಿ.. ಕೇರಳ ಮತಾಂತರ ಚಟುವಟಿಕೆಯ ತಾಣವಾಗುತ್ತಿರುವುದು ಗಾಬರಿಯ ಸಂಗತಿ. ಒಂದು ವೇಳೆ ಇದು ಇನ್ನೂ ಮುಂದುವರೆದರೆ ಭಾರತ ಭಾರತವಾಗಿ ಉಳಿಯದೇ ಇನ್ನೊಂದು ಮತಾಂಧರ ಅಟ್ಟಹಾಸದ ರಾಷ್ಟ್ರವಾಗಬಹುದು.. ಎಚ್ಚರಿಕೆ.!!

ಒಂದು ಹಳ್ಳಿಯಲ್ಲಿ ನೀರು ಸಿಗಲು ಕಷ್ಟವಾಗುತ್ತಿದ್ದರೆ, ಅದಕ್ಕೂ ವ್ಯವಸ್ಥೆಯಾಗುತ್ತದೆ. ಆರೋಗ್ಯದ ಸಮಸ್ಯೆಯಿದ್ದರೆ, ಅದಕ್ಕೂ ಸಮರ್ಪಕವಾದ ಪರಿಹಾರ ಸಿಗುತ್ತವೆ. ಬಡತನ ನಿರ್ಮೂಲನೆಯ ಯೋಜನೆಗಳೂ ಜಾರಿಯಾಗುತ್ತವೆ. ಆದರೆ ನಾವು ಅದಕ್ಕೆ ಪಾವತಿಸಿಬೇಕಾದ ಬೆಲೆ ಯಾವುದು ಗೊತ್ತಾ?? ಮತಾಂತರ.. ಹಾ..ಅದು ದಬ್ಬಾಳಿಕೆಯ ಗುಲಾಮಗಿರಿಯ ಮತಾಂತರ ಅನ್ನುವುದು ಮಾತ್ರ ನೆನಪಿರಲಿ.!!

ಇವತ್ತು ಜೀಸಸ್ ಸಹಸ್ರನಾಮಾವಳಿ ಬಂದಿದೆ, ಜೇಸಸ್ ಮಂತ್ರ ಬಂದಿದೆ, ಸೂರ್ಯನಮಸ್ಕಾರ ಬದಲಾಗಿ ಏಸು ನಮಸ್ಕಾರ ಕೂಡ ಜಾರಿಯಾಗಿದೆ. ಈ ಕಣ್ಣಿನಲ್ಲಿ ಇನ್ನೂ ಏನೇನು ನೋಡಲಿಕ್ಕಿದೆಯೋ?? ಅಲೆಲೂಯಾ..!! ಮುಗ್ಧ ಜನರನ್ನು ಸಲೀಸಾಗಿ ನಂಬಿಸುವ ಇಂತಹ ಅನೇಕ ಕಾರ್ಯರೂಪಗಳು ಸಮಾಜದಲ್ಲಿ ಬೇರುರಿಸಲು ಪ್ರಯತ್ನಿಸುತ್ತಿದ್ದಾರೆ ಕಳ್ಳರು. ಜಾಗೃತರಾಗಬೇಕಾದ ಅಗತ್ಯವಿದೆಯಷ್ಟೇ.

ಇಂತಹ ಘಟನೆಗಳನ್ನು ಅದ್ಯಾವ ರೀತಿ ಕೆಲ ಮತಾಂಧರು ಸಮರ್ಥಿಸುತ್ತಾರೋ ಅರಿಯದು. ಅದರೆ ಗೊತ್ತಿರಲಿ. ಇದು ಧಾರ್ಮಿಕ ಮತಾಂತರವಲ್ಲ, ದಬ್ಬಾಳಿಕೆ. ಇದು ವಿಚಾರವಿನಿಮಯದ ಸಂಕೇತವಲ್ಲ, ಸುಲಿಗೆ.!!

– ವಸಿಷ್ಠ

Tags

Related Articles

Close