ಪ್ರಚಲಿತ

ಒಬ್ಬ ಕ್ರೈಸ್ತನಾಗಿಯೂ ಪವಿತ್ರ ಸನಾತನ ಪರಂಪರೆಯ ಭಾರತದಲ್ಲಿ ಹುಟ್ಟಿದ್ದೇ ಹೆಮ್ಮೆ ಎನ್ನುವ ಕಟ್ಟಾ ಆರ್.ಎಸ್.ಎಸ್ ಕಾರ್ಯಕರ್ತ ಅಪ್ಪಟ ದೇಶಭಕ್ತ ವ್ಯಕ್ತಿಯಿಂದ ಬಿಷಪ್ ಗಳು ಕಲಿಯುವುದು ಸಾಕಷ್ಟಿದೆ!!

ವೃತ್ತಿಯಲ್ಲಿ ಶಿಕ್ಷಕರಾಗಿರುವ ಡ್ಯಾನಿ ಪಿರೇರಾ ಹುಟ್ಟಿದ್ದು ಕ್ರೈಸ್ತ ಮತದಲ್ಲಿ. ಆದರೆ ಸನಾತನ ಧರ್ಮ ಮತ್ತು ಭಾರತವನ್ನು ಉತ್ಕಂಟತೆಯಿಂದ ಪ್ರೀತಿಸುವ ಅವರು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ಆರ್.ಎಸ್.ಎಸ್ ಕಾರ್ಯಕರ್ತ ರಾಗಿರುವ ಡ್ಯಾನಿ ಪಿರೇರಾ ಮತದ ಹೆಸರಿನಲ್ಲಿ ದೇಶ ಒಡೆಯುವ ಮತಾಂಧರಿಗೆ ಸರಿಯಾಗಿಯೆ ಝಾಡಿಸಿದ್ದಾರೆ. ಒಬ್ಬ ಸಾಮಾನ್ಯ ಕ್ರೈಸ್ತನಿಗೆ ಅರ್ಥವಾದದ್ದು ಚರ್ಚಿನ ಪಾದ್ರಿ- ಬಿಷಪ್ಗಳಿಗೆ ಅರ್ಥವಾಗುದಿಲ್ಲವೆಂದರೆ ಅವರು ಆ ಪದದಲ್ಲಿರಲು ಯೋಗ್ಯರೆ ಎನ್ನುವ ಸಂದೇಹ ಬರದಿರದು. ದೇಶದ ಧಾರ್ಮಿಕ ಸೌಹಾರ್ದ ಕದಡುವ ಇಂತಹ ಛದ್ಮ ವೇಶಧಾರಿಗಳಿಗೆ ಡ್ಯಾನಿ ಪಿರೇರಾ ಅವರು ಕೊಟ್ಟ ಉತ್ತರ ಹೇಗಿದೆ ಅವರದೆ ಮಾತುಗಳಲ್ಲಿ ಓದಿ ನೋಡಿ:

“ನಾನೇನು ಇದೇ ಜಾತಿ- ಮತದಲ್ಲಿ ಹುಟ್ಟಬೇಕೆಂದು ಹುಟ್ಟಲಿಲ್ಲ. ಹುಟ್ಟೇ ಆಕಸ್ಮಿಕ ಎನ್ನುವುದಾದರೆ ಯಾವುದೋ ಒಂದು ಜಾತಿಯಲ್ಲಿದ್ದೇನೆ, ಇರುತ್ತೇನಷ್ಟೇ! ಅದಕ್ಕಾಗಿ ನನಗೆ ವಿಶೇಷ ಅಭಿಮಾನವೇನಿಲ್ಲ. ಆದರೆ ಜಗತ್ತಿಗೆ ಶಾಂತಿ ಸಹಬಾಳ್ವೆಯ ಎಲ್ಲರ ನಂಬಿಕೆ ಆಚಾರ ವಿಚಾರಗಳನ್ನು ಒಪ್ಪುವ- ಅಪ್ಪುವ ಪವಿತ್ರ ಸನಾತನ ಪರಂಪರೆಯ ಭಾರತದಲ್ಲಿ ಹುಟ್ಟಿದ್ದೇನೆ ಅದೇ ನನಗೆ ಹೆಮ್ಮೆಯ ವಿಷಯ! ನನಗೆ ಗೊತ್ತು ಇದು ಋಷಿ ಪರಂಪರೆಯ ದೇಶವೆಂದು. ಈ ಜಗತ್ತಿನಲ್ಲಿ ತಮ್ಮ ಮತಗಳೇ ಶ್ರೇಷ್ಠ ಎಂದು ಹೇಳುವ ಸಿದ್ಧಾಂತದ ಪ್ರತಿಪಾದಕರ ಮೊದಲೇ ಮುಂದೆ ಆ ತತ್ವದ ಪ್ರವರ್ತಕರು ಹುಟ್ಟತ್ತಾರೆ ಎಂದು ತಿಳಿಯದ ಕಾಲಘಟ್ಟದಲ್ಲೇ ಈ ದೇಶದ ಋಷಿಗಳು ಭಾರತದ ಶ್ರೇಷ್ಠತೆಯ ಬಗ್ಗೆ ಹೇಳಿದ್ದು –

ಆತ್ರಾಪಿ ಭಾರತಂ ಶ್ರೇಷ್ಠಂ ಜಂಭೂದ್ವೀಪೇ ಮಹಾ ಮುನೇ |
ಯತೋಹಿ ಕರ್ಮಭೂರೇಷಾ ಯತೋನ್ಯ ಭೋಗಬೂಮಯಃ||

ಜಗತ್ತಿನಲ್ಲಿ ಭಾರತವೊಂದೇ ಕರ್ಮಭೂಮಿ ಉಳಿದೆಲ್ಲವೂ ಭೋಗಭೂಮಿ.

ಈ ದೇಶದ ಮತ್ತೊಬ್ಬ ಋಷಿ ಹೇಳಿದ್ದು- ಅನ್ಯಸ್ಥಾನೇ ವೃಥಾಜನ್ಮ ನಿಷ್ಫಲಂ ಚ ಗತಾಗತಮ್ |
ಭಾರತೀ ಚ ಕ್ಷಣಂ ಜನ್ಮ ಸಾರ್ಥಕಂ ಶುಭ ಕರ್ಮದವತ||

ಇತರ ಭಾಗದಲ್ಲಿ ಹುಟ್ಟುವ ಫಲ ಸೀಮಿತ. ಭಾರತದಲ್ಲಿನ ಹುಟ್ಟು ಅಲ್ಪಕಾಲದ್ದಾದರೂ ಅತ್ಯಂತ ಫಲಪ್ರದ.

ಇಂಥಾ ಪುಣ್ಯಭೂಮಿ ಕಾಲಗರ್ಭದಲ್ಲಿ ಅನೇಕ ಏರಿಳಿತ ಕಂಡಿದೆ. ಅನೇಕ ವಿದೇಶಿ ಆಕ್ರಾಮಕ ಮನಸ್ಥಿತಿಯ ದಬ್ಬಾಳಿಕೆ ದೌರ್ಜನ್ಯವನ್ನು ಕಂಡಿದೆ. ಸ್ವಕೀಯರಿಂದಲೇ ಈ ದೇಶ ಏಳು ಬೀಳನ್ನು ಕಂಡಿದೆ. ಈ ಎಲ್ಲ ಆಘಾತಗಳನ್ನು ಅನುಭವಿಸಿ ಮೇಲೆದ್ದು ನಿಂತ ಜಗತ್ತಿನ ಬೆರಳೆಣಿಕೆಯ ದೇಶಗಳಲ್ಲಿ ನನ್ನ ಭಾರತ ಅಗ್ರಸ್ಥಾನದಲ್ಲಿದೆ. ಈಗ ಅದು ಬದಲಾವಣೆಯ ಪರ್ವ ಕಾಲದಲ್ಲಿದೆ. ಭಾರತ ತನ್ನ ಪ್ರಾಚೀನತೆಯ ಗತವೈಭವವನ್ನು ಹೊಂದುವಂತ ವಿಶ್ವಗುರುವಾಗುವೆಡೆ ತನ್ನ ದೃಷ್ಟಿ ನೆಟ್ಟಿದೆ.

ಇಂಥ ಸಂಧಿಕಾಲದ ಸುಸಂದರ್ಭ ನನ್ನ ದೇಶದ ನೇತೃತ್ವವನ್ನು ತನ್ನನ್ನು ತಾನು ಭಾರತ ಮಾತೆಯ ಸೇವಕನೆಂದು ಬಿಂಬಿಸಿಕೊಳ್ಳುವಲ್ಲಿ ಸಾರ್ಥಕ್ಯ ಕಾಣುವ ನರೇಂದ್ರ ಮೋದಿಯವರು ವಹಿಸಿಕೊಂಡಿದ್ದಾರೆ. ಅವರ ದೀರ್ಘ ಸಾಧನೆಯ 5 ವರ್ಷಗಳ ಅಲ್ಪಾವಧಿ ಇಂಥಾ ಮಹೋನ್ನತ ಸಾಧನೆಗೆ ಏನೇನು ಸಾಲದು ಎಂಬುದು ದೇಶವಾಸಿಗಳ ಅರಿವಿಗೆ ಬರುವಂತದ್ದೇ. 2019 ರ ಚುನಾವಣೆ ಈ ದೇಶದ ವೈಭವ ಸ್ಥಿತಿಯನ್ನು ಕಾಣ ಹೊರಟ ದೇಶಭಕ್ತರಿಗೆ ಅತ್ಯಂತ ಮಹತ್ವದ್ದು ಮಾತ್ರವಲ್ಲ ಮೋದಿಯಂಥ ಮಹಾನ್ ದೇಶಭಕ್ತನ ಗೆಲುವು ಮತ್ತಷ್ಟು ಮಹತ್ವದ್ದೇ. ಈ ನಡುವೆ ಜಾತಿ ಮತಗಳ ಹೆಸರಲ್ಲಿ ದೇಶವಾಸಿಗಳನ್ನು ವಿಭಜಿಸಿ ಈ ದೇಶವನ್ನು ಆಳುತ್ತಾ ದೇಶವನ್ನು ಅಧೋಗತಿಗೆ ತಂದ ವಿಭಜನಕಾರಿ ಶಕ್ತಿಗಳು ಅಧಿಕಾರಕ್ಕಾಗಿ ಒಂದಾಗುತ್ತಿರುವುದು ಈ ದೇಶದ ಇತಿಹಾಸದ ಕಾಲಘಟ್ಟದಲ್ಲಿ ಘಟಿಸಿರುವ ಸಂಗತಿಯೇ.

ಇವರೊಂದಿಗೆ ಜಗತ್ತಿನ ಅನೇಕ ನಾಗರೀಕತೆಗಳನ್ನು ಮಣ್ಗೂಡಿಸಿದ ಸಿದ್ದಾಂತಗಳಾಚರಣೆಯ ಪ್ರತಿನಿಧಿಗಳಾದ ಚರ್ಚು- ಮಸೀದಿಗಳ ಮುಖ್ಯಸ್ಥರು ಇಳಿದಿರುವುದು, ಅವರ ಮೋದಿ ವಿರುದ್ಧದ ಅಭಿಪ್ರಾಯಕ್ಕೆ ಅವರ ಬಗೆಗೆ ಹೇಸಿಗೆ ಎನಿಸಿದೆ. ಮತಾಚರಣೆ ಖಾಸಗಿ ವಿಚಾರಗಳು. ನನಗೆ ನನ್ನ ಮತ ಪಂಥದ ನಂಬಿಕೆಗಳಿಗಿಂಥ ನನ್ನ ದೇಶದ ಹಿತ ಮುಖ್ಯ. ನಾನು ಬಯಸುವುದು ನಾನು ಸತ್ತನಂತರ ಕಾಣುವ ಸ್ವರ್ಗದ ಬಗೆಗಲ್ಲ, ನಾನು ಬದುಕಿರುವಾಗಲೇ ನನಗೆ ಪೋಷಣೆ ನೀಡುವ ನನ್ನ ಮಾತೃಭೂಮಿ ಸ್ವರ್ಗವಾಗಬೇಕು ಎನ್ನುವ ಬಗ್ಗೆ. ನನ್ನ ದೇಶ ಯಾರ ಕಾಲದಲ್ಲಿ ಉತ್ತಮ ಆಡಳಿತ ಕಂಡಿದೆ ಎನ್ನುವುದನ್ನು ಜಾತಿ ಮತಗಳಾಚೆ ಯೋಚಿಸುವ ನಾನು, ದೆಹಲಿಯ ಆರ್ಚ್ ಬಿಷಪರಿಗಿಂತ ಚೆನ್ನಾಗಿ ಬಲ್ಲೆ. ಇಲ್ಲಿನ ಸ್ವಾರ್ಥಪರ ನಾಯಕರ, ನಾಸ್ತಿಕ ಬುದ್ಧಿಜೀವಿಗಳ ಕೊಳಕು ಸಿದ್ಧಾಂತಗಳ ಬೆನ್ನು ಹತ್ತಿ ನನ್ನ ದೇಶದ ಅಧಃಪತನಕ್ಕೆ ನಾನೇ ಸಾಕ್ಷಿಯಾಗಬೇಕೇನು?!

ಸಾಧ್ಯವೇ ಇಲ್ಲ, ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ನನ್ನ ದೇಶದ ಹಿತ ಮತ್ತು ನನ್ನ ದೇಶವನ್ನು ಯಾರು ಆಳಬೇಕೆನ್ನುವುದು ನನಗೇ ತಿಳಿದಿದೆ. ಧಾರ್ಮಿಕ ಮುಖಂಡರು ಭಕ್ತರ ಆಧ್ಯಾತ್ಮಿಕ ಸಾಧನೆಯ ಮೆಟ್ಟಿಲುಗಳಾಗಿ ಅವರ ಕೈ ಹಿಡಿದು ಮೋಕ್ಷ ಸಾಧನೆಗೆ ದಾರಿ ತೋರಬೇಕು ಆ ಮೂಲಕ ಕ್ರಿಸ್ತನ ಕಾಣಲು ನೆರವಾದರೆ ಸಾಕು. ಅದಕ್ಕೆ ತನಗೆ ಪೋಷಕರಾಗುವ ಪಕ್ಷಗಳ ನೇತೃತ್ವದ ಏಜಂಟರಾಗಬೇಕಿಲ್ಲ! ಅದು ಆಧ್ಯಾತ್ಮದ ಕ್ಷೇತ್ರವಲ್ಲ! ನನಗೆ ದೇಶವೇ ಮೊದಲು ಉಳಿದೆಲ್ಲಕ್ಕೂ ಅವಶ್ಯಕತೆಯ ಮೇಲೆ ಆದ್ಯತೆ.”

ಏಕೆಂದರೆ ನಾನು ಬದುಕು ಕಾಣುತ್ತಿರುವುದು ನನ್ನ ಪ್ರೀತಿಯ ಭಾರತದೊಂದಿಗೆ… ಹಾಗಾಗಿ ನನ್ನ ಮತ ದೇಶಭಕ್ತರಿಗೆ ಮಾತ್ರ.

-ಡ್ಯಾನಿ ಪಿರೇರಾ

Tags

Related Articles

Close