ಪ್ರಚಲಿತ

70000 ಕ್ಕೂ ಹೆಚ್ಚು ಕ್ರೈಸ್ತರನ್ನು ಮಾರಣಹೋಮಗೈದ ಟಿಪ್ಪು ಕೊಲ್ಲುವಾಗ ಜೀಸಸ್ ಗೆ ಅವ್ಯಾಚ ಶಬ್ದಗಳಿಂದ ಬೈಯ್ಯುತ್ತಿದ್ದ!!!

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದಲ್ಲಾ ಒಂದು ರೀತಿಯ ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಅನಾಚಾರಗಳನ್ನು ನಡೆಸುತ್ತಲೇ ಇದೆ. ನೆಟ್ಟಗೆ ಆಡಳಿತ ನಡೆಸಲು ಬಾರದ ಈ ಪಕ್ಷಕ್ಕೆ ಯಾತಕ್ಕಾದರೂ ಮತ ನೀಡಿದ್ದೇವಪ್ಪಾ ಎಂದು ಜನತೆ ಪಶ್ಚಾತಾಪ ಪಡೆದುಕೊಳ್ಳುತ್ತಿದ್ದಾರೆ. ತನ್ನ ಪಕ್ಷದ ಸಿದ್ಧಾಂತದಂತೆ ತುಷ್ಟೀಕರಣ ನೀತಿಯನ್ನು ಅನುಸರಿಸುತ್ತಲೇ ಬಂದಿರುವ ರಾಜ್ಯ ಕಾಂಗ್ರೆಸ್, ಜಾತಿ ಜಾತಿ ಗಳ ಮಧ್ಯೆ ವಿಷಭೀಜ ಬಿತ್ತಿ, ಕೋಮು ಕೋಮುಗಳ ಮಧ್ಯೆ ಘರ್ಷಣೆಉಂಟು ಮಾಡಿ ತನ್ನ ಮುಖವಾಡವನ್ನು ರಾಜ್ಯದ ಜನತೆಯ ಮುಂದೆ ಬೆತ್ತಲುಗೊಳಿಸಿದೆ.

ಈ ಸರ್ಕಾರದ ಒಡೆದು ಆಳುವ ನೀತಿಯ ಮತ್ತೊಂದು ಮುಖವೇ “ಟಿಪ್ಪು ಜಯಂತಿ”…

ಟಿಪ್ಪು ಸ್ವಾತಂತ್ರ್ಯ ವೀರನಾ..? ಹೀಗೊಂದು ಪ್ರಶ್ನೆ ಕಳೆದ 3 ವರ್ಷಗಳಿಂದ ರಾಜ್ಯದ ಜನತೆಯನ್ನು ಕಾಡುತ್ತಿದೆ. ಆವಾಗೇನೋ ನಾವು ಎಳೆಯ ಮಕ್ಕಳು. ಮೇಷ್ಟ್ರು
ಹೇಳಿಕೊಟ್ಟ ಪಾಠವನ್ನು ಬೆಂಚು ಬಿಸಿ ಮಾಡಿಕೊಂಡು ಕೇಳಿದ್ದೇವೆ ಅಷ್ಟೆ. ಆತ ಹುಲಿಯೊಡನೆ ಹೋರಾಡಿ ಜಯಿಸಿದ ವೀರ ಎಂದೆಲ್ಲಾ ಉದಾಹರಿಸಿ, ಪಠ್ಯದಲ್ಲಿದ್ದಂತೆ ಹೊಗಳಿದ್ದರು ಮೇಷ್ಟ್ರು. ಇತಿಹಾಸ ಹಾಗೇನೆ ಅಲ್ವಾ. ಸತ್ಯ ಸುಳ್ಳಾಗುತ್ತೆ, ಸುಳ್ಳು ವಿಜ್ರಂಭಿಸುತ್ತೆ. ಟಿಪ್ಪು ವಿಷಯವೂ ಹಾಗೇ ಆಗಿದ್ದು. ಟಿಪ್ಪು ಒಬ್ಬ ಸುಲ್ತಾನ ಎಂದು ಮಾತ್ರ ಕೇಳಿದ್ದೇವೆಯೇ ಹೊರತು, ಆತ ಮಾಡಿದ್ದ ಪಾಪಗಳನ್ನು ತಿಳಿಸುವ ಗೋಜಿಗೆ ಯಾರೂ ಹೋಗಲೇ ಇಲ್ಲ.

ಆದ್ರೇನು ಮಾಡೋದು. ನಮ್ಮ ಘನತೆತೆತ್ತ ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ಟಿಪ್ಪು ಜಯಂತಿ ಘೋಷಿಸಿ ಸುಲ್ತಾನನ ಹಿಂದಿರುವ ಕರಾಳ ಮುಖವನ್ನು ಜನತೆಗೆ ತಿಳಿಯುವಂತೆ ಮಾಡಿದ್ದಾರೆ. ಟಿಪ್ಪುವಿನ ಬಗ್ಗೆ ಕೇವಲ ಶಾಲೆಯಲ್ಲಿ ಓದಿದ್ದ ಮಕ್ಕಳು, ಈಗ ಆತನ ಮಹಾ ಕ್ರೌರ್ಯದ ಬಗ್ಗೆ ಜಗತ್ತಿಗೆ ತಿಳಿಯುವಂತೆ ಮಾಡಿದ್ದಾರೆ.

ಇಷ್ಟಕ್ಕೂ ಸಿಎಂಗೆ ಟಿಪ್ಪು ಜಯಂತಿ ಮಾಡುವ ಅಗತ್ಯವೇನಿತ್ತು..?

ಈ ಪ್ರಶ್ನೆಗೆ ಉತ್ತರ ಕಂಡುಗೊಳ್ಳಲು ಹೆಚ್ಚು ಸಮಯವೇನೂ ಬೇಕಾಗಿಲ್ಲ ಬಿಡಿ. ಎಲ್ಲಾ ಜಾತಿಗಳ ಓಟು ಪಡೆದು ಅಧಿಕಾರಕ್ಕೆ ಬಂದಂತಹ ಸಿದ್ದರಾಮಯ್ಯ
ಅನುಸರಿಸಿದ್ದು ಮಾತ್ರ ಒಡೆದು ಆಳುವ ನೀತಿ. ಇತಿಹಾಸವೇ ಗೊತ್ತಿಲ್ಲದೆ ಏಕಾಏಕಿ, ಮುಸಲ್ಮಾನರ ಓಲೈಕೆಗಾಗಿ ಟಿಪ್ಪುವನ್ನು ಎಳೆದು ತಂದು ರಾಜ್ಯದಲ್ಲಿ ಮಹಾ
ಘರ್ಷಣೆಗೆ ಕಾರಣರಾದರು.

ಕೇವಲ ಮುಸಲ್ಮಾನರ ಓಲೈಕೆಗಾಗಿ ಜಾರಿಗೆ ತಂದ ಈ ಟಿಪ್ಪು ಜಯಂತಿ ಹಿಂದೂ ಹಾಗೂ ಕ್ರೈಸ್ತರ ಕೆಂಗಣ್ಣಿಗೆ ಗುರಿಯಾಗಿದೆ. ಈ ಟಿಪ್ಪು ಜಯಂತಿಯನ್ನು ವಿರೋಧಿಸಿ ರಾಜ್ಯದಾದ್ಯಂತ ಗಲಭೆಗಳು ಆರಂಭವಾಗುತ್ತಿದೆ. ಸ್ವತಃ ಮುಸಲ್ಮಾನರೇ “ನಾವು ಟಿಪ್ಪು ಜಯಂತಿಯನ್ನು ಕೇಳಲೇ ಇಲ್ಲ. ಸರ್ಕಾರ ಸುಖಾ ಸುಮ್ಮನೆ ನಮ್ಮ ಹೆಸರಲ್ಲಿ ಹಿಂಸಿಸುತ್ತಿದೆ” ಎಂದು ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದರೂ ಸಿದ್ದ ಮಾತ್ರ ಟಿಪ್ಪು ಜಯಂತಿಯನ್ನು ನಡೆಸಿಯೇ ಸಿದ್ಧ ಎಂದು ಹಠಕ್ಕೆ ಬಿದ್ದವರಂತೆ ವರ್ತಿಸುತ್ತಿದ್ದಾರೆ.

ಆ ಟಿಪ್ಪೂ ಎನ್ನುವ ರಾಕ್ಷಸ ಹಿಂದೂಗಳನ್ನು ನಡೆಸಿಕೊಂಡ ರೀತಿ ಜಗಜ್ಜಾಹೀರು ಬಿಡಿ. ಪ್ರತಿಯೊಬ್ಬ ಹಿಂದೂ ಕೂಡಾ ಇಂದು ಟಿಪ್ಪು ಜಯಂತಿಯನ್ನು ವಿರೋಧಿಸಿ
ಬೀದಿಗಿಳಿದಿದ್ದಾನೆ. “ರಕ್ತವನ್ನಾದರು ಕೊಡುತ್ತೇವೆ ಟಿಪ್ಪು ಜಯಂತಿಯನ್ನು ಮಾತ್ರ ಮಾಡಲು ಬಿಡಲ್ಲ” ಎಂದು ತೊಡೆ ತಟ್ಟಿ ಸವಾಲೆಸೆದಿದ್ದಾರೆ. ಈಗಾಗಲೇ ರಾಜ್ಯಾದ್ಯಂತ ಟಿಪ್ಪು ಜಯಂತಿ ವಿರೋಧವಾಗಿ ಬೀದಿಗಿಳಿದು ಹೋರಾಡಿ ತಮ್ಮ ಸಾಮಥ್ರ್ಯವನ್ನು ಸರ್ಕಾರಕ್ಕೆ ರವಾನಿಸಿದ್ದಾರೆ.

ಕ್ರೈಸ್ತರೇ ನಿವ್ಯಾವಾಗ ಸಿಡಿದೇಳುತ್ತೀರಾ..?

ಯೆಸ್… ಈಗ ಪ್ರಶ್ನೆ ಇರುವುದು ಇಲ್ಲೇ. ಟಿಪ್ಪು ಎಂಬ ನರ ರಾಕ್ಷಸ ಕೇವಲ ಹಿಂದೂಗಳನ್ನು ಮಾತ್ರವೇ ಹಿಂಸಿಸಲಿಲ್ಲ. ಬದಲಾಗಿ ಕ್ರೈಸ್ತ ಸಮಾಜದ ಮೇಲೆ ಕಂಡು
ಕೇಳರಿಯದ ದಬ್ಬಾಳಿಕೆಯನ್ನು ಮಾಡಿದ್ದಾನೆ. ಅತ್ಯಾಚಾರ, ಕೊಲೆ, ಮತಾಂತರಗಳನ್ನು ಮಾಡಿ ಕ್ರೈಸ್ತ ಸಮುದಾಯವನ್ನು ರಾಜ್ಯದಲ್ಲಿ ಮತ್ತೆ ಮೇಲೇಳದಂತೆ ಮಾಡಿದ್ದಾನೆ! ಸುಮಾರು 70 ಸಾವಿಕ್ಕೂ ಅಧಿಕ ಕ್ರೈಸ್ತರನ್ನು ಬಂಧಿಸಿ ಅವರಿಗೆ ಚಿತ್ರಹಿಂಸೆ ನೀಡಿ, ಕ್ರೈಸ್ತರ ಮಹಿಳೆಯರನ್ನು ಮುಸಲ್ಮಾನ ಹುಡುಗರೊಂದಿಗೆ ಬಿಟ್ಟು ಅತ್ಯಾಚಾರಗಳನ್ನು ಮಾಡಿಸಿ ಕ್ರೈಸ್ತ ಧರ್ಮವನ್ನು ವಿನಾಶ ಮಾಡುವಲ್ಲಿ ಟೊಂಕ ಕಟ್ಟಿ ನಿಂತಿದ್ದ ಮಹಾ ಕ್ರೂರಿ ಟಿಪ್ಪು.

ಕ್ರೈಸ್ತ ಸಮುದಾಯವೇ ಹೇಳುವಂತೆ, ಆ ಸಮಾಜಕ್ಕೆ ಟಿಪ್ಪುವಿಗಿಂತ ದೊಡ್ಡ ಶತ್ರು ಮತ್ತೊಬ್ಬನಿಲ್ಲ. 500 ವರ್ಷಗಳ ಇತಿಹಾಸ ನೋಡಿದ್ರೆ, ಟಿಪ್ಪು ಮಾಡಿದ್ದಷ್ಟು ಕ್ರೌರ್ಯ ಆ ಜನಾಂಗದ ಮೇಲೆ ಮತ್ತೊಬ್ಬನು ಮಾಡಿಲ್ಲ. ಸುಮಾರು ಮುಕ್ಕಾಲು ಭಾಗದಷ್ಟು ಕ್ರೈಸ್ತ ಸಮಾಜದ ಜನರನ್ನು ಆ ಟಿಪ್ಪು ಎಂಬ ರಾಕ್ಷಸ ದೊರೆ ಕೊಂದಿದ್ದಾನೆ. 1784ರಿಂದ 1799ರ ವರೆಗೆ ಅಂದರೆ, ಸುಮಾರು ಹದಿನೈದು ವರ್ಷಗಳ ಕಾಲ ಆತ ನೀಡಿದ್ದ ಹಿಂಸೆಯಿಂದಾಗಿ ಮುಕ್ಕಾಲು ಭಾಗದಷ್ಟು ಕ್ರೈಸ್ತರು ನಾಶವಾಗಿದ್ದಾರೆ.

ಈ ಟಿಪ್ಪು ಎನ್ನುವ ನರ ಹಂತಕ ಕೇವಲ ಕ್ರೈಸ್ತ ಜನಾಂಗದ ಮೇಲೆ ಮಾತ್ರವಲ್ಲದೆ, ಕ್ರೈಸ್ತರ ಶ್ರದ್ಧಾ ಕೇಂದ್ರವಾಗಿರುವ ಪೂಜಾ ಸ್ಥಳಗಳ ಮೇಲೂ ತನ್ನ ಖಡ್ಘದ
ಪ್ರತಾಪವನ್ನು ತೋರಿಸಿದ್ದಾನೆ. ಇತಿಹಾಸದಲ್ಲೇ ಅತಿದೊಡ್ಡ “ಚರ್ಚ್ ಧ್ವಂಸಕ” ಎಂದು ಗುರುತಿಸಿಕೊಂಡಿದ್ದಾನೆ. ಸುಮಾರು 25ಕ್ಕಿಂತಲೂ ಅಧಿಕ ಚರ್ಚುಗಳನ್ನು
ನೆಲಸಮಗೊಳಿಸಿದ್ದ ಇತಿಹಾಸ ಕಂಡ ಮಹಾ ಕ್ರೈಸ್ತ ವಿರೋಧಿ ಟಿಪ್ಪು. ಎರಡು ಚರ್ಚುಗಳನ್ನು ನೆಲಸಮಗೊಳಿಸುವಾಗ ಹಿಂದೂಗಳ ಸಹಾಯದಿಂದ ಸಾಧ್ಯವಾಗದೆ
ಪಲಾಯನ ಮಾಡಿದ್ದಾನೆ. ಆದ್ದರಿಂದ ಆ 2 ಚರ್ಚುಗಳನ್ನು ಬಿಟ್ಟು ಉಳಿದೆಲ್ಲಾ ಚರ್ಚುಗಳನ್ನು ಧ್ವಂಸ ಮಾಡಿದ್ದಾನೆ ಟಿಪ್ಪು. ಈ ಟಿಪ್ಪುವಿನ ಕ್ರೌರ್ಯ ಎಷ್ಟಿತ್ತೆಂದರೆ ಈತ ವಯೋ ವೃದ್ಧರನ್ನೂ, ಹಸುಗೂಸುಗಳನ್ನೂ ಬಿಟ್ಟಿಲ್ಲ. ಕಿಂಚಿತ್ತೂ ಮಾನವೀಯತೆಯೂ ಇಲ್ಲದೆ ಗರ್ಭಿಣಿಯರ ಸಹಿತವಾಗಿ ಕಾಲ್ನಡಿಗೆಯಲ್ಲಿ ಶ್ರೀ ರಂಗಪಟ್ಟಣಕ್ಕೆ ಬಂಧಿಸಿ ಎಳೆದುಕೊಂಡು ಹೋಗಿದ್ದಾನೆ.

ಹೀಗೆ ಕರೆದುಕೊಂಡು ಹೋಗಲು ಬರೋಬ್ಬರಿ 6 ವಾರಗಳೇ ಬೇಕಾಯಿತು. ಹೀಗೆ ಹಿಂಸಾತ್ಮಕ ರೀತಿಯಲ್ಲಿ ಕರೆದುಕೊಂಡು ಹೋಗುವಾಗಲೇ ದಾರಿ ಮಧ್ಯೆಯೇ
ಹಲವಾರು ಮಂದಿ ಕ್ರೈಸ್ತರು ಈತನ ಕ್ರೌರ್ಯಕ್ಕೆ ಜೀವವನ್ನೇ ತ್ಯಜಿಸಿದ್ದಾರೆ. ಕ್ರೌರ್ಯಗಳನ್ನೇ ತನ್ನ ಆಡಳಿತದ ಬಂಡವಾಳವಾಗಿ ಇರಿಸಿಕೊಂಡು, ಬಡ ಅಮಾಯಕ
ಜೀವಗಳನ್ನು ಕರುಣೆಯಿಲ್ಲದೆನೇ ಹಿಂಸಿಸಿ ಸಾಯಿಸುತ್ತಿದ್ದ.

ನೆತ್ತರಕೆರೆ ಮತ್ತು ಗಡಾಯಿ ಕಲ್ಲು ಕಥೆ ಕೇಳಿದರೆ ಬಚ್ಚಿ ಬೀಳ್ತೇವೆ..!!!

ಟಿಪ್ಪುವಿನ ಅನಾಚಾರಕ್ಕೆ ಕೊನೆಯೇ ಇಲ್ಲದಂತಾಗಿತ್ತು. ಅದು ಮಾತಿನಲ್ಲಿ ಹೇಳುವಂತಹ ಕ್ರೌರ್ಯತೆನೇ ಅಲ್ಲ. ನೆತ್ತರಕೆರೆ ಮತ್ತು ಬೆಳ್ತಂಗಡಿಯ ಗಡಾಯಿ ಕಲ್ಲಿನಲ್ಲಿ
ಆತ ನಡೆಸಿದ್ದ ಕ್ರೂರತೆ ಒಂದೆರಡಲ್ಲ. ನೆತ್ತರಕೆರೆಯಲ್ಲಿ ಒಂದೇ ದಿನ ಬರೋಬ್ಬರಿ 5 ಸಾವಿರ ಜನರ ಮಾರಣ ಹೋಮ ನಡೆಸಿದ್ದಾನೆ ಈ ಟಿಪ್ಪು. ಈಗಿನ ಯಾವ
ಭಯೋತ್ಪಾದನಾ ಸಂಘಟನೆಗಳಿಗೂ ಇಲ್ಲದಷ್ಟು ಪವರ್ ಆ ಪಾಪಿಗೆ ಇತ್ತು ಅನ್ನೋದನ್ನು ನಂಬಲೇ ಬೇಕು. ಅಂದು ಟಿಪ್ಪುವಿನ ಸೈನಿಕರು ಕ್ರೈಸ್ತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗೈದು ತಮ್ಮ ವಿಕೃತಿಯನ್ನು ಮೆರೆಯುತ್ತಾರೆ. ಕ್ರೈಸ್ತ ಸಮುದಾಯದ ಯುವಕರ ಎದುರೇ ಈ ಮಹಿಳೆಯರ ಮೇಲೆ ತಮ್ಮ ಕಾಮತ್ವವನ್ನು ಮೆರೆಯುತ್ತಾರೆ. ಇದನ್ನು ಸಮಾಜದ ಯುವಕರು ಕಟುವಾಗಿ ಪ್ರತಿಭಟಿಸುತ್ತಾರೆ. ಬೀದಿಗಿಳಿದು ಟಿಪ್ಪು ಸೈನಿಕರ ವಿರುದ್ಧ ತೊಡೆ ತಟ್ಟುತ್ತಾರೆ. ಆದರೆ ಮತ್ತೆ ಅಲ್ಲಿ ನಡೆದದ್ದೇ ಬೇರೆ. ಟಿಪ್ಪುವಿನ ಆಜ್ನೆಯನ್ನು ಪಡೆದ ಆತನ ಕ್ರೂರ ಸೈನಿಕರು ಆ 5 ಸಾವಿರ ಕ್ರೈಸ್ತ ಯುವಕರ ಮಾರಣ ಹೋಮ ನಡೆಸುತ್ತಾರೆ. ಐದು ಸಾವಿರ ಜನರ ರಕ್ತ ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ಮತ್ತು ಬಂಟ್ವಾಳದ ಮಧ್ಯೆ ಇರುವ ಪ್ರದೇಶದಲ್ಲಿ ಹರಿದು ಬಿಡುತ್ತೆ. ಆ 5 ಸಾವಿರ ಜನರ ಹತ್ಯೆಯಿಂದಾಗಿ ಇಡೀ ಪರಿಸರವೇ ನೆತ್ತರುಮಯವಾಗುತ್ತದೆ. ಅಲ್ಲೇ ಪಕ್ಕದಲ್ಲಿದ್ದ ಕೆರೆ ಸಂಪೂರ್ಣ ನೆತ್ತರಿನಿಂದ ತುಂಬಿಕೊಂಡಿದ್ದರಿಂದ ಆ ಕೆರೆಗೆ ಇಂದಿಗೂ ನೆತ್ತರು ಕೆರೆ ಎಂದೇ ಹೆಸರುಳಿದಿದೆ. ಅಷ್ಟೊಂದು ಭೀಕರವಾಗಿತ್ತು ಟಿಪ್ಪುವಿನ  ಷ0ಡತನದ ಕ್ರೌರ್ಯತೆ.

ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಗಡಾಯಿ ಕಲ್ಲು ಎಂಬ ಬೃಹತ್ತಾದ ಬಂಡೆಗಲ್ಲಿನಿಂದ ಅನೇಕ ಕ್ರೈಸ್ತರನ್ನು ಕೆಳಗೆ ದೂಡಿ ಕೊಲೆ ಮಾಡಿದ್ದಾನೆ. ತನ್ನ ವಿರುದ್ಧ
ಮಾತೆತ್ತಿದರೆ ಸಾಕು, ಅಂತವರನ್ನು ಆ ಕಲ್ಲಿನ ಮೇಲೆ ಕರೆದುಕೊಂಡು ಹೋಗಿ, ಆ ಕಲ್ಲಿನಿಂದ ಕೆಳಗೆ ದೂಡಿಹಾಕಿ ವಿಕೃತ ಆನಂದವನ್ನು ಪಡೆಯುತ್ತಿದ್ದ ಟಿಪ್ಪು.

ಬರೋಬ್ಬರಿ 15 ವರ್ಷಗಳ ಕಾಲ ಕ್ರೈಸ್ತ ಸಮಾಜವನ್ನು ಹಿಂಸಿಸಿ, ಕ್ರೈಸ್ತ ಮಹಿಳೆಯರ ಅತ್ಯಾಚಾರ ಮಾಡಿ, ಮತಾಂತರ ಮಾಡಿ, ಕೊಲೆಗಳನ್ನು ಮಾಡುತ್ತಿದ್ದ ಟಿಪ್ಪು,
ಅಷ್ಟೂ ವರ್ಷಗಳ ಕಾಲ ಕ್ರೈಸ್ತ ಸಮಾಜವನ್ನು ಬಂಧನದಲ್ಲಿಟ್ಟಿದ್ದ. ನಂತರ 1799- ಮೇ ನಲ್ಲಿ ಆತನ ಹತ್ಯೆಯಾಗುತ್ತೆ. ನಂತರ ಅಲ್ಲಿ ಬಂಧನವಾಗಿದ್ದ ಅಷ್ಟೂ ಕ್ರೈಸ್ತರು ವಾಪಾಸು ತನ್ನ ತವರಿಗೆ ಮರಳುತ್ತಾರೆ.

ಆತನ ಬಂಧಿಸುವಾಗ ಬರೋಬ್ಬರಿ 70 ರಿಂದ 80 ಸಾವಿರದಷ್ಟಿದ್ದ ಕ್ರೈಸ್ತ ಸಮುದಾಯದ ಜನರು, ಆತನ ಹತ್ಯೆಯ ನಂತರ ಬಂಧಮುಕ್ತವಾದ ಕೇವಲ 20 ಸಾವಿರ ಜನರು ಮಾತ್ರ ವಾಪಾಸಾಗಿದ್ದು. 50 ರಿಂದ 60 ಸಾವಿರ ಕ್ರೈಸ್ತ ಜನಾಂಗದವರು ತಮ್ಮ ಪ್ರಾಣವನ್ನೇ ಟಿಪ್ಪುವಿನ ಕ್ರೌರ್ಯತೆಗೆ ಬಲಿಕೊಟ್ಟಿದ್ದಾರೆ. ಅದ್ರಲ್ಲೂ ಹಲವಾರು ಮಂದಿ ಮತಾಂತರವಾಗಿದ್ದಾರೆ.

ಕ್ರೈಸ್ತರಿಗೆ ಆಸರೆಯಾಗಿದ್ದರು ಕರಾವಳಿಯ ಹಿಂದೂಗಳು…!!!

ಹೌದು. ಕ್ರೈಸ್ತ ಸಮಾಜವು ಟಿಪ್ಪುವಿನ ಅಟ್ಟಹಾಸಕ್ಕೆ ಬಲಿಯಾಗುತ್ತಿರುವ ಸಂದರ್ಭ. ಸಾವಿರಾರು ಕ್ರೈಸ್ತರು ಟಿಪ್ಪುವಿನ ಖಡ್ಘಕ್ಕೆ ಕೊರಳು ಕೊಟ್ಟಿದ್ದರು. ಅನೇಕ
ಚರ್ಚುಗಳೂ ಧ್ವಂಸವಾಗಿದ್ದವು. ಆಗ ಆಪತ್ಭಾಂಧವರ ರೀತಿಯಲ್ಲಿ ಬಂದವರೇ ಹಿಂದೂ ಸಮಾಜ. ಹೌದು. ಈ ಸತ್ಯವನ್ನು ನಂಬಲೇಬೇಕು. ಐಕಳ ಗ್ರಾಮದ ಚರ್ಚು ಇದರಲ್ಲಿ ಒಂದು. ಐಕಳದ 3 ಪ್ರತಿಷ್ಠಿತ ಬಂಟ ಮನೆತನಗಳು, ಅಂದರೆ ಐಕಳ, ಅಂಗಡಿ ಗುತ್ತು ಮತ್ತು ತಾಳಿಪಾಡಿ ಗುತ್ತಿನ ಬಂಟ ಮನೆತನಗಳು, ಟಿಪ್ಪುವಿನ ಖಡ್ಘಕ್ಕೆ ಸವಾಲು ಕೊಟ್ಟಿದ್ದರಿಂದ ಈ ಚರ್ಚು ಉಳಿದಿದೆ ಎಂಬುವುದು ಇತಿಹಾಸ. ಇಂದಿಗೂ ಐಕಳ ಚರ್ಚಿನ ವಾರ್ಷಿಕ ಹಬ್ಬಗಳಲ್ಲಿ ಈ ಮೂರು ಮನೆತನಗಳನ್ನು ಗೌರವಿಸುವ ಪದ್ದತಿ ಇದೆ. ಮೂರು ಮನೆತನಗಳಿಗೆ ಬಾಳೆಗೊನೆಗಳನ್ನು ಕೊಡುವ ಮೂಲಕ ಅಂದು ತಮ್ಮ ಮನೆತನ ಮಾಡಿದ ಅತಿದೊಡ್ಡ ಸಹಾಯಕ್ಕೆ ಕೃತಜ್ನತೆ ಸಲ್ಲಿಸುತ್ತಿದ್ದಾರೆ. ಇದು ಇಂದಿಗೂ ಹಿಂದೂ ಸಮಾಜದ ಮೇಲೆ ಕ್ರೈಸ್ತ ಸಮಾಜ ಇಟ್ಟಿರುವ ಪ್ರೀತಿಯೇ ಕಾರಣ.

ಕ್ರೈಸ್ತ ಜನಪ್ರತಿನಿದಿಗಳೇ… ನಿಮಗಿದು ಕಾಣುತ್ತಿಲ್ವೇ..?

ಕ್ರೈಸ್ತ ಸಮುದಾಯದ ಮೇಲೆ ಇಷ್ಟೊಂದು ದಬ್ಬಾಳಿಕೆ ನಡೆಸಿದ್ದ ಈ ಟಿಪ್ಪುವಿನ ಜಯಂತಿಯನ್ನು ರಾಜ್ಯ ಸರ್ಕಾರ ಮಾಡಲು ಹೊರಟಿದೆ. ಸರ್ಕಾರಕ್ಕೇನೋ ತಲೆಕೆಟ್ಟಿದೆ ಬಿಡಿ. ನಮ್ಮ ಜನಪ್ರತಿನಿದಿಗಳಿಗೂ ಇದು ಕಾಣಲ್ವೇ..? ರಾಜ್ಯದಲ್ಲಿ, ಅದ್ರಲ್ಲೂ ಕರಾವಳಿಯಲ್ಲಿ ಇಬ್ಬರು ಶಾಸಕರು ಹಾಗೂ ಓರ್ವ ರಾಜ್ಯಸಭಾ ಸದಸ್ಯ ಕ್ರೈಸ್ತ ಸಮುದಾಯದವರಾಗಿದ್ದಾರೆ. ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಕೇಂದ್ರ ಕಾಂಗ್ರೇಸ್ ಹೈಕಮಾಂಡ್‍ಗೆ ಬಹಳ ಹತ್ತಿರವಾಗಿದ್ದರೆ, ಮತ್ತೊಬ್ಬ ವಿಧಾನ ಸಭಾ ಸದಸ್ಯ ಐವನ್ ಡಿಸೋಜಾ ರಾಜ್ಯ ಕಾಂಗ್ರೆಸ್ ನಾಯಕರಿಗೆ ತುಂಬಾನೆ ಹತ್ತಿರವಾಗಿದ್ದಾರೆ. ಮತ್ತೊಬ್ಬ ಶಾಸಕ ಜೆ.ಆರ್.ಲೋಬೋರವರಿಗೆ ಕೂಡಾ ನಾಯಕರ ಜೊತೆ ಸಂಪರ್ಕ ಇದೆ. ಹೀಗಿರುವಾಗ ಸರ್ಕಾರದ ಮನವೊಲಿಸಿ ಹೇಗಾದರು ಮಾಡಿ ಆ ಪಾಪಿ ಟಿಪ್ಪುವಿನ ಜಯಂತಿಯನ್ನು ರದ್ದುಗೊಳಿಸಬಹುದೆಂಬುವುದು ಸ್ವತಃ ಕ್ರೈಸ್ತರ ಅಳಲು.

ತಮ್ಮ ಸಮುದಾಯದ ಹಿತಾಸಕ್ತಿ ಬಂದಾಗ ತುಟಿ ಬಿಚ್ಚುತ್ತಿಲ್ಲ. ಸಮುದಾಯದ ಹಿತಾಸಕ್ತಿಗಿಂತ ರಾಜಕೀಯವೇ ಮುಖ್ಯವಾಯಿತೇ? ಉಳಿದೆಲ್ಲಾ ಸಮಯದಲ್ಲಿ ಕ್ರೈಸ್ತರು ಎಂದು ಬೊಬ್ಬೆ ಬಿಟ್ಟು ಮತ ಪಡೆಯುವ ಈ ನಾಯಕರು ಟಿಪ್ಪು ಜಯಂತಿ ಆಚರಣೆಗೆ ಯಾಕೆ ಮೌನ. ಈ ಆಚರಣೆ ತಂದಿದ್ದು ನಿಮ್ಮದೇ ಪಕ್ಷ ಎಂಬ ಮಮಕಾರವೋ ಅಥವಾ ಇತಿಹಾಸದ ಅರಿವಿಲ್ಲವೋ. ಈ ಮೂವರು ಜನಪ್ರತಿನಿದಿಗಳು ಕಟುವಾಗಿ ವಿರೋಧ ಮಾಡಿದ್ದರೆ ಸರ್ಕಾರ ಖಂಡಿತಾ ತಲೆಭಾಗಿ ಈ ಆಚರಣೆಯನ್ನು ರದ್ದುಗೊಳಿಸುತ್ತಿತ್ತು.

ಮತ್ತೊಂದೆಡೆ ಧರ್ಮಗುರುಗಳ ಮೌನ. ಸಣ್ಣ ಪುಟ್ಟ ಗಲಾಟೆಗಳಿಗೆ ಬೊಬ್ಬೆ ಹೊಡೆದು ಸರ್ಕಾರದ ಬಳಿ ಓಡಿ ಹೋಗುತ್ತಿದ್ದ ಕ್ರೈಸ್ತ ಧರ್ಮಗುರುಗಳು ಈ ವಿಷಯದಲ್ಲಿ
ಮಾತ್ರ ಮೌನ ವಹಿಸಿದ್ದಾರೆ. ಇತಿಹಾಸದ ಅತೀ ದೊಡ್ಡ ಚರ್ಚು ಧ್ವಂಸಕನನ್ನು ಸರ್ಕಾರ ವೈಭವೀಕರಿಸುತ್ತಿದ್ದರೆ, ಈ ಧರ್ಮಗುರುಗಳು ಮಾತ್ರ ಚಕಾರವೆತ್ತುತ್ತಿಲ್ಲ.
ಕೆನರಾ ಕ್ರೈಸ್ತ ಸಮುದಾಯದಿಂದ ಅನೇಕರು ಬಿಷಪ್‍ಗಳಾಗಿದ್ಧಾರೆ. ಕರ್ನಾಟಕದಲ್ಲಿರುವ ಹಲವಾರು ಬಿಷಪ್‍ಗಳು ಮಂಗಳೂರಿನವರಾಗಿದ್ದು ಅವರೆಲ್ಲರೂ ಕೆನರಾ ಕ್ರೈಸ್ತ್ ಸಮುದಾಯಕ್ಕೆ ಸೇರಿದವರು. ಅಂದರೆ ಟಿಪ್ಪುವಿನ ಕ್ರೌರ್ಯತೆಯಿಂದ ನೊಂದ ಸಮುದಾಯದಿಂದ ಬಂದವರಾಗಿದ್ದಾರೆ. ಬೆಂಗಳೂರು, ಶಿವಮೊಗ್ಗ, ಬಳ್ಳಾರಿ, ಗುಲ್ಬರ್ಗಾ, ಬೆಳಗಾವಿ, ಮಂಗಳೂರು ಮತ್ತು ಉಡುಪಿ ಹೀಗೆ ಹಲವಾರು ಪ್ರಮುಖ ಚರ್ಚುಗಳಲ್ಲಿರುವ ಭಿಷಪ್‍ಗಳು ನೊಂದ ಸಮುದಾಯಕ್ಕೆ ಸೇರಿದವರೇ ಆಗಿರುತ್ತಾರೆ. ಇವರೆಲ್ಲಾ ಧ್ವನಿಯೆತ್ತಿದ್ದರೆ ಸರ್ಕಾರ ಹಿಂದೇಟು ಹಾಕುತ್ತಿತ್ತು. ಆದರೆ ಇವರ ಜಾಣ ಮೌನದ ಹಿಂದಿರುವ ಮರ್ಮವೇನು ಎಂಬುವುದನ್ನು ಈ ವರ್ಷವಾದರೂ ತಿಳಿಸಬೇಕು ಎಂಬುವುದು ಸಮಸ್ತ ಕ್ರೈಸ್ತ ಸಮಾಜದ ಆಗ್ರಹವಾಗಿದೆ.

ಯೇಸು ಕ್ರಿಸ್ತನನ್ನು ಅವಾಚ್ಯವಾಗಿ ನಿಂದಿಸುತ್ತಿದ್ದ ಟಿಪ್ಪು!!!

ಟಿಪ್ಪುವಿನ ಕ್ರೈಸ್ತ ವಿರೋಧಿ ಧೋರಣೆಯನ್ನು ಹೇಳಲಸಾಧ್ಯ. ಆತ ಕ್ರೈಸ್ತರನ್ನು ಕೊಲೆ ಮಾಡುವಾಗ, ಕ್ರೈಸ್ತ ಸಮಾಜದ ಆರಾಧ್ಯ ದೇವ ಯೇಸುವಿನ ಬಗ್ಗೆ ಹಾಗೂ
ಮಾತೆ ಮೇರಿಯ ಬಗ್ಗೆ ಅವಾಚ್ಯವಾಗಿ ನಿಂದಿಸುತ್ತಿದ್ದ. ಅವರನ್ನು ಕೆಟ್ಟ ಕೆಟ್ಟದಾಗಿ ಸಂಭೋದಿಸಿ ಒಬ್ಬೊಬ್ಬ ಕ್ರೈಸ್ತನನ್ನು ಕಡಿದು ಹಾಕುತ್ತಿದ್ದ. ಈ ಮೂಲಕ ಕ್ರೈಸ್ತ ಧರ್ಮದ ಮೇಲೆ ಹಾಗೂ ಯೇಸುವಿನ ಮೇಲೆ ತನಗಿದ್ದ ಅಸಹಿಷ್ಣು ಮನೋಭಾವವನ್ನು ತೋರ್ಪಡಿಸುತ್ತಿದ್ದ.

ಕ್ರೈಸ್ತರೇ ಸ್ವಾಭಿಮಾನಿಗಳಾಗಿ…

ಕರ್ನಾಟಕ ರಾಜ್ಯದ ಸಮಸ್ತ ಕ್ರೈಸ್ತ ಸಮಾಜ ಬಾಂಧವರೇ… ಯಾಕೆ ಕೈಕಟ್ಟಿ ಕುಳಿತಿದ್ದೀರಿ. ವಾರಕ್ಕೊಮ್ಮೆ ಚರ್ಚುಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರೆ ಯೇಸು
ಒಲಿಯುತ್ತಾನೆಯೇ..? ಖಂಡಿತ ಇಲ್ಲ. ನಮ್ಮ ಸ್ವಾಭಿಮಾನವನ್ನು ಪ್ರಶ್ನಿಸಬಾರದಾಗಿದ್ದರೆ ಸರ್ಕಾರ ಆಯೋಜಿಸಿರುವ ಟಿಪ್ಪು ಜಯಂತಿ ವಿರುದ್ಧ ತೊಡೆ ತಟ್ಟಬೇಕಾಗಿದೆ. ಈ ಮೂಲಕ ನಮ್ಮ ಪೂರ್ವಜರ ಪ್ರಾಣ ಹಾನಿ ಹಾಗೂ ಯೇಸುವಿನ ಮಾನಹಾನಿಯನ್ನು ಮಾಡಿದ್ದ ಟಿಪ್ಪುವನ್ನು ಇತಿಹಾಸದ ಖಳನಾಯಕ
ಎಂಬುವುದನ್ನು ಬಿಂಬಿಸಬೇಕಾಗಿದೆ. ಮತ್ತು ಶಾಶ್ವತವಾಗಿ ಆತನ ಹೆಸರನ್ನು ಅಲಿಸಬೇಕಾಗಿದೆ. ಬನ್ನಿ… ಸರ್ಕಾರಕ್ಕೆ ಮನವಿ ಸಲ್ಲಿಸೋಣ. ಕೇಳಲಿಲ್ಲವಾದಲ್ಲಿ ಜೀವ ಹೋದರೂ ಪರವಾಗಿಲ್ಲ ಸೆಟೆದು ನಿಲ್ಲೋಣ.

-ಸುನಿಲ್

Tags

Related Articles

Close