ಪ್ರಚಲಿತ

700 ವರ್ಷಗಳ ದಾಸ್ಯತೆಯನ್ನ ಪ್ರಶ್ನಿಸದ ‘ಆ’ ಜನಕ್ಕೆ ಮೂರುವರೆ ವರ್ಷಗಳ ‘ಸ್ವರಾಜ್ಯ’ ಸಹಿಸಲಾಗುತ್ತಿಲ್ಲ!!!

ಅವರು ಲೂಟಿ ಮಾಡಿದ್ದು ಬರೀ ದೇಶದ ಸಂಪತ್ತನ್ನಷ್ಟೇ ಅಲ್ಲ.. ಅವರು ಲೂಟಿ ಮಾಡಿದ್ದು ಭಾರತದ. . . .

ಭಾರತಕ್ಕೆ ಸ್ವಾತಂತ್ರ್ಯ ಬಂದು 60 ವರ್ಷಗಳೇ ಕಳೆದಿವೆ, ಮೊಗಲರು 500 ವರ್ಷ, ಬ್ರಿಟಿಷರು ಸರಿ ಸುಮಾರು 200 ವರ್ಷ ಭಾರತವನ್ನ ಆಳಿದರು.

ಈ ಎಲ್ಲ ವಿದೇಶಿಗರೂ ಭಾರತವನ್ನ ಟಾರ್ಗೇಟ್ ಮಾಡಿದ್ದು ಇಲ್ಲಿನ ಸಂಪತ್ತನ್ನ ಲೂಟಿ ಹೊಡೆಯೋಕೆ ಹಾಗು ಇಲ್ಲಿನ ಬಹುಸಂಖ್ಯಾತ ಹಿಂದುಗಳನ್ನ ಇಸ್ಲಾಮಿಗೆ ಹಾಗು ಕ್ರಿಶ್ಚಿಯನ್ ಮತಕ್ಕೆಮತಾಂತರಿಸಿ ಇಡೀ ಜಗತ್ತಿನಲ್ಲಿ ತಮ್ಮ ಸಂಖ್ಯೆಯನ್ನ ವೃದ್ಧಿಸಿಕೊಳ್ಳುವುದು ಅವರ ದುರುದ್ದೇಶವಾಗಿತ್ತು. ಅದರ ಪ್ರಕಾರ ಭಾರತದಲ್ಲಿ ಲಕ್ಷಾಂತರ ಹಿಂದುಗಳು ಧರ್ಮಕ್ಕೋಸ್ಕರ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟರು, ಜೀವ ಉಳಿಸಿಕೊಳ್ಳೋಕೆ ಲಕ್ಷಾಂತರ ಹಿಂದುಗಳು ಧರ್ಮ ಪರಿವರ್ತನೆಯೂ ಆದರು.

ಕೊನೆಗೂ ಭಾರತಕ್ಕೆಬ್ರಿಟೀಷರಿಂದೇನೋ 1947 ರಲ್ಲಿ ಸ್ವಾತಂತ್ರ್ಯ ಸಿಕ್ಕಿತು. ಆದರೆ ಅದೇ ಬ್ರಿಟಿಷ್ ಮಾನಸಿಕತೆಯಿಂದ ಬದುಕುತ್ತಿದ್ದ ನೆಹರುವಿನ ಮೂಲಕ ಭಾರತಕ್ಕೆ ಪ್ರಥಮಪ್ರಧಾನಿಯಾಗಿ ಆಯ್ಕೆಯಾದರು.

ನೆಹರು ಹೇಳ್ತಾರೆ,”ಶಿಕ್ಷಣದಿಂದ ನಾನೊಬ್ಬ ಇಂಗ್ಲೀಷಿಗ, ವಿಚಾರಧಾರೆಯಿಂದ ಅಂತರರಾಷ್ಟ್ರೀಯವಾದಿ, ಸಾಂಸ್ಕೃತಿಕವಾಗಿ ಮುಸ್ಲಿಂ
ಆದರೆ accidentally ನಾನು ಹುಟ್ಟಿದ್ದು ಹಿಂದೂವಾಗಿ” Ref: Violation of Hindu HR – Need for a Hindu Nation III, V.
Sundaram(Retired IAS officer)

ಭಾರತಕ್ಕೆ ಸ್ವಾತಂತ್ರ್ಯಾನಂತರವೂ ನೆಹರುವಿನ ಈ ಮಾನಸಿಕತೆಯಿಂದ ಹಿಂದುಗಳು ಮತ್ತೆ ಬ್ರಿಟಿಷರ ಆಡಳಿತದಲ್ಲೇ ಬದುಕುತ್ತಿದ್ದೇವೆ ಅನ್ನೋ ಭಾವದಿಂದಲೇ ಇದ್ದರು. ಇದೇ ನೆಹರು ವಂಶವೇ ದೇಶವನ್ನ ಸುಮಾರು 60 ವರ್ಷ ಆಳಿತು. ಬೆಂಬಲಿಸೋದಕ್ಕೆ ಪರ್ಯಾಯ ಪಕ್ಷಗಳು ಅಷ್ಟು ಬಲಿಷ್ಠವಾಗಿರದ ಕಾರಣ ಕಾಂಗ್ರೆಸ್ ಎನ್ನುವ ಪಕ್ಷಕ್ಕೇ ತಮ್ಮ ಮತ ಹಾಕಿ ಸುಮ್ಮನಾಗಿಬಿಟ್ಟರು.

ಇದನ್ನೇ ಬಂಡವಾಳವಾಗಿಸಿಕೊಂಡ ಕಾಂಗ್ರೆಸ್, ಈ ಹಿಂದುಗಳು ಏನು ಮಾಡಿದರೂ ನಮಗೇ ಮತ ಹಾಕುತ್ತಾರೆ ಅನ್ನೋ ಘಮಂಡಿನಿಂದ ತಮ್ಮ ಹಿಂದೂ ವಿರೋಧಿ ಮಾನಸಿಕತೆಯನ್ನ ಮುಂದುವರೆಸಿಕೊಂಡೇ ಬಂದರು. ಕಾಂಗ್ರೆಸ್ ಪಕ್ಷ ಯು.ಪಿ.ಎ ಮೈತ್ರಿಕೂಟದೊಂದಿಗೆ ಸರ್ಕಾರ ರಚನೆ ಮಾಡಿ ದೇಶವನ್ನ 10 ವರ್ಷ ಲೂಟಿ ಮಾಡಿದ್ದೆಲ್ಲಾ ತಮಗೆಲ್ಲಾ ತಿಳಿದ ವಿಷಯವೇ. ಆದರೆ ಅವರು ಲೂಟಿ ಮಾಡಿದ್ದು ಬರೀ ದೇಶದ ಸಂಪತ್ತನ್ನಷ್ಟೇ ಅಲ್ಲ.ಅವರು ಲೂಟಿ ಮಾಡಿದ್ದು ಭಾರತದ ಅಸ್ಮಿತೆ, ಸಂಸ್ಕೃತಿ ಕೂಡ. ಹತ್ತು ವರ್ಷ ತಮ್ಮ ಆಡಳಿತದಲ್ಲಿ ಹಿಂದುಗಳ ಭಾವನೆಗಳಿಗೆ ಕಾಂಗ್ರೆಸ್ ಧಕ್ಕೆ ಮಾಡಿದ್ದು ಅಷ್ಟಿಷ್ಟಲ್ಲ.

* ನಮ್ಮ ಕರ್ನಾಟಕದ ವಿಷ್ಯಕ್ಕೇ ಬರೋಣ, ಮುಸಲ್ಮಾನರ ಈದ್ ಮಿಲಾದ್ ಗೆ ಫುಲ್ ಸೆಕ್ಯೂರಿಟಿ ಕೊಟ್ಟುಆಚರಣೆಗೆ ಅವಕಾಶ ನೀಡುವ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಮಾತ್ರ ಚಿಕ್ಕಮಗಳೂರಿನ ದತ್ತಪೀಠದಲ್ಲಿ ದತ್ತ ಜಯಂತಿಗೆ ಹಲವಾರು ಕಂಡೀಷನ್ ಗಳನ್ನ ಹಾಕುತ್ತೆ.

* ಸುಮಾರು 20-25 ವರ್ಷಗಳಿಂದ ಶಾಂತಿಯುತವಾಗಿ ಮೈಸೂರಿನ ಹುಣಸೂರು ಪಟ್ಟಣದಲ್ಲಿ ಪ್ರಮುಖ ಮಾರ್ಗಗಳಲ್ಲಿ ಸಾಗುತ್ತಿದ್ದ ಹನುಮ ಯಾತ್ರೆಯನ್ನಇದೇ ಸಿದ್ದರಾಮಯ್ಯ ಸರ್ಕಾರ ವಿರೋಧಿಸಿ ಈ ಮಾರ್ಗಗಳಲ್ಲಿ ಹೋಗುವಂತಿಲ್ಲ ಅಂತ ನಿರ್ಬಂಧ ಹೇರುತ್ತೆ, ಕಾರಣ ಮತ್ತದೆ ಲಾ ಆ್ಯಂಡ್ ಆರ್ಡರ್ ಸಮಸ್ಯೆ. ಲಾ ಆ್ಯಂಡ್ ಆರ್ಡರ್ ಸಮಸ್ಯೆಯಂತ ಹನುಮಾನ ಮೆರವಣಿಗೆಗೆ ನಿರ್ಬಂಧ ವಿಧಿಸುವ ರಾಜ್ಯ ಸರ್ಕಾರ ಟಿಪ್ಪು ಜಯಂತಿಯನ್ನ ಮಾತ್ರ ಚೆನ್ನಾಗಿ ಆಚರಿಸುತ್ತೆ, ಅಲ್ಲಿ ಲಾ ಆ್ಯಂಡ್ಆರ್ಡರ್ ಸಮಸ್ಯೆ ಇವರಿಗೆ ಕಂಡು ಬರೋದೇ ಇಲ್ಲ.

ಇಷ್ಟೇ ಅಲ್ಲ… ಇದೇ ಕಾಂಗ್ರೆಸ್ ಎಂಬ ಹಿಂದೂ ವಿರೋಧಿ ಪಕ್ಷ!!

* ಹಿಂದುಗಳು ಪೂಜಿಸುವ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನನ್ನ ಆತನೊಬ್ಬ ಕಾಲ್ಪನಿಕ ವ್ತಕ್ತಿಯೆಂದು ಬಿಟ್ಟರು.

* ರಾಮಾಯಣ ಒಂದು ಕಾಲ್ಪನಿಕ ಗ್ರಂಥ, ರಾಮಾಯಣಕ್ಕೆ ಏನು ಸಾಕ್ಷಿ ಅನ್ನೋದನ್ನ ಪ್ರಶ್ನಿಸಿದರು.

* ರಾಮಾಯಣದಲ್ಲಿ ಉಲ್ಲೇಖವಿರುವ, ಲಕ್ಷಾಂತರ ವರ್ಷಗಳ ನಂತರವೂ ರಾಮಾಯಣದ ಏಕೈಕ ಕುರುಹಾಗಿ ಈಗಲೂ ನಿಂತಿರುವ ಭಾರತ ಶ್ರೀಲಂಕಾ
ನಡುವಿನ ರಾಮಸೇತುವನ್ನೂ ಕಾಂಗ್ರೆಸ್ ಒಡೆಯೋಕೆ ಮುಂದಾಗಿತ್ತು.

* ರಾಮ ಜನಿಸಿದ್ದ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೂ ವಿರೋಧ ವ್ಯಕ್ತಪಡಿಸಿ 16ನೆ ಶತಮಾನದಲ್ಲಿ ಆಯೋಧ್ಯೆಯ ಭವ್ಯ ಶ್ರೀರಾಮನ ಮಂದಿರವನ್ನ ಧ್ವಂಸಗೊಳಿಸಿ ಅಲ್ಲಿ ಮಸ್ಜಿದ್ ನಿರ್ಮಿಸಿದ್ದ ಬಾಬರ್ ನ್ನ ಸಮರ್ಥಿಸಿಕೊಂಡು ಅಲ್ಲಿ ಮಸ್ಜಿದ್ ಇರೋದೇ ಸೂಕ್ತ ಎಂದು ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದರು.

* ಮೋದಿ ಸರ್ಕಾರ ಬಂದ ನಂತರ ಹೊಟ್ಟೆಗೆ ಬೆಂಕಿ ಬಿದ್ದಂತೆ ಆಡುತ್ತಿರುವ ಕಾಂಗ್ರೆಸ್ ಮೋದಿಯನ್ನ ವಿರೋಧಿಸುವ ಭರದಲ್ಲಿ ಮೋದಿ ವಿಶ್ವಸಂಸ್ಥೆಯ ಮೂಲಕ ಜಗತ್ತಿನಾದ್ಯಂತ ವಿಶ್ವ ಯೋಗ ದಿನ ಆಚರಿಸುವುದನ್ನೂ ವಿರೋಧಿಸಿತ್ತು. ಇದೂ ಕೂಡ ಸನಾತನ ಧರ್ಮದ ಯೋಗವನ್ನ ಅವಮಾನಿಸಿದರ ಹಾಗೆಯೇ ಅಲ್ವಾ?

* ಶಾಲೆಗಳಲ್ಲಿ ವಿಶ್ವಕ್ಕೇ ಸನ್ಮಾರ್ಗ ತೋರಿಸುವ ಗ್ರಂಥವಾದ ಭಗವದ್ಗೀತೆಯನ್ನ ಓದಿಸದ ಹಾಗೆ ಕಾಂಗ್ರೆಸ್ ಮಾಡಿತು, ಶಾಲಾ ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆಯನ್ನ ಹಾಕಿದರೆ ಅದು ಶಿಕ್ಷಣದ ಕೇಸರೀಕರಣ ಅಂತ ಬೊಬ್ಬೆ ಹೊಡೆದು ಭಗವದ್ಗೀತೆಯ ವಿರೋಧ ಮಾಡಿದರು.

* ಜಗತ್ತಿನ ಎಲ್ಲ ಭಾಷೆಗಳ ಮಾತೃ ಭಾಷೆ, ಅಮೇರಿಕಾ ತನ್ನ ಕಂಪ್ಯೂಟರ್ ಗಳಿಗೆ ಬೈನರಿ(0s and 1s) ಭಾಷೆಯನ್ನ ತೆಗೆದು ಸಂಸ್ಕೃತವನ್ನ ಕೋಡಿಂಗ್ ಗಾಗಿ ಉಪಯೋಗಿಸಬೇಕಂತ ಚಿಂತಿಸುತ್ತಿದ್ದರೆ ಇತ್ತ ಕಾಂಗ್ರೆಸ್ ಗೆ ಮಾತ್ರ ಉರ್ದು, ಅರೇಬಿಕ್ ಭಾಷೆಗಳು ಅಚ್ಚುಮೆಚ್ಚಿನ ಭಾಷೆಗಳಾದವು. ಸಂಸ್ಕೃತ ಭಾಷೆಯೆಂದರೆ ಅದೊಂದು ಕೋಮುವಾದಿ ಭಾಷೆ ಎಂಬುದನ್ನೂ ಬಿಂಬಿಸಿ ಸಂಸ್ಕೃತ ಭಾಷೆಯನ್ನ ವಿರೋಧಿಸಿದರು.

* ಸಂಸ್ಕೃತವನ್ನ ಕೋಮುವಾದಿ ಭಾಷೆಯೆಂಬ ಪಟ್ಟ ಕಟ್ಟಿದ ಇವರಿಗೆ ಅರೇಬಿಕ್ ಭಾಷೆ ಮಾತ್ರ ತಮ್ಮ ಭಾಷೆಯಾಗಿ ಕಂಡಿತ್ತು. ಶಾಲೆಗಳಲ್ಲಿ ಅರೇಬಿಕ್ ಭಾಷೆಯನ್ನ ಐಚ್ಛಿಕ ಭಾಷೆಯಾಗಿ ಸೇರಿಸಲಾಗುವುದು ಅಂತ ಇದೇ ಸರ್ಕಾರದ ಮಂತ್ರಿಯೊಂಬ್ಬರು ಹೇಳಿದ್ದು ನಿಮಗೆಲ್ಲ ನೆನಪಿರಬಹುದು.

* ಹಿಂದುಗಳ ಹಬ್ಬಗಳಾದ ದೀಪಾವಳಿ, ಹೋಳಿ, ದಹಿ ಹಂಡಿ, ಕಂಬಳ, ಜಲ್ಲಿಕಟ್ಟು, ಹಾಗು ಇನ್ನಿತರ ಹಬ್ಬಗಳನ್ನ ತನ್ನ ಚೇಲಾಗಳ ಮೂಲಕ ಕೋರ್ಟಿನಲ್ಲಿ ಪಿಟಿಷನ್ ಹಾಕಿಸಿ ಟಾರ್ಗೇಟ್ ಮಾಡಲಾಯಿತು, ಈಗಲೂ ಮಾಡಲಾಗುತ್ತಿದೆ.

* ಕಾಂಗ್ರೆಸ್ ಬರೀ ಹಿಂದುಗಳ ವಿರೋಧಿಯಷ್ಟೇ ಅಲ್ಲ ಕಾಂಗ್ರೆಸ್ ದೇಶವನ್ನ ಶತ್ರುಗಳಿಂದ ಹಗಲು ರಾತ್ರಿ ತನ್ನ ಜೀವವನ್ನ ಪಣಕ್ಕಿಟ್ಟು ಹೋರಾಡುತ್ತಿರೋ ಸೈನಿಕನ ವಿರೋಧಿಯೂ ಆಗಿಬಿಟ್ಟಿದೆ.

ಇದಕ್ಕೆ ತಾಜಾ ಉದಾಹರಣೆಯೆಂದರೆ ಭಾರತೀಯ ಸೈನ್ಯದ ಮುಖ್ಯಸ್ಥರೇ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿರೋದನ್ನ ಪತ್ರಿಕಾಗೋಷ್ಟಿತ ಮೂಲಕ ಹೇಳಿದರೂ “ಅದಕ್ಕೆ ಸಾಕ್ಷಿಯೇನಿದೆ” ಅಂತ ಕಾಂಗ್ರೆಸ್ ಪ್ರಶ್ನಿಸಿದ್ದು ತಮಗೆಲ್ಲ ನೆನಪಿದೆ.

* ಕಾಶ್ಮೀರ ಭಾರತದ ಮುಕುಟ, ಅಂತಹ ರಾಜ್ಯವನ್ನೂ ಕಾಂಗ್ರೆಸ್ ಪಾಕಿಸ್ತಾನಕ್ಕೆ ಕೊಟ್ಟುಬಿಡಬೇಕು ಅನ್ನೋ ಮಾನಸಿಕತೆಯನ್ನ ಹೊಂದಿದೆ, ಇದಕ್ಕೆ ಉದಾಹರಣೆಯೆಂದರೆ ಮಣಿಶಂಕರ್ ಅಯ್ಯರ್ ಎಂಬ ದೇಶದ್ರೋಹಿ ಕಾಂಗ್ರೆಸ್ಸಿಗ ಪಾಲಿಸ್ತಾಕ್ಕೆ ಹಾಗು ಕಾಶ್ಮೀರಕ್ಕೆ ಹೋಗಿ ಅಲ್ಲಿನ ಪ್ರತ್ಯೇಕತಾವಾದಿ ಲೀಡರ್ ಗಳನ್ನ ಭೇಟಿಯಾಗಿ ಬಂದದ್ದು.

* ಕಾಂಗ್ರೆಸ್ ಹಿಂದುಗಳ ಆರಾಧಿಸುವ ಗೋಮಾತೆಯ ವಿರೋಧಿ ಕೂಡ ಉದಾಹರಣೆ: ಕೇರಳದಲ್ಲಿ ಮೋದಿ ಸರ್ಕಾರದ ಗೋಹತ್ಯೆ ನಿಷೇಧದ ಫರ್ಮಾನನ್ನ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ನಡು ಬೀದಿಯಲ್ಲೇ ಗೋವಿನ ಹೊಟ್ಟೆಗೆ ಚೂರಿಯಿರಿದು ವಿಕೃತವಾಗಿ ಕೊಂದು ಅದನ್ನ ತಿಂದದ್ದು.

* ಕಾಂಗ್ರೆಸ್ ಬರೀ ಹಿಂದುಗಳದ್ದಷ್ಟೇ ಅಲ್ಲ ಬದಲಾಗಿ ಭಾರತದ ಅಭಿವೃದ್ಧಿಯ ವಿರೋಧಿಯೂ ಹೌದು.

ಭಾರತವನ್ನ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ಜಾರಿಗೊಳಿಸಿರುವ ಹಲವು ಯೋಜನೆಗಳ ಸಮರ್ಥನೆ ಮಾಡೋದನ್ನ ಬಿಟ್ಟು ಆ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತ ದೇಶ ಉದ್ಧಾರವಾಗದೇ ತಮ್ಮ ಅಧಿಕಾರಾವಧಿಯಲ್ಲಿ ಹೇಗೆ ಲೂಟಿ ಮಾಡಿದ್ದರೋ ಹಾಗೆ ಈ ದೇಶವಿರಬೇಕು ಅನ್ನೋದನ್ನ ಬಯಸುತ್ತೆ ಹೊರತು ದೇಶದ ಅಭಿವೃದ್ಧಿಯೂ ಕಾಂಗ್ರೆಸ್ಸಿನ ಕಣ್ಣಿಂದ ನೋಡಲಾಗುತ್ತಿಲ್ಲ

ಆದರೂ ಯೋಚಿಸುತ್ತೇನೆ.. 700 ವರ್ಷಗಳ ದಾಸ್ಯದಲ್ಲಿ ಹಾಗು ಕಾಂಗ್ರೆಸ್ಸಿನ 60 ವರ್ಷಗಳ ವಿದೇಶಿ ಮಾನಸಿಕತೆಯಲ್ಲಿ ಪ್ರಶ್ನಿಸಿದೆ ಬದುಕಿದ್ದ ಜನರಿಗೆ ಮೂರುವರೆ ವರ್ಷಗಳ ಸ್ವರಾಜ್ಯವನ್ನ ವಿರೋಧಿಸಿ ಓಟ್ ಹಾಕುವವರು ಯಾವ ಪ್ರಜಾತಿಯ ಜನಗಳು, ಯಾವ ಪ್ರಜಾತಿಯ ದೇಶವಾಸಿಗಳೆಂದು?

ಕಾಲ ಮಿಂಚಿಲ್ಲ ಸ್ನೇಹಿತರೆ ಹಿಂದೂ ವಿರೋಧಿ ಶಕ್ತಿಗಳನ್ನ ಈಗ ಎದುರಿಸದಿದ್ದರೆ ಇನ್ಯಾವತ್ತೂ ಎದುರಿಸೋಕ್ಕಾಗಲ್ಲ!!!

– Vinod Hindu Nationalist

Tags

Related Articles

Close