ಪ್ರಚಲಿತ

ಸೋನಿಯಾ, ರಾಹುಲ್ ಹಾಗೂ ಇಡೀ ಕಾಂಗ್ರೆಸ್ ಅಧಿಕಾರದಲ್ಲಿರುವುದೇ ಜಾಮೀನಿನ ಮೇಲೆ! : ಪ್ರಧಾನ ಮಂತ್ರಿ ನರೇಂದ್ರ ಮೋದಿ!

ಹಿಮಾಚಲ ಪ್ರದೇಶದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಸರಕಾರದ ಕರಾಳ ಮುಖವನ್ನು ಬಯಲಿಗೆಳೆದಿದ್ದಾರೆ!! ಅಷ್ಟೇ ಅಲ್ಲದೇ, ಕಾಂಗ್ರೆಸ್ ಸರಕಾರದ ಒಂದಿಷ್ಟು ಸತ್ಯಗಳನ್ನು ಹೊರಹಾಕಿದ್ದು, ಇದೀಗ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್‍ನ ಇಡೀ ನಾಯಕತ್ವವೇ ಬೇಲ್ ಮೇಲೆ ಹೊರಗಿದೆ ಎನ್ನುವ ರೋಚಕ ಸತ್ಯವನ್ನು ಪ್ರಪಂಚದ ಮುಂದೆ ಹೊರಹಾಕಿದ್ದಾರೆ!! ಹಿಮಾಚಲ ಪ್ರದೇಶದ ಸರಕಾರ ಯಾವ ಸ್ಥಿತಿಯನ್ನು ಎದುರಿಸುತ್ತಿದೆ ಎನ್ನುವುದನ್ನು ಪ್ರಧಾನಿ ನರೇಂದ್ರಮೋದಿ ಹಿಮಾಚಲ ಪ್ರದೇಶದ ಮುಂದೆ ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ!!

ಹೌದು… ಹಿಮಾಚಲ ಪ್ರದೇಶದ ಬಿಲಾಸ್ಪುರ್‍ನಲ್ಲಿ 1350 ಕೋಟಿ ವೆಚ್ಚದ 750 ಬೆಡ್‍ನ ಏಮ್ಸ್ ಆಸ್ಪತ್ರೆ ಹಾಗೂ SAIL ಸ್ಟೀಲ್ ಘಟಕ ಮತ್ತು ಐಐಐಟಿ ಕಟ್ಟಡ
ನಿರ್ಮಾಣದ ಅಡಿಗಲ್ಲು ಸಮಾರಂಭದಲ್ಲಿ ಕಾಂಗ್ರೆಸ್ ವಿರುದ್ಧ ಮೋದಿ ಹರಿಹಾಯ್ದಿದ್ದಾರೆ!! ಅಷ್ಟೇ ಅಲ್ಲದೇ, ಕಾಂಗ್ರೆಸ್‍ನ ಇಡೀ ನಾಯಕತ್ವವೇ ಬೇಲ್ ಮೇಲೆ ಹೊರಗಿದೆ ಎನ್ನುವ ಮಾತನ್ನು ಹಿಮಾಚಲ ಪ್ರದೇಶದ ಜನತೆಯ ಮುಂದೆ ತೆರೆದಿಟ್ಟಿದ್ದಾರೆ!!!

ಇವಿಷ್ಟೇ ಅಲ್ಲದೇ, ಕಾಂಗ್ರೆಸ್ ನಾಯಕರು ಸೇರಿದಂತೆ ಹಿಮಾಚಲ ಪ್ರದೇಶ ಸಿಎಂ ವೀರಭದ್ರ ಸಿಂಗ್ ಸಂಪುಟ ಕೂಡ ಜಾಮೀನಿನ ಮೇಲೆ ಹೊರಗಿದೆ!! ಕೇವಲ
ವೀರಭದ್ರ ಸಿಂಗ್ ಸಂಪುಟ ಮಾತ್ರವಲ್ಲದೇ ಇಲ್ಲಿ ಎಲ್ಲವೂ ಬೇಲ್ ಮಯವಾಗಿದೆ ಎಂದರೆ ನಂಬ್ತೀರಾ??? ಆದರೆ ನೀವು ನಂಬಲೇಬೇಕಾದ ಕಟು ಸತ್ಯ ಇದು !!
ಹೌದು… ಹಿಮಾಚಲ ಪ್ರದೇಶ ಕಾಂಗ್ರೆಸ್ ಸರಕಾರವನ್ನು ಉದ್ದೇಶಿಸಿ ಮಾತಾನಾಡಿದ ಮೋದಿ, ಕಾಂಗ್ರೆಸ್ ಪಕ್ಷವಷ್ಟೇ ಅಲ್ಲದೇ, ಇಲ್ಲಿನ ಸರಕಾರ ಕೂಡ ಜಾಮೀನಿನ ಮೇಲಿದೆ ಎನ್ನುವ ಮಾಹಿತಿಯನ್ನು ಹೊರಹಾಕಿದ್ದಾರೆ!!

ಈ ವೇಳೆ ಮಾತಾನಾಡಿದ ನರೇಂದ್ರ ಮೋದಿ, ಸ್ಥಳೀಯ ಕಾಂಗ್ರೆಸ್‍ನ ಕೆಲವರು ನನ್ನನ್ನು ಭೇಟಿಯಾಗಲು ಬಂದಾಗ, ವೀರಭದ್ರ ಸಿಂಗ್ ಸೇರಿದಂತೆ ಅವರ ಸಂಪೂರ್ಣ ಕುಟುಂಬ ಬೇಲ್ ಮೇಲಿತ್ತು. ಆ ಸಂದರ್ಭದಲ್ಲಿ ಸಿಎಂ ಅನ್ನೇಕೆ ಬದಲಿಸುತ್ತಿಲ್ಲ ಎಂದು ಕೇಳಿದ್ದೆ!! ಆಗ, ನಮ್ಮ ಸಂಪೂರ್ಣ ಕುಟುಂಬ ಬೇಲ್ ಮೇಲಿದ್ದು, ಸೋನಿಯಾ ಗಾಂಧಿ ಕೂಡ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ ಎಂದಿದ್ದಾರೆ ಎಂದು ಮೋದಿ ಇದೇ ವೇಳೆ ಪ್ರಸ್ತಾಪಿಸಿದ್ದಾರೆ!!

ಅಷ್ಟೇ ಅಲ್ಲದೇ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬೇಲ್ ಮೇಲಿದ್ದಾರೆ. ಹಾಗೆಯೇ ಇಲ್ಲಿನ ರಾಜ್ಯವು ಕೂಡ ಬೇಲ್ ಮೇಲಿದೆ!! ಇಂತಹ ಸರಕಾರವನ್ನು ನಿರ್ಮೂಲನೆ ಮಾಡುವುದು ಬೇಡವೇ ಎಂದು ನೆರದಿದ್ದ ಜನರನ್ನು ಪ್ರಶ್ನಿಸಿದರು ನರೇಂದ್ರ ಮೋದಿ!! 2014ರ ಮೊದಲು ಪ್ರತಿನಿತ್ಯ ದಿನಪತ್ರಿಕೆಗಳಲ್ಲಿ ಭ್ರಷ್ಟಾಚಾರದ ಸುದ್ದಿಗಳೇ ಇರುತ್ತಿದ್ದವು. ಆದರೆ ಕಳೆದ ಮೂರು ವರ್ಷಗಳಲ್ಲಿ ನಮ್ಮ ಸರಕಾರದ ಮೇಲೆ ಯಾವುದೇ ಭ್ರಷ್ಟಾಚಾರ ಆರೋಪ ಇಲ್ಲ. ಯುಪಿಎ ಸರಕಾರದಲ್ಲಿ ಹಗರಣಗಳೇ ತುಂಬಿದ್ದವು ಎಂದು ಮೋದಿ ಆರೋಪಿಸಿದ್ದಾರೆ!!

ಕಾಂಗ್ರೆಸ್ ಸರಕಾರದ ಬಗ್ಗೆ ಎಳೆ ಎಳೆಯಾಗಿ ತೆರೆದಿಟ್ಟ ನರೇಂದ್ರಮೋದಿ, ರಾಜ್ಯದಲ್ಲಿ 15 ಸಾವಿರ ಕೋಟಿ ವೆಚ್ಚದ 13 ಯೋಜನೆಗಳಿಗೆ ಸರಕಾರ ಅನುಮೋದನೆ
ನೀಡಿದ್ದು, ಇದರಿಂದ ರಾಜ್ಯದಲ್ಲಿ ಉದ್ಯೋಗ, ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಎಂದು ಈ ಸಂದರ್ಭದಲ್ಲಿ ಪ್ರಧಾನಿ ತಿಳಿಸಿದ್ದಾರೆ!!

ಮೂಲ:National Shame to Congress

-ಅಲೋಖಾ

Tags

Related Articles

Close