ಪ್ರಚಲಿತ

9 ವರ್ಷಗಳಿಂದ ಸರಕಾರಿ ರಜೆ ಮಾತ್ರ ಬೇಕು!! ಆದರೆ ಕನಕದಾಸರ ಬಗ್ಗೆ ನಮಗೆಷ್ಟು ಗೊತ್ತು??

ಹೌದು!! ಇಂದು ಕನಕದಾಸರ 530 ಜಯಂತೋತ್ಸವವನ್ನು ಆಚರಿಸಲಾಗುತ್ತಿದೆ. ಇಂದು ಸರ್ಕಾರಿ ರಜೆ, ನಮ್ಮ ಸರ್ಕಾರಿ ನೌಕರರು ರಜೆ ಬಂದರೆ ಸಾಕೆನ್ನುವ ಮನಸ್ಥಿತಿಲಿ ಇರ್ತಾರೆ ಹೊರತು ಆ ರಜೆಯ ಮಹತ್ವವೇನು ಅಂತ ಬಹಳ ಜನಕ್ಕೆ ಗೊತ್ತಿರುವುದಿಲ್ಲದು ವಿಪರ್ಯಾಸವೇ ಸರಿ.

ಬರೋಬರಿ 9 ವರ್ಷಗಳ ಹಿಂದೆ ಅಂದರೆ 2008 ರಲ್ಲಿ ಆಗಿನ ಯಡ್ಡಿಯೂರಪ್ಪನವರ ಸರಕಾರ ಕನಕದಾಸರ ಜಯಂತಿ ರಜೆ ಘೋಷಣೆ ಮಾಡಿತ್ತು. ಆದರೆ ಕನಕ ದಾಸರ ಬಗ್ಗೆ ಮಾತ್ರ ಗೊತ್ತಿಲ್ಲ ನಮ್ಮ ಸರ್ಕಾರಿ ನೌಕರರಿಗೆ.

ನಾವು ರಾಜಕೀಯದ ವ್ಯಕ್ತಿಗಳ ಬಗ್ಗೆ ಅಥವಾ ಸಿನಿಮಾ ತಾರೆಯರ ಬಗ್ಗೆ ಮಾತನಾಡು ಅಂದ್ರೆ ಗಂಟೆಗಟ್ಟಲೆ ಭಾಷಣ ಮಾಡ್ತೀವಿ ಆದರೆ ನಮ್ಮದೇ ನೆಲದ ಇತಿಹಾಸದ ಬಗ್ಗೆ ಮಾತ್ರ ನಮಗೆ ಗೊತಿರುವಿದಿಲ್ಲ, ಇರಲಿ ದಾಸರ ಬಗ್ಗೆ ತಿಳಿಸೋದು ನನ್ನದೊಂದು
ಸಣ್ಣ ಅಳಿಲು ಸೇವೆ ಅಂದುಕೊಳ್ಳುತ್ತ ಕನಕದಾಸರ ಬಗ್ಗೆ ನಾನು ತಿಳಿದುಕೊಂಡ ಕೆಲ ವಿಷಯಗಳನ್ನ ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ.

ಕನಕದಾಸರು ಹಾವೇರಿ ಜಿಲ್ಲೆಯ ‘ಬಾಡ’ ಗ್ರಾಮದಲ್ಲಿ 1509 ರಲ್ಲಿ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪ ನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಕನಕದಾಸರಿಗೆ ಬರೀ ಕುರುಬ ಸಮುದಾಯಕ್ಕೆ ಸಿಮಿತವಾದ ಭಕ್ತರಿಲ್ಲ, ಅವರಿಗೆ ಎಲ್ಲಾ ಸಮುದಾಯದ ಜನರೂ ಭಕ್ತರಿದ್ದಾರೆ.

15-16 ನೆಯ ಶತಮಾನದಲ್ಲೇ ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ ಭಕ್ತ ಎಂದರೆ ಕನಕದಾಸರು ಎಂದರೆ ತಪ್ಪಾಗಲಾರದು.

ತಮ್ಮ ಊರಿನ ಹತ್ತಿರದ ಕಾಗಿನೆಲೆಯ ಆದಿಕೇಶವನನ್ನು ಆರಾಧ್ಯದೈವವಾಗಿ ಸ್ವೀಕರಿದ ಕನಕದಾಸರು ತಮ್ಮ ಭಕ್ತಿ ಸಾಧನೆಗಾಗಿ ಊರೂರು ಅಲೆಯುತ್ತಾ ಹಂಪಿಯಲ್ಲಿ ವ್ಯಾಸರಾಜರನ್ನು ಭೇಟಿಯಾದರು. ಅಲ್ಲಿ ವ್ಯಾಸರಾಯರಿಂದ ಪ್ರಭಾವಿತರಾದ ಕನಕದಾಸರು ಅವರನ್ನು ಗುರುವಾಗಿ ಸ್ವೀಕರಿಸಿ ವೇದ, ಉಪನಿಶತ್ತು, ವೈಷ್ಣವ ಧರ್ಮ ಮುಂತಾದವುಗಳ ಬಗ್ಗೆ ಜ್ಞಾನ ಸಂಪಾದಿಸಿದರು. ಮುಂದೆ ನಾಡಿನಾದ್ಯಂತ ಸಂಚರಿಸುತ್ತ ತಾವು ಸಂಪಾದಿಸಿದ ಜ್ಞಾನದಿಂದ ಕೀರ್ತನೆಗಳು, ಉಗಾಭೋಗಗಳು ಮತ್ತು ಮುಂಡಿಗೆಗಳನ್ನು ರಚಿಸಿ ಆ ಮೂಲಕ ಜನತೆಯಲ್ಲಿ ಜಾಗೃತಿಯನ್ನು ಮೂಡಿಸಿದರು. ಜಾತಿಯ ಮೇಲುಕೀಳುಗಳನ್ನು ಹೋಗಲಾಡಿಸುವರೊಂದಿಗೆ ಜನತೆಯಲ್ಲಿ ಸಾಮಾಜಿಕ ಚಿಂತನೆಯನ್ನು ಬಿತ್ತಿದ ಕನಕದಾಸರು ದಾಸ ಸಾಹಿತ್ಯ ಮತ್ತು ಸಂಗೀತಕ್ಕೆ ಮಹತ್ತರವಾದ ಕಾಣಿಕೆ ಸಲ್ಲಿಸಿದರು.

ಕಾಗಿನೆಲೆಯ ಆದಿಕೇಶವನಂತೆ ಉಡುಪಿಯ ಶ್ರೀಕೃಷ್ಣನಿಗೂ ಕನಕದಾಸರಿಗೂ ಒಳ್ಳೆಯ ಸಂಬಂಧವಿತ್ತು. ಒಮ್ಮೆ ಕನಕದಾಸರು ಶ್ರೀಕೃಷ್ಣ ದರ್ಶನಕ್ಕೆ ಉಡುಪಿಗೆ ಹೋದಾಗ ಕರ್ಮಠ ಪೂಜಾರಿಗಳು ಅವರನ್ನು ಒಳಗೆ ಬಿಡಲಿಲ್ಲವಂತೆ. ಆಗ ಕನಕದಾಸರು ದೇವಸ್ಥಾನದ ಹಿಂದಿನಿಂದ ಶ್ರೀಕೃಷ್ಣನ ಕೀರ್ತನೆಯನ್ನು ಹಾಡಲಾಗಿ ಶ್ರೀಕೃಷ್ಣ ಹಿಂದೆ ತಿರುಗಿ ಗೊಡೆಯ ಕಿಂಡಿ ಮೂಲಕ ದರ್ಶನ ನೀಡಿದನಂತೆ. ಆ ಕಿಂಡಿ ಇಂದಿಗೂ ‘ಕನಕನ ಕಿಂಡಿ’ ಎಂದೇ ಪ್ರಸಿದ್ಧವಾಗಿದೆ. ಇದು ನಿಜವಿರಬಹುದು ಅಥವಾ ದಂತಕಥೆ ಇರಬಹುದು.

ಆದರೆ ಭಕ್ತಿ, ಕವಿತ್ವ ಮತ್ತು ಸಂಗೀತದಲ್ಲಿಯ ಸಾಧನೆಗೆ ಜಾತಿ ಎಂದೂ ತೊಡಕಾಗುವುದಿಲ್ಲ ಎನ್ನುವದಕ್ಕೆ ಕನಕದಾಸರ ಜೀವನ ಒಂದು ಉತ್ತಮ ಉದಾಹರಣೆ.

’ನಾನು ಹೋದರೆ ಹೊದೇನು’ ಎನ್ನುವದು ಕನಕದಾಸರ ಪ್ರಸಿದ್ಧ ಉಕ್ತಿ. ಇದನ್ನು ಅವರು ಒಂದು ಪಂಡಿತರ ಸಭೆಯಲ್ಲಿ ಯಾರು ಸ್ವರ್ಗಕ್ಕೆ ಹೋಗಬಹುದು ಎನ್ನುವ ಪ್ರಶ್ನೆ ಎದ್ದಾಗ ಹಾಗೆ ಹೇಳಿದರು. ಅದನ್ನು ಕೇಳಿದ ಕರ್ಮಠ ಪಂಡಿತರೆಲ್ಲ ಕನಕದಾಸರಿಗೆ ಬಹಳ ಗರ್ವವಿದೆ ಎಂದು ಭಾವಿಸಿದರು. ಆದರೆ ಕನಕದಾಸರು ಆ ಮಾತಿನ ಅರ್ಥ ’ಯಾರು ನಾನು, ನನ್ನಿಂದ ಎನ್ನುವ ಅಹಂ ಅನ್ನು ಬಿಡುತ್ತಾರೊ ಅವರು ಮಾತ್ರ ಸ್ವರ್ಗಕ್ಕೆ ಹೋಗಬಲ್ಲರು’ ಎಂದು ಹೇಳಿ ಎಲ್ಲರನ್ನು ಬೆರಗುಗೊಳಿಸಿದರು.

ಅವರ ಐದು ಮುಖ್ಯ ಕಾವ್ಯಕೃತಿಗಳು ಇಂತಿವೆ:

ವೋಹನತರಂಗಿಣಿ

ನಳಚರಿತ್ರೆ

ರಾಮಧಾನ್ಯ ಚರಿತೆ

ಹರಿಭಕ್ತಿಸಾರ

ನೃಸಿಂಹಸ್ತವ (ಉಪಲಬ್ಧವಿಲ್ಲ)

ಮುಂತಾದವು ಪ್ರಸಿದ್ಧವಾದವು. ಇವಲ್ಲದೆ ಕರ್ನಾಟಕ ಸಂಗೀತದಲ್ಲಿ ಹಾಡಬಲ್ಲಂತಹ ಸುಮಾರು 240 ಕೀರ್ತನೆ, ಉಗಾಭೋಗಗಳನ್ನು ಕನಕದಾಸರು ರಚಿಸಿದ್ದಾರೆ.

ಉಡುಪಿಯ ಶ್ರೀ ಕೃಷ್ಣ ದೇವಾಲಯದಲ್ಲಿವಕನಕದಾಸರ ಮೂರ್ತಿತನ್ನೂ ನಾವು ಕಾಣಬಹುದು ಹಾಗು

ಶೃಂಗೇರಿಯ ಚಪ್ಪರದ ಆಂಜನೇಯ ದೇವಸ್ಥಾನದಲ್ಲಿಯೂ ಕೂಡ ಕನಕದಾಸರ ಮೂರ್ತಿಯನ್ನು ನಾವು ಇಂದು ಕಾಣಬಹುದಾಗಿದೆ.

ಹೀಗೆ ಬರೆಯುತ್ತಾ ಹೋದರೆ ಎಷ್ಟು ಪುಟ್ಟಗಳು ಸಾಲವು ಕನಕದಾಸರ ಬಗ್ಗೆ ಬರೆಯೋಕೆ. ಬನ್ನಿ ಅವರ ಜಯಂತೋತ್ಸವದ ನಿಮಿತ್ಯ ಶೃದ್ಧೆಯಿಂದ ಅವರಿಗೆ ನಮಿಸೋಣ.

– ಪೃಥ್ವಿ

Tags

Related Articles

Close