ಪ್ರಚಲಿತ

ರಾಮ ಮಂದಿರಕ್ಕೆ ಜೈ ಎಂದ ಸರ್ಕಾರಿ ಅಧಿಕಾರಿ!! ಮುಸ್ಲಿಮರ ನಂತರ ಈಗ ರಾಮ ಮಂದಿರಕ್ಕೆ ಪಣ ತೊಟ್ಟಿದ್ದು ಯಾರು ಗೊತ್ತಾ..?!

ರಾಮಮಂದಿರ. ಕೋಟ್ಯಾಂತರ ಹಿಂದೂಗಳ ನೂರಾರು ವರ್ಷಗಳ ಕನಸು. ಮರ್ಯಾದಾ ಪರುಷೋತ್ತಮ ಶ್ರೀರಾಮಚಂದ್ರ ಪ್ರಭು ಜನಿಸಿದ ಪುಣ್ಯನೆಲ. ಪಾಪವನ್ನು ಕಳೆಯುವ ಮೋಕ್ಷದಾಯಿಕ ಕ್ಷೇತ್ರಗಳಲ್ಲಿ ಮೊದಲನೆಯ ಕ್ಷೇತ್ರವಾದ ಅಯೋಧ್ಯಾದಲ್ಲಿ ಭವ್ಯವಾದ ಶ್ರೀರಾಮನ ದೇಗುಲವೊಂದು ನಿರ್ಮಾಣವಾಗಬೇಕೆಂಬ ಹಂಬಲ ಕೋಟ್ಯಾಂತರ ಹಿಂದೂ ಸಮಾಜ ಬಾಂಧವರದ್ದು.

ಬಾಬರ್ ಎಂಬ ಆಕ್ರಮಣಕಾರಿ ದೊರೆಯ ಆಕ್ರಮಣದಿಂದ ಅಲ್ಲಿದ್ದ ಶ್ರೀ ರಾಮ ದೇಗುಲ ಧ್ವಂಸವಾಗಿ ಆ ಪ್ರದೇಶದಲ್ಲಿ ಮಸೀದಿ ನಿರ್ಮಾಣವಾಗುತ್ತೆ. ಕೋಟ್ಯಾಂತರ ಹಿಂದೂಗಳ ಭಾವನೆಗಳಿಗೆ ಕೊಡಲಿಯೇಟು ಬೀಳುತ್ತೆ. ಗತವೈಭವ ಸಾರುತ್ತಿದ್ದ ಅಯೋಧ್ಯೆ ದಾಸ್ಯದ ಕುರುಹಾಗಿ ಬಿಡುತ್ತೆ. ಅತಿ ದೊಡ್ಡ ರಾಜ್ಯವನ್ನಾಳಿದ ಶ್ರೀ ರಾಮ ಸೂರಿಲ್ಲದೆ ಬೀದಿ ಪಾಲಾಗುತ್ತಾನೆ. ಮುಸಲ್ಮಾನ ದೊರೆಯ ಅಟ್ಟಹಾಸ ಮುಗಿಲು ಮುಟ್ಟುತ್ತದೆ.

ರಾಜಾಡಳಿತ ಕಳೆದು ಸಂವಿಧಾನ ಯುಗ ಬಂದರೂ ಶ್ರೀ ರಾಮನಿಗೆ ಸೂರು ನಿರ್ಮಿಸಲು ಸಾಧ್ಯವಾಗಲೇ ಇಲ್ಲ. ಸ್ವತಂತ್ರ್ಯ ಭಾರತದಲ್ಲಿ ಉಂಟಾದ ರಾಜಕೀಯ ಮೇಲಾಟಗಳು, ಅತಿಯಾದ ಜಾತ್ಯಾತೀತ ವಾದಗಳಿಂದ ಶ್ರೀ ರಾಮ ಮತ್ತೆ ಅನಾಥವಾಗುತ್ತಾನೆ. ರಾಮ ಭಕ್ತರ ಕನಸು ಮತ್ತೆ ನುಚ್ಚು ನೂರಾಗುತ್ತೆ.

ಪವಾಡವೆಂದರೆ ಶ್ರೀ ರಾಮ ಸ್ವತಃ ಧ್ವಂಸಕ್ಕೊಳಗಾದ ಮಂದಿರದ ಒಳಗೆ ಪ್ರತ್ಯಕ್ಷನಾಗುತ್ತಾನೆ. ದಾಸ್ಯದ ಕುರುಹಾಗಿದ್ದ ಆ ಕಟ್ಟಡದಲ್ಲಿ ರಾಮಲಲ್ಲಾನ ತೊಟ್ಟಿಲು ತೇಲುತ್ತಿರುತ್ತೆ. ತನ್ನ ಶಕ್ತಿ ಇನ್ನೂ ಇಲ್ಲಿ ಇದೆ ಎಂಬುವುದನ್ನು ಸಾಭೀತುಪಡಿಸುತ್ತಾನೆ. ಹಿಂದೂಗಳನ್ನು ಮತ್ತೆ ಜಾಗೃತಗೊಳಿಸುತ್ತಾನೆ. ಕೋಟ್ಯಾಂತರ ಹಿಂದೂಗಳಲ್ಲಿ ಶ್ರೀ ರಾಮನ ಮಂದಿರ ನಿರ್ಮಾಣಕ್ಕೆ ಕಿಚ್ಚು ಹೆಚ್ಚಾಗುತ್ತೆ. ಸಾವಿರಾರು ಕರ ಸೇವಕರು ಶ್ರೀ ರಾಮನ ದರ್ಶನಕ್ಕೆಂದು ರಾಮ ಜನ್ಮ ಭೂಮಿಗೆ ತೆರಳುತ್ತಾರೆ. ರಾಮ ಜನ್ಮ ಭೂಮಿಗೆ ತೆರಳಿದ ಅಂದಿನ ವಿಶ್ವ ಹಿಂದು ಪರಿಷತ್ತಿನ ಕಾರ್ಯಕರ್ತರು ರಾಮ ಜನ್ಮ ಭೂಮಿಯ ದಾಸ್ಯದ ಸಂಕೇತವಾದ ಬಾಬರ್ ಮಸೀದಿಯ ಮೇಲೆ ನಿಂತು ಜೈ ಶ್ರೀ ರಾಮ್ ಎಂದು ಹೂಂಕರಿಸುತ್ತಾರೆ. ಹಿಂದೂಗಳ ಹೂಂಕಾರಕ್ಕೆ ಮಸೀದಿಯೇ ಧರೆಗುರುಳುತ್ತದೆ. ಮಸೀದಿಯ ಗೋಪುರಗಳು ಪುಡಿ ಪುಡಿಯಾಗುತ್ತದೆ. ಹಿಂದೂ ಸಾಮ್ರಾಜ್ಯ ಮತ್ತೆ ವಿಜೃಂಭಿಸುತ್ತದೆ.

 

ಅಂದಿನ ರಮಣ್ ಸಿಂಗ್ ನೇತೃತ್ವದ ಉತ್ತರ ಪ್ರದೇಶದ ಸರ್ಕಾರದ ಸುಪರ್ದಿಯಲ್ಲಿದ್ದ ಪೊಲೀಸರು ಕೂಡ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತಿರುತ್ತಾರೆ. ಹಿಂದು ಸಮಾಜದ ಕಾರ್ಯಕರ್ತರಿಗೆ ಸ್ವತಃ ಪೊಲೀಸರೇ ಸೆಲ್ಯೂಟ್ ಹೊಡೆಯುತ್ತಾರೆ. ಆದರೆ ಅಂದು ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಹಿಂದೂ ವಿರೋಧಿ ಸರ್ಕಾರವೊಂದು ವಿದೇಶಿ ಸೈನಿಕರನ್ನು ಕರೆತಂದು ಹಿಂದೂಗಳ ಮೇಲೆ ಸವಾರಿಯನ್ನೇ ಮಾಡುತ್ತದೆ. ಭಾರೀ ರಕ್ತಪಾತಗಳೇ ಅಲ್ಲಿ ನಡೆಯುತ್ತದೆ. ಶಾಂತಿ, ಅಹಿಂಸೆಗೆ ಹೆಸರಾಗಿದ್ದ ಅಯೋಧ್ಯೆ ರಕ್ತದ ಮಡುವಿನಲ್ಲಿ ಮುಳುಗಿ ಹೋಗುತ್ತದೆ.

ನ್ಯಾಯಾಲದಲ್ಲಿ ಪ್ರಕರಣದ ಬಗ್ಗೆ ಭಾರೀ ಚರ್ಚೆಗಳೇ ನಡೆಯುತ್ತೆ. ಒಂದು ಕಡೆ ಮುಸ್ಲಿಂ ಜನಾಂಗದವರು ಆ ಪ್ರದೇಶ ನಮ್ಮದು ಅಂತ ಹೇಳಿದರೆ ಮತ್ತೊಂದು ಕಡೆ ಹಿಂದೂಗಳು ಜೀವ ಹೋದರೂ ನಾವು ರಾಮ ಜನ್ಮ ಭೂಮಿಯನ್ನು ಬಿಡೋದಿಲ್ಲ ಎಂಬವಾದವನ್ನು ಮಂಡಿಸುತ್ತಾರೆ.ಹೀಗೆ ಪ್ರಕರಣ ಮುಂದಕ್ಕೆ ಹೋಗುತ್ತಲೇ ಇದೆ. ಅದೆಷ್ಟೋ ಸರ್ಕಾರಗಳು ಶ್ರೀ ರಾಮನ ಹೆಸರಿನಲ್ಲಿ ಏಳು ಬೀಳುಗಳನ್ನು ಕಂಡಿದೆ.

ಕೇಂದ್ರದಲ್ಲಿ ಮೋದಿ-ರಾಜ್ಯದಲ್ಲಿ ಯೋಗಿ…

2014. ಲೋಕಸಭಾ ಚುನಾವಣೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಪ್ರಬಲ ಹಿಂದುತ್ವವಾದಿ ಶ್ರೀ ನರೇಂದ್ರ ಮೋದಿ ಪ್ರಧಾನಿ ಪಟ್ಟಕ್ಕೇರುತ್ತಾರೆ. ಈ ಸಮಯದಲ್ಲಿ ದೇಶದ ಎಲ್ಲಾ ಹಿಂದೂಗಳಲ್ಲಿ ಮೊದಲ ಕನಸು ಸೃಷ್ಟಿಯಾಗಿದ್ದೇ ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ಭವ್ಯವಾದ ಶ್ರೀ ರಾಮನ ದೇಗುಲವನ್ನು ಸ್ಥಾಪಿಸುವುದು. ನಂತರ ಉತ್ತರ ಪ್ರದೇಶದಲ್ಲೂ ಕಠಿಣ ಹಿಂದೂ ಆರಾಧಕರಾದ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗುತ್ತಾರೆ. ಆದರೂ ಕೆಲವೊಂದು ಕಾನೂನು ತೊಡಕುಗಳು ಶ್ರೀ ರಾಮನ ಮಂದಿರಕ್ಕೆ ತೊಡಕಾಗುತ್ತದೆ.

ಮುಸ್ಲಿಮರೇ ಜೈ ಶ್ರೀ ರಾಮ್ ಎನ್ನುತ್ತಾರೆ!

ಮೋದಿ-ಯೋಗಿ ಸರ್ಕಾರಗಳು ಆಡಳಿತವನ್ನು ಆರಂಭಿಸುತ್ತಿದ್ದಂತೆಯೇ ಶ್ರೀ ರಾಮ ಮಂದಿರಕ್ಕೆ ವಿರೋಧಿಸುತ್ತಿದ್ದ ಮುಸ್ಲಿಮರು ಜೈ ಶ್ರೀ ರಾಮ್ ಎನ್ನುತ್ತಾರೆ. ರಾಮ ದೇವನ ಮಂದಿರಕ್ಕೆ ನಮ್ಮದೇನೂ ತಕರಾರು ಇಲ್ಲ ಎಂದು ಮುಸ್ಲಿಮರ ಒಂದು ವರ್ಗ ಘೋಷಿಸಿಬಿಡುತ್ತದೆ. ಮಾತ್ರವಲ್ಲದೆ ಶ್ರೀ ರಾಮನ ಮಂದಿರಕ್ಕೆ ಯಾವ ತ್ಯಾಗಕ್ಕೂ ಸಿದ್ದ ಎಂಬ ಘೋಷಣೆಯನ್ನು ಮಾಡಿಬಿಡುತ್ತಾರೆ. ಅಯೋಧ್ಯೆಯ ಶ್ರೀ ರಾಮನ ಮಂದಿರದಲ್ಲಿ ಪ್ರಮುಖ ಜವಬ್ಧಾರಿಗಳನ್ನೂ ಅಲ್ಲಿನ ಮುಸಲ್ಮಾನರೇ ತೆಗೆದುಕೊಳ್ಳುತ್ತಾರೆ.

ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗುತ್ತೆ ಶ್ರೀ ರಾಮ ಜನ್ಮ ಭೂಮಿ ಅಯೋಧ್ಯಾ. ಆದರೆ ಅದೇ ಮುಸಲ್ಮಾನರ ಮತ್ತೊಂದು ವರ್ಗ ಶ್ರೀ ರಾಮನ ಮಂದಿರಕ್ಕೆ ಅಡ್ಡಗಾಲು ಹಾಕಿ ನಿಲ್ಲುತ್ತೆ ಇದು ಈಗ ನ್ಯಾಯಾಲಯದಲ್ಲಿ ಪ್ರಕರಣ ಕಗ್ಗಂಟಾಗಿ ಉಳಿಯಲು ಕಾರಣವಾಗಿದೆ. ಹಲವಾರು ರಾಜಕಾರಣಿಗಳು, ಸಾಹಿತಿಗಳು, ಮುಸ್ಲಿಂ ಸಮಾಜ ಸಹಿತ ಅದೆಷ್ಟೋ ಪ್ರಮುಖರು ಶ್ರೀ ರಾಮನ ಮಂದಿರ ನಿರ್ಮಾಣಕ್ಕೆ ಜೈ ಎಂದಿದ್ದಾರೆ. ಆದರೂ ಕಾನೂನು ತೊಡಕುಗಳು ಶ್ರೀ ರಾಮನ ಮಂದಿರ ನಿರ್ಮಾಣಕ್ಕೆ ಕಗ್ಗಂಟಾಗಿ ಉಳಿದಿತ್ತು.

ಫೀಲ್ಡಿಗಿಳಿದ ಐಪಿಎಸ್ ಅಧಿಕಾರಿ!

ಆಶ್ಚರ್ಯವಾದರೂ ಸತ್ಯ. ಸಮಾಜದ ಎಲ್ಲಾ ವರ್ಗಗಳೂ ಶ್ರೀ ರಾಮನ ಮಂದಿರ ನಿರ್ಮಾಣಕ್ಕೆ ಬೆಂಬಲ ಸೂಚಿಸಿದ್ದು, ಈವಾಗ ಸರ್ಕಾರಿ ಅಧಿಕಾರಿಗಳೇ ಜೈ ಶ್ರೀ ರಾಮ್ ಎನ್ನುತ್ತಿದ್ದಾರೆ. ಐಪಿಎಸ್ ಅಧಿಕಾರಿ ಶುಕ್ಲಾ ಅವರು ಅಯೋಧ್ಯೆಯಲ್ಲಿ ಶ್ರೀ ರಾಮನ ಮಂದಿರ ನಿರ್ಮಾಣವಾಗಬೇಕು ಎಂದು ಬಹಿರಂಗವಾಗಿಯೇ ಘೋಷಿಸಿದ್ದಾರೆ. ಮುಸಲ್ಮಾನರೂ ಇದ್ದಂತಹ ಸಭೆಯಲ್ಲಿ ಓರ್ವ ಸರ್ಕಾರಿ ಅಧಿಕಾರಿಯಾಗಿ ಶ್ರೀ ರಾಮನ ಬಗ್ಗೆ ತಮ್ಮ ದಿಟ್ಟ ನಿಲುವನ್ನು ಪ್ರದರ್ಶಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ರಾಜಕಾರಣಿಗಳು ತಮ್ಮ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದರು. ಆದರೆ ಇದೀಗ ಉತ್ತರ ಪ್ರದೇಶದ ಅಧಿಕಾರಿಗಳು ಕೂಡ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಶೀಘ್ರದಲ್ಲಿ ನಿರ್ಮಿಸುವ ಬಗ್ಗೆ ಸಂಕಲ್ಪ ಕೈಗೊಂಡಿರುವುದು ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.

ಲಕ್ನೋ ವಿಶ್ವ ವಿದ್ಯಾಲಯ ಆವರಣದಲ್ಲಿ ಅಖಿಲ ಭಾರತೀಯ ಸಮಗ್ರ ವಿಚಾರ್ ಮಂಚ್ ಜನವರಿ 28 ರಂದು ಆಯೋಜಿಸಿದ್ದ ವಿಚಾರ ಸಂಕಿರಣವೊಂದರಲ್ಲಿ ಪಾಲ್ಗೊಂಡಿದ್ದ 1992 ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಶುಕ್ಲಾ ಅವರು ಕಾರ್ಯಕ್ರಮದಲ್ಲಿದ್ದ ಇತರ ಗಣ್ಯರೊಂದಿಗೆ ‘ರಾಮ ಮಂದಿರ ನಿರ್ಮಿಸುವ’ ಬಗ್ಗೆ ಸಂಕಲ್ಪ ಕೈಗೊಂಡಿದ್ದು, ಕಾರ್ಯಕ್ರಮದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಮೆಚ್ಚುಗೆಗೆ ಕಾರಣವಗಿದೆ.

ಒಟ್ಟಾರೆ ಸಧ್ಯ ಸಮಾಜದ ಎಲ್ಲಾ ವರ್ಗವೂ ಶ್ರೀ ರಾಮನ ಮಂದಿರಕ್ಕೆ ಜೈ ಎಂದಿದ್ದು, ರಾಜಕೀಯ ಹಿತಾಸಕ್ತಿ ಹಾಗೂ ಓಲೈಕೆ ರಾಜಕಾರಣವೊಂದು ಸ್ಥಗಿತಗೊಳ್ಳಬೇಕಾಗಿದೆ. 5% ಜನರಿಗಾಗಿ 95% ಜನರ ಭಾವನೆಗಳಿಗೆ ಕೊಡಲಿಯೇಟು ನೀಡುವ ವಿಷಯವನ್ನು ಕೈಬಿಟ್ಟು, ಸಾಂವಿಧಾನಿಕವಾಗಿ ಹಾಗೂ ನ್ಯಾಯುತವಾಗಿ ಶ್ರೀ ರಾಮನ ಮಂದಿರ ನಿರ್ಮಾಣಕ್ಕೆ ಕೈಜೋಡಿಸಬೇಕಾಗಿದೆ.

-ಸುನಿಲ್ ಪಣಪಿಲ

Tags

Related Articles

Close