ಪ್ರಚಲಿತ

ಅತ್ತ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರತಿಪಕ್ಷಗಳು ಕುತಂತ್ರ ಹೂಡುತ್ತಿದ್ದರೆ, ಇತ್ತ ನರೇಂದ್ರ ಮೋದಿಯವರು ದೇಶ ಕಾಯುವ ಯೋಧರಿಗೆ ಮತ್ತೊಂದು ಭರ್ಜರಿ ಗಿಪ್ಟ್ ಒಂದನ್ನು ನೀಡಿ ಖುಷಿಪಡುತ್ತಿದ್ದರು!!!

ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆಯನ್ನೇರಿದಂದಿನಿದಲೂ ಇಂದಿನವರೆಗೂ ನಾನಾ ಕ್ಷೇತ್ರಗಳಲ್ಲಿ ಬದಲಾವಣೆಯ ಛಾಪನ್ನು ಮೂಡಿಸುತ್ತಿದ್ದು, ಬಡರಾಷ್ಟ್ರವಾಗಿದ್ದ ಭಾರತವನ್ನು ಇಂದು ಅಭಿವೃದ್ಧಿಶೀಲ ಭಾರತವನ್ನಾಗಿ ಮಾಡುತ್ತಿದ್ದಾರೆ ಎಂದರೆ ಇದಲ್ಲವೇ ಅಚ್ಛೇ ದಿನ್!! ಪ್ರತಿ ಕ್ಷೇತ್ರದಲ್ಲಿ ಬದಲಾವಣೆಯ ಹಾದಿಯನ್ನು ಹಿಡಿತ್ತಿರುವ ಭಾರತವೂ ರಕ್ಷಣಾ ಕ್ಷೇತ್ರದಲ್ಲೂ ಮೇಲುಗೈಯನ್ನು ಸಾಧಿಸುತ್ತಿರುವ ಬೆನ್ನಲ್ಲೇ ಇದೀಗ ಕುಟುಂಬದಿಂದ ದೂರವಿರುವ, ವಿಶೇಷವಾಗಿ ನವವಿವಾಹಿತ ಯೋಧರಿಗೆ ಕೇಂದ್ರ ಸರ್ಕಾರ ಭರ್ಜರಿ ಕೊಡುಗೆಯನ್ನು ನೀಡಲು ಮುಂದಾಗಿದೆ.

ಹೌದು…… ಈಗಾಗಲೇ ಭಾರತ-ಚೀನಾ ಗಡಿ ಕಾಯುತ್ತಿರುವ ಸೈನಿಕರ ಕುಟುಂಬಗಳಿಗೆ ಶೇ. 100ರಷ್ಟು ಪಿಂಚಣಿ ಸೌಲಭ್ಯ ನೀಡುವುದಾಗಿ ಘೋಷಿಸಿದ ಕೇಂದ್ರ ಸರ್ಕಾರವು ಸೈನಿಕರಿಗೆ ಭರ್ಜರಿ ಉಡುಗೊರೆಯನ್ನು ನೀಡಿತ್ತು!! ಚೀನ ದೊಂದಿಗಿನ ಗಡಿ ರಕ್ಷಣೆಯಲ್ಲಿ ತೊಡಗಿದ್ದ ವೇಳೆ ಮೃತಪಟ್ಟ ಅಥವಾ ಗಾಯಗೊಂಡ ಭಾರತೀಯ ಯೋಧರಿಗೆ ಪೂರ್ಣ ಪಿಂಚಣಿಯನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಮೂಲಕ ಸೈನಿಕರಿಗೆ ನೈತಿಕ ಬಲ ತುಂಬುವ ಕಾರ್ಯವನ್ನು ನರೇಂದ್ರ ಮೋದಿ ಅವರ ಸರ್ಕಾರ ಮಾಡುತ್ತಲೇ ಇದೆ.

ಇದೀಗ ನವವಿವಾಹಿತ ಮತ್ತು ಇತರ ಯೋಧರು ತಮ್ಮ ಕುಟುಂಬದವರೊಂದಿಗೆ ನೆಮ್ಮದಿಯಿಂದ ಜೀವನ ಸಾಗಿಸಲು, ಸಮಯ ಕಳೆಯಲು ಅನುಕೂಲವಾಗುವ ನಿಟ್ಟಿನಲ್ಲಿ ದೇಶಾಧ್ಯಂತ 190 ಅತಿಥಿ ಗೃಹಗಳನ್ನು ನಿರ್ಮಿಸಲು ಗಡಿ ಭದ್ರತಾ ಪಡೆ ನಿರ್ಧಾರ ಕೈಗೊಂಡಿದೆ. ದೇಶದಲ್ಲಿ ಎಂಟು ಗಡಿ ಪ್ರದೇಶದಲ್ಲಿ 2,800 ಕೋಣೆಗಳನ್ನು ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಯೋಧರಿಗೆ ತಮ್ಮ ಕುಟುಂಬದವರೊಂದಿಗೆ ನೆಮ್ಮದಿಯ ಜೀವನ ನಡೆಸಲು ಅನುಕೂಲ ಕಲ್ಪಿಸಲಾಗಿದೆ.

ಈಗಾಗಲೇ ದೀಪಾವಳಿಗೆ ದೇಶದ ಗಡಿ ಕಾಯುತ್ತಿರುವ ಯೋಧರಿಗೆ ಕೇಂದ್ರ ಸರ್ಕಾರವು ಸ್ಯಾಟಲೈಟ್ ಫೆÇೀನ್ ಗಳ ಕರೆ ದರವನ್ನು ಕಡಿತಗೊಳಿಸಿತ್ತು. ಅಷ್ಟೇ ಅಲ್ಲದೇ, ಈ ಮೊದಲು ಸ್ಯಾಟಲೈಟ್ ಫೆÇೀನ್ ನಲ್ಲಿ ಮಾತನಾಡಲು ಸೈನಿಕರು ಡಿಜಿಟಲ್ ಸ್ಯಾಟಲೈಟ್ ಫೆÇೀನ್ ಟರ್ಮಿನಲ್‍ಗೆ (ಡಿ ಎಸ್ ಪಿ ಟಿ) ಮಾಸಿಕ 500 ರೂಪಾಯಿ ಪಾವತಿಸುತ್ತಿದ್ದರು. ಜತೆಗೆ ಪ್ರತಿ ನಿಮಿಷಕ್ಕೆ 5 ರೂಪಾಯಿ ದರ ನೀಡುತ್ತಿದ್ದು, ತದನಂತರದಲ್ಲಿ ದೂರ ಸಂಪರ್ಕ ಸಚಿವಾಲಯ ಕರೆ ದರವನ್ನು ಪ್ರತೀ ನಿಮಿಷಕ್ಕೆ 1 ರೂಪಾಯಿ ಗೆ ಇಳಿಕೆ ಮಾಡಿದೆಯಲ್ಲದೇ ಡಿ ಎಸ್ ಪಿ ಟಿ ದರವನ್ನು ಹಿಂಪಡೆದುಕೊಂಡು ಸೈನಿಕರ ಮೊಗದಲ್ಲಿ ಸಂತಸವನ್ನು ಮೂಡಿಸಿತ್ತು. ಆದರೆ ಇದೀಗ ಕುಟುಂಬದಿಂದ ದೂರವಿರುವ, ವಿಶೇಷವಾಗಿ ನವವಿವಾಹಿತ ಯೋಧರಿಗೆ ಕೇಂದ್ರ ಸರ್ಕಾರ ಭರ್ಜರಿ ಕೊಡುಗೆಯನ್ನು ನೀಡುವ ಮೂಲಕ ಗಮನ ಸೆಳೆದಿದೆ.

ಹಾಗಾಗಿ ಇದೀಗ ನರೇಂದ್ರ ಮೋದಿ ಸರ್ಕಾರವು ಜವಾನ್ ಗೆಸ್ಟ್ ಹೌಸ್ ಹೆಸರಲ್ಲಿ ಯೋಧರು ತಮ್ಮ ಕುಟುಂಬಸ್ಥರೊಂದಿಗೆ ಕಾಲ ಕಳೆಯಲು ಹೊಸ
ಯೋಜನೆಯೊಂದನ್ನು ಜಾರಿಗೊಳಿಸಿ ಸೈನಿಕ ಮೊಗದಲ್ಲಿ ಸಂತಸ ಮನೆಮಾಡುವಂತೆ ಮಾಡಿದೆ!! ಅಷ್ಟೇ ಅಲ್ಲದೇ ನಿರ್ಮಿಸಲಾಗುವ ಈ ಗೃಹಗಳಲ್ಲಿ ಯೋಧರು ತಮ್ಮ ಕುಟುಂಬಸ್ಥರೊಂದಿಗೆ ಕಾಲ ಕಳೆಯಬಹುದಾಗಿದೆ!! ಹಾಗಾಗಿ ಬಿಎಸ್ ಎಫ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರಿಗೆ ತಮ್ಮ 30 ವರ್ಷಗಳ ಸೇವಾವಧಿಯಲ್ಲಿ ಸರಾಸರಿ 5 ವರ್ಷಗಳಷ್ಟು ಕಾಲ ಮಾತ್ರ ಕುಟುಂಬದೊಂದಿಗೆ ಕಳೆಯಲು ಸಾಧ್ಯ. ಈ ಹಿನ್ನಲೆಯಲ್ಲಿ ನವ ವಿವಾಹಿತ ದಂಪತಿಗಳಿಗಾಗಿ ದೇಶಾದ್ಯಂತ 190ಕ್ಕೂ ಅಧಿಕ ‘ಜವಾನ್ ಗೆಸ್ಟ್ ಹೌಸ್’ಗಳನ್ನು ಸ್ಥಾಪಿಸಲು ಬಿಎಸ್ ಎಫ್ ನಿರ್ಧರಿಸಿದೆ.

ಗಡಿಯ ಮುಂಚೂಣಿ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರು ಹೊರಗೆ ಬಾಡಿಗೆಯ ಮನೆಗಳಲ್ಲಿ ಸಹ ತಮ್ಮ ಕುಟುಂಬಗಳೊಂದಿಗೆ ವಾಸವಿರಲು ಅನುಮತಿ ನೀಡಲಾಗುವುದು. ಆದರೆ ಇದಕ್ಕೂ ಮುನ್ನ ಆ ಪ್ರದೇಶಳಲ್ಲಿ ಅವರ ಸುರಕ್ಷತೆಗೆ ಯಾವುದೇ ಬೆದರಿಕೆ ಇಲ್ಲವೆನ್ನುವುದನ್ನು  ಖಚಿತ ಪಡಿಸಿಕೊಳ್ಳಲಾಗುವುದು ಎಂದು ಬಿಎಸ್ ಎಫ್ ನ ಮಹಾ ನಿರ್ದೇಶಕ ಕೆ.ಕೆ ಶರ್ಮಾ ತಿಳಿಸಿದ್ದಾರೆ!! ಆದ್ದರಿಂದ ಹೆಚ್ಚಿನ ಸಮಯವನ್ನು ಕುಟುಂಬದೊಂದಿಗೆ ಕಳೆಯಬೇಕು, ವಿಶೇಷವಾಗಿ ನವವಿವಾಹಿತ ಯೋಧರು ಕುಟುಂಬದೊಂದಿಗೆ ಜೀವನ ಸಾಗಿಸುವ ದೃಷ್ಟಿಯಿಂದ ಈ ಅತಿಥಿ ಗೃಹಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಿನಲ್ಲಿ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತೀಯ ಸೇನೆಗೆ ಹೊಸ ಬಲ ತುಂಬುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಸೇನೆಗೆ ಸ್ವಾತಂತ್ರ್ಯ ನೀಡುವುದು, ವೇತನ, ಯುದ್ಧಾಸ್ತ್ರಗಳ ವಿತರಣೆ ಸೇರಿ ನಾನಾ ಸೌಲಭ್ಯಗಳನ್ನು ಕಟ್ಟುನಿಟ್ಟಾಗಿ ನೀಡುತ್ತಿರುವ ನರೇಂದ್ರ ಮೋದಿ ಸರ್ಕಾರವು ಇದೀಗ ನವವಿವಾಹಿತ ಯೋಧರಿಗೆ ಜವಾನ್ ಗೆಸ್ಟ್ ಹೌಸ್ ಗಳನ್ನು ನೀಡುವ ಮೂಲಕ ಗಮನ ಸೆಳೆದಿದೆ.

source:http://www.thehindu.com/news/national/bsf-to-set-up-guest-houses-for-newly-wed-jawans/article23474505.ece

– ಅಲೋಖಾ

Tags

Related Articles

Close