ಪ್ರಚಲಿತ

ಅಧ್ಯಾಯ 22: ಆರೆಸ್ಸೆಸ್ ಪ್ರಚಾರಕರೆಂದರೆ ಭೈರಾಗಿಗಳು, ಸಂತರಂತೆ ಸಮಾಜಕ್ಕಾಗಿ ಜೀವನ ಮುಡಿಪಾಗಿಟ್ಟು ತಮ್ಮದೆಲ್ಲವನ್ನು ದೇಶ ಕಟ್ಟುವ ಕಾಯಕಕ್ಕೆ ಸಮರ್ಪಿಸಿ ಬಿಡುತ್ತಾರೆ! ಮೈ ಚ ಜಯದೇವ್ ಕೂಡ ಹಾಗೇ ಬದುಕಿದವರು!

ಅಧ್ಯಾಯ 22: ಮರ್ ಕರ್ ಭೀ ಜಿಂದಾ ಕೈಸೆ ರಹೇ….

ಫೆಬ್ರವರಿ 20 , 2017 ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಿಗೆ ಅನಾಥ ಪ್ರಜ್ಞೆ ಕಾಡಿತ್ತು. ಸಂಘಕ್ಕಾಗೀ, ಸಮಾಜಕ್ಕಾಗಿ ಜೀವವನ್ನೇ ಮುಡಿಪಾಗಿಟ್ಟಿದ್ದ ಹಿರಿಯ ಚೇತನ ಸಂಘದ ಹಿರಿಯ ಪ್ರಚಾರಕ ರಾಗಿದ್ದ ಶ್ರೀ ಮೈ.ಚ. ಜಯದೇವ್ ಅವರು ಇಹಲೋಕ ತ್ಯಜಿಸಿದ್ದರು.
ವಯೋಸಹಜ ಅಲ್ಪಕಾಲೀನ ತೊಂದರೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಸಾಗರ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೈಸೂರಿನಲ್ಲಿ ನಡೆದ ಅವರ ಅಂತ್ಯ ಸಂಸ್ಕಾರದಲ್ಲಿ ಗಣ್ಯಾತಿಗಣ್ಯರು ಪಾಲ್ಗೊಂಡು ಅವರನ್ನು ಬೀಳ್ಕೊಟ್ಟಿದ್ದರು.
ತನ್ನ ಜೀವಿತ ನಂತರವೂ ವ್ಯಕ್ತಿಯೊಬ್ಬರು ಜನಮಾನಸದಲ್ಲಿ ಚಿರಸ್ಥಾಯಿ ಆಗಿ ಉಳಿದುಹೋದರೆಂದರೆ ಜೀವನವನ್ನು ಅತ್ಯಂತ ಸಫಲವಾಗಿ ಕಳೆದಿದ್ದಾರೆ ಎಂದೇ ಅರ್ಥ ಅಲ್ಲವೇ?

ಶ್ರೀ ಮೈ.ಚ. ಜಯದೇವ್:

ಮೈಸೂರು ಚನ್ನಬಸಪ್ಪ ಜಯದೇವ (ಮೈ.ಚ. ಜಯದೇವ್) ಅವರು ಫೆಬ್ರುವರಿ 18, 1932ರಲ್ಲಿ ಮೈಸೂರಿನಲ್ಲಿ ಜನಿಸಿದರು.ಮೈಸೂರಿನಲ್ಲಿ ಬಿ.ಎಸ್ಸಿ. ಪದವಿ ಪೂರೈಸಿದ ನಂತರ ಕಾನೂನು ವ್ಯಾಸಂಗ ಕೈಗೆತ್ತಿಕೊಂಡರು. 1950ರ ದಶಕದಲ್ಲಿ ಆರೆಸ್ಸೆಸ್ ವಿಚಾರಧಾರೆಯತ್ತ ಆಕರ್ಷಿತರಾದ ಜಯದೇವ್‌ರು ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡವರು. ತುಮಕೂರಿನಲ್ಲಿ ಅಲ್ಪಕಾಲ ಪ್ರಚಾರಕರಾಗಿಯೂ ಕಾರ್ಯನಿರ್ವಹಿಸಿದ್ದವರು. ಬೆಂಗಳೂರಿನ ಪ್ರತಿಷ್ಠಿತ HMT- Hindustan Garage Motors ನಲ್ಲಿಯೂ ಮ್ಯಾನೇಜರ್ ಆಗಿ ಕೆಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ಇವರು, 1960ರಲ್ಲಿ ಆರೆಸ್ಸೆಸ್ ಬೆಂಗಳೂರು ಮಹಾನಗರ ಕಾರ್ಯವಾಹ ಜವಾಬ್ದಾರಿ ಸ್ವೀಕರಿಸಿ, ಬೆಂಗಳೂರು ನಗರದಲ್ಲಿ ಸಂಘದ ಬೇರುಗಳನ್ನು ಗಟ್ಟಿಗೊಳಿಸಿದವರು. 1974 ರ ತನಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಗಳೂರು ಮಹಾನಗರ ಕಾರ್ಯವಾಹರಾಗಿ ಅತೀ ದೀರ್ಘಕಾಲ ಮಾರ್ಗದರ್ಶನ ಮಾಡಿದವರು ಮೈ.ಚ. ಜಯದೇವ್‌ ರವರು. 1965 ರಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನ ಸ್ಥಾಪನೆಯಲ್ಲಿ ಮೈ ಚ ಜಯದೇವರದ್ದು ಮಹತ್ತರವಾದ ಪಾತ್ರ. ಇದೀಗ 50 ವರ್ಷ ಪೂರೈಸಿರುವ ರಾಷ್ಟ್ರೋತ್ಥಾನ ಪರಿಷತ್ ನ ಸಮಗ್ರ ವಿಕಾಸದ ಎಲ್ಲ ಹಂತಗಳಲ್ಲಿಯೂ ಪೋಷಿಸಿ- ಮಾರ್ಗದಶಿಸಿದವರು ಮೈ.ಚ. ಜಯದೇವ್ ರವರು.

1965ರಿಂದ 1995ರ ತನಕ ಮೂರು ದಶಕಗಳ ಕಾಲ ರಾಷ್ಟ್ರೋತ್ಥಾನ ಪರಿಷತ್‌ನ ಜನರಲ್ ಮ್ಯಾನೇಜರ್ ಆಗಿ ಶಿಕ್ಷಣ, ಆರೋಗ್ಯ, ಸಾಹಿತ್ಯ ಮತ್ತು ಸೇವೆಯ ಮೂಲಕ ರಾಷ್ಟ್ರೋತ್ಥಾನ ಪರಿಷತ್ ರಾಜ್ಯಾದ್ಯಂತ ವ್ಯಾಪಿಸಿರುವುದರ ಹಿಂದೆ ಜಯದೇವ್ ಅವರ ಕೊಡುಗೆ ಅಪಾರ.
’ರಾಷ್ಟ್ರೋತ್ಥಾನ ಸಾಹಿತ್ಯ’ದ ಮೂಲಕ ಸ್ವಾತಂತ್ರ್ಯಾನಂತರದಲ್ಲಿ ನೇಪಥ್ಯಕ್ಕೆ ಸರಿಯುತ್ತಿದ್ದ ರಾಷ್ಟ್ರೀಯ ವಿಚಾರಧಾರೆಗಳನ್ನು ಕನ್ನಡ ನಾಡಿನಲ್ಲಿ ಮೂಡಿಸುವ ರಾಷ್ಟ್ರೀಯ ದೃಷ್ಟಿಕೋನದ ಸಾಹಿತ್ಯರಚನೆಯ ಕಾರ್ಯವನ್ನು ಪ್ರಾರಂಭಿಸಿ, ಅದ ದಿಶೆಯಲ್ಲಿ ನೂರಾರು ಯುವ ಲೇಖಕರನ್ನು ರೂಪಿಸಿದ ಕೀರ್ತಿ ಜಯದೇವ್ ಅವರದ್ದು. ಮುದ್ರಣ ಸೌಲಭ್ಯಗಳೇ ದುಸ್ತರವಾಗಿದ್ದ ಕಾಲದಲ್ಲಿ ‘ಭಾರತ-ಭಾರತಿ ಪುಸ್ತಕ ಮಾಲಿಕೆ’ ಎಂಬ ನೂತನ ಯೋಜನೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಹೊಸಪ್ರಯೋಗ ನಡೆಸಿದರು. ಇದು ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ದಾಖಲೆಯನ್ನೇ ಬರೆಯಿತು.
ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಬೆಂಗಳೂರಿನ ಬಸವನಗುಡಿಯಲ್ಲಿ ಮೊದಲ ತಂಡದಲ್ಲಿ ಸತ್ಯಾಗ್ರಹ ಮಾಡಿ1975ರ ನವೆಂಬರ್‌ನಲ್ಲಿ ಬಂಧಿತರಾಗಿ ಬೆಂಗಳೂರಿನಲ್ಲಿ ಜೈಲುವಾಸ ಅನುಭವಿಸಿದ ಜಯದೇವ್ರವರು ನಂತರ 1977 ಮಾರ್ಚ್ 22ಕ್ಕೆ ಯಾದವರಾವ್ ಜೋಶಿ ಅವರೊಂದಿಗೆ ಬಿಡುಗಡೆ ಹೊಂದಿದರು.

ಬೆಂಗಳೂರಿನಲ್ಲಿ ಅತೀ ಹೆಚ್ಚು ಕಾರ್ಯಕರ್ತರು, ಹಿತೈಷಿಗಳ ಮನೆಗಳೊಂದಿಗೆ ಸಂಪರ್ಕ ಹೊಂದಿದ್ದ ಮೈ.ಚ. ಜಯದೇವ್‌ರು ನಾಡಿನ ವಿವಿಧ ಕ್ಷೇತ್ರಗಳ ಗಣ್ಯರು, ಎಲ್ಲಾ ಪಕ್ಷದ ಮುಖಂಡರು, ಸಂತ-ಸ್ವಾಮೀಜಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದು, ಓರ್ವ ಕುಶಲ ಸಂಘಟಕರಾಗಿ ಜನಪ್ರಿಯರಾಗಿದ್ದರು. ಬಾಳಾಸಾಹೇಬ್ ದೇವರಸ್, ಕು ಸೀ ಸುದರ್ಶನ್, ದತ್ತೋಪಂತ್ ಟೆಂಗಡಿ, ಅಟಲ್ ಬಿಹಾರಿ ವಾಜಪೇಯೀ ಸಹಿತ ಅನೇಕ ರಾಷ್ಟ್ರೀಯ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.ಮಿಥಿಕ್ ಸೊಸೈಟಿ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಅನಾಥ ಶಿಶುನಿವಾಸ, ಅಬಲಾಶ್ರಮ – ಹೀಗೆ ಬೆಂಗಳೂರಿನ ಅನೇಕ ಸಾಮಾಜಿಕ ಸಂಸ್ಥೆಗೆ ಮಾರ್ಗದರ್ಶಕರಾಗಿ ನಿಂತವರು. ಈ ಎಲ್ಲ ಸಂಸ್ಥೆಗಳು ಸ್ವತಂತ್ರವಾಗಿ ಮೂಲೋದ್ದೇಶದಂತೆ ಕೆಲಸ ಮಾಡುವಂತೆ ಪ್ರೇರಣೆ ನೀಡಿದವರು. ಇವುಗಳ ಆರ್ಥಿಕ ಸ್ವಾವಲಂಬನೆ, ವ್ಯಕ್ತಿ ಜೋಡಣೆ ಮುಂತಾದ ಕೆಲಸಗಳನ್ನು ತೆರೆಯ ಹಿಂದೆ ನಿಂತು ಮಾಡಿದವರು ಮೈ.ಚ. ಜಯದೇವ್‌ರು.ವನವಾಸಿಗಳ ಶಿಕ್ಷಣ, ಅರೋಗ್ಯ ಸೇರಿದಂತೆ ಅವರ ಸಮಗ್ರ ವಿಕಾಸಕ್ಕಾಗಿ ಶ್ರಮಿಸುತ್ತಿರುವ ಆರೆಸ್ಸೆಸ್ ಪ್ರೇರಿತ ಸಂಸ್ಥೆ “ವನವಾಸಿ ಕಲ್ಯಾಣ ಆಶ್ರಮ”ವು ಕರ್ನಾಟಕದಲ್ಲಿ ರೂಪುಗೊಂಡ ಪ್ರಾರಂಭದ ದಿನದಿಂದಲೂ ಅದರ ಸಂಘಟನಾತ್ಮಕ ಬೆಳವಣಿಗೆಯಲ್ಲಿ ಜಯದೇವರ ಕೊಡುಗೆ ಗಣನೀಯವಾದದ್ದು.

ಅವಿವಾಹಿತರಾಗಿಯೇ ಉಳಿದು 4 ದಶಕಗಳ ಕಾಲ ಸುದೀರ್ಘ ಸಾಮಾಜಿಕ ಜೀವನ ನಡೆಸಿದ ನಂತರ 1995ರಲ್ಲಿ ಸಂಘದ ಪ್ರಚಾರಕರಾಗಿ ನಿಯುಕ್ತರಾದರು. ಬಳಿಕ ‘ಕೇಶವಕೃಪಾ’ವನ್ನು ಕೇಂದ್ರವಾಗಿಸಿಕೊಂಡು ಸ್ವಯಂಸೇವಕರಿಗೆ ಮಾರ್ಗದರ್ಶನ ಮಾಡಿದರು.ಮೈ. ಚ ಜಯದೇವ್ ರವರು ನಿರ್ವಹಿಸಿದ ಕೆಲವು ಮುಖ್ಯ ಜವಾಬ್ದಾರಿಗಳು.2002ರಿಂದ ಸಹ ಕ್ಷೇತ್ರೀಯ ಪ್ರಚಾರಕರಾಗಿ ನಿಯುಕ್ತಿ. 2004ರಲ್ಲಿ ಕ್ಷೇತ್ರೀಯ ಪ್ರಚಾರಕರಾಗಿ ಜವಾಬ್ದಾರಿ.2009ರಿಂದ ಅಖಿಲ ಭಾರತೀಯ ಕಾರ್ಯಕಾರಿಣಿಯ ಸದಸ್ಯರಾಗಿ ಜವಾಬ್ದಾರಿ.2012ರಲ್ಲಿ ಅಖಿಲ ಭಾರತೀಯ ಕಾರ್ಯಕಾರಿಣಿಯ ಆಮಂತ್ರಿತ ಸದಸ್ಯರಾಗಿ ನಿಯುಕ್ತಿ.2015ರ ಮಾರ್ಚ್ ನಂತರ ಹಿರಿಯ ಪ್ರಚಾರಕರಾಗಿ ಸಂಘಟನೆಗೆ ಮಾರ್ಗದರ್ಶನ ಮಾಡಿದರು.
ಅವರನ್ನು ನೆನೆಯುತ್ತಾ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸಹಕಾರ್ಯವಾಹ ದತ್ತಾತ್ರೇಯ ಹೊಸಬಾಳೆಯವರು ಹೀಗೆಂದು ಹೇಳುತ್ತಾರೆ.ಮೈ.ಚ.ಜಯದೇವ್‌ ಅವರಿಗೆ ದೇಶ, ಧರ್ಮ ಹಾಗೂ ಸಮಾಜದ ಸೇವೆ ಮುಖ್ಯವಾಗಿತ್ತು. ನಾಯಕತ್ವ ವಹಿಸುವ ಹಾಗೂ ವೇದಿಕೆ ಏರಿ, ಭಾಷಣ ಮಾಡುವ ಹಂಬಲ ಅವರಿಗೆ ಇರಲಿಲ್ಲ. ಅವರು ಕೊನೆಯವರೆಗೂ ನಿಷ್ಠಾವಂತ ಸೇವಕನಂತೆ ಬದುಕಿದರು’ ರಾಷ್ಟ್ರೀಯ ಸ್ವಯಂಸೇವಕ ಸಂಘ ಏರ್ಪಡಿಸಿದ್ದ ಸಂಘದ ಮೈ.ಚ.ಜಯದೇವ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

‘ಜಯದೇವ ಅವರು ದೇಶದ ಪರಂಪರೆಯ ಬಗ್ಗೆ ಭಾರಿ ಗೌರವ ಹೊಂದಿದ್ದರು. ಆದರೆ, ಅವರೆಂದೂ ಆಧುನಿಕತೆಯನ್ನು ದೂರ ಸರಿಸಲಿಲ್ಲ. ಹೊಸತನ್ನು ಕಲಿಯಲು ಹಿಂಜರಿಯಲಿಲ್ಲ. ಇಳಿವಯಸ್ಸಿನಲ್ಲೂ ಶ್ರದ್ಧೆಯ ವಿದ್ಯಾರ್ಥಿಯಾಗಿ ಕಂಪ್ಯೂಟರ್‌ ಕಲಿಯಲು ಪಾಠ ಹೇಳಿಸಿಕೊಂಡರು’ ಎಂದು ಅವರು ನೆನಪುಗಳ ಮೆಲುಕು ಹಾಕುತ್ತಾರೆ ಸಾಮಾನ್ಯ ಕಾರ್ಮಿಕನಿಂದ ಹಿಡಿದು ದೇಶದ ಪ್ರಧಾನಿಯವರೆಗೂ ಸಂಪರ್ಕ ಹೊಂದಿದ್ದ ಅವರು ಎಲ್ಲರನ್ನು ಒಂದೇ ಭಾವದಿಂದ ಕಾಣುತ್ತಿದ್ದರು. ಎಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಳ್ಳುವ ಗುಣವನ್ನು ಸಿದ್ಧಿಸಿಕೊಂಡಿದ್ದ ಅವರು ರಚನಾತ್ಮಕತೆಯ ಸಾಕಾರ ಮೂರ್ತಿಯಂತೆ ಬದುಕಿದವರು ಮೈ ಚ ಜಯದೇವ್ ಜೀ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜಯದೇವ ಅವರ ಜೊತೆ ಜೈಲಿನಲ್ಲಿ ಕಳೆದ ದಿನಗಳನ್ನು ಹಾಗೂ ಎಲ್ಲವನ್ನೂ ದಾಖಲಿಸಿಕೊಳ್ಳುವ ಅವರ ಗುಣವನ್ನು ದತ್ತಾತ್ರೇಯ ಹೊಸಬಾಲೆಯವರು ನೆನೆಯುತ್ತಾ ತಮ್ಮ ಶ್ರದ್ಧಾಂಜಲಿ ಅರ್ಪಿಸಿದರು. ‘ದೇಶದಲ್ಲಿ ಅಸಮಾನತೆ, ಜಾತೀಯತೆ ತೊಲಗಿ ಎಲ್ಲರೂ ಸಮಾನವಾಗಿ ಬದುಕುವುದಕ್ಕೆ ಅವಕಾಶ ಸಿಗಬೇಕು ಎಂಬ ಹಂಬಲ ಜಯದೇವ ಅವರಿಗಿತ್ತು. ‘ಹೊರಗಿನ ಆಕಾರಕ್ಕಿಂತ ಒಳಗಿನ ಸತ್ವ ಮುಖ್ಯ. ಸಾಧನೆಯಷ್ಟೇ ಅದರ ಪ್ರಕ್ರಿಯೆಯೂ ಮುಖ್ಯ ಎಂದು ಜಯದೇವ ಅವರು ಬಲವಾಗಿ ನಂಬಿದ್ದರು. ‘ಇತಿಹಾಸ ಕಲಿಯುವುದಕ್ಕಿಂತ ಇತಿಹಾಸ ನಿರ್ಮಿಸುವುದು ಮುಖ್ಯ. ಹಾಗೇ ಜೀವಿಸಿದವರಲ್ಲಿ ಜಯದೇವ ಕೂಡ ಒಬ್ಬರು’

Chapter 1:

ರಾಷ್ಟ್ರೀಯ ಸ್ವಯಂಸೇವಕ ಸಂಘ – ಪ್ರಪಂಚದ ಅತೀ ದೊಡ್ಡ ಸ್ವಯಂಸೇವಕ ಸಂಸ್ಥೆಯ ಹುಟ್ಟು ಹಾಗೂ ಬೆಳೆದು ಬಂದ ಹಾದಿಯ ಒಳನೋಟ!

Chapter 2:

ಕೈಕಟ್ಟಿ ಕೂರಲಿಲ್ಲ, ಸಂಘರ್ಷದ ಹಾದಿಯಲ್ಲಿ ಪ್ರತಿಯೊಂದು ಸಾಲುಗಳನ್ನು ಮೆಟ್ಟಿಸುತ್ತಾ ಡಾಕ್ಟರ್ ಜೀ ಕಟ್ಟಿದ ಸಂಘಟನೆ ಇಂದು ಹೆಮ್ಮರವಾಗಿದೆ! ಅವರ ತ್ಯಾಗ, ನೀತಿಗಳ ಕಿರು ಪರಿಚಯ ಇಲ್ಲಿದೆ!

Chapter 3:

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ ಎಂದರೆ ಏನು? ಕೆಲವು ಪೂರ್ವಾಗ್ರಹಗಳನ್ನು ಬಗೆಹರಿಸಿ, ಶಾಖೆಯ ಚಟುವಟಿಕೆಗಳ ಮಾಹಿತಿಯುಕ್ತ ಲೇಖನ ಇಲ್ಲಿದೆ!

Chapter 4:

ಅಧ್ಯಾಯ 4:ಆರೆಸ್ಸೆಸ್ ವಿರೋಧಿಗಳು ಹರಿಡಿದ ಅತೀ ದೊಡ್ಡ ಸುಳ್ಳು “ಸ್ವಾತಂತ್ರ್ಯ ಸಂಗ್ರಾಮದಲ್ಲಿ ಆರೆಸ್ಸೆಸ್ ಕೊಡುಗೆ ಶೂನ್ಯ”! ಮಿತ್ಯಾರೋಪಗಳಿಗೆ ತೆರೆ ಎಳೆಯುವ ಸಮಯ!

Chapter 5:

ಅಧ್ಯಾಯ 5: ಕಾಶ್ಮೀರವನ್ನು ಉಳಿಸಿಕೊಳ್ಳಲು ಪ್ರಾಣತೆತ್ತ ಸ್ವಯಂಸೇವಕರ ಕಥೆ ನಿಮಗೆ ತಿಳಿದಿದೆಯೇ? ಕೋಟ್ಲಿಯ ಬಲಿದಾನಿಗಳು ಯಾರು ಗೊತ್ತೇ? ಇಲ್ಲವಾದಲ್ಲಿ ಈ ಇತಿಹಾಸ ಪ್ರತಿಯೊಬ್ಬ ಭಾರತೀಯನೂ ತಿಳಿಯಲೇ ಬೇಕಾದದ್ದು!

chapter 6:

ಅಧ್ಯಾಯ 6: ಗಾಂಧಿ ಹತ್ಯೆ ಮತ್ತು ಆರೆಸ್ಸೆಸ್ ! ಒಂದೇ ಸುಳ್ಳನ್ನು ಕಾಂಗ್ರೆಸ್ ಪದೇ ಪದೇ ಹೇಳುತ್ತಿರುವುದು ಏತಕ್ಕಾಗಿ?? ಸುಳ್ಳಿನ ಪರದೆ ಸರಿಸುವ ಕೆಲವು ಸತ್ಯಾಂಶಗಳು ಇಲ್ಲಿವೆ!

Chapter 7:

ಅಧ್ಯಾಯ 7: ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಹಾಗೂ ಆರೆಸ್ಸೆಸ್! ಅಂಬೇಡ್ಕರ್ ಆರೆಸ್ಸೆಸ್ ಅನ್ನು ದ್ವೇಷಿಸುತ್ತಿದ್ದರೇ??? ಅಥವಾ ಆರೆಸ್ಸೆಸ್ ಅಂಬೇಡ್ಕರ್ ವಿರೋಧಿಯೇ? ಇಲ್ಲಿದೆ ಉತ್ತರ

Chapter 8:

ಅಧ್ಯಾಯ 8: ‘ಸ್ವಯಂಸೇವಕ’ ಎಂಬ ಸಂಘದ ಆಧಾರ ಸ್ಥಂಭ! ಐಕ್ಯತೆಯ ರೂವಾರಿಗಳು,ಶಿಸ್ತಿನ ಸಿಪಾಯಿಗಳು, ಸಮಾಜದಲ್ಲಿ ಸಭ್ಯತೆ, ಸಂಸ್ಕೃತಿಯ ಪ್ರತೀಕ ಇವರು!

Chapter 9:

ಅಧ್ಯಾಯ 9: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ‘ ಬೈರಾಗಿಗಳು’ – ‘ ಪ್ರಚಾರಕರು’ ! ಪ್ರಚಾರಕರಾಗಿ ಕೆಲಸ‌ ಮಾಡುವುದು ಅಂದರೆ ಏನು? ಪ್ರಚಾರಕರಾಗಿ ಪ್ರಸಿದ್ಧಿ ಪಡೆದವರ ಬಗ್ಗೆ ನಿಮಗೆಷ್ಟು ಗೊತ್ತು?

Chapter 10:

ಅಧ್ಯಾಯ 10: ರಾಜಾಭಾವು ಮಹಾಂಕಲ್ ಅವರ ಬಲಿದಾನ ಮತ್ತು ಯುವ ಸಿಂಹ ಜಗನ್ನಾಥ ರಾವ್ ಜೋಶಿಯವರ ಪರಾಕ್ರಮ ಇದು ಗೋವಾ ವಿಮೋಚನೆಯ ಕಥೆ!!

Chapter 11:

ಅಧ್ಯಾಯ 11: ಸಂಘದ ಮಹತ್ವವೇನು ಎಂಬುದನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಅರಿತಿದ್ದರು! ಹೇಗೆ? 1965 ರ ಭಾರತ ಪಾಕಿಸ್ತಾನ ಯುದ್ಧದಲ್ಲಿ ಸಂಘ ನಿರ್ವಹಿಸಿದ ಕಾರ್ಯವೇನು? ಇಲ್ಲಿದೆ ಮಾಹಿತಿ.

Chapter 12:

ಅಧ್ಯಾಯ 12: ಏಕನಾಥ್ ರಾನಡೆ! ಎಲ್ಲ ಸಮಸ್ಯೆಗಳ ಎದುರಿಸಿ, ಕಷ್ಟಗಳ ಅಲೆಗಳನ್ನು ಬಂಡೆಯಂತೆ ಎದುರಿಸಿ, ವಿವೇಕಾನಂದ ಶಿಲಾ ಸ್ಮಾರಕವನ್ನು ಭಾರತಕ್ಕೆ ಕೊಡುಗೆ ಇತ್ತ ಮಹನೀಯ! ಈ ಸ್ವಯಂಸೇವಕ ಅಸಾಧ್ಯವನ್ನು ಸಾಧ್ಯವಾಗಿಸಿದ ಕಥೆ ಇಲ್ಲಿದೆ!!

Chapter 13:

ಅಧ್ಯಾಯ 13: ತುರ್ತು ಪರಿಸ್ಥಿತಿ ಎಂಬ ಕರಾಳ ಅಧ್ಯಾಯ! ಭಾರತ ದೇಶದ ಪ್ರಜಾಪ್ರಭುತ್ವಕ್ಕೆ ಅಂಟಿದ ಕಳಂಕವನ್ನು ಸ್ವಯಂಸೇವಕರು ತಮ್ಮ ಬಲಿದಾನದಿಂದ ತೊಡೆದು ಹಾಡಿದರು.

Chapter 14:

ಅಧ್ಯಾಯ 14: ಆದರ್ಶ ಸ್ವಯಂಸೇವಕ, ನಿಸ್ವಾರ್ಥ ಪ್ರಚಾರಕ, ಗ್ರಾಮ ಅಭ್ಯುದಯಕ್ಕೆ ಜೀವ ಸವೆಸಿದ, ಅಪರೂಪದ ವ್ಯಕ್ತಿತ್ವ ಭಾರತ ರತ್ನ ನಾನಾಜಿ ದೇಶಮುಖ್!

Chapter 15:

ಅಧ್ಯಾಯ 15: ದೇವ ಭಾಷೆ ಸಂಸ್ಕೃತಕ್ಕೆ ಹೊಸತೊಂದು ಕಾಯಕಲ್ಪ ನೀಡಿದ ಆರೆಸ್ಸೆಸ್! ಸಂಸ್ಕೃತ ಭಾರತಿಯ ಸಾಧನೆಗಳ ಒಳ ನೋಟ ಇಲ್ಲಿದೆ!

Chapter 16:

ಅಧ್ಯಾಯ 16: 1984 ರ ಸಿಖ್ ಹತ್ಯಾಕಾಂಡದ ಸಮಯದಲ್ಲಿ ಆರೆಸ್ಸೆಸ್ ಸ್ವಯಂಸೇವಕರು, ತಮ್ಮ ಜೀವದ ಹಂಗು ತೊರೆದು ಸಿಖ್ ಸಹೋದರರನ್ನು ರಕ್ಷಿಸಿದರು. ಬದಲಾಗಿ ಸಿಕ್ಕಿದ್ದು ಮಾತ್ರ ಮೋಘಾ ಹತ್ಯಾಕಾಂಡ!

Chapter 17:

ಅಧ್ಯಾಯ 17: ಯಾವುದೇ ಸಂಘದ ಕೀರ್ತಿ ಮುಗಿಲೆತ್ತರಕ್ಕೆ ಬೆಳೆಯುವುದು, ತನ್ನ ವಿರೋಧಿಗಳ ಪ್ರಶಂಸೆ ಗಳಿಸಿದಾಗ! ಸೇವಾ ಭಾರತಿ ಗೆ ತನ್ನ ಪಿತ್ರಾರ್ಜಿತ ಆಸ್ತಿಯನ್ನು ಅಮರ್ ಸಿಂಗ್ ದಾನವಾಗಿ ಕೊಟ್ಟಾಗ ಈ ಮಾತಿಗೊಂದು ಸಾಕ್ಷಿ ದೊರೆತ ಹಾಗಾಯಿತು!

Chapter 18:

ಅಧ್ಯಾಯ 18: ಸಂಘದ ವಿರೋಧಿಗಳ ಪಡೆ ಬಹು ದೊಡ್ಡದು! ಕಾಂಗ್ರೆಸ್, ಕಮ್ಯೂನಿಸ್ಟ್, ಮಿಷನರಿ, ಇಸ್ಲಾಂ ವಾದಿಗಳು ಎಲ್ಲರಿಂದ ಸಂಘ ದಾಳಿಗೊಳಗಾದ ಉದಾಹರಣೆಗಳಿವೆ, ಹಿಂದುತ್ವ ಅದಕ್ಕೆ ಕಾರಣ ಎಂದು ನೀವು ಭಾವಿಸಿದ್ದಲ್ಲಿ, ಇಲ್ಲಿದೆ ಸರಿಯಾದ ಮಾಹಿತಿ!

Chapter 19:

ಅಧ್ಯಾಯ 19: ಜ್ಞಾನಕ್ಕಿಂತ ದೊಡ್ಡ ಕಣ್ಣಿಲ್ಲ , ಚರ್ಚೆ ಹಾಗೂ ಮಂಥನದಿಂದ ಪಡೆದ ಜ್ಞಾನ ಯಾವಾಗಲೂ ಶ್ರೇಷ್ಠ ಎನ್ನುತ್ತದೆ ನಮ್ಮ ಸಂಸ್ಕೃತಿ! ಸಂಘವನ್ನು ವಿನಾ ಕಾರಣ ನಿಂದಿಸುವವರಿಗೆ ಕೆಲವೊಂದು ಸತ್ಯಾಂಶಗಳು, ಕೆಲವೊಂದು ಪ್ರಶ್ನೆಗಳು!

Chapter 20:

ಅಧ್ಯಾಯ 20: ಅವರೊಬ್ಬ ವಿಜ್ಞಾನಿ, ಬದುಕಿದ್ದು ಮಾತ್ರ ಸನ್ಯಾಸಿಯ ಹಾಗೆ! ಇದು ರಜ್ಜು ಭೈಯ್ಯ ಎಂದೇ ಪ್ರೀತಿಯಿಂದ ಕರೆಸಿಕೊಂಡ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರ ಜೀವನಗಾಥೆ!

Chapter 21:

ಅಧ್ಯಾಯ 21: ಸಂಘದ ನೇತಾರರು ಒಂದು ಮಾತನಾಡಲಿ ಅದನ್ನು ವಿವಾದಕ್ಕೆ ಎಳೆಯೋಣ ಎಂಬ ಉದ್ದೇಶವನ್ನು ಇಟ್ಟುಕೊಂಡ ಪತ್ರಿಕೆಗಳು ಆರೆಸ್ಸೆಸ್ ನ ಮಹತ್ತರವಾದ ಸಾಧನೆಗಳ ಬಗ್ಗೆ ಮಾತನಾಡುವುದೇ ಇಲ್ಲ!

-Dr.Sindhu Prashanth

Tags

Related Articles

FOR DAILY ALERTS
Close